Tag: E-Swathu

  • ಇ-ಸ್ವತ್ತು ಉತಾರ ಮಾಡಲು 4 ಲಕ್ಷ ಲಂಚ ಪಡೆಯುತ್ತಿದ್ದಾಗ ಪಿಡಿಓ, ಮೂವರು ಗ್ರಾಪಂ ಸದಸ್ಯ ಅರೆಸ್ಟ್‌

    ಇ-ಸ್ವತ್ತು ಉತಾರ ಮಾಡಲು 4 ಲಕ್ಷ ಲಂಚ ಪಡೆಯುತ್ತಿದ್ದಾಗ ಪಿಡಿಓ, ಮೂವರು ಗ್ರಾಪಂ ಸದಸ್ಯ ಅರೆಸ್ಟ್‌

    ಹಾವೇರಿ: ಇ-ಸ್ವತ್ತು (E Swathu) ಉತಾರ ಪೂರೈಸಲು ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಹಲಗೇರಿ ಲೋಕಾಯುಕ್ತ ಪೊಲೀಸರು ಗ್ರಾಮ ಪಂಚಾಯತಿ ಪಿಡಿಓ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ 3 ಜನ ಗ್ರಾಪಂ ಸದಸ್ಯರ ಬಂಧಿಸಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ಪಿಡಿಓ ಕೆ.ಮಂಜುನಾಥ, ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಸೋಮಶೇಖರ್, ಪ್ರಸನ್ನ ಮತ್ತು ಸೈಯದ್ ರೆಹಮಾನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ (Gram Panchayat) ನಡೆದಿದೆ. ಸುಮಾರು 60 ಫ್ಲಾಟ್‌ಗಳ ಎನ್.ಎ ಇ-ಸ್ವತ್ತು ಉತಾರ ಪೂರೈಸಲು 4.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು 4 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಬಿಚ್ಚಿಸಿದ್ರು, ಮತ್ತೊಂದು ಬಿಚ್ಚಿಸಿದ್ರು ಅನ್ನೋದು ನನ್ಗೆ ಗೊತ್ತಿಲ್ಲ: ಆರ್‌.ಬಿ ತಿಮ್ಮಾಪೂರ

    ಲೋಕಾಯುಕ್ತ ಡಿಎಸ್ಪಿ ಮಧುಸೂದನ್ ನೇತ್ರತ್ವದಲ್ಲಿ ನವೀನ್ ಅಂದನೂರು ಲೇಔಟ್ ಮಾಲೀಕನಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ? – ಸಿಎಂ ನಡೆಗೆ ಛಲವಾದಿ ನಾರಾಯಣಸ್ವಾಮಿ ಕಿಡಿ

  • 80ರ ಇಳಿವಯಸ್ಸಲ್ಲಿ ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಅಜ್ಜಿ ಹೋರಾಟ

    80ರ ಇಳಿವಯಸ್ಸಲ್ಲಿ ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಅಜ್ಜಿ ಹೋರಾಟ

    ಬಳ್ಳಾರಿ: ಇ-ಸ್ವತ್ತಿಗಾಗಿ 80ರ ಇಳಿ ವಯಸ್ಸಿನಲ್ಲೂ ಅಜ್ಜಿ ಗ್ರಾಮ ಪಂಚಾಯಿತಿಗೆ ಅಲೆದು ಸುಸ್ತಾಗಿದ್ದಾರೆ. ಆದರೆ, ಯಾವೊಬ್ಬರೂ ಅಧಿಕಾರಿಗಳು ಅಜ್ಜಿಯ ಮನವಿಗೆ ಸ್ಪಂದಿಸಿಲ್ಲ.

    ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಎರಡನೇ ವಾರ್ಡ್ ನಿವಾಸಿ 80ರ ವಯಸ್ಸಿನ ಅಜ್ಜಿ ಪಾರ್ವತಮ್ಮ ಇ-ಸ್ವತ್ತಿಗಾಗಿ ಅದೆಷ್ಟೋ ಬಾರಿ ಗ್ರಾಪಂ ಬಾಗಿಲು ತಟ್ಟಿದ್ದಾಳೆ. ಹಿರೇಹಡಗಲಿ ಗ್ರಾಮದ ಡೋರ್ ನಂ.82/B ಹೆಸರಿನ ಖಾಲಿ ಜಾಗ ಕಳೆದ ನಾಲ್ಕು ತಲೆಮಾರಿನಿಂದ ಅಜ್ಜಿ ಪಾರ್ವತಮ್ಮ ಸಂಬಂಧಿಕರ ಹೆಸರಿನಲ್ಲೇ ಇದೆ. ತನ್ನದೇ ಕುಟುಂಬಸ್ಥರ ಹೆಸರಿಗಿರೋ ಆಸ್ತಿಯನ್ನ ಪಾರ್ವತಮ್ಮ ತನ್ನ ಹೆಸರಿಗೆ ಮಾಡಿಕೊಳ್ಳಲು ಕಳೆದ 40 ವರ್ಷದಿಂದ ಏಕಾಂಗಿ ಪ್ರಯತ್ನ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಯಾವುದೇ ಪಿಡಿಓ ಬಂದ್ರೂ ಅಜ್ಜಿಯನ್ನ ಸತಾಯಿಸುತ್ತಲೇ ಬರ್ತಿದ್ದಾರೆ. ಬರೀ ಭರವಸೆ ಕೊಡ್ತಿರೋ ಪಿಡಿಓಗಳು ಇಸ್ವತ್ತು ಮಾಡಿಕೊಡಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ನಡೆಗೆ ಬೇಸತ್ತಿರೋ ಪಾರ್ವತಮ್ಮ ಹಿರೇಹಡಗಲಿ ಗ್ರಾಪಂ ಎದುರು 80ರ ಇಳಿವಯಸ್ಸಿನಲ್ಲೂ ನನ್ನ ಆಸ್ತಿಗೆ ಇ-ಸ್ವತ್ತು ಕೊಡಿ ಅಂತ ಹೋರಾಟಕ್ಕೆ ಕುಳಿತಿದ್ದಾಳೆ.

    82/B ಆಸ್ತಿಯ ಸಂಬಂಧಿಸಿದಂತೆ ಹೋರಾಟಕ್ಕೆ ಕುಳಿತಿರೋ ಅಜ್ಜಿ ಪಾರ್ವತಮ್ಮ ಅವರ ಸಾಕ್ಷಿ ಸಹಿ ಪಡೆದು ನಾಲ್ಕು ದಿಕ್ಕಿನ ಜನ ಇ-ಸ್ವತ್ತು ಪಡೆದಿದ್ದಾರೆ. ಅಲ್ಲಿ ಪಾರ್ವತಮ್ಮ ಅವರ ಜಾಗ ಇಲ್ಲದೇ ಇದ್ದಿದ್ರೆ ಅವರಿಂದ ಸಾಕ್ಷಿ ಸಹಿಯ ಅವಶ್ಯಕತೆಯೂ ಇರಲಿಲ್ಲ. ಇದು ಅಧಿಕಾರಿಗಳ ದ್ವಂದ್ವ ನೀತಿಗೆ ಕಾರಣವಾಗಿದೆ. ಆದರೆ ಈಗ ಪಾರ್ವತಮ್ಮ ತಮ್ಮ ಜಾಗಕ್ಕೆ ಇ-ಸ್ವತ್ತು ಪಡೆಯಲು ಬಂದಾಗ ಅದು ಶೌಚಾಲಯ ಜಾಗ, ಪಾರ್ವತಮ್ಮ ಹೆಸರಿಗೆ ಇ-ಸ್ವತ್ತು ಕೊಡಬೇಡಿ ಅಂತ ಯಾರಿಂದಲೋ ತಕರಾರು ಬಂದಿದೆಯಂತೆ. ಹೀಗಾಗಿ ಪಿಡಿಓ ಮಾಡಲ್ಲ ಅಂತಿದ್ದಾರೆ. ಇದು ನಾಲ್ಕು ತಲೆಮಾರಿಂದ ನಮ್ಮದೇ ಜಾಗ. ಅದಕ್ಕೆ ಬೇಕಾದ ದಾಖಲೆ ನಮ್ಮತ್ರ ಇವೆ ಅಂತಿದ್ದಾರೆ ಪಾರ್ವತಮ್ಮ ಪುತ್ರ ಗಂಗಾಧರಯ್ಯ.

    ಇಳಿ ವಯಸ್ಸಿನಲ್ಲಿ ಪ್ರತಿಭಟನೆ ಮಾಡ್ತಿರೋ ಈ ಪಾರ್ವತಮ್ಮ ಪುತ್ರ ಹಾಗೂ ಸೊಸೆ ಇಬ್ಬರೂ ಇದೇ ಹಿರೇಹಡಗಲಿ ಗ್ರಾಪಂ ಸದಸ್ಯರಿದ್ದಾರೆ‌. ಇಬ್ಬರು ಜನಪ್ರತಿನಿಧಿಗಳು ಮನೆಯಲ್ಲೇ ಇದ್ದರೂ ಇಳಿವಯಸ್ಸಿನ ಪಾರ್ವತಮ್ಮಗೆ ಇ-ಸ್ವತ್ತು ಮಾಡಿಕೊಡಿಸಲು ಸಾದ್ಯ ಆಗ್ತಿಲ್ಲ. ಇದರ ನಡುವೆ ಸರ್ಕಾರದ ನೀತಿನಿಯಮಗಳನ್ನ ಅರಿಯದ ಅಧಿಕಾರಿಗಳು ನಾಲ್ಕು ತಲೆಮಾರಿನಿಂದ ವಾಸ ಮಾಡುವ ಜಾಗಕ್ಕೆ ಇಸ್ವತ್ತು ಕೊಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂಬ ಪ್ರಶ್ನೆ ವ್ಯಕ್ತವಾಗಿದೆ.

  • ಆ ಒಂದು ಸಾಫ್ಟ್‌ವೇರ್ ಒಂದು ತಿಂಗಳು ‘ಇ-ಸ್ವತ್ತು’ಗೆ ಕೈಕೊಡ್ತು!

    ಆ ಒಂದು ಸಾಫ್ಟ್‌ವೇರ್ ಒಂದು ತಿಂಗಳು ‘ಇ-ಸ್ವತ್ತು’ಗೆ ಕೈಕೊಡ್ತು!

    ಬೆಳಗಾವಿ: ಇ-ಖಾತೆ ನೀಡುವಲ್ಲಿ ವಿಳಂಬವಾಗಲು ಒಂದು ಸಾಫ್ಟ್‌ವೇರ್ ಕಾರಣವಾಗಿತ್ತು ಎಂಬ ಅಂಶವನ್ನು ರಾಜ್ಯ ಸರ್ಕಾರ ಹೇಳಿದೆ.

    ಶಾಸಕ ರಾಜೇಶ್ ನಾಯಕ್, ಇ-ಸ್ವತ್ತು ತಂತ್ರಾಂಶದಲ್ಲಿ ಕಳೆದ ಒಂದು ತಿಂಗಳಿನಿಂದ ಸರ್ವರ್ ಸಮಸ್ಯೆ ಇದ್ದು, ಗ್ರಾಮೀಣ ಪ್ರದೇಶದ ಖಾತೆದಾರರಿಗೆ ಇ-ಖಾತೆ ನೀಡುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಮತ್ತು ಸರ್ವರ್ ಸಮಸ್ಯೆಗೆ ಸರ್ಕಾರ ಕಂಡುಕೊಂಡ ಪರಿಹಾರ ಕ್ರಮ ಏನು ಎಂದು ಚುಕ್ಕೆ ಗುರುತಿನ ಪ್ರಶ್ನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಇದನ್ನೂ ಓದಿ: ಕಲಾಪಕ್ಕೆ ಅಡ್ಡಿ- ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು‌

    ಇದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ಈ ವಿಚಾರ ಗಮನಕ್ಕೆ ಬಂದಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಗಳಲ್ಲಿರುವ ಇ-ಸ್ವತ್ತು ತಂತ್ರಾಂಶದ ಸರ್ವರ್ ಗಳಿಗೆ ಒಂದು ಸಾಫ್ಟ್‍ವೇರ್ ಅಳವಡಿಸಿದ್ದರಿಂದ ಕಳೆದ ಒಂದು ತಿಂಗಳಿನಿಂದ ಈ ಸಮಸ್ಯೆಯಾಗಿದೆ. ಈ ಸಾಫ್ಟ್‌ವೇರ್ ಗಳನ್ನು ಈಗ ಡಿಸೇಬಲ್ ಮಾಡಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಫ್ರೀ ಹ್ಯಾಂಡ್, ಮಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಭಂಗ ಬಂದ್ರೆ ಕ್ರಮ: ಆರಗ ಜ್ಞಾನೇಂದ್ರ

    ಸರ್ವರ್ ಸ್ಟೋರೇಜ್ ದ್ವಿಗುಣ:
    ಜೊತೆಗೆ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಇ-ಸ್ವತ್ತು ತಂತ್ರಾಂಶಕ್ಕೆ ಸಂಬಂಧಿಸಿದ 4 ಸರ್ವರ್ ಗಳ ಸ್ಟೋರೇಜ್ ಸಾಮರ್ಥ್ಯ ದ್ವಿಗುಣಗೊಳಿಸಲಾಗಿದೆ. ಈ ರೀತಿಯ ಸಮಸ್ಯೆ ಮತ್ತೊಮ್ಮೆ ಉಂಟಾಗದಂತೆ ಇಲಾಖೆಯಿಂದ ಕ್ರಮಕೈಗೊಂಡಿರುವುದಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ವೆಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ: ಜಾರಕಿಹೊಳಿಗೆ ತಿವಿದ ಸಿದ್ದರಾಮಯ್ಯ

    ಆದರೆ ರಾಜ್ಯ ಸರ್ಕಾರ ಈ ಸಮಸ್ಯೆಗೆ ಕಾರಣವಾದ ಸಾಫ್ಟ್‌ವೇರ್ ಯಾವುದು ಎಂದು ಲಿಖಿತ ಉತ್ತರದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.