Tag: E Jean Carroll

  • ನನ್ನ ಮಕ್ಕಳ ಮೇಲಾಣೆ – ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನು ನಾನೆಂದೂ ಭೇಟಿಯಾಗಿಲ್ಲ: ಟ್ರಂಪ್

    ನನ್ನ ಮಕ್ಕಳ ಮೇಲಾಣೆ – ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನು ನಾನೆಂದೂ ಭೇಟಿಯಾಗಿಲ್ಲ: ಟ್ರಂಪ್

    ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕದ (America) ಬರಹಗಾರ್ತಿಯೊಬ್ಬರು 30 ವರ್ಷಗಳ ಹಿಂದೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಹೊರಿಸಿದ್ದರು. ಈ ಆರೋಪ ಶುದ್ಧ ಸುಳ್ಳು, ಅಂತಹ ಯಾವುದೇ ಮಹಿಳೆಯನ್ನು ನಾನು ಎಂದೂ ಭೇಟಿಯಾಗಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

    ಬುಧವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ, 1990ರ ದಶಕದಲ್ಲಿ ಡಿಪಾರ್ಟ್ಮೆಂಟ್ ಸ್ಟೋರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಬರಹಗಾರ್ತಿ ಇ ಜಿನ್ ಕ್ಯಾರೋಲ್ (E Jean Carroll) ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಒಂದು ಕಟ್ಟು ಕಥೆ. ಆ ಮಹಿಳೆಯ ಪರಿಚಯ ನನಗಿಲ್ಲ. ನಾನು ಆಕೆಯನ್ನು ಎಂದಿಗೂ ಭೇಟಿಯಾಗಿಲ್ಲ. ಆಕೆ ಯಾರೆಂಬುದೇ ನನಗೆ ತಿಳಿದಿಲ್ಲ ಎಂದಿದ್ದಾರೆ.

    ನಾನು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅಂತಹ ಕೃತ್ಯ ನಾನು ಎಂದಿಗೂ ಮಾಡಿಲ್ಲ. ಆ ಮಹಿಳೆ ಯಾರೆಂದು ನನಗೆ ತಿಳಿದಿಲ್ಲ ಇದೊಂದು ಕಟ್ಟುಕಥೆ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

     

    ಪ್ರತಿಷ್ಠಿತ ಎಲ್ಲೆ ಮ್ಯಾಗಜಿನ್‌ನ ಅಂಕಣಗಾರ್ತಿಯಾಗಿರುವ ಇ ಜಿನ್ ಕ್ಯಾರೋಲ್(79) 1995-1996ರ ಸಂದರ್ಭದಲ್ಲಿ ಮ್ಯಾನ್‌ಹ್ಯಾಟನ್‌ನ ಬರ್ಗ್ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಸ್ಟೋರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಟ್ರಂಪ್ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪ ಹೊರಿಸಿದ್ದಾರೆ. ಈ ವಿಚಾರವನ್ನು 2022 ರಲ್ಲಿ ನಾನು ಬಹಿರಂಗಪಡಿಸಿದ್ದಾಗ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಬಗ್ಗೆ ವಂಚನೆ, ಸುಳ್ಳು, ಕುತಂತ್ರವೆಂದು ಬರೆದಿದ್ದರು. ಹಾಗೂ ನನ್ನ ಖ್ಯಾತಿಯನ್ನು ಹಾಳು ಮಾಡಿದರು ಎಂದು ಕ್ಯಾರೋಲ್ ಆರೋಪಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

  • ಟ್ರಂಪ್ ನನ್ನ ರೇಪ್ ಮಾಡಿದ್ದರು: ಅಮೆರಿಕನ್ ಬರಹಗಾರ್ತಿ ಆರೋಪ

    ಟ್ರಂಪ್ ನನ್ನ ರೇಪ್ ಮಾಡಿದ್ದರು: ಅಮೆರಿಕನ್ ಬರಹಗಾರ್ತಿ ಆರೋಪ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಮಾರು 30 ವರ್ಷಗಳ ಹಿಂದೆ ನನ್ನ ಮೇಲೆ ಅತ್ಯಾಚಾರವೆಸಗಿದ್ದರು (Rape) ಎಂದು ಅಮೆರಿಕದ (America) ಬರಹಗಾರ್ತಿ ಇ ಜೀನ್ ಕ್ಯಾರೋಲ್ (E Jean Carroll) ಆರೋಪಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

    ಪ್ರತಿಷ್ಠಿತ ಎಲ್ಲೆ ಮ್ಯಾಗಜಿನ್‌ನಲ್ಲಿ ಅಂಕಣಗಾರ್ತಿಯಾಗಿರುವ ಇ ಜೀನ್ ಕ್ಯಾರೋಲ್ (79), ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದು, ಈ ಹಿನ್ನೆಲೆ ನಾನು ನ್ಯಾಯಾಲಯದ ಮೊರೆಹೋಗಿದ್ದೇನೆ. ಈ ಬಗ್ಗೆ ನಾನು ಬರೆದಿದ್ದಾಗ ಟ್ರಂಪ್ ನನ್ನ ಆರೋಪಗಳನ್ನು ಸುಳ್ಳು, ಇಂತಹುದು ಯಾವುದೂ ನಡೆದೇ ಇಲ್ಲ ಎಂದು ಹೇಳಿದ್ದರು. ಅವರು ನನ್ನ ಖ್ಯಾತಿಯನ್ನು ಛಿದ್ರಗೊಳಿಸಿದ್ದಾರೆ. ನನ್ನ ಮಾನವನ್ನು ಮರಳಿ ಪಡೆಯುವ ಸಲುವಾಗಿ ನಾನಿಲ್ಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

    ನನ್ನ ಮೇಲೆ 1995-1996ರ ವೇಳೆಯಲ್ಲಿ ಅತ್ಯಾಚಾರ ನಡೆದಿದೆ. ಬರ್ಗ್ಡಾರ್ಪ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಸ್ಟೋರ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು. ಆ ಸಂದರ್ಭ ನಾನು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದೆ. ಆ ಘಟನೆಯ ಬಳಿಕ ನನ್ನ ಜೀವನದ ಮೇಲೆ ನನಗೆ ಜಿಗುಪ್ಸೆ ಉಂಟಾಯಿತು ಎಂದು ಕ್ಯಾರೊಲ್ ಆರೋಪಿಸಿದ್ದಾರೆ. ಇದನ್ನೂ ಓದಿ: ಬಲವಂತದಿಂದ ಮಕ್ಕಳಿಗೆ ಹಚ್ಚೆ, ಚರ್ಮ ಕಿತ್ತು ಅಳಿಸುವ ಪ್ರಯತ್ನ – ಯುಎಸ್ ದಂಪತಿಗಳು ಅರೆಸ್ಟ್

    ನನ್ನ ಆರೋಪಗಳನ್ನು ಟ್ರಂಪ್ ವಂಚನೆ, ಸುಳ್ಳು ಹಾಗೂ ಕುತಂತ್ರವೆಂದು ಸಾಮಾಜಿಕ ಜಾಲತಾಣವಾದ ಟ್ರೂತ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಾನು ಅಂತಹ ಕೆಳಮಟ್ಟದ ವ್ಯಕ್ತಿಯಲ್ಲ. ಸುಳ್ಳು ಹೇಳಿಕೆಗಳನ್ನು ನೀಡಿ ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ ಎಂದು ಕ್ಯಾರೋಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅನೈತಿಕ ಸಂಬಂಧದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ನೀಲಿ ಚಿತ್ರ ತಾರೆಯೊಬ್ಬರಿಗೆ ಹಣ ನೀಡಿದ ಆರೋಪವನ್ನು ಹೊತ್ತಿದ್ದರು. ಈ ಬಗ್ಗೆಯೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ನಮ್ಮ ಬ್ಲಡ್‌ ಗ್ರೂಪ್‌ RCB ಪಾಸಿಟಿವ್‌ – ಫ್ಯಾನ್ಸ್‌ ಪೋಸ್ಟರ್‌ ವೈರಲ್‌