Tag: eal Estate

  • ಪ್ರಾಪರ್ಟಿ ಎಕ್ಸ್ ಪೋಗೆ ಬನ್ನಿ – 20×30 ಪ್ಲಾಟ್, ಐಫೋನ್ ಗೆಲ್ಲಿ!

    ಪ್ರಾಪರ್ಟಿ ಎಕ್ಸ್ ಪೋಗೆ ಬನ್ನಿ – 20×30 ಪ್ಲಾಟ್, ಐಫೋನ್ ಗೆಲ್ಲಿ!

    – ಜನವರಿ 23, 24ಕ್ಕೆ ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಕಟ್ಟಬೇಕು, ಸೈಟ್ ಖರೀದಿ ಮಾಡಬೇಕು. ಆದರೆ ಯಾವ ಏರಿಯಾ ಚೆನ್ನಾಗಿದೆ. ಎಲ್ಲಿ ಉತ್ತಮ ಸೈಟ್ ಸಿಗುತ್ತದೆ ಎಂಬ ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಂಡಿದ್ದೀರಾ..? ಹಾಗಾದರೆ ಸದ್ಯಕ್ಕೆ ಆ ಚಿಂತೆ ಬಿಡಿ. ಇದಕ್ಕೆಲ್ಲ ಪರಿಹಾರ ನೀಡಲು ಜೆನೆಟಿಕ್ ಇವೆಂಟ್ಸ್ ರೆಡಿಯಾಗಿದೆ. ನಿಮಗೆ ಸಹಾಯವಾಗಲೆಂದೇ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಿದ್ದಾರೆ.

    ಬೆಂಗಳೂರಿನ ಎರಡು ಭಾಗದಲ್ಲಿ ಎಕ್ಸ್ ಪೋ ಆಯೋಜಿಸಿದ್ದು ಜನವರಿ 23 ಮತ್ತು 24ರಂದು ‘ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ-2021’ ನಡೆಯಲಿದೆ. ಅಷ್ಟೇ ಅಲ್ಲ ನೀವು ಈ ಎಕ್ಸ್ ಪೋಗೆ ಭೇಟಿ ನೀಡಿ 20*30 ಪ್ಲಾಟ್ ಕೂಡಾ ಗೆಲ್ಲಬಹುದು. ಜೊತೆಗೆ ಐಫೋನ್ 12, 5, 10 ಗ್ರಾಂನ ಗೋಲ್ಡ್ ಕಾಯಿನ್‍ಗಳು ಹಾಗೂ ಮೊಬೈಲ್ ಫೋನನ್ನು ಕೂಡಾ ಗೆಲ್ಲಬಹುದು.

    ಬೆಂಗಳೂರು ಸೌತ್ ಇಷ್ಟಪಡುವ ಜನರಿಗಾಗಿ ಜೆಪಿ ನಗರ 6ನೇ ಹಂತದ ಕೆಆರ್ ಲೇಔಟ್‍ನ ಎಲೈಟ್ ಕನ್ವೆನ್ಷನ್ ಸೆಂಟರ್ ಹಾಗೂ ಬೆಂಗಳೂರು ಉತ್ತರ ಭಾಗದ ಗ್ರಾಹಕರಿಗಾಗಿ ಯಲಹಂಕ ಬೈಪಾಸ್ ರಸ್ತೆಯ ಶಿವನಹಳ್ಳಿಯಲ್ಲಿರುವ ಎಲಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಲಾಗಿದೆ. ಎರಡೂ ದಿನ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್ ಪೋ ನಡೆಯಲಿದೆ.

    ಇವರಿರುತ್ತಾರೆ!: ಬೆಂಗಳೂರಿನ ಪ್ರಮುಖ ಬಿಲ್ಡರ್ ಗಳು ಈ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿದ್ದಾರೆ. ಡಿಎಸ್ ಮ್ಯಾಕ್ಸ್, ಗಾಡ್ರೆಜ್ ಪ್ರಾಪರ್ಟೀಸ್, ಎಸ್‍ಎಂಆರ್ ಹೋಲ್ಡಿಂಗ್ಸ್, ಅರಿಹಂತ್ ಡೆವಲಪರ್ಸ್, ಎಟಿಝೆಡ್ ಪ್ರಾಪರ್ಟೀಸ್, ಅಪರ್ಣ, ಉಪಕಾರ್ ಡೆವಲಪರ್ಸ್, ಫೈವ್ ಎಲಿಮೆಂಟ್ಸ್ ರಿಯಾಲಿಟಿ, ಎಲಿಗೆಂಟ್ ಬಿಲ್ಡರ್ಸ್ & ಡೆವಲಪರ್ಸ್, ಸಾಯಿ ಕಲ್ಯಾಣ್ ಬಿಲ್ಡರ್ಸ್ & ಡೆವಲಪರ್ಸ್, ಗೃಹ, ಸಿಲ್ವರ್ ಟ್ರೀ ಪ್ರಾಜೆಕ್ಟ್ಸ್, ಆರ್ನಾ ಶೆಲ್ಟರ್ಸ್ ಮುಂತಾದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳು ಯೂನಿಕ್ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.

    ಈ ಎಲ್ಲಾ ಕಂಪನಿಗಳು ಗ್ರಾಹಕರಿಗೆ ತಮ್ಮ ವಸತಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲಿದೆ. ಈ ಎಕ್ಸ್ ಪೋಗೆ ಆಗಮಿಸಿ ನಿಮ್ಮ ಕನಸಿನ ಮನೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ನುರಿತ ಮಾರ್ಗದರ್ಶಕರು, ಇಂಟೀರಿಯರ್ ಡಿಸೈನರ್‍ಗಳು ಹಾಗೂ ಸಲಹೆಗಾರರು ಈ ಎಕ್ಸ್ ಪೋದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಗ್ರಾಹಕರು ನಿವೇಶನ, ಫ್ಲ್ಯಾಟ್ ಖರೀದಿಸಲು ಬಯಸಿದೆ ಬ್ಯಾಂಕ್‍ಗಳು ನೀಡುವ ಸಾಲದ ಬಗ್ಗೆಯೂ ಇದೇ ಸೂರಿನಲ್ಲಿ ನೀವು ಮಾಹಿತಿ ಪಡೆಯಬಹುದು. ಜನವರಿ 23 ಮತ್ತು 24ರಂದು ಶಿವನಹಳ್ಳಿ ಹಾಗೂ ಜೆಪಿ ನಗರದಲ್ಲಿ ನಡೆಯುವ ಪ್ರಾಪರ್ಟಿ ಎಕ್ಸ್ ಪೋಗೆ ಬಂದು ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು.