Tag: Duniya Vijay

  • ಖಳನಟರಾದ ಅನಿಲ್, ಉದಯ್ ದುರಂತ ಸಾವಿಗೆ ಒಂದು ವರ್ಷ

    ಖಳನಟರಾದ ಅನಿಲ್, ಉದಯ್ ದುರಂತ ಸಾವಿಗೆ ಒಂದು ವರ್ಷ

    ಬೆಂಗಳೂರು: `ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿಗೆ ಇಂದು ಒಂದು ವರ್ಷ.

    ಹೌದು. ಕಳೆದ ವರ್ಷ ಇದೇ ದಿನ ಮಧ್ಯಾಹ್ನ ನಟ ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಸ್ಟಂಟ್ ಮಾಡಲು ಹೋಗಿ ಉದಯ್ ಮತ್ತು ಅನಿಲ್ ಮೇಲಿನಿಂದ ತಿಪ್ಪಗೊಂಡನಹಳ್ಳಿ ಕೆರೆಯ ನೀರಿನ ಆಳಕ್ಕೆ ಬಿದ್ದು ಸಾವಿಗೀಡಾಗಿದ್ದರು. ಹೀಗಾಗಿ ಅನಿಲ್ ಮತ್ತು ಉದಯ್ ಅವರ ದುರಂತ ಸಾವಿಗೆ ಇಂದು ವರ್ಷವಾದ ಹಿನ್ನೆಲೆಯಲ್ಲಿ ಸ್ನೇಹಿತರು ಕುಟುಂಬಸ್ಥರ ಉಪಸ್ಥಿತಿಯಲ್ಲಿ ಅವರ ಮೊದಲನೇ ಪುಣ್ಯ ತಿಥಿ ಕಾರ್ಯಕ್ರಮ ಮಾಡಲಾಗುತ್ತಿದೆ.

    ಬೆಳಗ್ಗೆ ಈ ಇಬ್ಬರು ನಟರ ಕುಟುಂಬಸ್ಥರು ಬನಶಂಕರಿ ರುದ್ರಭೂಮಿಯಲ್ಲಿ ಅನಿಲ್, ಉದಯ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅನಿಲ್, ಉದಯ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ, ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ.

    ಇದನ್ನೂ ಓದಿ: ಮೇ.12ರಂದು ಮಾಸ್ತಿಗುಡಿ ಬಿಡುಗಡೆ

    ಇಷ್ಟು ಮಾತ್ರವಲ್ಲದೇ ಕದಿರೇನಹಳ್ಳಿ ಬ್ರಿಜ್ಡ್ ಸರ್ಕಲ್‍ನಲ್ಲಿ ಅನಿಲ್ ಉದಯ್ ಸ್ಮಾರಕ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದ್ದು ಮುಂದಿನ ವರ್ಷದಲ್ಲಿ ಉದ್ಘಾಟನೆಯಾಗಲಿದೆ. ಕದಿರೇನಹಳ್ಳಿ ಬ್ರಿಡ್ಜ್ ಮೇಲೆ ನಡೆಯುತ್ತಿರುವ ಪುಣ್ಯತಿಥಿ ಆಚರಣೆಯಲ್ಲಿ ಅನಿಲ್ ಪತ್ನಿ ರಮ್ಯಾ, ಅನಿಲ್ ತಾಯಿ ವಿಜಯಲಕ್ಷ್ಮಿ ಉದಯ್ ತಾಯಿ ಕೌಶಲ್ಯ ಭಾಗಿಯಾಗಿದ್ದಾರೆ.

    ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪಿ ಗೌಡ ಚಾರಿಟೇಬಲ್ ಟ್ರಸ್ಟ್‍ನ ಮುಖಂಡತ್ವ ವಹಿಸಿಕೊಂಡು ಪ್ರತಿ ವರ್ಷ ದೀನ ದಲಿತರಿಗೆ ಸಹಾಯ ಮಾಡೋಕೆ ನಿರ್ಧರಿಸಿದ್ದಾರೆ. ಪುಣ್ಯತಿಥಿ ಆಣರಣೆಯ ವೇಳೆ ನಿರ್ಮಾಪಕ ಸುಂದರ್ ಪಿ ಗೌಡ, ಹಾಗೂ ನಟ ದುನಿಯಾ ವಿಜಯ್ ತಂದೆ ಉಪಸ್ಥಿತಿಯಿದ್ದು, ಶೂಟಿಂಗ್ ನಿಮಿತ್ತ ದುನಿಯಾ ವಿಜಿ ಪುಣ್ಯತಿಥಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

    ಮಾಸ್ತಿಗುಡಿ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಕೃತಿ ಕರಬಂಧ ಹಾಗೂ ಅಮೂಲ್ಯ ನಟಿಸಿದ್ದರು. ಈ ಚಿತ್ರ ಮೇ 12ರಂದು ಬಿಡುಗಡೆಗೊಂಡಿತ್ತು.

    https://www.youtube.com/watch?v=7sSL-_09xO0

    https://www.youtube.com/watch?v=33UF4AToAd0

    https://www.youtube.com/watch?v=8h6lS3M-Dzs

    https://www.youtube.com/watch?v=_y9vGs0nEHM

  • ದುನಿಯಾ ವಿಜಯ್ ಸಾಹಸನ ಅನುಕರಣೆ ಮಾಡಲು ಹೋಗಿ ಜೀವನವನ್ನೇ ಕತ್ತಲುಮಾಡ್ಕೊಂಡ ಅಭಿಮಾನಿ..!

    ದುನಿಯಾ ವಿಜಯ್ ಸಾಹಸನ ಅನುಕರಣೆ ಮಾಡಲು ಹೋಗಿ ಜೀವನವನ್ನೇ ಕತ್ತಲುಮಾಡ್ಕೊಂಡ ಅಭಿಮಾನಿ..!

    ಯಾದಗಿರಿ: ಸಿನಿಮಾದಲ್ಲಿ ತನ್ನ ನೆಚ್ಚಿನ ನಟನ ಸಾಹಸ ನೋಡಿ ರಿಯಲ್ ಲೈಫಿನಲ್ಲಿ ಅನುಕರಣೆ ಮಾಡಲು ಹೋಗಿ ಜೀವನವನ್ನೇ ಕತ್ತಲು ಮಾಡಿಕೊಂಡ ಘಟನೆಯೊಂದು ನಡೆದಿದೆ.

    ಯಾದಗಿರಿಯ ಸುರಪುರದ ವಜ್ಜಲ್ ಗ್ರಾಮದಲ್ಲಿನ ಹುಲಿಗೆಪ್ಪ ಎಂಬಾತ ನಟ ದುನಿಯಾ ವಿಜಯ್‍ನ ಅಪ್ಪಟ ಅಭಿಮಾನಿ. ಸ್ನೇಹಿತರ ಜೊತೆ ದುನಿಯಾ ವಿಜಯ್ ಸ್ಟೈಲ್‍ನಲ್ಲೇ ಸ್ಟಂಟ್ ಮಾಡ್ತೀನಿ ಅಂತ ಚಾಲೆಂಜ್ ಮಾಡಿ 14 ಅಡಿಯಿಂದ ಜಿಗಿದು, ಎರಡು ಕಾಲಿನ ಪಾದದ ಮೂಳೆಗಳು ಮುರಿದುಕೊಂಡು ಹಾಸಿಗೆ ಹಿಡಿದಿದ್ದಾನೆ.

    ಮನೆಯಲ್ಲಿ ಕಿತ್ತು ತಿನ್ನುಬಡತನ, ಚಿಕಿತ್ಸೆಗೆ ಹಣವಿಲ್ಲದೆ ಗಿಡಮೂಲಿಕೆಗಳ ಔಷಧಿಯ ಮೊರೆ ಹೋಗಿದ್ದಾನೆ. ಇಷ್ಟಾದರೂ ದುನಿಯಾ ವಿಜಯ್ ಮೇಲಿನ ಅಭಿಮಾನ ಇನ್ನೂ ಕಡಿಮೆಯಾಗಿಲ್ಲ. ಅಣ್ಣನನ್ನು ಭೇಟಿಯಾಗಬೇಕು, ಮಾತನಾಡಿಸಬೇಕು ಎಂದು ಹುಲಿಗೆಪ್ಪ ಸಿಕ್ಕ ಸಿಕ್ಕವರಲ್ಲಿ ಮನವಿ ಮಾಡುತ್ತಿದ್ದಾನೆ.

  • ದುನಿಯಾ ವಿಜಿ ವರ್ಕೌಟ್ ಮಾಡೋದು ಹೇಗೆ ಗೊತ್ತಾ? ವಿಡಿಯೋ ನೋಡಿ

    ದುನಿಯಾ ವಿಜಿ ವರ್ಕೌಟ್ ಮಾಡೋದು ಹೇಗೆ ಗೊತ್ತಾ? ವಿಡಿಯೋ ನೋಡಿ

    ಬೆಂಗಳೂರು: ದುನಿಯಾ ವಿಜಯ್ ಈಗ ಸುದ್ದು ಗದ್ದಲವಿಲ್ಲದೇ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಜಂಗ್ಲಿ, ಶಂಕರ್ ಐಪಿಎಸ್, ತಾಕತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದುನಿಯಾ ವಿಜಿ ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅಭಿಮಾನಿಗಳು ಮತ್ತೆ ವಿಜಯ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡುವುದಕ್ಕೆ ಕಾಯುತ್ತಿದ್ದಾರೆ.

    ದುನಿಯಾ ವಿಜಿ ಸದ್ಯ ಪ್ರೀತಂ ಗುಬ್ಬಿ ನಿರ್ದೇಶನದ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದಲ್ಲಿ ಬ್ಯೂಸಿಯಾಗಲಿದ್ದಾರೆ. ಸಿನಿಮಾಗಾಗಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ವಿಜಿ ಬರೋಬ್ಬರಿ ಪ್ರತಿ ದಿನ ಆರು ಗಂಟೆಗಳ ಕಾಲ ಜಿಮ್‍ನಲ್ಲಿ ಬೆವರು ಹರಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ದೇಹ ದಂಡನೆ ಮಾಡುತ್ತಿದ್ದಾರೆ.

    ವಿಜಯ್ ದೇಹದಂಡನೆ ವಿಚಾರದಲ್ಲೂ ಮೊದಲಿನಿಂದಲೂ ಶಿಸ್ತಿನ ಜೀವಿ. ಇದರ ನಡುವೆಯೂ ಇದೀಗ ಇನ್ನೊಂದಿಷ್ಟು ಕಸರತ್ತು ಮಾಡಿ ಬಾಡಿಗೆ ಶೇಪ್ ಕೊಡೋಕೆ ಮತ್ತೆ ಪದ್ದತಿ ಪ್ರಕಾರ ವರ್ಕೌಟ್ ಶುರುಮಾಡಿದ್ದಾರೆ. ಈ ಬಾರಿ ವಿಜಯ್ ಗೆ ದಾವಣಗೆರೆ ಮೂಲದ ಮಿಸ್ಟರ್ ಇಂಟರ್‍ನ್ಯಾಷನಲ್ ಖ್ಯಾತಿಯ ಮಂಜುನಾಥ್ ಕೋಚ್ ಆಗಿದ್ದಾರೆ.

    ಇಷ್ಟುದಿನ ವಿಜಿ ಸಿಕ್ಸ್ ಪ್ಯಾಕ್‍ಗೆ ಫಿದಾ ಆಗಿದ್ದ ಅಭಿಮಾನಿಗಳು ಮತ್ತೆ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬಹುದು. ಇದೊಂದು ಯುತ್‍ಫಲ್ ಸಿನಿಮಾ ಆಗಿದ್ದು ಇಂಟ್ರೊಡಕ್ಷನ್ ಸಾಂಗ್ ಗಾಗಿ ವಿಜಯ್ ಇಂತಹ ಕಸರತ್ತು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಲುಕ್ ನೊಡೋಕೆ ಸ್ವಲ್ಪ ದಿನ ಕಾಯಬೇಕಾಗುತ್ತದೆ.

     

  • ನಟ ದುನಿಯಾ ವಿಜಯ್ ಹೆಸರಲ್ಲಿ ಸುಲಿಗೆ- ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಬಂಧನ

    ನಟ ದುನಿಯಾ ವಿಜಯ್ ಹೆಸರಲ್ಲಿ ಸುಲಿಗೆ- ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಬಂಧನ

    ದಾವಣಗೆರೆ: ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷನನ್ನು ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.

    ವಜ್ರದ ವ್ಯಾಪಾರಿ ಸೋಗಿನಲ್ಲಿ ಗ್ರಾಹಕರನ್ನ ಬಂಧಿಸಿ, ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಎಚ್.ಎಸ್. ದೊಡ್ಡೇಶ್, ಬೆಳ್ಳಿಬೆಟ್ಟ ಚಿತ್ರದ ನಿರ್ಮಾಪಕ ಹಾಗೂ ಹೊನ್ನಾಳಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಉತ್ತೇಶ್‍ನನ್ನು ಬಂಧಿಸಲಾಗಿದೆ.

    ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಬರೇಜ್ ಎ ಶೇಕ್ ಎನ್ನುವ ವ್ಯಕ್ತಿಗೆ ವಜ್ರ ಕೊಡುವುದಾಗಿ ನಂಬಿಸಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ರು. ಮನಬಂದಂತೆ ಹಿಂಸೆ ಕೊಟ್ಟು ಆಸ್ತಿ ವಿವರ, ಬ್ಯಾಂಕ್ ಬ್ಯಾಲೆನ್ಸ್ ಪಡೆದು ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ರು. ದೊಡ್ಡೇಶ್, ಉತ್ತೇಶ್ ಮತ್ತು ನಿವೃತ್ತ ತಹಸೀಲ್ದಾರ್ ಪುತ್ರ ಗುರುರಾಜ್ ಶ್ರೀಮಂತರನ್ನ ಗುರಿಯಾಗಿಸಿಕೊಂಡು ಇದೇ ರೀತಿ ದಂಧೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಸದ್ಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 36 ಸಾವಿರ ರೂ. ನಗದು, 1 ಫೋರ್ಡ್, 1 ಬೆನ್ಜ್ ಕಾರು, 3 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

  • ಯಾಕೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ: ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದುನಿಯಾ ವಿಜಿ ಆಕ್ರೋಶ

    ಯಾಕೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ: ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದುನಿಯಾ ವಿಜಿ ಆಕ್ರೋಶ

    ಬೆಂಗಳೂರು: ಮಾಸ್ತಿಗುಡಿ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿರುವ `ಮಾಸ್ತಿಗುಡಿ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳಲ್ಲಿ ಸ್ಕ್ರೀನ್‍ಗಳ ಕೊರತೆ ಉಂಟಾಗಿದೆ.

    ಹೌದು, ಬಾಹುಬಲಿ-2 ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾಸ್ತಿಗುಡಿ ಚಿತ್ರಕ್ಕೆ ಪ್ರದರ್ಶನದ ಅವಕಾಶದ ತೊಂದರೆಯಾಗುತ್ತಿದೆ. ಹೀಗಾಗಿ ಮಾಸ್ತಿಗುಡಿ ಚಿತ್ರದ ನಿರ್ದೇಶಕ ನಾಗಶೇಖರ್, ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಮಾಸ್ತಿಗುಡಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡದೇ ಬಾಹುಬಲಿ-2 ಚಿತ್ರ ಪ್ರದರ್ಶನವನ್ನು ಮುಂದುವರೆಸುತ್ತಿರುವ ಥಿಯೇಟರ್‍ಗಳ ಮುಂದೆ ಗಲಾಟೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

    ದುನಿಯಾ ವಿಜಿ ಆಕ್ರೋಶ: ಇದು ಕೇವಲ ಮಾಸ್ತಿಗುಡಿ ಚಿತ್ರಕ್ಕೆ ಮಾತ್ರವಲ್ಲ ಕನ್ನಡ ಚಿತ್ರರಂಗಕ್ಕೆ ಆಗಿರುವ ಅನ್ಯಾಯ. ನಮ್ಮನ್ನ ನಂಬಿ ನಿರ್ಮಾಪರು, ವಿತರಕರು ಹಣ ಸುರಿದಿರುತ್ತಾರೆ. ಅವರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಮ್ಮ ಹೋರಾಟದಿಂದ ಮುಂದೆ ಬರುವ ಕನ್ನಡ ಸಿನಿಮಾಗಳಿಗೆ ಅನೂಕುಲವಾಗಬೇಕು. ಈ ಕಾರಣಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಲು ನಾವುಗಳು ನಿರ್ಧರಿಸಿದ್ದೇವೆ. ಅದು ಹೇಗೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ ಎಂದು ನಟ ದುನಿಯಾ ವಿಜಿ ಆಕ್ರೋಶ ವ್ಯಕ್ತಪಡಿಸಿದರು.

    ಚಿತ್ರದ ವಿತರಣಾ ಹಕ್ಕನ್ನ ಜಾಕ್ ಮಂಜುರವರು 10.80 ಕೋಟಿ ರೂ.ಗೆ ಖರೀದಿಸಿದ್ದಾರೆ. ಸಿನಿಮಾವನ್ನು 350 ಥಿಯೇಟರ್‍ಗಳಲ್ಲಿ ಸಿನಿಮಾವನ್ನ ರಿಲೀಸ್ ಮಾಡಲು ಯೋಚಿಸಿದ್ದಾರೆ. ಆದರೆ ಸದ್ಯ 50 ರಿಂದ 60 ಚಿತ್ರಮಂದಿರಗಳ ಸಮಸ್ಯೆ ಉಂಟಾಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಮಾಸ್ತಿಗುಡಿಗೆ ಪ್ರೈಮ್ ಟೈಮ್ ಸಿಗುತ್ತಿಲ್ಲ ಎಂದು ಚಿತ್ರ ತಂಡ ಆರೋಪಿಸಿದೆ. ಬಾಹುಬಲಿ-2 ಚಿತ್ರ ಬಿಡುಗಡೆ ವೇಳೆಯಲ್ಲಿ ಕನ್ನಡದ `ರಾಗಾ’ ಸಿನಿಮಾಗೆ ಅನ್ಯಾಯವಾಗಿತ್ತು.

    ಚಿತ್ರವು ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಚಿತ್ರದಲ್ಲಿ ದುನಿಯಾ ವಿಜಯ್, ಅಮೂಲ್ಯ, ಕೃತಿ ಕರಬಂಧ, ಉದಯ್ ಹಾಗು ಅನಿಲ್ ಮುಂತಾದ ದೊಡ್ಡ ತಾರಾಗಣವನ್ನು ಹೊಂದಿದೆ. ಹಾಡುಗಳಿಗೆ ಸಾಧು ಕೋಕಿಲಾರವರ ಸಂಗೀತ ಸಂಯೋಜನೆಯಿದೆ.

    https://youtu.be/LDet4NyN2eA