Tag: Earphone

  • ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಲಕ್ನೋ: ಇಯರ್‌ಫೋನ್‍ಗಳನ್ನು ಧರಿಸಿ ರೈಲ್ವೆ ಹಳಿಗಳ ಮೇಲೆ ನಡೆಯುತ್ತಿದ್ದ ಮೂವರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದೆ.

    ಭದೋಹಿ ರೈಲ್ವೆಸ್ಟೇಷನ್ ವಾರ್ಡ್‍ನಲ್ಲಿ ಇಬ್ಬರು ರೈಲಿಗೆ ಸಿಲುಕಿದ್ದರೆ, ಮತ್ತೊಬ್ಬ ಅಹಿಮಾನ್‍ಪುರದಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಮೂವರು ವಾಕಿಂಗ್‍ಗೆ ತೆರಳಿದಾಗ ಈ ಘಟನೆ ನಡೆದಿದೆ.

    ಜಲಾಲ್‍ಪುರದ ಕೃಷ್ಣ ಅಲಿಯಾಸ್ ಬಂಗಾಲಿ (20) ಮತ್ತು ಆತನ ಸ್ನೇಹಿತ ಮೋನು (18) ಇಯರ್ ಫೋನ್‌ನಲ್ಲಿ ಹಾಡು ಕೇಳುತ್ತಾ ಹಳಿಯ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬರುತ್ತಿದ್ದ ಹೌರಾ ಲಾಲ್ಕುವಾಲ್ ಎಕ್ಸ್‌ಪ್ರೆಸ್‍ನ ಶಬ್ದ ಆ ಯುವಕರಿಗೆ ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

    ಎಷ್ಟೇ ಹೊತ್ತಾದರೂ ಈ ಇಬ್ಬರೂ ಯುವಕರೂ ಮನೆಗೆ ಬಾರದಿದ್ದರಿಂದ, ಕುಟುಂಬಸ್ಥರು ಅವರನ್ನು ಹಡುಕಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರ ಮೃತದೇಹಗಳು ಪತ್ತೆ ಆಗಿವೆ. ಇದನ್ನೂ ಓದಿ: ಗರ್ಭಿಣಿ ಮೇಲೆ ಸತತ ಮೂರು ದಿನಗಳಿಂದ ಗ್ಯಾಂಗ್ ರೇಪ್

    ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ದಲ್ಪತ್‍ಪುರ ಗ್ರಾಮದ ಪಂಕಜ್ ದುಬೆ (30) ವಾರಣಾಸಿ – ಅಲಹಾಬಾದ್ ರೈಲ್ವೆ ಮಾರ್ಗದ ಅಹಿಮಾನ್‍ಪುರ ರೈಲ್ವೆ ಸ್ಟೇಷನ್‌ನ ಬಳಿ ಇಯರ್‌ಫೋನ್ ಧರಿಸಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರಯಾಗ್‍ ರಾಜ್‍ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಅಳಲು

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್, ಇಯರ್‌ಫೋನ್ ಕದ್ದಿದ್ದಕ್ಕೆ ಬೆತ್ತದಲ್ಲಿ ಹೊಡೆದು ಕೊಂದ

    ಮೊಬೈಲ್, ಇಯರ್‌ಫೋನ್ ಕದ್ದಿದ್ದಕ್ಕೆ ಬೆತ್ತದಲ್ಲಿ ಹೊಡೆದು ಕೊಂದ

    ನವದೆಹಲಿ: ತನ್ನ ಮೊಬೈಲ್ ಹಾಗೂ ಇಯರ್ ಫೋನ್ ಕದ್ದಿದ್ದಾನೆ ಎಂದು ದೆಹಲಿಯ ವ್ಯಕ್ತಿಯೋರ್ವ, ಮತ್ತೋರ್ವ ವ್ಯಕ್ತಿಯನ್ನು ಬೆತ್ತದಿಂದ ನಿರ್ದಾಕ್ಷ್ಯಿಣವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

    ದೆಹಲಿಯ ಪಂಚಕುಯಾನ್ ರಸ್ತೆಯ ಹನುಮಾನ್ ಮಂದಿರದ ಬಳಿ ಕಳೆದ ತಿಂಗಳು ಈ ಘಟನೆ ನಡೆದಿದ್ದು, ಆರೋಪಿಯನ್ನು ರಿಕ್ಷಾ ಚಾಲಕ ಶಾಹಿದ್ ಎಂದು ಗುರುತಿಸಲಾಗಿದೆ. ಏಪ್ರಿಲ್ 2 ರಂದು ರಸ್ತೆಯ ಬಳಿ ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಕರೆ ಬಂದಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿ ಮೃತಪಟ್ಟಿರುವು ಗೊತ್ತಾಗಿದೆ. ಇದನ್ನೂ ಓದಿ; PSI ನೇಮಕಾತಿಯಲ್ಲಿ ಅಕ್ರಮ – ಬೆಂಗ್ಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣು

    crime

    ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಈ ವೇಳೆ ವ್ಯಕ್ತಿಯ ಮುಖ, ಭುಜಗಳು, ಎದೆ, ಹೊಟ್ಟೆ, ಬೆನ್ನು, ತೊಡೆ, ತೊಡೆಸಂದು ಇತ್ಯಾದಿ ಭಾಗಗಳಿಗೆ ಗಾಯವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ; ರಂಜಾನ್ ಮುನ್ನಾ ದಿನವೇ ಎರಡು ಗುಂಪುಗಳ ಮಧ್ಯೆ ಗಲಾಟೆ – ಇಂಟರ್ನೆಟ್ ಸ್ಥಗಿತ

    POLICE JEEP

    ಘಟನೆ ಸಂಬಂಧ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೃತ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಮತ್ತೋರ್ವ ವ್ಯಕ್ತಿ ಥಳಿಸಿರುವುದು ತಿಳಿದುಬಂದಿದೆ. ನಂತರ ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಶಾಹಿದ್ ಸಿಕ್ಕಿಬಿದ್ದಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

  • ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

    ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

    –  ಕೂದಲೆಳೆ ಅಂತರದಲ್ಲಿ ಪೋಷಕರು ಪಾರು

    ರಾಯಚೂರು: ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಕರ್ನೂಲ್ ಜಿಲ್ಲೆ ಕೊಸಗಿ ಮಂಡಲದ ಸಾತನೂರ್ ಗ್ರಾಮದ ಶರಣಬಸವ (18) ಮೃತ ಯುವಕ. ತಂದೆ-ತಾಯಿ ಮತ್ತು ಮಗ ಮೂವರು ಹಳಿ ದಾಟುವಾಗ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ತಂದೆ-ತಾಯಿ ಪಾರಾಗಿದ್ದಾರೆ.

    ಮೂವರು ಬೆಂಗಳೂರಿನಿಂದ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದು, ಹಳಿ ದಾಟುತ್ತಿದ್ದಾಗ  ಈ ಘಟನೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಶರಣಬಸವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ಮೃತ ಯುವಕ ಕಿವಿಗೆ ಇಯರ್ ಫೋನ್ ಬಳಸಿ ಹಾಡು ಕೇಳುತ್ತಿದ್ದನು. ಹೀಗಾಗಿ ರೈಲಿನ ಶಬ್ದ ಕೇಳದೆ ಹಳಿ ಮೇಲೆ ಹೋಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವನ ಹಿಂದೆಯೇ ಇದ್ದ ತಂದೆ ತಾಯಿ ಪಾರಾಗಿದ್ದಾರೆ. ಮಂತ್ರಾಲಯ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹೋಗುತ್ತಿದ್ದ ಯುವತಿ ರೈಲಿಗೆ ಬಲಿ

    ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹೋಗುತ್ತಿದ್ದ ಯುವತಿ ರೈಲಿಗೆ ಬಲಿ

    ಮುಂಬೈ: ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹಳಿ ಮೇಲೆ ಹೋಗುತ್ತಿದ್ದ ಯುವತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆಕೆ ಸಾವವನ್ನಪ್ಪಿರುವ ಘಟನೆ ಮುಂಬೈನ ಥಾಣೆಯ ಸಮೀಪದ ಕಲ್ಯಾಣ ನಗರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಕಲ್ಯಾಣ ಟೌನಶಿಪ್‍ನ ಲೋಕ ಉದಯಾನ್ ಕಾಂಪ್ಲೆಕ್ಸ್ ನಿವಾಸಿ ಅಂತುದೇವಿ ದುಬೆ(28) ಮೃತ ಯುವತಿ. ಈಕೆ ಬುಧವಾರ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವತಿ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ಮೇಲೆ ಹೋಗುತ್ತಿದ್ದಳು. ಈ ವೇಳೆ ವೇಗದಿಂದ ಮುಂಬೈ ಲೋಕಲ್ ರೈಲು ಬಂದಿದ್ದು, ಇಯರ್‌ಫೋನ್ ಧರಿಸಿದ್ದ ಕಾರಣಕ್ಕೆ ರೈಲು ಬಂದಿದ್ದು ಆಕೆಗೆ ತಿಳಿಯಲಿಲ್ಲ. ಸಾಂಗಲ್ವಾಡಿ ಬಳಿಯ ಕಲ್ಯಾಣ ನಿಲ್ದಾಣದಲ್ಲಿ ವೇಗವಾಗಿ ಬರುತ್ತಿದ್ದ ರೈಲು ಯುವತಿಗೆ ಡಿಕ್ಕಿ ಹೊಡೆದಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಈ ಬಗ್ಗೆ ರೈಲ್ವೆ ಪೊಲೀಸರು ಮಾತನಾಡಿ, ಯುವತಿ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹೋಗುತ್ತಿದ್ದಳು, ಇದೇ ವೇಳೆ ರೈಲು ಆಕೆಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

  • ಲಿಫ್ಟ್ ಗೆ ಸಿಕ್ಕಿಕೊಂಡ ಇಯರ್‌ಫೋನ್‌ – ನೆಲಮಹಡಿಯಲ್ಲಿ ಮಹಿಳೆಯ ರುಂಡ, 3ನೇ ಮಹಡಿಯಲ್ಲಿ ದೇಹ

    ಲಿಫ್ಟ್ ಗೆ ಸಿಕ್ಕಿಕೊಂಡ ಇಯರ್‌ಫೋನ್‌ – ನೆಲಮಹಡಿಯಲ್ಲಿ ಮಹಿಳೆಯ ರುಂಡ, 3ನೇ ಮಹಡಿಯಲ್ಲಿ ದೇಹ

    ಗಾಂಧಿನಗರ: ಮಹಿಳೆಯೊಬ್ಬರು ಹಾಕಿಕೊಂಡಿದ್ದ ಇಯರ್‌ಫೋನ್‌ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ಆಕೆಯ ದೇಹದಿಂದ ರುಂಡ ಬೇರಾದ ದುರಂತ ಗುಜರಾತ್‍ನ ವಡೋದರದಲ್ಲಿ ನಡೆದಿದೆ.

    ವಡೋದರದ ಪ್ಲಾಸ್ಟಿಕ್ ಉತ್ಪನ್ನ ಮಾಡುವ ಫ್ಯಾಕ್ಟರಿಯಲ್ಲಿ ಮಂಗಳವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮಹಿಳೆಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಸುಶೀಲ ವಿಶ್ವಕರ್ಮ ಎಂದು ಗುರುತಿಸಲಾಗಿದೆ.

    ಬೆಳಗ್ಗೆ 8 ಗಂಟೆಗೆ ಫ್ಯಾಕ್ಟರಿಗೆ ಬಂದಿದ್ದ ಮಹಿಳೆ, ಮೂರನೇ ಮಹಡಿಗೆ ಹೋಗಲು ನೆಲ ಮಹಡಿಯಲ್ಲಿ ಲಿಫ್ಟ್ ಹತ್ತಿದ್ದಾಳೆ. ಆದರೆ ಲಿಫ್ಟ್ ಹತ್ತುವ ವೇಳೆ ಆಕೆ ಹಾಕಿಕೊಂಡಿದ್ದ ಇಯರ್‌ಫೋನ್‌ ಲಿಫ್ಟ್ ಬಾಗಿಲ ಸಂಧಿಯಲ್ಲಿ ಸಿಕ್ಕಿಬಿದ್ದಿದ್ದು, ಅದನ್ನು ತೆಗೆಯುವಷ್ಟರಲ್ಲಿ ಲಿಫ್ಟ್ ಹೊರಟ ಪರಿಣಾಮ ಮಹಿಳೆಯ ತಲೆ ತುಂಡಾಗಿ ಮೃತಪಟ್ಟಿದ್ದಾಳೆ.

    ಫ್ಯಾಕ್ಟರಿಯಲ್ಲಿ ಹೆಚ್ಚಿನ ಸರಕುಗಳನ್ನು ಸಾಗಣೆ ಮಾಡಲು ನೆರವಾಗಲಿ ಎಂದು ಲಿಫ್ಟ್ ಗೆ ಮೇಲ್ಛಾವಣೆಯ ವ್ಯವಸ್ಥೆ ಮಾಡಿಸಿರಲಿಲ್ಲ. ಹೀಗಾಗಿ ಲಿಫ್ಟ್ ಮೇಲುಗಡೆ ಹೊರಟಾಗ ಇಯರ್‌ಫೋನ್‌ ತೆಗೆಯಲು ಹೋಗಿ ಮಹಿಳೆಯ ತಲೆ ಕಬ್ಬಿಣದ ಸರಳಿನ ಬಾಗಿಲಿಗೆ ಸಿಕ್ಕಿ ತುಂಡಾಗಿ ನೆಲ ಮಹಡಿಗೆ ಬಿದ್ದರೆ, ಆಕೆಯ ದೇಹ ಲಿಫ್ಟ್ ಮೂಲಕ ಸಾಗಿ ಮೂರನೇ ಮಹಡಿ ತಲುಪಿತ್ತು.

    ಅಗ್ನಿಶಾಮಕ ದಳದ ಸಹಾಯ ಪಡೆದು ಮಹಿಳೆಯ ತಲೆ ಹಾಗೂ ದೇಹವನ್ನು ಹೊರತಗೆಯಲಾಯಿತು. ನಂತರ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮಹಿಳೆಯ ಶವವನ್ನು ಆಕೆಯ ಕುಟುಂಬಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

    ಈ ಸಂಬಂಧ ಬಾಪೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆ ಸಂಬಂಧ ಲಿಫ್ಟ್ ನಲ್ಲಿ ಏನಾದರೂ ಲೋಪದೋಷ ಇದೆಯೇ ಎನ್ನುವುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

  • ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ಹೈದರಾಬಾದ್: ಹನ್ನೊಂದು ತಿಂಗಳ ಹೆಣ್ಣು ಶಿಶು ಆಕಸ್ಮಿಕವಾಗಿ ಇಯರ್ ಫೋನ್ ನುಂಗಿ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ಪರ್ಸಲಾಪುದಿ ಗ್ರಾಮದಲ್ಲಿ ಈ ಘಟನೆ ನಡೆದೆ. ಶಸ್ತ್ರ ಚಿಕಿತ್ಸೆಯ ಮೂಲಕ ಇಯರ್ ಫೋನನ್ನು ದೇಹದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಗಿದ್ದು ಏನು?
    ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಇಯರ್ ಫೋನ್ ನುಂಗಿದ ಬಳಿಕ ಮಗು ಒಂದೇ ಸಮನೆ ಅಳುತ್ತಿದ್ದಳು. ಏನು ಮಾಡಬೇಕೆಂದು ತೋಚದ ಹೆತ್ತವರು ಮಗಳನ್ನು ಅಮಲಾಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಪ್ರಾಥಮಿಕ ಪರೀಕ್ಷೆಯ ವೇಳೆ ವೈದ್ಯರು ದೇಹದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಮಗು ಆಳುತ್ತಿದ್ದ ಕಾರಣ ಎಕ್ಸ್-ರೇ ಮಾಡಿಸಿದ್ದಾರೆ. ಈ ವೇಳೆ ಮೊಬೈಲ್ ಇಯರ್ ಫೋನ್ ಇರುವುದು ಪತ್ತೆಯಾಗಿದೆ.

    ಕೂಡಲೇ ನಮ್ಮ ತಂಡ ಶಸ್ತ್ರಚಿಕಿತ್ಸೆ ನಡೆಸಿ ದೇಹದಿಂದ ಇಯರ್ ಫೋನ್ ಹೊರ ತೆಗೆದಿದ್ದೇವೆ. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ಅಮಲಾಪುರಂ ಆಸ್ಪತ್ರೆಯ ವೈದ್ಯ ಚಕ್ರವರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!