Tag: Duniya Vijay

  • ಮಾಧ್ಯಮಗಳಲ್ಲಿ ನನ್ನ ಬಗ್ಗೆ ಏನ್ ತೋರಿಸ್ತಾರೆ? ನೋಡಲು ಟಿವಿ ಬೇಕು: ದುನಿಯಾ ವಿಜಯ್

    ಮಾಧ್ಯಮಗಳಲ್ಲಿ ನನ್ನ ಬಗ್ಗೆ ಏನ್ ತೋರಿಸ್ತಾರೆ? ನೋಡಲು ಟಿವಿ ಬೇಕು: ದುನಿಯಾ ವಿಜಯ್

    ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಈಗ ಟಿವಿಯವರು ನನ್ನ ಬಗ್ಗೆ ಏನ್ ತೋರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಟಿವಿ ಬೇಕೆಂದು ಹಠ ಹಿಡಿದಿದ್ದಾರೆ.

    ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಬ್ಯಾರಕ್‍ಗೆ ಹೋಗಲ್ಲ ಎಂದಿದ್ದಕ್ಕೆ ಸೆಲ್ ನೀಡಲಾಯಿತು. ಈಗ ಮನೆಯ ಊಟ, ತಿಂಡಿ ಬೇಕೆಂದು ಕೇಳಿದ್ದಾರೆ. ಅಲ್ಲದೇ ಮಾಧ್ಯಮಗಳು ನನ್ನ ಬಗ್ಗೆ ಏನ್ ತೋರಿಸುತ್ತಿದ್ದಾರೆ ಎಂದು ನೋಡಲು ಟಿವಿ ಬೇಕೆಂದು ಕೇಳಿದ್ದಾರೆ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

    ನಾನೇನು ಮಾಡಿದರೂ ಸರಿ, ನಾನೇ ಬಾಸು ನಂದೆ ದುನಿಯಾ ಎನ್ನುತಿದ್ದ ಕರಿಚಿರತೆ ಈಗ ಕಂಬಿ ಹಿಂದೆ ಸೆರೆಯಾಗಿದೆ. ಸಣ್ಣದೊಂದು ಗಲಾಟೆಗೆ ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿದ್ದಲ್ಲದೇ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಿ ಜೈಲು ಸೇರಿದ್ದಾರೆ.

    ಮಗನಿಗೆ ಸಣ್ಣ ಮಾತನ್ನು ಹೇಳಿದಕ್ಕೆ ಕುಪಿತಕೊಂಡು ದುನಿಯಾ ವಿಜಿ ತನ್ನ ಪಟಾಲವನ್ನೇ ಕರೆದು ಜಗಳಕ್ಕೆ ಮಾಡಿಕೊಂಡಿದ್ದರಂತೆ. ಭಾನುವಾರ ಜೈಲಿನ ಕೈದಿ ನಂಬರ್ ನೀಡುವ ಸಿಬ್ಬಂದಿ ಗೈರಾಗಿದ್ದರಿಂದ ಸ್ಲಂ ಬಾಲನಿಗೆ ಕೈದಿ ನಂಬರ್ ಸಿಕ್ಕಿರಲಿಲ್ಲ. ಇಂದು ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿದ ಬಳಿಕ ಕೈದಿ ನಂಬರ್ ನೀಡಲಾಗಿದೆ. ಭಾನುವಾರ ನಡೆದ ಬೆಳವಣಿಗೆಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ವಿಜಿಯವರನ್ನು ಜೈಲಿಗೆ ಕಳುಹಿಸುವ ವೇಳೆಗೆ ರಾತ್ರಿ 10 ಗಂಟೆಯಾಗಿತ್ತು. ರಾತ್ರಿಯಾಗಿದ್ದರಿಂದ ಜೈಲಿನಲ್ಲಿ ಸಿಬ್ಬಂದಿ ಊಟ ನೀಡಿದ್ದರೂ ದುನಿಯಾ ವಿಜಿ ಹಾಗೂ ಅವರ ತಂಡ ಊಟ ನಿರಾಕರಿಸಿ, ಮತ್ತೊಮ್ಮೆ ತಮ್ಮ ಮೊಂಡಾಟವನ್ನು ತೋರಿಸಿದೆ.

    ಇದಲ್ಲದೇ ವಿಜಿ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಮಾರುತಿ ಗೌಡ ಕುಟುಂಬ ಡಿಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಿಜಿಗೆ ಬೇಲ್ ಸಿಗುತ್ತಾ, ಇಲ್ಲಾ ಜೈಲೇ ಗತಿಯೇ ಎನ್ನುವ ವಿಷಯ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೈಲಿನ ಊಟ ಧಿಕ್ಕರಿಸಿ, ಪುಂಡಾಟ ಮೆರೆದ ದುನಿಯಾ ವಿಜಿ!

    ಜೈಲಿನ ಊಟ ಧಿಕ್ಕರಿಸಿ, ಪುಂಡಾಟ ಮೆರೆದ ದುನಿಯಾ ವಿಜಿ!

    ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿ, ಮತ್ತೆ ತನ್ನ ಮೊಂಡಾಟವನ್ನು ಪ್ರದರ್ಶಿಸಿದ್ದಾರೆ.

    ಹೌದು, ನಾನೇನು ಮಾಡಿದರೂ ಸರಿ, ನಾನೇ ಬಾಸು ನಂದೆ ದುನಿಯಾ ಎನ್ನುತಿದ್ದ ಕರಿಚಿರತೆ ಈಗ ಕಂಬಿ ಹಿಂದೆ ಸೆರೆಯಾಗಿದೆ. ಸಣ್ಣದೊಂದು ಗಲಾಟೆಗೆ ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿದ್ದಲ್ಲದೇ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಿ ಜೈಲು ಸೇರಿದ್ದಾರೆ.

    ಮಗನಿಗೆ ಸಣ್ಣ ಮಾತನ್ನು ಹೇಳಿದಕ್ಕೆ ಕುಪಿತಕೊಂಡ ದುನಿಯಾ ವಿಜಿ ತನ್ನ ಪಟಾಲವನ್ನೇ ಕರೆದು ಜಗಳಕ್ಕೆ ಮಾಡಿಕೊಂಡಿದ್ದರು. ಭಾನುವಾರ ಜೈಲಿನ ಕೈದಿ ನಂಬರ್ ನೀಡುವ ಸಿಬ್ಬಂದಿ ಗೈರಾಗಿದ್ದರಿಂದ ಸ್ಲಂ ಬಾಲನಿಗೆ ಕೈದಿ ನಂಬರ್ ಸಿಕ್ಕಿರಲಿಲ್ಲ. ಇಂದು ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿದ ಬಳಿಕ ಕೈದಿ ನಂಬರ್ ನೀಡಲಾಗುತ್ತದೆ. ಭಾನುವಾರ ನಡೆದ ಬೆಳವಣಿಗೆಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ವಿಜಿಯವರನ್ನು ಜೈಲಿಗೆ ಕಳುಹಿಸುವ ವೇಳೆಗೆ ರಾತ್ರಿ 10 ಗಂಟೆಯಾಗಿತ್ತು. ರಾತ್ರಿಯಾಗಿದ್ದರಿಂದ ಜೈಲಿನಲ್ಲಿ ಸಿಬ್ಬಂದಿ ಊಟ ನೀಡಿದರು ದುನಿಯಾ ವಿಜಿ ಹಾಗೂ ಅವರ ತಂಡ ಊಟ ನಿರಾಕರಿಸಿ, ಮತ್ತೊಮ್ಮೆ ತಮ್ಮ ಮೊಂಡಾಟವನ್ನು ತೋರಿಸಿದ್ದಾರೆ.

    ಇದಲ್ಲದೇ ವಿಜಿ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಮಾರುತಿ ಗೌಡ ಕುಟುಂಬ ಡಿಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಿಜಿಗೆ ಬೇಲ್ ಸಿಗುತ್ತಾ, ಇಲ್ಲಾ ಜೈಲೇ ಗತಿಯೇ ಎನ್ನುವ ವಿಷಯ ಗೊತ್ತಾಗಲಿದೆ.

    ರಾಜಾರೋಷವಾಗಿ ಹೊಡೆದು ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ದುನಿಯಾ ವಿಜಿಗೆ ಭಾನುವಾರ ಕರಾಳ ದಿನವಾಗಿತ್ತು. ಬಚಾವಾಗೋ ಕೇಸಿನಲ್ಲೂ ತಪ್ಪಿಸಿಕೊಳ್ಳಲಾಗದೇ ಠಾಣೆಯಲ್ಲೇ ಕುಳಿತು ಊಟ ಸೇವಿಸಿದ್ದರು. ಅಲ್ಲದೇ ನಾನು ಎಷ್ಟೇ ಚೀರಾಡಿದರೂ ಉಪಯೋಗವಿಲ್ಲವೆಂದು, ಸ್ಟೇಷನ್ ನಲ್ಲಿಯೇ ಗಾಢಾ ನಿದ್ರೆಗೆ ಜಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಿಗೆ ಕಷ್ಟದ ಮೇಲೆ ಸಂಕಷ್ಟ-‘ಸ್ಲಂಬಾಲ’ನ ಪತ್ನಿಯರಿಬ್ಬರ ಕಿತ್ತಾಟ

    ವಿಜಿಗೆ ಕಷ್ಟದ ಮೇಲೆ ಸಂಕಷ್ಟ-‘ಸ್ಲಂಬಾಲ’ನ ಪತ್ನಿಯರಿಬ್ಬರ ಕಿತ್ತಾಟ

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಆ್ಯಂಡ್ ಟೀಂ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಜೈಲಿನಲ್ಲಿ ತಲೆಯ ಮೇಲೆ ಕೈ ಹೊತ್ತು ದುನಿಯಾ ವಿಜಯ್ ಕುಳಿತ್ತಿದ್ರೆ, ಇತ್ತ ಪತ್ನಿಯರಾದ ನಾಗರತ್ನ ಮತ್ತು ಕೀರ್ತಿ ಪರಸ್ಪರ ಒಬ್ಬರ ಮೇಲೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಶನಿವಾರ ರಾತ್ರಿ ಗಲಾಟೆಯಾದಾಗ ಮಗ ಸಾಮ್ರಾಟ್ ವಿಜಿ ಜೊತೆಯಲ್ಲೇ ಇದ್ದ ಅನ್ನೋದನ್ನ ತಿಳಿದ ಮೊದಲ ಪತ್ನಿ ನಾಗರತ್ನ ವಿಜಿ ಮನೆ ಬಳಿ ಹೋಗಿದ್ದಾರೆ. ಈ ವೇಳೆ ಎರಡನೇ ಪತ್ನಿ ಕೀರ್ತಿ ಪಟ್ಟಡಿ ಮತ್ತು ನಾಗರತ್ನ ಪರಸ್ವರ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ನಾಗರತ್ನ ಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮೂವರು ಮಕ್ಕಳನ್ನ ನನ್ನಿಂದ ದೂರ ಮಾಡಿರೋ ದುನಿಯಾ ವಿಜಯ್, ಅವರನ್ನು ಹಾಳು ಮಾಡುತ್ತಿದ್ದಾರೆ. ನನ್ನ ಮಗ ಹೇಗಿದ್ದಾನೆ ಅಂತಾ ನೋಡಲು ಹೋದಾಗ, 2ನೇ ಪತ್ನಿ ಕೀರ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಗೂಂಡಾಗಳನ್ನ ಛೂ ಬಿಟ್ಟು ಬೆದರಿಸಿದ್ದು, ನನಗೆ ನ್ಯಾಯ ಬೇಕು. ಮಕ್ಕಳು ಬೇಕು ಎಂದು ದೂರು ನೀಡಿದ್ದಾರೆ.

    ನಾಗರತ್ನ ನೀಡಿರುವ ದೂರಿನಲ್ಲಿ ಏನಿದೆ..?
    ರವರಿಗೆ,
    ಪೊಲೀಸ್ ಇನ್ಸ್ ಪೆಕ್ಟರ್,
    ಗಿರಿನಗರ ಪೊಲೀಸ್ ಠಾಣೆ,
    ಬೆಂಗಳೂರು ನಗರ.
    560085

    ಇಂದ,
    ಶ್ರೀಮತಿ ನಾಗರತ್ನ ವೈಫ್ ಆಫ್ ವಿಜಯ್ (38 ವರ್ಷ)
    #33, ನ್ಯೂ ಕೆಂಪೇಗೌಡ ಲೇಔಟ್,
    ಬೆಂಗಳೂರು 85

    ವಿಷಯ: ಕೀರ್ತಿ ಗೌಡ ಎಂಬುವವರ ವಿರುದ್ಧ ದೂರು

    ಮಾನ್ಯರೇ,
    ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ದಿನಾಂಕ 23/09/2018ರ ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ಟಿವಿ ನ್ಯೂಸ್ ನೋಡಿ ನನ್ನ ಗಂಡ ಹಾಗೂ ಇತರರು ಗಲಾಟೆಯಾಗಿ ಹೈಗ್ರೌಂಡ್ ಠಾಣೆಯಲ್ಲಿ ಇರುತ್ತಾರೆಂದು ಟಿವಿಯಲ್ಲಿ ನೋಡಿರುತ್ತೇನೆ . ನಂತರ ನನ್ನ ಮಕ್ಕಳು ನನ್ನ ಗಂಡನ ಜೊತೆ ಇದ್ದು, ಅವರಿಗೆ ಏನಾದ್ರೂ ತೊಂದರೆ ಆಗಿರಬಹುದೆಂದು ಎಂದು ಗಾಬರಿಯಿಂದ ಅವರಿದ್ದ ಆಡನ್ ಪಬ್ಲಿಕ್ ಸ್ಕೂಲ್ ಹತ್ತಿರ ಗಿರಿನಗರ ಇಲ್ಲಿನ ಮನೆಗೆ ಬಂದಿದ್ದೇನೆ. ದಿನಾಂಕ 23/09/2018 ರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಇದ್ದ ಕೀರ್ತಿಗೌಡ ಮತ್ತು ಅವರ ಜೊತೆ ಇಬ್ಬರು ಹುಡುಗರು ನನ್ನನ್ನು ಮನೆಯ ಒಳಗಡೆ ಬಿಡದೇ ಮಕ್ಕಳನ್ನು ಮಾತನಾಡಿಸದಂತೆ ತಡೆದು, ಅವಾಚ್ಯ ಶಬ್ದಗಳಿಂದ ಬೈದು. ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಏನು ಮಾಡಬೇಕು ಎಂದು ಗೊತ್ತಿದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

    ಕೈನಿಂದ ಕತ್ತಿಗೆ, ಹೊಟ್ಟೆಗೆ ಸಹೊಡೆದು ತಳ್ಳಿರುತ್ತಾರೆ. ನನ್ನ ಮಕ್ಕಳಿಗೆ ಆ ಕೀರ್ತಿಗೌಡ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿ ಭಯಪಡಿಸಿರುತ್ತಾಳೆ. ಆದ್ದರಿಂದ ನನಗೆ, ನನ್ನ ಮಕ್ಕಳಿಗೆ ಹಾಗೂ ನನ್ನ ಜೊತೆಯಲ್ಲಿರುವ ನನ್ನ ತಮ್ಮನಿಗೆ ತೊಂದರೆಯಾದರೆ ಇವರೇ ಕಾರಣರು. ಆದ್ದರಿಂದ ಕೀರ್ತಿಗೌಡ ಮತ್ತು ಇತರರನ್ನು ಸೂಕ್ತ ತಿಳುವಳಿಕೆ ಹೇಳಿ. ನಮ್ಮ ತಂಟೆಗೆ ಬರದಂತೆ ಸೂಕ್ತ ಬಂದೋಬಸ್ತ್ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅವಳು ನನ್ನ ಗಂಡನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ನನ್ನ ಮತ್ತು ನನ್ನ ಮಕ್ಕಳಿಗೆ ಪದೇ ಪದೇ ಕಿರುಕುಳ ನೀಡುತ್ತಿರುತ್ತಾಳೆ.

    ಇಷ್ಟಕ್ಕೆಲ್ಲ ಕಾರಣ ನನ್ನ ಗಂಡನ ಜೊತೆ ಹೊಂದಿರೋ ಅನೈತಿಕ ಸಂಬಂಧ. ಅದ್ದರಿಂದ ಅವಳನ್ನು ನನ್ನ ಮಕ್ಕಳು ಹಾಗೂ ನನ್ನ ತಂಟೆಗೆ ಬಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅವಳು ನನ್ನ ತಳ್ಳಿದಾಗ ನನ್ನ ಪ್ರಾಣ ರಕ್ಷಣೆಗೆ ನಾನು ಅವಳಿಗೆ ಒಂದೇರೆಡು ಏಟನ್ನು ಹೊಡೆದಿರುತ್ತೇನೆ. ನನಗೆ ನನ್ನ ಕಡೆಯವರಿಗೆ ಏನು ತೊಂದರೆಯಾಗದಂತೆ ತಮ್ಮಲ್ಲಿ ಕೇಳಿಕೊಳ್ಳವುದೇನೆಂದರೆ ನಮಗೆ ಏನಾದರು ತೊಂದರೆ ಆಗಬಹುದು ಎಂದು ನಮಗೆ ಪೊಲೀಸ್ ಪ್ರೊಟೆಕ್ಷನ್ ಬೇಕು ಎಂದು ಕೇಳಿಕೊಳ್ಳುತ್ತೇವೆ. ನನಗೆ ಹಾಗೂ ನನ್ನ ಮಕ್ಕಳಿಗೆ ಹಾಗೂ ನನ್ನ ತಮ್ಮನಿಗೆ ತೊಂದರೆ ಆದರೆ ಅದಕ್ಕೆ ಕೀರ್ತಿಗೌಡ ಹಾಗೂ ಅವಳ ಮನೆಯವರೇ ಕಾರಣ. ಆ ಕೀರ್ತಿಗೌಡರಿಗೆ ನನ್ನ ಗಂಡ ದುನಿಯಾ ವಿಜಯ್ ಸಹಾಯ ಮಾಡುವುದರಿಂದ ಅವರಿಬ್ಬರಿಂದ ಏನಾದರೂ ಆಗಬಹುದು ಆದ್ದರಿಂದ ನಮಗೆ ರಕ್ಷಣೆ ಕೊಡಿ .

    ಇಂತಿ ತಮ್ಮ ವಿಶ್ವಾಸಿ,
    ನಾಗರತ್ನ.

    ನಾಗರತ್ನ ದೂರಿನ ಆಧಾರದ ಮೇಲೆ ಕೀರ್ತಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆ, ಬೆದರಿಕೆ ಆರೋಪದಡಿ ಕೇಸ್ ಫೈಲ್ ಆಗಿದೆ. ಕೂಡಲೇ ಕೀರ್ತಿಯನ್ನ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ರು. ಈ ವೇಳೆ, ನಾಗರತ್ನಾ ಅವ್ರೇ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತಾ ಕೀರ್ತಿ ಆರೋಪಿಸಿದರು. ನಂತರ ಮುಚ್ಚಳಿಕೆ ಬರೆಸಿಕೊಂಡು ಕೀರ್ತಿಯನ್ನು ಪೊಲೀಸರು ಕಳುಹಿಸಿಕೊಟ್ಟರು. ನಂತರ ಕೀರ್ತಿ ಸಹ ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ನಾಗರತ್ನ ವಿರುದ್ಧ ಸಹ ಎಫ್‍ಐಆರ್ ದಾಖಲಾಗಿದೆ. ಇಂದು ಇಬ್ಬರನ್ನೂ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಿಗೆ 14 ದಿನ ಜೈಲೂಟ ಫಿಕ್ಸ್

    ದುನಿಯಾ ವಿಜಿಗೆ 14 ದಿನ ಜೈಲೂಟ ಫಿಕ್ಸ್

    ಬೆಂಗಳೂರು: ನಟ ದುನಿಯಾ ವಿಜಯ್ ಆ್ಯಂಡ್ ಗ್ಯಾಂಗ್‍ನ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.

    ಜಿಮ್ ಟ್ರೈನರ್ ಮಾರುತಿ ಗೌಡ ಎಂಬವರನ್ನು ಅಪಹರಿಸಿ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ದುನಿಯಾ ವಿಜಯ್ ಜೈಲುಪಾಲಾಗಿದ್ದಾರೆ. ಶನಿವಾರ ರಾತ್ರಿ ಅರೆಸ್ಟ್ ಆಗಿದ್ದ ದುನಿಯಾ ವಿಜಿಯನ್ನ ದಿನವಿಡಿ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಇರಿಸಿದರು. ರಾತ್ರಿ 7.30ಕ್ಕೆ ಜಡ್ಜ್ ನಿವಾಸದಲ್ಲಿ ದುನಿಯಾ ವಿಜಯ್ ಆ್ಯಂಡ್ ಟೀಮ್ ಪೊಲೀಸರು ಹಾಜರುಪಡಿಸಿದರು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ದುನಿಯಾ ವಿಜಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು. ಇದೀಗ ಪೊಲೀಸರು ದುನಿಯಾ ವಿಜಿಯನ್ನು ಪರಪ್ಪನ ಅಗ್ರಹಾರ ಜೈಲಿನತ್ತ ಕರೆದೊಯ್ಯುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ದುನಿಯಾ ವಿಜಿಯಿರೋ ಪೊಲೀಸ್ ವಾಹನ ಜೈಲು ತಲುಪಲಿದೆ.

    ಶನಿವಾರ ರಾತ್ರ ಮಾರುತಿಗೌಡ ಎಂಬವರನ್ನು ದುನಿಯಾ ವಿಜಯ್ ಅಪಹರಿಸಿದ್ದರು. ಮಾರುತಿ ಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದರು. 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷರಾದರು. ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡನ್ನ ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೊಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದು, ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಿಯ ಮೊದಲ, ಎರಡನೇ ಹೆಂಡತಿ ನಡುವೆ ಫೈಟ್

    ದುನಿಯಾ ವಿಜಿಯ ಮೊದಲ, ಎರಡನೇ ಹೆಂಡತಿ ನಡುವೆ ಫೈಟ್

    ಬೆಂಗಳೂರು: ದುನಿಯಾ ವಿಜಯ್ ಇಂದು ಒಂದೆಲ್ಲಾ ಒಂದು ತೊಂದರೆಗಳು ಶುರುವಾಗಿವೆ. ಶನಿವಾರ ರಾತ್ರಿ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದರು. ಇದೀಗ ದುನಿಯಾ ವಿಜಿ ಜೊತೆಗೆ ಅವರ 2ನೇ ಪತ್ನಿ ಕೀರ್ತಿಗೂ ಸಂಕಷ್ಟ ಶುರುವಾಗಿದೆ.

    ದುನಿಯಾ ವಿಜಯ್ ಇಬ್ಬರು ಪತ್ನಿಯರು ಪರಸ್ಪರ ಕೈ ಕೈಮಿಲಾಯಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯ್ ಮೊದಲ ಪತ್ನಿ ನಾಗರತ್ನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮೂವರು ಮಕ್ಕಳನ್ನ ನನ್ನಿಂದ ದೂರ ಮಾಡಿ ಹಾಳು ಮಾಡುತ್ತಿದ್ದಾರೆ. ನನ್ನ ಮಗ ಹೇಗಿದ್ದಾನೆ ಅಂತಾ ನೋಡಲು ಹೋದಾಗ, 2ನೇ ಪತ್ನಿ ಕೀರ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಗೂಂಡಾಗಳನ್ನ ಛೂ ಬಿಟ್ಟು ಬೆದರಿಸಿದ್ದಾರೆ. ನನಗೆ ನ್ಯಾಯ ಬೇಕು, ಮಕ್ಕಳು ಬೇಕು ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

    ನಾಗರತ್ನ ಅವರ ದೂರಿನ ಆಧಾರದ ಮೇಲೆ ಕೀರ್ತಿ ವಿರುದ್ಧ ಪೊಲೀಸರು 323, 504 ,506 34 ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡರು. ಹಲ್ಲೆ, ಬೆದರಿಕೆ ಆರೋಪದಡಿ ಕೇಸ್ ಫೈಲ್ ಆಗಿದೆ. ಕೂಡಲೇ ಕೀರ್ತಿಯನ್ನ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ನಾಗರತ್ನಾ ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತಾ ಕೀರ್ತಿ ಆರೋಪಿಸಿದರು. ನಂತರ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಕೀರ್ತಿಯನ್ನು ಕಳಿಸಿಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಏಯ್ ಏನ್ವಿಗಾ..? ಅಂತಾ ಹೇಳಿದ್ದಕ್ಕೆ ಹೊಡೆದು ಬಿಟ್ರು: ಮಾರುತಿ ಗೌಡ

    ಏಯ್ ಏನ್ವಿಗಾ..? ಅಂತಾ ಹೇಳಿದ್ದಕ್ಕೆ ಹೊಡೆದು ಬಿಟ್ರು: ಮಾರುತಿ ಗೌಡ

    ಬೆಂಗಳೂರು: ಕಾರ್ಯಕ್ರಮದಲ್ಲಿ ದುನಿಯಾ ವಿಜಿ ನನ್ನ ಬಳಿ ಬಂದು ಕಿಟ್ಟಿ ಎಲ್ಲಿ ಅಂತಾ ಕೇಳಿದರು. ನನಗೆ ಗೊತ್ತಿಲ್ಲಣ್ಣ ಅಂದ್ರು ಪದೇ ಪದೇ ಕೇಳುತ್ತಿದ್ದರು. ಆ ವೇಳೆ ನಾನು ಏಯ್ ಏನ್ ಇವಾಗ ಅಂತಾ ಅವಾಜ್ ಹಾಕಿದೆ. ಕೂಡಲೇ ಏಳೆಂಟು ಜನ ಬಂದು ಕಾರಿನಲ್ಲಿ ಕರೆದುಕೊಂಡು ಹೋಗಿ ಹೊಡೆದರು ಅಂತ ಹಲ್ಲೆಗೊಳಗಾಗಿರುವ ಮಾರುತಿ ಗೌಡ ಹೇಳಿದ್ದಾರೆ.

    ನೋಡ ನೋಡುತ್ತಿದ್ದಂತೆ ಬಂದ ಏಳೆಂಟು ಜನ ಹಲ್ಲೆ ಮಾಡಲು ಮುಂದಾದರು. ಫೇಸ್‍ಗೆ ಹೊಡೀತಾರೆ ಅಂತಾ ಕೈಗಳಿಂದ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕಾರ್ಯಕ್ರಮದಲ್ಲಿದ್ದ ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ಅಲ್ಲಿದ್ದ ಅಪ್ಪು ಎಂಬ ಗೆಳೆಯ ನನ್ನ ರಕ್ಷಣೆಗೆ ಮುಂದಾದಾಗ ಆತನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಪ್ಪುಗೆ ಸಹ ಗಾಯಗಳಾಗಿವೆ ಅಂತಾ ಮಾರುತಿ ಸ್ನೇಹಿತರಿಗೆ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಾರಿನಲ್ಲಿ ಕರೆದುಕೊಂಡ ಹೋದ ದುನಿಯಾ ವಿಜಿ ಟೀಂ ಒಂದು ಗಂಟೆಯವರೆಗೂ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಸಿ ವಿಡಿಯೋ ಮಾಡಿಸಿದರು ಅಂತಾ ಮಾರುತಿ ಗೌಡ ಆಸ್ಪತ್ರೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ:  ಕರಿಚಿರತೆಯ ಕಾಳಗದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

    ಶನಿವಾರ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಫೋಸ್ ಕೊಡುತ್ತಿದ್ದರು. ಆಗ ಮಗ ಸಾಮ್ರಾಟ್ ತಂದೆಯೊಂದಿಗೆ ವೇದಿಕೆ ಹತ್ತಿದ್ದಾರೆ. ಇದನ್ನು ನೋಡಿದ ಮಾರುತಿಗೌಡ `ಏಯ್, ಚಿಲ್ಟು ಕೆಳಗೆ ಇಳಿಯೋ’ ಎಂದು ಎಚ್ಚರಿಸಿದ್ದರಂತೆ. ಮಾರುತಿಗೌಡ ಮಾತು ಕೇಳಿಸಿಕೊಂಡ ವಿಜಯ್ ಕೋಪ ನೆತ್ತಿಗೇರಿತ್ತಂತೆ. ತಕ್ಷಣವೇ `ಯಾಕಪ್ಪ ಹಾಗಂತಿಯಾ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾರುತಿಗೌಡ, `ಮತ್ತೆ ಏನಣ್ಣ, ನೀನು ಚಿಲ್ಟು-ಪಿಲ್ಟುಗಳನ್ನೆಲ್ಲಾ ಸ್ಟೇಜ್‍ಗೆ ಹತ್ತಿಸ್ತೀಯ’ ಎಂದಿದ್ದಾರೆ. ಆತನ ಉತ್ತರದಿಂದ ಗರಂ ಆದ ವಿಜಯ್, ಸಾಮ್ರಾಟ್‍ನನ್ನು ಚಿಲ್ಟು ಅಂತ ಕರೆದಿದ್ದಕ್ಕೆ ವಾಗ್ದಾಳಿ ನಡೆಸಿದ್ದರಂತೆ. ಇದನ್ನೂ ಓದಿ: ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!

    ಸ್ಪರ್ಧೆ ನಡೆಯುವ ಜಾಗದಲ್ಲಿಯೇ ಬುದ್ಧಿ ಹೇಳುವುದಕ್ಕೆ ಹೋದರೆ ಗಲಾಟೆ ಆಗುತ್ತದೆ ಅಂತ ಮಾರುತಿ ಗೌಡನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೇವೆ. ನಾವು ಅಪಹರಣ ಮಾಡಿಲ್ಲ ಅಂತ ವಿಚಾರಣೆ ವೇಳೆ ವಿಜಯ್ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=ALFMC4BI448

    https://www.youtube.com/watch?v=EgaCOcqC7ZU

  • ಮಾರುತಿ ಗೌಡನ ಮಾತಿನಿಂದಾಗಿ ಹಲ್ಲೆ ಮಾಡಿದ್ರಾ ದುನಿಯಾ ವಿಜಿ!

    ಮಾರುತಿ ಗೌಡನ ಮಾತಿನಿಂದಾಗಿ ಹಲ್ಲೆ ಮಾಡಿದ್ರಾ ದುನಿಯಾ ವಿಜಿ!

    -ಅಂಬೇಡ್ಕರ್ ಭವನದಲ್ಲಿ ಆಗಿದ್ದಾದ್ರೂ ಏನು..?

    ಬೆಂಗಳೂರು: ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾರೆ. ಪುತ್ರ ಸಾಮ್ರಾಟ್‍ನನ್ನು ವೇದಿಕೆ ಮೇಲೆ ಮಾರುತಿ ಗೌಡ ಅವಮಾನಿಸಿದ್ದರಿಂದ ವಿಜಿ ಹಲ್ಲೆ ನಡೆಸಿದರಂತೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.

    ಅಂದಿದ್ದು ಏನು?:
    ಶನಿವಾರ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಫೋಸ್ ಕೊಡುತ್ತಿದ್ದರು. ಆಗ ಮಗ ಸಾಮ್ರಾಟ್ ತಂದೆಯೊಂದಿಗೆ ವೇದಿಕೆ ಹತ್ತಿದ್ದಾರೆ. ಇದನ್ನು ನೋಡಿದ ಮಾರುತಿಗೌಡ `ಏಯ್, ಚಿಲ್ಟು ಕೆಳಗೆ ಇಳಿಯೋ’ ಎಂದು ಎಚ್ಚರಿಸಿದ್ದರಂತೆ. ಮಾರುತಿಗೌಡ ಮಾತು ಕೇಳಿಸಿಕೊಂಡ ವಿಜಯ್ ಕೋಪ ನೆತ್ತಿಗೇರಿತ್ತಂತೆ. ತಕ್ಷಣವೇ `ಯಾಕಪ್ಪ ಹಾಗಂತಿಯಾ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾರುತಿಗೌಡ, `ಮತ್ತೆ ಏನಣ್ಣ, ನೀನು ಚಿಲ್ಟು-ಪಿಲ್ಟುಗಳನ್ನೆಲ್ಲಾ ಸ್ಟೇಜ್‍ಗೆ ಹತ್ತಿಸ್ತೀಯ’ ಎಂದಿದ್ದಾರೆ. ಆತನ ಉತ್ತರದಿಂದ ಗರಂ ಆದ ವಿಜಯ್, ಸಾಮ್ರಾಟ್‍ನನ್ನು ಚಿಲ್ಟು ಅಂತ ಕರೆದಿದ್ದಕ್ಕೆ ವಾಗ್ದಾಳಿ ನಡೆಸಿದ್ದರಂತೆ. ಇದನ್ನೂ ಓದಿ: ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!

    ಸ್ಪರ್ಧೆ ನಡೆಯುವ ಜಾಗದಲ್ಲಿಯೇ ಬುದ್ಧಿ ಹೇಳುವುದಕ್ಕೆ ಹೋದರೆ ಗಲಾಟೆ ಆಗುತ್ತದೆ ಅಂತ ಮಾರುತಿ ಗೌಡನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೇವೆ. ನಾವು ಅಪಹರಣ ಮಾಡಿಲ್ಲ ಅಂತ ವಿಚಾರಣೆ ವೇಳೆ ವಿಜಯ್ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಬಾಡಿ ಬಿಲ್ಡಿಂಗ್ ಕಾಂಪಿಟೇಷನ್‍ನಲ್ಲಿ ಗಲಾಟೆ ಮಾಡಿ ಜಿಮ್ ಟ್ರೈನರ್ ಅಪಹರಿಸಿ ಹಲ್ಲೆ ಮಾಡಿದ್ದ ಆರೋಪ ಸಂಬಂಧ ನಟ ದುನಿಯಾ ವಿಜಿ ಮತ್ತು ಅವರ ಮೂವರು ಸಹಚರರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದುನಿಯಾ ವಿಜಿ ಮೊದಲನೇ ಆರೋಪಿಯಾಗಿದ್ದರೆ, ಶಿಷ್ಯ ಜಿಮ್ ಟ್ರೈನರ್ ಪ್ರಸಾದ್ ಎರಡನೇ, ಮಣಿ ಮೂರನೇ ಮತ್ತು ಮತ್ತೊರ್ವ ಶಿಷ್ಯ ಪ್ರಸಾದ್ ನಾಲ್ಕನೇ ಆರೋಪಿಯಾಗಿದ್ದಾರೆ. ಶನಿವಾರ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಗಲಾಟೆ ವೇಳೆ ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿಗೌಡನನ್ನ ಅಪಹರಿಸಿ ಹಲ್ಲೆ ನಡೆಸಿದ್ದರು. ಬಳಿಕ ಪೊಲೀಸರ ಸೂಚನೆಯಂತೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು ಅಲ್ಲೂ ಪಾನಿಪುರಿ ಕಿಟ್ಟಿ ಮತ್ತು ದುನಿಯಾ ವಿಜಿ ನಡುವೆ ಗಲಾಟೆ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://youtu.be/5mlMHi06fyA

  • ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!

    ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!

    ಬೆಂಗಳೂರು: ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ. ನಿನ್ನ ಮೇಲೆ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿವೆ ಎಂದು ಎಸಿಪಿ ರವಿಶಂಕರ್, ನಟ ದುನಿಯಾ ವಿಜಯ್‍ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರಂತೆ.

    ಮಾರುತಿಗೌಡ ಕಿಡ್ನಾಪ್ ಮತ್ತು ಹಲ್ಲೆ ಕುರಿತು ವಿಚಾರಣೆ ನಡೆಸುತ್ತಿರುವ ಎಸಿಪಿ ರವಿಶಂಕರ್ ಅವರು, ನಿನ್ನ ಈ ವರ್ತನೆಯಿಂದಾಗಿ ಪ್ರಕರಣಗಳು ದಾಖಲಾಗುತ್ತಿವೆ. ಹಳೇ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ, ಆಗಲೇ ನಿನ್ನ ವರಸೆ ಶುರು ಮಾಡಿದ್ದೀಯಾ. ಹೀಗಾಗಿ ರೌಡಿಗಳಿಗೂ ನಿನಗೂ ಇರೋ ವ್ಯತ್ಯಾಸ ಏನು ಎಂದು ಪ್ರಶ್ನಿಸಿದ್ದಾರಂತೆ. ಇದನ್ನೂ ಓದಿ: ಜಂಗ್ಲಿ ಮೇಲಿದೆ ಸಾಲು ಸಾಲು ಪ್ರಕರಣಗಳು!

    ಶನಿವಾರ ರಾತ್ರಿ ಏನಾಯಿತು ಅಂತ ವಿವರಿಸುವಂತೆ ಎಸಿಪಿ ರವಿಶಂಕರ್, ವಿಜಯ್‍ರನ್ನು ಕೇಳಿದ್ದಾರೆ. ವಿಜಯ್ ಘಟನೆಯ ವಿವರವನ್ನು ಒಪ್ಪಿಸಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಉತ್ತರಿಸಿದ ರವಿಶಂಕರ್ ನ್ಯಾಯಾಲಯದಲ್ಲಿ ವಾದ ವಿವಾದದ ಬಳಿಕ ಸತ್ಯಾಂಶ ಹೊರಬರುತ್ತದೆ ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.

    ಸಂಜೆಯವೆರೆಗೂ ದುನಿಯಾ ವಿಜಯ್‍ಗೆ ಕ್ಲಾಸ್ ತೆಗೆದುಕೊಂಡು, ಬಳಕಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಪೊಲೀಸರು ನಿರ್ಧರಿಸಿದ್ದಾರಂತೆ. ಈಗಾಗಲೇ ವಿಜಯ್ ವಿರುದ್ಧ ಸಿಸಿಬಿ ಹಾಗೂ ಚನ್ನಮ್ಮ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

    ನಡೆದಿದ್ದೇನು?
    ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ.

    ಮಾರುತಿಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ನಂತರ 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷನಾಗಿದ್ದಾರೆ. ಜೊತೆಗೆ ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡನ್ನ ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೋಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದಾರೆ. ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ. ಇದನ್ನೂ ಓದಿ: ಠಾಣೆಯಿಂದ ದುನಿಯಾ ವಿಜಿ ಶಿಫ್ಟ್ – ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸ್ರು

    ಇದೇ ವೇಳೆ ಪಾನಿಪುರಿ ಕಿಟ್ಟಿ ಹುಡುಗರು, ದುನಿಯ್ ವಿಜಿ ಕಾರ್ ನ ಮೇಲೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪೊಲೀಸ್ ಠಾಣೆ ಬಳಿಯೂ ದರ್ಪ ಮೆರೆಯುತ್ತಿದ್ದ ವಿಜಿಗೆ ಎಸಿಪಿ ರವಿಶಂಕರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

    ಈ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುನಿಯ್ ವಿಜಯ್ ಹಾಗೂ ಸಹಚರರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಹಿಂದೆ ದುನಿಯಾ ವಿಜಯ್ ಗೆ ಪಾನಿಪೂರಿ ಕಿಟ್ಟಿ ಜಿಮ್ ಟ್ರೇನರ್ ಆಗಿದ್ದರು. ಆದರೆ ಇತ್ತೀಚೆಗೆ ಈ ಎರಡೂ ಗ್ಯಾಂಗ್‍ಗಳ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿಯೇ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪಾನಿಪುರ ಕಿಟ್ಟಿಯ ಮೇಲಿನ ದ್ವೇಷಕ್ಕೆ ಆತನ ಅಣ್ಣನ ಮಗ ಮಾರುತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಮಾರುತಿಗೌಡ ಈಗ ನಟರಾದ ಯಶ್, ಅಜಯ್ ರಾವ್, ಪ್ರೇಮ್‍ಗೂ ಜಿಮ್ ಟ್ರೇನರ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಠಾಣೆಯಿಂದ ದುನಿಯಾ ವಿಜಿ ಶಿಫ್ಟ್ – ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸ್ರು

    ಠಾಣೆಯಿಂದ ದುನಿಯಾ ವಿಜಿ ಶಿಫ್ಟ್ – ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸ್ರು

    ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಜನ ಸೇರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸ್ ಠಾಣೆಯಿಂದ ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ.

    ಪೊಲೀಸರು ಯಾರಿಗೂ ಕಾಣದಂತೆ ವಿಜಿಯನ್ನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ಮಾರುತಿಗೌಡ ವಿಕ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಪಾನಿಪುರಿ ಕಿಟ್ಟಿ ಸಂಗಡಿಗರು ವಿಕ್ರಮ ಆಸ್ಪತ್ರೆಯ ಬಳಿ ಸೇರಿದ್ದಾರೆ. ಇದರಿಂದ ಠಾಣೆಯೆದುರು ಮತ್ತೆ ಜನ ಸೇರುವ ಸಾಧ್ಯತೆ ಇದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸ್ ಠಾಣೆಯ ಹಿಂಬಾಗಿಲ ಮೂಲಕ ದುನಿಯಾ ವಿಜಯ್ ಅವರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ಜಂಗ್ಲಿ ಮೇಲಿದೆ ಸಾಲು ಸಾಲು ಪ್ರಕರಣಗಳು!

    ವಿಜಿ ಬ್ಲಡ್ ಸ್ಯಾಂಪಲ್:
    ದುನಿಯಾ ವಿಜಿ ಗಾಂಜಾ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೈಗ್ರೌಂಡ್ಸ್ ಪೊಲೀಸರು ಶಂಕಿಸಿದ್ದಾರೆ. ಆದ್ದರಿಂದ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಎಫ್‍ಎಸ್‍ಎಲ್‍ಗೆ ಪೊಲೀಸರು ಕಳುಹಿಸಿದ್ದಾರೆ. ಒಂದು ವೇಳೆ ಗಾಂಜಾ ಇರುವುದು ಪತ್ತೆಯಾದರೆ ಎನ್‍ಡಿಪಿಎಸ್ ಆಕ್ಟ್ ನಲ್ಲಿ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ಹೈಗ್ರೌಂಡ್ಸ್ ಸ್ಟೇಷನ್ ನಿಂದ ಕರೆತಂದು ವೈಯಾಲಿಕಾವಲ್ ನಲ್ಲಿ ದುನಿಯಾ ವಿಜಯ್ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ನಂತರ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದುನಿಯಾ ವಿಜಯ್ ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗಲಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಜಡ್ಜ್ ಮುಂದೆ ದುನಿಯಾ ವಿಜಯ್ ಹಾಜರುಪಡಿಸಲಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=9HevyLtzMc0

  • ಜಂಗ್ಲಿ ಮೇಲಿದೆ ಸಾಲು ಸಾಲು ಪ್ರಕರಣಗಳು!

    ಜಂಗ್ಲಿ ಮೇಲಿದೆ ಸಾಲು ಸಾಲು ಪ್ರಕರಣಗಳು!

    ಬೆಂಗಳೂರು: ನಟ ದುನಿಯಾ ವಿಜಿ ಗೂಂಡಾಗಿರಿ ಪ್ರಕರಣ ಇದೇ ಮೊದಲಲ್ಲ. ಸಿ.ಕೆ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಯ್ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾಗಿವೆ.

    ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ವಿಜಯ್ ಸಹಾಯ ಮಾಡಿದ್ದರು. ಅಲ್ಲದೇ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆ ಕೂಡ ಆಗಿದ್ದರು. ನಂತರ ವಿಜಯ್ ಗಾಗಿ ಬಲೆ ಬೀಸಿದ್ದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬಂಧಿಸಿದ ನಂತರ ಡಿಸಿಪಿ ಶರಣಪ್ಪ ಅವರು ವಿಜಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದರು. ಅದಕ್ಕೂ ಮೊದಲು ಸಿಕೆ ಅಚ್ಚುಕಟ್ಟು ಠಾಣೆಯಲ್ಲೇ ಮತ್ತೊಂದು ಕೇಸ್ ನಲ್ಲಿ ವಿಜಿ ಅರೆಸ್ಟ್ ಆಗಿದ್ದರು. ವೃದ್ಧ ವ್ಯಕ್ತಿಯೊಬ್ಬರ ಎದೆಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಈ ಕುರಿತು ವೃದ್ಧ ವ್ಯಕ್ತಿ ವಿಜಿ ವಿರುದ್ಧ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲೂ ಕರಿಚಿರತೆ ಅರೆಸ್ಟ್ ಆಗಿದ್ದು, ತದನಂತರ ಬೇಲ್ ಪಡೆದು ಹೊರ ಬಂದಿದ್ದರು. ಇದನ್ನೂ ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ಮೇ 31 2018 ರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇರೆಗೆ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಐಪಿಸಿ ಕಲಂ 353 (ಪೊಲೀಸ್ ಆಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು), ಐಪಿಸಿ ಕಲಂ 255 (ಕರ್ತವ್ಯ ನಿರತ ಪೊಲೀಸ್ ಜೊತೆ ವಾಗ್ವಾದಕ್ಕಿಳಿದಿದ್ದು) ಸಂಬಂಧ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದನ್ನೂ ಓದಿ:  ನಿವೃತ್ತ ಯೋಧರಿಗೆ ಅವಾಜ್, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಕರಿಚಿರತೆ!


    ಜನವರಿ 18 2013 ರಂದು ಪತ್ನಿ ನಾಗರತ್ನ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಅಲ್ಲದೇ ವಿಜಿ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಮುಂದಾಗಿದ್ದರು. ಈ ಎರಡೂ ಪ್ರಕರಣಗಳ ಸಂಬಂಧ ವಿಜಿ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಜನವರಿ 17 2013 ರಲ್ಲಿ ಕೌಟುಂಬಿಕ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ದರು.  ಇದನ್ನೂ ಓದಿ: ರಾತ್ರೋರಾತ್ರಿ ನಟ ದುನಿಯಾ ವಿಜಯ್ ಬಂಧನ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=9HevyLtzMc0