Tag: E-passport

  • ಏನಿದು ಇ-ಪಾಸ್‌ಪೋರ್ಟ್‌? ಈಗಿರುವ ಪಾಸ್‌ಪೋರ್ಟ್‌ಗಿಂತ ಇದೆಷ್ಟು ವಿಭಿನ್ನ?

    ಏನಿದು ಇ-ಪಾಸ್‌ಪೋರ್ಟ್‌? ಈಗಿರುವ ಪಾಸ್‌ಪೋರ್ಟ್‌ಗಿಂತ ಇದೆಷ್ಟು ವಿಭಿನ್ನ?

    ಪಾಸ್‌ಪೋರ್ಟ್‌ ಇತ್ತೀಚಿನ ದಿನಗಳಲ್ಲಿ ಅತ್ಯಗತ್ಯವಾದ ವಸ್ತುಗಳಲ್ಲಿ ಒಂದು. ಈಗಿರುವಂತೆಯೇ ಇದು ಡಿಜಿಟಲೀಕರಣಗೊಂಡಿರುವ ಪಾಸ್‌ಪೋರ್ಟ್‌ ಆಗಿದೆ. ಭದ್ರತಾ ದೃಷ್ಟಿಯಿಂದ ಇದು ಸಹಕಾರಿಯಾಗಲಿದ್ದು, ಅಕ್ರಮಗಳನ್ನು ತಡೆಯಲು ಇದು ಮುನ್ನುಡಿಯಾಗಲಿದೆ.

    ಏನಿದು ಇ-ಪಾಸ್‌ಪೋರ್ಟ್‌?
    ಇ-ಪಾಸ್‌ಪೋರ್ಟ್ (E-Passport) ಎಂದರೆ ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಅಥವಾ ಡಿಜಿಟಲ್ ಪಾಸ್‌ಪೋರ್ಟ್. ಇದು ಈಗಿರುವ ಪಾಸ್‌ಪೋರ್ಟ್‌ನಂತೆಯೇ ಕಾರ್ಯನಿರ್ವಹಿಸುತ್ತಿದ್ದರೂ ತಂತ್ರಜ್ಞಾನದಿಂದ ಅಭಿವೃದ್ಧಿಯಾಗಿರುತ್ತದೆ. ಇ-ಪಾಸ್‌ಪೋರ್ಟ್‌ ಇದು ಎಲೆಕ್ಟ್ರಾನಿಕ್ ಚಿಪ್ ಹೊಂದಿದ್ದು, ಇದನ್ನು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (Radio Frequency Identification) ಎಂದು ಕರೆಯಲಾಗುತ್ತದೆ. ಅದರಲ್ಲಿ ಬಯೋಮೆಟ್ರಿಕ್ ವಿವರ, ಫೋಟೋ, ಸಹಿ ಹಾಗೂ ಇತರ ಮಾಹಿತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿರುತ್ತದೆ.

    ಈಗಾಗಲೇ ಅಮೆರಿಕ, ಕೆನಡಾ, ಫ್ರಾನ್ಸ್, ಜಪಾನ್ ಹಾಗೂ ಆಸ್ಟ್ರೇಲಿಯಾದಂತಹ ಕೆಲವು ದೇಶಗಳು ಇ-ಪಾಸ್‌ಪೋರ್ಟ್‌ ಅನ್ನು ತಮ್ಮ ದೇಶಗಳಲ್ಲಿ ಅಳವಡಿಸಿಕೊಂಡಿವೆ. ಇದರಿಂದ ರಾಷ್ಟ್ರೀಯ ಭದ್ರತೆಯನ್ನು ಹಾಗೂ ಅಂತರಾಷ್ಟ್ರೀಯ ಪ್ರಯಾಣವನ್ನು ವ್ಯವಸ್ಥಿತಗೊಳಿಸಬಹುದಾಗಿದೆ. ಇದೀಗ ಭಾರತ ಇ-ಪಾಸ್‌ಪೋರ್ಟ್‌ ಅಳವಡಿಸಿಕೊಳ್ಳುವ ಮೂಲಕ ತಾಂತ್ರಿಕವಾಗಿ ಮತ್ತಷ್ಟು ಅಭಿವೃದ್ಧಿಯಾಗಲಿದೆ. 2024ರಲ್ಲಿ ಭಾರತದಲ್ಲಿ ಇ-ಪಾಸ್‌ಪೋರ್ಟ್‌ ಅನ್ನು ಪರಿಚಯಿಸಲಾಗಿದ್ದು, ಹಂತ ಹಂತವಾಗಿ ದೇಶದ ಎಲ್ಲಾ ನಗರಗಳಲ್ಲೂ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಈಗಿರುವ ಪಾಸ್‌ಪೋರ್ಟ್‌ ಗಿಂತ ಇ-ಪಾಸ್‌ಪೋರ್ಟ್‌ ಹೆಚ್ಚಿನ ಭದ್ರತೆಯನ್ನು ಒದಗಿಸಲಿದೆ. ಮತ್ತು ನಕಲಿ ಪಾಸ್‌ಪೋರ್ಟ್‌ ತಯಾರಿಕೆಗೆ ತಡೆ ನೀಡುತ್ತದೆ.

    ಇ-ಪಾಸ್‌ಪೋರ್ಟ್‌ ಪ್ರಯೋಜನಗಳೇನು?

    •  ಪಾಸ್‌ಪೋರ್ಟ್‌ ನಕಲಿ ಮಾಡುವುದನ್ನು ಕಡಿಮೆ ಮಾಡುತ್ತದೆ
    •  ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್‌ ಪರಿಶೀಲನೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
    •  ಪಾಸ್‌ಪೋರ್ಟ್‌ ಮಾಲಿಕತ್ವ ಹೊಂದಿರುವವರು ಮಾತ್ರ ಇದನ್ನು ಬಳಸಲು ಸಾಧ್ಯವಾಗುತ್ತದೆ.
    •  ಇವುಗಳು ಬಯೋಮೆಟ್ರಿಕ್ ಒಳಗೊಂಡಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸುತ್ತವೆ.
    •  ಕಳ್ಳತನ, ವಂಚನೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
    • ವಿಮಾನ ನಿಲ್ದಾಣದ ಚೆಕ್ ಪಾಯಿಂಟ್‌ಗಳಲ್ಲಿ ಸಂಪರ್ಕ ರಹಿತ ಪರಿಶೀಲನೆಗೆ ಸಹಕಾರಿಯಾಗುತ್ತದೆ.
    • ವಿಮಾನ ನಿಲ್ದಾಣಕ್ಕೆ ಹೋದಾಗ ಕಡಿಮೆ ಸಮಯವಿದ್ದರೆ ಆ ವೇಳೆ ಪ್ರಯಾಣಿಕರಿಗೆ ಒತ್ತಡವನ್ನ ಕಡಿಮೆ ಮಾಡುತ್ತದೆ.
    • ಅಕ್ರಮ ವಲಸೆ, ಟ್ರ್ಯಾಕಿಂಗ್ ಅನ್ನು ಈ ಮೂಲಕ ತಿಳಿದುಕೊಳ್ಳಬಹುದು.

    ಆನ್ಲೈನ್ ಮೂಲಕ ಇ-ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಸುವುದು ಹೇಗೆ?

    • ಭಾರತೀಯ ಪ್ರಜೆಗಳು ಪಾಸ್‌ಪೋರ್ಟ್‌ ಸೇವಾ ಪೋರ್ಟಲ್ ಅಥವಾ ಪಾಸ್‌ಪೋರ್ಟ್‌ ಸೇವಾ ಕೇಂದ್ರ, ಅಂಚೆ ಕಚೇರಿಯ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
    • ಪಾಸ್‌ಪೋರ್ಟ್‌ ಪೋರ್ಟಲ್ ನಲ್ಲಿ ಲಾಗಿನ್ ಆಗಿ
    • ಹೊಸ ಪಾಸ್‌ಪೋರ್ಟ್‌ಗೆ ಆಯ್ಕೆ ಮಾಡಿ. ಬಳಿಕ ಮಾಹಿತಿಗಳನ್ನು ಉಲ್ಲೇಖಿಸಿ. ಕೊನೆಗೆ ಪಾವತಿ ಮಾಡಿ.
    • ಅದಾದ ಬಳಿಕ ಅಪಾಯಿಂಟ್ಮೆಂಟ್ ಬುಕ್ ಮಾಡಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಲಾಟ್ ಬುಕ್ ಮಾಡಿ.
    • ಆ ದಿನದಂದು ನಿಮ್ಮ ಮೂಲ ದಾಖಲೆಗಳೊಂದಿಗೆ ತೆರಳಿ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ.

    ಈಗಾಗಲೇ ಇ-ಪಾಸ್‌ಪೋರ್ಟ್‌ ಅಳವಡಿಸಿಕೊಂಡಿರುವ ಭಾರತದ ನಗರಗಳು

    • ನಾಗ್ಪುರ
    • ಭುವನೇಶ್ವರ
    • ಜಮ್ಮು
    • ಪಣಜಿ
    • ಶಿಮ್ಲಾ
    • ರಾಯಪುರ
    • ಅಮೃತಸರ
    • ಜೈಪುರ
    • ಚೆನ್ನೈ
    • ಹೈದರಾಬಾದ್
    • ಸೂರತ್
    • ರಾಂಚಿ

    ಇತ್ತೀಚಿಗಷ್ಟೇ ಮಾರ್ಚ್ 3 ರಂದು ತಮಿಳುನಾಡು ಹಾಗೂ ಚೆನ್ನೈ ಇ-ಪಾಸ್‌ಪೋರ್ಟ್‌ ಅಳವಡಿಸಿಕೊಂಡಿವೆ. ರಾಜ್ಯದ 20,700 ಜನರಿಗೆ ಈಗಾಗಲೇ ಇ-ಪಾಸ್‌ಪೋರ್ಟ್‌ ಅನ್ನು ಒದಗಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ಇ-ಪಾಸ್‌ಪೋರ್ಟ್‌ ತಯಾರಾಗುತ್ತದೆ.

  • ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?

    ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?

    ನವದೆಹಲಿ: ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಲು ಹಾಗೂ ಪ್ರಯಣಿಕರ ಡೇಟಾವನ್ನು ಸುರಕ್ಷಿತವಾಗಿಡಲು ಭಾರತ ಸರ್ಕಾರ ಶೀಘ್ರವೇ ಇ-ಪಾಸ್‌ಪೋರ್ಟ್‌ಗಳನ್ನು ಪ್ರಾರಂಭಿಸುವಲ್ಲಿ ಕೆಲಸ ಮಾಡುತ್ತಿದೆ.

    ಸರ್ಕಾರ ಕಳೆದ ವರ್ಷ ಇ-ಪಾಸ್‌ಪೋರ್ಟ್ ಪರಿಕಲ್ಪನೆಯನ್ನು ಪರಿಚಯಿಸಿ, ಶೀಘ್ರವೇ ಅದನ್ನು ಪ್ರಾರಂಭಿಸುವುದಗಿ ತಿಳಿಸಿತ್ತು. ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವರ್ಷದ ಅಂತ್ಯದಲ್ಲಿ ಇ-ಪಾಸ್‌ಪೋರ್ಟ್ ಹೊರಬರಲಿದೆ ಎಂದು ತಿಳಿಸಿದ್ದಾರೆ. ಇದು ನಾಗರಿಕರ ಅನುಭವ ಹಾಗೂ ವಿತರಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

    ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ಹೊಸ ಪರಿಕಲ್ಪನೆಯಲ್ಲ. 100ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇ-ಪಾಸ್‌ಪೋರ್ಟ್‌ಗಳನ್ನು ನೀಡುತ್ತಿವೆ. ಐರ್ಲೆಂಡ್, ಜಿಂಬಾಬ್ವೆ, ಮಲಾವಿ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳು ಪಾಸ್‌ಪೋರ್ಟ್‌ಗಳನ್ನು ಹೊರತಂದಿವೆ ಎಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನೀಡಿದ ಅಂಕಿಅಂಶಗಳು ತಿಳಿಸಿವೆ.

    ಹಾಗಿದ್ದರೆ, ಇ-ಪಾಸ್‌ಪೋರ್ಟ್ ಏನು? ಅದು ಪ್ರಯಾಣವನ್ನು ಹೇಗೆ ಸುಲಭ ಹಾಗೂ ಸುರಕ್ಷಿತಗೊಳಿಸುತ್ತದೆ? ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ಕುರಿತು ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಭಾರತದಲ್ಲೂ ಶುರುವಾಗಲಿದೆ ಕ್ರ್ಯಾಶ್‌ ಟೆಸ್ಟಿಂಗ್‌ – ಆಟೋಮೊಬೈಲ್‌ಗಳಿಗೆ ಸ್ಟಾರ್ ರೇಟಿಂಗ್‌: ನಿತಿನ್‌ ಗಡ್ಕರಿ

    ಇ-ಪಾಸ್‌ಪೋರ್ಟ್ ಎಂದರೇನು?
    ಇ-ಪಾಸ್‌ಪೋರ್ಟ್‌ಗಳು ಸಾಮಾನ್ಯ ಭೌತಿಕ ಪಾಸ್‌ಪೋರ್ಟ್‌ಗಳಂತೆಯೇ ಕೆಲಸ ಮಾಡುತ್ತದೆ. ಅದರಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಹೋಲುವ ಸಣ್ಣ ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಬಳಸುವ ಚಿಪ್ ವ್ಯಕ್ತಿಯ ಎಲ್ಲಾ ನಿರ್ಣಾಯಕ ವಿವರಗಳನ್ನು ಸಂಗ್ರಹಿಸುತ್ತದೆ. ಅದರಲ್ಲಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಹಾಗೂ ಇತರ ವಿಷಯಗಳು ಇರುತ್ತದೆ.

    ಇ-ಪಾಸ್‌ಪೋರ್ಟ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರೆಫ್‌ಐಡಿ) ಚಿಪ್ ಇರಲಿದ್ದು, ಹಿಂಬದಿಯ ಕವರ್‌ನಲ್ಲಿ ಎಂಬೆಡ್ ಮಾಡಲಾದ ಆಂಟೆನಾ ಇರಲಿದೆ. ಈ ಚಿಪ್ ಅಧಿಕಾರಿಗಳಿಗೆ ಪ್ರಯಾಣಿಕರ ವಿವರಗಳನ್ನು ತಕ್ಷಣವೇ ಪರಿಶೀಲಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಇಂಟರ್‌ನೆಟ್ ಸ್ಥಗಿತ ಅಪಾಯಕಾರಿ, ನಿರ್ಬಂಧ ಹೇರುವುದನ್ನು ನಿಲ್ಲಿಸಿ: ವಿಶ್ವಸಂಸ್ಥೆ

    ಇ-ಪಾಸ್‌ಪೋರ್ಟ್ ಬಳಕೆಗೆ ತರುವ ಹಿಂದಿನ ಉದ್ದೇಶವೆಂದರೆ, ನಕಲಿ ಪಾಸ್‌ಪೋರ್ಟ್‌ಗಳ ಚಲಾವಣೆಯನ್ನು ಕಡಿಮೆ ಮಾಡುವುದು ಹಾಗೂ ಸುರಕ್ಷತೆಯನ್ನು ಹೆಚ್ಚಿಸುವುದಾಗಿದೆ.

    ತಯಾರಿಕೆ ಎಲ್ಲಿ?
    ಟೆಕ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಇ-ಪಾಸ್‌ಪೋರ್ಟ್‌ಗಳನ್ನು ನಿರ್ಮಿಸುವಲ್ಲಿ ಕೆಲಸ ಮಾಡುತ್ತಿದೆ ಹಾಗೂ ಭಾರತ ಸರ್ಕಾರ ಈಗಾಗಲೇ ದೃಢಪಡಿಸಿದಂತೆ ಈ ವರ್ಷದ ಅಂತ್ಯದ ವೇಳೆಗೆ ಸೇವೆಯನ್ನು ಹೊರತರಲಿದೆ. ವರದಿಗಳ ಪ್ರಕಾರ, ಟಿಸಿಎಸ್ ಹೊಸ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಹಾಗೂ ಯೋಜನೆಯ ಎಲ್ಲಾ ಅವಶ್ಯಕತೆಗಳಿಗೆ ಸಹಾಯವಾಗಲು ಹೊಸ ಡೇಟಾ ಸೆಂಟರ್ ಅನ್ನು ಸ್ಥಾಪಿಸಲಿದೆ ಎಂದು ಹೇಳಲಾಗುತ್ತಿದೆ.

    ಹಳೆ ಪಾಸ್‌ಪೋರ್ಟ್ ನವೀಕರಣ:
    ಪ್ರಸ್ತುತ ಪಾಸ್‌ಪೋರ್ಟ್ ಹೊಂದಿರುವ ಭಾರತೀಯರು ಇ-ಪಾಸ್‌ಪೋರ್ಟ್‌ಗೆ ಅಪ್‌ಗ್ರೇಡ್ ಮಾಡಬೇಕೇ ಅಥವಾ ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ಅವಧಿ ಮುಗಿಯುವವರೆಗೆ ಕಾಯಬೇಕೇ ಎಂದು ಸರ್ಕಾರ ಘೋಷಿಸಿಲ್ಲ. ಇ-ಪಾಸ್‌ಪೋರ್ಟ್‌ನ ಅರ್ಜಿ ಪ್ರಕ್ರಿಯೆ ಭೌತಿಕ ಪಾಸ್‌ಪೋರ್ಟ್‌ನಂತೆಯೇ ಇರುತ್ತದೆ ಎಂಬ ನಿರೀಕ್ಷೆಯಿದೆ. ಈ ಸೇವೆ ಅಧಿಕೃತವಾಗಿ ದೇಶದಲ್ಲಿ ಲಭ್ಯವಾದ ಬಳಿಕ ಹೊಸ ಅರ್ಜಿದಾರರು ತಕ್ಷಣವೇ ಇ-ಪಾಸ್‌ಪೋರ್ಟ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ.

     

    ಹೇಗೆ ಕಾಣಿಸಲಿದೆ?
    ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳು ಸಾಮಾನ್ಯ ಪಾಸ್‌ಪೋರ್ಟ್‌ಗಳಂತೆಯೇ ಕಾಣಿಸಲಿದೆ. ಆದರೆ ಹೆಚ್ಚುವರಿಯಾಗಿ ಅದರಲ್ಲಿ ಚಿಪ್ ಅನ್ನು ಅಳವಡಿಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭ ಭೌತಿಕ ಪಾಸ್‌ಪೋರ್ಟ್ ಒಯ್ಯಬೇಕಾಗುತ್ತದೆ.

    Live Tv

  • ಇ-ಪಾಸ್‌ಪೋರ್ಟ್‌ನಲ್ಲಿರಲಿದೆ ಸುಧಾರಿತ ಭದ್ರತಾ ವೈಶಿಷ್ಟ್ಯ

    ಇ-ಪಾಸ್‌ಪೋರ್ಟ್‌ನಲ್ಲಿರಲಿದೆ ಸುಧಾರಿತ ಭದ್ರತಾ ವೈಶಿಷ್ಟ್ಯ

    ನವದೆಹಲಿ: ಸರ್ಕಾರ ಈ ವರ್ಷ ಇ-ಪಾಸ್‌ಪೋರ್ಟ್‌ಗಳನ್ನು ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್‌ನಲ್ಲಿ ಪ್ರಕಟಿಸಿದ್ದು, ಇದರಲ್ಲಿ ಸುಧಾರಿತ ಭದ್ರತಾ ವೈಶಿಷ್ಟ್ಯ ಇರಲಿದೆ ಎಂದು ಕೇಂದ್ರ ತಿಳಿಸಿದೆ.

    ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‌ಐಡಿ) ಚಿಪ್‌ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲು ಯೋಜನೆ ನಡೆಸಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ.

    ಪಾಸ್‌ಪೋರ್ಟ್ ಬುಕ್‌ಲೆಟ್‌ನಲ್ಲಿ ಚಿಪ್‌ಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಮುರಳೀಧರನ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ಇ-ಪಾಸ್‌ಪೋರ್ಟ್‌ಗಳಲ್ಲಿ ಎಂಬೆಡೆಡ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‌ಐಡಿ) ಚಿಪ್‌ಗಳನ್ನು ಅಳವಡಿಸಲಾಗುವುದು. ಅದನ್ನು ಪಾಸ್‌ಪೋರ್ಟ್‌ನ ಮುಂಭಾಗ ಇಲ್ಲವೇ ಹಿಂಭಾಗದ ಕವರ್‌ನಲ್ಲಿ ಇರಿಸಲಾಗುತ್ತದೆ. ಅದರಲ್ಲಿ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಡಿಜಿಟಲ್ ಚಿಪ್ ಸಂಗ್ರಹಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹೆಲಿಕಾಪ್ಟರ್‌ನ್ನು ವೈದ್ಯಕೀಯ ಸೇವೆಗೆ ದಾನ ಮಾಡಿದ ಪದ್ಮಶ್ರೀ ಪುರಸ್ಕೃತ

    ಒಂದು ವೇಳೆ ಪಾಸ್‌ಪೋರ್ಟ್ಅನ್ನು ಯಾರಾದರೂ ದುರುಪಯೋಗಪಡಿಸಲು ಪ್ರಯತ್ನಿಸಿದರೆ ಪರಿಶೀಲನೆಯಲ್ಲಿ ಅದನ್ನು ಗುರುತಿಸಲು ಸಾಧ್ಯವಾಗಲಿದೆ. ಇದರಿಂದ ಪಾಸ್‌ಪೋರ್ಟ್‌ನ ದೃಢೀಕರಣ ರದ್ದಾಗುತ್ತದೆ. ಈ ವೈಶಿಷ್ಟ್ಯದಿಂದ ಕಾನೂನು ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.