ಚಂದನವನದ ಬ್ಲ್ಯಾಕ್ ಕೋಬ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಲಗ ಚಿತ್ರದ ಸಕ್ಸಸ್ ನಂತರ ಮತ್ತೆ ಕೌಟುಂಬಿಕ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ತಮ್ಮ ಮುದ್ದು ಮಗಳು ಮೋನಿಕಾ ಅವರಿಗೆ ಭರ್ಜರಿ ಗಿಫ್ಟ್ ನೀಡಿ, ನೆಟ್ಟಿಗರ ಗಮನ ಸೆಳೆದಿದ್ದಾರೆ.

ದುನಿಯಾ ವಿಜಯ್ `ಸಲಗ’ ಚಿತ್ರದ ಮೂಲಕ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿಯೂ ಕೂಡ ಸಕ್ಸಸ್ ಕಂಡವರು. ಇದೀಗ ಭೀಮ ಚಿತ್ರದ ಜತೆಗೆ ಟಾಲಿವುಡ್ ಅಖಾಡದಲ್ಲೂ ವಿಜಯ್ ಸೌಂಡ್ ಮಾಡ್ತಿದ್ದಾರೆ. ಈಗ ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಕಾರೋಂದನ್ನ ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ:ರಾಜಮೌಳಿ ಶಿಷ್ಯನಿಂದ ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕೃತಿ ಆಧರಿಸಿದ ಸಿನಿಮಾ

ಕುಟುಂಬದಲ್ಲಿ ಅದೇನೇ ಸಮಸ್ಯೆ ಇದ್ದರು ಮಕ್ಕಳ ಪಾಲಿಗೆ ಬೆಸ್ಟ್ ಅಪ್ಪನಾಗಿ, ಮಕ್ಕಳ ಖುಷಿಗೆ ವಿಜಯ್ ಶ್ರಮಿಸುತ್ತಿದ್ದಾರೆ. 3 ಮಕ್ಕಳ ತಂದೆಯಾಗಿರುವ ವಿಜಯ್ ಈಗ ವೈಯಕ್ತಿಕ ವಿಚಾರವಾಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಕಾರು ಗಿಫ್ಟ್ ಮಾಡಿ, ಮುದ್ದು ಮಗಳ ಖುಷಿಗೆ ವಿಜಯ್ ಪಾತ್ರರಾಗಿದ್ದಾರೆ. ಅಪ್ಪ ಮತ್ತು ಕಾರಿನ ಜತೆಯಿರುವ ಫೋಟೋವನ್ನ ಮೋನಿಕಾ ಶೇರ್ ಮಾಡಿ, ಲವ್ ಯೂ ಅಪ್ಪ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



ಸದ್ಯ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿರೋ ಶ್ರುತಿಗೆ ನಿರ್ದೇಶಕ ಗೋಪಿಚಂದ್ ಮತ್ತು ಟೀಮ್ ಸ್ವಾಗತ ಕೋರಿದೆ. ಸೆಟ್ ಬಂದಿರೋ ಸಲಾರ್ ಬೆಡಗಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಟಿ ಶ್ರುತಿ ಭಾಗದ ಚಿತ್ರೀಕರಣ ಭರದಿಂದ ಆಗುತ್ತಿದೆ.














`ಅಖಂಡ’ ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಬರಲು ಬಾಲಯ್ಯ ಸಜ್ಜಾಗಿದ್ದಾರೆ. ಇನ್ನು ಗೋಪಿಚಂದ್ ಮಲಾನೇನಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಬಾಲಯ್ಯ ನಟನಯೆ 107ನೇ ಚಿತ್ರಕ್ಕೆ `ಅಣ್ಣಗಾರು’ ಟೈಟಲ್ ಕೂಡ ಫಿಕ್ಸ್ ಫೈನಲ್ ಆಗಿದೆ. ಬಾಲಯ್ಯಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಇದನ್ನೂ ಓದಿ:
`ಅಣ್ಣಗಾರು’ ಪವರ್‌ಫುಲ್ ಟೈಟಲ್ ಮೂಲಕ ಬಾಲಯ್ಯ ಮತ್ತು ದುನಿಯಾ ವಿಜಯ್ ಬರುತ್ತಿದ್ದಾರೆ. ಸದ್ಯದಲ್ಲೇ ಚಿತ್ರತಂಡದಿಂದ ಟೈಟಲ್ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ. ಲೆಜೆಂಡರಿ ಆಕ್ಟರ್ ಬಾಲಯ್ಯ ಮತ್ತು ದುನಿಯಾ ವಿಜಯ್ ನಟನೆಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.





