Tag: Dwarkanath Guruji

  • ರಾಜಗುರು ಮಾತು ಕೇಳಿ ಸಿಎಂ ಫುಲ್ ಟೆನ್ಷನ್!

    ರಾಜಗುರು ಮಾತು ಕೇಳಿ ಸಿಎಂ ಫುಲ್ ಟೆನ್ಷನ್!

    ಬೆಂಗಳೂರು: ರಾಜಗುರು ದ್ವಾರಕನಾಥ್ ಗುರೂಜಿ ಮಾತು ಕೇಳಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫುಲ್ ಟೆನ್ಷನ್ ಆಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಕಾಣಿಸಲಿದೆ ಎಂದು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವಧಿಯಲ್ಲಿ ಬರದ ಕಪ್ಪು ಚುಕ್ಕೆ ತಪ್ಪಿಸಲು ಸಿಎಂಗೆ ರಾಜಗುರು ಸಲಹೆಯೊಂದನ್ನು ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರೂಜಿ, ಈ ವರ್ಷ ಮಳೆಯ ಅಭಾವ ಕಾಡಲಿದೆ. ಹನಿ ನೀರಿಗೂ ಕಷ್ಟಪಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯ ಈ ವರ್ಷ ಭೀಕರ ಬರಗಾಲಕ್ಕೆ ತುತ್ತಾಗಲಿದೆ ಎಂದು ಗುರೂಜಿ ಹೇಳಿದ್ದಾರೆ. ಬರಗಾಲವನ್ನು ತಪ್ಪಿಸಲು ಸಿಎಂಗೆ ಕೆಲವು ಸಲಹೆ ನೀಡಿದ್ದು, ಶೃಂಗೇರಿ ಋಷ್ಯಶೃಂಗದಲ್ಲಿ ಮಹಾ ಪೂಜೆ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.

    ಶೃಂಗೇರಿ ಜೊತೆ ರಾಜ್ಯದ ಎಲ್ಲ ಮುಜರಾಯಿ ದೇಗುಲದಲ್ಲಿ ಈಗಿನಿಂದಲೇ ವಿಶೇಷ ವರುಣನ ಪೂಜೆ ಆರಂಭಿಸಬೇಕು. ಈಶ್ವರ ದೇಗುಲದಲ್ಲಿ ಶತರುದ್ರಾಭಿಷೇಕ ನಡೆಸಬೇಕೆಂದು ರಾಜಗುರುಗಳು ಸೂಚಿಸಿದ್ದಾರೆ. ರಾಜ್ಯದಲ್ಲೂ ಕಲಹ, ರಾಜಕೀಯದ ವೈಷಮ್ಯದಿಂದಾಗಿ ವಿಕೃತಿ ಮನೋಭಾವ ಬಂದಿದೆ. ಇದೆಲ್ಲದರ ನಿವಾರಣೆಗಾಗಿ ದೇವರ ಪೂಜೆ ನಡೆಸಬೇಕೆಂದು ತಿಳಿಸಿರುವುದಾಗಿ ಅವರು ಹೇಳಿದರು.

  • ಡಿಕೆಶಿ ಟ್ರಬಲ್ ಶೂಟರ್ ಅಲ್ಲ, ಆತ ಟ್ರಬಲ್ ಸೇವರ್: ದ್ವಾರಕನಾಥ್ ಗುರೂಜಿ

    ಡಿಕೆಶಿ ಟ್ರಬಲ್ ಶೂಟರ್ ಅಲ್ಲ, ಆತ ಟ್ರಬಲ್ ಸೇವರ್: ದ್ವಾರಕನಾಥ್ ಗುರೂಜಿ

    ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ. ಆತನೋರ್ವ ಟ್ರಬಲ್ ಸೇವರ್ (ರಕ್ಷಕ) ಎಂದು ರಾಜಗುರು ದ್ವಾರಕನಾಥ್ ಗುರೂಜಿ ಹೇಳಿದ್ದಾರೆ.

    ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರುವ ಡಿಕೆ ಶಿವಕುಮಾರ್, ಇನ್ನು ತುಂಬಾ ಮೆಚ್ಯೂರೆಡ್ ಆಗಿ ಮಾತುಕತೆ ನಡೆಸುವುದನ್ನು ಸಚಿವರು ಅಳವಡಿಸಿಕೊಳ್ಳಬೇಕು. ಸ್ವಲ್ಪ ಮಾತನಾಡುವ ಶೈಲಿ, ಬಾಡಿ ಸ್ಟೈಲ್ ಬದಲಾಯಿಸಿಕೊಂಡರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಅರ್ಹತೆಯುಳ್ಳ ವ್ಯಕ್ತಿ. ಯಾವ ಸಮಯದಲ್ಲಿ ಏನು ಬೇಕಾದರು ಕೊಡಿ, ಆ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಶಿವಕುಮಾರ್ ಹೊಂದಿದ್ದಾರೆ.

    ಬಿಜೆಪಿ ಭದ್ರಕೋಟೆ ಅಂತಾ ಕರೆಸಿಕೊಳ್ಳುತ್ತಿದ್ದ ಬಳ್ಳಾರಿಯನ್ನು ಗೆದ್ದುಕೊಂಡು ಬಂದಿದ್ದಾರೆ. ರಾಮನಗರದಲ್ಲಿ ತಮ್ಮ ಕೈಚಳಕವನ್ನು ತೋರಿಸಿಯೇ ಬಿಟ್ಟರು. ಕಾಂಗ್ರೆಸ್ ಪಕ್ಷಕ್ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ, ಟ್ರಬಲ್ ಸೇವರ್ ಎಂದು ಹೇಳುವ ಮೂಲಕ ಸಚಿವರನ್ನು ಗುರೂಜಿ ಹಾಡಿ ಹೊಗಳಿದರು.

    ಡಿಕೆ ಶಿವಕುಮಾರ್ ಅವರನ್ನು ಚಿಕ್ಕ ವಯಸ್ಸಿನಿಂದಲು ತಿದ್ದಿ ತಂದವನು ನಾನೇ. ಬೇಕಾದ್ರೆ ಯಾವ ದೇವರು ಮೇಲಾದ್ರು ಪ್ರಮಾಣ ಮಾಡ್ತೀನಿ. ಇನ್ನು ದೃಢವಾದ ಭಕ್ತಿ ಬಂದು ದತ್ತಾತ್ರೇಯನಿಗೆ ಶರಣು ಹೋದರೆ ಪದವಿ ಸಿಗುತ್ತದೆ. ಒಂದು ದತ್ತಾತ್ರೇಯನಿಂದ ದೂರ ಹೋದ್ರೆ ಪದವಿ ಸಿಗಲ್ಲ ಎಂದು ಎಚ್ಚರಿಕೆ ನೀಡಿದರು.

    ಕುಮಾರಸ್ವಾಮಿ ಅವರು ದೊಡ್ಡ ನಾಯಕರಾಗಿದ್ದು, ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದನ್ನು ಬಿಡಬೇಕು. ಎಷ್ಟು ಶಾಂತ ಚಿತ್ತರಾಗಿ ಕೆಲಸ ಮಾಡುತ್ತಾರೋ ಅಷ್ಟೇ ಒಳ್ಳೆಯದಾಗುತ್ತದೆ. ದೊಡ್ಡ ನಾಯಕರು ಯಾರು ಹೆಚ್ಚಿನ ಮಾತನಾಡಿದವರಲ್ಲ. ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಪಕ್ಷದಿಂದ ಒಬ್ಬರೇ ಮಾತಾಡಬೇಕು. ಎಲ್ಲರು ತಮ್ಮ ಹೇಳಿಕೆಯನ್ನು ನೀಡುತ್ತಾ ಹೋದ್ರೆ ಗೊಂದಲ ಉಂಟಾಗುತ್ತದೆ. ಸಿಎಂ ಅವರ ಅಣ್ಣ, ತಮ್ಮ, ಮಕ್ಕಳು ಮಾತನಾಡೋದನ್ನು ನಿಲ್ಲಿಸಬೇಕು. ಇತ್ತ ಕಾಂಗ್ರೆಸ್ ನಿಂದಲೂ ಒಬ್ಬರೇ ಮಾತನಾಡಿದಾಗ ಮಾತ್ರ ಮೈತ್ರಿಯಲ್ಲಿ ಐಕ್ಯತೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಕಾಂಗ್ರೆಸ್ ನವರು ಬೆಂಬಲ ನೀಡಿದ ಮೇಲೆ ಕಿರುಕುಳ ಕೊಡಬಾರದು. ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಶಾಂತಿಯಿಂದ ಸರ್ಕಾರವನ್ನು ಮಾರ್ಚ್ 27ರವರೆಗೆ ತೆಗೆದುಕೊಂಡ ಹೋದ್ರೆ ಮಾತ್ರ ಮೈತ್ರಿಯ ಕಾರ್ಯಸಾಧನೆ ಆಗಲಿದೆ. ಕುಮಾರಸ್ವಾಮಿ ಅವರು ರಾಜ್ಯದ ನಾಯಕರಾಗಿದ್ದು, ಅತ್ಯಂತ ಶಾಂತಿಯಿಂದ ಕೆಲಸ ನಿರ್ವಹಿಸಬೇಕಿದೆ. ಆರೋಗ್ಯ ಸುಧಾರಣೆಗಾಗಿ ಸನ್ನತಿಯ ಚಂದ್ರಲಾಪುರ ದೇವಿಯ ದರ್ಶನ ಮಾಡಿಬರಬೇಕು. ಚಂದ್ರಲಾಪುರ ದೇವಿ ಮಾತ್ರ ಆರೋಗ್ಯ ಭಾಗ್ಯವನ್ನು ನೀಡಲಿದೆ ಎಂದ ಪಬ್ಲಿಕ್ ಟಿವಿ ಮೂಲಕ ಸಿಎಂಗೆ ಸಂದೇಶ ರವಾನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸೆಂಬರ್ 19 ಡೇಂಜರ್ ಅಂತೆ-ಹೆಚ್‍ಡಿಕೆ, ಬಿಎಸ್‍ವೈ, ಮೋದಿ ಯಾರಿಗೆ ಡೇಂಜರ್?

    ಡಿಸೆಂಬರ್ 19 ಡೇಂಜರ್ ಅಂತೆ-ಹೆಚ್‍ಡಿಕೆ, ಬಿಎಸ್‍ವೈ, ಮೋದಿ ಯಾರಿಗೆ ಡೇಂಜರ್?

    -ಡೇಂಜರ್ ಡಿಸೆಂಬರ್ 19ರ ರಹಸ್ಯ ಬಹಿರಂಗ

    ಬೆಂಗಳೂರು: ಡಿಸೆಂಬರ್ 19 ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಡೇಂಜರ್ ಎಂದು ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯವಾಣಿ ನುಡಿದಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಡಿಸೆಂಬರ್ 19ರ ಬಳಿಕ ಡೇಂಜರ್ ಅಂತೆ. ಡಿಸೆಂಬರ್ 19ರಿಂದ ಕುಮಾರಸ್ವಾಮಿಗೆ ಗುರು ಬದಲಾವಣೆ ಆಗಲಿದ್ದು, ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರವಾಗಿರಲೇಬೇಕು. ಅಂದ್ರೆ ಡಿಸೆಂಬರ್ 19ರ ನಂತರದ ದಿನಗಳು ಸಿಎಂಗೆ ಮುಳ್ಳಿನ ಹಾದಿ ಆಗಲಿದೆಯಂತೆ. ಶನಿ ಕಂಟಕ ಹೆಚ್ಚಾಗುವುದರಿಂದ ಎಚ್ಚರ ತಪ್ಪಿದ್ರೆ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಹಾಗಾಗಿ ಸಿಎಂ ಪ್ರತಿಯೊಂದು ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು ಎಂದು ದ್ವಾರಕನಾಥ್ ಗುರೂಜಿ ಸಲಹೆ ನೀಡಿದ್ದಾರೆ.

    ಕುಮಾರಸ್ವಾಮಿ ಅವರು ದೊಡ್ಡ ನಾಯಕರಾಗಿದ್ದು, ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದನ್ನು ಬಿಡಬೇಕು. ಎಷ್ಟು ಶಾಂತ ಚಿತ್ತರಾಗಿ ಕೆಲಸ ಮಾಡುತ್ತಾರೋ ಅಷ್ಟೇ ಒಳ್ಳೆಯದಾಗುತ್ತದೆ. ದೊಡ್ಡ ನಾಯಕರು ಯಾರು ಹೆಚ್ಚಿನ ಮಾತನಾಡಿದವರಲ್ಲ. ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಪಕ್ಷದಿಂದ ಒಬ್ಬರೇ ಮಾತಾಡಬೇಕು. ಎಲ್ಲರು ತಮ್ಮ ಹೇಳಿಕೆಯನ್ನು ನೀಡುತ್ತಾ ಹೋದ್ರೆ ಗೊಂದಲ ಉಂಟಾಗುತ್ತದೆ. ಸಿಎಂ ಅವರ ಅಣ್ಣ, ತಮ್ಮ, ಮಕ್ಕಳು ಮಾತನಾಡೋದನ್ನು ನಿಲ್ಲಿಸಬೇಕು. ಇತ್ತ ಕಾಂಗ್ರೆಸ್ ನಿಂದಲೂ ಒಬ್ಬರೇ ಮಾತನಾಡಿದಾಗ ಮಾತ್ರ ಮೈತ್ರಿಯಲ್ಲಿ ಐಕ್ಯತೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಕಾಂಗ್ರೆಸ್ ನವರು ಬೆಂಬಲ ನೀಡಿದ ಮೇಲೆ ಕಿರುಕುಳ ಕೊಡಬಾರದು. ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಶಾಂತಿಯಿಂದ ಸರ್ಕಾರವನ್ನು ಮಾರ್ಚ್ 27ರವರೆಗೆ ತೆಗೆದುಕೊಂಡ ಹೋದ್ರೆ ಮಾತ್ರ ಮೈತ್ರಿಯ ಕಾರ್ಯಸಾಧನೆ ಆಗಲಿದೆ. ಕುಮಾರಸ್ವಾಮಿ ಅವರು ರಾಜ್ಯದ ನಾಯಕರಾಗಿದ್ದು, ಅತ್ಯಂತ ಶಾಂತಿಯಿಂದ ಕೆಲಸ ನಿರ್ವಹಿಸಬೇಕಿದೆ. ಆರೋಗ್ಯ ಸುಧಾರಣೆಗಾಗಿ ಸನ್ನತಿಯ ಚಂದ್ರಲಾಪುರ ದೇವಿಯ ದರ್ಶನ ಮಾಡಿಬರಬೇಕು. ಚಂದ್ರಲಾಪುರ ದೇವಿ ಮಾತ್ರ ಆರೋಗ್ಯ ಭಾಗ್ಯವನ್ನು ನೀಡಲಿದೆ ಎಂದ ಪಬ್ಲಿಕ್ ಟಿವಿ ಮೂಲಕ ಸಿಎಂ ಸಂದೇಶ ರವಾನಿಸಿದರು.

    ಇತ್ತ ಡಿಸೆಂಬರ್ 19ರ ನಂತರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಶನಿ ದೂರವಾಗಲಿದೆಯಂತೆ. ಡಿಸೆಂಬರ್ 19ರಿಂದ ಯಡಿಯೂರಪ್ಪರಿಗೆಗೆ ಕಷ್ಟ, ಚಿಂತೆ ಕಡಿಮೆಯಾಗಿ ಶಾಂತಿ ನೆಲೆಸುತ್ತೆ ಎಂದು ಗುರೂಜಿ ಭವಿಷ್ಯ ನುಡಿದಿದ್ದು, ಯಡಿಯೂರಪ್ಪನವರು ಮತ್ತೆ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಡಿಸೆಂಬರ್ 19ರ ಬಳಿಕ ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಬದಲಾವಣೆಯಾಗುತ್ತಂತೆ. ಡಿಸೆಂಬರ್ 19ರ ನಂತರ ಪ್ರಧಾನಿ ಮೋದಿ ಅವರು ಪ್ರತಿಯೊಂದು ನಿರ್ಣಯಗಳನ್ನು ಅತ್ಯಂತ ಯೋಚಿಸಿ ತೆಗೆದುಕೊಳ್ಳಬೇಕೆಂದು ಗುರೂಜಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಣಗಾಪುರಕ್ಕೆ ಸಿಎಂ ಎಚ್‍ಡಿಕೆ, ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು? – ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಗಾಣಗಾಪುರಕ್ಕೆ ಸಿಎಂ ಎಚ್‍ಡಿಕೆ, ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು? – ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಕಲಬುರಗಿ ಸಮೀಪ ಗಾಣಗಾಪುರ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಹೌದು, ಡಿಕೆಶಿ ಅವರ ಆಪ್ತ ಗುರೂಜಿ ಆಗಿರುವ ದ್ವಾರಕನಾಥ ಗುರೂಜಿ ಸಲಹೆಯ ಮೇರೆಗೆ ಕುಮಾರಸ್ವಾಮಿ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದ್ವಾರಕನಾಥ ಗುರೂಜಿ, ಇವತ್ತು ಕನ್ಯಾ ಸಂಕ್ರಮಣ. ಇದು ಅತ್ಯಂತ ಶೇಷ್ಠವಾದ ದಿವಸ. ಮುಂದಿನ 15 ದಿವಸ ದೇವರುಗಳಿಗೆ ಉಳಿದ 15 ದಿವಸ ಪಿತೃ ದೇವರುಗಳಿಗೆ ಇರುವುದು. ನಾನು ಯಾರ ಪರವಾಗಿಯೂ ಇಲ್ಲ. ನಾವು ಕೂಡ ಈ ರಾಷ್ಟ್ರದ ಪ್ರಜೆಗಳು. ನಮ್ಮದು ಒಂದು ಕೊಡುಗೆ ಇರಬೇಕು. ರಾಜ್ಯವನ್ನು ರಾಷ್ಟ್ರವನ್ನು ಆಳುವುದಕ್ಕಾಗಿ ಅವತ್ತಿನ ದಿನದಲ್ಲಿ ಶ್ರೀ ಪಾದ ಶ್ರೀ ದತ್ತಾತ್ರೇಯ ಕ್ಷೇತ್ರ ಗಾಣಗಾಪುರಕ್ಕೆ ಹೋಗಿ ದೇವರನ್ನು ಕೇಳಿಕೊಂಡು ಬರಲಿ ಎಂದು ಕುಮಾರಸ್ವಾಮಿ ಅವರಿಗೆ ಒಳ್ಳೆದು ಮಾಡುತ್ತಾರೆ ಅಂತ ಹೇಳಿದ್ದೆ. ಕಾಲಜ್ಞಾನದಲ್ಲಿ ಈ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದು ಅಸಂಭವನೀಯ ಎಂದರು. ಇದನ್ನು ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

    ಈಗಾಗಲೇ ಸದ್ಯಕ್ಕೆ ಸಿಎಂ ಕುಮಾರಸ್ವಾಮಿ ಬದಲಾವಣೆ ಸಾಧ್ಯವಿಲ್ಲ. ಅಕ್ಟೋಬರ್ 11 ರವರೆಗೆ ಕುಮಾರಸ್ವಾಮಿಗೆ ಗುರುಬಲ ಚೆನ್ನಾಗಿದೆ. ರವಿ ಬುಧ ಪ್ರವೇಶವಾಗಿದೆ. ರವಿ ಬುಧ ಒಂದೇ ಮನೆಯಲ್ಲಿದ್ದಾರೆ. ಈಗ ರವಿಯದ್ದು ಆದಿತ್ಯ ಬುಧಯೋಗ. ಈ ರೀತಿ ಇದ್ದಾಗ ರಾಜನನ್ನು ಕದಡಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.

    ಈ ಹಿಂದೆ ಧರ್ಮಸ್ಥಳ ದೇವಾಲಯಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅರ್ಧಗಂಟೆಯ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಆಗ ಕೂಡ ವಾತಾವರಣ ಚೆನ್ನಾಗಿರಲಿಲ್ಲ. ಆಗಲೇ ನಾನು ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ಆದರೆ ಮೋದಿ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಪಡೆದು ದೇವರ ಸ್ವರೂಪಿಯಾದ ವೀರೇಂದ್ರ ಹೆಗಡೆಯವರ ಆರ್ಶೀವಾದ ಪಡೆದರೋ ಎಲ್ಲಾ ಕಡೆ ಗೆಲ್ತಾರೆ ಎಂದು ಹೇಳಿದ್ದೆ. ಹಾಗೆಯೇ ಉತ್ತರ ಭಾರತದ ಎಲ್ಲ ಕಡೆ ಗೆದ್ದಿದ್ದಾರೆ. ಮಹಾ ಪುಣ್ಯಕಾಲ ಇಂತ ಯೋಗದಲ್ಲಿ ದೇವರ ದರ್ಶನ ಮಾಡಿದರೆ ಭಂಗವಂತ ಖಂಡಿತವಾಗಿಯೂ ಕಾಪಾಡುತ್ತಾನೆ ಎಂದರು. ಇದನ್ನು ಓದಿ: ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಡಿಯೂರಪ್ಪನವರು ಆತುರ ಮಾಡಬಾರದು. ಯಡಿಯೂರಪ್ಪ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಜಾಸ್ತಿ ಆತುರ ಇದೆ. ಡಿಕೆಶಿಗೆ ಎದುರಾಗಿರುವ ಸಂಕಷ್ಟ ಬಗೆಹರಿಯಲು ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಲು ಹೇಳಿದ್ದೆ. ಇದರಿಂದಾಗಿ ಡಿಕೆಶಿಗೆ ಒಂದೊಂದೆ ಸಮಸ್ಯೆ ಬಗೆಹರಿಯುತ್ತಾ ಇದೆ. ಡಿಕೆಶಿ ಮುಂದೊಂದು ದಿನ ಸಿಎಂ ಆಗ್ತಾರೆ ಎಂದು ಈ ವೇಳೆ ಭವಿಷ್ಯ ನುಡಿದರು.

    ಹೈದ್ರಾಬಾದ್ ಕರ್ನಾಟಕದಲ್ಲಿ ಈ ಗಾಣಗಪುರ ಕ್ಷೇತ್ರ ಕಲಬುರಗಿಯಲ್ಲಿ ತುಂಬ ಹಿಂದುಳಿದ ಪ್ರದೇಶದಲ್ಲಿದೆ. ತಿಂಗಳುಗಟ್ಟಲೆ ಇಲ್ಲಿರುವ ಅಷ್ಟ ತೀರ್ಥಗಳಲ್ಲಿ ಸ್ನಾನಮಾಡುತ್ತಾರೆ. ಕುಡಿಯುವುದಕ್ಕೂ ನೀರಿಲ್ಲದೇ ಸರಿಯಾದ ವ್ಯವಸ್ಥೆ ಇಲ್ಲ ಎಂದು ಈ ವೇಳೆ ದ್ವಾರಕನಾಥ ಗುರೂಜಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv