Tag: Duniya Vijay

  • ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    – ಸಲಗ, ಕೋಟಿಗೊಬ್ಬ3 ನಡುವೆ ಪೈಟ್

    ಬೆಂಗಳೂರು: ಚಂದನವನದಲ್ಲಿ ಈಗ ಸ್ಟಾರ್‌ವಾರ್‌ ಶುರುವಾಗಿದೆ. ಒಂದೇ ದಿನ ತೆರೆ ಮೇಲೆ ಬರಲು ಬಿಗ್ ಬಜೆಟ್ ಸಿನಿಮಾಗಳಾದ ಸಲಗ, ಕೋಟಿಗೊಬ್ಬ-3 ಬಿಡುಗಡೆ ಸಿದ್ಧವಾಗಿದೆ.

    ದಸಾರ ಹಬ್ಬದ ದಿನ ಸಲಗ ಸವಾರಿ ಆರಂಭವಾಗಲಿದೆ. ದುನಿಯ ವಿಜಿ ನಿರ್ದೇಶಿಸಿ ನಟಿಸಿರುವ ಸಲಗ ಆ.14ಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದೇ ದಿನ ತೆರೆಗೆ ಬರೋದು ಪಕ್ಕಾ ಅಂತಿದೆ ಸುದೀಪ್ ನಟನೆಯ ಸೂರಪ್ಪ ಬಾಬು ನಿರ್ಮಾಣದ ಚಿತ್ರ ಕೋಟಿಗೊಬ್ಬ 3 ಸಿನಿಮಾ. ವಿಜಯ ದಶಮಿಯಂದು ವಿಜಯದ ಮಾಲೆ ಯಾರಿಗೆ ಹಾಕಲಿದ್ದಾರೆ ಸಿನಿ ಪ್ರೇಕ್ಷಕರು ಎಂಬುದನ್ನು ಕಾದುನೋಡಬೇಕಾಗಿದೆ.

    ಇದು  ಸ್ಟಾರ್‌ವಾರ್‌ ಅಲ್ಲ, ಇಬ್ಬರೂ ಒಟ್ಟಿಗೆ ಬರ್ತಿದ್ದೀವಿ ಅಷ್ಟೇ. ಎರಡೂ ಸಿನಿಮಾಗಳಿಗೂ ಕನ್ನಡಿಗರು ಆರ್ಶೀವಾದ ಮಾಡುತ್ತಾರೆ. ಎರಡೂ ಸಿನಿಮಾಗಳ ನಿರ್ಮಾಪಕರ ನಡುವೆ ಸಮಸ್ಯೆ ಇಲ್ಲ. ಒಟ್ಟಿಗೆ ರಿಲೀಸ್ ಆಗ್ತಿರುವುದರಿಂದ ಎಲ್ಲಾ ಕಡೆ ಕನ್ನಡ ಸಿನಿಮಾಗಳು ನೋಡಲು ಸಿಗುತ್ತದೆ. ಪರಭಾಷ ಸಿನಿಮಾಗಳ ಸಮಸ್ಯೆಗೆ ಅವಕಾಶ ಇರೋದಿಲ್ಲ ಎಂದು ಪಬ್ಲಿಕ್ ಟಿವಿಗೆ ಸಲಗ ನಿರ್ಮಾಪಕ ಕೆ ಪಿ ಶ್ರೀಕಾಂತ್ ಹೇಳಿದ್ದಾರೆ. ಇದನ್ನೂ ಓದಿ:  ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

    ನಮಗೊಂದು ಒಳ್ಳೆಯ ದಿನ ಸಿಕ್ಕಿದೆ. ದಸರಾ ಹಬ್ಬ, ಚಾಮುಂಡೇಶ್ವರಿ ದಯೆ ಎಲ್ಲವೂ ಇದೆ ಎಂದು ಪಬ್ಲಿಕ್ ಟಿವಿಗೆ ನಟ ದುನಿಯಾ ವಿಜಯ್ ಹೇಳಿಕೆ ನೀಡಿದ್ದಾರೆ.

    ಅಕ್ಟೋಬರ್ 14ರಂದೇ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯಾಗಲಿದೆ. ಮಾತುಕತೆ ಆಡಿದ್ದು ನಿಜ, ಶ್ರೀಕಾಂತ್ ಅವರದ್ದು ತಪ್ಪಿಲ್ಲ. ಅಕ್ಟೋಬರ್ 1, 14, 29 ಅಂತ ಇತ್ತು. ಅಕ್ಟೋಬರ್ 14ರಂದು ಬಿಟ್ಟುಕೊಡಲು ರೆಡಿ ಇದ್ದೇನೆ ಎಂದು ಹೇಳಿದ್ದೇನೆ. ಅಕ್ಟೋಬರ್ 29ರಂದು ಡೇಟ್ ಸಿಗೋದಾದರೆ ಬಿಟ್ಟುಕೊಡಲು ಒಪ್ಪಿದೆ. ಆದರೆ ಅಕ್ಟೋಬರ್ 29ರಂದು ಜಯಣ್ಣ ಅವರು ಭಜರಂಗಿ-2 ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

  • ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!

    ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!

    ಚಾಮರಾಜನಗರ: ನಟ ದುನಿಯಾ ವಿಜಯ್ ನೋಡಲು ಕಾಲೇಜಿನ ವಿದ್ಯಾರ್ಥಿ ಸಮೂಹ ಹಾಗೂ ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿರುವ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣಕ್ಕೆ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮಕ್ಕೆ ಆಗಮಿಸಿದ ಚಿತ್ರ ನಟ ದುನಿಯಾ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ನೂಕು ನುಗ್ಗಲು ಉಂಟು ಮಾಡಿದರು. ಇದನ್ನೂ ಓದಿ: ಆಶ್ರಯ ನೀಡಿದ ಅಭಿಮಾನಿಯೊಂದಿಗೆ ಕಿರಿಕ್- ಮನೆ ಬಿಟ್ಟು ಬಂದ ನಟಿ ವಿಜಯಲಕ್ಷ್ಮಿ

    ಕೊಳ್ಳೇಗಾಲಕ್ಕೆ ದುನಿಯಾ ವಿಜಯ್ ಭೇಟಿ ವೇಳೆ ಸಾಮಾಜಿಕ ಅಂತರ ಮರೆತ ಅಭಿಮಾನಿಗಳು ನಟನಿಗೆ ಜೈಕಾರ ಹಾಕುತ್ತಾ ಅವರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ವತಃ ನಟ ವಿಜಯ್ ಅವರು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳಿಗೆ ಕಾರ್ಯಕ್ರಮ ನಡೆಯುವುದಕ್ಕೆ ಸ್ವಲ್ಪ ಅವಕಾಶ ಕೊಡಿ ನಂತರ ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಾತನಾಡುವ ನೆಪದಲ್ಲಿ ವಿದ್ಯಾರ್ಥಿಯಿಂದ ಮೊಬೈಲ್ ಪಡೆದ- ಹಲ್ಲೆ ಮಾಡಿ, ಫೋನ್ ಕದ್ದ

    ನಟನ ಮಾತನ್ನು ಕೇಳದ ಫ್ಯಾನ್ಸ್ ‘ಸಲಗ ಸಲಗ..’ ಎಂದು ಕೂಗುತ್ತಿದ್ದರು. ಬಳಿಕ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ದುನಿಯಾ ವಿಜಯ್ ಉದ್ಘಾಟಿಸಿದರು. ಇದನ್ನೂ ಓದಿ:  ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

  • ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

    ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

    – ಅಮ್ಮನ ಮುಂದೆ ಕೊನೆ ಬಾರಿ ಹಾಡಿದ ವೀಡಿಯೋ ಶೇರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್‍ರವರ ತಾಯಿ ನಾರಾಯಣಮ್ಮರವರು ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಬಿಗ್‍ಬಾಸ್ ಸೀಸನ್-8 ಸ್ಪರ್ಧಿ ಗಾಯಕ ನವೀನ್ ಸಜ್ಜು, ನಾರಾಯಣಮ್ಮ ಅವರೊಂದಿಗೆ ಕಳೆದ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಈ ಕುರಿತಂತೆ ನವೀನ್ ಸಜ್ಜುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ನಾರಾಯಣಮ್ಮನವರು ಅನಾರೋಗ್ಯದಿಂದ ಬೆಡ್ ಮೇಲೆ ಮಲಗಿಕೊಂಡಿದ್ದು, ವೀಡಿಯೋ ಕಾಲ್ ಮೂಲಕ ನವೀನ್ ಸಜ್ಜುರವರು ‘ಒಳಿತು ಮಾಡು ಮನುಜ’ ಹಾಡನ್ನು ಹೇಳುತ್ತಿರುವುದನ್ನು ಕಾಣ ಬಹುದಾಗಿದೆ.

    ವೀಡಿಯೋ ಜೊತೆಗೆ, ವಿಜಿಯಣ್ಣನ ಅಮ್ಮ ನಿನ್ನೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದಾಗಲೆಲ್ಲಾ ಮಗನೆ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಅಮ್ಮ, ನಮ್ಮನ್ನು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ. ಅವರಿಗೆ ನಾನು ಹಾಡುವ ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ..’ ಹಾಡೆಂದರೆ ಬಹಳ ಇಷ್ಟ. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಹೇಳಿ ಕೇಳುತ್ತಿದ್ದರು. ಇದನ್ನೂ ಓದಿ: ಒಂದು ರೀತಿ ನನ್ನ ಮಗುವನ್ನು ನಾನು ಕಳ್ಕೊಂಡಂತೆ ಭಾಸವಾಗ್ತಿದೆ: ಕಣ್ಣೀರಿಟ್ಟ ವಿಜಿ

    ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಂತರ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ತೆರಳಿದ ಅಮ್ಮ ಯಾರನ್ನು ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವೀಡಿಯೋ ಕಾಲ್ ಮಾಡಿ ಈ ಹಾಡನ್ನು ಹಾಡುವಂತೆ ಹೇಳಿದ್ದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು. ಅದರಂತೆ ಹಾಸಿಗೆ ಮೇಲೆ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ಅಮ್ಮನ ಎದುರು ಫೋನ್ ನಲ್ಲಿ ಹಾಡನ್ನು ಹಾಡಿದೆ. ಹಾಡು ಮುಗಿದ ಕೊನೆಗೆ ಅವರ ಕಣ್ಣಂಚಲ್ಲಿ ನೀರು ತುಂಬಿತ್ತು. ಆದರೆ ಮಾತನಾಡುವ ಶಕ್ತಿ ಇರಲಿಲ್ಲ. ಇನ್ನು ಅಮ್ಮ ಬರೀ ನೆನಪಾಗಿ ಮಾತ್ರ ಉಳಿಯಲಿದ್ದಾರೆ. ಅವರೊಂದಿಗೆ ಕಳೆದ ಕ್ಷಣ, ಅವರು ತೋರುತ್ತಿದ್ದ ಪ್ರೀತಿ, ಹಾಡು ಕೇಳುತ್ತಿದ್ದ ಪರಿ. ನೆನಪುಗಳಾಗಿ ಉಳಿದು ಹೋಗಲಿವೆ. ಮಿಸ್ ಯು ಅಮ್ಮ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ನಟ ದುನಿಯ ವಿಜಯ್‍ರವರ ತಾಯಿ ನಾರಾಯಣಮ್ಮನವರು ಗುರುವಾರ ಕೊನೆಯುಸಿರೆಳೆದಿದ್ದು, ಸ್ಯಾಂಡಲ್‍ವುಡ್‍ನ ಹಲವಾರು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

     

    View this post on Instagram

     

    A post shared by Naveen Sajju Official (@naveensajju)

  • ನಟ ದುನಿಯಾ ವಿಜಯ್‍ಗೆ ಮಾತೃ ವಿಯೋಗ

    ನಟ ದುನಿಯಾ ವಿಜಯ್‍ಗೆ ಮಾತೃ ವಿಯೋಗ

    ಬೆಂಗಳೂರು: ನಟ ದುನಿಯಾ ವಿಜಯ್ ಅವರ ತಾಯಿ ಇಂದು ನಿಧನರಾಗಿದ್ದಾರೆ.

    ಕಳೆದ ಕೆಲವು ದಿನಗಳಿಂದ ವಿಜಯ್ ತಾಯಿ ನಾರಾಯಣಮ್ಮ ಅವರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನ ಕಳೆಯುತ್ತಿದ್ದಂತೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ.

    ಈ ಕುರಿತು ಸ್ವತಃ ನಟನೇ ತನ್ನ ತಾಯಿ ಜೊತೆಗಿನ ಫೋಟೋ ಹಾಕಿ ‘ಮತ್ತೆ ಹುಟ್ಟಿ ಬಾ ಅಮ್ಮ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ನಾರಾಯಣಮ್ಮ ಅವರ  ಅಂತಿಮ ವಿಧಿವಿಧಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದು,  ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

    ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ದುನಿಯಾ ವಿಜಯ್ ಪೋಷಕರು ಚೇತರಿಸಿಕೊಂಡಿದ್ದರು. ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ಮತ್ತೆ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಬ್ರೇನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ತೀವ್ರ ಗಂಭೀರವಾಗಿದ್ದು, ಪ್ರತಿದಿನ ಮನೆಗೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

    ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮತ್ತೆ ಸಿಗಲ್ಲ, ಅವರು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನ ಆಸೆ. ದಿನಂಪ್ರತಿ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆದರೆ ಮತ್ತೆ ಆರೋಗ್ಯ ಸರಿಯಾಗುತ್ತೆ ಎಂಬ ವಿಶ್ವಾಸವಿದೆ ಎಂದು ದುನಿಯಾ ವಿಜಯ್ ಈ ಹಿಂದೆ ಹೇಳಿದ್ದರು.

  • ಸೇವ್ ಮೈಸೂರು ಕ್ಯಾಂಪೇನ್‍ಗೆ ದುನಿಯಾ ವಿಜಿ ಬೆಂಬಲ

    ಸೇವ್ ಮೈಸೂರು ಕ್ಯಾಂಪೇನ್‍ಗೆ ದುನಿಯಾ ವಿಜಿ ಬೆಂಬಲ

    ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಹೆಲಿ ಟೂರಿಸಂ’ ಯೋಜನೆಗೆ ಪ್ಲಾನ್ ಮಾಡಲಾಗುತ್ತಿದ್ದು, ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೇವ್ ಮೈಸೂರು ಕ್ಯಾಂಪೇನ್‍ಗೆ ನನ್ನ ಬೆಂಬಲ ಇದೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ನಟ, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು.ನಾವುಗಳು ಮರ ಬೆಳೆಸಲು ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು. ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣೋದು. ಶೂಟಿಂಗ್ ಸಮಯದಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ.

    ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು.ನಾವುಗಳು ಮರ ಬೆಳೆಸಲು…

    Posted by Duniya Vijay on Wednesday, April 14, 2021

    ಮರಗಳ ನಡುವೆ ಓಡಾಡಿ ಖುಷಿ ಪಟ್ಟಿದ್ದೇನೆ. ಈ ಯೋಜನೆಯನ್ನ ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರೋತ್ತೋ ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೂ ಅಷ್ಟೇ ವಿರೋಧ ಇರುತ್ತೆ. ಸೇವ್ ಮೈಸೂರು ಕ್ಯಾಂಪೇನ್‍ಗೆ ನನ್ನ ಬೆಂಬಲ ಇದೆ. ಸರ್ಕಾರ ಈ ಯೋಜನೆ ಬಗ್ಗೆ ಮತ್ತೊಮ್ಮೆ ಯೋಚಿಸಲಿ ಎಂದು ಹೇಳಿದ್ದಾರೆ.

    ಈ ಹಿಂದೆ ಸಂಸದ ಪ್ರತಾಪ್ ಸಿಂಹ, ಪರಿಸರ ಪ್ರೇಮಿಗಳಿಂದ ಕೂಡ ಹೆಲಿ ಟೂರಿಸಂ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಈ ಯೋಜನೆ ವಿರುದ್ಧ ಒಂದು ಅಭಿಯಾನವೇ ಆರಂಭವಾಗಿದ್ದು, ಮರಗಳನ್ನು ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿ ಬೆಂಬಲ ಸೂಚಿಸುತ್ತಿದ್ದಾರೆ.

  • ಸರ್ಕಾರದ ಕ್ರಮಕ್ಕೆ ‘ಸಲಗ’ ಚಿತ್ರತಂಡ ಅಸಮಾಧಾನ- ಚಿತ್ರ ಬಿಡುಗಡೆ ಮುಂದೂಡಿಕೆ

    ಸರ್ಕಾರದ ಕ್ರಮಕ್ಕೆ ‘ಸಲಗ’ ಚಿತ್ರತಂಡ ಅಸಮಾಧಾನ- ಚಿತ್ರ ಬಿಡುಗಡೆ ಮುಂದೂಡಿಕೆ

    – ಶೇ.100 ಆಸನದ ವ್ಯವಸ್ಥೆ ಜಾರಿಯಾದ ಮೇಲೆ ಸಲಗ ಬಿಡುಗಡೆ

    ಹುಬ್ಬಳ್ಳಿ: ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿತ್ತು. ಬಳಿಕ ಏ.6ರ ವರೆಗೆ ಮಾತ್ರ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಲಗ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿದ ನಂತರ ನಂತರ ಸಲಗ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಸಲಗ ಚಿತ್ರದ ನಾಯಕ ನಟ ದುನಿಯಾ ವಿಜಯ್, ಖಳನಟ ಡಾಲಿ ಧನಂಜಯ್, ನಿರ್ಮಾಪಕ ಕೆಪಿ ಶ್ರೀಕಾಂತ್ ಮಾತನಾಡಿದರು. ಸರ್ಕಾರದ ಈ ಆದೇಶ ಚಿತ್ರರಂಗಕ್ಕೆ ಮಾಡಿದ ಅನ್ಯಾಯವಾಗಿದೆ. ಸರ್ಕಾರದ ನಿರ್ಧಾರವನ್ನು ಒಪ್ಪಲಾಗದು, ಆದರೂ ಸ್ವಾಗತಿಸುತ್ತೇವೆ. ಚುನಾವಣೆಯ ಪ್ರಚಾರ, ರ್ಯಾಲಿಗೆ ಇಲ್ಲದ ನಿಯಮಗಳನ್ನು ಜಿಮ್ ಹಾಗೂ ಸಿನಿಮಾರಂಗದ ಮೇಲೆ ಹೇರುವುದು ಸರಿಯಲ್ಲ ಎಂದು ದುನಿಯಾ ವಿಜಯ್ ಆಕ್ರೋಶ ವ್ಯಕ್ತಪಡಿಸಿದರು.

    ಇತ್ತೀಚಿಗೆ ಬಿಡಿಗಡೆಯಾದ 2 ಸ್ಟಾರ್ ನಟರ ಚಿತ್ರಗಳು ಹಿಟ್ ಆಗಿವೆ. ಆ ವೇಳೆ ಚಿತ್ರ ವೀಕ್ಷಿಸಿದ ಯಾವ ಪೇಕ್ಷಕರಿಗೂ ಕೋವಿಡ್ ಬಂದ ಉದಾಹರಣೆಗಳಿಲ್ಲ. ಚಿತ್ರ ಮಂದಿರ ಹಾಗೂ ಜಿಮ್ ಗಳ ಮೇಲೆ ನಿರ್ಬಂಧ ಹೇರುವುದು ತರವಲ್ಲ ಎಂದು ನಟ ದುನಿಯಾ ವಿಜಯ ಕಿಡಿಕಾರಿದರು.

    ನಟ ಡಾಲಿ ಧನಂಜಯ ಸಹ ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾಗೆ ವ್ಯಾಕ್ಸಿನ್ ಇದೆ, ಹಸಿವಿನಿಂದ ಸಾಯುವವರಿಗೆ ಔಷಧಿ ಇಲ್ಲ. ಸರ್ಕಾರ ಅವರಿಗೆ ಬೇಕಾದ ಹಾಗೆ ನಿಯಮಗಳ ಮಾಡುವುದನ್ನು ಬಿಡಬೇಕು, ಸಿನಿಮಾ ರಂಗಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಕಿಡಿಕಾರಿದರು.

    ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡಿ ಬಂದವರಿಗೆ ಕೊರೊನಾ ಬಂದ ಉದಾಹರಣೆಗಳಿಲ್ಲ. ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ವಿಧಿಸುವುದರಿಂದ ಸಾವಿರಾರು ಬಡ ಕಾರ್ಮಿಕರು ಕಷ್ಟ ಅನುಭವಿಸಬೇಕಾಗುತ್ತದೆ. ಪ್ರೇಕ್ಷಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರ ವೀಕ್ಷಣೆ ಮಾಡಲಿದ್ದಾರೆ. ಸರ್ಕಾರ ನಿಯಮ ಹೇರಿ ಚಿತ್ರರಂಗವನ್ನು ಸಂಕಷ್ಟಕ್ಕೆ ತಳ್ಳಬಾರದೆಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

  • ಕೊರೊನಾ ನಿಯಂತ್ರಿಸಲು ಸಿನಿಮಾದವರು ಸಹಕರಿಸಬೇಕು: ದುನಿಯಾ ವಿಜಿ

    ಕೊರೊನಾ ನಿಯಂತ್ರಿಸಲು ಸಿನಿಮಾದವರು ಸಹಕರಿಸಬೇಕು: ದುನಿಯಾ ವಿಜಿ

    ಚಿತ್ರದುರ್ಗ: ದಿನದಿಂದ ದಿನಕ್ಕೆ ಕೊರೊನಾ ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ 19 ನಿಯಂತ್ರಿಸಲು ಸಿನಿಮಾದವರು ಸಹಕರಿಸಬೇಕು ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿನಿಮಾದವರು ರಾಯಭಾರಿಗಳಾಗಬೇಕೆಂಬ ಸಚಿವ ಡಾ. ಸುಧಾಕರ್ ಮನವಿಗೆ ಪ್ರತಿಕ್ರಿಯಿಸಿ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿದ ನಿಯಮ ಪಾಲಿಸಬೇಕು. ಸರ್ಕಾರದ ಸೂಚನೆಯನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

    ಕಲ್ಲರಳಿ ಹೂವಾಗಿ ಸಿನೆಮಾ ಶೂಟಿಂಗ್ಗೆ ಚಿತ್ರದುರ್ಗಕ್ಕೆ ಬಂದಿದ್ದೆನು. ಅಂದು ಏಕನಾಥೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೆನು. ನಾನು ಹಿರೋ ಆದರೆ ಮಡಿಲು ತುಂಬುವ ಹರಕೆ ಹೊತ್ತಿದ್ದೆನು, ಅದು ಸತ್ಯವಾಯಿತು. ಚಿತ್ರದುರ್ಗಕ್ಕೆ ಬಂದಾಗೆಲ್ಲಾ ಏಕನಾಥೇಶ್ವರಿ ದೇವಿಯನ್ನು ಸ್ಮರಿಸುತ್ತೇನೆ. ಇಲ್ಲಿನ ಪ್ರತಿ ಸ್ಥಳದಲ್ಲೂ ಶಕ್ತಿ, ಮಹಿಮೆ ಇದೆ ಎಂದರು.

    ಸಲಗ ಸಿನಿಮಾ ಪ್ರಚಾರಕ್ಕೆ ನಟ ಚಿತ್ರದುರ್ಗಕ್ಕೆ ಆಗಮಿಸಿದ್ದು, ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಲಗ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಡಿದರು. ಅಲ್ಲದೆ ಕ್ರಿಕೆಟ್ ಗ್ರೌಂಡ್ ನಲ್ಲಿ ನೃತ್ಯ ಮಾಡಿ ನೆರೆದವರನ್ನು ರಂಜಿಸಿದರು. ಇತ್ತ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.

  • ಮಾಲೂರಿನಲ್ಲಿ ನಟ ದುನಿಯಾ ವಿಜಯ್ ನೋಡಲು ಕಿಕ್ಕಿರಿದು ಸೇರಿದ ಅಭಿಮಾನಿಗಳು

    ಮಾಲೂರಿನಲ್ಲಿ ನಟ ದುನಿಯಾ ವಿಜಯ್ ನೋಡಲು ಕಿಕ್ಕಿರಿದು ಸೇರಿದ ಅಭಿಮಾನಿಗಳು

    ಟ ದುನಿಯಾ ವಿಜಯ್ ‘ಸಲಗ’ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ನಟನೆ ಜೊತೆ ‘ಸಲಗ’ ಮೂಲಕ ಡೈರೆಕ್ಟರ್ ಕ್ಯಾಪ್ ಕೂಡ ತೊಟ್ಟಿದ್ದಾರೆ ಬ್ಲ್ಯಾಕ್ ಕೋಬ್ರಾ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಹಾಗೂ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರುವ ದುನಿಯಾ ವಿಜಿ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಮಾಲೂರಿನ ತಮ್ಮ ಅಭಿಮಾನಿಗಳು ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ.

    ಮಾಲೂರಿನ ಹೋಂಡಾ ಕ್ರೀಡಾಂಗಣದಲ್ಲಿ ವಿಜಯ್ ಅಭಿಮಾನಿಗಳ ಸೇವಾ ಸಮಿತಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಸಲಗ’ ಚಿತ್ರತಂಡ ಕ್ರಿಕೆಟ್ ಪಂದ್ಯವನ್ನಾಡಿ ವಿಜಯ ಸಾಧಿಸಿದೆ. ದುನಿಯಾ ವಿಜಿ ಮಾಲೂರಿಗೆ ಬರುವ ವಿಚಾರ ತಿಳಿದ ವಿಜಯ್ ಅಭಿಮಾನಿಗಳು ಹೋಂಡಾ ಕ್ರೀಡಾಂಗಣಕ್ಕೆ ಜಮಾಯಿಸಿದ್ದರು. ಕೋಲಾರದ ಸುತ್ತಮುತ್ತಲಿನ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ನೆಚ್ಚಿನ ನಟ ದುನಿಯಾ ವಿಜಿಯನ್ನು ಕಣ್ತುಂಬಿಕೊಂಡಿದ್ದಾರೆ.

    ಅಭಿಮಾನಿಗಳ ಜೊತೆ ಸಮಯ ಕಳೆದ ದುನಿಯಾ ವಿಜಿ ನಂತರ ಮಾಲೂರಿನಲ್ಲಿರುವ ಡಾ.ರಾಜ್‍ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಪುತ್ಥಳಿಗೆ ಹೂವಿನ ಮಾಲೆ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ. ದುನಿಯಾ ವಿಜಯ್ ಹಾಗೂ ಚಿತ್ರತಂಡದ ಜೊತೆ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕೂಡ ಮಾಲೂರಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು.

    ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎಲ್ಲರೂ ಕಾತರದಿಂದ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಿಗೆ ಜೋಡಿಯಾಗಿ ಸಂಜನಾ ಆನಂದ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಟಗರು ಖ್ಯಾತಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ಚಿತ್ರದ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗಿದೆ. ಶಿವಸೇನಾ ಛಾಯಾಗ್ರಹಣ ‘ಸಲಗ’ ಚಿತ್ರಕ್ಕಿದೆ. ಡಾಲಿ ಧನಂಜಯ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದು, ಅಚ್ಯುತ್ ಕುಮಾರ್, ರಂಗಾಯಣ ರಘು, ಯಶ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಸಲಗ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ದುನಿಯಾ ವಿಜಿ ಕರೆ

    ಸಲಗ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ದುನಿಯಾ ವಿಜಿ ಕರೆ

    – ನೆಚ್ಚಿನ ನಟನ ಕರೆಯಿಂದ ಅಭಿಮಾನಿಗೆ ಆನಂದಭಾಷ್ಪ

    ಬೆಂಗಳೂರು: ಸಲಗ ಟ್ಯಾಟೂ ಹಾಕಿಸಿಕೊಂಡ ತನ್ನ ಅಭಿಮಾನಿಯ ಜೊತೆ ನಟ ದುನಿಯಾ ವಿಜಯ್ ಅವರು ವೀಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.

    ಉತ್ತರ ಕರ್ನಾಟಕ ಮೂಲದ ಹನುಮಂತ ಸದ್ಯ ಗೋವಾದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ದುನಿಯಾ ವಿಜಿಯ ಅಪ್ಪಟ ಅಭಿಮಾನಿಯಾಗಿದ್ದಾನೆ. ವಿಜಯ್ ರಂತೆ ತಂದೆ-ತಾಯಿಯನ್ನ ಆರಾಧಿಸೋಧ್ಯೇಯವನ್ನ ಹೊಂದಿರೋ ಈ ಅಭಿಮಾನಿ, ನೆಚ್ಚಿನ ನಟನ ಸಿನಿಮಾ ಯಶಸ್ವಿಯಾಗಲೆಂದು ಸಲಗ ಟೈಟಲ್ ನ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.

    ಈ ವಿಷಯ ತಿಳಿದು ಅಭಿಮಾನಿಗೆ ವಿಜಯ್ ವೀಡಿಯೋ ಕಾಲ್ ಮಾಡಿದ್ದಾರೆ. ತನ್ನ ಆರಾಧ್ಯ ದೈವನ ಕರೆಯಿಂದ ಖುಷಿಗೊಂಡ ಹನುಮಂತ ಆನಂದಭಾಷ್ಪ ಸುರಿಸಿದ್ದಾನೆ.

    ಇತ್ತ ಟ್ಯಾಟೂ ಕಂಡು ಭಾವುಕರಾದ ವಿಜಯ್, ಹನುಂತನಿಗೆ ವೀಡಿಯೋ ಕರೆ ಮಾಡಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಅಂತ ಕೃತಜ್ಞತೆ ಸಲ್ಲಿದ್ದಾರೆ. ಜೊತೆಗೆ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಒಳ್ಳೆಯದಾಗುತ್ತೆ ಅಂತ ಹನುಮಂತನಿಗೆ ಶುಭ ಹಾರೈಸಿದ್ದಾರೆ.

  • ಹೆತ್ತವರ ಪಾದಗಳ ಫೋಟೋ ಹಂಚಿಕೊಂಡ ಸಲಗ

    ಹೆತ್ತವರ ಪಾದಗಳ ಫೋಟೋ ಹಂಚಿಕೊಂಡ ಸಲಗ

    ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್‍ವುಡ್ ಸ್ಟಾರ್ ದುನಿಯಾ ವಿಜಯ್ ಅಪ್ಪ-ಅಮ್ಮನ ಪಾದಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಎರಡು ಪಾದಗಳು ಮತ್ತು ಅಭಿಮಾನಿಗಳ ಹಾರೈಕೆ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ಬರೆದುಕೊಂಡು ಹೆತ್ತವರ ಪಾದಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟು ಹಬ್ಬದಂದು ತಂದೆ-ತಾಯಿ ಪಾದಗಳ ಫೋಟೋವನ್ನು ಹಾಕಿ ವಿಭಿನ್ನವಾದ ರೀತಿಯಲ್ಲಿ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿದ್ದಾರೆ.

     

    View this post on Instagram

     

    A post shared by Duniya Vijay (@duniyavijayofficial)

    ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಲಗ. ಈ ಸಿನಿಮಾದ ಟೈಟಲ್ ಟ್ರ್ಯಾಕ್ ಇನ್ನೇನು ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ದಿನಾಂಕ ಇನ್ನು ಪ್ರಕಟವಾಗಬೇಕಿದೆ. ಸಲಗ ಸಿನಿಮಾ ಮೂಲಕವಾಗಿ ದುನಿಯಾ ವಿಜಯ್ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

     

    47 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದುನಿಯಾ ವಿಜಯ್ ಮೊದಲು ಸಿಕ್ಕಿರುವ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರು 2007ರಲ್ಲಿ ಸೂರಿ ನಿರ್ದೇಶನದ ದುನಿಯಾ ಚಿತ್ರ ಮೂಲಕವಾಗಿ ನಾಯಕನಾಗಿ ಸಿನಿಮಾ ರಂಗಕ್ಕೆ ಪರಿಚಯವಾಗಿ ಇದೀಗ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ.

    ದುನಿಯಾ ವಿಜಯ್ ಅವರು ಈ ವರ್ಷ ಕೊರೊನಾ ವೈರಸ್ ಇರುವ ಕಾರಣಕ್ಕೆ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಹೀಗಾಗಿ ಅವರು ಅಭಿಮಾನಿಗಳಿಗೆ ಈ ವರ್ಷ ಮನೆ ಹತ್ತಿರ ಬರಬೇಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು.