ಬೆಳಗಾವಿ(ಚಿಕ್ಕೋಡಿ): ತೆರೆದ ಸಭೆಯಲ್ಲೇ ಮೂವರು ಶಾಸಕರಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಹುಕ್ಕೇರಿಯ ಶ್ರೀಮಠದ ದಸರಾ ಉತ್ಸವ ಉದ್ದೇಶಿಸಿ ಮಾತನಾಡುವಾಗ ಸ್ವಾಮೀಜಿ ಎಚ್ಚರಿಸಿದ್ದಾರೆ.
ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಹುಕ್ಕೇರಿಯಲ್ಲಿ ಬಿದ್ದು ಹೋದ ಮನೆಗಳಿಗೆ ಪರಿಹಾರ ನೀಡಲು ಮುಂದಾಗಿದ್ದ ಸಂಸ್ಥೆಯ ಕುರಿತು ಮಾತನಾಡುತ್ತಿದ್ದರು. ಒಂದು ಮನೆಗೆ 1 ಲಕ್ಷ ರೂ., ಇನ್ನೊಂದು ಮನೆಗೆ 1 ಲಕ್ಷ 20 ಸಾವಿರ ಪರಿಹಾರ ನೀಡಲು ಸಂಸ್ಥೆಯೊಂದು ಮುಂದೆ ಬಂದಿದೆ ಎಂದು ಸ್ವಾಮೀಜಿ ಅವರು ಹೇಳುತ್ತಿದ್ದಂತೆ ಶಾಸಕ ಉಮೇಶ್ ಕತ್ತಿ ಮಧ್ಯೆ ಪ್ರವೇಶಿಸಿದರು. ನಾವು 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದರು. ಆಗ ಉಮೇಶ್ ಕತ್ತಿ ಮಾತಿಗೆ ಶಾಸಕ ಆನಂದ ಮಾಮನಿ ಮತ್ತು ದುರ್ಯೋಧನ ಐಹೊಳೆ ಕೂಡ ದನಿಗೂಡಿಸಿದರು. ಇಲ್ಲ ಇಲ್ಲ ಅದರಲ್ಲಿ ಎರಡು ಮಾತಿಲ್ಲ ಎಂದ ಮೂವರು ಶಾಸಕರು ಹೇಳಿದರು.
ಶಾಸಕರ ಮಾತಿಗೆ ಸ್ವಾಮೀಜಿ ಅವರು ನಗುತ್ತಾ ‘ಕೊಡ್ತಿರಿಲ್ಲಪ್ಪಾ ಮತ್ತ ನನ್ನ ಫಜೀತಿ ಮಾಡಬ್ಯಾಡ್ರಿ’ ಎಂದು ಶಾಸಕರಿಗೆ ಟಾಂಗ್ ಕೊಟ್ಟರು. ಸ್ವಾಮೀಜಿ ಮಾತಿಗೆ ಇಲ್ಲ ಇಲ್ಲ ಖಂಡಿತವಾಗಿಯೂ ಕೊಡುತ್ತೇವೆ ಎಂದು ಮೂವರು ಬಿಜೆಪಿ ಶಾಸಕರು ಹೇಳಿದರು. ಆಗ ಹೇಳಿದ ಹಾಗೆ ಪರಿಹಾರ ಕೊಡಲಿಲ್ಲವೆಂದರೆ ವಿಧಾನಸೌಧ ಮತ್ತು ಸಂಸತ್ತಿನವರೆಗೂ ನಾವು ಬರುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಇಂತಹ ಸ್ವಾರಸ್ಯಕರ ಘಟನೆಗೆ ಹುಕ್ಕೇರಿಯ ಹಿರೇಮಠದ ದಸರಾ ಉತ್ಸವ ಸಾಕ್ಷಿಯಾಯಿತು.
– ಸಿಎಂ ಮಾನಸಿಕ ಸ್ಥಿತಿ ಸರಿಯಿಲ್ಲದ್ದಕ್ಕೆ ಬಿಜೆಪಿ ಮೇಲೆ ಆರೋಪ – ತಂದೆ, ಮಗ ಸೋತಿದ್ದಕ್ಕೆ ಸಿಟ್ಟು
ಬೆಳಗಾವಿ: ನಾಲ್ಕು ದಿನ ಗ್ರಾಮವಾಸ್ತವ್ಯ ಮಾಡಿ ಈಗ ರೆಸ್ಟ್ ಮಾಡಲು ಅಮೆರಿಕಕ್ಕೆ ಸಿಎಂ ಹೋಗುತ್ತಿದ್ದಾರೆ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂಗೆ ಇಲ್ಲಿ ಇದ್ದರೆ ವಿಶ್ರಾತಿ ಸಿಗುವುದಿಲ್ಲ. ಹೀಗಾಗಿ ಅಮೆರಿಕಕ್ಕೆ ರೆಸ್ಟ್ ಪಡೆಯಲು ಹೋಗುತ್ತಿದ್ದಾರೆ. ಎಂಟು ದಿನ ಗ್ರಾಮ ವಾಸ್ತವ್ಯ ಮಾಡಿದ್ದಕ್ಕೆ ಸುಸ್ತಾಗಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಖಾಯಂ ರೆಸ್ಟ್ ತೆಗೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು. ಇದನ್ನೂ ಓದಿ:ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ
ಕೇಂದ್ರದಲ್ಲಿ ಬಿಜೆಪಿ ಗೆದ್ದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿದಕ್ಕೆ, ಅವರ ಮಗ ಚುನಾವಣೆ ಸೋತಿದ್ದಕ್ಕೆ ಸಿಎಂ ಮಾನಸಿಕ ಸ್ಥಿತಿ ಸರಿಯಿಲ್ಲ. ಅದಕ್ಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಗ್ರಾಮ ವಾಸ್ತವ್ಯಕ್ಕೆ ಬಿಜೆಪಿ ಅಡ್ಡಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗ್ರಾಮವಾಸ್ತವ್ಯ ತಡೆಯುವ ಕೆಲಸ ನಾವು ಮಾಡಿಲ್ಲ. ಕೇಂದ್ರದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸೀಟು ಗೆದ್ದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿದಕ್ಕೆ, ಅವರ ಮಗ ಚುನಾವಣೆ ಸೋತಿದ್ದಕ್ಕೆ ಸಿಎಂ ಮಾನಸಿಕ ಸ್ಥಿತಿ ಸರಿಯಿಲ್ಲ. ಅದಕ್ಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಕೆಲಸ ಮಾಡೋರಿಗೆ ಓಟು ಹಾಕಿ, ನಿದ್ದೆ ಮಾಡೋರಿಗೆ ಓಟು ಹಾಕಬೇಡಿ ಅಂದಿದ್ದೆ – ಸಿದ್ದರಾಮಯ್ಯ
ಯಾರು ಸರ್ಕಾರ ನಡೆಸುತ್ತಿರಿ ನಡೆಸಿ ಎಂದು ಹೇಳಿ ರಾಜೀನಾಮೆ ಕೊಡುವುದು ಒಳ್ಳೆಯದು. ನೀವು 105 ಸೀಟ್ ಗೆದ್ದಿದ್ದೀರಿ ಎಂದು ಬಿಜೆಪಿ ಅವರಿಗೆ ಹೇಳಿ ಬಿಟ್ಟು ಕೊಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಬರಗಾಲ ಇದ್ದಾಗ ಸಿಎಂ ಹೊರಗೆ ಬರಲಿಲ್ಲ. ಈಗ ಮಾನ್ಸೂನ್ ಆರಂಭವಾಗಿದೆ. ಈಗ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ದೇವೆಗೌಡರು ಬಿಜೆಪಿ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಜೆಡಿಎಸ್ ಕಚ್ಚಾಟ ಆರಂಭವಾಗಿದ್ದ ಅದನ್ನ ನಮ್ಮ ಮೇಲೆ ಹಾಕಿ ಹೇಳುತ್ತಾರೆ. ಕಾಂಗ್ರೆಸ್ ಮೇಲೆ ಗೂಬೆ ಕುರಿಸಿದರೆ ಮಗನ ಸಿಎಂ ಸ್ಥಾನ ಹೋಗುತ್ತೆ ಅಂತ ನಮ್ಮ ಮೇಲೆ ಆರೋಪ ಹಾಕಿ ಕಾಂಗ್ರೆಸ್ ನವರಿಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬಿಜೆಪಿಗೆ ವೋಟ್ ಹಾಕಿ ನಮ್ಮ ಬಳಿ ಕೆಲಸ ಹೇಳುತ್ತೀರಾ ಎಂದ ಹೇಳಿಕೆ ಹಾಗೂ ಡಿಸಿಎಂ ಪರಮೇಶ್ವರ್ ಬಿಜೆಪಿ ವಿರುದ್ಧ ಆಡಿದ ಮಾತಿಗೆ ಬಿಜೆಪಿ ಶಾಸಕ ಮಾತಿನ ಚಾಟಿ ಬೀಸಿದರು. ಸಿದ್ದರಾಮಯ್ಯ, ಡಿಸಿಎಂ ಕೂಡ ಲೋಕಸಭಾ ಚುನಾವಣೆಯಲ್ಲಿ ತಮಗೆ 1 ಸೀಟು ಮಾತ್ರ ಬಂದಿದೆ ಎಂದು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ. ಅದಕ್ಕೆ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಬರುತ್ತದೆ. ಇನ್ನೂ ಎರಡು ತಿಂಗಳು ಕಾಲ ತೆಗೆದುಕೊಳ್ಳುತ್ತದೆ. ಸಪ್ಟೆಂಬರ್ ನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುತ್ತೆ. ಕಾಂಗ್ರೆಸ್-ಜೆಡಿಎಸ್ ಕಚ್ಚಾಡಿ ಸರ್ಕಾರ ಬಿದ್ದು, ನಾವು ಸರ್ಕಾರ ರಚನೆ ಮಾಡುತ್ತೇವೆ. ಡಿಸೆಂಬರ್ ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತದೆ ದುರ್ಯೋಧನ ಐಹೊಳೆ ವಿಶ್ವಾಸ ವ್ಯಕ್ತಪಡಿಸಿದರು.