Tag: DVS

  • ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಬೆಂಗಳೂರು: ಕೊರೊನಾ ಸೊಂಕು ನಿಯಂತ್ರಣ ಸಾಧಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್‌.ಪುರ ವಿಧಾನ ಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ಶಾಸಕರು ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಿಸಿದರು.

    ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ವಿತರಿಸಿ ಮಾತನಾಡಿದ ಬಸವರಾಜ ಅವರು ಇನ್ನೂ ಅಗತ್ಯ ಬಿದ್ದಲ್ಲಿ ಮತ್ತೆ ಬಡಜನರಿಗೆ ಕಿಟ್‌ ನೀಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ನಿಯಂತ್ರಣ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದರು.

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದೆ. 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತೀಕರಿಸಲು 13 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಡಿವಿಎಸ್‌ ಭಾಗಿ: ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ‌ ರಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ ಸದಾನಂದ ಗೌಡರು ಹೇಳಿದರು. ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ, ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ಆಹಾರ ಪದಾರ್ಥಗಳನ್ನು ಬೈರತಿ ಬಸವರಾಜ ಅವರು ವಿತರಣೆ ಮಾಡುತ್ತಿರುವುದು ನಿಜವಾಗಿಯೂ ಒಂದು ಪುಣ್ಯದ ಕೆಲಸ ಎಂದರು.

    ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದು ಅಶಿಸುತ್ತೇನೆ ಎಂದರು.

    ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದನ್ನು ಸಚಿವರಾದ ಬಸವರಾಜ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲೆಲ್ಲ ‌ನಾನು ಕೆ.ಆರ್.ಪುರ ‌ಕ್ಷೇತ್ರದ ಬಗ್ಗೆ ಮತ್ತು ಬೈರತಿ ಬಸವರಾಜ ಅವರು ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

  • #MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡ!

    #MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡ!

    ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದೆ. ಬಿಜೆಪಿಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಮಾಧುರಿ ಎಂಬವರು ಈ ಆರೋಪ ಮಾಡಿದ್ದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

    ಸದಾನಂದಗೌಡರು ಸಿಎಂ ಆಗಿದ್ದಾಗ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು. ಕಚೇರಿಗೆ ಬನ್ನಿ, ಊಟಕ್ಕೆ ಬನ್ನಿ, ನಿಮ್ಮ ರೆಸ್ಯೂಮ್ ಕೊಡಿ, ಫೋಟೋ ಕೊಡಿ ಅಂತ ಕೋಡ್ ವರ್ಡ್‍ನಲ್ಲಿ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ.

    ಒಬ್ಬ ಸಿಎಂ ಆಗಿದ್ದವರು ಯಾವ ರೀತಿ ವರ್ತನೆ ಮಾಡಬೇಕು ಎನ್ನುವುದು ಗೊತ್ತಿರುತ್ತದೆ. ಬಿಜೆಪಿಯಲ್ಲಿ ಹಲವು ಮಂದಿ ಅವರವರ ಸ್ಟೇಟಸ್‍ನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಷ್ಟೋ ಕೆಲಸ ಇರುತ್ತದೆ. ಆದರೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಅಂತಾ ಹೇಳೋದು, ನಿಮ್ಮನ್ನು ಅಲ್ಲಿ ನೋಡಿದ್ದೀನಿ ಅಂತಾ ಹೇಳೋದು ಎಷ್ಟು ಸರಿ ಅಲ್ಲವೇ? ಕಾಲ್ ಮಾಡೋದು, ನನ್ನ ಮೈ ಮೇಲೆ ಬರೋದು, ಮೈ ಟಚ್ ಮಾಡಿ ಕೂರೋದು, ಇದೆಲ್ಲ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

    ಮಾಧುರಿ ಅವರ ಆರೋಪದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸದಾನಂದಗೌಡರು, ಆಕೆ ಯಾರು ಅಂತ ಗೊತ್ತಿಲ್ಲ. ಆಕೆಗೆ ನಮ್ಮ ಪಕ್ಷದಲ್ಲಿ ಜವಾಬ್ದಾರಿ ನೀಡಿರಬಹುದು. ಆ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದೆಲ್ಲ ಏನು ಇಲ್ಲ ಅಂತ ಪಬ್ಲಿಕ್‍ ಟಿವಿಗೆ ಫೋನ್ ಮೂಲಕ ತಿಳಿಸಿದರು.

    ಫೇಸ್‍ಬುಕ್ ನಲ್ಲಿ ಬಿಜೆಪಿ ನಾಯಕರ ಬಗ್ಗೆ ಹೇಳಿಕೊಂಡಿದ್ದ ಮಹಿಳೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಹಿಂದೆ ಪ್ರಕಟಿಸಿದ್ದ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಸ್ವಾಮಿಯವರೇ ಕೊಡಗಿಗೆ ಭೇಟಿ ನೀಡೋವಾಗ ಮಾಧ್ಯಮದವರನ್ನೂ ಕರೆದುಕೊಂಡು ಹೋಗಿ- ಡಿವಿಎಸ್

    ಕುಮಾರಸ್ವಾಮಿಯವರೇ ಕೊಡಗಿಗೆ ಭೇಟಿ ನೀಡೋವಾಗ ಮಾಧ್ಯಮದವರನ್ನೂ ಕರೆದುಕೊಂಡು ಹೋಗಿ- ಡಿವಿಎಸ್

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನೀವು ಕೊಡಗಿಗೆ ಭೇಟಿ ನೀಡುವಾಗ ಎಲ್ಲಾ ಮಾಧ್ಯಮದವರನ್ನು ಕರೆದುಕೊಂಡು ಹೋಗಿ. ಆ ಎರಡು ದಿನ ನೀವು ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಅದನ್ನು ಇಡೀ ರಾಜ್ಯದ ಜನರಿಗೆ ತಿಳಿಸುವಂತಹ ಕೆಲಸ ಮಾಡಿದ್ರೆ ಮಾತ್ರ ನೀವು ಹೇಳಿದಂತಹ ಮಾತಿಗೆ ಗೌರವ ಬರುತ್ತದೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿಗೇ ಗೊತ್ತಿರುವಂತಹ ಸತ್ಯ ಸಣ್ಣ ಮಗುವಿಗೂ ಗೊತ್ತಾಗಿದೆ. ಎರಡು ದಿನ ಕೊಡಗಿಗೆ ಹೋಗಿ ಇರುತ್ತೇನೆ ಅಂತ ಸಿಎಂ ಅವರು ಹೇಳಿದ್ದಾರಂತೆ. ಅಲ್ಲಿ ಬೇಕಾದಷ್ಟು ರೆಸಾರ್ಟ್ ಗಳಿವೆ. ಹೀಗಾಗಿ ಬಹುಶಃ ಅವರು ಎರಡು ದಿನ ಹೋಗುವುದು ಕೊಡಗಿನ ಅಧ್ಯಯನ ಮಾಡಲು ಅಲ್ಲ. ಬದಲಾಗಿ ಅಲ್ಲಿ ಹೋಗಿ ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳಲು ಹೋಗುತ್ತಿದ್ದಾರೆ ಅಂತ ಡಿವಿಎಸ್ ಟೀಕೆ ಮಾಡಿದ್ದಾರೆ.

    ಯಾರೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರಲಿ. ಅವನು ಕೊಡಗಿನಿಂದ ಬರುವಂತಹ ನೀರನ್ನೇ ಅವನು ಕುಡಿಯುತ್ತಾನೆ. ಹೀಗಾಗಿ ಕುಡಿಯುವ ನೀರಿಗೆ ಅಗೌರವ ತೋರುವ ಒಬ್ಬ ಯಾರಾದ್ರೂ ಮುಖ್ಯಮಂತ್ರಿ ಮಾಡಿದ್ರೆ, ನಾವು ಬಿಡಿ ಆ ದೇವರು ಕೂಡ ಮೆಚ್ಚಲ್ಲ ಅಂದ್ರು.  ಇದನ್ನೂ ಓದಿ: ಎಚ್‍ಡಿಕೆಯ ವಿಷಕಂಠ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

    ಕೊಡಗು ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುವ ಪ್ರವಾಸಿ ಕೇಂದ್ರವೂ ಹೌದು. ಇಷ್ಟು ಮಾತ್ರವಲ್ಲದೇ ಅತೀ ಹೆಚ್ಚು ಆದಾಯ ತರುವಂತಹ ಕಾಫಿ ಬೆಳೆಯುವ ನಾಡು ಇದಾಗಿದೆ. ವೀರಯೋಧರನ್ನೂ, ಹಾಕಿ ಆಟಗಾರರನ್ನು ದೇಶಕ್ಕೆ ಕೊಟ್ಟ ಜಿಲ್ಲೆಯಾಗಿದೆ. ಇಂತಹ ಪುಣ್ಯದ ನಾಡು ಕೊಡಗನ್ನೇ ಇಂದು ನಿರ್ಲಕ್ಷ್ಯಿಸಲಾಗಿದೆ ಅಂತ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

    ಗಟ್ಸ್  ಪ್ರದರ್ಶಿಸಲಿ:
    ಕೊಡಗಿನ ಬಾಲಕ ವಿಡಿಯೋದಲ್ಲಿ ಬಿಜೆಪಿಯ ಕೈವಾಡ ಇದೆ ಅನ್ನೋ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರಲ್ಲೇ ಗುಪ್ತಚರ ಇಲಾಖೆ ಇದೆ. ಒಬ್ಬ ಮುಖ್ಯಮಂತ್ರಿಯಾಗಿದ್ದವ ಯಾರ್ಯಾರೋ ಏನೇನೋ ಮಾಡಿದ್ದಾರೆ ಅಂತ ಹೇಳೋ ಬದಲು, ಈ ಬಗ್ಗೆ ನಾನು ತನಿಖೆ ಮಾಡಿಸುತ್ತೇನೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ನಾನು ತೋರಿಸಿಕೊಡುತ್ತೇನೆ ಅಂತ ಗಟ್ಸ್ ಪ್ರದರ್ಶನ ಮಾಡಬೇಕು. ಅದು ಬಿಟ್ಟು ಒಂದು ಗಂಟೆ ಅಳೋದಲ್ಲ. ಮುಖ್ಯಮಂತ್ರಿಯಾಗಿದ್ದವ ಉದ್ವೇಗದಲ್ಲಿ ಒಂದು ನಿಮಿಷ ಕಣ್ಣೀರು ಹಾಕುವುದು ಸರಿ. ಅದು ಬಿಟ್ಟು ಎರಡೆರಡು ಕರ್ಚಿಫ್ ಒದ್ದೆ ಮಾಡಿಕೊಂಡು ಜನರನ್ನು ಮರುಳು ಮಾಡುವಂತವ್ರಿಗೆ ತನಿಖೆ ಮಾಡಲು ನನಗೆ ಹಕ್ಕಿದೆ ಎಂಬುದು ಗೊತ್ತಾಗಲ್ವ ಅಂತ ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಸಿಎಂ ಎಚ್‍ಡಿಕೆ ಖುಷಿಯಾಗಿಯೇ ಇದ್ದಾರೆ- ಡಿಸಿಎಂ ಪರಮೇಶ್ವರ್

  • ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗ್ಬೇಕು: ಡಿವಿಎಸ್ ಎಡವಟ್ಟು

    ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗ್ಬೇಕು: ಡಿವಿಎಸ್ ಎಡವಟ್ಟು

    ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಶುಕ್ರವಾರ ಬಳ್ಳಾರಿ ಸಂಸದ ಶ್ರೀರಾಮುಲು ಎಡವಟ್ಟು ಮಾಡಿದ್ದು, ಇದೀಗ ಇಂದು ಮತ್ತೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿವಿ ಸದಾನಂದ ಗೌಡ ಅವರು ಎಡವಟ್ಟು ಮಾಡುವ ಮೂಲಕ ವಿರೋಧ ಪಕ್ಷದವರ ನಗೆಪಾಟಲಿಗೀಡಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿನ್ನೆ ನಡೆದಿದ್ದು, ಇಂದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಸಮಾವೇಶ ನಡೆಯಿತು. ತಮ್ಮ ಭಾಷಣದ ವೇಳೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ನರೇಂದ್ರ ಮೋದಿಯವರಿಗೆ ನಾಚಿಗೆಯಾಗಬೇಕು ಎಂದು ಹೇಳಿದರು.

    ಇದನ್ನೂ ಓದಿ: ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ:ಶ್ರೀರಾಮುಲು ಎಡವಟ್ಟು


    ಬಳಿಕ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯ ಮೈಯಲ್ಲಿ ಕನಕದಾಸರ ರಕ್ತ ಹರೀತಿಲ್ಲ. ಅವರ ಮೈಯಲ್ಲಿ ಟಿಪ್ಪುವಿನ ರಕ್ತ ಹರೀತಿದೆ. ಹಾಗಾಗಿ ಮೈಯನ್ನು ಕುಲುಕಿಸಿ ಟಿಪ್ಪು ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಸಿದ್ರಾಮಯ್ಯ ತಮಗೆ ಟಿಪ್ಪು ಹೆಸರನ್ನೇ ಇಟ್ಟುಕೊಳ್ಳಲಿ. ಹಿಂದುಗಳ ಮುದ್ರಾಧಾರಣೆ, ತ್ರಿಶೂಲಧಾರಣೆಯನ್ನು ಹಿಂಸೆ ಎನ್ನುತ್ತಾರೆ. ತಾಕತ್ತಿದ್ದರೆ ಮುಸ್ಲಿಮರು ಮಾಡುವ ಸುನ್ನತ್ ನಿಲ್ಲಿಸಿ, ಅದು ಕೂಡ ಹಿಂಸೆಯೇ. ಸುನ್ನತ್ ನಿಷೇಧಿಸುತ್ತೀರಾ ಅಂತ ಸಿಎಂಗೆ ಈಶ್ವರಪ್ಪ ಪ್ರಶ್ನೆ ಹಾಕಿದ್ರು.

    ಡಿಕೆಶಿ ಬಿಜೆಪಿಗೆ ಆಹ್ವಾನ ವದಂತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ಸೇರಿಸಲು ಸಾಧ್ಯವೇ ಇಲ್ಲ. ಸಿದ್ಧರಾಮಯ್ಯ, ಡಿಕೆಶಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ತಗೊಳಲ್ಲ. ಇವರು ಪ್ರಭಾಕರ್ ಭಟ್ಟರನ್ನು ಬಂಧಿಸುವ ಉದ್ದೇಶ ಹೊಂದಿದ್ದರು. ಪ್ರಭಾಕರ್ ಭಟ್ ರೋಮ ಮುಟ್ಟಿದರೆ ರಾಜ್ಯದಲ್ಲಿ ಜನ ಸುಮ್ಮನಿರಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯಾ ನಿಷೇಧ ಕಾನೂನು ತರುತ್ತೇವೆ ಅಂತ ಹೇಳಿದ್ರು.

    https://www.youtube.com/watch?v=paACKy7LMQs

  • ನಮ್ಮ ಮೆಟ್ರೋದಲ್ಲಿ ಹಿಂದಿ ಬೇಕು: ಡಿವಿಎಸ್ ಬ್ಯಾಟಿಂಗ್

    ನಮ್ಮ ಮೆಟ್ರೋದಲ್ಲಿ ಹಿಂದಿ ಬೇಕು: ಡಿವಿಎಸ್ ಬ್ಯಾಟಿಂಗ್

    ಬೆಂಗಳೂರು: ಮಾತೃ ಭಾಷೆ ಕನ್ನಡ ಮೊದಲು ಇರಬೇಕು, ಆ ಬಳಿಕ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆ ಹಿಂದಿ ಇರಬೇಕು ನಂತ್ರ ವಿಶ್ವದಲ್ಲಿ ಹೆಚ್ಚು ಮಾತನಾಡುವ ಭಾಷೆ ಇಂಗ್ಲೀಷ್ ಇರಬೇಕು ಎಂದು ಹೇಳುವ ಮೂಲಕ ಮೆಟ್ರೋನಲ್ಲಿ ಹಿಂದಿ ಭಾಷೆ ಹೇರಿಕೆಯನ್ನ ಕೇಂದ್ರ ಸಚಿವ ಸದಾನಂದ ಗೌಡ ಸಮರ್ಥಿಸಿಕೊಂಡಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕರ್ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ವಿಶ್ವದಲ್ಲಿಯೇ ಬೆಂಗಳೂರು ಪ್ರಸಿದ್ಧಿ ಹಾಗಾಗಿ ತ್ರಿಭಾಷಾ ಸೂತ್ರ ಇರಲೇಬೇಕು ಎಂದು ಡಿವಿಎಸ್ ಹೇಳಿದ್ದಾರೆ.

    ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಮೆಟ್ರೋದಲ್ಲಿ ತ್ರಿಭಾಷ ಸೂತ್ರ ಅಳವಡಿಕೆ ಸಾಧ್ಯವಿಲ್ಲ ಎಂಬುವುದರ ಬಗ್ಗೆ 2016ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ರು. ಈ ವಿಚಾರವಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವಂತೆ ಆಗ್ರಹಿಸಿದ್ರು.

    ಆದೇ 2017ರಲ್ಲಿ ಕರೋಲಾ ಊಲ್ಟಾ ಹೊಡೆದಿದ್ದಾರೆ. ಈಗ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಅನುದಾನವಿರೋದ್ರಿಂದ ನಾವು ಹಿಂದೆ ಹಾಕಬೇಕು ಅಂತಾ ತಿಳಿಸಿದ್ದಾರೆ. ಈ ವಿಚಾರ ಕನ್ನಡ ಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದ್ದು, ಕರವೇ ಅಧ್ಯಕ್ಷ ನಾರಾಯಣ ಗೌಡ ಇದಕ್ಕೆ ಕರೋಲಾ ಅವರ ಹಿಂದಿ ಪ್ರೇಮವೇ ಕಾರಣ ಹಾಗಾಗಿ ಕರೋಲ ಅವರನ್ನು ರಾಜ್ಯದಿಂದ ಹೊರ ಹಾಕುವಂತೆ ಕಿಡಿಕಾರಿದ್ದಾರೆ.

    ಒಟ್ಟಾರೆ, ಮೆಟ್ರೋನಲ್ಲಿ ಹಿಂದಿ ಸದ್ಯ ಭಾಷಾ ವಿವಾದಕ್ಕೆ ಕಾರಣವಾಗಿದೆ. ಹಿಂದಿ ಪ್ರಿಯರ ಓಲೈಕೆಗಾಗಿ ಕನ್ನಡಕ್ಕೆ ಅವಮಾನ ಮಾಡ್ಬೇಡಿ ಅನ್ನೋದು ಕನ್ನಡ ಸಂಘಟನೆಗಳ ಆಗ್ರಹವಾಗಿದೆ.