Tag: duryodhan aihole

  • ಹಿಜಾಬ್ ವಿವಾದವು ಕಾಂಗ್ರೆಸ್‍ನ ಗಿಮಿಕ್: ದುರ್ಯೋಧನ ಐಹೊಳೆ

    ಹಿಜಾಬ್ ವಿವಾದವು ಕಾಂಗ್ರೆಸ್‍ನ ಗಿಮಿಕ್: ದುರ್ಯೋಧನ ಐಹೊಳೆ

    ವಿಜಯಪುರ: ಹಿಜಾಬ್ ವಿವಾದವು ಕಾಂಗ್ರೆಸ್‍ನ ಗಿಮಿಕ್ ಆಗಿದ್ದು, ಇದೆಲ್ಲವನ್ನು ಮಾಡಿಸುತ್ತಿರುವುದೇ ಕೈ ಪಕ್ಷ ಎಂದು ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವಾಗ್ದಾಳಿ ನಡೆಸಿದರು.

    ನಗರದ ಇಂಚಗೇರಿ ಗ್ರಾಮದಲ್ಲಿ ಹಿಜಾಬ್ ವಿವಾದದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಈ ತಂತ್ರ ಯಾವತ್ತೂ ಫಲಿಸುವುದಿಲ್ಲ. ಕಾಂಗ್ರೆಸ್ ಒಡೆದು ಮೂರು ಹೋಳಾಗಿದೆ. ಹಿಜಾಬ್ ವಿವಾದದ ಮೂಲಕ ಮುಂದಿನ ಚುನಾವಣೆಯಲ್ಲಿ ಸೀಟ್ ಬರಬಹುದು ಅನ್ನುವ ಲೆಕ್ಕಾಚಾರ ಕಾಂಗ್ರೆಸ್ ನದ್ದಾಗಿದೆ. ಜನರು ಜಾಗೃತರಾಗಿದ್ದಾರೆ, ಅದು ಸಾಧ್ಯವಾಗಲ್ಲ ಎಂದರು. ದನ್ನೂ ಓದಿ: ಸಮಾಜ ಒಡೆಯುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರೊಫೆಸರ್‌ಗಳು: ಬಿ.ಸಿ ನಾಗೇಶ್ ತಿರುಗೇಟು

    ಕಾಂಗ್ರೆಸ್‍ನಲ್ಲಿ ಮೂರು ಗುಂಪುಗಳಿವೆ. ಹೀಗಾಗಿ ಕೈ ನಾಯಕರು ನೆಲೆ ಕಂಡುಕೊಳ್ಳಲು ಈ ತಂತ್ರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಹೀಗೆ ಮೂರು ಗುಂಪುಗಳಾಗಿವೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಗಿಮಿಕ್ ವರ್ಕೌಟ್ ನಡೆಯುವುದಿಲ್ಲ. ಹಿಜಾಬ್‍ನಿಂದ ಕೈ ಪಕ್ಷಕ್ಕೆ ಹೊಡೆತ ಬೀಳಲಿದೆ. ಬಿಜೆಪಿಗೆ ಯಾವುದೇ ಹಿನ್ನೆಡೆ ಆಗುವದಿಲ್ಲ. ಇನ್ನೂ ಸಿಎಂ ಕುರ್ಚಿಗಾಗಿ ಅವರಲ್ಲೇ ಕಚ್ಚಾಟ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಏನೂ ಉಳಿದಿಲ್ಲ. ಅವರ ಶಾಸಕರನ್ನೇ ಸಿದ್ದರಾಮಯ್ಯ ಬಿಟ್ಟು ಕುಳಿತಿದ್ದಾರೆ. ದನ್ನೂ ಓದಿ: ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ

    ಅವರ ಶಾಸಕರನ್ನೇ ಅವರಿಗೆ ಸಂಬಾಳಿಸೋಕೆ ಆಗಿಲ್ಲ. ಕಾಂಗ್ರೆಸ್‍ನಿಂದ ಬೇಸತ್ತು ಬಂದವರು ತಿರುಗಿ ಮತ್ತೆ ಯಾಕೆ ಆ ಪಕ್ಷಕ್ಕೆ ವಾಪಸ್ ಹೋಗುತ್ತಾರೆ. ಇದೆಲ್ಲಾ ಕೇವಲ ತಂತ್ರಗಾರಿಕೆ ಅಷ್ಟೇ. 2023ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಗ್ಯಾರಂಟಿ ಅಧಿಕಾರಕ್ಕೆ ಬರಲಿದೆ. 130ಕ್ಕೂ ಅಧಿಕ ಸೀಟ್ ಮೂಲಕ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ ಸಚಿವ ಸ್ಥಾನ ನೀಡಿ: ದುರ್ಯೋಧನ ಐಹೊಳೆ

    3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ ಸಚಿವ ಸ್ಥಾನ ನೀಡಿ: ದುರ್ಯೋಧನ ಐಹೊಳೆ

    ಚಿಕ್ಕೋಡಿ: ನಾನು 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ. ಈ ಬಾರಿ ನನಗೂ ಸಚಿವ ಸ್ಥಾನವನ್ನು ನೀಡಬೇಕು ಅಂತ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ 25 ವರ್ಷಗಳಿಂದ ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಕಳೆದ ಬಾರಿಯೂ ನನ್ನನ್ನ ಕಡೆಗಣನೆ ಮಾಡಲಾಗಿದೆ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು. ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ, ದಲಿತನೂ ಇದ್ದೇನೆ ನನಗೂ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ:  ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಆಯ್ಕೆ ಆಗಲಿದೆ: ಬೊಮ್ಮಾಯಿ

    ಬೆಳ್ಳಂಬೆಳಗ್ಗೆ ಶಾಸಕ ದುರ್ಯೋಧನ ಐಹೊಳೆ ಮನೆಗೆ ಜಮಾಯಿಸಿದ್ದ ಬೆಂಬಲಿಗರು ದುರ್ಯೋಧನ ಐಹೊಳೆಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೇಳಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷೆ ಹೊತ್ತು ಬೆಂಗಳೂರಿನತ್ತ ಪ್ರಯಾಣ ಬೆಳಿಸಿರುವ ದುರ್ಯೋಧನ ಅವರು ಇಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಗೊವೀಂದ ಕಾರಜೋಳ ಹಾಗೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ.