Tag: Dunki

  • ಒಟಿಟಿಗೆ ಬಂತು ಶಾರುಖ್ ಖಾನ್ ನಟನೆಯ ಡಂಕಿ

    ಒಟಿಟಿಗೆ ಬಂತು ಶಾರುಖ್ ಖಾನ್ ನಟನೆಯ ಡಂಕಿ

    ಡಿಸೆಂಬರ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ ಶಾರುಖ್ ಖಾನ್ (Shahrukh Khan) ನಟನೆಯ ಡಂಕಿ ಸಿನಿಮಾ ಇದೀಗ ಒಟಿಟಿಗೂ (OTT)  ಪ್ರವೇಶ ಮಾಡಿದೆ. ಪ್ರೇಮಿಗಳ ದಿನದಂದು ಮಧ್ಯ ರಾತ್ರಿ 12 ಗಂಟೆಯಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್ ನಲ್ಲಿ ಅಷ್ಟೇನೂ ಸದ್ದು ಮಾಡದ ಡಂಕಿಗೆ ಒಟಿಟಿಯಲ್ಲಿ ಹೇಗೆ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    ಡಂಕಿ (Dunki) ಕ್ಲಾಸ್​ ಸಿನಿಮಾ ಆದ್ದರಿಂದ ಬಾಕ್ಸ್ ಆಫೀಸಿನಲ್ಲಿ ನಿಧಾನಗತಿಯಲ್ಲಿ ಕಲೆಕ್ಷನ್​ ಮಾಡಿತ್ತು. ಬಿಡುಗಡೆಯಾದ ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್​  305 ಕೋಟಿ ರೂಪಾಯಿ ಆಗಿದ್ದು, ಭಾರತದಲ್ಲಿಯೇ 150 ಬಾಚಿಕೊಂಡಿತ್ತು. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿತ್ತು. ಶಾರುಖ್ ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು.

    ‘ಡಂಕಿ’ ಸಿನಿಮಾದಲ್ಲಿ ಶಾರುಖ್​​ ಖಾನ್​ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ

    ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬಿನೇಷನ್ ಅಲ್ಪಮಟ್ಟಿಗೆ  ವರ್ಕೌಟ್ ಆಗಿತ್ತು.

  • ಹೊಸ ರೆಕಾರ್ಡ್ ಬರೆದ ಬಾಲಿವುಡ್ ಕಿಂಗ್ ಖಾನ್

    ಹೊಸ ರೆಕಾರ್ಡ್ ಬರೆದ ಬಾಲಿವುಡ್ ಕಿಂಗ್ ಖಾನ್

    ಕಿಂಗ್ ಈಸ್ ಆಲ್ ವೆಸ್ ಕಿಂಗ್. ಹೀಗಂತ ನಾವ್ ಹೇಳ್ತಿಲ್ಲ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಹೆಮ್ಮೆಯಿಂದ ಕೂಗುತ್ತಿದ್ದಾರೆ. ಅದಕ್ಕೆ ಕಾರಣ ಕಿಂಗ್ ಖಾನ್ (King Khan) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. 2023ರಲ್ಲಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕೀರ್ತಿ ಶಾರುಖ್ ಗೆ ಸಲ್ಲುತ್ತದೆ.

    ಡಂಕಿ (Dunki), ಜವಾನ್ ಹಾಗೂ ಪಠಾಣ್ ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಬಾದ್ ಷಾಗೆ ಸೇರಿದೆ. ಬರೀ ಕಲೆಕ್ಷನ್ ಅಷ್ಟೇ ಅಲ್ಲ ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಎಂಟು ಕೋಟಿ ಮಂದಿ. ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ಸರಿ..ಜವಾನ್ ಚಿತ್ರದ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ, ಡಂಕಿ 1 ಕೋಟಿ..ಈ ಸಾಧನೆ ಮಾಡಿದ ಮೊದಲ ಬಾಲಿವುಡ್ ತಾರೆ ಶಾರುಖ್.

    2023ರಲ್ಲಿ ಜವಾನ್ ಹಾಗೂ‌ ಪಠಾಣ್ ‌ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಅದಕ್ಕೆ ಡಂಕಿ ಕೂಡ ಸೇರ್ಪಡೆಯಾಯಿತು. 2023ರ ಆರಂಭದಲ್ಲಿ ಪಠಾಣ್ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತು. ಈ ಚಿತ್ರ ಹಿಂದಿ ಬೆಲ್ಟ್ ನಲ್ಲಿಯೇ 524 ಕೋಟಿ ಬಾಚಿತ್ತು. ಭಾರತಾದ್ಯಂತ 545 ಕೋಟಿ‌ ಲೂಟಿ ಮಾಡಿದ್ದ ಪಠಾಣ್ ಒಟ್ಟಾರೆ ವಿಶ್ವಾದ್ಯಂತ 1055 ಕೋಟಿ ಗಳಿಕೆ ಕಂಡಿತ್ತು. ಆ ನಂತರ  ಜೂನ್ ನಲ್ಲಿ ತೆರೆಕಂಡ ಜವಾನ್, ಹಿಂದಿ ಚಿತ್ರರಂಗದಲ್ಲಿ 643 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ಲೂಟಿ ಮಾಡಿತ್ತು. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ಗಳಿಕೆ ಮಾಡಿತ್ತು.

    ಡಂಕಿ ಸಿನಿಮಾಗೆ ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಕತೆಯ ಆಯ್ಕೆಯಲ್ಲಿ ಪ್ರತಿಬಾರಿ ನಿರ್ದೇಶಕ ರಾಜ್ಕುಮಾರ್ ಹಿರಾನಿ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ.

     

    ಅದೇ ರೀತಿ ಈ ಚಿತ್ರದಲ್ಲಿ ಕೆಲಸ ಅರಸಿ ಅಕ್ರಮವಾಗಿ ದೇಶಗಳ ಗಡಿ ದಾಟುವವರ ಕಥೆಯನ್ನು ಡಂಕಿ ಮೂಲಕ ತೋರಿಸಿದ್ದಾರೆ. ‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.

  • ‘ಡಂಕಿ’ ಬಾಕ್ಸಾಫೀಸಿನ ಲೆಕ್ಕಾಚಾರ: 7 ದಿನದಲ್ಲಿ ಗಳಿಸಿದ್ದೆಷ್ಟು?

    ‘ಡಂಕಿ’ ಬಾಕ್ಸಾಫೀಸಿನ ಲೆಕ್ಕಾಚಾರ: 7 ದಿನದಲ್ಲಿ ಗಳಿಸಿದ್ದೆಷ್ಟು?

    ಬಾಲಿವುಡ್ (Bollywood) ಬಾದ್ ಷಾ ಶಾರುಖ್​ ಖಾನ್​ (Shah Rukh Khan) ಅಭಿನಯದ ‘ಡಂಕಿ’  (Dunki) ಸಿನಿಮಾ ಬಿಡುಗಡೆಯಾಗಿ 7 ದಿನ ಕಳೆದಿದೆ. ಡಿಸೆಂಬರ್​ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ಕ್ಲಾಸ್​ ಸಿನಿಮಾ ಆದ್ದರಿಂದ ಡಂಕಿ ನಿಧಾನಗತಿಯಲ್ಲಿ ಕಲೆಕ್ಷನ್​ ಮಾಡಿದೆ. ಒಟ್ಟು ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್​  305 ಕೋಟಿ ರೂಪಾಯಿ ಆಗಿದ್ದು, ಭಾರತದಲ್ಲಿಯೇ 150 ಬಾಚಿಕೊಂಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

    ಶಾರುಖ್ ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರಂತೆ ಡಂಕಿ ಸಿನಿಮಾವೂ ಅದ್ಭುತ ಪ್ರದರ್ಶನ ಕಾಣುತಿದೆ. ರಿಲೀಸ್ ಆದ ಮೊದಲ ದಿನವೇ 29 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಹಂತ ಹಂತವಾಗಿ  ಒಳ್ಳೆ ಮೊತ್ತವನ್ನೇ ತನ್ನದಾಗಿಸಿಕೊಂಡಿದೆ.

    ‘ಡಂಕಿ’ ಸಿನಿಮಾದಲ್ಲಿ ಶಾರುಖ್​​ ಖಾನ್​ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.

    ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬಿನೇಷನ್ ವರ್ಕೌಟ್ ಆಗಿದ್ದು, ಪ್ರೇಕ್ಷಕರು ಈ ಜೋಡಿಯ ಸಿನಿಮಾಗೆ ಜೈಕಾರ ಹಾಕುತ್ತಿದ್ದಾರೆ.

  • ವಾರಂತ್ಯಕ್ಕೆ ‘ಡಂಕಿ’ ಗಳಿಸಿದ್ದು ಎಷ್ಟು?: ನಿರ್ಮಾಣ ಸಂಸ್ಥೆ ಹೇಳಿದ್ದೇನು?

    ವಾರಂತ್ಯಕ್ಕೆ ‘ಡಂಕಿ’ ಗಳಿಸಿದ್ದು ಎಷ್ಟು?: ನಿರ್ಮಾಣ ಸಂಸ್ಥೆ ಹೇಳಿದ್ದೇನು?

    ಬಾಲಿವುಡ್ ನ ಮತ್ತೊಂದು ಭಾರೀ ಬಜೆಟ್ ಸಿನಿಮಾ ಡಂಕಿ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಸಲಾರ್ ಎದುರು ಈ ಸಿನಿಮಾ ಅಬ್ಬರಿಸುತ್ತಾ ಅಥವಾ ಸೋಲು ಕಾಣುತ್ತಾ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಲಾರ್ ಮುಂದೆ ತುಸು ಮುಗ್ಗರಿಸಿದ್ದರೂ, ತನ್ನ ಪಾಡಿಗೆ ತಾನು ತಣ್ಣಗೆ ಗೆಲುವಿನತ್ತ ಹೆಜ್ಜೆ ಹಾಕಿದೆ. ಡಂಕಿ ಸಿನಿಮಾದ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಂತೆ, ವಾರಂತ್ಯಕ್ಕೆ ಡಂಕಿ ಗಳಿಸಿದ್ದು 211.13 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ.

    ಒಂದು ಕಡೆ ಸಿನಿಮಾ ಕೋಟಿ ಕೋಟಿ ಗಳಿಸುತ್ತಿದ್ದರೆ, ಮತ್ತೊಂದು ಕಡೆ ಪೈರಸಿ ಹಾವಳಿ ಕೂಡ ಚಿತ್ರದ ಹಿನ್ನೆಡೆಗೆ ಕಾರಣವಾಗುತ್ತಿದೆ. ಡಂಕಿ (Dunki) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ (Piracy) ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ.

    ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು ಮಾತ್ರವಲ್ಲ, ಮುಕ್ಕಾಲು ಭಾಗ ಸಿನಿಮಾವನ್ನು ಎಕ್ಸ್ (ಟ್ವೀಟರ್) ನಲ್ಲಿ ಲೈವ್ ಕೂಡ ಮಾಡಿರುವ ವಿಷಯ ಹರಿದಾಡುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಪೈರಸಿಯನ್ನು ತೆಗೆದು ಹಾಕಿಸುವಲ್ಲಿ ನಿರ್ಮಾಪಕರು ಹರಸಾಹಸ ಪಡುತ್ತಿದ್ದಾರೆ.

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳಿದ್ದಾರೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ.

     

    ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ.

  • ದಕ್ಷಿಣ ಭಾರತದ ಪಿವಿಆರ್ – ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ `ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರ ಬಿಡುಗಡೆ ಮಾಡದಿರಲು ಹೊಂಬಾಳೆ ಫಿಲ್ಮ್ಸ್ ನಿರ್ಧಾರ

    ದಕ್ಷಿಣ ಭಾರತದ ಪಿವಿಆರ್ – ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ `ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರ ಬಿಡುಗಡೆ ಮಾಡದಿರಲು ಹೊಂಬಾಳೆ ಫಿಲ್ಮ್ಸ್ ನಿರ್ಧಾರ

    ಹೊಂಬಾಳೆ ಫಿಲ್ಮ್ಸ್‌ನ (Hombale Films) ಮಹತ್ವಾಕಾಂಕ್ಷೆಯ ಚಿತ್ರವಾದ `ಸಲಾರ್ ಪಾರ್ಟ್ 1: ಸೀಸ್‍ಫೈರ್’ (Salaar: Part 1 – Ceasefire), ಡಿ.22ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್ – ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡದಿರುವುದಕ್ಕೆ ಹೊಂಬಾಳೆ ಫಿಲ್ಮ್ಸ್ ತೀರ್ಮಾನಿಸಿದೆ.

    ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿರುವುದು ಶಾರುಖ್ ಖಾನ್ ಅಭಿನಯದ `ಡಂಕಿ’ (Dunki) ಚಿತ್ರ ಡಿ.21ರಂದು ಬಿಡುಗಡೆಯಾಗುತ್ತಿರುವುದು. ಸಲಾರ್ ಪಾರ್ಟ್ 1: ಸೀಸ್‍ಫೈರ್ ಜೊತೆಗೆ ಕ್ಲಾಶ್ ಆಗಲಿದೆ. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಡಂಕಿ ಚಿತ್ರ ವಿತರಕರು ಮಾತ್ರ ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.

    ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡಿತೋ, ಆಗ `ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್‌ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿದರು. ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್‍ಗಳಲ್ಲಿ `ಸಲಾರ್’ಗಿಂತ `ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್‌ಗಳು ಸಹ ಒಪ್ಪಿವೆ.

    ತಮ್ಮ ಚಿತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿರುವ ಹೊಂಬಾಳೆ ಫಿಲ್ಮ್ಸ್ `ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್‍ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿದೆ. ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೆಪೊಲಿಸ್ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

    `ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನಡಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ಶಾರುಖ್ ನಟನೆಯ ‘ಡಂಕಿ’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್

    ಶಾರುಖ್ ನಟನೆಯ ‘ಡಂಕಿ’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್

    ಡಂಕಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಶಾರುಖ್ ಖಾನ್ (Shah Rukh Khan) ಹಾಗೂ ರಾಜ್ ಕುಮಾರ್ ಹಿರಾನಿ ಜೋಡಿಯ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಇನ್ನೇನೂ ಡಂಕಿ ರಿಲೀಸ್ ಗೆ ದಿನಗಣೆಯಷ್ಟೇ ಬಾಕಿ ಉಳಿದಿದ್ದು, ಚಿತ್ರತಂಡ ಪ್ರಮೋಷನ್ ಅಖಾಡಕ್ಕೆ ಧುಮುಕಿದೆ.

    ಡಂಕಿ ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ಟೀ ಸೀರಿಸ್ ಯೂಟ್ಯೂಬ್ ನಲ್ಲಿ ಹಾರ್ಡಿ ಹಾಗೂ ಮನುವಿನ ಪ್ರೇಮಗೀತೆ ಅನಾವರಣಗೊಂಡಿದೆ. ಲುಪ್ ಪುಟ್ ಗಯಾ ಎಂಬ ಸಾಹಿತ್ಯದ ಹಾಡಿಗೆ ಶಾರುಖ್ ಖಾನ್ ತಾಪ್ಸಿ ಹೆಜ್ಜೆ ಹಾಕಿದ್ದಾರೆ. ಮೆಲೋಡಿ ಮ್ಯೂಸಿಕ್ ಮಾಂತ್ರಿಕ ಪ್ರೀತಮ್ ಸಂಗೀತ, ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ ಬರೆದ ಸಾಹಿತ್ಯದ ರೋಮ್ಯಾಂಟಿಕ್ ಸಿಂಗಿಂಗ್ ಅರಿಜಿತ್ ಸಿಂಗ್ ಅವರ ಭಾವಪೂರ್ಣ ಗಾಯನ ಕೇಳುಗರನ್ನು ಮೋಡಿ ಮಾಡ್ತಿದೆ. ಗಣೇಶ್ ಆಚಾರ್ಯ ಲುಪ್ ಪುಟ್ ಗಯಾ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

    ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  • ತಾಪ್ಸಿ ಜೊತೆ ಶಾರುಖ್ ಖಾನ್ ರೋಮ್ಯಾನ್ಸ್

    ತಾಪ್ಸಿ ಜೊತೆ ಶಾರುಖ್ ಖಾನ್ ರೋಮ್ಯಾನ್ಸ್

    ಡಂಕಿ (Dunki) ಸಿನಿಮಾ ಮೂಲಕ ಶಾರುಖ್ ಖಾನ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ‘ಡಂಕಿ’ ಡ್ರಾಪ್ 1 ಝಲಕ್ ಕಿಕ್ ಕೊಟ್ಟಿದೆ. ಮೊದಲ ಹಾಡನ್ನು (Song)  ಡ್ರಾಪ್ 2 ಎಂದು ಚಿತ್ರತಂಡ ರಿಲೀಸ್ ಮಾಡಲು ಹೊರಟಿದೆ.

    ‘ಡಂಕಿ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳ ಕಣ್ಣು ಅರಳಿದೆ. ಕಳೆದ ಎರಡು ಸಿನಿಮಾಗಳಲ್ಲಿ ಶಾರುಖ್ ಖಾನ್ (Shah Rukh Khan) ಅನ್ನು ಹೆಚ್ಚಾಗಿ ಆಕ್ಷನ್ ಅವತಾರದಲ್ಲಿಯೇ ನೋಡಿದ್ದರು. ಹೀಗಾಗಿ ರೊಮ್ಯಾಂಟಿಕ್ ಲುಕ್‌ನಲ್ಲಿ ನೋಡುವುದಕ್ಕೆ ಕಾತುರರಾಗಿದ್ದಾರೆ.

    ‘ಡಂಕಿ’ ಸಿನಿಮಾದ ಈ ರೊಮ್ಯಾಂಟಿಕ್ ಸಾಂಗ್ ಇಂದು ರಿಲೀಸ್ ಆಗಲಿದೆ. ‘ಲುಪ್ ಪುಟ್ ಗಯಾ..’ ಅನ್ನೋ ಈ ಮೇಲೋಡಿ ಹಾಡನ್ನು ಕೇಳುವುದಕ್ಕೆ ಸಂಗೀತ ಆಸಕ್ತರು ಕಾದು ಕೂತಿದ್ದಾರೆ. ಬಾಲಿವುಡ್‌ನ ಜನಪ್ರಿಯರ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು (Taapsee) ರೊಮ್ಯಾಂಟಿಕ್ ಸಾಂಗ್ ಗೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

    ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ರಾಜಕುಮಾರ್ ಹಿರಾನಿ (Rajkumar Hirani) ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ, ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಇನ್ನೇನು ಡಿಸೆಂಬರ್‌ ಕೊನೇ ವಾರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

  • ಶಾರುಖ್ ನಟನೆಯ ‘ಡಂಕಿ’ ಚಿತ್ರದ ಫಸ್ಟ್ ಸಾಂಗ್ ಎಂಟ್ರಿಗೆ ಡೇಟ್ ಫಿಕ್ಸ್

    ಶಾರುಖ್ ನಟನೆಯ ‘ಡಂಕಿ’ ಚಿತ್ರದ ಫಸ್ಟ್ ಸಾಂಗ್ ಎಂಟ್ರಿಗೆ ಡೇಟ್ ಫಿಕ್ಸ್

    ಶಾರುಖ್‌ ಖಾನ್‌ (Shah Rukh Khan)  ನಟನೆಯ ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್‌ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಡಂಕಿ ಸಿನಿಮಾದ ಮೊದಲ ಹಾಡು (Song) ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

    ಡಂಕಿ (Dunki) ಸಿನಿಮಾದ ರೋಮ್ಯಾಂಟಿಕ್ ನಂಬರ್ ಇದೇ ತಿಂಗಳ‌ 22ರಂದು ರಿಲೀಸ್ ಆಗಲಿದೆ. ಲಪ್ ಪಟ್ ಗಯಾ ಎಂಬ ಸಾಹಿತ್ಯವುಳ್ಳ ಸುಮಧುರ ಹಾಡಿಗೆ ಪ್ರೀತಂ ಚಕ್ರವರ್ತಿ ಟ್ಯೂನ್ ಹಾಕಿದ್ದಾರೆ. ಹೇಗಿರಲಿ ಡಂಕಿ ಮೊದಲ ಗಾನಬಜಾನ ಎಂಬ ನಿರೀಕ್ಷೆ ಹೆಚ್ಚಿಸಿದೆ.

    ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ರಾಜಕುಮಾರ್ ಹಿರಾನಿ (Raj Kumar Hirani) ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ, ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಇನ್ನೇನು ಡಿಸೆಂಬರ್‌ ಕೊನೇ ವಾರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

  • ‘ಡಂಕಿ’ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಹುಟ್ಟು ಹಬ್ಬದ ಸ್ಪೆಷಲ್ ಏನು?

    ‘ಡಂಕಿ’ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಹುಟ್ಟು ಹಬ್ಬದ ಸ್ಪೆಷಲ್ ಏನು?

    ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್ಸ್..ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು (Rajkumar Hirani) ಜನ್ಮದಿನದ ಶುಭಾಶಯ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವು ಹಿರಾನಿ ಡಂಕಿ (Dunki) ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

    ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ ಸಿನಿಮಾ ಅನೌನ್ಸ್ ಮಾಡಿರುವುದು ಗೊತ್ತೇ ಇದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

    ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ (Shahrukh Khan), ಮನು ಪಾತ್ರದಲ್ಲಿ ತಾಪ್ಸಿ ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.

    ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.  ನಾಯಕನಾಗಿ ಶಾರುಖ್ ಖಾನ್ ನಟಿಸಿದ್ದು, ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಅತೀ ದೊಡ್ಡ ತಾರಾಬಳಗದ `ಡಂಕಿ’ ಸಿನಿಮಾ ವಿಶ್ವದಾದ್ಯಂತ ಕಣಕ್ಕಿಳಿಯಲು ಸಜ್ಜಾಗಿದ್ದು, `ಸಲಾರ್’ ಎದುರು ಸ್ಪರ್ಧಿಸಲು ಸಿದ್ದವಾಗಿದೆ. ಇದೇ ಡಿಸೆಂಬರ್ 22ರಂದು ಮೋಸ್ಟ್ ಅವೈಟೆಡ್ ಡಂಕಿ ತೆರೆಗಪ್ಪಳಿಸಲಿದೆ.

  • ಶಾರುಖ್ ಅಭಿಮಾನಿಗಳಿಗೆ ಗಿಫ್ಟ್ : ದೀಪಾವಳಿಗೆ ‘ಡಂಕಿ’ ಹೊಸ ಪೋಸ್ಟರ್

    ಶಾರುಖ್ ಅಭಿಮಾನಿಗಳಿಗೆ ಗಿಫ್ಟ್ : ದೀಪಾವಳಿಗೆ ‘ಡಂಕಿ’ ಹೊಸ ಪೋಸ್ಟರ್

    ಬಾಲಿವುಡ್ ಕಿಂಗ್ ಖಾನ್ ನಟನೆಯ ಡಂಕಿ (Dunki) ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ (Shahrukh Khan) ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ದೀಪಾವಳಿ ಹಬ್ಬದ ಸ್ಪೆಷಲ್ ಡಂಕಿ ಸಿನಿಮಾದ ಎರಡು ಹೊಸ ಪೋಸ್ಟರ್ (Poster) ರಿಲೀಸ್ ಮಾಡಲಾಗಿದೆ.

    ಪ್ರೀತಿ, ನಗು ಹಾಗೂ ಸ್ನೇಹ ತುಂಬಿರುವ ಎರಡು ಹೊಸ ಪೋಸ್ಟರ್ ನಲ್ಲಿ ಶಾರುಖ್ ಸ್ನೇಹ ಬಳಗವನ್ನು ಪರಿಚಯ ಮಾಡಿಕೊಡಲಾಗಿದೆ. ಕಿಂಗ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಹಾಗೂ ಅನಿಲ್ ಗ್ರೋವರ್ ಒಟ್ಟಿಗೆ ನಿಂತು ನಗು ಬೀರಿದ್ದಾರೆ. ಎರಡು ಪೋಸ್ಟರ್ಸ್ ಆಕರ್ಷಕವಾಗಿವೆ.

    ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.

    ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ (Rajkumar Hirani) ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.  ಈ ಕ್ರಿಸ್‌ಮಸ್‌  ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ.