Tag: Dutee Chand

  • ಕೊರೊನಾ ಎಫೆಕ್ಟ್: BMW ಕಾರು ಮಾರಾಟಕ್ಕಿಟ್ಟ ದ್ಯುತಿ ಚಂದ್

    ಕೊರೊನಾ ಎಫೆಕ್ಟ್: BMW ಕಾರು ಮಾರಾಟಕ್ಕಿಟ್ಟ ದ್ಯುತಿ ಚಂದ್

    ಭುವನೇಶ್ವರ: ಭಾರತದ ಓಟಗಾರ್ತಿ ದ್ಯುತಿ ಚಂದ್ ತರಬೇತಿಯ ವೆಚ್ಚಕ್ಕಾಗಿ ತಮ್ಮ ಬಳಿ ಇದ್ದ ಬಿಎಂಡಬ್ಲೂ ಕಾರನ್ನು ಮಾರಾಟಕ್ಕಿಟ್ಟಿದ್ದಾರೆ.

    ಚೀನಿ ವೈರಸ್ ಕಾರಣದಿಂದ ವಿಶ್ವದಾದ್ಯಂತ ಕಳೆದ 4 ತಿಂಗಳನಿಂದ ಕ್ರೀಡಾ ಜಗತ್ತು ಸ್ತಬ್ಧಗೊಂಡಿದೆ. ವೈರಸ್‍ನಿಂದ ಐಪಿಎಲ್ ಸೇರಿದಂತೆ ಹಲವು ಕ್ರೀಡೆಗಳ ಟೂರ್ನಿಗಳು ಮುಂದೂಡಿದ್ದರೆ, ಹಲವು ಟೂರ್ನಿಗಳು ರದ್ದಾಗಿದೆ. ಟೋಕಿಯೋ ಒಲಿಂಪಿಕ್ಸ್ ಕೂಡ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

    ಒಲಿಂಪಿಕ್ಸ್ ಮುಂದೂಡಿರುವ ಹಿನ್ನೆಲೆಯಲ್ಲಿ ತರಬೇತಿಯನ್ನು ಮುಂದುವರಿಸಿರುವ ದ್ಯುತಿ ಚಂದ್ ತರಬೇತಿಗಾಗಿ ತಮ್ಮ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಾರು ಮಾರಾಟ ಮಾಡುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.

    ಇಲ್ಲಿಯವರೆಗೂ ನನ್ನ ಶಿಕ್ಷಣ ಅತ್ಯುತ್ತಮವಾಗಿಸಾಗಿದೆ. ಭುವನೇಶ್ವರದಲ್ಲಿ ನಾನು ತರಬೇತಿ ಪಡೆಯುತ್ತಿದ್ದು, ಸರ್ಕಾರ ಹಾಗೂ ಪ್ರಯೋಜಕರು ನೀಡಿದ್ದ ಹಣ ಖಾಲಿಯಾಗಿದೆ. ಆದ್ದರಿಂದಲೇ ನನ್ನ ಕಾರನ್ನು ಮಾರಾಟ ಮಾಡಬೇಕೆಂದುಕೊಂಡಿದ್ದೇನೆ ಯಾರಾದರೂ ಖರೀದಿ ಮಾಡುವವರಿದ್ದರೆ ನನಗೆ ಸಂದೇಶ ರವಾನಿಸಿ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

    ಇತ್ತ ದ್ಯುತಿ ಚಂದ್ ಫೇಸ್‍ಬುಕ್ ಪೋಸ್ಟ್ ಬಳಿಕ ಒಡಿಶಾ ಸರ್ಕಾರ ಅವರ ನೆರವಿಗೆ ಆಗಮಿಸಿತ್ತು. ಪರಿಣಾಮ ಅವರು ಫೇಸ್‍ಬುಕ್ ಪೋಸ್ಟನ್ನು ದ್ಯುತಿ ಚಂದ್ ಡಿಲೀಟ್ ಮಾಡಿದ್ದಾರೆ. ಉಳಿದಂತೆ 2015ರಲ್ಲಿ ಬಿಎಂಡಬ್ಲೂ 3 ಸಿರೀಸ್ ಮಾಡೆಲ್ ಕಾರನ್ನು 40 ಲಕ್ಷ ರೂ.ಗಳಿಗೆ ದ್ಯುತಿ ಚಂದ್ ಖರೀದಿ ಮಾಡಿದ್ದರು.

    ಟೋಕಿಯೋ ಒಲಪಿಂಕ್ ತರಬೇತಿಗಾಗಿ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿತ್ತು. ಕೋಚ್, ಫಿಜಿಯೋಥೆರಪಿಸ್ಟ್, ಡಯಟಿಷಿಯನ್ ಸೇರಿದಂತೆ ತಿಂಗಳಿಗೆ 5 ಲಕ್ಷ ರೂ. ಖರ್ಚಾಗುತ್ತಿತ್ತು. ಕೊರೊನಾ ಕಾರಣದಿಂದ ಯಾವ ಪ್ರಯೋಜಕರು ಕೂಡ ನನಗಾಗಿ ಖರ್ಚು ಮಾಡಲು ಮುಂದೆ ಬರುತ್ತಿಲ್ಲ. ಸದ್ಯ ನಾನು ಟೋಕಿಯೋ ಒಲಂಪಿಕ್‍ಗೆ ಸಿದ್ಧವಾಗುತ್ತಿದ್ದೇನೆ. ಜರ್ಮಿನಿಯಲ್ಲಿ ತರಬೇತಿ ಪಡೆಯಲು, ಫಿಟ್ನೆಸ್ ಕಾಯ್ದುಕೊಳ್ಳಲು ಹಣ ಅಗತ್ಯವಿದೆ. ಆದ್ದರಿಂದಲೇ ಕಾರು ಮಾರಾಟ ಮಾಡಲು ಮುಂದಾಗಿದ್ದೆ ಎಂದು ದ್ಯುತಿ ಚಂದ್ ಸಂದರ್ಶನವೊಂದರಲ್ಲಿ ಹೇಳಿದ್ದರು.

    2020ರ ಅರ್ಜನ ಪ್ರಶಸ್ತಿಗೆ ದ್ಯುತಿ ಚಂದ್ ಆಯ್ಕೆ ಆಗಿದ್ದು, 2018ರ ಏಷ್ಯನ್ ಗೇಮ್ಸ್ ನಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದು ತಂದಿದ್ದರು. ಲಾಕ್‍ಡೌನ್ ಕಾರಣದಿಂದ ತರಬೇತಿಯಿಂದ ದೂರ ಉಳಿದಿದ್ದ ದ್ಯುತಿ ಚಂದ್ ಮೇ 25 ರಿಂದ ತರಬೇತಿ ಆರಂಭಿಸಿದ್ದರು. ಸದ್ಯ ಒಲಂಪಿಕ್ ಮುಂದೂಡಿರುವುದರಿಂದ ಅವರು ಒಂದು ವರ್ಷ ತರಬೇತಿಯನ್ನು ಮುಂದುವರಿಸಬೇಕಿದೆ.

  • ಸಲಿಂಗಿ ಜೊತೆ ಮದ್ವೆ ಆಗುವಂತೆ ದ್ಯುತಿ ಚಂದ್‍ಗೆ ಬ್ಲ್ಯಾಕ್​ಮೇಲ್: ಸರಸ್ವತಿ ಚಂದ್

    ಸಲಿಂಗಿ ಜೊತೆ ಮದ್ವೆ ಆಗುವಂತೆ ದ್ಯುತಿ ಚಂದ್‍ಗೆ ಬ್ಲ್ಯಾಕ್​ಮೇಲ್: ಸರಸ್ವತಿ ಚಂದ್

    ನವದೆಹಲಿ: ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ಭಾನುವಾರ ತಾವು ಸಲಿಂಗಿ ಸಂಬಂಧದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ದ್ಯುತಿ ಹಿರಿಯ ಸೋದರಿ ಸರಸ್ವತಿ ಚಂದ್, ಆಕೆಗೆ ಸಲಿಂಗಿ ಜೊತೆ ಮದುವೆ ಆಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪರಿಣಾಮ ಈ ರೀತಿಯ ಹೇಳಿಕೆ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

    ಏಷ್ಯನ್ ಗೇಮ್ಸ್ ಪದಕ ವಿಜೇತೆಯಾಗಿರುವ ಸರಸ್ವತಿ ಚಂದ್, ಸೋದರಿಯ ಮಾತು ಕೇಳಿ ತುಂಬಾ ದುಃಖವಾಗಿದೆ. ಮತ್ತೊಬ್ಬ ಮಹಿಳೆಯೊಂದಿಗೆ ಮದುವೆ ಆಗುವಂತೆ ದ್ಯುತಿ ಮೇಲೆ ಒತ್ತಡ ಹಾಕುವ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಒಂದು ವೇಳೆ ಸಲಿಂಗಿಯೊಂದಿಗೆ ವಿವಾಹ ಆಗದೇ ಇದ್ದರೆ ಆಕೆಯ ಆಸ್ತಿಯನ್ನು ನಮ್ಮದಾಗಿಸಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಆಟದತ್ತ ಆಕೆಯ ಗಮನವನ್ನು ಬೇರೆಡೆ ಸೆಳೆದು ಕ್ರೀಡೆಯಿಂದ ಹೊರ ಹಾಕುವ ಷಡ್ಯಂತ್ರ ರಚಿಸಲಾಗಿದೆ ಎಂದು ಆರೋಪಿಸಿದರು.

    ದ್ಯುತಿ ಜೀವನ ಆಪತ್ತಿನಲ್ಲಿದೆ. ಆಕೆಯ ಹಣ ಮತ್ತು ಆಸ್ತಿಯನ್ನು ಸಾಧ್ವೀನ ಪಡೆದುಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ದ್ಯುತಿ ಚಂದ್‍ಗೆ ಭದ್ರತೆಯನ್ನು ನೀಡಬೇಕೆಂದು ಸರಸ್ವತಿ ಚಂದ್ ಮನವಿ ಮಾಡಿಕೊಂಡಿದ್ದಾರೆ.

    ದ್ಯುತಿ ಚಂದ್ ಹೇಳಿದ್ದೇನು?
    ನಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಜೀವಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಸಲಿಂಗಿಯಾಗಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ನಾನು ಮುಂದಿರುತ್ತೇನೆ. ಇದು ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಸದ್ಯ ನಾನು ವಿಶ್ವ ಚಾಂಪಿಯನ್‍ಶಿಪ್ ಹಾಗೂ ಒಲಿಂಪಿಕ್ಸ್ ಕಡೆ ನನ್ನ ಹೆಚ್ಚಿನ ಗಮನ ಇದ್ದು, ಮುಂದಿನ ದಿನಗಳಲ್ಲಿ ನಾನು ಆಕೆಯೊಂದಿಗೆ ಜೀವಿಸಲು ಇಷ್ಟ ಪಡುತ್ತೇನೆ ಎಂದು ದ್ಯುತಿ ಚಂದ್ ಹೇಳಿಕೊಂಡಿದ್ದರು.

    ಪ್ರೀತಿಯನ್ನು ತಪ್ಪು ಎನ್ನಲು ಯಾರಿಗೂ ಹಕ್ಕಿಲ್ಲ, ಇದನ್ನೇ ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಅಥ್ಲೀಟ್ ಆದ ಕಾರಣಕ್ಕೆ ನನಗೆ ಮಾತ್ರ ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 5 ವರ್ಷಗಳ ಕಾಲ ನಾನು ಓಟದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದು, ವೃತ್ತಿ ಜೀವನದಿಂದ ವಿರಾಮ ಪಡೆದ ಬಳಿಕ ನನ್ನ ಜೀವನವನ್ನು ಗೆಳತಿಯೊಂದಿಗೆ ಕಳೆಯುತ್ತೇನೆ ಎಂದಿದ್ದಾರೆ.

    2018ರ ಏಷ್ಯನ್ ಗೇಮ್ಸ್ ನಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಂದ್ ಬೆಳ್ಳಿ ಪದಕವನ್ನು ಪಡೆದಿದ್ದರು. 20 ವರ್ಷಗಳ ಇತಿಹಾಸಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ಆಥ್ಲಿಟ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 16 ವರ್ಷಗಳ ಬಳಿಕ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು.

  • ಸಲಿಂಗಿ ಸಂಬಂಧದಲ್ಲಿದ್ದೇನೆ – ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ದ್ಯುತಿ ಚಂದ್

    ಸಲಿಂಗಿ ಸಂಬಂಧದಲ್ಲಿದ್ದೇನೆ – ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ದ್ಯುತಿ ಚಂದ್

    ನವದೆಹಲಿ: ಭಾರತದ ಓಟಗಾರ್ತಿ ದ್ಯುತಿ ಚಂದ್ ತಾವು ಗೆಳತಿಯೊಂದಿಗೆ ಸಲಿಂಗಿ ಸಂಬಂಧದಲ್ಲಿ ಇರುವುದಾಗಿ ಬಹಿರಂಗ ಪಡಿಸಿದ್ದಾರೆ.

    ಒಡಿಶಾ ರಾಜ್ಯದ ಓಟಗಾರ್ತಿ ಆಗಿರುವ ದ್ಯುತಿ ಚಂದ್ ತಮ್ಮದೇ ಗ್ರಾಮದ ನಿವಾಸಿ ಆಗಿರುವ ಗೆಳತಿಯೊಂದಿಗೆ ಸಲಿಂಗಿ ಸಂಬಂಧ ಹೊಂದಿದ್ದೇನೆ ಎಂದಿದ್ದಾರೆ. ಅಲ್ಲದೇ ಕೆಲ ಕಾರಣಗಳಿಂದ ನಾನು ಗೆಳತಿಯ ಹೆಚ್ಚಿನ ಮಾಹಿತಿಯನ್ನ ಬಹಿರಂಗ ಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದ್ಯುತಿ ಚಂದ್ ಸಲಿಂಗಿ ಸಂಬಂಧ ಹೊಂದಿರುವುದನ್ನು ಬಹಿರಂಗ ಪಡಿಸಿದ ಮೊದಲ ಭಾರತೀಯ ಅಥ್ಲಿಟ್ ಎನಿಸಿಕೊಂಡಿದ್ದಾರೆ.

    ನಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಜೀವಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಸಲಿಂಗಿಯಾಗಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ನಾನು ಮುಂದಿರುತ್ತೇನೆ. ಇದು ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಸದ್ಯ ನಾನು ವಿಶ್ವ ಚಾಂಪಿಯನ್‍ಶಿಪ್ ಹಾಗೂ ಒಲಿಂಪಿಕ್ಸ್ ಕಡೆ ನನ್ನ ಹೆಚ್ಚಿನ ಗಮನ ಇದ್ದು, ಮುಂದಿನ ದಿನಗಳಲ್ಲಿ ನಾನು ಆಕೆಯೊಂದಿಗೆ ಜೀವಿಸಲು ಇಷ್ಟ ಪಡುತ್ತೇನೆ ಎಂದಿದ್ದಾರೆ.

    ಪ್ರೀತಿಯನ್ನು ತಪ್ಪು ಎನ್ನಲು ಯಾರಿಗೂ ಹಕ್ಕಿಲ್ಲ, ಇದನ್ನೇ ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಅಥ್ಲೀಟ್ ಆದ ಕಾರಣಕ್ಕೆ ನನಗೆ ಮಾತ್ರ ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 5 ವರ್ಷಗಳ ಕಾಲ ನಾನು ಓಟದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದು, ವೃತ್ತಿ ಜೀವನದಿಂದ ವಿರಾಮ ಪಡೆದ ಬಳಿಕ ನನ್ನ ಜೀವನವನ್ನು ಗೆಳತಿಯೊಂದಿಗೆ ಕಳೆಯುತ್ತೇನೆ ಎಂದಿದ್ದಾರೆ.

    2018ರ ಏಷ್ಯನ್ ಗೇಮ್ಸ್ ನಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಂದ್ ಬೆಳ್ಳಿ ಪದಕವನ್ನು ಪಡೆದಿದ್ದರು. 20 ವರ್ಷಗಳ ಇತಿಹಾಸಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ಆಥ್ಲಿಟ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 16 ವರ್ಷಗಳ ಬಳಿಕ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು.