Tag: DWR

  • ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್

    ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್

    ಚೆನ್ನೈ: ಮೂರು ಚಕ್ರದ ವಾಹನ ಆಟೋವನ್ನ ಚಾಲಕನೊಬ್ಬ 2.2 ಕಿ.ಮೀ ವರೆಗೂ 2 ಚಕ್ರದಲ್ಲಿ ಓಡಿಸಿದ ವೀಡಿಯೋವನ್ನು ಥ್ರೋಬ್ಯಾಕ್ ವೀಡಿಯೋ ಎಂದು ಇನ್‍ಸ್ಟಾಗ್ರಾಮ್ ನಲ್ಲಿ ಗಿನ್ನಿಸ್  ವರ್ಲ್ಡ್ ರೆಕಾರ್ಡ್ಸ್(ಡಿಡಬ್ಲ್ಯೂಆರ್) ಹಂಚಿಕೊಂಡಿದೆ.

    ಅ.6.2016 ರಲ್ಲಿ ವೈರಲ್ ಆಗಿದ್ದ ಚೆನ್ನೈ ಮೂಲದ ಆಟೋ ಚಾಲಕನ ವೀಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಇನ್‍ಸ್ಟಾಗ್ರಾಮ್ ಪುಟದಲ್ಲಿ ಥ್ರೋಬ್ಯಾಕ್ ವೀಡಿಯೋ ಎಂದು ಹಂಚಿಕೊಂಡಿದೆ. ಆಟೋ ಚಾಲಕ ಜಗದೀಶ್ ಎಂ ತನ್ನ ಮೂರು ಚಕ್ರದ ವಾಹನ ಆಟೋವನ್ನ ಎರಡು ಚಕ್ರಗಳ ಮೇಲೆ 2.2 ಕಿ.ಮೀ ದೂರದವರೆಗೂ ಓಡಿಸುತ್ತಿರುವ ವೀಡಿಯೋವನ್ನು ಡಿಡಬ್ಲ್ಯೂಆರ್ ಶೇರ್ ಮಾಡಲಾಗಿದೆ. ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋವನ್ನು ನೋಡಿದ ವೀಕ್ಷಕರು ಬೆರಗುಗೊಂಡಿದ್ದಾರೆ. ಇದನ್ನೂ ಓದಿ: ಶಬರಿಮಲೆಗೆ ಪ್ರತಿದಿನ 25 ಸಾವಿರ ಭಕ್ತರ ದರ್ಶನಕ್ಕೆ ಅವಕಾಶ

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧಿಕೃತ ಇನ್‍ಸ್ಟಾಗ್ರಾಮ್ ನಲ್ಲಿ, ಎಪಿಕ್ ಆಟೋ-ರಿಕ್ಷಾ ಸೈಡ್ ವ್ಹೀಲಿಂಗ್, ಚೆನ್ನೈ ಮೂಲದ ಆಟೋ-ರಿಕ್ಷಾ ಚಾಲಕ ಜಗದೀಶ್.ಎಂ, ಭಾರತದ ಟಕ್ ಟಕ್ ಈ ಸೈಡ್ ವ್ಹೀಲಿಂಗ್ ನಲ್ಲಿ ದಾಖಲೆ ಬರೆದಿದ್ದರು ಎಂದು ಬರೆದು ಪೋಸ್ಟ್ ಮಾಡಲಾಗಿದೆ.

    ಈ ದಾಖಲೆ ಕುರಿತು ಜಗದೀಶ್ ಅವರು ಮಾತನಾಡಿದ್ದು, ಈ ರೀತಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಮಾಡಬಹುದೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ ಮಾಡಿರುವುದಕ್ಕೆ ನನಗೆ ತೃಪ್ತಿ ಇದೆ. ನನಗೆ ಈ ರೀತಿ ಓಡಿಸುವುದು ಆನಂದ ನೀಡುತ್ತೆ. ನಾನು ಗಾಡಿ ಓಡಿಸುವುದನ್ನು ನೋಡಿದವರು ಭಯಗೊಂಡು ನನ್ನನ್ನು ಎಷ್ಟೋ ಬಾರಿ ಕೇಳಿದ್ದಾರೆ. ಆಟೋ ಓಡಿಸುವುದು ಬಿಟ್ಟು ನನಗೆ ಯಾವುದು ಇಷ್ಟವಾಗುವುದಿಲ್ಲ ಮತ್ತು ಪ್ರಚೋದಿಸುವುದಿಲ್ಲ ಎಂದಿದ್ದರು.

    ಡಿಡಬ್ಲ್ಯೂಆರ್ ಪ್ರಕಾರ, ಜಗದೀಶ್ ತನ್ನ ಮೂರು ಚಕ್ರದ ವಾಹನದ ಮೇಲೆ ಸುಮಾರು 2.2 ಕಿ.ಮೀ ವರೆಗೂ ಎರಡು ಚಕ್ರದಲ್ಲಿ ಬಂದಿದ್ದು, ಈ ರೀತಿ ವ್ಹೀಲಿಂಗ್ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಹಣೆಗೆ ಗುಂಡು ಹಾರಿಸಿಕೊಂಡು 71 ವರ್ಷದ ವೃದ್ಧ ಸಾವು

    ಈ ವೈರಲ್ ವೀಡಿಯೋವನ್ನು ಹಂಚಿಕೊಂಡ ನಂತರ 4,26ಲಕ್ಷಕ್ಕೂ ಹೆಚ್ಚು ವ್ಯೂವ್ ಆಗಿದ್ದು, ಫಾಸ್ಟ್ ಅಂಡ್ ಫ್ಯೂರಿಯಸ್ 10 ಸ್ಟಂಟ್ ಡೈರೆಕ್ಟರ್ ಸಿಕ್ಕಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿಯೂ ಇನ್ನೊಬ್ಬರು, ಭಾರತೀಯರು ಮಾತ್ರ ಇದನ್ನು ಮಾಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ.