Tag: Duniya Vijay

  • ಜಾಮೀನು ಅರ್ಜಿ ವಜಾ – ದುನಿಯಾ ವಿಜಿಗೆ ಜೈಲೇಗತಿ

    ಜಾಮೀನು ಅರ್ಜಿ ವಜಾ – ದುನಿಯಾ ವಿಜಿಗೆ ಜೈಲೇಗತಿ

    ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ 4 ಆರೋಪಿಗಳ ಜಾಮೀನು ಅರ್ಜಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿದೆ.

    ಜಿಮ್ ಟ್ರೈನರ್ ಮಾರುತಿಗೌಡ ಮೇಲಿನ ಹಲ್ಲೆ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಹಲ್ಲೆಗೆ ಒಳಗಾದ ಮಾರುತಿಗೌಡ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ನ್ಯಾ.ಮಹೇಶ್ ಬಾಬು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

    ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆಪ್ಟೆಂಬರ್ 26 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಸೋಮವಾರದ ವಿಚಾರಣೆ ವೇಳೆ ಸರ್ಕಾರಿ ವಕೀಲರು, ವಿಜಯ್ ರಕ್ತ ಬರುವಂತೆ ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪ್ರಭಾವಿ ವ್ಯಕ್ತಿಯೂ ಆಗಿದ್ದಾರೆ. ಈ ರೀತಿಯಾಗಿ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಇವರಿಗೆಲ್ಲ ಒಂದು ಪಾಠವಾಗುವ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಬೇಡಿ ಎಂದು ವಾದ ಮಂಡಿಸಿದ್ದರು.

    ದುನಿಯಾ ವಿಜಿ ಪರ ವಕೀಲರು, ಜಾಮೀನು ಸಿಗಬಾರದು ಎನ್ನುವ ಕಾರಣಕ್ಕಾಗಿ ಪೊಲೀಸರು ಉದ್ದೇಶಪೂರ್ವಕವಾಗಿ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಹಾಕಿರುವ ಕೇಸ್ ಬೇರೆ, ವಿಕ್ರಮ್ ಆಸ್ಪತ್ರೆಗೆ ಅಡ್ಮಿಟ್ ಅದಾಗ ಹಾಕಿರುವ ಕೇಸ್ ಬೇರೆ ಎನ್ನುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.

    ವಿಜಯ್ ಯಾವುದೇ ಅಸ್ತ್ರ ಬಳಸಿ ಹಲ್ಲೆ ನಡೆಸಿಲ್ಲ. ಅಸ್ತ್ರ ಹಿಡಿದುಕೊಂಡು ಓಡಾಡುವುದಕ್ಕೆ ಅವರೇನು ರೌಡಿ ಶೀಟರ್ ಅಲ್ಲ. ಆ ಕ್ಷಣದಲ್ಲಿ ಜಗಳ ನಡೆದಿದ್ದು, ಹಲ್ಲೆ ನಡೆಸಲೆಂದೇ ವಿಜಿ ಅಲ್ಲಿಗೆ ಬಂದಿಲ್ಲ. ಮಾತು ಮಾತಿಗೆ ಬೆಳೆದು ಜಗಳ ದೊಡ್ಡದಾಗಿದೆ. ವಿಜಯ್ ಸಿನಿಮಾ ನಟ ಎನ್ನುವ ಕಾರಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಹೀಗಾಗಿ ಜಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.

    ಯಾವೆಲ್ಲ ಕೇಸ್?
    ದುನಿಯಾ ವಿಜಯ್ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365(ಕಿಡ್ನಾಪ್), 342(ಅಕ್ರಮ ಬಂಧನ)325(ಹಲ್ಲೆ) 506(ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ. ವಿಜಿ ಮೇಲೆ ದಾಖಲಾಗಿರುವ ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ಹಲ್ಲೆ ಪ್ರಕರಣ- ಪಾನಿಪುರಿ ಕಿಟ್ಟಿಗೆ ಸಂಕಷ್ಟ

    ದುನಿಯಾ ವಿಜಿ ಹಲ್ಲೆ ಪ್ರಕರಣ- ಪಾನಿಪುರಿ ಕಿಟ್ಟಿಗೆ ಸಂಕಷ್ಟ

    ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ನಟ ದುನಿಯಾ ವಿಜಯ್ ಜೈಲು ಸೇರಿದ್ರೆ ಇತ್ತ, ಪಾನಿಪುರಿ ಕಿಟ್ಟಿಗೆ ಸಂಕಷ್ಟ ಎದುರಾಗಿದೆ.

    ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ದುನಿಯಾ ವಿಜಯ್ ಮೂಗಿಗೆ ಡಿಚ್ಚಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ವಿಜಿಗೆ ಡಿಚ್ಚಿ ಹೊಡೆದಿದ್ದಾನೆ. ಅಲ್ಲದೇ ನಾನು ವಿಜಿಗೆ ಡಿಚ್ಚಿ ಹೊಡೆದೆ ಅಂತಾ ಹೇಳ್ಕೊಂಡು ತಿರುಗಾಡ್ತಿದ್ದಾನೆ. ಹೀಗಾಗಿ ಪಾನಿಪುರಿ ಕಿಟ್ಟಿ ಮೇಲೆ ಕ್ರಮ ಕೈಗೊಳ್ಳುವಂತೆ ಕುರುಬರ ಪಡೆ ರಾಜ್ಯಾಧ್ಯಕ್ಷ ವರ್ತೂರು ಸತೀಶ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

    ಸಾಮಾನ್ಯ ಜನ ಡಿಚ್ಚಿ ಹೊಡೆಯೋದಕ್ಕೂ, ಬಾಡಿ ಬಿಲ್ಡರ್ ಡಿಚ್ಚಿ ಹೊಡೆಯೋದಕ್ಕೂ ವ್ಯತ್ಯಾಸವಿದೆ. ಬಾಡಿ ಬಿಲ್ಡರ್ ಡಿಚ್ಚಿ ಹೊಡೆದ್ರೆ ಪ್ರಾಣವೇ ಹೋಗುತ್ತೆ. ಹೀಗಾಗಿ ಪೊಲೀಸರ ಎದುರು ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CXoYbpWrkoU

    https://www.youtube.com/watch?v=caVQhLAJWTs

  • ಬೇಗ ಕೋರ್ಟ್ ನಿಂದ ಜಾಮೀನು ಸಿಗಲೆಂದು ವಿಜಯ್ ಅಭಿಮಾನಿಗಳಿಂದ ಪೂಜೆ

    ಬೇಗ ಕೋರ್ಟ್ ನಿಂದ ಜಾಮೀನು ಸಿಗಲೆಂದು ವಿಜಯ್ ಅಭಿಮಾನಿಗಳಿಂದ ಪೂಜೆ

    ದಾವಣಗೆರೆ: ನಟ ದುನಿಯಾ ವಿಜಯ್ ಜೈಲು ಸೇರಿದ ಹಿನ್ನೆಲೆಯಲ್ಲಿ ಅವರಿಗೆ ಬೇಗ ನ್ಯಾಯಾಲಯದಿಂದ ಜಾಮೀನು ಸಿಗಬೇಕೆಂದು ದಾವಣಗೆರೆಯಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.

    ಕನ್ನಡ ಕಂಠೀರವ ದುನಿಯಾ ವಿಜಯ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೆಚ್ಚಿನ ನಟ ದುನಿಯಾ ವಿಜಿಯವರಿಗೆ ಜಾಮೀನು ದೊರೆತು ಹೊರಗೆ ಬರಬೇಕು ಎಂದು ಪ್ರಾರ್ಥಿಸಿದ್ರು. ಹತ್ತಾರೂ ಅಭಿಮಾನಿಗಳು ನಟ ದುನಿಯಾ ವಿಜಿಯವರ ಭಾವಚಿತ್ರವನ್ನು ಹಿಡಿದು ಬಹುಬೇಗ ಜಾಮೀನು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

    ಶನಿವಾರ ನಡೆದಿದ್ದೇನು?
    ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.

    ಬುಧವಾರ ಮಧ್ಯಾಹ್ನ 3 ಗಂಟೆಗೆ ಜಿಮ್ ಟ್ರೇನರ್ ಮಾರುತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ಆದೇಶ ಪ್ರಕಟವಾಗಲಿದೆ. ಈ ಹಿಂದೆ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. ಇತ್ತ ಮಾರುತಿಗೌಡ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯ್‍ಗೆ ಜಾಮೀನು ಸಿಗೋದು ಅನುಮಾನವಾಗಿದೆ.

    ದುನಿಯಾ ವಿಜಯ್ ರೌಡಿ ಅಲ್ಲ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ವಿಜಿ ಓರ್ವ ಸೆಲೆಬ್ರೆಟಿ ಎಂಬ ಕಾರಣಕ್ಕೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಮಾಡಲಾಗುತ್ತಿದ್ದು, ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದರು. ದುನಿಯಾ ವಿಜಿ ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ಇವರ ಮೇಲೆ ಇಂತಹ ಪ್ರಕರಣಗಳು ಪದೇ ಪದೇ ದಾಖಲಾಗುತ್ತಿವೆ. ಒಂದು ವೇಳೆ ಜಾಮೀನು ನೀಡಿದರೆ, ತಮ್ಮ ಪ್ರಭಾವ ಬಳಸಿ ಸಾಕ್ಷಿಗಳ ಮೇಲೆ ಒತ್ತಡ ಹೇರುತ್ತಾರೆ. ಆದ್ದರಿಂದ ಆರೋಪಿ ದುನಿಯಾ ವಿಜಯ್ ಮತ್ತು ಸ್ನೇಹಿತರಿಗೆ ಜಾಮೀನು ನೀಡಕೂಡದು ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಚಂದನವನದ ‘ಚಂಡ’ನಿಗೆ ಇಂದು ಸಿಗುತ್ತಾ ಬೇಲ್..?

    ಚಂದನವನದ ‘ಚಂಡ’ನಿಗೆ ಇಂದು ಸಿಗುತ್ತಾ ಬೇಲ್..?

    ಬೆಂಗಳೂರು: ಮಾರುತಿಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸ್ಯಾಂಡಲ್‍ವುಡ್ ಕರಿಚಿರತೆ ದುನಿಯಾ ವಿಜಯ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

    ಮಧ್ಯಾಹ್ನ 3 ಗಂಟೆಗೆ ಜಿಮ್ ಟ್ರೇನರ್ ಮಾರುತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ಆದೇಶ ಪ್ರಕಟವಾಗಲಿದೆ. ಈ ಹಿಂದೆ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. ಇತ್ತ ಮಾರುತಿಗೌಡ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯ್‍ಗೆ ಜಾಮೀನು ಸಿಗೋದು ಅನುಮಾನವಾಗಿದೆ.

    ದುನಿಯಾ ವಿಜಯ್ ರೌಡಿ ಅಲ್ಲ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ವಿಜಿ ಓರ್ವ ಸೆಲೆಬ್ರೆಟಿ ಎಂಬ ಕಾರಣಕ್ಕೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಮಾಡಲಾಗುತ್ತಿದ್ದು, ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದರು. ದುನಿಯಾ ವಿಜಿ ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ಇವರ ಮೇಲೆ ಇಂತಹ ಪ್ರಕರಣಗಳು ಪದೇ ಪದೇ ದಾಖಲಾಗುತ್ತಿವೆ. ಒಂದು ವೇಳೆ ಜಾಮೀನು ನೀಡಿದರೆ, ತಮ್ಮ ಪ್ರಭಾವ ಬಳಸಿ ಸಾಕ್ಷಿಗಳ ಮೇಲೆ ಒತ್ತಡ ಹೇರುತ್ತಾರೆ. ಆದ್ದರಿಂದ ಆರೋಪಿ ದುನಿಯಾ ವಿಜಯ್ ಆ್ಯಂಡ್ ಟೀಂಗೆ ಜಾಮೀನು ನೀಡಕೂಡದು ಎಂದು ಎಸ್‍ಪಿಪಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಬಲ ವಾದ ಮಂಡಿಸಿದ್ದರು.

    ಶನಿವಾರ ನಡೆದಿದ್ದೇನು?
    ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ.

    ವಿಜಿ ವಿರುದ್ಧ ಸಾಲು ಸಾಲು ಪ್ರಕರಣಗಳು:
    ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ವಿಜಯ್ ಸಹಾಯ ಮಾಡಿದ್ದರು. ಅಲ್ಲದೇ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆ ಕೂಡ ಆಗಿದ್ದರು. ನಂತರ ವಿಜಯ್ ಗಾಗಿ ಬಲೆ ಬೀಸಿದ್ದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬಂಧಿಸಿದ ನಂತರ ಡಿಸಿಪಿ ಶರಣಪ್ಪ ಅವರು ವಿಜಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದರು. ಅದಕ್ಕೂ ಮೊದಲು ಸಿಕೆ ಅಚ್ಚುಕಟ್ಟು ಠಾಣೆಯಲ್ಲೇ ಮತ್ತೊಂದು ಕೇಸ್ ನಲ್ಲಿ ವಿಜಿ ಅರೆಸ್ಟ್ ಆಗಿದ್ದರು. ವೃದ್ಧ ವ್ಯಕ್ತಿಯೊಬ್ಬರ ಎದೆಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಈ ಕುರಿತು ವೃದ್ಧ ವ್ಯಕ್ತಿ ವಿಜಿ ವಿರುದ್ಧ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲೂ ಕರಿಚಿರತೆ ಅರೆಸ್ಟ್ ಆಗಿದ್ದು, ತದನಂತರ ಬೇಲ್ ಪಡೆದು ಹೊರ ಬಂದಿದ್ದರು.

    ಮೇ 31 2018 ರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇರೆಗೆ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಐಪಿಸಿ ಕಲಂ 353 (ಪೊಲೀಸ್ ಆಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು), ಐಪಿಸಿ ಕಲಂ 255 (ಕರ್ತವ್ಯ ನಿರತ ಪೊಲೀಸ್ ಜೊತೆ ವಾಗ್ವಾದಕ್ಕಿಳಿದಿದ್ದು) ಸಂಬಂಧ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಜನವರಿ 18 2013 ರಂದು ಪತ್ನಿ ನಾಗರತ್ನ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಅಲ್ಲದೇ ವಿಜಿ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಮುಂದಾಗಿದ್ದರು. ಈ ಎರಡೂ ಪ್ರಕರಣಗಳ ಸಂಬಂಧ ವಿಜಿ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಜನವರಿ 17 2013 ರಲ್ಲಿ ಕೌಟುಂಬಿಕ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಯ್ ಹಲ್ಲೆ, ಕಿಡ್ನ್ಯಾಪ್ ಕೇಸ್ ಹಿಂದಿದೆ ಒಂದು ರೋಚಕ ಕಥೆ

    ದುನಿಯಾ ವಿಜಯ್ ಹಲ್ಲೆ, ಕಿಡ್ನ್ಯಾಪ್ ಕೇಸ್ ಹಿಂದಿದೆ ಒಂದು ರೋಚಕ ಕಥೆ

    ಬೆಂಗಳೂರು: ನಟ ದುನಿಯಾ ವಿಜಯ್ ಹಲ್ಲೆ, ಕಿಡ್ನ್ಯಾಪ್ ಕೇಸ್ ಹಿಂದೆ ಒಂದು ರೋಚಕ ಕಥೆ ಇದೆ. ಜೀಮ್ ಟ್ರೈನರ್ ಮಾರುತಿಗೌಡನ ಮೇಲೆ ಹಲ್ಲೆ ಮಾಡೋಕೆ ಕಾರಣವಾಗಿತ್ತು ಹತ್ತು ದಿನಗಳ ಹಿಂದೆ ನಡೆದ ಅದೊಂದು ಘಟನೆ. ದುನಿಯಾ ವಿಜಯ್ ಅಂಡ್ ಗ್ಯಾಂಗ್ ಮಾರುತಿ ಗೌಡನ ಮೇಲೆ ಹಲ್ಲೆ ಮಾಡೋಕು ಮುನ್ನ, ಜೀಮ್ ಟ್ರೈನರ್ ಪ್ರಸಾದ್ ಮತ್ತು ಮತ್ತೊಬ್ಬ ಜೀಮ್ ಟ್ರೈನರ್ ಪಾನಿಪುರಿ ಕಿಟ್ಟಿ ಮ್ಯಾಟ್ರು ಇಬ್ಬರ ನಡುವಿನ ಮತ್ಸರ ತಿಳಿದುಕೊಳ್ಳಲೇಬೇಕು.

    ಒಟ್ಟಿಗೆ ಜೀಮ್ ನಡೆಸುತ್ತಿದ್ದ ಪ್ರಸಾದ್ ಮತ್ತು ಕಿಟ್ಟಿ ಕೆಲ ಕಾರಣಕ್ಕೆ ಬೇರೆ ಆಗಿದ್ದರು. ಬೇರೆಯಾದ ಮೇಲೂ ಎರಡು ಟೀಂಗಳ ಮಧ್ಯೆ ಕೋಲ್ಡ್ ವಾರ್ ಇತ್ತು. ಎಲ್ಲೇ ಬಾಡಿ ಬಿಲ್ಟ್ ಕಾಂಪೀಟೇಷನ್ ಇದ್ದರೂ ಎರಡು ಕಡೆ ಹುಡುಗರು ಅಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈ ವೇಳೆ ಪ್ರಸಾದ್ ಮತ್ತು ಪಾನಿಪುರಿ ಕಿಟ್ಟಿ ತಮ್ಮ ಹುಡುಗರ ಪರವಾಗಿ ನಿಂತು ಸಪೋರ್ಟ್ ಮಾಡುತ್ತಿದ್ದರು.

    ಹತ್ತು ದಿನಗಳ ಹಿಂದೆ ನಗರದ ಮಲ್ಲೇಶ್ವರಂ ನಲ್ಲಿ ಅದೊಂದು ಬಾಡಿ ಬಿಲ್ಟ್ ಕಾಂಪಿಟೇಷನ್ ನಡೆದಿತ್ತು. ಎಂದಿನಂತೆ ತಮ್ಮ ತಮ್ಮ ಹುಡುಗರಿಗೆ ಸಪೋರ್ಟ್ ಮಾಡಲು ಪ್ರಸಾದ್ ಜೊತೆ ದುನಿಯಾ ವಿಜಯ್ ಬಂದ್ದಿದ್ರೆ, ಪಾನಿಪುರಿ ಕಿಟ್ಟಿ ಜೊತೆಗೆ ಮಾರುತಿ ಗೌಡ ಕೂಡ ಬಂದಿದ್ದರು. ಈ ಸ್ಪರ್ಧೆಯಲ್ಲಿ ಪ್ರಸಾದ್ ಕಡೆಯವರು ಗೆದ್ದು ಪಾನಿಪುರಿ ಕಿಟ್ಟಿ ಕಡೆಯವರು ಸೋತಿದ್ರಂತೆ. ಈ ವೇಳೆ ಎದುರಿನ ಗ್ಯಾಂಗ್ ನ ಅಣಕಿಸುವಂತೆ ದುನಿಯಾ ವಿಜಯ್ ಮತ್ತು ಪ್ರಸಾದ್ ನಡೆದುಕೊಂಡಿದ್ದರು. ಅಲ್ಲದೇ ಕಿಚಾಯಿಸಿದ್ದರು, ಇದರಿಂದ ಮಾರುತಿಗೌಡ ಕೋಪಗೊಂಡಿದ್ದರು.

    ಇದೇ ಸಿಟ್ಟಿನಲ್ಲಿದ್ದ ಮಾರುತಿ ಗೌಡ ಶನಿವಾರ ನಡೆದ ಮಿಸ್ಟರ್ ಬೆಂಗಳೂರು ಕಾಂಪೀಟೇಷನ್ ನಲ್ಲಿ ಮಾರುತಿ ಗೌಡ ಹುಡುಗರು ಗೆದ್ದಿದ್ದರು. ಮಲ್ಲೇಶ್ವರಂನಲ್ಲಿ ಮಾಡಿದ್ದ ಅವಮಾನಕ್ಕೆ ಸೇಡು ತೀರಿಸಿಕೊಳ್ಳೋ ಭರದಲ್ಲಿ ದುನಿಯಾ ವಿಜಿಯನ್ನು ಮಾರುತಿ ಗೌಡ ಕೆಣಕಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಿ ಆರೋಗ್ಯದಲ್ಲಿ ಏರುಪೇರು

    ದುನಿಯಾ ವಿಜಿ ಆರೋಗ್ಯದಲ್ಲಿ ಏರುಪೇರು

    ಬೆಂಗಳೂರು: ಜೈಲಿನ ಆಹಾರ ಧಿಕ್ಕರಿಸಿದ್ದ ದುಜಿಯಾ ವಿಜಿ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ.

    ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಅಲ್ಲದೇ ಬ್ಯಾರಕ್‍ಗೆ ಹೋಗಲ್ಲ ಎಂದಿದ್ದಕ್ಕೆ ಅವರಿಗೆ ಸೆಲ್ ನೀಡಲಾಗಿತ್ತು. ನಂತರ ಮನೆಯ ಊಟ, ತಿಂಡಿ ಬೇಕೆಂದು ಹಠ ಹಿಡಿದಿದ್ದರು. ಹೀಗಾಗಿ ದುನಿಯಾ ವಿಜಯ್‍ಗೆ ರವಿ ಹಾಗೂ ಸ್ನೇಹಿತರು ಮನೆಯಿಂದ ಊಟ ತಂದುಕೊಟ್ಟಿದ್ದಾರೆ.

    ಮನೆಯಿಂದ ತಂದ ಆಹಾರವನ್ನು ಜೈಲಿನ ಒಳಗಡೆ ತರಲು ಜೈಲಾಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಸೋಮವಾರ ಸರಿಯಾದ ಆಹಾರ ದೊರೆಯದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ದುನಿಯಾ ವಿಜಿ ಪ್ರತಿ ದಿನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಆಹಾರ ಸೇವಿಸುತ್ತಿದ್ದರು. ಪ್ರತಿದಿನ ಅವರು ಐದು ಬಾರಿ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಈಗ ಜೈಲಿನ ನಿಯಮಗಳ ಪ್ರಕಾರವೇ ಆಹಾರವನ್ನು ಸೇವಿಸಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುರುಕ್ಷೇತ್ರ ನಿರ್ಮಾಪಕ ಮುನಿರತ್ನರಿಂದ ದರ್ಶನ್ ಭೇಟಿ

    ಕುರುಕ್ಷೇತ್ರ ನಿರ್ಮಾಪಕ ಮುನಿರತ್ನರಿಂದ ದರ್ಶನ್ ಭೇಟಿ

    ಮೈಸೂರು: ಅಪಘಾತದಿಂದ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರನ್ನು ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದರ್ಶನ್ ಆರಾಮಾಗಿ ಇದ್ದಾರೆ. ಕೈ ಮುರಿದಿರೋದು ಬಿಟ್ಟರೆ ಬೇರೆ ಸಮಸ್ಯೆ ಆಗಿಲ್ಲ. ಶೀಘ್ರದಲ್ಲೇ ಅವರು ಗುಣಮುಖರಾಗುತ್ತಾರೆ ಎಂದು ಹೇಳಿದರು.

    ಕುರುಕ್ಷೇತ್ರ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿ, ಚಿತ್ರದಲ್ಲಿ ದರ್ಶನ್ ಅಭಿನಯದ ಎಲ್ಲ ದೃಶ್ಯಗಳ ಶೂಟಿಂಗ್ ಮುಗಿದಿದೆ. ಡಬ್ಬಿಂಗ್ ಸಹ ಮುಗಿಸಿಕೊಟ್ಟಿದ್ದಾರೆ. ಗ್ರಾಫಿಕ್ಸ್ ನಿಂದಾಗಿ ಚಿತ್ರ ಬಿಡುಗಡೆಗೆ ತಡವಾಗುತ್ತಿದೆ ಅಷ್ಟೇ ಎಂದು ತಿಳಿಸಿದರು. ಇದನ್ನು ಓದಿ:  ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್

    ಇದೇ ವೇಳೆ ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿತ್ರರಂಗದ ನಟರು ಸೂಕ್ಷ್ಮ ಮಾತುಗಳನ್ನಾಡಬೇಕು. ಈ ರೀತಿ ಬೀದಿಯಲ್ಲಿ ಜಗಳವಾಡಿಕೊಂಡು ನಿಲ್ಲಬಾರದು. ನಿಮ್ಮನ್ನು ಲಕ್ಷಾಂತರ ಜನ ಹಿಂಬಾಲಿಸುತ್ತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ರಾಜ್‍ಕುಮಾರ್, ವಿಷ್ಣುವರ್ಧನ್ ಅಂತಹ ಮಾದರಿ ನಟರಿದ್ದರು. ಅವರನ್ನ ನೋಡಿ ಅದೆಷ್ಟೋ ಮಂದಿ ಬದಲಾವಣೆ ಆಗಿದ್ದರು. ಚಿತ್ರಗಳು, ಚಿತ್ರನಟರು ಜನರ ಮೇಲೆ ಪರಿಣಾಮ ಬೀರುತ್ತಾರೆ ಎಂದರು. ಇದನ್ನು ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಹ ನಿರ್ಮಾಪಕರ ಸಂಘದಿಂದ ಸಭೆ ಕರೆಯುತ್ತೇನೆ. ನಾನು ಮತ್ತು ಅಂಬರೀಶ್ ಇಬ್ಬರು ಜೊತೆಯಲ್ಲಿ ಕೂತು ವಿಜಯ್ ಮತ್ತು ಕಿಟ್ಟಿಯನ್ನು ಕರೆಸಿ ಮಾತಾಡುತ್ತೇವೆ. ಅವರಿಬ್ಬರ ಬಳಿ ಮಾತನಾಡಿದ ಮೇಲೆ ಅವರ ಸ್ನೇಹ ಚಿಗುರುವಂತೆ ಮಾಡುತ್ತೇನೆ. ದುನಿಯಾ ವಿಜಯ್ ಇದರಿಂದ ಹೊರಗೆ ಬಂದು ಒಳ್ಳೆಯ ಚಿತ್ರ ಮಾಡಲಿ. ಅವರ ಅಭಿಮಾನಿಗಳ ನಿರಾಸೆಯಾಗುವಂತೆ ನಡೆದುಕೊಳ್ಳದೆ ಇರಲಿ ಎಂದು ಪ್ರತಿಕ್ರಿಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಸಲ್ಲಿ ಸಿಗ್ಲಿಲ್ಲ `ಬೇಲ್’ ಪುರಿ- ಎರಡು ದಿನ ಜೈಲಲ್ಲೇ ಜಂಗ್ಲಿ

    ಕೇಸಲ್ಲಿ ಸಿಗ್ಲಿಲ್ಲ `ಬೇಲ್’ ಪುರಿ- ಎರಡು ದಿನ ಜೈಲಲ್ಲೇ ಜಂಗ್ಲಿ

    ಬೆಂಗಳೂರು:  ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಇನ್ನು ಎರಡು ದಿನ ಜೈಲಿನಲ್ಲಿ ಇರಬೇಕಾಗುತ್ತದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆಪ್ಟೆಂಬರ್ 26 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

    ವಿಚಾರಣೆ ವೇಳೆ ಸರ್ಕಾರಿ ವಕೀಲರು, ವಿಜಯ್ ರಕ್ತ ಬರುವಂತೆ ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪ್ರಭಾವಿ ವ್ಯಕ್ತಿಯೂ ಆಗಿದ್ದಾರೆ. ಈ ರೀತಿಯಾಗಿ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಇವರಿಗೆಲ್ಲ ಒಂದು ಪಾಠವಾಗುವ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಬೇಡಿ ಎಂದು ವಾದ ಮಂಡಿಸಿದರು.

    ದುನಿಯಾ ವಿಜಿ ಪರ ವಕೀಲರು, ಜಾಮೀನು ಸಿಗಬಾರದು ಎನ್ನುವ ಕಾರಣಕ್ಕಾಗಿ ಪೊಲೀಸರು ಉದ್ದೇಶಪೂರ್ವಕವಾಗಿ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಹಾಕಿರುವ ಕೇಸ್ ಬೇರೆ, ವಿಕ್ರಮ್ ಆಸ್ಪತ್ರೆಗೆ ಅಡ್ಮಿಟ್ ಅದಾಗ ಹಾಕಿರುವ ಕೇಸ್ ಬೇರೆ ಎನ್ನುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು.

    ವಿಜಯ್ ಯಾವುದೇ ಅಸ್ತ್ರ ಬಳಸಿ ಹಲ್ಲೆ ನಡೆಸಿಲ್ಲ. ಅಸ್ತ್ರ ಹಿಡಿದುಕೊಂಡು ಓಡಾಡುವುದಕ್ಕೆ ಅವರೇನು ರೌಡಿ ಶೀಟರ್ ಅಲ್ಲ. ಆ ಕ್ಷಣದಲ್ಲಿ ಜಗಳ ನಡೆದಿದ್ದು, ಹಲ್ಲೆ ನಡೆಸಲೆಂದೇ ವಿಜಿ ಅಲ್ಲಿಗೆ ಬಂದಿಲ್ಲ. ಮಾತು ಮಾತಿಗೆ ಬೆಳೆದು ಜಗಳ ದೊಡ್ಡದಾಗಿದೆ. ವಿಜಯ್ ಸಿನಿಮಾ ನಟ ಎನ್ನುವ ಕಾರಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಹೀಗಾಗಿ ಜಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಎರಡು ಕಡೆಯ ವಾದವನ್ನು ಕೇಳಿದ ನ್ಯಾಯಮೂರ್ತಿ ಮಹೇಶ ಬಾಬು 26ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

    ಯಾವೆಲ್ಲ ಕೇಸ್?
    ದುನಿಯಾ ವಿಜಯ್ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ, ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365(ಕಿಡ್ನಾಪ್), 342(ಅಕ್ರಮ ಬಂಧನ), 325(ಹಲ್ಲೆ), 506(ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ. ವಿಜಿ ಮೇಲೆ ದಾಖಲಾಗಿರುವ ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

    ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

    ಬೆಂಗಳೂರು: `ಜಯಮ್ಮನ ಮಗ’ ದುನಿಯಾ ವಿಜಿ ಬಾಳಲ್ಲಿ ಪತ್ನಿಯರ ಫೈಟ್ ಆರಂಭವಾಗಿದೆ. ಇದೀಗ ಎರಡನೇ ಪತ್ನಿ ಕೀರ್ತಿ ಗೌಡ ವಿರುದ್ಧ ಮೊದಲ ಪತ್ನಿ ನಾಗರತ್ನ ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೊದಲ ಪತ್ನಿ ನಾಗರತ್ನ, ಕೀರ್ತಿ ಗೌಡ ಯಾವಾಗ ವಿಜಿ ಜೀವನದಲ್ಲಿ ಬಂದಳೋ ಅವತ್ತಿಂದ್ಲೇ ನಮ್ಮ ಮನೆಯಲ್ಲಿ ದರಿದ್ರ ಆರಂಭವಾಗಿದೆ. ಖಳನಟರಿಬ್ಬರು ನೀರು ಪಾಲಾದ್ರು. ಅವಾಗ ದೊಡ್ಡ ಸುದ್ದಿಯೇ ಆಗೋಯ್ತು. ಹೀಗೆ ಅವತ್ತಿಂದ ಬರೀ ಕೇಸ್ ಗಳೇ ಆಗಿ ಹೋಯಿತು. ಬರೀ ರಗಳೆಗಳೇ ಆಗಿ ಹೋಗಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಕೀರ್ತಿ ಗೌಡ ಹೆಂಡತಿಯಲ್ಲ, ನಾನು ವಿಜಿ ಹೆಂಡತಿ. ಅವಳು ವಿಜಿ ಹೆಂಡತಿಯಾಗಲು ಯಾವುದೇ ಸಾಕ್ಷಿಯಿಲ್ಲ. ನಾನು ನನ್ನ ಮಕ್ಕಳ ಬಳಿ ಯಾಕೆ ಹೋಗಬಾರದು? ನಿನ್ನೆ ನನ್ನ ಮಕ್ಕಳನ್ನು ನೋಡಲು ಹೋಗಿದ್ದೆ. ಆವಾಗ ಆಕೆ ನನ್ನ ಮೇಲೆ ರೇಗಾಡಿದಳು, ಇದರಿಂದ ಸಿಟ್ಟುಗೊಂಡು ನಾನು ಆಕೆಗೆ ಎರಡೇಟು ಹೊಡೆದೆ ಅಂದ್ರು.

    ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಇದೆ. ಇದರಿಂದ ನಮಗೆ ಓಡಾಡಲು ಭಯ ಆಗ್ತಿದೆ. ನಮಗೆ ಏನಾದ್ರೂ ಆದರೆ ವಿಜಿಯೇ ಜವಾಬ್ದಾರಿ. ಹೀಗಾಗಿ ಕೀರ್ತಿ ಗೌಡ ನ್ನ ಮೇಲೆ ಕೈ ಮಾಡಿದ ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೇನೆ ಅಂತ ಹೇಳಿದ್ರು.

    ಸುಮಾರು 2 ವರ್ಷದಿಂದ ಬರೀ ಕೇಸ್, ಕಂಪ್ಲೆಂಟ್, ಸ್ಟೇಷನ್ ಇದೇ ಆಗಿದೆ. ಒಬ್ರೂ ಬುದ್ಧಿ ಹೇಳುವವರು ಇಲ್ಲ. ನಾನೂ ಕೂಡ ಹೇಳಲು ತುಂಬಾನೇ ಪ್ರಯತ್ನಪಟ್ಟೆ. ಆದ್ರೆ ನಾನೇ ಕೆಟ್ಟವಳಾದೆ. ಮನೆಯಲ್ಲಿ ದೊಡ್ಡವರಿರುತ್ತಾರೆ. ಅವರಾದ್ರೂ ಸ್ವಲ್ಪ ತಿಳುವಳಿಕೆ ಹೇಳಬೇಕು. ಅವರು ಹೇಳುತ್ತಿಲ್ಲ. ದಾರಿ ತಪ್ಪಿಸಿ ಹಾಳು ಮಾಡುತ್ತಿದ್ದಾರೆ. ಒಂದು ಕಡೆ ನಾನು, ಇನ್ನೊಂದು ನನ್ನ ಮಕ್ಕಳು. ಈಗ ಯಾರೋ ಬಂದವಳು ಸ್ವಲ್ಪ ದಿವಸ ಇರುತ್ತಾಳೆ ಹೋಗುತ್ತಾಳೆ. ಅವರೆಲ್ಲ ಬರೋದು ದುಡ್ಡಿಗೆ. ಇರೋದ್ದಿಕ್ಕೆ ಸಂಸಾರ ಮಾಡವುದಿಕ್ಕೆ ಯಾರೂ ಬರಲ್ಲ. ನಮಗೆ ಮೂರು ಮಕ್ಕಳಿದ್ದಾರೆ. ನಮಗೆ ವಿಧಿಯಿಲ್ಲ ಹೀಗಾಗಿ ನಾವು ಸಂಸಾರ ಮಾಡಲೇಬೇಕು. ನಮಗೆ ಅವರು ಕೊನೆಯವರೆಗೆ ಬೇಕೇ ಬೇಕು ಅಂತ ಹೇಳಿದ್ರು.

    ಇವರೆಲ್ಲ ಎಂಜಾಯ್ ಮಾಡ್ಕೊಂಡು ಎರಡು ದಿವಸ ಇದ್ದು ಹೋಗುತ್ತಾರೆ. ಇವರೆಲ್ಲ ಬುದ್ಧಿ ಹೇಳಲ್ಲ. ಬದಲಾಗಿ ಹಾದಿ ತಪ್ಪಿಸಿ ಜೈಲಿಗೆ ಕಳುಹಿಸುತ್ತಾರೆ. ಬುದ್ಧಿ ಹೇಳಲು ಒಳ್ಳೆ ಫ್ರೆಂಡ್ಸ್ ಒಬ್ಬರೂ ಬರಲ್ಲ. ಎಲ್ಲಾ ಈ ಖಚಡಗಳೇ ಬರೋದು. ಹೀಗಾಗಿ ಈ ತರ ಬೀದಿಗೆ ಬಂದು ನಿಂತುಕೊಳ್ಳುತ್ತಾರೆ. ವಿಜಿಯವರಿಗೂ ಬುದ್ಧಿ ಇಲ್ಲ. ಅವರಿಗೂ ಯಾವುದು ಸರಿ ಯಾವುದು ಸರಿ ಎನ್ನುವುದು ಗೊತ್ತಿಲ್ಲ. ನಾನು ಸರಿಯಾಗೇ ಮಾತಾಡ್ತೀನಿ. ನಾನು ಇರೋದೇ ಹೀಗೆ. ವಿಜಿಯೇನು ಚಿಕ್ಕಮಗುವೇ? ಇವತ್ತು ಹೋಗಿ ಜೈಲಿನಲ್ಲಿ ಕುಳಿತ್ತಿದ್ದಾರೆ ಅಲ್ವಾ? ಇಂದು ನನಗೆ ಹಾಗೂ ನನ್ನ ಮಕ್ಕಳಿಗೆ ಯಾರು ಗತಿ? ಒಟ್ಟಿನಲ್ಲಿ ನನ್ನ ಸಂಸಾರವೇ ಹಾದಿ ತಪ್ಪಿಸಿಬಿಟ್ಟರು ಅಂತ ಅಳಲು ತೋಡಿಕೊಂಡರು.

    ಅತ್ತೆ-ಮಾವನ ವಿರುದ್ಧ ಕಿಡಿ:
    ನಾನು ಡೈವರ್ಸ್ ಮಾಡಿಕೊಂಡಿಲ್ಲ. ಎಲ್ಲೂ ಒಂದು ಸಹಿ ಮಾಡಿಕೊಟ್ಟಿಲ್ಲ. 1 ರೂಪಾಯಿ ಅವರಿಂದ ದುಡ್ಡು ಇಸ್ಕೊಂಡಿಲ್ಲ. ಯಾವ ಆಸ್ತಿಗೂ ಕಾಂಪ್ರಮೈಸ್ ಆಗಿಲ್ಲ. ಏನೂ ಇಲ್ಲದೇ ಇರೋವಾಗ ಅವರ ಜೊತೆ ಬಂದಿದ್ದೀನಿ. ಏನೂ ಇಲ್ಲದೇ ಇದ್ರೂ ನಾನು ಜೀವನ ಮಾಡ್ತೀನಿ. ನನ್ನ ಮಾವ ನನ್ನ ವಿರುದ್ಧ, ನಾಗರತ್ನ ಏನಕ್ಕೂ ಬರಲ್ಲ. ಯಾಕಂದ್ರೆ ಅವಳಿಗೆ ಈಗಾಗಲೇ ಹಣ, ಆಸ್ತಿ ಎಲ್ಲ ಕೊಟ್ಬಿಟ್ಟಿದ್ದೀವಿ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ವಿಜಯ್ ತಂದೆಯ ವಿರುದ್ಧ ಕಿಡಿಕಾರಿದ್ರು.

    ನಾನು ವಿಜಿಯವರನ್ನು ಒಳ್ಳೆಯ ಸ್ಟೇಜಲ್ಲಿ ನೋಡಬೇಕು ಅಂದುಕೊಂಡಿದ್ದೆ. ಆದ್ರೆ ಅದನ್ನು ಅವರ ಕೈಯಾರೆ ಅವರೇ ಹಾಳು ಮಾಡಿಕೊಂಡ್ರು. ಆದ್ರೆ ಅವರಿಗೆ ಬುದ್ಧಿ ಇದ್ಯೋ ಇಲ್ಲವೋ ಗೊತ್ತಿಲ್ಲ. ಅವರ ಜೊತೆಯಲ್ಲಿರೋರೇ ಅವರನ್ನು ಹಾಳು ಮಾಡಿದ್ರು. ಅವರಿಗೆ ಇರೋ ಫ್ರೆಂಡ್ಸ್ ಎಲ್ಲರೂ ಮನೆ ಹಾಳರೇ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಸಂಸಾರವನ್ನು ಸರಿಪಡಿಸೋಣ ಅಂತ ತಿಳುವಳಿಕೆ ಹೇಳೋ ಒಬ್ಬೇ ಒಬ್ಬ ಫ್ರೆಂಡ್ ಕೂಡ ಅವರಲ್ಲಿಲ್ಲ ಅಂತ ಅಂತ ವಿಜಿ ಫ್ರೆಂಡ್ಸ್ ಬಗ್ಗೆ ನಾಗರತ್ನ ಗರಂ ಆದ್ರು.

    ಎದೆ ಉದ್ದ ಬೆಳೆದು ನಿಂತಿರೋ ಮಕ್ಕಳ ಅಪ್ಪ ಇಂದು ಜೈಲಿಗೆ ಹೋಗಿದ್ದಾರೆ. ಈ ಸಮಯದಲ್ಲಿ ನಾನೂ ಇಲ್ಲ ಅಂದಿದ್ದರೆ ನನ್ನ ಮಕ್ಕಳಿಗೆ ಸಮಾಧಾನ ಹೇಳೋರು ಯಾರಿದ್ದಾರೆ? ನಮಗೂ ನೋವಾಗುತ್ತೆ. ಕಾಲೇಜಿಗೆ ಹೋಗಿ ಬರುತ್ತಾರೆ. ನಾಳೆ ಅವರ ಫ್ರೆಂಡ್ಸ್ ಕೇಳುತ್ತಾರೆ. ಆವಾಗ ಅವರಿಗೂ ಬೇಸರವಾಗಲ್ವ ಅಂತ ಪ್ರಶ್ನಿಸಿದ ಅವರು, ವಿಜಯ್ ನನ್ನ ಅರ್ಥ ಮಾಡಿಕೊಳ್ಳಲಿ. ಮೊದಲಿನಂತೆ ಸಿನಿಮಾಗಳನ್ನು ಮಾಡಿ ಅವರು ಎತ್ತರಕ್ಕೆ ಬೆಳೆಯಲಿ. ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ. ಹಾರೈಸುತ್ತೇನೆ. ಸಂತೋಷ ಪಡುತ್ತೇನೆ ಅಂತ ಹೇಳಿದ್ರು.

    ನಾನು ಅತ್ತೆ, ಮಾವ ಯಾರನ್ನೂ ನಂಬಲ್ಲ. ಯಾಕಂದ್ರೆ ಅವರೆಲ್ಲರಿಗೂ ನನ್ನ ಮಕ್ಕಳನ್ನು ಕಂಡ್ರೆ ಆಗಲ್ಲ. ಹೀಗಾಗಿ ಅವರು ನನಗೆ ಹಾಗೂ ನನ್ನ ಮಕ್ಕಳಿಗೆ ಏನ್ ಬೇಕಾದ್ರೂ ಮಾಡಬಹುದು. ಅಜ್ಜಿ-ತಾತ ಏನೂ ಕೊಡದೇ ಇದ್ರು ಪರವಾಗಿಲ್ಲ. ಅವರು ಮಕ್ಕಳಿಗೆ ಪ್ರೀತಿ ಕೊಡಬೇಕು. ಆದ್ರೆ ಅವರು ದ್ವೇಷ ಸಾಧಿಸುತ್ತಾರೆ ಅಂತ ಅವರು ದುಃಖ ತೋಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CXoYbpWrkoU

    https://www.youtube.com/watch?v=ALFMC4BI448

  • ನಲಪಾಡ್ ಉಳಿದುಕೊಂಡಿದ್ದ ಜೈಲಾಸ್ಪತ್ರೆ ವಾರ್ಡ್ ನಲ್ಲೇ ಕರಿಚಿರತೆ ಆ್ಯಂಡ್ ಟೀಂ

    ನಲಪಾಡ್ ಉಳಿದುಕೊಂಡಿದ್ದ ಜೈಲಾಸ್ಪತ್ರೆ ವಾರ್ಡ್ ನಲ್ಲೇ ಕರಿಚಿರತೆ ಆ್ಯಂಡ್ ಟೀಂ

    ಬೆಂಗಳೂರು: ಹಲ್ಲೆ ನಡೆಸಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್‍ಗೆ ಜೈಲು ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

    ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಉಳಿದುಕೊಂಡಿದ್ದ ಆಸ್ಪತ್ರೆ ವಾರ್ಡ್‍ನಲ್ಲೇ ದುನಿಯಾ ವಿಜಯ್ ಮತ್ತು ಪಟಾಲಂ ತಂಗಿದೆ. ಖಾಲಿ ಇದ್ದ ಈ ವಾರ್ಡ್ ಗೆ ಭಾನುವಾರ ರಾತ್ರಿ ಸುಣ್ಣ-ಬಣ್ಣ ಬಳಿಯಲಾಗಿದೆ. ಅಲ್ಲದೆ ಹೊರಗಡೆಯಿಂದ ಯಾರಿಗೂ ಕಾಣದಂತೆ ಸ್ಕ್ರೀನ್ ಹಾಕಲಾಗಿದೆ. ಇವೆಲ್ಲವನ್ನು ಗಮನಿಸಿದ್ರೆ ಸಿನೆಮಾ ನಟ ಅನ್ನೋ ಕಾರಣಕ್ಕೆ ಇಷ್ಟೆಲ್ಲ ವ್ಯವಸ್ಥೆ ಮಾಡಲಾಗಿದ್ಯಾ ಅಥವಾ ಸೈಕಲ್ ರವಿಗೆ ಹೆದರಿ ದುನಿಯಾ ವಿಜಯ್ ಗೆ ಬೇರೆ ವ್ಯವಸ್ಥೆ ಮಾಡಲಾಗಿದ್ಯಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಲ್ಯಾಂಡ್ ಲಿಟಿಗೇಶನ್ ವಿಚಾರವಾಗಿ ದುನಿಯಾ ವಿಜಯ್ ಮತ್ತು ಸೈಕಲ್ ರವಿ ಮಧ್ಯೆ ಭಿನ್ನಾಭಿಪ್ರಾಯವಾಗಿತ್ತು. ಇದೇ ಕಾರಣಕ್ಕೆ ಜೈಲಾಧಿಕಾರಿಗಳು ರಿಸ್ಕ್ ಬೇಡ ಅಂತ ಪ್ರತ್ಯೇಕ ಕಲ್ಪಿಸಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ.

    ಏನಿದು ಪ್ರಕರಣ?
    ಶನಿವಾರ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಫೋಸ್ ಕೊಡುತ್ತಿದ್ದರು. ಆಗ ಮಗ ಸಾಮ್ರಾಟ್ ತಂದೆಯೊಂದಿಗೆ ವೇದಿಕೆ ಹತ್ತಿದ್ದಾರೆ. ಇದನ್ನು ನೋಡಿದ ಮಾರುತಿಗೌಡ `ಏಯ್, ಚಿಲ್ಟು ಕೆಳಗೆ ಇಳಿಯೋ’ ಎಂದು ಎಚ್ಚರಿಸಿದ್ದರಂತೆ. ಮಾರುತಿಗೌಡ ಮಾತು ಕೇಳಿಸಿಕೊಂಡ ವಿಜಯ್ ಕೋಪ ನೆತ್ತಿಗೇರಿತ್ತಂತೆ. ತಕ್ಷಣವೇ `ಯಾಕಪ್ಪ ಹಾಗಂತಿಯಾ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾರುತಿಗೌಡ, `ಮತ್ತೆ ಏನಣ್ಣ, ನೀನು ಚಿಲ್ಟು-ಪಿಲ್ಟುಗಳನ್ನೆಲ್ಲಾ ಸ್ಟೇಜ್‍ಗೆ ಹತ್ತಿಸ್ತೀಯ’ ಎಂದಿದ್ದಾರೆ. ಆತನ ಉತ್ತರದಿಂದ ಗರಂ ಆದ ವಿಜಯ್, ಸಾಮ್ರಾಟ್‍ನನ್ನು ಚಿಲ್ಟು ಅಂತ ಕರೆದಿದ್ದಕ್ಕೆ ವಾಗ್ದಾಳಿ ನಡೆಸಿದ್ದರಂತೆ. ಸ್ಪರ್ಧೆ ನಡೆಯುವ ಜಾಗದಲ್ಲಿಯೇ ಬುದ್ಧಿ ಹೇಳುವುದಕ್ಕೆ ಹೋದರೆ ಗಲಾಟೆ ಆಗುತ್ತದೆ ಅಂತ ಮಾರುತಿ ಗೌಡನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೇವೆ. ನಾವು ಅಪಹರಣ ಮಾಡಿಲ್ಲ ಅಂತ ವಿಚಾರಣೆ ವೇಳೆ ವಿಜಯ್ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

    ಇತ್ತ ಮಾರುತಿ ಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದರು. 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷರಾದರು. ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡನ್ನ ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೊಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದು, ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ ಎನ್ನಲಾಗಿತ್ತು. ಈ ಎಲ್ಲ ಕಾರಣಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=ALFMC4BI448

    https://www.youtube.com/watch?v=EgaCOcqC7ZU