Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

`ಅಖಂಡ’ ಚಿತ್ರದ ಸಕ್ಸಸ್ ನಂತರ `ವೀರಸಿಂಹ ರೆಡ್ಡಿ’ (Veerasimha Reddy) ಸಕ್ಸಸ್ ಅಲೆಯಲ್ಲಿ ನಟ ಬಾಲಯ್ಯ ತೇಲುತ್ತಿದ್ದಾರೆ. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದೆ. ನಟಿ ಹನಿ ರೋಸ್ (Honey Rose) ಜೊತೆ ತೆಗೆದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಟಾಲಿವುಡ್ (Tollywood) ಅಂಗಳದಲ್ಲಿ ಸದ್ಯ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರದ್ದೇ ಸದ್ದು ಸುದ್ದಿ. `ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಖಡಕ್ ಆಗಿ ಅಬ್ಬರಿಸಿದ್ದರು. ದುನಿಯಾ ವಿಜಯ್ ವಿಲನ್ ಆಗಿ ಟಕ್ಕರ್ ಕೊಟ್ಟಿದ್ದರು. ಜ.12ಕ್ಕೆ ಸಿನಿಮಾ ತೆರೆಗೆ ಅಬ್ಬರಿಸಿತ್ತು. ರಿಲೀಸ್ ಕೆಲವೇ ದಿನಕ್ಕೆ 124 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಿರುವಾಗ ಚಿತ್ರದ ನಾಯಕಿ ಹನಿ ರೋಸ್ ಜೊತೆ ಬಾಲಯ್ಯ (Balayya) ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ
ಸದ್ಯ ಈ ಪಾರ್ಟಿಯಲ್ಲಿ ಬಾಲಕೃಷ್ಣ ಹಾಗೂ ನಟಿ ಹನಿ ರೋಸ್ ಕೈ ಬಳಸಿ ವಿಭಿನ್ನ ಶೈಲಿಯಲ್ಲಿ ಕುಡಿಯುತ್ತಿರುವ ಫೋಟೊವೊಂದು ವೈರಲ್ ಆಗಿದೆ. ಈ ಫೋಟೋ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನು ನಟಿ ಹನಿ ರೋಸ್ ಮೂಲತಃ ಮಲಯಾಳಂನವರಾಗಿದ್ದು, `ವೀರಸಿಂಹ ರೆಡ್ಡಿ’ ಮೂಲಕ ಟಾಲಿವುಡ್ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ಹನಿ ರೋಸ್ ಬಾಲಕೃಷ್ಣ ಪತ್ನಿ ಮೀನಾಕ್ಷಿ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಸಕ್ಸಸ್ ಪಾರ್ಟಿಯಲ್ಲಿ ನೇರಳೆ ಬಣ್ಣದ ಗೌನ್ ಧರಿಸಿದ್ದ ನಟಿ ಹನಿ ರೋಸ್ ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದು, ಈ ಚಿತ್ರಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಅನಿಲ್ ರವಿಪುಡಿ (Anil Ravipudi) ನಿರ್ದೇಶಿಸಲಿರುವ ಬಾಲಕೃಷ್ಣ ನಟನೆಯ ಮುಂದಿನ ಚಿತ್ರಕ್ಕೂ ಸಹ ಹನಿ ರೋಸ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

`ವೀರ ಸಿಂಹ ರೆಡ್ಡಿ’ (Veera Simha Reddy) ಗೆಲುವಿನ ಖುಷಿಯಲ್ಲಿರುವ `ಸಲಗ’ ಖ್ಯಾತಿಯ ದುನಿಯಾ ವಿಜಯ್ (Duniya Vijay) ಇಂದು ತಮ್ಮ 49 ವರ್ಷದ ಹುಟ್ಟುಹಬ್ಬವನ್ನು (Birthday) ಮೊದಲ ಬಾರಿಗೆ ಹುಟ್ಟೂರಿನಲ್ಲಿ, ತಮ್ಮ ತಂದೆ- ತಾಯಿ ಸಮಾಧಿ ಬಳಿ ಅಭಿಮಾನಿಗಳ ಜೊತೆ ಆಚರಿಸಿದ್ದಾರೆ.
ನಟ ದುನಿಯಾ ಇಂದು ತಮ್ಮ ಹುಟ್ಟೂರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿ ತಮ್ಮ ಹೆತ್ತವರ ಸಮಾಧಿ ಬಳಿ ಭರ್ಜರಿಯಾಗಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೊರ ರಾಜ್ಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ದುನಿಯಾ ವಿಜಿಗೆ ಜೈಕಾರ ಹಾಕಿ, ನೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ತಂದೆ ತಾಯಿಯ ಸಮಾಧಿಗೆ ದುನಿಯಾ ವಿಜಿ ಪೂಜೆ ಸಲ್ಲಿಸಿ ಸಾಧು ಸಂತರು ಹಾಗೂ ಸ್ವಾಮೀಜಿಗಳಿಂದ ಆಶೀರ್ವಾದವನ್ನ ಪಡೆದರು. ಹೆತ್ತವರ ಸಮಾಧಿಯ ಬಳಿಯ ನಿರ್ಮಾಣ ಮಾಡಲಾಗಿದ್ದ ವೇದಿಕೆ ದುನಿಯಾ ವಿಜಿ ಎಂಟ್ರಿ ಕೊಡುತ್ತಿದ್ದಂತೆ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಅಭಿಮಾನಿಗಳು ಭೀಮ ಚಿತ್ರದ ಪೋಸ್ಟರ್ ಇರುವ ಕೇಕ್ ತರಿಸಿದ್ದು ಚಿತ್ರದ ನಿರ್ಮಾಪಕರ ಹಾಗೂ ಅಭಿಮಾನಿಗಳ ಜೊತೆಗೂಡಿ ವಿಜಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ:ಪತಿ ಜೊತೆಗಿನ ಲಿಪ್‌ಲಾಕ್ ಫೋಟೋ ಹಂಚಿಕೊಂಡ ʻಕಾಂಚನಾ 2ʼ ನಟಿ ಪೂಜಾ
ಅಭಿಮಾನಿಗಳಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನ ಮಾಡಿದ್ದರು. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಫ್ಯಾನ್ಸ್‌ಗೆ ಚಿಕಿನ್ ಬಿರಿಯಾನಿ, ಚಿಕನ್ ಫ್ರೈ ಮಾಡಿ ತಾವೇ ಕೈಯಾರೆ ಅಭಿಮಾನಿಗಳಿಗೆ ಬಡಿಸಿ ಕೈತುತ್ತು ತಿಂದರು. ಅಭಿಮಾನಿಗಳ ನಟ ದುನಿಯಾ ವಿಜಯ್‌ಗೆ ಕೈತುತ್ತು ತಿನ್ನಿಸಿ ನಟನ ಸಿಂಪ್ಲಿಸಿಟಿ ಕಂಡು ಮತ್ತಷ್ಟು ಖುಷಿಯಾದ್ರು. ವೇದಿಕೆ ನಿರ್ಮಾಣ ಮಾಡಿದ್ದ ಸುತ್ತಲೂ ಭೀಮ ಸಿನಿಮಾ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ದುನಿಯಾ ವಿಜಿ ಸಿನಿಮಾ ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ರು. ಪ್ರತಿವರ್ಷವು ಸಹ ಹುಟ್ಟೂರಿನಲ್ಲಿಯೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡು ಅನ್ನಕೊಟ್ಟ ಅಭಿಮಾನಿಗಳು ಊಟವನ್ನ ಹಾಕುವ ಮೂಲಕ ಅವರ ಜೊತೆ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಬೇಕು ಎಂದು ತಿರ್ಮಾನಿಸಿದ್ದೇನೆ. ಇದು ತಂದೆತಾಯಿ ಇರುವಂತ ಪುಣ್ಯ ಸ್ಥಳ ಹಾಗಾಗಿ ಮುಂದಿನ ದಿನಗಳಲ್ಲಿ ಬರ್ತಡೇ ಸೆಲೆಬ್ರೇಷನ್ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಆಗುತ್ತದೆ ಎಂದು ದುನಿಯಾ ವಿಜಿ ಸಂತಸ ಹಂಚಿಕೊಂಡರು.
ಹನುಮ ವೇಷ ಧರಿಸಿ ಬಂದ ಅಭಿಮಾನಿಯನ್ನ ಕಂಡ ವಿಜಿ ಹತ್ತಿರಕ್ಕೆ ಕರೆದು ಬ್ಯಾರಿಕೇಡ್ ಮೇಲೆ ಕೂರಿಸಿಕೊಂಡು ಹಾರ ಹಾಕಿ ಸನ್ಮಾನ ಮಾಡಿದ್ರು. ಅದೇ ರೀತಿ ವಿಕಲಚೇತನ ಅಭಿಮಾನಿಯೋರ್ವ ಕೈನಲ್ಲಿ ಹಾರ ಹಿಡಿದುಕೊಂಡು ವಿಜಿಗೆ ಹಾಕಲು ಬಂದಾಗ ತಡೆದು ಅದೇ ಹಾರವನ್ನ ಹಾಕಿದ್ರು. ಇನ್ನೂ ಆನೇಕಲ್ ಪಟ್ಟಣದ ಮಣಿ ಎಂಬ ಅಭಿಮಾನಿ ಮೈತುಂಬ ದುನಿಯಾ ವಿಜಿ ಟ್ಯಾಟೂ ಹಾಕಿಸಿಕೊಂಡು ಬಂದು ನೆಚ್ಚಿನ ನಟನಿಗೆ ಬರ್ತಡೇ ವಿಶ್ ಮಾಡಿದ್ರು.

ಎಕರೆಗಟ್ಟಲೇ ಪೆಂಡಲ್ ಹಾಕಿ ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ ಚಿಲ್ಲಿ ಚಿಕನ್ ಸಿದ್ದಪಡಿಸಿದ್ದ ವಿಜಿ, ತಾನೇ ಅಭಿಮಾನಿಗಳಿಗೆ ಉಣಬಡಿಸುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟನ ಕಣ್ತುಂಬಿಕೊಳ್ಳಲು ಸರದಿ ಸಾಲಿನಲ್ಲಿ ಮುಗಿ ಬಿದ್ದು ಶುಭಹಾರೈಸಿ ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವ ಮೂಲಕ ದುನಿಯಾ ವಿಜಯ್ ಗಮನ ಸೆಳೆದಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಸ್ಯಾಂಡಲ್‌ವುಡ್ (Sandalwood) `ಕರಿಯ’ ದುನಿಯಾ ವಿಜಯ್ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸ್ಪೆಷಲ್ ಡೇ ವೇಳೆ ದುನಿಯಾ ವಿಜಯ್ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿವೊಂದು ಹೊರಬಿದ್ದಿದೆ. ಸೂಪರ್ ಸ್ಟಾರ್ ಬಾಲಯ್ಯ (Balayya) ಮುಂದೆ ಅಬ್ಬರಿಸಲು ದುನಿಯಾ ವಿಜಯ್ (Duniya Vijay) ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಚಿತ್ರರಂಗದ `ಸಲಗ’ (Salaga) ದುನಿಯಾ ವಿಜಯ್‌ಗೆ ಯಾವುದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸುವ ಪ್ರತಿಭಾನ್ವಿತ ನಟ, ಆಕ್ಟಿಂಗ್‌ಗೂ ಸೈ ಮತ್ತು ನಿರ್ದೇಶನಕ್ಕೂ ಜೈ ಎನಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ನಡುವೆ ದುನಿಯಾ ವಿಜಯ್ ಬಗ್ಗೆ ಅಚ್ಚರಿಯ ವಿಚಾರವೊಂದು ಸದ್ದು ಮಾಡ್ತಿದೆ.

ಇತ್ತೀಚೆಗಷ್ಟೇ ತೆಲುಗಿನ `ವೀರಸಿಂಹ ರೆಡ್ಡಿ’ (Veera Simha Reddy) ಸಿನಿಮಾದಲ್ಲಿ ಬಾಲಯ್ಯ ಮುಂದೆ ಖಡಕ್ ಆಗಿ ಅಬ್ಬರಿಸಿದ್ದಾರೆ. ಸಿನಿಮಾಗೆ ಪ್ರಶಂಸೆಯ ಸುರಿಮಳೆಯೇ ಹರಿದು ಬರುತ್ತಿದೆ. ಪಕ್ಕದ ರಾಜ್ಯದ ಜೊತೆ ಕರ್ನಾಟಕದಲ್ಲೂ ಈ ಸಿನಿಮಾ ಸದ್ದು ಮಾಡ್ತಿದೆ. ಟಿಕೆಟ್ ಸೋಲ್ಡ್ ಔಟ್ ಆಗುತ್ತಿದೆ. ಇದನ್ನೂ ಓದಿ:`ಕಾಂತಾರ’ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ
ಇನ್ನೂ ಸೂಪರ್ ಸ್ಟಾರ್ ಬಾಲಯ್ಯ ಮುಂದೆ ವಿಲನ್ ಆಗಿ ನಟಿಸಲು 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಕನ್ನಡದ ಹೆಸರಾಂತ ನಟ ದುನಿಯಾ ವಿಜಯ್ (Duniya Vijay), ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಬಂಪರ್ ಲಾಟರಿಯನ್ನೇ ಹೊಡೆದಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹಾಗೂ ಅತೀ ನಿರೀಕ್ಷೆ ಹುಟ್ಟಿಸಿರುವ ಬಾಲಯ್ಯ (Balayya) ನಟನೆಯ ‘ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದಲ್ಲಿ ಅವರು ವಿಲನ್ ಆಗಿ ನಟಿಸಿದ್ದು ಮೊನ್ನೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಅವರನ್ನು ಹಾಡಿ ಹೊಗಳಿದ್ದಾರೆ ಬಾಲಯ್ಯ.

ತೆಲುಗು ಚಿತ್ರೋದ್ಯಮಕ್ಕೆ ದುನಿಯಾ ವಿಜಯ್ ಅವರನ್ನು ಪರಿಚಯಿಸಿದ ರೀತಿಗೆ ಸ್ವತಃ ವಿಜಯ್ ಅವರೇ ಭಾವುಕರಾಗಿದ್ದಾರೆ. ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ಬಾಲಯ್ಯ, ‘ಇವರು ದುನಿಯಾ ವಿಜಯ್. ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ. ನಮ್ಮ ಮೇಲಿನ ಪ್ರೀತಿ, ವಿಶ್ವಾಸಕ್ಕೆ ವಿಲನ್ ಪಾತ್ರವಿದ್ದರೂ, ಮಾಡಿದ್ದಾರೆ. ದೊಡ್ಡ ನಟರು ಹೀಗೆ ಪಾತ್ರಗಳನ್ನು ಒಪ್ಪಿಕೊಳ್ಳುವುದು ನನಗಂತೂ ಅವರ ಮೇಲಿ ಮತ್ತಷ್ಟು ಅಭಿಮಾನ ಹೆಚ್ಚಿಸಿದೆ’ ಎಂದಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್ ಆದಮೇಲೆ ಅವಳ ಬೆಲೆ ರೂಪೇಶ್ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

ಕಾರ್ಯಕ್ರಮದ ವೇದಿಕೆ ಹತ್ತುವ ಮುನ್ನವೂ ವಿಜಯ್ ಹತ್ತಿರಕ್ಕೆ ಬಂದ ಬಾಲಯ್ಯ, ಎರಡ್ಮೂರು ಬಾರಿ ತಬ್ಬಿಕೊಂಡು ಗೌರವ ಸೂಚಿಸಿದರು. ಅತೀ ಆತ್ಮೀಯವಾಗಿಯೇ ವಿಜಯ್ ಜೊತೆ ಮಾತನಾಡಿದರು. ಅಂದಹಾಗೆ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ವಿಜಯ್ ವಿಭಿನ್ನ ಪಾತ್ರ ಮಾಡಿದ್ದಾರಂತೆ. ಸಿನಿಮಾ ಪೂರ್ತಿ ಇರಲಿದ್ದಾರಂತೆ. ಚಿತ್ರದಲ್ಲಿ ಅದೊಂದು ಮಹತ್ವದ ಪಾತ್ರ ಎಂದು ಸ್ವತಃ ಬಾಲಯ್ಯ ಅವರೇ ಮಾತನಾಡಿದ್ದಾರೆ.

ಅಂದಹಾಗೆ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರದ್ದು ಪ್ರತಾಪ್ ರೆಡ್ಡಿ ಹೆಸರಿನ ಪಾತ್ರ. ಗೋಪಿಚಂದ್ ಮಲಿನೇನಿ (Gopichand Malineni) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ಇಂಥದ್ದೊಂದು ಪಾತ್ರವನ್ನು ತಮಗೆ ಕೊಟ್ಟಿದ್ದಕ್ಕೆ ದುನಿಯಾ ವಿಜಯ್, ತಂಡಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಕಿಟ್ಟಿ ಪೊಲೀಸ್ ಅಧಿಕಾರಿಯ ಮುಂದೆ ಹಾಜರು ಕೂಡ ಆಗಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ ಪೊಲೀಸರಿಂದ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಕಿಟ್ಟಿ ಮತ್ತು ದುನಿಯಾ ವಿಜಯ್ ಆಪ್ತ ಸ್ನೇಹಿತರು ಪ್ರಕರಣವೊಂದರಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಇಬ್ಬರೂ ದೂರು ದಾಖಲಿಸಿದ್ದರು.

ಏನಿದು ಪ್ರಕರಣ? : 2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.

ದುನಿಯಾ ವಿಜಯ್ ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಹಾಗಾಗಿ ಸ್ವತಃ ಕಿಟ್ಟಿಯವರೇ ಸದಾಶಿವನಗರದ ಎಸಿಪಿ ಕಚೇರಿಗೆ ಬಂದು ಎಸಿಪಿ ಚಂದನ್ ಕುಮಾರ್ ಮುಂದೆ ಹಾಜರಾಗಿದ್ದಾರೆ. ಸದಾಶಿವನಗರದ ಎಸಿಪಿ ಕಚೇರಿಯಲ್ಲಿ ಕಿಟ್ಟಿ ವಿಚಾರಣೆ ನಡೆಸಲಾಗಿದೆ.

ನಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಪಡೆದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.

ನಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಬಂದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ

ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆತೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ.

ತೆಲುಗಿನ ಲೆಜೆಂಡರಿ ನಂದಮೂರಿ ಬಾಲಕೃಷ್ಣ(Nandamuri Balakrishna) `ಅಖಂಡ’ ಸಕ್ಸಸ್ ನಂತರ `ವೀರ ಸಿಂಹ ರೆಡ್ಡಿ'(Veera Simha Reddy) ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಬಾಲಯ್ಯ ಅವರ ಮುಂದೆ ಘರ್ಜಿಸಲು ಘಟಾನುಘಟಿಗಳನ್ನೇ ಕರೆಸಲಾಗುತ್ತಿದೆ. ದುನಿಯಾ ವಿಜಯ್ (Duniya Vijay) ಆನ್‌ಬೋರ್ಡ್ ಆಗಿರುವ ಬೆನ್ನಲ್ಲೇ ಈಗ `ಕೆಜಿಎಫ್ 2′ (Kgf 2) ನಟ ಕೂಡ ಈ ತಂಡಕ್ಕೆ ಸೇರಿಕೊಂಡಿದ್ದಾರೆ.

`ಅಖಂಡ'(Akanda Film) ಚಿತ್ರದ ಸಕ್ಸಸ್ ನಂತರ ತಮ್ಮ 107ನೇ ಸಿನಿಮಾ `ವೀರ ಸಿಂಹ ರೆಡ್ಡಿ’ಗೆ ಬಾಲಯ್ಯ ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಸಖತ್ತಾಗಿ ಶೂಟಿಂಗ್ ಕೂಡ ನಡೆಯುತ್ತಿದೆ. ಶ್ರುತಿ ಹಾಸನ್(Shruti Haasan) ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ಬಾಲಯ್ಯಗೆ ಖಡಕ್ ವಿಲನ್ ಆಗಿ ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್ ಎಂಟ್ರಿ ಕೊಟ್ಟ ಬೆನ್ನಲ್ಲೇ `ಕೆಜಿಎಫ್ 2′ ನಟ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.
View this post on Instagram
`ಕೆಜಿಎಫ್ 2′ ಸಿನಿಮಾದಲ್ಲಿ ಖಳನಾಯಕ ಆಂಡ್ರೂಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವಿನಾಶ್ ಈಗ ಬಾಲಯ್ಯ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗಂಗಿ ರೆಡ್ಡಿ ಎಂಬ ವಿಲನ್ ಪಾತ್ರದಲ್ಲಿ ಟಾಲಿವುಡ್ ಲೆಜೆಂಡ್‌ಗೆ ಕಿಕ್ ಕೊಡಲಿದ್ದಾರೆ. ಇದೀಗ ನಿರ್ದೇಶಕ ಗೋಪಿ ಚಂದ್ ಮಲಿನೇನಿ ಜೊತೆಗಿರುವ ಅವಿನಾಶ್ ಫೋಟೋ ಕೂಡ ವೈರಲ್ ಆಗುತ್ತಿದೆ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್
View this post on Instagram
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಜತೆ ಶ್ರುತಿ ಹಾಸನ್, ದುನಿಯಾ ವಿಜಯ್, ವರಲಕ್ಷ್ಮಿ ಶರತ್‌ಕುಮಾರ್, ಅವಿನಾಶ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿ ಇರಲಿದೆ.