Tag: Dvitva

  • ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್

    ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್

    ನಿರ್ದೇಶಕ ಹಾಗೂ ನಟ ಪವನ್‌ಕುಮಾರ್, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗಾಗಿ ಕಥೆಯೊಂದನ್ನ ಮಾಡಿ ಸಿನಿಮಾ ಮಾಡಲು ತಯಾರಿಯನ್ನ ಮಾಡಿಕೊಂಡಿದ್ದರು. ಆದ್ರೆ ವಿಧಿಯಾಟ ಆ ಸಿನಿಮಾ ಸೆಟ್ಟೇರಲಿಲ್ಲ. ಪುನೀತ್ ರಾಜ್‌ಕುಮಾರ್ ತುಂಬಾ ಇಷ್ಟಪಟ್ಟ ಕಥೆ ದ್ವಿತ್ವ (Dvitva) ಆಗಿತ್ತು. ಇದೀಗ ಈ ಕಥೆ ಬಗ್ಗೆ ನಿರ್ದೇಶಕ ಪವನ್‌ಕುಮಾರ್ (Pawan Kumar) ಹೊಸ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಈ ಕಥೆ ವೆಬ್ ಸಿರೀಸ್ (Web Series) ಆಗಲಿದೆ ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಪವನ್‌ಕುಮಾರ್.

    ದ್ವಿತ್ವ ಸಿನಿಮಾವನ್ನ ಪುನೀತ್‌ರಾಜ್ ಕುಮಾರ್ ಅವರಿಗಾಗಿ ಮಾಡುವುದಕ್ಕೆ ಅದ್ಧೂರಿಯಾಗಿ ಪ್ಲ್ಯಾನ್ ಮಾಡಿದ್ದ ನಿರ್ದೇಶಕ ಪವನ್‌ಕುಮಾರ್ ಆ ಕಥೆಯನ್ನ ಹಾಗೆ ಉಳಿಸಿಕೊಂಡಿದ್ದಾರೆ. ಮತ್ಯಾರಿಗೂ ಸಿನಿಮಾ ಮಾಡೋಕೆ ಮುಂದಾಗಿಲ್ಲ. ಈಗ ಆ ಕಥೆಯನ್ನ ವೆಬ್ ಸಿರೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಶೋಧ ಸಿನಿಮಾದ ಸುದ್ದಿಗೋಷ್ಠಿ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ದ್ವಿತ್ವ ಸಿನಿಮಾ ಅಂದುಕೊಂಡತಾಗಿದ್ರೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಬೇಕಿತ್ತು. ಅಪ್ಪು ಅಭಿಮಾನಿಗಳಿಗೆ ಇದೊಂದು ವಿಭಿನ್ನ ರೀತಿಯ ಸಿನಿಮಾ ಕೊಡುವ ನಿಟ್ಟಿನಲ್ಲಿ ಪವನ್‌ಕುಮಾರ್ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದರು.

    ನಿರ್ದೇಶಕ ಪವನ್‌ಕುಮಾರ್ ನಿರ್ದೇಶನದಿಂದ ಈಗ ನಟನೆಯ ಕಡೆ ವಾಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದಲ್ಲಿ ನಟಿಸಿದ್ದ ಪವನ್‌ಕುಮಾರ್, ಇದೀಗ ಶೋಧ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವೇಳೆ ದ್ವಿತ್ವ ಕಥೆ ಬಗ್ಗೆ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇರುವ ಈ ದ್ವಿತ್ವ ಕಥೆ ಸದ್ಯದಲ್ಲೇ ವೆಬ್ ಸಿರೀಸ್ ಆಗುವ ಸುಳಿವು ನೀಡಿದ್ದಾರೆ ನಿರ್ದೇಶಕ ಪವನ್‌ಕುಮಾರ್. ಸಿನಿಮಾವಾಗುತ್ತೋ…? ಅಥವಾ ವೆಬ್ ಸಿರೀಸ್ ಆಗುತ್ತೋ ಕಾದು ನೋಡಬೇಕು.

  • ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

    ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

    ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಪುನೀತ್ ರಾಜ್ ಕುಮಾರ್ ‘ದ್ವಿತ್ವ’ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಬೇಕಿತ್ತು. ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು, ಫಸ್ಟ್ ಲುಕ್ ಬಿಡುಗಡೆ ಕೂಡ ಆಗಿತ್ತು. ಸ್ಕ್ರಿಪ್ಟ್ ವರ್ಕ್ ಬಹುತೇಕ ಮುಗಿದಿತ್ತು. ಪುನೀತ್ ನಿಧನಕ್ಕೂ ಎರಡು ದಿನ ಮುಂಚೆ ಕಾಸ್ಟ್ಯೂಮ್ ಬಗ್ಗೆ ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಜತೆ ಮಾತೂ ಕೂಡ ಆಡಿದ್ದರು. ವಿಧಿಯಾಟಕ್ಕೆ ಪುನೀತ್ ಬಲಿಯಾದರು. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

    ಪುನೀತ್ ರಾಜ್ ಕುಮಾರ್ ನಿಧನಕ್ಕೂ ಮುನ್ನ ಐದು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಮೊದಲು ದ್ವಿತ್ವ ಆಗಬೇಕಿತ್ತು. ನಂತರ ತಮ್ಮದೇ ಬ್ಯಾನರ್ ನ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಈ ಚಿತ್ರಕ್ಕೆ ಜೇಕಬ್ ವರ್ಗಿಸ್ ನಿರ್ದೇಶಕರು. ಸ್ವತಃ ಪುನೀತ್ ಅವರೇ ಈ ಚಿತ್ರದ ಕಥೆಯಲ್ಲಿ ಭಾಗಿಯಾಗಿದ್ದರು. ನಂತರ ಮಾಡಬೇಕಾಗಿದ್ದ ಚಿತ್ರ ಸಿನಿಮಾಟೋಗ್ರಾಫರ್ ಕಂ ನಿರ್ದೇಶಕ ಕೃಷ್ಣ ಅವರ ಜತೆಗಿನ ಸಿನಿಮಾ. ಇವುಗಳ ಹೊರತಾಗಿಯೂ ದಿನಕರ್ ತೂಗುದೀಪ್, ಸಂತೋಷ್ ಆನಂದ್ ರಾಮ್ ಜತೆಯೂ ಅವರು ಒಂದೊಂದು ಸಿನಿಮಾ ಮಾಡಬೇಕಿತ್ತು. ಇವೆಲ್ಲವನ್ನೂ ಬದಿಗೆ ಸರಿಸಿ ಅಪ್ಪು ಹೊರಟೇ ಬಿಟ್ಟರು. ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

    ಪುನೀತ್ ರಾಜ್ ಕುಮಾರ್ ಇಲ್ಲದೇ ನನ್ನ ಕಥೆಯನ್ನು ಸಿನಿಮಾ ಮಾಡಲಾರೆ ಎಂದು ನಿರ್ದೇಶಕ ಜೇಕಬ್ ಘೋಷಿಸಿಯಾಗಿದೆ. ಉಳಿದವರು ಇನ್ನೂ ಕಥೆ ಹೆಣೆಯುವುದರಲ್ಲಿ ಇದ್ದರು. ಆದರೆ, ಇನ್ನೇನು ಶುರುವಾಗಬೇಕಿದ್ದ ‘ದ್ವಿತ್ವ’ ಸಿನಿಮಾ ಏನಾಗುತ್ತದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಬೇಕಿತ್ತು. ಅದಕ್ಕೀಗ ಉತ್ತರ ಸಿಗುವ ಕಾಲ ಬಂದಿದೆ. ಇದೇ ಸಿನಿಮಾವನ್ನು ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಜತೆಗೆ ಸ್ಟಾರ್ ನಟರಿಗೂ ಈ ಕಥೆಯ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಬಡ್ಡೀಸ್ ಚಿತ್ರಕ್ಕೆ ಯುಎಸ್ಎ ಕ್ಯಾಮೆರಾವುಮೆನ್ : ಇವರು ಎಮ್ಮಿ ಅವಾರ್ಡ್ ನಾಮಿನೇಟರ್

    ಯಾವುದೇ ಕಾರಣಕ್ಕೂ ಈ ಸಿನಿಮಾ ನಿಲ್ಲುವುದಿಲ್ಲ. ಸಮರ್ಥ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಚಿತ್ರವನ್ನು ಮುಂದುವರೆಸುತ್ತೇವೆ. ಪುನೀತ್ ಅವರ ನೆನಪಿನಲ್ಲಿಯೇ ಈ ಸಿನಿಮಾ ಮಾಡುತ್ತೇವೆ ಎನ್ನುವ ಮೂಲಕ ಚಿತ್ರ ಆಗುವ ಕುರಿತು ಮುನ್ಸೂಚನೆ ನೀಡಿದೆ ಚಿತ್ರತಂಡ.

  • ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

    ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರದ ಟೈಟಲ್ ಘೋಷಣೆಯಾಗಿದೆ. ಟೈಟಲ್ ಜೊತೆ ಚಿತ್ರತಂಡ ಫಸ್ಟ್ ಲುಕ್ ಅನಾವರಣಗೊಳಿಸಿದೆ. ವಿಶೇಷ ಶೀರ್ಷಿಕೆಯಿಂದಲೇ ಗಾಂಧಿನಗರದಲ್ಲಿ ದ್ವಿತ್ವ ಹೆಚ್ಚು ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಲುಕ್ ಹೊರ ಬೀಳುತ್ತಿದ್ದಂತೆ ಟೈಟಲ್ ಬಗೆಗಿನ ಕುತೂಹಲ ಹೆಚ್ಚಾಗಿದೆ.

    ದ್ವಿತ್ವ ಅಂದ್ರೆ ಎರಡು ಎಂದರ್ಥ. ದ್ವಿ ಪಾತ್ರದಲ್ಲಿ ಅಂದ್ರೆ ಲೂಸಿಯಾ ರೀತಿಯ ಕಥೆಯನ್ನ ಹೆಣೆಯಲಾಗಿದೆ ಎಂಬ ಚರ್ಚೆಗಳು ಚಂದನವನದಲ್ಲಿ ಆರಂಭಗೊಂಡಿವೆ. ಚಿತ್ರದ ಡ್ಯೂಯಲ್ ಪರ್ಸನಾಲಿಟಿಯ ಸುಳಿವು ನೀಡುತ್ತಿರುವ ಫಸ್ಟ್ ಲುಕ್ ಈ ಚರ್ಚೆಗಳಿಗೆ ಕಾರಣ. ಸೈಕಲಾಜಿಕಲ್ ಥ್ರಿಲ್ ಕಥೆಯನ್ನು ದ್ವಿತ್ವ ಹೊಂದಿದೆ. ಈ ಹಿಂದೆ ಲೂಸಿಯಾ ಮತ್ತು ಯೂಟರ್ನ್ ಎಂಬ ಅದ್ಭುತ್ ಚಿತ್ರಗಳನ್ನ ನೀಡಿದ ಪವನ್ ಕುಮಾರ್ ನಿರ್ದೇಶನದಲ್ಲಿಯೇ ದ್ವಿತ್ವ ಮೂಡಿ ಬರಲಿದೆ.

    ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಚಿತ್ರಕ್ಕಿರಲಿದೆ. ಇದೇ ಸೆಪ್ಟೆಂಬರ್ ನಲ್ಲಿ ದ್ವಿತ್ವ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.