Tag: DV Sadananda Gowda

  • ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ಮಂಗಳೂರು: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು. ಈಗ ಅವರು ಭೂಮಿ ಮೇಲೆ ಇದ್ದಾರಾ ಯಾರಿಗಾದ್ರು ಗೊತ್ತಾ? ಯಾಕಂದ್ರೆ ಅವರ ಊರಿನಲ್ಲೇ ಒಂದು ಕೊಲೆಯಾಗಿದೆ. ಈ ಬಗ್ಗೆ ತಿಳಿಸಬೇಕಿತ್ತು ಅವರ ಫೋನ್ ನಂಬರ್ ಯಾರಲ್ಲಾದರೂ ಇದ್ರೆ ಕೊಡಿ, ನಾನಾದರು ಫೋನ್ ಮಾಡಿ ಹೇಳುತ್ತೇನೆ ಎನ್ನುವ ಆಕ್ರೋಶದ ಪೋಸ್ಟರ್‌ಗಳು ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮಾಜಿ ಸಿಎಂ ಸದಾನಂದ ಗೌಡರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪೋಸ್ಟರ್‌ನಲ್ಲಿ ಏನಿದೆ?:
    ಅವರ ಬಗ್ಗೆ ನಿಮಗೆ ಈಗ ಮರೆತಿರಬಹುದು. ಅವರು ಒಂದು ಕಾಲದ ಮಹಾನ್ ಹೋರಾಟಗಾರ, ಪುತ್ತೂರಿನಲ್ಲಿ ತನ್ನ ಜಾಥಾದ ಮೂಲಕವೇ ಬಿಜೆಪಿ ಪಕ್ಷದಲ್ಲಿ ಮುಂಚೂಣಿಯಾಗಿ ಕಾಣಿಸಿಕೊಂಡ ವ್ಯಕ್ತಿ. ಹುಟ್ಟೂರು ಸುಳ್ಯದ ಮಂಡೆಕೋಲು ಗ್ರಾಮಸ್ಥ, ಮಡಿಕೇರಿಯ ಕಡೆಯಿಂದ ಮದುವೆಯಾದ ಗೃಹಸ್ಥ. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು

    ಗೊತ್ತಾಗಿಲ್ಲಾ, ಪರ್ವಾಗಿಲ್ಲ. ಇನ್ನೊಂದು ಸುಳಿವು ನಿಮಗೆ ಕೊಡುತ್ತೇವೆ. ಈ ಸುಳಿವು ಮಾತ್ರ ಖಂಡಿತಾ ಆತ ಯಾರೆಂದು ನಿಮಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ, ಜೊತೆಗೇ ದೇಶಕ್ಕೆ ಅವರ ವ್ಯಕ್ತಿತ್ವವನ್ನು ಜನರ ಮುಂದು ಇಟ್ಟು, ಬಿಡಿಸಿ, ಅವರ ವ್ಯಕ್ತಿತ್ವದ ಘನತೆಯನ್ನು ತೆರೆದುಬಿಡುತ್ತದೆ ಎಂದು ಬರೆದಿರುವ ಪೋಸ್ಟರ್‌ಗಳು ಕರಾವಳಿಯಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಚುನಾವಣೆ ವರ್ಷ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: ಎಚ್‍ಡಿಕೆ

    ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪರಿಹಾರವನ್ನೂ ನೀಡಿದ್ದಾರೆ. ಆದರೆ ಬೆಳ್ಳಾರೆಯಿಂದ ಕೆಲವೇ ಕಿಲೋ ಮೀಟರ್‌ಗಳ ಅಂತರದ ಊರಿನವರಾದ ಸುಳ್ಯ ತಾಲೂಕಿನ, ಮಂಡೆಕೋಲು ಗ್ರಾಮದ ದೇವರಗುಂಡದ ಸದಾನಂದ ಗೌಡರು ಬಾರದೇ ಇರುವುದು ಮತ ನೀಡಿ ಗೆಲ್ಲಿಸಿದ್ದ ಸ್ಥಳೀಯ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಈಗಾಗಲೇ ಕರಾವಳಿಯಲ್ಲಿ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಮತ್ತು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ಆಕ್ರೋಶದ ಮಾತುಗಳು ಕೇಳಿಬರುತ್ತಿದೆ. ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ಬೆಳ್ಳಾರೆಗೆ ಅಂತಿಮ ದರ್ಶನಕ್ಕೆ ತೆರಳಿದ ನಳಿನ್ ಕುಮಾರ್ ಕಟೀಲ್ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ ಸೇರಿದಂತೆ ಇತರ ಸಚಿವರಿಗೆ ಘೇರಾವ್, ಕಾರನ್ನೇ ಪಲ್ಟಿ ಹಾಕುವಷ್ಟರ ಮಟ್ಟಿಗೆ ಕಾರ್ಯಕರ್ತರು ಕುಪಿತಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಮಾರ್ಚ್ 3 ರಿಂದ ಏಳು ದಿನಗಳ ಕಾಲ ನಡೆದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಏಳು ದಿನಗಳ ಕಾಲ ಬೆಂಗಳೂರಿನ ಒರಾಯನ್ ಮಾಲ್, ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಚಿತ್ರ ಪ್ರದರ್ಶನಗಳು ನಡೆದವು. ಸಿನಿಮಾ ಸಂವಾದ, ಕಲಾವಿದರು ಮತ್ತು ತಂತ್ರಜ್ಞರ ಜತೆಗಿನ ಮಾತು, ಸಿನಿಮಾ ಸಂಬಂಧ ಮಾಸ್ಟರ್ ಕ್ಲಾಸ್ ಸೇರಿದಂತೆ ಹತ್ತು ಹಲವು ಚಟುವಟಿಕೆಗಳನ್ನು ಚಿತ್ರೋತ್ಸವದ ಅಡಿಯಲ್ಲಿ ಸಂಯೋಜಿಸಲಾಗಿತ್ತು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

    ಇಂದು ಸಂಜೆ 5.45ಕ್ಕೆ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸುವ ಮೂಲಕ ಅಂತಿಮ ತೆರೆ ಬೀಳಲಿದೆ. ಈ ಕಾರ್ಯಕ್ರಮವು ಬೆಂಗಳೂರಿನ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ನಡೆಯಲಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅಥಿಗಳಾ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್, ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದ ಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜೈರಾಜ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ಈ ಸಂದರ್ಭದಲ್ಲಿ ಚಿತ್ರೋತ್ಸವದಲ್ಲಿ ಭಾಗಿಯಾಗಿ, ನಾನಾ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಸಮಾರಂಭಕ್ಕೂ ಮುನ್ನ ಸುಮ ಸುಧೀಂದ್ರ ಮತ್ತು ತಂಡದವರಿಂದ ವೀಣಾ ಫ್ಯೂಜನ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದೆ ಕರ್ನಾಟಕ ಚಲನಚಿತ್ರ ಅಕಾಡಮಿ.

  • ರಾಜಕೀಯ ನಾಯಕರ ಹೆಸರು ಬಳಸಿ ಸೈಟ್ ಖರೀದಿ – ಲಕ್ಷ ಲಕ್ಷ ಹಣ ವಂಚನೆ ಆರೋಪ

    ರಾಜಕೀಯ ನಾಯಕರ ಹೆಸರು ಬಳಸಿ ಸೈಟ್ ಖರೀದಿ – ಲಕ್ಷ ಲಕ್ಷ ಹಣ ವಂಚನೆ ಆರೋಪ

    ನೆಲಮಂಗಲ(ಬೆಂಗಳೂರು): ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಹೇಳಿಕೊಂಡು ಲಕ್ಷ, ಲಕ್ಷ ಹಣ ವಂಚನೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಹೌದು. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರ ಗ್ರಾಮದಲ್ಲಿ ಈ ಆರೋಪ ಕೇಳಿಬಂದಿದೆ. ಯೋಗನರಸಿಂಹ ಎಂಬವರು ಈ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮತ್ತು ರೇಣುಕಾಚಾರ್ಯ ಹೆಸರೇಳಿಕೊಂಡು ವ್ಯಕ್ತಿ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

    ತನ್ನ ಪತ್ನಿ ಹೆಸರಿಗೆ ಸೇರಿದ ಖಾಲಿ ನಿವೇಶನವನ್ನು ಬಿಜೆಪಿ ಮುಖಂಡ ರವಿಕುಮಾರ್ ಎಂಬವರಿಗೆ ರಿಜಿಸ್ಟರ್ ಮಾಡಿಕೊಟ್ಟು ಉಳಿಕೆ 12 ಲಕ್ಷದ ಡಿಡಿ ನೀಡಿದ್ದು ಆ ಡಿಡಿ ಕೂಡ ನಕಲು ಎಂದು ಯೋಗನರಸಿಂಹ ಆರೋಪ ಮಾಡ್ತಿದ್ದಾರೆ. ಲಕ್ಷ ಲಕ್ಷ ವಂಚನೆ ಮಾಡಿರುವ ವಿಚಾರಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ: ಮೋಹನ್ ಭಾಗವತ್

    ತನ್ನ ರಾಜಕೀಯ ಪ್ರಭಾವದಿಂದ ಒತ್ತಡ ಹಾಕಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಕೂಡಲೇ ಅಧಿಕಾರಿಗಳು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಬಡವರಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಾರದಲ್ಲಿ ಮೂರನೇ ಬಾರಿ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ

  • ಜೆಡಿಎಸ್ ಅವ್ರನ್ನ ಮತ್ತೆ ಆಯ್ಕೆ ಮಾಡಿದ್ರೆ, ನಿಮಗೆ ಅಪಕೀರ್ತಿ: ಸದಾನಂದ ಗೌಡ

    ಜೆಡಿಎಸ್ ಅವ್ರನ್ನ ಮತ್ತೆ ಆಯ್ಕೆ ಮಾಡಿದ್ರೆ, ನಿಮಗೆ ಅಪಕೀರ್ತಿ: ಸದಾನಂದ ಗೌಡ

    ಹಾಸನ: ಕುಟುಂಬದ ಸದಸ್ಯರೇ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಮತ್ತೆ ಅವರನ್ನು ಆಯ್ಕೆ ಮಾಡಿದರೆ ನಿಮಗೆ ಅಪಕೀರ್ತಿ ಬರುತ್ತದೆ ಎಂದು ಹಾಸನದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

    ಹಾಸನದ ಖಾಸಗಿ ಕಾಲೇಜಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಂಎಲ್‍ಸಿ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಿರುವುದರ ಬಗ್ಗೆ ಕುಟುಂಬ ರಾಜಕಾರಣ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನವಜೋತ್ ಸಿಧುರನ್ನು ತರಾಟೆಗೆ ತೆಗೆದುಕೊಂಡ ಗೌತಮ್ ಗಂಭೀರ್

    ಜೆಡಿಎಸ್ ಅಧಿಪತನ ಶುರುವಾಗಿದೆ. ಜೆಡಿಎಸ್‍ನ ಶಾಸಕರೇ ತಮ್ಮ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶ್ರವಣಬೆಳಗೊಳ ಮತ್ತು ಹೊಳೆನರಸೀಪುರ ಬಿಟ್ಟರೆ ಜಿಲ್ಲೆಯ ಎಲ್ಲಾ ಕಡೆಯೂ ಬಿಜೆಪಿ ಅಲೆ ಇದೆ ಎಂದು ಸದಾನಂದಗೌಡ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ದೊಡ್ಡಣ್ಣ – ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್

  • ಕಾಂಗ್ರೆಸ್‍ನವರನ್ನ ಜನ ಕ್ಯಾಕರಿಸಿ ಉಗಿಯೋಕೆ ಪ್ರಾರಂಭ ಮಾಡ್ತಾರೆ: ಸದಾನಂದ ಗೌಡ

    ಕಾಂಗ್ರೆಸ್‍ನವರನ್ನ ಜನ ಕ್ಯಾಕರಿಸಿ ಉಗಿಯೋಕೆ ಪ್ರಾರಂಭ ಮಾಡ್ತಾರೆ: ಸದಾನಂದ ಗೌಡ

    ಚಿಕ್ಕಬಳ್ಳಾಪುರ: ಬಿಟ್‍ಕಾಯಿನ್ ಹಗರಣ ಆರೋಪ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಕೇಳುವ ಜನ ಕಾಂಗ್ರೆಸ್‍ನವರನ್ನ ಕ್ಯಾಕರಿಸಿ ಉಗಿಯೋಕೆ ಪ್ರಾರಂಭ ಮಾಡುತ್ತಾರೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡದು ವಿರೋಧ ಪಕ್ಷವಾದ ಕಂಗ್ರೆಸ್ ವಿರುದ್ಧವಾಗಿ ಕಿಡಿಕಾರಿದ್ಧಾರೆ.

    ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಟ್‍ಕಾಯಿನ್ ಹಗರಣ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಬೀಳುತ್ತೆ ಸಿಎಂ ಬದಲಾಗ್ತಾರೆ ಎಂಬುದು ಕಾಂಗ್ರೆಸ್ ನವರ ಹಗಲು ಗನಸು. ಕೆಲಸ ಇಲ್ಲದವರು ಕಾಂಗ್ರೆಸ್ ನವರಾಗಿದ್ದಾರೆ. ಮೊದಲಿನಿಂದಲೂ ಈ ತರ ಏನಾದರೂ ಹುಡುಕುವಂತಹ ಚಾಳಿ ಕಾಂಗ್ರೆಸ್‍ನವರಿಗಿದೆ ಎಂದು ವಾಗ್ದಳಿ ಮಾಡಿದ್ದಾರೆ.

    ಕಾಂಗ್ರೆಸ್‍ನ ಆತಂರಿಕ ಕಚ್ಚಾಟ ಮುಚ್ಚಿ ಹಾಕಲು ಬಿಟ್‍ಕಾಯಿನ್ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ನಡುವಿನ ಆಂತರಿಕ ಕಚ್ಚಾಟ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷರ ನಡುವಿನ ಪೈಪೋಟಿಯ ಭಿನ್ನಾಭಿಪ್ರಾಯ ಮುಚ್ಚಿ ಹಾಕುವ ಯತ್ನ ನಡೆಸುತ್ತಿದ್ದಾರೆ. ಬಿಟ್‍ಕಾಯಿನ್ ಹಗರಣದಲ್ಲಿ ಯಾವುದೇ ಹುರುಳಿಲ್ಲ. ಈಗಾಗಲೇ ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ. ಪ್ರಧಾನಮಂತ್ರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್

    ಇದರಲ್ಲಿ ಕಾಂಗ್ರೆಸ್ ನವರೇ ಶಾಮೀಲಾಗಿದ್ದಾರೆ ಎಂಬುದು ಅವರ ಫ್ರೆಂಡ್ ಶಿಪ್ ಇರೋ ಬಗ್ಗೆ ಹೊರಗೆ ಬಂದ ರಿಪೋರ್ಟ್‍ಗಳಿಂದ ಈಗಾಗಲೇ ಗೊತ್ತಾಗುತ್ತಿದೆ. ಡಿಕೆಶಿ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಒಡಾಡುವುದೇ ಕೆಲಸವಾಗಿದೆ. ಯಾವುದೇ ಇಷ್ಯೂ ಇಲ್ಲದಾಗ ಇದೇ ಕೆಲಸ ಮಾಡೋದೆ ಅವರ ಕೆಲಸ ಅಂತ ಆಕ್ರೋಶವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ

  • ಸಿದ್ದರಾಮಯ್ಯನ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗ್ತಿದ್ರು: ಸದಾನಂದಗೌಡ ತಿರುಗೇಟು

    ಸಿದ್ದರಾಮಯ್ಯನ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗ್ತಿದ್ರು: ಸದಾನಂದಗೌಡ ತಿರುಗೇಟು

    ಚಿಕ್ಕಬಳ್ಳಾಪುರ: ಬಿಜೆಪಿಯದ್ದು ತಾಲಿಬಾನ್ ಸಂಸ್ಕೃತಿ ಅಂತ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಸದಾನಂದಗೌಡ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಪೂರ್ತಿ ತಲೆ ಕೆಟ್ಟಿದೆ. ರಾಜಕಾರಣದಲ್ಲಿ ಸ್ವಲ್ಪ ಕೆಟ್ಟರು ಪರವಾಗಿಲ್ಲ. ಬಿಜೆಪಿಯವರು ತಾಲಿಬಾನ್‍ಗಳು ಆಗಿದ್ದರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕಾರಿನಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತೇ? ಅವರ ಕಾಲಿಗೆ ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದಾಡಿಕೊಂಡು ಹೋಗುತ್ತಿದ್ದರು ಅಂತ ಖಾರವಾಗಿ ಸಿದ್ದರಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.


    ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಬಳಿ ಸಿರಿ ಅಕ್ವಾ ಕಲ್ಚರ್ ಫಾರಂಗೆ ಭೇಟಿ ನೀಡಿ ಮಾತನಾಡಿ ಅವರು, ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಬಿಜೆಪಿಯವರ ಪ್ಯಾಂಟ್ ಲೂಸ್ ಆಗಿದೆ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರದ್ದು ಏನೇನೋ ಲೂಸ್ ಆಗಿದಿಯೋ ನನಗೆ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯನವರ ತಲೆ ಮಾತ್ರ ಲೂಸ್ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

    ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‍ನವರಿಗೆ ಅಹಿಂದ ಹೋರಾಟ ಮಾಡ್ತಾರೆ. ಬಾಯಿಗೆ ಬಂದ ಹಾಗೆ ಮಾತಾಡೋದು ಅವರ ಯೋಜನೆಗಳನ್ನ ಕಾರ್ಯಗತ ಮಾಡಲು ಮುಂದಾಗುತ್ತಾರೆ ಅಂತ ಆಕ್ರೋಶದ ನುಡಿಗಳನ್ನ ವ್ಯಕ್ತಪಡಿಸಿದರು.

    ಇದೇ ವೇಳೆ ಜೊತೆಯಲ್ಲಿದ್ದ ಮೀನುಗಾರಿಕಾ ಸಚಿವ ಅಂಗಾರ ಕೂಡ ಸಿದ್ದರಾಮಯ್ಯನವರೇ ಕೆಟ್ಟು ಹೋಗಿದ್ದಾರೆ. ಅವರ ಕೆಟ್ಟು ಹೋದ ಕಾರಣ ಕೆಟ್ಟ ಸಂಸ್ಕೃತಿ ಅವರಲ್ಲಿದೆ. ನಾವು ತಲೆಕೆಡೆಸಿಕೊಳ್ಳುವುದಿಲ್ಲ, ಮತಾಂತರಕ್ಕೆ ನಮ್ಮ ಸರ್ಕಾರ ಆಸ್ಪದ ಕೊಡುವುದಿಲ್ಲ ಎಂದರು.

  • ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೆ ತಿರುಗುತ್ತಿದೆ: ಸದಾನಂದಗೌಡ

    ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೆ ತಿರುಗುತ್ತಿದೆ: ಸದಾನಂದಗೌಡ

    – ಸಿದ್ದರಾಮಯ್ಯನವರ ಸಹ ತಲೆ ತಿರುಗುತ್ತಿದೆ

    ಮಡಿಕೇರಿ: ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೇ ತಿರುಗುತ್ತಿದೆ. ಹೀಗಾಗಿ ಸಿದ್ದರಾಯಮ್ಮನವರ ತಲೆ ತಿರುಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆಗಳ ಕ್ಯಾತೆಯಿಂದಾಗಿ ಬೊಮ್ಮಾಯಿ ಅವರ ಸರ್ಕಾರ ಹೆಚ್ಚುದಿನ ಉಳಿಯುವುದಿಲ್ಲ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಗೂಟದ ಕಾರು ಬೇಕಾಗಿತ್ತು. ಇದಕ್ಕಿಂತ ದೊಡ್ಡ ಹುದ್ದೆ ಸಿಗುವುದಿಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಾಗಿತ್ತು. ಹೀಗಾಗಿ ಅವರ ಮನಸ್ಸಿನಲ್ಲಿದ್ದ ಕೆಲಸಗಳೆಲ್ಲವೂ ಈಡೇರುತ್ತಿದ್ದಂತೆ ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಿದರು ಎಂದರು.

    ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಅಸಮಾಧಾನಗೊಂಡವರೆಲ್ಲ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಸಪೋರ್ಟ್ ಮಾಡಿದರು. ಆದರೆ ಬೊಮ್ಮಾಯಿ ಅವರ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಖಾತೆ ವಿಚಾರಕ್ಕೆ ಮುನಿಸು ಇದ್ದಿದ್ದೆಲ್ಲವೂ ಸರಿಯಾಗಿದೆ. ಹೀಗಾಗಿ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅದನ್ನು ಮತ್ತಷ್ಟು ಬಲಗೊಳಿಸುವ ಕೆಲಸವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

    ಕಾನೂನಿನ ನಿಜ ಸ್ವರೂಪ ಗೊತ್ತಾಗಲಿ
    ಸ್ಯಾಂಡಲ್‍ವುಡ್ ನಟಿಯಾರದ ಸಂಜನಾ ಗರ್ಲಾನಿ ಮತ್ತು ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಕಾನೂನು ತನ್ನ ನಿಜ ಸ್ವರೂಪ ಏನೆಂದು ತೋರಿಸಲಿ. ಕೋರ್ಟ್ ಯಾವ ಸೆಕ್ಷನ್ ಗಳ ಮೇಲೆ ಕ್ರಮ ಕೈಗೊಳ್ಳುವುದೋ ಕೈಗೊಳ್ಳಲಿ. ಇದರಿಂದ ಉಳಿದವರಿಗೂ ಒಂದು ಎಚ್ಚರಿಕೆ ಗಂಟೆಯಾಗುತ್ತದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದರೆ ಎಂತಹ ಶಿಕ್ಷೆ ಆಗುತ್ತದೆ ಎನ್ನುವ ಅರಿವು ಮೂಡಲಿ. ಹೀಗಾಗಿ ಕಾನೂನು ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

    ಡ್ರಗ್ಸ್ ದಂಧೆ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಯುವಶಕ್ತಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನೋದು ಪ್ರಧಾನಿ ಮೋದಿಯವರ ಆಶಯವಾಗಿತ್ತು. ಆದರೆ ಈ ರೀತಿ ತಪ್ಪು ದಾರಿಗಳನ್ನು ಹಿಡಿಯುತ್ತಿರುವುದು ಸರಿಯಲ್ಲ. ಇಂದು ಆಫ್ರಿಕನ್ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದಾರೆ. ಸರಿಯಾದ ಕಾನೂನು ಕ್ರಮ ಕೈಗೊಂಡರೆ ಯುವ ಸಮೂಹಕ್ಕೂ ಅರಿವು ಮೂಡಿದಂತೆ ಆಗುತ್ತದೆ ಎಂದು ಸದಾನಂದಗೌಡ ಹೇಳಿದ್ದಾರೆ.

  • ರೈತಪರ ಕೆಲಸ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಅಶೋಕ್ ಕೊಡವೂರು

    ರೈತಪರ ಕೆಲಸ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಅಶೋಕ್ ಕೊಡವೂರು

    ಉಡುಪಿ: ಶೋಭಾ ಕರಂದ್ಲಾಜೆ ಕೃಷಿ ಮಂತ್ರಿಯಾಗಿ ನೇಮಕವಾಗಿದ್ದಾರೆ. ನೂತನ ಸಚಿವೆ, ನಮ್ಮ ಸಂಸದೆಗೆ ಶುಭಾಶಯಗಳು. ಮುಂದೆ ರೈತರ ಪರ ಕೆಲಸ ಮಾಡಲಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಶೋಕ್ ಕೊಡವೂರು ಅವರು, ಕೃಷಿ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರಿಂದ ಒಳ್ಳೆಯ ಕೆಲಸಗಳು ನಡೆಯಲಿ ಎಂದು ಹಾರೈಸುತ್ತೇನೆ. ಇಡೀ ದೇಶದ ರೈತರು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೃಷಿ ಮಸೂದೆಯ ಸಮಸ್ಯೆಯನ್ನು ಶೋಭಾ ಅವರು ಶೀಘ್ರ ಬಗೆಹರಿಸಲಿ. ಕೊರೊನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ರೈತರಿಗೆ ಸವಲತ್ತುಗಳನ್ನು ಒದಗಿಸಿ. ದೇಶದಲ್ಲಿ ನಶಿಸುತ್ತಿರುವ ಕೃಷಿಯನ್ನು ಉಳಿಸುವ ಜವಾಬ್ದಾರಿ ಕರಂದ್ಲಾಜೆ ಮೇಲಿದೆ ಎಂದರು. ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ

    ಶೋಭಾ ಕರಂದ್ಲಾಜೆ ಮಾಡುವ ಒಳ್ಳೆಯ ಕೆಲಸಗಳಿಗೆ ಬೆಂಬಲವಿದೆ. ಕರ್ತವ್ಯಲೋಪ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಲು ಮೀನಮೇಷ ಎಣಿಸೋದಿಲ್ಲ. ಡಿವಿ ಸದಾನಂದ ಗೌಡ ಅವರನ್ನು ಹುದ್ದೆಯಿಂದ ಇಳಿಸಲಾಗಿದೆ. ಕರಾವಳಿಗೆ ಪ್ರಾತಿನಿಧ್ಯತೆ ಕೊಡುವ ಉದ್ದೇಶದಿಂದ ಶೋಭಾ ಕರಂದ್ಲಾಜೆಯನ್ನು ನೇಮಿಸಲಾಗಿದೆ. ಒಕ್ಕಲಿಗ ಸಮುದಾಯವನ್ನು ಓಲೈಸುವ ಉದ್ದೇಶವೂ ಇದರ ಹಿಂದೆ ಇದೆ ಎಂದು ಅಭಿಪ್ರಾಯಪಟ್ಟರು.

  • ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ

    ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ

    ಬೆಂಗಳೂರು: 2012ರಲ್ಲಿ ಡಿ.ವಿ ಸದಾನಂದ ಗೌಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಜುಲೈ 7 ರಂದು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಅದಾದ 9 ವರ್ಷಗಳ ಬಳಿಕ ಕಾಕತಾಳೀಯವೆಂಬಂತೆ ಇದೇ ದಿನ ಕೇಂದ್ರ ಸಚಿವ ಸಂಪುಟಕ್ಕೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ ರಾಜೀನಾಮೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಕರ್ನಾಟಕದ ನಾಲ್ವರು ಮೋದಿ ಸಂಪುಟಕ್ಕೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಡಿವಿಎಸ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ಇದೇ ದಿನ ಮುಖ್ಯಮಂತ್ರಿಯಾಗಿದ್ದ ವೇಳೆ ಕಟೀಲಿಗೆ ಬಂದು ದೇವಿ ದರ್ಶನ ಪಡೆದಿದ್ದರು. ಇದೇ ದಿನ ಇಂದು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಮೋದಿ ಸಂಪುಟದಲ್ಲಿ ಸದಾನಂದ ಗೌಡರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

    ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿದ್ದ ಡಿವಿಎಸ್, ಇಂದು ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಅವರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಯಾಗಿದ್ದಾರೆ.

    ಕಳೆದ ವಾರವೇ ಡಿವಿಎಸ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಡಿವಿಎಸ್ ಬದಲಿಗೆ ಒಕ್ಕಲಿಗರಾಗಿರುವ ಶೋಭಾ ಕರಂದ್ಲಾಜೆ ಅಥವಾ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದವು.

  • ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

    ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು, ಕರ್ನಾಟಕದ ನಾಲ್ವರು ಮೋದಿ ಸಂಪುಟ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ಡಿವಿಎಸ್ ಇಂದು ರಾಜೀನಾಮೆ ನೀಡಿದ್ದಾರೆ. 68 ವರ್ಷದ ಡಿ.ವಿ. ಸದಾನಂದ ಗೌಡ ಅವರು ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಮತ್ತೆ ಶಾಕ್ ನೀಡಿದ ಹೈಕಮಾಂಡ್

    ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ಡಿವಿಎಸ್ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಗೊಳ್ಳುತ್ತಿದ್ದಾರೆ.

    2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ಡಿವಿಎಸ್, 2009ರಲ್ಲಿ ಉಡುಪಿ, 2014 ಮತ್ತು 2019ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ್ ಕುಮಾರ್ ಅವರ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯವನ್ನು ಅವರಿಗೆ ವಹಿಸಲಾಗಿತ್ತು.