Tag: Durai Murugan

  • ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ

    ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ

    ನವದೆಹಲಿ: ಸಂಕಷ್ಟ ಸೂತ್ರದಲ್ಲಿ ನೀರು ಹರಿಸಲು ಕಾವೇರಿ ನೀರು (Kaveri Water) ನಿಯಂತ್ರಣ ಸಮಿತಿ ಸೂಚಿಸಿದ್ದು, ಆದೇಶದಂತೆ ನೀರು ಹರಿಸದೇ ಕುಡಿಯುವ ನೀರಿನ ಹೆಸರಿನಲ್ಲಿ ಕರ್ನಾಟಕ ತಮಿಳುನಾಡು (Tamil Nadu) ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್ (Durai Murugan) ಆರೋಪಿಸಿದ್ದಾರೆ.

    ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, CWRC ಅಂಕಿ ಅಂಶಗಳ ಆಧರಿಸಿ ನೀರು ಬಿಡಲು ಸೂಚಿಸಿದೆ. ಅತ್ಯಂತ ಕಡಿಮೆ ನೀರು ಬಿಡಲು ಸೂಚಿಸಿದರೂ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿದೆ. CWRC ಆದೇಶ ಪಾಲನೆ ಮಾಡದಿರುವುದು ಸುಪ್ರೀಂಕೋರ್ಟ್ (Supreme Court) ಆದೇಶದ ಉಲ್ಲಂಘನೆ ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಹಸ್ತಾಂತರವಾದ ಸ್ಪೇನ್‌ನ C-295 ಮಿಲಿಟರಿ ವಿಮಾನ – ಏನಿದರ ವಿಶೇಷ?

    ಕಾವೇರಿ ಜಲಾನಯನದಿಂದ 6.75 ಟಿಎಂಸಿ ಮಾತ್ರ ಕುಡಿಯುವ ನೀರಿಗೆ ಬಳಕೆ ಮಾಡಬೇಕು. ಕುಡಿಯುವ ನೀರು ಹೊರತುಪಡಿಸಿ 27 ಟಿಎಂಸಿ ನೀರು ಉಳಿಯಲಿದೆ. ಆದರೆ ಕರ್ನಾಟಕ ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರನ್ನು ವಂಚಿಸಿದೆ. ರೈತರ ಕಲ್ಯಾಣಕ್ಕೆ ಅಡ್ಡಿಯಾಗುವ ಇಂತಹ ನಿರ್ಧಾರಗಳನ್ನು ತಮಿಳುನಾಡು ಸರ್ಕಾರ ಒಪ್ಪುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕದ ಬಳಿಕ ತಮಿಳುನಾಡಿನಲ್ಲಿ ಐಟಿ ದಾಳಿ

    ಕರ್ನಾಟಕದ ಬಳಿಕ ತಮಿಳುನಾಡಿನಲ್ಲಿ ಐಟಿ ದಾಳಿ

    -ಡಿಎಂಕೆ ಖಜಾಂಜಿ ಮೇಲೆ ಐಟಿ ಕಣ್ಣು

    ಚೆನ್ನೈ: ಲೋಕಸಭಾ ಹೊತ್ತಿನಲ್ಲಿಯೇ ಕರ್ನಾಟಕದ ಬಳಿಕ ತಮಿಳುನಾಡಿನಲ್ಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ಕಟ್ಟಾಡಿಯಲ್ಲಿರುವ ಡಿಎಂಕೆ ಖಜಾಂಚಿ ದೊರೈ ಮುರುಗನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಜೊತೆಗೆ ಸೇರಿ ಚುನಾವಣಾ ಅಧಿಕಾರಿಗಳು ಬೆಳಗ್ಗೆ ದಾಳಿ ನಡೆಸಿದ್ದಾರೆ.

    ದೊರೈ ಮುರುಗನ್ ನಿವಾಸದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಚುನಾವಣಾ ಆಯೋಗಕ್ಕೆ ಸಿಕ್ಕಿತ್ತು. ಹೀಗಾಗಿ ಐಟಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ರಾತ್ರಿ ದೊರೈ ಮುರುಗನ್ ಅವರ ಮನೆಗೆ ಆಗಮಿಸಿದ್ದರು. ಈ ವೇಳೆ ದೊರೈ ಮುರುಗನ್, ಪುತ್ರ (ವೆಲ್ಲೋರ್) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನೆಯಲ್ಲಿದ್ದರು ಎಂದು ವರದಿಯಾಗಿದೆ.

    ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ ಎರಡು ಗಂಟೆಗೆ ಬಳಿಕ ಬಂದ ಡಿಎಂಕೆ ಪಕ್ಷದ ಕಾನೂನು ತಂಡವು, ಸರ್ಚ್ ವಾರಂಟ್ ನೀಡುವಂತೆ ಕೇಳಿದ್ದರು. ಜೊತೆಗೆ ತನಿಖೆಯನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದರು. ಇದರಿಂದಾಗಿ ನಿನ್ನೆ ರಾತ್ರಿ ಕಾರ್ಯಾಚರಣೆ ಕೈಬಿಟ್ಟಿದ್ದ ತಂಡವು ಇಂದು ಬೆಳಂಬೆಳಗ್ಗೆ ಮತ್ತೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ.

    ಐಟಿ ಅಧಿಕಾರಿಗಳ ಐದು ತಂಡಗಳು ದೊರೈ ನಿವಾಸ ಸೇರಿದಂತೆ ಕಿಂಗ್ಸ್ ಟನ್ ಎಂಜಿನಿಯರಿಂಗ್ ಕಾಲೇಜ್, ಬಿಎಡ್ ಕಾಲೇಜ್ ಮತ್ತು ಫಾರ್ಮಹೌಸ್ ಮೇಲೂ ದಾಳಿ ನಡೆಸಿವೆ. ಇದಕ್ಕೆ ಡಿಎಂಕೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಭದ್ರತೆಯ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

    ಐಟಿ ದಾಳಿಯು ರಾಜಕೀಯ ಪ್ರೇರಿತವಾಗಿದೆ. ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಆರಕ್ಕೊನಮ್ ಲೋಕಸಭಾ ವ್ಯಾಪ್ತಿಯಲ್ಲಿ ಶೋಧ ಕಾರ್ಯಕ್ಕೆ ವಾರಂಟ್ ತಂದು ವೆಲ್ಲೋರ್ ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಎಂಕೆ ಕಾನೂನು ವಿಭಾಗದ ಜಂಟಿ ಕಾರ್ಯದರ್ಶಿ ಪರಂದಾಮನ್ ದೂರಿದ್ದಾರೆ.