Tag: DYFI

  • 6 ಅಡಿ ಎತ್ತರದ ಟಿಪ್ಪುಸುಲ್ತಾನ್ ಕಟೌಟ್ ತೆರವಿಗೆ ನೋಟಿಸ್- DYFI ಮುಖಂಡರು ಆಕ್ರೋಶ

    6 ಅಡಿ ಎತ್ತರದ ಟಿಪ್ಪುಸುಲ್ತಾನ್ ಕಟೌಟ್ ತೆರವಿಗೆ ನೋಟಿಸ್- DYFI ಮುಖಂಡರು ಆಕ್ರೋಶ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ (Ullala Mangaluru) ತಾಲೂಕಿನ ಹರೇಕಳದಲ್ಲಿ ಡಿವೈಎಫ್‍ಐ ಸಂಘಟನೆ ತನ್ನ ರಾಜ್ಯ ಸಮ್ಮೇಳನ ಪ್ರಚಾರಕ್ಕಾಗಿ ಹಾಕಿರುವ ಟಿಪ್ಪು ಸಲ್ತಾನ್‍ನ ಕಟೌಟ್ ತೆರವು ಮಾಡಲು ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.

    ಫೆ.25 ರಿಂದ 27 ರವರೆಗೆ ಮಂಗಳೂರಿನ ತೊಕ್ಕೊಟ್ಟುನಲ್ಲಿ ಡಿವೈಎಫ್‍ಐ ನ ರಾಜ್ಯ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ಹರೇಕಳ ಡಿವೈಎಫ್‍ಐ ಸಮಿತಿ ಬ್ಯಾನರ್ ಬಂಟಿಗ್ಸ್ ಹಾಕಿ 6 ಅಡಿ ಎತ್ತರದ ಟಿಪ್ಪುಸುಲ್ತಾನ್ ನ ಕಟೌಟ್ (Tippu Sultan Cutout) ಹಾಕಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪರವಾನಗಿ ಪಡೆಯದೆ ಹಾಕಿರುವ ಕಟೌಟ್ ಆಗಿರೋದ್ರಿಂದ ತಕ್ಷಣ ತೆರವು ಮಾಡಬೇಕೆಂದು ಕೊಣಾಜೆ ಪೊಲೀಸರು ನೋಟೀಸ್ ನೀಡಿದ್ದಾರೆ.

    ಹರೇಕಳ ಡಿವೈಎಫ್‍ಐ (DYFI) ಸಮಿತಿ ಅಧ್ಯಕ್ಷರಿಗೆ ಈ ನೋಟಿಸ್ ನೀಡಲಾಗಿದೆ. ನಾವು ಎಲ್ಲಾ ಧರ್ಮದ ದಾರ್ಶನಿಕರ ಫೋಟೋ, ಕಟೌಟ್ ಗಳನ್ನು ಹಾಕಿದ್ದು ಯಾವುದಕ್ಕೂ ಪ್ರತ್ಯೇಕ ಪರವಾಗಿ ಪಡೆದಿಲ್ಲ. ಹೀಗಾಗಿ ಟಿಪ್ಪು ಕಟೌಟನ್ನು ತೆರವುಗೊಳಿಸುವುದಿಲ್ಲ ಎಂದು ಡಿವೈಎಫ್‍ಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ

  • ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    ತಿರುವನಂತಪುರಂ: ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನ 29 ಕಾರ್ಯಕರ್ತರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಎಸ್‍ಡಿಪಿಐನ ಐವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

    ಬುಧವಾರ ರಾತ್ರಿ ಕೇರಳದ ಕೋಝಿಕ್ಕೋಡ್‍ನಲ್ಲಿ ಸುಮಾರು 30 ಐಯುಎಂಎಲ್ ಮತ್ತು ಎಸ್‍ಡಿಪಿಐ ಕಾರ್ಯಕರ್ತರು ಡಿವೈಎಫ್‍ಐ ಕಾರ್ಯಕರ್ತರಾಗಿರುವ ಜಿಷ್ಣು ರಾಜ್ ಮೇಲೆ ಹಲ್ಲೆ ನಡೆಸಿದ್ದರು. ಎಸ್‍ಡಿಪಿಐ ಪೋಸ್ಟರ್ ಹರಿದ ಹಿನ್ನೆಲೆ ಜಿಷ್ಣು ರಾಜ್ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು

    ಘಟನೆಯಲ್ಲಿ ಗಾಯಗೊಂಡ ಜಿಷ್ಣು ರಾಜ್ ಸದ್ಯ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕಣ್ಣು ಮತ್ತು ಮುಖಕ್ಕೆ ಗಂಭೀರವಾಗಿ ಪೆಟ್ಟಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕರ ಸೂಚನೆಯ ಮೇರೆಗೆ ಫ್ಲೆಕ್ಸ್ ಹರಿದು ಹಾಕಿರುವುದಾಗಿ ಜಿಷ್ಣು ರಾಜ್ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು – ನಾಳೆ ನಾಮಪತ್ರ ಸಲ್ಲಿಕೆ

    ಘಟನೆಯ ನಂತರ ಡಿವೈಎಫ್‍ಐ ಕಾರ್ಯಕರ್ತರು ಕೋಝಿಕ್ಕೋಡ್‍ನ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಎಸ್‍ಡಿಪಿಐ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲೆ ಐವರು ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸಿದ ಆರೋಪದಡಿ ಜಿಷ್ಣುವಿನ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದಾರೆ.

    Live Tv

  • ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಮನೆ ಮನೆ ಪ್ರತಿಭಟನೆ

    ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಮನೆ ಮನೆ ಪ್ರತಿಭಟನೆ

    ಮಂಗಳೂರು: ಕೊರೊನಾ ಎರಡನೇ ಅಲೆಯು ದೇಶದಲ್ಲಿ ಅಪಾರ ಸಾವು ನೋವುಗಳಿಗೆ ಕಾರಣವಾಗಿದೆ. ಕೊರೊನ ನಿಯಂತ್ರಿಸಿ ಲಸಿಕೆ ಹಂಚಿ ಜನರಿಗೆ ಧೈರ್ಯ ನೀಡಬೇಕಾಗಿದ್ದ ಪ್ರಧಾನ ಮಂತ್ರಿಗಳು ಮೊಸಳೆ ಕಣ್ಣೀರು ಸುರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿವೈಎಫ್‍ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಟೀಕಿಸಿದರು.

    ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಗಳ ಕೇಂದ್ರ ಸಮಿತಿಗಳ ಕರೆಯನ್ವಯ ಕೊರೊನಾ ಲಸಿಕೆ ನೀಡಲು ವಿಫಲ ಆಗಿರುವ ಕೇಂದ್ರ ಸರ್ಕಾರದ ರಾಷ್ಟ್ರವ್ಯಾಪಿ ಮನೆ ಮನೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ಹಳಿ ತಪ್ಪಿವೆ. ಸರ್ಕಾರದ ಸಾಲು ಸಾಲು ವೈಫಲ್ಯಗಳು ಘೋರವಾದ ಇತಿಹಾಸ ನಿರ್ಮಿಸುತ್ತಿದೆ. ಜನರು ಆಕ್ಸಿಜನ್, ಲಸಿಕೆ ಸಿಗದೆ ಸಾಯುತ್ತಿದ್ದಾರೆ. ಸ್ಮಶಾನಗಳು ತುಂಬಿ ತುಳುಕುತ್ತಿವೆ ಜನರ ನೆರವಿಗೆ ಬರಬೇಕಿದ್ದ ಸರ್ಕಾರ ಮಕಾಡೆ ಮಲಗಿದೆ ಎಂದು ಸಂತೋಷ್ ಬಜಾಲ್ ಆರೋಪಿಸಿದರು.

    ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳ ಅಧೀನದಲ್ಲಿರುವ ಎಲ್ಲಾ ಘಟಕಗಳ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಿಂದಲೇ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು.

  • ಪೊಲೀಸ್ ಕೇಸ್‍ಗಳಿಗೆ ಅಂಜಿ ಹೋರಾಟದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ: SFI, DYFI

    ಪೊಲೀಸ್ ಕೇಸ್‍ಗಳಿಗೆ ಅಂಜಿ ಹೋರಾಟದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ: SFI, DYFI

    ಮಂಗಳೂರು: ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದರೆ ಪೊಲೀಸ್ ಕೇಸ್ ಹಾಕಿ ಹೆದರಿಸುವ ಪರಿಪಾಠ ಹೆಚ್ಚುತ್ತಿದ್ದು, ಇಂತಹ ಕೇಸ್ ಗಳಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.

    ರೈತ ಹೋರಾಟ ಬೆಂಬಲಿಸಿ ಸಿದ್ಧಪಡಿಸಿದ್ದ ಟೂಲ್ ಕಿಟ್ ಎಡಿಟ್ ಮಾಡಿದ್ದಾಳೆ ಎಂದು ಆರೋಪಿಸಿ ದೆಹಲಿ ಪೊಲೀಸರು ಬಂಧಿಸಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವನ್ನು ಖಂಡಿಸಿ ಡಿವೈಎಫ್‍ಐ ಹಾಗೂ ಎಸ್.ಎಫ್.ಐ ಸಂಘಟನೆಗಳು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದೆ. ಕನ್ಹಯ್ಯ ಕುಮಾರ್ ನಿಂದ ಹಿಡಿದು ದಿಶಾ ರವಿವರೆಗೆ ಈ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿ ಅನೇಕ ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ವಿದ್ವಾಂಸರನ್ನು ಜೈಲಿಗಟ್ಟಿದೆ. ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರಾದ ನಾವುಗಳು ಬೀದಿಗಿಳಿದು ಹೋರಾಡಿ ದೇಶದ ಸಂವಿಧಾವನ್ನು ರಕ್ಷಿಸಲಿದ್ದೇವೆ ಎಂದರು.

    ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ರಾಜ್ಯ ಗೃಹ ಇಲಾಖೆಯ ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರದೇ ಒಕ್ಕೂಟ ವ್ಯವಸ್ಥೆಯ ಎಲ್ಲಾ ಪದ್ಧತಿಗಳಿಗೆ ತಿಲಾಂಜಲಿ ನೀಡಿ ಪರಿಸರ ಹೋರಾಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇದೊಂದು ರಾಜ್ಯದ ಪೊಲೀಸ್ ಇಲಾಖೆಗೆ ಅವಮಾನವಾಗಿದ್ದು ಇದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿದ್ದ ಗೃಹ ಸಚಿವರು ಸರ್ವಾಧಿಕಾರಿ ಮೋದಿಯ ಮುಂದೆ ಮೂಗನಂತಾಗಿದ್ದಾರೆ. ಸರ್ಕಾರ ಕೂಡಲೇ ದಿಶಾ ರವಿಯನ್ನು ಬಿಡುಗಡೆ ಮಾಡಬೇಕು ಮತ್ತು ದೇಶ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆದು ದೇಶದ ರೈತರ ಹಿತಕಾಯಲು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಡಿವೈಎಫ್‍ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಜಿಲ್ಲಾ ನಾಯಕ ನೌಷಾದ್ ಬೆಂಗ್ರೆ, ಸುನಿಲ್ ತೇವುಲ, ವರಪ್ರಸಾದ್ ಬಜಾಲ್, ಮಹಿಳಾ ಹೋರಾಟಗಾರ್ತಿ ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜಾ, ಎಸ್.ಎಫ್.ಐ ನ ವಿನೀತ್ ದೇವಾಡಿಗ, ಸಿನಾನ್ ಬೆಂಗ್ರೆ, ತಿಲಕ್ ಕುತ್ತಾರ್ , ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಮೊದಲಾದವರು ಭಾಗವಹಿಸಿದ್ದರು.

  • ಓಣಂ ಮುನ್ನಾದಿನವೇ ಇಬ್ಬರು ಡಿವೈಎಫ್‍ಐ ಕಾರ್ಯಕರ್ತರ ಬರ್ಬರ ಕೊಲೆ

    ಓಣಂ ಮುನ್ನಾದಿನವೇ ಇಬ್ಬರು ಡಿವೈಎಫ್‍ಐ ಕಾರ್ಯಕರ್ತರ ಬರ್ಬರ ಕೊಲೆ

    – ರಸ್ತೆಯಲ್ಲೇ ಹಲ್ಲೆ ಮಾಡಿದ ಗುಂಪು
    – ಕೊಲೆಯ ದೃಶ್ಯ ಸಿಸಿಟಿಯಲ್ಲಿ ಸೆರೆ

    ತಿರುವನಂತಪುರಂ: ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ (ಡಿವೈಎಫ್‍ಐ) ಇಬ್ಬರು ಕಾರ್ಯಕರ್ತರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಮೃತರನ್ನು ಮಿಥಿಲಾಜ್ (30) ಮತ್ತು ಹಕ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ತಿರುವನಂತಪುರಂ ಜಿಲ್ಲೆಯ ತೆಂಬಮೂಡ್‍ನಲ್ಲಿ ಭಾನುವಾರ ಮಧ್ಯರಾತ್ರಿ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ದಾಳಿಯಿಂದ ಮಿಥಿಲಾಜ್ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೊಹಮ್ಮದ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೈಕಿನಲ್ಲಿ ಮಿಥಿಲಾಜ್ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ಹಲ್ಲೆ ನಡೆಸಿದೆ. ಹಲ್ಲೆ ಮಾಡಿರುವ ದೃಶ್ಯ ಆ ಪ್ರದೇಶದ ಸಿಸಿಟಿಯಲ್ಲಿ ಸೆರೆಯಾಗಿದೆ. ಗುಂಪಿನಲ್ಲಿ ಎಂಟು ಜನರಿದ್ದು, ರಸ್ತೆಯಲ್ಲಿಯೇ ಇಬ್ಬರು ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಒಬ್ಬ ಅವರಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಆದರೆ ಗುಂಪು ಆತನನ್ನು ಬೆನ್ನಟ್ಟಿ ಹಲ್ಲೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಕೊಂಡಿದ್ದಾರೆ. ತಿರು ಓಣಂ ಮುನ್ನಾದಿನ ತಮ್ಮ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ ಎಂದು ಡಿವೈಎಫ್‍ಐ ಆರೋಪಿಸಿದೆ.

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹತ್ಯೆಯನ್ನು ಖಂಡಿಸಿದ್ದು, ಕೊಲೆಯ ಹಿಂದಿರುವ ಆರೋಪಿಗಳನ್ನು ಹಿಡಿಯಲು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೊಲೆಗೆ ನಿಖರ ಕಾರಣ ಮತ್ತು ಹತ್ಯೆ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎಂದು ಮುಹಮ್ಮದ್ ಮತ್ತು ಮಿಥಿಲಾಜ್ ಇಬ್ಬರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಮಂಗ್ಳೂರು ಗೋಲಿಬಾರ್ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ: ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ

    ಮಂಗ್ಳೂರು ಗೋಲಿಬಾರ್ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ: ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ

    ಮಂಗಳೂರು: ಪೌರತ್ವ ಮಸೂದೆ ಜಾರಿಯ ವಿರುದ್ಧ ಡಿ. 19ರಂದು ಮಂಗಳೂರಿನಲ್ಲಿ ನಡೆದ ಗೊಲೀಬಾರ್ ರಾಜ್ಯದ ಬಿಜೆಪಿ ಸರ್ಕಾರದ ಪ್ರಾಯೋಜಿತ ಹತ್ಯೆ, ಪೊಲೀಸರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡಿ ಅಮಾಯಕ ಪ್ರತಿಭಟನಾಕಾರರನ್ನು ಹತ್ಯೆ ಮಾಡಿಸಿದೆ ಎಂದು ಡಿವೈಎಫ್‍ಐನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಆರೋಪಿಸಿದ್ದಾರೆ.

    ಮಂಗಳೂರಿಗೆ ಆಗಮಿಸಿದ ಡಿವೈಎಫ್‍ಐನ ರಾಷ್ಟ್ರೀಯ ನಿಯೋಗ, ಗೊಲೀಬಾರ್ ನಡೆದ ಸ್ಥಳಕ್ಕೆ ತೆರಳಿ ಪರಿಸೀಲನೆ ನಡೆಸಿತು. ಬಳಿಕ ಗೊಲೀಬಾರ್ ನಲ್ಲಿ ಮೃತಪಟ್ಟ ಜಲೀಲ್ ಕಂದುಕ ಹಾಗೂ ನೌಶೀನ್ ಕುದ್ರೋಳಿಯವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ರಿಯಾಝ್, ಪೊಲೀಸ್ ಗೊಲೀಬಾರ್ ಗೆ ಬಲಿಯಾದವರು ಅಮಾಯಕರು. ಮಂಗಳೂರಿನ ಪೊಲೀಸ್ ಆಯುಕ್ತರು ಆರ್‍ಎಸ್‍ಎಸ್ ಹಾಗೂ ಬಿಜೆಪಿಯವರೊಂದಿಗೆ ಸಂಪರ್ಕದಲ್ಲಿದ್ದು, ರಾಜ್ಯ ಸರ್ಕಾರದ ಪ್ರಾಯೋಜಿತ ಹತ್ಯೆಯ ಏಜೆಂಟರಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

    ಪೊಲೀಸರು ಘಟನೆಯ ಎಫ್‍ಐಆರ್ ನಲ್ಲಿ ಅಪರಿಚಿತ ಮುಸ್ಲಿಂ ಯುವಕರು ಎಂದು ದಾಖಲಿಸಿಕೊಂಡಿರೋದು ದೇಶದ ಬೇರೆಲ್ಲೂ ಇಲ್ಲ. ಧರ್ಮದ ಆಧಾರದಲ್ಲಿ ಪೊಲೀಸರು ಹಾಗೂ ರಾಜ್ಯ ಸರ್ಕಾರ ಯುವ ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಪೊಲೀಸರು ನಡೆಸಿದ ಗೊಲೀಬಾರ್ ಪ್ರಕರಣವನ್ನು ಸಿಓಡಿಗೆ ನೀಡಿದ್ದು ಸರಿಯಲ್ಲ. ಇದರಿಂದ ನ್ಯಾಯ ಸಿಗದು. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕೆಂದರು.

    ಗೊಲೀಬಾರ್ ನಲ್ಲಿ ಮೃತರಾದ ಇಬ್ಬರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಅಮಾಯಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕೆಂದು ಎಂದು ಇದೇ ವೇಳೆ ಆಗ್ರಹಿಸಿದರು.

    ಡಿವೈಎಫ್‍ಐ ರಾಷ್ಟ್ರೀಯ ನಿಯೋಗದಲ್ಲಿ ಡಿವೈಎಫ್‍ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೇರಳ ರಾಜ್ಯಾಧ್ಯಕ್ಷ ಎ.ಸತೀಶ್, ಕಾರ್ಯದರ್ಶಿ ಎ.ಎ.ರಹೀಂ,ಕೇಂದ್ರ ಸಮಿತಿಯ ಸದಸ್ಯರಾದ ಎಸ್.ಕೆ.ಸಾಜಿಶ್, ಯು.ಕೆ.ಜ್ಞಾನೇಶ್ ಕುಮಾರ್ ಹಾಗೂ ಸ್ಥಳೀಯ ನಾಯಕರು ಜೊತೆಗಿದ್ದರು.