Tag: DY ChandraChud

  • ಏಕಕಾಲದಲ್ಲಿ ಚುನಾವಣೆ ನಡೆಸುವುದು ಸಂವಿಧಾನದ ಮೂಲ ರಚನೆಯನ್ನ ಉಲ್ಲಂಘಿಸುವುದಿಲ್ಲ: ಡಿ.ವೈ ಚಂದ್ರಚೂಡ್

    ಏಕಕಾಲದಲ್ಲಿ ಚುನಾವಣೆ ನಡೆಸುವುದು ಸಂವಿಧಾನದ ಮೂಲ ರಚನೆಯನ್ನ ಉಲ್ಲಂಘಿಸುವುದಿಲ್ಲ: ಡಿ.ವೈ ಚಂದ್ರಚೂಡ್

    – ಒಂದು ದೇಶ ಒಂದು ಚುನಾವಣೆ ಬೆಂಬಲಿಸಿದ ನಿವೃತ್ತ ಸಿಜೆಐ

    ನವದೆಹಲಿ: ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ. ಅಲ್ಲದೇ ಹೆಚ್ಚಿನ ಸ್ಪಷ್ಟತೆಗಾಗಿ ಮಸೂದೆಯ ಕೆಲವು ನಿಬಂಧನೆಗಳನ್ನು, ವಿಶೇಷವಾಗಿ ಚುನಾವಣಾ ಆಯೋಗದ ಅಧಿಕಾರಗಳು ಮತ್ತು ತುರ್ತು ಪರಿಸ್ಥಿತಿಗಳ ಬಗ್ಗೆ ಪರಿಶೀಲನೆಯಾಗಬೇಕು ಎಂದು ನಿವೃತ್ತ ಸಿಜೆಐ ಡಿ.ವೈ ಚಂದ್ರಚೂಡ್ (DY Chandrachud) ಹೇಳಿದ್ದಾರೆ.

    ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ ಏರ್ಪಡಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಅಸಮಕಾಲಿಕ ಅಥವಾ ಏಕಕಾಲಿಕವಲ್ಲದ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಅತ್ಯಗತ್ಯ ಸ್ಥಿತಿಯಲ್ಲ. ಆದ್ದರಿಂದ ಇದನ್ನು ಸಂವಿಧಾನದ ಮೂಲ ಚೌಕಟ್ಟಿನ ಭಾಗವಾಗಿ ನೋಡಲಾಗುವುದಿಲ್ಲ. ವಾಸ್ತವವಾಗಿ, ಗಣರಾಜ್ಯದ ಆರಂಭಿಕ ವರ್ಷಗಳಲ್ಲಿ ಸಂವಿಧಾನದ ಮೂಲ ವಿನ್ಯಾಸವು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    ವಿಧಾನಿಕ ಮಿತಿಯೊಳಗೆ ಚುನಾವಣೆಗಳನ್ನು ನಡೆಸಿದರೆ, ವಿಧಾನಸಭೆಯ ಅಧಿಕಾರಾವಧಿಯನ್ನು ಮೊಟಕುಗೊಳಿಸಿದರೂ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    ಏಕಕಾಲದಲ್ಲಿ ಚುನಾವಣೆಗಳು ಸ್ಥಳೀಯ ಸಮಸ್ಯೆಗಳನ್ನು ಮರೆಮಾಡಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಭಾಷಾ ಸಂಬAಧಿತ ಉದಾಹರಣೆಯನ್ನು ಉಲ್ಲೇಖಿಸಿದರು. ಅವು ಸಾಮಾನ್ಯವಾಗಿ ಸ್ಥಳೀಯವಾಗಿರುತ್ತವೆ. ಆದರೆ ರಾಷ್ಟ್ರೀಯ ಚುನಾವಣಾ ಚರ್ಚೆಯ ಭಾಗವಾಗಿ ಹೊರ ಹೊಮ್ಮಬಹುದು ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ದುಪ್ಪಟ್ಟು ಹಣ ವಸೂಲಿ – ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋ ಸೀಜ್

    ರಾಜಕೀಯ ಸ್ಥಿರತೆಯ ಕುರಿತು ಮಾತನಾಡಿದ ಅವರು, ಸುಗಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಅವಿಶ್ವಾಸ ನಿರ್ಣಯಗಳ ಮೇಲೆ ಮಿತಿಗಳನ್ನು ಹಾಕಬಹುದು. ಇದಕ್ಕೆ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿಲ್ಲ. ಸದನದ ನಿಯಮಗಳಲ್ಲಿ ಬದಲಾವಣೆಗಳ ಮೂಲಕ ಇದನ್ನು ಕಾರ್ಯಗತಗೊಳಿಸಬಹುದು ಎಂದು ಹೇಳಿದ್ದಾರೆ.

    ಈ ವೇಳೆ ಉಪಸ್ಥಿತರಿದ್ದ ಮಾಜಿ ಸಿಜೆಐ ಜೆ.ಎಸ್.ಖೇಹರ್ (JS Khehar) ಅವರು ಮಾತನಾಡಿ, ಮಸೂದೆಯು ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುವುದಿಲ್ಲ ಎಂದು ವಿಧಾನಸಭೆಗೆ ಚುನಾವಣೆಗಳನ್ನು ಯಾವಾಗ ನಡೆಸಬೇಕೆಂದು ನಿರ್ಧರಿಸುವಲ್ಲಿ ಚುನಾವಣಾ ಆಯೋಗಕ್ಕೆ ವ್ಯಾಪಕ ವಿವೇಚನೆಯನ್ನು ನೀಡುವ ಮಸೂದೆಯ ಸೆಕ್ಷನ್ 82ಂ(5)ರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

  • ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ

    ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ

    ನವದೆಹಲಿ: ನಿವೃತ್ತ ಮುಖ್ಯ ನಾಯಮೂರ್ತಿ ಡಿವೈ ಚಂದ್ರಚೂಡ್‌ (DY Chandrachud) ಅವರು ವಾಸಿಸುತ್ತಿರುವ ಬಂಗಲೆಯನ್ನು ತಕ್ಷಣವೇ ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ (Supreme Court) ಆಡಳಿತ ಮಂಡಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

    ಚಂದ್ರಚೂಡ್‌ ಅವರು ಪ್ರಸ್ತುತ ಕೃಷ್ಣ ಮೆನನ್ ಮಾರ್ಗದ 5ನೇ ಬಂಗಲೆಯಲ್ಲಿ ವಾಸವಾಗಿದ್ದಾರೆ. ಅನುಮತಿಸಲಾದ ಅವಧಿಯನ್ನು ಮೀರಿ ಅಧಿಕೃತ ನಿವಾಸವನ್ನು (Official Home) ವಾಸವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಡಳಿತ ಬಂಗಲೆಯನ್ನು ತುರ್ತಾಗಿ ಖಾಲಿ ಮಾಡಿಸುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

     

    2022 ರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯಮಗಳ ನಿಯಮ 3 ಬಿ ಅಡಿಯಲ್ಲಿ, ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಯಾದ ನಂತರ ಆರು ತಿಂಗಳವರೆಗೆ ಅಧಿಕೃತ ಬಂಗಲೆಯಲ್ಲಿ ವಾಸವಾಗಿರಲು ಅನುಮತಿ ನೀಡಲಾಗುತ್ತದೆ. ಇದನ್ನೂ ಓದಿ: ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ- ದಲೈಲಾಮಾ ಜೊತೆ ಭಾರತದ ಸಂಬಂಧ ಹೇಗಿತ್ತು; ಚೀನಾ ಎಚ್ಚರಿಕೆ ಏನು?

    ಆರು ತಿಂಗಳ ಅವಧಿ ಮೇ 10ಕ್ಕೆ ಮುಕ್ತಾಯಗೊಂಡಿದೆ. ಹೆಚ್ಚುವರಿಯಾಗಿ ನೀಡಲಾಗಿದ್ದ ವಿಶೇಷ ಅನುಮತಿಯು ಮೇ 31ಕ್ಕೆ ಕೊನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಂಗಲೆ ಅಧಿಕೃತ ಸುಪ್ರೀಂ ಕೋರ್ಟ್ ಹೌಸ್ ಪೂಲ್‌ನ ಭಾಗವಾಗಿದ್ದು ಮರುಹಂಚಿಕೆಗಾಗಿ ಹಿಂತಿರುಗಿಸಬೇಕು ಎಂದು ಆಡಳಿತವು ತಿಳಿಸಿದೆ.

  • ನನ್ನಿಂದ ಏನಾದ್ರೂ ನೋವಾಗಿದ್ರೆ ಕ್ಷಮಿಸಿ: ಸಿಜೆಐ ಭಾವುಕ ಮಾತು

    ನನ್ನಿಂದ ಏನಾದ್ರೂ ನೋವಾಗಿದ್ರೆ ಕ್ಷಮಿಸಿ: ಸಿಜೆಐ ಭಾವುಕ ಮಾತು

    ನವದೆಹಲಿ: ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ (CII) ಚಂದ್ರಚೂಡ್ ಹೇಳಿದ್ದಾರೆ.

    ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾದ ಸಿಜೆಐ ಚಂದ್ರಚೂಡ್ ಅವರು ಶುಕ್ರವಾರ ಕೋರ್ಟ್ ಹಾಲ್‌ನಲ್ಲಿ ಸಹದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ನ್ಯಾಯಾಲಯವೇ ನನ್ನನ್ನು ಮುಂದುವರೆಸುತ್ತದೆ. ನಮ್ಮ ಅರಿವಿಗೆ ಬಾರದಂತೆ ಎಷ್ಟೋ ಜನರನ್ನು ಭೇಟಿಯಾಗಿರುತ್ತೇವೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ.

    ಮುಂದಿನ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ವಿಚಾರವಾಗಿ, ಅವರು ತುಂಬಾ ಗಟ್ಟಿಯಾದ ವ್ಯಕ್ತಿಯಾಗಿದ್ದಾರೆ. ನ್ಯಾಯಕ್ಕೆ ಬದ್ಧರಾಗಿದ್ದಾರೆ ಎಂದು ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಇನ್ನೂ ಇದೇ ವೇಳೆ ನಾನು ಹೆಚ್ಚು ಟ್ರೋಲಾದ ಜಡ್ಜ್‌ಗಳಲ್ಲಿ ಒಬ್ಬ ಎಂದು ಹೇಳಿಕೊಂಡು, ಶಾಯರಿ ಒಂದನ್ನು ಉಲ್ಲೇಖಿಸಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ.

    49ನೇ ಸಿಜೆಐ ಉದಯ್ ಉಮೇಶ್ ನಿವೃತ್ತದ ಬಳಿಕ, 2022ರ ನ.08ರಂದು 50ನೇ ಸಿಜೆಐ ಆಗಿ ಡಿ.ವೈ.ಚಂದ್ರಚೂಡ್ ಹುದ್ದೆ ಅಲಂಕರಿದ್ದರು. ಈಗ ಇವರ ಅಧಿಕಾರ ಅವಧಿ ಮುಕ್ತಾಯಗೊಂಡಿದೆ. 51ನೇ ಸಿಜೆಐ ಆಗಿ ಸಂಜೀವ್ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

  • ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕೇಸ್‌ – ವಿವಿ ಯಾರು ಸ್ಥಾಪಿಸಿದ್ರು ಅನ್ನೋದರ ಮೇಲೆ ನಿರ್ಧರಿಸಲಾಗುತ್ತೆ: ಸುಪ್ರೀಂ

    ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕೇಸ್‌ – ವಿವಿ ಯಾರು ಸ್ಥಾಪಿಸಿದ್ರು ಅನ್ನೋದರ ಮೇಲೆ ನಿರ್ಧರಿಸಲಾಗುತ್ತೆ: ಸುಪ್ರೀಂ

    ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವ ವಿದ್ಯಾನಿಲಯದ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ (AMU Minority Status) ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ (Supreme Court) ಸಾಂವಿಧಾನಿಕ ಪೀಠ 4:3 ಬಹುಮತದ ತೀರ್ಪು ನೀಡಿದ್ದು, 1967ರ ಅಝೀಝ್ ಬಾಷಾ vs ಯೂನಿಯನ್ ಆಫ್ ಇಂಡಿಯಾದ ತೀರ್ಪನ್ನು ರದ್ದುಗೊಳಿಸಿದೆ. ವಿಶ್ವವಿದ್ಯಾಲಯವನ್ನು ಯಾರು ಸ್ಥಾಪಿಸಿದರು ಎಂಬುವುದರ ಮೇಲೆ ಅಲ್ಪಸಂಖ್ಯಾತ ಸ್ಥಾನಮಾನ ನಿರ್ಧರಿಸಲಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

    ವಿಶ್ವ ವಿದ್ಯಾನಿಲಯವನ್ನು (Aligarh Muslim University) ಸ್ಥಾಪಿಸಿದವರು ಯಾರು? ಮತ್ತು ಅದರ ಹಿಂದಿನ ಕರ್ತೃ ಯಾರು? ಎಂಬುವುದನ್ನು ನ್ಯಾಯಾಲಯವು ಪರಿಶೀಲಿಸಬೇಕು. ಪರಿಶೀಲನೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಸ್ಥಾಪಿಸಿರುವುದು ಸಾಬೀತಾದರೆ, ಸಂಸ್ಥೆಯು 30ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ

    ಎಎಂಯು ಕಾನೂನಿನಿಂದ ರಚಿಸಲ್ಪಟ್ಟಿರುವುದರಿಂದ ಎಎಂಯು ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ ಎಂದು 1967ರ ಅಝೀಝ್ ಬಾಷಾ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಅದನ್ನು ಈಗ ತಳ್ಳಿಹಾಕಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪರವಾಗಿ ಬಹುಮತದ ತೀರ್ಪು ಬರೆದಿರುವ ಸಿಜೆಐ ಚಂದ್ರಚೂಡ್ (DY Chandrachud) ಅವರು, ಅಝೀಝ್ ಬಾಷಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪನ್ನು ತಳ್ಳಿ ಹಾಕಿದೆ. ಆದರೆ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಎಸ್‌ಸಿ ಶರ್ಮಾ ಅವರು ಭಿನ್ನಾ ತೀರ್ಪುಗಳನ್ನು ಬರೆದಿದ್ದಾರೆ.

    ಎಎಂಯು ಅಲ್ಪಸಂಖ್ಯಾತ ಸಂಸ್ಥೆಯೇ? ಎಂಬ ವಿಷಯವನ್ನು ನಿರ್ಧರಿಸಲು ಸಾಮಾನ್ಯ ಪೀಠಕ್ಕೆ ಅವಕಾಶ ನೀಡಲಾಗಿದೆ. ಈ ತೀರ್ಪಿನ ಪ್ರಕಾರ, ಎಎಂಯು ಅಲ್ಪಸಂಖ್ಯಾತ ಸ್ಥಾನಮಾನದ ಮೌಲ್ಯಮಾಪನ ಮಾಡಲು ಮತ್ತು 2006ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಮರುಮೌಲ್ಯಮಾಪನ ಮಾಡಲು ಮುಖ್ಯ ನ್ಯಾಯಾಧೀಶರು ಹೊಸ ಪೀಠವನ್ನು ರಚಿಸಲಿದ್ದಾರೆ. ಇದನ್ನೂ ಓದಿ: ವಯಸ್ಸಾಯಿತು ಇನ್ಯಾವಾಗ ಮದ್ವೆ ಆಗ್ತೀಯಾ? ಅಂತ ರೇಗಿಸಿದ್ದಕ್ಕೆ ಅತ್ತಿಗೆಯನ್ನೇ ಕೊಂದ

    ಎಎಂಯು ಕೇಂದ್ರೀಯ ಕಾನೂನು ಮೂಲಕ ಸ್ಥಾಪಿತಗೊಂಡಿರುವುದರಿಂದ, ಅದನ್ನು ಅಲ್ಪಸಂಖ್ಯಾತರ ಸಂಸ್ಥೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು 1967ರಲ್ಲಿ ತೀರ್ಪು ನೀಡಿತ್ತು. 1981ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮೂಲಕ ಅಂದಿನ ಕೇಂದ್ರ ಸರ್ಕಾರ ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ಈ ಸ್ಥಾನಮಾನವನ್ನು ರದ್ದುಪಡಿಸಿ 2006ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

  • LMV ಲೈಸೈನ್ಸ್ ಹೊಂದಿರುವ ಚಾಲಕರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹ: ಸುಪ್ರೀಂ

    LMV ಲೈಸೈನ್ಸ್ ಹೊಂದಿರುವ ಚಾಲಕರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹ: ಸುಪ್ರೀಂ

    ನವದೆಹಲಿ: ಲಘು ಮೋಟಾರು ವಾಹನ (LMV) ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಗಳು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನವನ್ನು ಚಲಾಯಿಸಲು ಅರ್ಹನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್‌ನ (Supreme Court) ಸಾಂವಿಧಾನಕ ಪೀಠ ಆದೇಶ ನೀಡಿದೆ. ಸಿಜೆಐ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ.

    ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆಜಿಗಿಂತ ಹೆಚ್ಚಿಲ್ಲದ ಭಾರವಿಲ್ಲದ ಸಾರಿಗೆ ವಾಹನವನ್ನು ಓಡಿಸಲು ಅರ್ಹರೇ ಎಂಬ ಕಾನೂನು ಪ್ರಶ್ನೆಗೆ ಪೀಠವು ಉತ್ತರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ರಾಯ್ ಅವರೊಂದಿಗೆ ಪೀಠದಲ್ಲಿ ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಕೂಡ ಇದ್ದರು. ಇದನ್ನೂ ಓದಿ: ರುಂಡ, ಮುಂಡ ಬೇರ್ಪಡಿಸಿ ಹತ್ಯೆ- 3 ದಿನಗಳ ಬಳಿಕ ರುಂಡ ಪತ್ತೆ

    ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಎಲ್‌ಎಂವಿ ಪರವಾನಗಿ ಹೊಂದಿರುವವರು ಕಾರಣ ಎಂದು ಸಾಬೀತುಪಡಿಸಲು ಯಾವುದೇ ಡೇಟಾ ಲಭ್ಯವಿಲ್ಲ. ಈ ಸಮಸ್ಯೆಯು ಲಘು ಮೋಟಾರು ವಾಹನ ಪರವಾನಗಿ ಹೊಂದಿರುವ ಚಾಲಕರ ಜೀವನೋಪಾಯಕ್ಕೆ ಸಂಬಂಧಿಸಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ನೋಡ್ರಿ ನಾನು ಸಿಎಂ ಅಂತಾ ಅಂಜಿಕೆ ಇಡ್ಕೋಬೇಡಿ: ಸಾಮಾನ್ಯ ವ್ಯಕ್ತಿಯಂತೆ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ

    ಲಘು ಮೋಟಾರು ವಾಹನ ಲೈಸೈನ್ಸ್ ಹೊಂದಿರುವ ಚಾಲಕರು 7,500 ಕೆಜಿ ಸಾಮರ್ಥ್ಯದ ವಾಹನ ಚಲಾಯಿಸಿ ಅಪಘಾತಗಳಾದಾಗ ವಿಮಾ ಕಂಪನಿಗಳು ಪರಿಹಾರ ಒದಗಿಸಿರಲಿಲ್ಲ. ಈ ವಾಹನಗಳು ಎಲ್‌ವಿಎಂ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದವು. ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ (MACT) ಮತ್ತು ನ್ಯಾಯಾಲಯಗಳು ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ವಿಮಾ ಕ್ಲೈಮ್‌ಗಳನ್ನು ಪಾವತಿಸಲು ಆದೇಶಿಸುತ್ತಿವೆ. ಇದರ ವಿರುದ್ಧ ಬಜಾಜ್ ಅಲೆಯನ್ಸ್ ಸೇರಿದಂತೆ ಹಲವು ವಿಮಾ ಕಂಪೆನಿಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರು: ಬೊಮ್ಮಾಯಿ ಟೀಕೆ

  • ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಆಗಿ ಸಂಜೀವ್‌ ಖನ್ನಾ ನೇಮಕ – ನ.11ರಂದು ಪ್ರಮಾಣ ವಚನ

    ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಆಗಿ ಸಂಜೀವ್‌ ಖನ್ನಾ ನೇಮಕ – ನ.11ರಂದು ಪ್ರಮಾಣ ವಚನ

    ನವದೆಹಲಿ: ನ್ಯಾ. ಸಂಜೀವ್‌ ಖನ್ನಾ (Sanjiv Khanna) ಅವರನ್ನು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಮೂರ್ತಿಯನ್ನಾಗಿ (CJI) ನೇಮಕ ಮಾಡಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಭಾರತದ ಸಂವಿಧಾನದ 124ನೇ ವಿಧಿಯ ಷರತ್ತು (2)ರ ಅನ್ವಯ ನೀಡಲಾದ ಅಧಿಕಾರ ಚಲಾಯಿಸುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮುಂದಿನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ಅವರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಇದನ್ನೂ ಓದಿ: ಕಣ್ತೆರೆದ ನ್ಯಾಯದೇವತೆ – ಇಲ್ಲಿಯವರೆಗೂ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್

    ನವೆಂಬರ್‌ 11ರಂದು ಸಿಜೆಐ ಹುದ್ದೆಯಿಂದ ಹಾಲಿ ಸಿಜೆಐ ಚಂದ್ರಚೂಡ್‌ (DY ChandraChud) ನಿವೃತ್ತಿಯಾಗಲಿದ್ದಾರೆ. ಅಂದೇ ಸಂಜೀವ್‌ ಖನ್ನಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದು, 2025ರ ಮೇ 13ರ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. 2019ರ ಜನವರಿ 18ರಂದು ನ್ಯಾ. ಸಂಜೀವ್‌ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌‌ ಹುದ್ದೆಗೆ ನೇಮಿಸಲಾಗಿತ್ತು. ಇದನ್ನೂ ಓದಿ: ಬಿಹಾರ, ಆಂಧ್ರಕ್ಕೆ ಬಂಪರ್‌ ಗಿಫ್ಟ್‌ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು

    2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ (UU Lalit) ಅವರು ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್‌ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯುಯು ಲಲಿತ್‌ ಅವರಿಗೂ ಮುನ್ನ ಎನ್.ವಿ.ರಮಣ (NV Ramana) ಅವರು 48ನೇ ಸಿಜೆಐ ಆಗಿ ಅಧಿಕಾರ ನಿರ್ವಹಿಸಿದ್ದರು. ಇದನ್ನೂ ಓದಿ: ಮಹಾ ಚುನಾವಣೆ: ಅಜಿತ್ ಪವಾರ್ ಬಣಕ್ಕೆ ಸಿಕ್ತು ಗಡಿಯಾರ ಚಿಹ್ನೆ – ಸುಪ್ರೀಂ ಕೋರ್ಟ್ ಅನುಮತಿ

  • CJI ಹುದ್ದೆಗೆ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು

    CJI ಹುದ್ದೆಗೆ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು

    ನವದೆಹಲಿ: ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ (DY Chandrachud) ಅವರು, ಮುಂದಿನ ಸಿಜೆಐ (CJI) ಆಗಿ ಅಧಿಕಾರ ವಹಿಸಿಕೊಳ್ಳಲು ನ್ಯಾಯಮೂರ್ತಿ ಸಂಜೀವ್‌ ಖನ್ನಾ (Sanjiv Khanna) ಅವರ ಹೆಸರು ಶಿಫಾರಸು ಮಾಡಿದ್ದಾರೆ.

    ಮುಂದಿನ ನವೆಂಬರ್‌ 11ರಂದು ಸಿಜೆಐ ಹುದ್ದೆಯಿಂದ ಚಂದ್ರಚೂಡ್‌ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ಮುಂದಿನ ಶಿಫಾರಸು ಕಳುಹಿಸುವಂತೆ ಕೇಂದ್ರ ಸರ್ಕಾರ (Central Government) ಕಳೆದ ಶುಕ್ರವಾರ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿತ್ತು. ಇದಕ್ಕೆ‌ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಚಂದ್ರಚೂಡ್‌ ಅವರು ತಮ್ಮ ಉತ್ತರಾಧಿಕಾರಿಯಾಗಿ ಸಂಜೀವ್‌ ಖನ್ನಾ ಅವರ ಹೆಸರನ್ನ ಶಿಫಾರಸು ಮಾಡಿದ್ದಾರೆ. ಸರ್ಕಾರದ ಅನುಮೋದನೆ ನಂತರ ನ್ಯಾ. ಸಂಜೀವ್ ಖನ್ನಾ 51ನೇ ಸಿಜೆಐಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

    2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ (UU Lalit) ಅವರು ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್‌ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಿದ್ದರು. ಯುಯು ಲಲಿತ್‌ ಅವರಿಗೂ ಮುನ್ನ ಎನ್.ವಿ.ರಮಣ (NV Ramana) ಅವರು 48ನೇ ಸಿಜೆಐ ಆಗಿ ಅಧಿಕಾರ ನಿರ್ವಹಿಸಿದ್ದರು. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

    ಚಂದ್ರಚೂಡ್ ಹಿನ್ನೆಲೆ ಏನು?
    ಎಲ್‌ಎಲ್‌ಎಂ ಪೂರ್ಣಗೊಳಿಸಿದ ನ್ಯಾ. ಚಂದ್ರಚೂಡ್ ಅವರು ಡಾಕ್ಟರ್ ಇನ್ ಜುಡಿಷಿಯಲ್ ಸೈನ್ಸಸ್ ಪದವಿಯನ್ನು ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯಿಂದ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದ ನ್ಯಾ. ಚಂದ್ರಚೂಡ್ ಅವರನ್ನು ಬಾಂಬೆ ಹೈಕೋರ್ಟ್ 1998ರ ಜೂನ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. ಇದನ್ನೂ ಓದಿ: 2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?

    2000 ಇಸವಿಯಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ನಂತರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ 2 ವರ್ಷ ಅಧಿಕಾರ ಪೂರೈಸಿದ ಸಾಧನೆ ಇವರದ್ದಾಗಲಿದೆ.  ಇದನ್ನೂ ಓದಿ: BMW i7 ಇವಿ ಕಾರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಪೂಜೆ ಸಲ್ಲಿಸಿದ ಜರ್ಮನ್ ರಾಯಭಾರಿ

  • ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿರೋದು ದೃಢ – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿರೋದು ದೃಢ – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಕೋಲ್ಕತ್ತಾ: ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (RG Kar Medical College and Hospital) ಕರ್ತವ್ಯನಿರತ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

    ಸೋಮವಾರ ಮಧ್ಯಾಹ್ನ ಸೀಲ್ದಾಹ್‌ನಲ್ಲಿರುವ ಕೋಲ್ಕತ್ತಾದ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿದೆ. ವಿರಾಮದ ಸಮಯದಲ್ಲಿ ಟ್ರೈನಿ ವೈದ್ಯೆ ಆಸ್ಪತ್ರೆ ಸೆಮಿನಾರ್ ಕೊಠಡಿಯಲ್ಲಿ ವಿಶ್ರಾಂತಿಗೆ ಹೋದಾಗ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಬಿಐ ಮೂಲಗಳ ಪ್ರಕಾರ, ಚಾರ್ಚ್ಶೀಟ್‌ನಲ್ಲಿ ಆರೋಪಿ ಸಂಜಯ್ ರಾಯ್ ಹೆಸರಿಸಿರುವ ಸುಮಾರು 200 ಜನರ ಹೇಳಿಕೆಗಳನ್ನ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಗ್ಯಾಂಗ್ ರೇಪ್ ಆಗಿರಬಹುದು ಎಂದು ಶಂಕಿಸಿ ಹೇಳಿಕೆ ನೀಡಿದ್ದಾರೆ ಎಂದು ಚಾರ್ಚ್ಶೀಟ್‌ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

    ಆಗಸ್ಟ್ 9ರಂದು ಟ್ರೈನಿ ವೈದ್ಯೆ ಹತ್ಯೆಗೀಡಾದ ನಂತರ ತನಿಖಾ ಹಂತದಲ್ಲಿ ಒಂದೊಂದೇ ಭಯಾನಕ ಸತ್ಯಗಳು ಬಯಲಾಗುತ್ತಾ ಹೋದವು. ಇದರಿಂದ ದೇಶವ್ಯಾಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರಿಂದ ಎಚ್ಚೆತ್ತ ಹೈಕೋರ್ಟ್ ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ತನಿಖೆ ವಹಿಸುವಂತೆ ಸೂಚಿಸಿತು. ಬಳಿಕ ಆರೋಪಿ ಹೇಳಿಕೆ ಆಧರಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಸಿಬಿಐ ಅಂದಿನ ಪ್ರಾಂಶುಪಾಲನಾಗಿದ್ದ ಸಂದೀಪ್ ಘೋಷ್ ಅವರನ್ನೂ ಬಂಧಿಸಿ ತನಿಖೆ ನಡೆಸಿತು.

    ಕೋಲ್ಕತ್ತಾ ಪ್ರಕರಣ ಏನು?
    ಕಳೆದ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸ್ ಸ್ವಯಂ ಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು. ಈ ಪ್ರಕರಣದ ತನಿಖೆ ಹೊಣೆ ಹೊತ್ತಿದ್ದ ಸಿಬಿಐ ಇದೀಗ ದೋಷಾರೋಪ ಪಟ್ಟಿ ಸಲ್ಲಿಸಿದೆ.

  • ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ – ತಾರತಮ್ಯ ನಡೆದರೆ ಆಯಾ ರಾಜ್ಯಗಳೇ ಹೊಣೆ: ಸುಪ್ರೀಂ

    ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ – ತಾರತಮ್ಯ ನಡೆದರೆ ಆಯಾ ರಾಜ್ಯಗಳೇ ಹೊಣೆ: ಸುಪ್ರೀಂ

    – ರಿಜಿಸ್ಟ್ರಾರ್‌ಗಳಲ್ಲಿನ ಜಾತಿ ಕಾಲಂ ತೆಗೆದು ಹಾಕಬೇಕೆಂದ ಕೋರ್ಟ್‌

    ನವದೆಹಲಿ: ದೇಶದ ಜೈಲುಗಳಲ್ಲಿ (Jail_ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ, ಈ ತಾರತಮ್ಯವನ್ನು ಸಹಿಸಲಾಗುವುದಿಲ್ಲ. ಒಂದು ವೇಳೆ ಜಾತಿ ಆಧಾರಿತ ತಾರತಮ್ಯ ಜೈಲುಗಳಲ್ಲಿ ನಡೆದರೇ ಆಯಾ ರಾಜ್ಯಗಳೇ ಹೊಣೆ ಎಂದು ಸುಪ್ರೀಂ ಕೋರ್ಟ್ (Supreme Court) ಕಟ್ಟುನಿಟ್ಟಿನ ಆದೇಶ ನೀಡಿದೆ.

    ಈ ಬಗ್ಗೆ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ತ್ರಿಸದಸ್ಯ ಪೀಠ, ಕೆಳವರ್ಗದವರಿಗೆ ಸ್ವಚ್ಛತೆ ಮತ್ತು ಕಸಗುಡಿಸುವ ಕಾರ್ಯಗಳನ್ನು ವಹಿಸುವ ಮೂಲಕ ನೇರವಾಗಿ ತಾರತಮ್ಯವನ್ನುಂಟುಮಾಡುತ್ತದೆ (Caste Based Discrimination). ಉನ್ನತ ಜಾತಿಯವರಿಗೆ ಅಡುಗೆ ಕೆಲಸ ನಿಯೋಜಿಸುವ ಆರೋಪ ಕೇಳಿಬಂದಿದೆ ಇದು ಆರ್ಟಿಕಲ್-15ರ ಉಲ್ಲಂಘನೆಯಾಗಿದೆ ಎಂದು ಹೇಳಿತು. ಇದನ್ನೂ ಓದಿ: ನವರಾತ್ರಿ ವಿಶೇಷ – 1 | ಕೋಲ್ಕತ್ತಾದ ಕುರ್ಮಾತುಲಿ ಪಾರ್ಕ್‌ ದುರ್ಗಾ ಪೆಂಡಾಲ್‌ ಮಹತ್ವದ ನಿಮಗೆ ಗೊತ್ತೆ?

    ಇಂತಹ ಆಚರಣೆ ತಡೆಯಲು ಜೈಲು ಕೈಪಿಡಿ ನಿಬಂಧನೆಗಳನ್ನು (Jail Rules) ಪರಿಷ್ಕರಿಸವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜೈಲು ಕೈಪಿಡಿ ನಿಬಂಧನೆಗಳನ್ನು ಬದಲಿಸಬೇಕು. ಅಪರಾಧಿ ಅಥವಾ ಅಂಡರ್ ಟ್ರಯಲ್ ರಿಜಿಸ್ಟ್ರಾರ್‌ಗಳಲ್ಲಿನ ಜಾತಿ ಕಾಲಂ ಅನ್ನು ತೆಗೆದು ಹಾಕಬೇಕು ಎಂದು ಹೇಳಿತು. ನ್ಯಾಯಾಲಯದ ಮುಂದೆ ಈ ತೀರ್ಪಿನ ಪಾಲನೆ ವರದಿಯನ್ನು ರಾಜ್ಯಗಳು ಸಲ್ಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ಹತ್ರಾಸ್‌ನ ಸತ್ಸಂಗದಲ್ಲಿ ಕಾಲ್ತುಳಿತದಿಂದ 121 ಸಾವು ಪ್ರಕರಣ; 3,200 ಪುಟಗಳ ಈ ಚಾರ್ಜ್‌ ಶೀಟ್‌ ಸಲ್ಲಿಕೆ

    ಕೈದಿಗಳಿಗೆ ಘನತೆ ನೀಡದಿರುವುದು ವಸಾಹತುಶಾಹಿ ಅವಧಿಯ ಕುರುಹು, ಅಲ್ಲಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು ಮತ್ತು ಜೈಲು ವ್ಯವಸ್ಥೆಗೆ ಕೈದಿಗಳ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ತಿಳಿದಿರಬೇಕು ಎಂದು ಸಂವಿಧಾನವು ಆದೇಶಿಸುತ್ತದೆ. ಜೈಲು ಶಿಕ್ಷೆಗೆ ಒಳಗಾಗುವ ಯಾವುದೇ ವ್ಯಕ್ತಿಯು ಅವನ ಜಾತಿ ಆಧಾರದ ಕೆಲಸಗಳನ್ನು ಮಾಡದ ಹೊರತು ಕೀಳು ಕೆಲಸವನ್ನು ಮಾಡುವುದಿಲ್ಲ ಎನ್ನುವುದಿಲ್ಲ ಎನ್ನುವ ಅಂಶವನ್ನು ಗಮಸಿತು. ಅಂತೆಯೇ ಹರಿ ಅಥವಾ ಚಂಡಾಲ್ ಜಾತಿಗಳಿಂದ ಕಸಗುಡಿಸುವವರನ್ನು ಆಯ್ಕೆ ಮಾಡಬೇಕು ಎಂದು ಹೇಳುವ ಜೈಲು ಕೈಪಿಡಿ ನಿಯಮಗಳನ್ನು ಕೋರ್ಟ್ ಟೀಕಿಸಿತು.

    ಇಂತಹ ವಿಧಾನವು ಸಾಧಾರಣ ಸಮಾನತೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಇಂತಹ ಅಭ್ಯಾಸಗಳು ಕಾರಾಗೃಹಗಳಲ್ಲಿ ಕಾರ್ಮಿಕರ ಅನ್ಯಾಯದ ವಿಭಜನೆಗೆ ಕಾರಣವಾಗುತ್ತವೆ. ಜಾತಿ ಇತ್ಯಾದಿಗಳ ಆಧಾರದ ಮೇಲೆ ಕಾರ್ಮಿಕ ನಿಯೋಜನೆಯ ಅನುಮತಿಸಲಾಗುವುದಿಲ್ಲ.
    ಒಳಚರಂಡಿ ಟ್ಯಾಂಕರ್‌ಗಳನ್ನು ಶುಚಿಗೊಳಿಸುವಂತಹ ಅಪಾಯಕಾರಿ ಕೆಲಸಗಳನ್ನು ಯಾವ ಕೈದಿಗಳೂ ಮಾಡಬಾರದು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ – ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ

    ಜೈಲು ಬ್ಯಾರಕ್‌ಗಳಲ್ಲಿನ ಜಾತಿ ಆಧಾರಿತ ತಾರತಮ್ಯದ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ ಬಳಿಕ ಪತ್ರಕರ್ತೆ ಸುಕನ್ಯಾ ಶಾಂತಾ ಅವರು ಅರ್ಜಿ ಸಲ್ಲಿಸಿದ್ದರು. ಹಲವಾರು ರಾಜ್ಯಗಳಲ್ಲಿನ ಜೈಲು ಕೈಪಿಡಿಗಳು ಜಾತಿ ತಾರತಮ್ಯವನ್ನು ಪ್ರೋತ್ಸಾಹಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ಜೈಲು ಕೈಪಿಡಿಗಳಲ್ಲಿ ಕಂಡುಬರುವ ತಾರತಮ್ಯದ ನಿಬಂಧನೆಗಳನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿ ಮೇರೆಗೆ ಕೋರ್ಟ್ ವಿಚಾರಣೆ ನಡೆಸಿತ್ತು.

  • ಮಕ್ಕಳ ಮೇಲಿನ ಲೈಂಗಿಕ ದೃಶ್ಯಗಳ ಡೌನ್‍ಲೋಡ್, ವೀಕ್ಷಣೆ ಅಪರಾಧ: ಸುಪ್ರೀಂ ಮಹತ್ವದ ತೀರ್ಪು

    ಮಕ್ಕಳ ಮೇಲಿನ ಲೈಂಗಿಕ ದೃಶ್ಯಗಳ ಡೌನ್‍ಲೋಡ್, ವೀಕ್ಷಣೆ ಅಪರಾಧ: ಸುಪ್ರೀಂ ಮಹತ್ವದ ತೀರ್ಪು

    ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡುವುದು ಮತ್ತು ನೋಡುವುದು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO Act) ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನಿನ ಕುರಿತು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.

    ಕೇವಲ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡುವುದು ಮತ್ತು ನೋಡುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಲ್ಲ ಎಂದು ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ತಳ್ಳಿಹಾಕಿತು. ತೀರ್ಪು ನೀಡುವಲ್ಲಿ ಹೈಕೋರ್ಟ್ ಮಹಾ ತಪ್ಪು ಎಸಗಿದೆ ಎಸಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    ನ್ಯಾಯಾಲಯವು ‘Child pornography’ ಪದದ ಬಳಕೆಯನ್ನು ಅಸಮ್ಮತಿಗೊಳಿಸಿದೆ ಮತ್ತು ಸಂಸತ್ತು ಪೋಕ್ಸೊ ಕಾಯಿದೆಗೆ ತಿದ್ದುಪಡಿಯನ್ನು ತರಬೇಕು ಎಂದು ಸಲಹೆ ನೀಡಿತು. ನಾವು ಸುಗ್ರೀವಾಜ್ಞೆಯನ್ನು ತರಬಹುದು ಎಂದು ಸೂಚಿಸಿದ್ದೇವೆ. ಯಾವುದೇ ಆದೇಶಗಳಲ್ಲಿ ಇದನ್ನು `’Child pornography’  ಎಂದು ಉಲ್ಲೇಖಿಸದಂತೆ ನಾವು ಎಲ್ಲಾ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಯಾವುದೇ ಡಿಜಿಟಲ್ ಸಾಧನದಲ್ಲಿ ಯಾವುದೇ ರೂಪದಲ್ಲಿ, ಅಂತರ್ಜಾಲದಲ್ಲಿ ವ್ಯಕ್ತಿಯು ಯಾವುದೇ ಮಕ್ಕಳ ಅಶ್ಲೀಲ ದೃಶ್ಯವನ್ನು ವೀಕ್ಷಿಸುವುದು, ಹಂಚುವುದು ಅಥವಾ ಪ್ರದರ್ಶಿಸುವುದು ಸಹ ಅಪರಾಧವಾಗಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ಯಾವುದೇ ವ್ಯಕ್ತಿಯು ಮಗುವನ್ನು ಒಳಗೊಂಡ ಯಾವುದೇ ಅಶ್ಲೀಲ ವೀಡಿಯೋ ಅಥವಾ ಫೋಟೋ ಸಂಗ್ರಹಿಸಿ ಅದನ್ನು ನಾಶಪಡಿಸಲು ವಿಫಲವಾದರೆ 5,000 ರೂ. ಮತ್ತು ಪುನರಾವರ್ತಿತ ಅಪರಾಧಕ್ಕೆ 10,000 ರೂ. ದಂಡ ವಿಧಿಸಲಾಗುತ್ತದೆ. ಪ್ರಸಾರ ಮಾಡಲು ಸಂಗ್ರಹಿಸಿದರೆ, ದಂಡದ ಜೊತೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಮಕ್ಕಳ ಅಶ್ಲೀಲ ವಸ್ತುಗಳನ್ನು ಸಂಗ್ರಹಿಸಿದರೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ನಂತರದ ಅಪರಾಧದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

    ಏನಿದು ಪ್ರಕರಣ?
    28 ವರ್ಷದ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡಿದ ಆರೋಪದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು.

    ಮಕ್ಕಳ ಅಶ್ಲೀಲ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‍ಜಿಒ ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ಆದೇಶವನ್ನು ನೀಡಲಾಗಿದೆ.

    ಎಸ್.ಹರೀಶ್ ಎಂಬಾತ ಮೊಬೈಲ್‌ನಲ್ಲಿ ಎರಡು ಮಕ್ಕಳ ಅಶ್ಲೀಲ ವೀಡಿಯೊಗಳನ್ನು ಡೌನ್‍ಲೋಡ್ ಮಾಡಿ ಮತ್ತು ವೀಕ್ಷಿಸಿದ್ದಕ್ಕಾಗಿ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ.

    ಇತ್ತೀಚೆಗೆ ಮಕ್ಕಳ ಅಶ್ಲೀಲ ದೃಶ್ಯಗಳು ಆಕಸ್ಮಿಕವಾಗಿ ಅಥವಾ ಸ್ವಯಂಚಾಲಿತವಾಗಿ ಡೌನ್‍ಲೋಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿತ್ತು. ಇದನ್ನೂ ಓದಿ: ಓಣಂ ರಂಗೋಲಿ ಹಾಕಿದ್ದಕ್ಕೆ ಕಾಲಿನಿಂದ ಅಳಿಸಿ ನೃತ್ಯ ಮಾಡಿ ಕಿರಿಕ್‌