Tag: Duniya Vijay

  • ‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ನ್ನಡದ ಡಾಲಿ ಧನಂಜಯ (Daali Dhananjay) ಹಾಗೂ ತೆಲುಗಿನ ಸತ್ಯದೇವ್ ನಟನೆಯ ‘ಜೀಬ್ರಾ’ (Zebra Film) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಡಾಲಿ ಹಾಗೂ ಸತ್ಯದೇವ್ ಅಂತಿಮ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಮಾಲ್‌ವೊಂದರಲ್ಲಿ ನಿನ್ನೆ (ನ.19) ಪ್ರೀ- ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಇವೆಂಟ್‌ಗೆ ಮುಖ್ಯ ಅತಿಥಿಗಳಾಗಿ ದುನಿಯಾ ವಿಜಯ್ (Duniya Vijay) ಕುಮಾರ್, ಸತೀಶ್ ನೀನಾಸಂ, ಸಪ್ತಮಿ ಗೌಡ (Sapthami Gowda), ನಾಗಭೂಷಣ್, ನವೀನ್‌ ಶಂಕರ್ ಭಾಗವಹಿಸಿದ್ದರು.

    ದುನಿಯಾ ವಿಜಯ್ ಮಾತನಾಡಿ, ಧನಂಜಯ ಬಗ್ಗೆ ಅಪಾರವಾದ ಗೌರವಿದೆ. ತಾನು ಬೆಳೆದು ತನ್ನವವರನ್ನು ಬೆಳೆಯುಸುತ್ತಾರೆ. ಧನಂಜಯ ಬಂದ ರೂಟ್, ಸ್ಟ್ರಗಲ್, ಅವರು ಮನಸ್ಸು ನನಗೆ ಇಷ್ಟ. ‘ಸಲಗ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿ ನನಗೆ ಗೆಲುವು ತಂದು ಕೊಟ್ಟಿದ್ದಾರೆ. ಸತ್ಯದೇವ್ ಕಷ್ಟುಪಟ್ಟು ದೊಡ್ಡ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಸಿನಿಮಾಗೆ ಭಾಷೆ ಇಲ್ಲ. ಎಷ್ಟು ಖುಷಿ, ನೋವು ಹಂಚಿಕೊಳ್ಳುತ್ತೇವೆ. ‘ಜೀಬ್ರಾ’ ನಮ್ಮ ಕನ್ನಡದ ಸಿನಿಮಾ ಆಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ಬಂದ ಕೀರ್ತಿ

    ಡಾಲಿ ಮಾತನಾಡಿ, ಕನ್ನಡ ವರ್ಷನ್ ಸಿನಿಮಾಗಳನ್ನು ನೀವು ಹೆಚ್ಚಾಗಿ ನೋಡುವುದರಿಂದ ಡಿಮ್ಯಾಂಡ್ ಕ್ರಿಯೇಟ್ ಆಗುತ್ತದೆ. ಬೈಕೊಂಡು ಕುರುವುದರಿಂದ ಯಾವುದು ಆಗುವುದಿಲ್ಲ. ಪಕ್ಕ ಕನ್ನಡ ಸಿನಿಮಾ ಎನಿಸಲು ಶಶಾಂಕ್ ಅಂಡ್ ಟೀಂ ತುಂಬಾ ಚೆನ್ನಾಗಿ ಡಬ್ ಮಾಡಿದ್ದಾರೆ. ‘ಜೀಬ್ರಾ’ ಇದೇ ನವೆಂಬರ್ 22ಕ್ಕೆ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ ನೋಡಿ ಬೆಂಬಲಿಸಿ ಎಂದರು. ಸತ್ಯದೇವ್ (Satyadev) ಅವರು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ದಿನಗಳನ್ನು ನೆನಪಿಸಿಕೊಂಡು ಮೆಲುಕು ಹಾಕಿದರು. ‘ಜೀಬ್ರಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ನಿಮ್ಮ ಬೆಂಬಲ ಸಿನಿಮಾ ಮೇಲೆ ಇರಲಿದೆ ಎಂದರು.

    ‘ಜೀಬ್ರಾ’ ಚಿತ್ರದಲ್ಲಿ ಡಾಲಿ ಧನಂಜಯ್ ಆದಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಇದೆ. ಇನ್ನೂ ಸತ್ಯದೇವ್ ಕೂಡ ಮತ್ತೊಬ್ಬ ಹೀರೋ ಆಗಿ ಅಭಿನಯಿಸಿದ್ದಾರೆ. ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್ ಇನ್ನೀತರರು ತಾರಾಬಗಳದಲ್ಲಿದ್ದಾರೆ. ‘ಕೆಜಿಎಫ್’ ಮತ್ತು ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ.

    ಈ ಚಿತ್ರವನ್ನು ಎಸ್‌.ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ.  ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ‘ಜೀಬ್ರಾ’ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ – ಕುಟುಂಬಸ್ಥರಿಗೆ ದುನಿಯಾ ವಿಜಯ್‌, ಡಾಲಿ, ನೀನಾಸಂ ಸತೀಶ್‌ ಸಾಂತ್ವನ

    ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ – ಕುಟುಂಬಸ್ಥರಿಗೆ ದುನಿಯಾ ವಿಜಯ್‌, ಡಾಲಿ, ನೀನಾಸಂ ಸತೀಶ್‌ ಸಾಂತ್ವನ

    ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ (Guruprasad) ಅವರ ಸಾವಿನ ಸುದ್ದಿ ತಿಳಿದು ನಟರಾದ ದುನಿಯಾ ವಿಜಯ್‌, ನೀನಾಸಂ ಸತೀಶ್‌, ಡಾಲಿ ಧನಂಜಯ್‌ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿದರು.

    ಆತ್ಮಹತ್ಯೆ ಮಾಡಿಕೊಂಡಿದ್ದ ಗುರುಪ್ರಸಾದ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಸಿನಿ ತಾರೆಯರು ಆಸ್ಪತ್ರೆಗೆ ಆಗಮಿಸಿದರು. ಇದನ್ನೂ ಓದಿ: ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

    ಪತಿ ಕಳೆದುಕೊಂಡು ಕಣ್ಣೀರಿಡುತ್ತಿದ್ದ 2ನೇ ಪತ್ನಿ ಸುಮಿತ್ರಾ ಅವರಿಗೆ ದುನಿಯಾ ವಿಜಯ್‌ ಹಾಗೂ ಡಾಲಿ ಧನಂಜಯ್‌ ಸಾಂತ್ವನ ಹೇಳಿದರು. ಇದೇ ವೇಳೆ ಸಿನಿಮಾ ರಂಗದಲ್ಲಿ ಗುರುಪ್ರಸಾದ್‌ ಅವರ ಸಾಧನೆಯನ್ನು ನಟರು ಕೊಂಡಾಡಿದರು. ಆತ್ಮಹತ್ಯೆ ವಿಚಾರಕ್ಕೆ ನೊಂದು ನುಡಿದರು.

    ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌, ರಂಗನಾಯಕ ಚಿತ್ರದ ನಿರ್ಮಾಪಕ ವಿಖ್ಯಾತ್‌ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಗುರುಪ್ರಸಾದ್ ಮೊದಲ ಪತ್ನಿ ಆರತಿ ಹಾಗೂ ಮಗಳಿಗೆ ನಟ ತಬಲ ನಾಣಿ ಸಾಂತ್ವನ ಹೇಳಿದರು. ಇದನ್ನೂ ಓದಿ: ಗುರುಪ್ರಸಾದ್ ಮಗುವಿಗೆ ಸಹಾಯ ಮಾಡುತ್ತೇನೆ: ನಟ ಜಗ್ಗೇಶ್

  • ಸುದೀಪ್‌ಗೆ ಮಾತೃ ವಿಯೋಗ- ಶ್ರದ್ಧಾಂಜಲಿ ಸಲ್ಲಿಸಿದ ದುನಿಯಾ ವಿಜಯ್

    ಸುದೀಪ್‌ಗೆ ಮಾತೃ ವಿಯೋಗ- ಶ್ರದ್ಧಾಂಜಲಿ ಸಲ್ಲಿಸಿದ ದುನಿಯಾ ವಿಜಯ್

    ಕಿಚ್ಚ ಸುದೀಪ್ (Sudeep) ಅವರ ತಾಯಿ ಇಂದು (ಅ.20) ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆ ನಟ ದುನಿಯಾ ವಿಜಯ್ & ಟೀಮ್ ಮೌನ ಆಚರಿಸಿ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.‌ ಇದನ್ನೂ ಓದಿ:ಜೆಪಿ ನಗರದ ನಿವಾಸದಲ್ಲಿ ನಟ ಸುದೀಪ್ ತಾಯಿ ಅಂತಿಮ ದರ್ಶನ

    ನಿರ್ದೇಶಕ ಜಡೇಶ್ ಜೊತೆ ಚಿತ್ರೀಕರಣದಲ್ಲಿ ಬ್ಯುಸಿಯಿರುವ ದುನಿಯಾ ವಿಜಯ್ (Duniya Vijay) ಅವರು ನಿಧನರಾಗಿರೋ ಸುದೀಪ್ ತಾಯಿ ಸರೋಜಾ (Saroja) ಅವರಿಗೆ ಚಿತ್ರದ ಸೆಟ್‌ನಲ್ಲಿ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದುನಿಯಾ ವಿಜಯ್‌ & ಟೀಮ್ ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

    ಅಂದಹಾಗೆ, ಅನಾರೋಗ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 07:04ಕ್ಕೆ ನಿಧನರಾಗಿದ್ದಾರೆ. ಸದ್ಯ ಜೆಪಿ ನಗರದ ಸುದೀಪ್ ನಿವಾಸದಲ್ಲಿ ಅವರ ತಾಯಿಯ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಳಿಕ ಸಂಜೆ 5 ಗಂಟೆಗೆ ವಿಲ್ಸನ್ ಗಾರ್ಡನ್‌ನಲ್ಲಿರುವ ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯಲಿದೆ.

  • ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ ಭೇಟಿ

    ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ ಭೇಟಿ

    ಮಂಗಳೂರು: ಉಳ್ಳಾಲ ತಾಲೂಕಿನ ಕಲ್ಲಾಪು ಬಳಿಯ ಬುರ್ದುಗೋಳಿ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ (Duniya Vijay) ಭೇಟಿ ನೀಡಿದ್ದಾರೆ.

    ಗುಳಿಗ-ಕೊರಗಜ್ಜ (Koragajja) ಉಧ್ಬವ ಶಿಲೆಯ ಆದಿಸ್ಥಳವಾದ ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ಬುರ್ದುಗೋಳಿ ಸಾನಿಧ್ಯದ ದೈವಗಳಿಗೆ ನಟ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ

    ಈ ಸಂದರ್ಭ ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್‌ಗೆ ಪ್ರಸಾದ ನೀಡಿ ಸನ್ಮಾನಿಸಲಾಗಿದೆ. ‘ಭೀಮಾ’ ಸಿನಿಮಾದ ಯಶಸ್ಸಿನ ಬಳಿಕ ತನ್ನ 29ನೇ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿರುವ ದುನಿಯಾ ವಿಜಯ್, ಚಿತ್ರೀಕರಣದ ಮಧ್ಯೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

    ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಅಕ್ರಮವಾಗಿಲ್ಲ ಎಂದಾದ್ರೆ ಸೈಟ್ ವಾಪಸ್ ಕೊಟ್ಟಿದ್ದು, ಮರೀಗೌಡ ರಾಜೀನಾಮೆ ಯಾಕೆ? – ಎಸ್ ಮುನಿಸ್ವಾಮಿ

  • ‘ಬಿಗ್ ಬಾಸ್’ ರಾಜೀವ್ ನಟನೆಯ ‘ಬೇಗೂರು ಕಾಲೋನಿ’ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ‘ಬಿಗ್ ಬಾಸ್’ ರಾಜೀವ್ ನಟನೆಯ ‘ಬೇಗೂರು ಕಾಲೋನಿ’ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ನ್ನಡ ಚಿತ್ರರಂಗಕ್ಕೆ ಬಲ ತುಂಬಿರುವ ‘ಭೀಮ’ ನಟ ದುನಿಯಾ ವಿಜಯ್ (Duniya Vijay) ಹೊಸಬರಿಗೆ ಸದಾ ಬೆಂಬಲವಾಗಿ ನಿಲ್ತಾನೆ ಇರುತ್ತಾರೆ. ದುನಿಯಾ ವಿಜಯ್ ಅವರು ‘ಬಿಗ್ ಬಾಸ್’ ಖ್ಯಾತಿಯ (Bigg Boss) ರಾಜೀವ್ ಹನು ಹೊಸ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಡೈರೆಕ್ಟರ್ ಮಂಜು ಕಥೆ ಬರೆದು ನಿರ್ದೇಶಿಸಿರುವ ‘ಬೇಗೂರು ಕಾಲೋನಿ’ (Begur Colony) ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ಎನ್ ಸುರೇಶ್, ಖ್ಯಾತ ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಇದನ್ನೂ ಓದಿ:ರಾಜ್ ಭಾರದ್ವಾಜ್ ಕನಸಿನ `ಹಗ್ಗ’ ಈ ವಾರ ತೆರೆಗೆ!

    ಈ ವೇಳೆ ನಟ ವಿಜಯ್ ಕುಮಾರ್ ಮಾತನಾಡಿ, ನಿರ್ಮಾಪಕರು ನಮ್ಮ ಊರಿನ ಕಡೆಯವರು. ನಮ್ಮ ಊರು ಅಂತಾ ಸೆಳೆಯುತ್ತದೆ. ನಿರ್ಮಾಪಕ ಹಾಗೂ ನಿರ್ದೇಶಕ ಮಂಜು ಅವರ ಈ ಸಿನಿಮಾಗೆ ಒಳ್ಳೆಯದಾಗಲಿದೆ. ಹೋರಾಟದ ಕಥೆ ಇಟ್ಟುಕೊಂಡು ಮಾಡಿರುವ ‘ಬೇಗೂರು ಕಾಲೋನಿ’ ಸಿನಿಮಾವಿದು. ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ. ಕಾಲೋನಿ ಇಲ್ಲದೇ ನಗರ ಆಗಲ್ಲ, ಕಾಲೋನಿಯೇ ಶಕ್ತಿ ಎಂದಿದ್ದಾರೆ. ಇನ್ನೂ ನಟ ರಾಜೀವ್ ಕುರಿತು ಮಾತನಾಡಿ, ರಾಜೀವ್ ಅವರು ಸಿನಿಮಾಗಾಗಿ ಹಾರ್ಡ್ ವರ್ಕ್ ಮಾಡುತ್ತಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

     

    View this post on Instagram

     

    A post shared by Anand Audio (@aanandaaudio)

    ನಿರ್ದೇಶಕ ಮಂಜು ಮಾತನಾಡಿ, ಕಾಲೋನಿ ಸೊಸೈಟಿ, ಎಲ್ಲಾ ರೀತಿ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆಯಿದು. ಇದು ಒಂದು ಹೋರಾಟದ ಕಥೆ ಎಂದಿದ್ದಾರೆ. ನನ್ನ ಅಂತಹ ಸಣ್ಣ ನಿರ್ದೇಶಕನಿಗೆ ದುನಿಯಾ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು, ನಾನು ಎಂದಿಗೂ ಮೆರೆಯುವುದಿಲ್ಲ ಎಂದರು.

    ನಟ ರಾಜೀವ್ ಹನು ಮಾತನಾಡಿ, ನಿರ್ದೇಶಕ ಮಂಜು ನನಗೆ ಸತತ 15 ವರ್ಷಗಳ ಪರಿಚಯ. ತನಗೆ ಏನು ಬೇಡ. ಎಲ್ಲರ ಹೊಟ್ಟೆ ತುಂಬಿದರೆ ಸಾಕು ಎಂದು ಕೆಲಸ ಮಾಡುವ ವ್ಯಕ್ತಿ. ಅವರ ಕೆಲಸ ಬೆಳ್ಳಿಪರದೆಯ ಮೇಲೆ ಕಾಣುತ್ತಿದೆ. ಇವತ್ತು ಇಷ್ಟು ಜನ ಒಟ್ಟುಗೂಡಿಸುವ ಕೆಲಸ ಕೂಡ ಅವರದ್ದು ಹಾಗೂ ನಿರ್ಮಾಪಕರದ್ದು. ನನ್ನ ಪಾತ್ರ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ ಎಂದರು.

    ‘ಬೇಗೂರು ಕಾಲೋನಿ’ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದ್ದು, ಇನ್ನೇನು ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡಲಿದೆ. ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್‌ನಲ್ಲಿ ಎಂ.ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ.

  • ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್ 2ನೇ ಪುತ್ರಿ ಮೋನಿಷಾ

    ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್ 2ನೇ ಪುತ್ರಿ ಮೋನಿಷಾ

    ಟ ಕಮ್ ನಿರ್ದೇಶಕ ದುನಿಯಾ ವಿಜಯ್ (Duniya Vijay) ಮೊದಲ ಪುತ್ರಿ ರಿತನ್ಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಜಯ್ 2ನೇ ಪುತ್ರಿ ಮೋನಿಷಾ ಕೂಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಸಿನಿಮಾದ ಪೋಸ್ಟರ್ ಕೂಡ ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ಇವ್ನನ್ನು ಉಳಿಸಬೇಡಿ, ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದೇನು?

    ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ ‘ಸಿಟಿ ಲೈಟ್ಸ್’ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ‘ಸಲಗ’ ಹಾಗೂ ‘ಭೀಮ’ ಚಿತ್ರದ ಯಶಸ್ಸಿನ ನಂತರ ನನ್ನ ಅಪ್ಪ ವಿಜಯ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ. ಇಂತಹ ಅದ್ಭುತ ತಂಡದೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ಮೋನಿಷಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಮೋನಿಷಾ ವಿಜಯ ಕುಮಾರ್ (Monisha Vijay Kumar) ಹೆಸರಿನಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಪೂರ್ಣ ತಯಾರಿಯೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಮೋನಿಷಾ ನಟನೆಯ ಮೊದಲ ಸಿನಿಮಾಗೆ ‘ಸಿಟಿ ಲೈಟ್ಸ್’ (City Lights) ಎಂದು ಟೈಟಲ್ ಇಡಲಾಗಿದೆ. ‘ಜವಾಬ್ ದಾರಿ ದೀಪಗಳು’ ಅನ್ನೋ ಟ್ಯಾಗ್ ಲೈನ್ ಕೂಡ ಈ ಸಿನಿಮಾಕ್ಕಿದೆ. ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಇನ್ನಷ್ಟೇ ಅಪ್‌ಡೇಟ್ ಹೊರಬೀಳಬೇಕಿದೆ.

    ಇನ್ನೂ ವಿಶೇಷ ಅಂದರೆ, ಮಗಳ ಚೊಚ್ಚಲ ಸಿನಿಮಾ ದುನಿಯ್ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ತುಂಬಾ ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರು ಮಹಾನಗರಕ್ಕೆ ಬರುವವರ ಸುತ್ತ ಮಾಡಿರುವ ಅಪರೂಪದ ಕಥೆ ಹೇಳೋಕೆ ವಿಜಯ್ ಕುಮಾರ್ ಹೊರಟಿದ್ದಾರೆ. ಹಳ್ಳಿ ಹುಡುಗಿಯ ಮುಗ್ಧ ಪಾತ್ರದಲ್ಲಿ ಮೋನಿಷಾ ನಟಿಸುತ್ತಿದ್ದಾರೆ. ‘ಸಿಟಿ ಲೈಟ್ಸ್’ ಪೋಸ್ಟರ್ ಲುಕ್‌ನಿಂದ ಸದ್ಯ ಅಭಿಮಾನಿಗಳಿಗೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

  • ‘ಭೀಮ’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್

    ‘ಭೀಮ’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್

    ಲಗ (Salaga), ಭೀಮ ಸಿನಿಮಾ ಎರಡು ಸೂಪರ್ ಸಕ್ಸಸ್ ಕಂಡಿದೆ. ‘ಭೀಮ’ (Bheema) ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಹೊಸ ಪ್ರಾಜೆಕ್ಟ್ ಅನ್ನು ದುನಿಯಾ ವಿಜಯ್ ಅನೌನ್ಸ್ ಮಾಡಿದ್ದಾರೆ. ವಿಜಯ್‌ ಮುಂಬರುವ ಸಿನಿಮಾದ ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಬಾಲಿವುಡ್‌ಗೆ ಕಮ್‌ಬ್ಯಾಕ್‌ ಆಗ್ತಾರಾ ಪ್ರಿಯಾಂಕಾ ಚೋಪ್ರಾ- ಇನ್ಸ್ಟಾದಲ್ಲಿ ಕೊಟ್ಟ ಹಿಂಟ್ ಏನು?

    ‘ವಿಕೆ 30’ ಎಂದು ಪೋಸ್ಟರ್ ಅನಾವರಣ ಆಗಿದೆ. ಖಡಕ್ ಲುಕ್‌ನಲ್ಲಿ ವಿಜಯ್ ಕಾಣಿಸಿಕೊಂಡಿದ್ದು, ಸಿನಿಮಾದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಸಲಗ, ಭೀಮ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡ್ತಿದ್ದ ಆರ್. ವೆಟ್ರಿವೇಲ್ (ತಂಬಿ) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

     

    View this post on Instagram

     

    A post shared by Duniya Vijay (@duniyavijayofficial)

    ಈ ಸಿನಿಮಾದಲ್ಲಿ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಆದರೆ ಕಥೆಯ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ. ಆದರೆ ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಉತ್ತಮ ಸಂದೇಶ ಸಿಗಲಿದೆಯಂತೆ.

    ತಂಡದ ಜೊತೆ ವಿಜಯ್ ಸಕಲೇಶಪುರದಲ್ಲಿರುವ ಫೋಟೋವನ್ನು ವಿಜಯ್ ಶೇರ್ ಮಾಡಿದ್ದರು. ಎರಡು ಹೊಸ ಸಿನಿಮಾಗಳಿಗೆ ತಯಾರಿ ಮಾಡಿಕೊಳ್ಳತ್ತಿದ್ದು, ಅವರೇ ಕಥೆ ರೆಡಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ಬೆನ್ನಲ್ಲೇ ‘ವಿಕೆ 30’ (VK 30) ಚಿತ್ರದ ಅಧಿಕೃತ ಘೋಷಣೆ ಮಾಡಿರೋದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

  • ದುನಿಯಾ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

    ದುನಿಯಾ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

    ದುನಿಯಾ ವಿಜಯ್ ಫ್ಯಾನ್ಸ್‌ಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಅವರ ಚಿತ್ರಕ್ಕಾಗಿ ಎದುರು ನೋಡ್ತಾ ಇರುವ ಅಭಿಮಾನಿಗಳಿಗೆ ಈಗ ಶುಭ ಸುದ್ದಿ ಸಿಕ್ಕಿದೆ. ವಿಜಯ್ ನಟನೆಯ ‘ಭೀಮ’ (Bheema) ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ‘ಸೂರ್ಯವಂಶ’ ನಟಿ

    2021ರಲ್ಲಿ ‘ಸಲಗ’ ಸಿನಿಮಾ ದುನಿಯಾ ವಿಜಯ್ (Duniya Vijay) ನಟಿಸಿ, ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ ರೀತಿಯ ರೌಡಿಸಂ ಥೀಮ್ ಕಥೆ ಇಟ್ಟುಕೊಂಡು ಭೀಮ ಚಿತ್ರ ಡೈರೆಕ್ಷನ್ ಮಾಡಿದ್ದಾರೆ ವಿಜಯ್. ಇದೇ ಆಗಸ್ಟ್ 9ರಂದು ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:‘ಕೆಂಪೇಗೌಡ’ ಪಾತ್ರದಲ್ಲಿ ಡಾಲಿ- ಟಿ.ಎಸ್‌ ನಾಗಾಭರಣ ಆ್ಯಕ್ಷನ್ ಕಟ್

     

    View this post on Instagram

     

    A post shared by Krishna Sarthak (@krishnasarthak)

    ‘ಸಲಗ’ ಬಳಿಕ ಬಾಲಯ್ಯ ನಟನೆಯ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಖಡಕ್ ವಿಲನ್ ಆಗಿ ದುನಿಯಾ ವಿಜಯ್ ನಟಿಸಿದ್ದರು. ಸಲಗ ಆದ್ಮೇಲೆ ಸತತ ಮೂರು ವರ್ಷಗಳ ನಂತರ ಕನ್ನಡದ ಭೀಮ ಚಿತ್ರದ ವಿಜಯ್ ಮಾಸ್ ಎಂಟ್ರಿ ಕೊಡ್ತಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

    ‘ಭೀಮ’ ಚಿತ್ರದಲ್ಲಿ ಅಶ್ವಿನಿ ಅಂಬರೀಷ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇದೆ.

  • ಡಿವೋರ್ಸ್‌ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

    ಡಿವೋರ್ಸ್‌ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

    ಸ್ಯಾಂಡಲ್‌ವುಡ್‌ನಲ್ಲಿ ಒಂದಲ್ಲ ಒಂದು ಶಾಕಿಂಗ್‌ ಸುದ್ದಿಗಳು ಹೊರಬರುತ್ತಿವೆ. ಇದೇ ಹೊತ್ತಿನಲ್ಲಿ ನಟ ದುನಿಯಾ ವಿಜಯ್‌ (Duniya Vijay) ವಿಚ್ಛೇದನಾ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ವಿಚ್ಛೇದನಾ ಕೋರಿ ದುನಿಯಾ ವಿಜಯ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

    ತಮ್ಮ ಮೊದಲನೇ ಪತ್ನಿ ನಾಗರತ್ನ ಬಳಿ ವಿಚ್ಛೇದನಾ ಕೋರಿ 2018 ರಲ್ಲಿ ನಟ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಇಂದು 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ. ಇದನ್ನೂ ಓದಿ: ತಮಿಳಿನಲ್ಲಿ ಬಿಗ್‌ ಚಾನ್ಸ್‌ ಗಿಟ್ಟಿಸಿಕೊಂಡ ಕನ್ನಡದ ಆಲಿಯಾ ಭಟ್

    ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ. ಮಕ್ಕಳ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ನಟ ದುನಿಯಾ ವಿಜಯ್‌ ವಿಚ್ಛೇದನಾ ಕೋರಿದ್ದರು. ಆದರೆ ನಾಗರತ್ನ, ನನಗೆ ಗಂಡ ಬೇಕು ಎಂದು ಅರ್ಜಿ ಸಲ್ಲಿಸಿದ್ದರು.

    ದುನಿಯಾ ವಿಜಯ್ ಪರ ವಕೀಲೆ ರಾಜರಾಜೇಶ್ವರಿ ಮಾತನಾಡಿ, ಅರ್ಜಿ ವಜಾ ಆಗಿದೆ. ವಿಜಯ್ ಅವರನ್ನು ಸಂಪರ್ಕ ಮಾಡಿ ಮುಂದೆ ಏನು ಮಾಡಬೇಕು ಅಂತಾ ಹೇಳುತ್ತೇವೆ. ಅವರು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ವಿಷಯ ಗಮನಕ್ಕೆ ತಂದಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾತಾಡಿ ಹೇಳುತ್ತೇವೆ. ಇದು ಇಲ್ಲಿಗೆ ಮುಗಿದಿಲ್ಲ. ಹೈಕೋರ್ಟ್‌ಗೆ ಹೋಗಬೇಕಾ ಬೇಡ್ವಾ ಎಂಬುದನ್ನು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಕೋಟಿ’ ಸಿನಿಮಾ ಪ್ರೀಮಿಯರ್‌ನಲ್ಲಿ ಸೆಲೆಬ್ರಿಟಿಗಳ ದಂಡು

  • ಮೂರನೇ ಬಾರಿ ಒಂದಾದ ದುನಿಯಾ ವಿಜಯ್, ನಿರ್ದೇಶಕ ಎಸ್.ನಾರಾಯಣ್

    ಮೂರನೇ ಬಾರಿ ಒಂದಾದ ದುನಿಯಾ ವಿಜಯ್, ನಿರ್ದೇಶಕ ಎಸ್.ನಾರಾಯಣ್

    ಹೆಸರಾಂತ ದಿಗ್ಗಜರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್ (S. Narayan) ಅವರ  ನಿರ್ದೇಶನದ  “ಪ್ರೊಡಕ್ಷನ್ ನಂ 1” ಚಿತ್ರ ಇತ್ತೀಚೆಗಷ್ಟೇ ಆರಂಭವಾಗಿದೆ. ಈ ನೂತನ ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟ ದುನಿಯಾ ವಿಜಯ್ (Duniya Vijay) ಹಾಗೂ ಶ್ರೇಯಸ್ ಮಂಜು ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್ ಅವರು ಜೂನ್ 5 ರಿಂದ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಶ್ರೇಯಸ್ ಮಂಜು ಮುಂತಾದ ಕಲಾವಿದರ ಅಭಿನಯದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

    ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರ ಪಾಲ್ಗೊಳ್ಳುವಿಕೆಯಲ್ಲಿ ಮೂಡಿ ಬರುತ್ತಿರುವ ಈ ನೂತನ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯದಲ್ಲೇ ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ‌.

    ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಬೃಂದಾ. ವಿಭಿನ್ನಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

    ಎಸ್ ನಾರಾಯಣ್ ಅವರು ಚಿತ್ರಕಥೆ, ಸಂಭಾಷಣೆ ಬರೆದು  ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೆ‌ಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನವಿದೆ.  ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ,ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಂತು ಅವರ ನೃತ್ಯ ನಿರ್ದೇಶನವಿರುವ “ಪ್ರೊಡಕ್ಷನ್ ನಂ 1” ಚಿತ್ರದ ಪಿ.ಆರ್.ಓ ಆಗಿ ಸುಧೀಂದ್ರ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.