Tag: Duniya Vijay

  • ರಾತ್ರೋರಾತ್ರಿ ನಟ ದುನಿಯಾ ವಿಜಯ್ ಬಂಧನ!

    ರಾತ್ರೋರಾತ್ರಿ ನಟ ದುನಿಯಾ ವಿಜಯ್ ಬಂಧನ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಕರಿಚಿರತೆ ದುನಿಯಾ ವಿಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಡಿ ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ದುನಿಯಾ ವಿಜಯ್ ವಿರುದ್ಧ ಶನಿವಾರ ರಾತ್ರಿ ಸುಮಾರು 11.30ಕ್ಕೆ ದೂರು ನೀಡಿದ್ದಾರೆ.

    ನಡೆದಿದ್ದೇನು?
    ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ.

    ಮಾರುತಿಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದಾರೆ. 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷನಾಗಿದ್ದಾರೆ. ಜೊತೆಗೆ ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡನ್ನ ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೋಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದು, ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ.

    ಇದೇ ವೇಳೆ ಪಾನಿಪುರಿ ಕಿಟ್ಟಿ ಹುಡುಗರು, ದುನಿಯ್ ವಿಜಿ ಕಾರ್ ನ ಮೇಲೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪೊಲೀಸ್ ಠಾಣೆ ಬಳಿಯೂ ದರ್ಪ ಮೆರೆಯುತ್ತಿದ್ದ ವಿಜಿಗೆ ಎಸಿಪಿ ರವಿಶಂಕರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

    ಈ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುನಿಯ್ ವಿಜಯ್ ಹಾಗೂ ಸಹಚರರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಹಿಂದೆ ದುನಿಯಾ ವಿಜಯ್ ಗೆ ಪಾನಿಪೂರಿ ಕಿಟ್ಟಿ ಜಿಮ್ ಟ್ರೇನರ್ ಆಗಿದ್ದರು. ಆದರೆ ಇತ್ತೀಚೆಗೆ ಈ ಎರಡೂ ಗ್ಯಾಂಗ್‍ಗಳ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪಾನಿಪುರ ಕಿಟ್ಟಿಯ ಮೇಲಿನ ದ್ವೇಷಕ್ಕೆ ಆತನ ಅಣ್ಣನ ಮಗ ಮಾರುತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಮಾರುತಿಗೌಡ ಈಗ ನಟರಾದ ಯಶ್, ಅಜಯ್ ರಾವ್, ಪ್ರೇಮ್‍ಗೂ ಜಿಮ್ ಟ್ರೇನರ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಯ್ ಜೊತೆ ಕುಸ್ತಿಗಿಳಿದ ಅದಿತಿ ಪ್ರಭುದೇವ!

    ದುನಿಯಾ ವಿಜಯ್ ಜೊತೆ ಕುಸ್ತಿಗಿಳಿದ ಅದಿತಿ ಪ್ರಭುದೇವ!

    ಬೆಂಗಳೂರು: ದುನಿಯಾ ವಿಜಯ್ ಮಾಸ್ತಿಗುಡಿ ಚಿತ್ರದ ನಂತರ ನಟಿಸುತ್ತಿರುವ ಚಿತ್ರ ಕುಸ್ತಿ. ಪ್ರತಿಭಾವಂತ ನಿರ್ದೇಶಕ ರಾಘು ಶಿವಮೊಗ್ಗ ನಿರ್ದೇಶನದ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರತಂಡ ಇದರ ಪ್ರತೀ ಪಾತ್ರಗಳಿಗೂ ಹುಡುಕಾಟದ ನಂತರವೇ ನಟ ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಅಂಥಾದ್ದೇ ವ್ಯಾಪಕ ಹುಡುಕಾಟದ ನಂತರ ಕುಸ್ತಿ ಚಿತ್ರಕ್ಕೆ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ!

    ಇದು ಅದಿತಿ ಪಾಲಿಗೆ ಬಿಗ್ ಬ್ರೇಕ್‍ನಂಥಾ ಅವಕಾಶ. ಕಿರುತೆರೆಯ ನಾಗಕನ್ನಿಕೆ ಧಾರಾವಾಹಿಯ ಮೂಲಕವೇ ನಾಯಕಿಯಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದವರು ಅದಿತಿ. ಆ ನಂಥರದಲ್ಲಿ ಅಜೇಯ್ ರಾವ್ ಜೊತೆ ಧೈರ್ಯಂ ಚಿತ್ರದಲ್ಲಿ ನಟಿಸೋ ಮೂಲಕ ಅವರು ನಾಯಕಿಯಾಗಿ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಅದಾದ ನಂತರ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿಯೂ ಅದಿತಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ವಿಚಾರವಾಗಿಯೂ ಅವರು ಭರವಸೆ ಮೂಡಿಸಿದ್ದಾರೆ. ಇದೀಗ ಅದಿತಿ ಕುಸ್ತಿ ಚಿತ್ರದ ಅಖಾಡಕ್ಕಿಳಿದಿದ್ದಾರೆ.

    ಗರಡಿ ಮನೆಯ ದೇಸೀ ಕುಸ್ತಿಯ ಸುತ್ತಲಿನ ರೋಚಕ ಕಥೆ ಹೊಂದಿರುವ ಚಿತ್ರ ಕುಸ್ತಿ. ಇದರ ಮುಖ್ಯ ಪಾತ್ರವೊಂದರ ಮೂಲಕ ದುನಿಯಾ ವಿಜಯ್ ಅವರ ಪುತ್ರನೂ ನಟನಾಗಿ ಎಂಟ್ರಿ ಕೊಡುತ್ತಿದ್ದಾನೆ. ಇದಕ್ಕಾಗಿ ತಾವೇ ಮುಂದೆ ನಿಂತು ವಿಜಿ ಮಗನಿಗೆ ದೈಹಿಕ ಕಸರತ್ತನ್ನು ಮಾಡಿಸಿದ್ದಾರೆ. ಫಿಟ್ನೆಸ್ ಬಗ್ಗೆ ಗಂಭೀರವಾಗಿರುವ ವಿಜಯ್ ಅವರು ಕುಸ್ತಿ ಚಿತ್ರಕ್ಕಾಗಿ ಮತ್ತಷ್ಟು ಕಸರತ್ತು ನಡೆಸಿದ್ದಾರೆ. ಇದೀಗ ಈ ಚಿತ್ರಕ್ಕೆ ಅದಿತಿ ಪ್ರಭುದೇವ್ ಎಂಟ್ರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ಬಚಾವಾದ ಕರಿಚಿರತೆ!

    ಕೊನೆಗೂ ಬಚಾವಾದ ಕರಿಚಿರತೆ!

    ಬೆಂಗಳೂರು: ಬಂಧನ ಪ್ರಕ್ರಿಯೆಗೂ ಮುನ್ನವೇ ದುನಿಯಾ ವಿಜಯ್‍ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ.

    ಒಬ್ಬರ ಶ್ಯೂರಿಟಿ ಷರತ್ತು ವಿಧಿಸಿ ಸಿಸಿಎಚ್ 65 ನೇ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಕೂಡಲೇ ಸಹಿ ಮಾಡಿಸಿ ದುನಿಯಾ ವಿಜಿ ಬಿಡುಗಡೆಗೊಳಿಸಬೇಕು. ದುನಿಯಾ ವಿಜಯ್ ಬಂಧನವಾಗಿದ್ದರೂ ಬಿಡುಗಡೆಗೊಳಿಸುವಂತೆ ಕೋರ್ಟ್ ಆದೇಶಿಸಿದೆ.

    ಒಬ್ಬರು ಸಬ್ ಇನ್ಸ್ ಪೆಕ್ಟರ್ ಹಾಗು ನಾಲ್ಕು ಜನ ಸಿಬ್ಬಂದಿ ದುನಿಯಾ ವಿಜಿಯನ್ನು ಇನ್ನೋವಾ ಕಾರಿನಲ್ಲಿ ತಮಿಳುನಾಡಿನಿಂದ ಕರೆತರುತ್ತಿದ್ದಾರೆ. ಸದ್ಯ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷೆನ್ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಹಾಗೂ 225 (ಆರೋಪಿಯ ಬಂಧನಕ್ಕೆ ಅಡ್ಡಿ) ಅಡ್ಡಿಪಡಿಸುವ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಮನೆಗೆ ಮೇ 30 ಬುಧವಾರದಂದು ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.

    ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯಾ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಗುರುವಾರದಿಂದ ದುನಿಯಾ ವಿಜಯ್ ನಾಪತ್ತೆಯಾಗಿದ್ದರು. ಈ ಬಗ್ಗೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ನೀಡಿದ್ದು, ಈಗ ರೆಸಾರ್ಟ್‍ವೊಂದರಲ್ಲಿ ಅಡಗಿ ಕುಳಿತಿದ್ದ ದುನಿಯಾ ವಿಜಿಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

  • ತಮಿಳುನಾಡಿನಲ್ಲಿ ನಟ ದುನಿಯಾ ವಿಜಯ್ ಬಂಧನ

    ತಮಿಳುನಾಡಿನಲ್ಲಿ ನಟ ದುನಿಯಾ ವಿಜಯ್ ಬಂಧನ

    ಚೆನ್ನೈ: ಸ್ಯಾಂಡಲ್ ವುಡ್‍ನ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ನಟ ದುನಿಯಾ ವಿಜಯ್ ನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತಮಿಳುನಾಡಿನ ಕೊಯಮತ್ತೂರು ಬಳಿ ದುನಿಯಾ ವಿಜಯ್‍ನನ್ನು ಬಂಧಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ಮೇಲೆ ಪ್ರಕರಣ ದಾಖಲಾಗಿತ್ತು.

    ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಸುಂದರ್ ಮನೆಗೆ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು. ಇದನ್ನೂ ಓದಿ: ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ

    ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯಾ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ನೀಡಿದ್ದು, ಈಗ ರೆಸಾರ್ಟ್‍ವೊಂದರಲ್ಲಿ ಅಡಗಿ ಕುಳಿತಿದ್ದ ದುನಿಯಾ ವಿಜಿಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.

  • ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ

    ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ

    ಬೆಂಗಳೂರು: ಎಫ್‍ಐಆರ್ ದಾಖಲಾದ ಬಳಿಕ ದುನಿಯಾ ವಿಜಯ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

    ಕರ್ತವ್ಯಕ್ಕೆ ಅಡ್ಡಿ ಹಾಗೂ ಆರೋಪಿ ಪರಾರಿಯಾಗಲು ಸಹಕರಿಸಿದ್ದಕ್ಕೆ ನಟ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್ ದಾಖಲಾಗುತ್ತಿದ್ದಂತೆ ವಿಜಯ್ ಪರಾರಿಯಾಗಿದ್ದರು. ಇದನ್ನೂ ಓದಿ: ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಮೊದಲು ಮಾಸ್ತಿಗುಡಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ ಪಿ.ಗೌಡ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು. ಪೊಲೀಸರು ನಿರ್ಮಾಪಕರ ಬಂಧನಕ್ಕೆ ತೆರಳಿದ್ದಾಗ ಸ್ಥಳದಲ್ಲಿದ್ದ ದುನಿಯಾ ಸುಂದರ ಪರಾರಿಯಾಗಲು ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಎಫ್‍ಐಆರ್ ದಾಖಲಾದ ಬಳಿಕ ವಿಜಯ್ ಮೊಬೈಲ್ ಸ್ವಿಚ್ ಆಫ್, ನಾಪತ್ತೆ!

    ಪರಾರಿಯಾಗಿದ್ದ ನಿರ್ಮಾಪಕ ಸುಂದರ ಪಿ. ಗೌಡ ಅವರಿಗೆ ರಾಮನಗರ ಜೆಎಂಎಫ್‍ಸಿ ಕೋರ್ಟ್ ಜಾಮೀನು ನೀಡಿದೆ. ಇತ್ತ ಇದುವರೆಗೂ ಜಾಮೀನು ಸಿಗದ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಶೇಷ ತಂಡ ರಚನೆ ಮಾಡಿ ದುನಿಯಾ ವಿಜಯ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಮಾಸ್ತಿಗುಡಿ ನಿರ್ಮಾಪಕ ಇಂದು ಕೋರ್ಟ್ ಲ್ಲಿ ಹಾಜರ್!

  • ಎಫ್‍ಐಆರ್ ದಾಖಲಾದ ಬಳಿಕ ವಿಜಯ್ ಮೊಬೈಲ್ ಸ್ವಿಚ್ ಆಫ್, ನಾಪತ್ತೆ!

    ಎಫ್‍ಐಆರ್ ದಾಖಲಾದ ಬಳಿಕ ವಿಜಯ್ ಮೊಬೈಲ್ ಸ್ವಿಚ್ ಆಫ್, ನಾಪತ್ತೆ!

    ಬೆಂಗಳೂರು: ಎಫ್‍ಐಆರ್ ದಾಖಲಾದ ಬಳಿಕ ನಟ ದುನಿಯ ವಿಜಯ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಾಪತ್ತೆಯಾಗಿದ್ದಾರೆ.

    ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್ ದಾಖಲಾಗಿತ್ತು.

    ಐಪಿಸಿ ಸೆಕ್ಷನ್ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ), ಸೆಕ್ಷನ್ 225(ಆರೋಪಿಯ ಬಂಧನಕ್ಕೆ ಅಡ್ಡಿ) ಪ್ರಕರಣಗಳು ಜಾಮೀನು ಸಿಗುವ ಕೇಸ್ ಆಗಿದ್ದರೂ ದುನಿಯಾ ವಿಜಯ್ ಪರಾರಿಯಾಗಿದ್ದಾರೆ. ಈಗ ವಿಜಯ್ ಪರಾರಿಯಾಗಿರುವ ಕಾರಣ ಪ್ರಕರಣ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಈ ಪ್ರಕರಣ ಸಂಬಂಧ ಠಾಣೆಗೆ ಹಾಜರಾಗಿದ್ದರೆ ಕೋರ್ಟ್ ನಲ್ಲಿ ಜಾಮೀನು ಸಿಗುತಿತ್ತು. ಈಗ ಪರಾರಿಯಾದ ಕಾರಣ ಚೆನ್ನಮ್ಮನ ಕೆರೆ ಅಚ್ಚು ಕಟ್ಟು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ದುನಿಯಾ ವಿಜಯ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಸಿ.ಕೆ ಅಚ್ಚುಕಟ್ಟು ಪೊಲೀಸರು ವಿಜಯ್ ಅವರ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.

    ಪೊಲೀಸರು ದುನಿಯಾ ವಿಜಯ್ ಮೊಬೈಲ್ ಲೊಕೇಷನ್ ಆಧರಿಸಿ ಹುಡುಕಾಟ ನಡೆಸುತ್ತಿದ್ದು, ಇತ್ತ ಸುಂದರ್ ಗೌಡ ಮೊಬೈಲ್ ಕೂಡ ಮುಂಜಾನೆಯಿಂದ ಸ್ವಿಚ್ ಆಫ್ ಆಗಿ ಬರುತ್ತಿದೆ. ಗಿರಿನಗರ ಹಾಗೂ ಸಿ.ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿಯೂ ದುನಿಯಾ ವಿಜಿ ಪತ್ತೆಯಾಗಿಲ್ಲ..

    ಮಾಸ್ತಿಗುಡಿ ಚಿತ್ರಣದ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಬುಧವಾರ ತಡರಾತ್ರಿ ಬಂದಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತು. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.

  • ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಬೆಂಗಳೂರು: ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ಮೇಲೆ ಪ್ರಕರಣ ದಾಖಲಾಗಿದೆ. ಮಾಸ್ತಿಗುಡಿ ಚಿತ್ರಣದ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಇದನ್ನೂ ಓದಿಮಾಸ್ತಿಗುಡಿ ದುರಂತ- ಬಂಧಿಸಲು ಹೋದ ಪೊಲೀಸರ ಮುಂದೆ ಪರಾರಿಯಾದ ನಿರ್ಮಾಪಕ

    ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಬುಧವಾರ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತು. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.

    ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು.

    ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ಈ ಬಗ್ಗೆ ದೂರು ನೀಡಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ಐಪಿಸಿ 353 ಅನ್ವಯ ಪ್ರಕರಣ ದಾಖಲಾಗಿದೆ.

  • ಮದುವೆ ಮಾಡಿಕೊಂಡು ನೇರವಾಗಿ ದುನಿಯ ವಿಜಯ್ ಮನೆಗೆ ಬಂದ ಸುಂದರ್- ಲಕ್ಷ್ಮೀ!

    ಮದುವೆ ಮಾಡಿಕೊಂಡು ನೇರವಾಗಿ ದುನಿಯ ವಿಜಯ್ ಮನೆಗೆ ಬಂದ ಸುಂದರ್- ಲಕ್ಷ್ಮೀ!

    ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಕಾಂಗ್ರೆಸ್ ಶಾಸಕರ ಪುತ್ರಿ ಲಕ್ಷ್ಮೀ ಮದುವೆಯಾದ ನಂತರ ನೇರವಾಗಿ ದುನಿಯಾ ವಿಜಯ್ ಮನೆಗೆ ಬಂದಿಳಿದಿದ್ದಾರೆ.

    ದುನಿಯಾ ವಿಜಯ್ ಮನೆಯ ಹತ್ತಿರ ಬರುತ್ತಿದ್ದ ಹಾಗೇ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಕಾರಿನಿಂದ ಇಳಿದು ವಿಜಯ್ ಮನೆಯೊಳಗೆ ಓಡಿ ಹೋದರು. ನಂತರ ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮದವರಿಗೆ ನಿರಾಕರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಪುತ್ರಿ ಜೊತೆ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪರಾರಿ – ಚಾಮುಂಡಿ ಬೆಟ್ಟದಲ್ಲಿ ವಿವಾಹ

    ಇಬ್ಬರೂ ಫ್ರೆಶಪ್ ಆದ ನಂತರ ದುನಿಯಾ ವಿಜಯ್ ಇಂದು ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಿದ್ದಾರೆ. ನಂತರ ಪೊಲೀಸರ ಮುಂದೆ ಹಾಜರಾಗಿ ಲಕ್ಷ್ಮೀ ನಾಯ್ಕ್ ಹೇಳಿಕೆ ನೀಡಲಿದ್ದಾರೆ.

    ಮಾಸ್ತಿಗುಡಿ ನಿರ್ಮಾಪಕ ಸುಂದರ್ ಹಾಗೂ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಶಾಸಕರ ಯಲಹಂಕ ನ್ಯೂಟೌನ್ ಮನೆಯಿಂದ ಪುತ್ರಿ ನಾಪತ್ತೆಯಾಗಿದ್ದು, ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಎರಡು ವಿಶೇಷ ತಂಡಗಳಿಂದ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇದನ್ನೂ ಓದಿ: ಮದ್ವೆ ಬಗ್ಗೆ ಸ್ಪಷ್ಟನೆ ನೀಡಿ ತಂದೆಗೆ ಸಂದೇಶ ಕಳುಹಿಸಿದ ಶಾಸಕರ ಪುತ್ರಿ- ವಿಡಿಯೋ ನೋಡಿ

    ಸುಂದರ್ ಮತ್ತು ಲಕ್ಷ್ಮೀ ನಾಯ್ಕ್ ಗುರುವಾರ ಚಾಮುಂಡಿ ಬೆಟ್ಟದಲ್ಲಿ ಮದ್ವೆಯಾಗಿದ್ದಾರೆ. ಹುಡುಗಿಯ ಪೋಷಕರು ಕೂಡ ಜೊತೆಯಲ್ಲಿಯೇ ಇದ್ದು, ಶಾಸಕರಿಗೆ ಇಷ್ಟವಿಲ್ಲದ ಕಾರಣ ರಾತ್ರಿ ಮನೆ ಬಿಟ್ಟು ಹೋಗಿ, ಗುರುವಾರ ಮದುವೆಯಾಗಿದ್ದಾರೆ.

  • ಅಭಿಮಾನಿ `ಕನಕ’ನ ಜೊತೆ ಅಣ್ಣಾವ್ರ ಕಟೌಟ್ ರೆಡಿ!

    ಅಭಿಮಾನಿ `ಕನಕ’ನ ಜೊತೆ ಅಣ್ಣಾವ್ರ ಕಟೌಟ್ ರೆಡಿ!

    ಬೆಂಗಳೂರು: ಕರುನಾಡಲ್ಲಿ ಯಾವ ಊರಿಗೆ ಹೋದರೂ ದೇವಸ್ಥಾನ ತರಹ ಡಾ. ರಾಜ್‍ಕುಮಾರ್ ಪ್ರತಿಮೆ ಇರುತ್ತೆ. ರಾಜ್ ಕುಮಾರ್ ಪ್ರತಿಮೆ ಫೋಟೋ ಅಥವಾ ಕಟೌಟ್ ಕಂಡರೆ ಸಾಕು ಜನ ನಿಂತು ಕೈಮುಗಿಯುತ್ತಾರೆ. ಇದೀಗ ಅಂಥಹ ಅಭಿಮಾನಿ ದೇವರುಗಳಿಗೆ ಇಲ್ಲಿದೆ ಒಂದು ಖುಷಿ ವಿಷಯ. ಇದೇ ಶುಕ್ರವಾರ ನಗರದ ಮುಖ್ಯ ಚಿತ್ರಮಂದಿರಗಳಲ್ಲಿ ರಾಜ್ ಕಟೌಟ್ ರಾರಾಜಿಸಲಿದೆ.

    ರಾಜ್‍ಕುಮಾರ್ ಆದರ್ಶಗಳನ್ನು ಇಟ್ಟುಕೊಂಡು ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಹಾಗೆಯೇ ಈ ವಾರ ರಾಜ್ ನೆರಳಿನ ಕನಕ ಚಿತ್ರ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದೆ. ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಆಟೋ ಚಾಲಕ ಕನಕ ಪಾತ್ರದಲ್ಲಿ ಮಿಂಚಿರುವ ಚಿತ್ರವಿದು.

    ಚಿತ್ರದಲ್ಲಿ ನಾಯಕ ದುನಿಯಾ ವಿಜಿ ಅಣ್ಣಾವ್ರ ಅಭಿಮಾನಿಯಾಗಿರುತ್ತಾರೆ. ಅವರ ಕನ್ನಡ ಪ್ರೀತಿ ಆದರ್ಶವನ್ನು ಪಾಲಿಸುತ್ತಾರೆ. ಹೀಗಾಗಿ ಅಣ್ಣಾವ್ರ ಬೃಹತ್ ಕಟೌಟ್ ಅನ್ನು ರಿಲೀಸ್ ಆಗುವ ಮುಖ್ಯ ಚಿತ್ರಮಂದಿರಗಳಲ್ಲಿ ನಿಲ್ಲಿಸಲಾಗುತ್ತೆ. ಕನಕ ಚಿತ್ರ ಹೆಸರಾಂತ ನಿರ್ದೇಶಕ ಆರ್. ಚಂದ್ರು ಕಲ್ಪನೆಯಲ್ಲಿ ಮೂಡಿ ಬಂದಿದೆ.

    ಅಣ್ಣಾವ್ರ ಅಭಿಮಾನಿಯಾಗಿ ವಿಜಯ್ ಅಭಿನಯಿಸಿದ್ದರೆ, ನಾಯಕಿಯರಾಗಿ ಹರಿಪ್ರಿಯಾ ಮತ್ತು ಮಾನ್ವಿತಾ ಹರೀಶ್ ನಟಿಸಿದ್ದಾರೆ. ನವೀನ್ ಸಜ್ಜು ಸಂಗೀತ ಈ ಚಿತ್ರದಲ್ಲಿದೆ. ಗುರುಕಿರಣ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನೀಡಿದ್ದಾರೆ. ಎಲ್ಲಾ ವರ್ಗಗಳಿಗೂ ಹಿಡಿಸುವ ಒಂದು ಆದರ್ಶಮಯಿ ಕಥೆ ಚಿತ್ರದಲ್ಲಿದೆ.

    https://www.youtube.com/watch?v=VGOrvWbcMZU

     

  • 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದುನಿಯಾ ವಿಜಿ

    44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದುನಿಯಾ ವಿಜಿ

    ಬೆಂಗಳೂರು: ಕನ್ನಡದ ನಾಯಕ ನಟ, ಕರಿ ಚಿರತೆ ಅಂತಲೇ ಫೇಮಸ್ ಆಗಿರೋ ನಟ ದುನಿಯಾ ವಿಜಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    43 ನೇ ವಸಂತ ಪೂರೈಸಿ ಇದೀಗ 44ನೇ ವಸಂತಕ್ಕೆ ಕಾಲಿರಿಸಿದ ಹೀರೋ ದುನಿಯಾ ವಿಜಯ್ ಗೆ ಎಲ್ಲರೂ ಶುಭಾಷಯ ಕೋರಿದ್ರು. ರಾತ್ರಿಯೇ ಹೊಸಕೆರೆ ಹಳ್ಳಿಯಲ್ಲಿ ಇರೋ ದುನಿಯಾ ವಿಜಿ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ರು.

    ಅಭಿಮಾನಿಗಳ ಸಮ್ಮುಖದಲ್ಲೇ ವಿಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ್ರು. ದುನಿಯಾ ವಿಜಿ ಅಭಿಮಾನಿಗಳು ಘೋಷಣೆ ಕೂಗಿ ನೆಚ್ಚಿನ ನಟನಿಗೆ ಬರ್ತ್ ಡೇ ವಿಶ್ ತಿಳಿಸಿದ್ರು. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಅಂತ ದುನಿಯಾ ವಿಜಿ ಹೇಳಿದ್ರು.

    ಜೀವನಚರಿತ್ರೆ: ವಿಜಯ್ ಅವರು ಜನವರಿ 20, 1974ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ರು. ಬಡಕುಟುಂಬದಲ್ಲಿ ಬೆಳೆದು ಬಂದಿರೋ ಇವರಿಗೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುವಾಸೆ ಹುಟ್ಟಿಕೊಂಡಿತ್ತು. ಹೀಗಾಗಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ರು. ಜೋಗಿ, ರಂಗ ಎಸ್‍ಎಸ್‍ಎಲ್ ಸಿ ಹೀಗೆ ಅನೇಕ ಚಿತ್ರಗಳಲ್ಲಿ ತನ್ನ ಚಿಕ್ಕ-ಚಿಕ್ಕ ಪಾತ್ರಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು.

    2007ರಲ್ಲಿ ಸೂರಿ ಅವರ ನಿರ್ದೇಶನದಲ್ಲಿ ಮೂಡಿ ಬಂದ `ದುನಿಯಾ’ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸುವ ಅವಕಾಶ ದೊರೆಯಿತು. ಈ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಒಳ್ಳೆಯ ಸಿನಿಮಾವಾಗಿ ಮೂಡಿಬಂದಿತ್ತು. ಈ ಚಿತ್ರದ ಮೂಲಕ ವಿಜಯ್ ಅವರು ದುನಿಯಾ ವಿಜಯ್ ಆಗಿ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ನಂತರ ಇವರಿಗೆ ಅನೇಕ ಕನ್ನಡ ಚಿತ್ರಗಳು ನಾಯಕನಾಗಿ ಅಭಿನಯಿಸುವ ಅವಕಾಶಗಳು ಬಂದವು. ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಮಾಸ್ತಿಗುಡಿ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರ ರಂಗದಲ್ಲಿ ಸೈ ಎನಿಸಿಕೊಂಡರು.