Tag: Duniya Vijay

  • ಸೈಮಾ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ: ದುನಿಯಾ ವಿಜಯ್ ಕೆಂಡಾಮಂಡಲ

    ಸೈಮಾ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ: ದುನಿಯಾ ವಿಜಯ್ ಕೆಂಡಾಮಂಡಲ

    ದುಬೈನಲ್ಲಿ (Dubai) ನಡೆದ 2024ರ ಸಾಲಿನ ಸೈಮಾ ಪ್ರಶಸ್ತಿ (SIIMA 2025 Award) ವಿತರಣಾ ಸಮಾರಂಭದ ವೇದಿಕೆಯಲ್ಲೇ ಕನ್ನಡಿಗರಿಗೆ (Kannadigas) ಅವಮಾನ ಮಾಡಲಾಗಿದೆ ಎಂದು ದುನಿಯಾ ವಿಜಯ್‌ (Duniya Vijay) ಸಿಟ್ಟು ಹೊರಹಾಕಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಸೌತ್‌ ಇಂಡಸ್ಟ್ರಿಯ ಕಲಾವಿದರು, ತಂತ್ರಜ್ಞರು ಭಾಗಿಯಾಗಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಆದರೆ ಈ ಕಾರ್ಯಕ್ರಮದಲ್ಲಿಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂದು ಭೀಮಾ ಸಿನಿಮಾಗೆ ಪ್ರಶಸ್ತಿ ಸ್ವೀಕರಿಸಿದ ನಟ ದುನಿಯಾ ವಿಜಯ್ ವೇದಿಕೆಯಲ್ಲೇ ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಎಲ್ಲಾ ಭಾಷೆಯ ಸಿನಿಮಾ ನಟ, ನಟಿಯರಿಗೆ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಕೊನೆಗೆ ಕನ್ನಡ ಚಿತ್ರರಂಗದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿಬಾರಿಯೂ ಈ ರೀತಿಯಾಗಿಯೇ ನಡೆದುಕೊಂಡು ಬಂದಿದೆ. ಕೊನೆಗೆ ಪ್ರಶಸ್ತಿ ನೀಡುವಾಗ ಎಲ್ಲರೂ ಎದ್ದು ಹೋಗಿರುತ್ತಾರೆ. ಎಲ್ಲರೂ ಇದ್ದಾಗಲೇ ಕನ್ನಡಿಗರಿಗೂ ಕರೆದು ಅವಾರ್ಡ್ ಕೊಡಿ ಎಂದು ವೇದಿಕೆಯ ಮೇಲೆಯೇ ನಟ ದುನಿಯಾ ವಿಜಯ್ ಗರಂ ಆಗಿದ್ದಾರೆ. ಇದನ್ನೂ ಓದಿ:  60 ಕೋಟಿ ವಂಚನೆ ಕೇಸ್; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

    ಮುಂದುವರೆದು ಇದೇ ರೀತಿ ಪುನರಾವರ್ತನೆ ಮಾಡಿದರೆ ನಾವ್ಯಾರು ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎನ್ನುವ ಖಡಕ್ ಸಂದೇಶವನ್ನ ರವಾನಿಸಿದ್ದಾರೆ. ಇದನ್ನೂ ಓದಿ:  ಹಿಂದೆ ಜಾಗ ಮಾರಾಟ ಮಾಡಿದಾಗ ಉಲ್ಲಂಘನೆಯಾಗಿರಲಿಲ್ಲ, ಈಗ ಹೇಗೆ ನಿಯಮ ಉಲ್ಲಂಘನೆಯಾಗುತ್ತೆ – ಬಾಲಣ್ಣನ ಪುತ್ರಿ ಸವಾಲು

    ಪ್ರತಿ ಬಾರಿ ಕನ್ನಡವನ್ನ ಕೆಳಗಿಳಿಸಲಾಗುತ್ತದೆ. ಬೇರೆ ಭಾಷೆಯ ಯಾವ ಸ್ಟಾರ್‌ ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ದುನಿಯಾ ವಿಜಯ್ ಕನ್ನಡಪರ ಗಟ್ಟಿಧ್ವನಿಗೆ ದುಬೈ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ದುನಿಯಾ ವಿಜಯ್ ನಂತರ ಕಿಚ್ಚ ಸುದೀಪ್‌ಗೆ (Sudeep) ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅಲ್ಲಿ ದೊಡ್ಡ ಸ್ಟಾರ್‌ಗಳು ಇರಲಿಲ್ಲ. ಸುದೀಪ್ ಪರವಾಗಿ ವಿ.ನಾಗೇಂದ್ರ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದಾಗಲೂ ಕಡಿಮೆ ಸಂಖ್ಯೆಯ ಪ್ರೇಕ್ಷಕರಿದ್ದರು.

  • ದುನಿಯಾ ವಿಜಯ್ ಪುತ್ರಿ ರಿತನ್ಯಾ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಫಸ್ಟ್ ಲುಕ್

    ದುನಿಯಾ ವಿಜಯ್ ಪುತ್ರಿ ರಿತನ್ಯಾ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಫಸ್ಟ್ ಲುಕ್

    ʻಭೀಮಾʼ ಸಕ್ಸಸ್‌ ಬಳಿಕ ನಟ ದುನಿಯಾ ವಿಜಯ್ (Duniya Vijay), ರಚಿತಾ ರಾಮ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ʻಲ್ಯಾಂಡ್ ಲಾರ್ಡ್ʼ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ವಿಜಯ್ ಸಹ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಯೆಸ್‌. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಸಾರಥಿ ಚಿತ್ರವನ್ನು ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಹಾಗೂ ಕೆ.ಎಸ್ ಹೇಮಂತ್ ಗೌಡ ಅವರು ಸಾರಥಿ ಫಿಲಂಸ್ ಮೂಲಕ ಚಿತ್ರ‌ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಜೊತೆಗೆ ಗುರುಶಿಷ್ಯರು ಚಿತ್ರದ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಕಥಾ ಲೇಖಕ ಜಡೇಶ್ ಕೆ ಹಂಪಿ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಆಭಿಮಾನಿಗಳ ಮನ ಗೆದ್ದಿರುವ ದುನಿಯಾ ವಿಜಯ್, ರಚಿತಾ ರಾಮ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ʻಲ್ಯಾಂಡ್ ಲಾರ್ಡ್ʼ ಚಿತ್ರದಲ್ಲಿ (Landlord Cinema) ದುನಿಯಾ ವಿಜಯ್ ಪುತ್ರಿ ರಿತನ್ಯಾ ವಿಜಯ್ ಸಹ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಆಗಸ್ಟ್ 30 ರಿತನ್ಯ ಅವರ ಜನ್ಮದಿನ. ಅಂದು ರಿತನ್ಯಾ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಲ್ಯಾಂಡ್ ಲಾರ್ಡ್ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ರಿತನ್ಯಾ ವಿಜಯ್ ಅವರು ಭಾಗ್ಯ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲ್ಯಾಂಡ್ ಲಾರ್ಡ್ ಚಿತ್ರದ ರಿತನ್ಯ ವಿಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ ಹಾಗೂ ಕುತೂಹಲ ಮೂಡಿಸಿದೆ.

    ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ ಲ್ಯಾಂಡ್ ಲಾರ್ಡ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ವರ್ಷದ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  • ಸೆಟ್ಟೇರಿತು ಸೂರಿ, ಯುವ ಸಿನಿಮಾ- ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

    ಸೆಟ್ಟೇರಿತು ಸೂರಿ, ಯುವ ಸಿನಿಮಾ- ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

    ಕ್ಕ ಸಿನಿಮಾ (Ekka Film) ಬೆನ್ನಲ್ಲೇ ಹೊಸ ಸಿನಿಮಾವೊಂದನ್ನು ಯುವ ರಾಜ್‌ಕುಮಾರ್‌ (Yuva Rajkumar) ಒಪ್ಪಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಸೂರಿ (Soori) ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಯುವಗೆ ದುನಿಯಾ ವಿಜಯ್‌ ಪುತ್ರಿಗೆ ರಿತನ್ಯಾ (Rithnya Vijay Kumar) ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್

    ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ಯುವರಾಜ್‌ಕುಮಾರ್‌ ಹಾಗೂ ನಿರ್ದೇಶಕ ಸೂರಿ ಸಿನಿಮಾಗೆ ಇಂದು (ಏ.30) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ಕುಮಾರ್‌ ಕ್ಲ್ಯಾಪ್‌ ಮಾಡಿದ್ದಾರೆ. ಅಪ್ಪು ಅವರ ಮಗಳು ಧೃತಿ ಕ್ಯಾಮೆರಾಗೆ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಇದನ್ನೂ ಓದಿ:ಯಶ್ ತಾಯಿ ನಿರ್ಮಾಣದ ಸಿನಿಮಾದಲ್ಲಿ ಪೃಥ್ವಿ ಅಂಬರ್- ‌’ಕೊತ್ತಲವಾಡಿ’ ಚಿತ್ರದ ಪೋಸ್ಟರ್‌ ಔಟ್

    ದುನಿಯಾ, ಕೆಂಡಸಂಪಿಗೆ, ಬ್ಯಾಡ್‌ ಮ್ಯಾನರ್ಸ್‌, ಟಗರು ಸಿನಿಮಾಗಳ ಮೂಲಕ ಸಕ್ಸಸ್‌ ಕಂಡಿರೋ ಸೂರಿ ಗರಡಿಯಲ್ಲಿ ಯುವ ಅವರು  ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲ ಫ್ಯಾನ್ಸ್‌ಗೆ ಇದೆ. ದುನಿಯಾ ವಿಜಯ್‌ (Duniya Vijay) ಮೊದಲ ಪುತ್ರಿ ರಿತನ್ಯಾ ಈ ಚಿತ್ರದ ನಾಯಕಿಯಾಗಿದ್ದಾರೆ.  ಈಗಾಗಲೇ ಅಪ್ಪನ ಜೊತೆ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನಿಮಾವಾದರೆ, ಯುವ ರಾಜ್‌ಕುಮಾರ್‌ಗೆ ಇದು ಮೂರನೇ ಚಿತ್ರವಾಗಿದೆ.

    ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್‌ ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸಂತೋಷ್‌ ಕಲಾ ನಿರ್ದೇಶನ, ಶೇಖರ್‌ ಕ್ಯಾಮೆರಾ ವರ್ಕ್‌ ಈ ಚಿತ್ರಕ್ಕೆ ಇರಲಿದೆ. ಮೇ ತಿಂಗಳಾತ್ಯಂತಕ್ಕೆ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರುತ್ತಿರುವ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಗಲಿದೆ.

    ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ‘ಎಕ್ಕ’ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್‌ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ.

  • ಪುರಿ ಜಗನ್ನಾಥ್, ವಿಜಯ್‌ ಸೇತುಪತಿ ಸಿನಿಮಾಗೆ ದುನಿಯಾ ವಿಜಯ್‌ ಎಂಟ್ರಿ

    ಪುರಿ ಜಗನ್ನಾಥ್, ವಿಜಯ್‌ ಸೇತುಪತಿ ಸಿನಿಮಾಗೆ ದುನಿಯಾ ವಿಜಯ್‌ ಎಂಟ್ರಿ

    ನಿರ್ದೇಶಕ ಪುರಿ ಜಗನ್ನಾಥ್‌ (Puri Jagannadh) ಹಾಗೂ ವಿಜಯ್‌ ಸೇತುಪತಿ (Vijay Sethupathi) ಕಾಂಬಿನೇಷನ್‌ ಸಿನಿಮಾ ಈಗಾಗಲೇ ತಾರಾಬಳಗದ ಮೂಲಕ ಕುತೂಹಲ ಹೆಚ್ಚಿಸಿದೆ. ಬಾಲಿವುಡ್‌ ನಟಿ ಟಬು ಇತ್ತೀಚೆಗಷ್ಟೇ ಚಿತ್ರತಂಡ ಸೇರಿಕೊಂಡ ಬೆನ್ನಲ್ಲೇ ಕನ್ನಡದ ನಟ ದುನಿಯಾ ವಿಜಯ್‌ (Duniya Vijay) ಅವರು ಪುರಿ ಜಗನ್ನಾಥ್‌ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಬೀಚ್ ಬಳಿ ನಟಿ ತೃಪ್ತಿ ದಿಮ್ರಿ ಹಾಟ್ ಪೋಸ್‌

    ‘ವೀರ ಸಿಂಹ ರೆಡ್ಡಿ’ ಬಳಿಕ ವಿಜಯ್‌ ನಟಿಸಲಿರುವ ಎರಡನೇ ತೆಲುಗು ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್‌ ಅಭಿನಯಸಲಿದ್ದು, ಅವರನ್ನು ತಮ್ಮ ತಂಡಕ್ಕೆ ಪುರಿ ಜಗನ್ನಾಥ್‌ ಹಾಗೂ ನಿರ್ಮಾಪಕಿ ಚಾರ್ಮಿ ಬರ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಿರ್ಮಾಪಕಿಯಾದ ರಾಕಿಂಗ್ ಸ್ಟಾರ್ ಯಶ್ ತಾಯಿ

     

    View this post on Instagram

     

    A post shared by Puri Connects (@puriconnects)

    ಪುರಿ ಜಗನ್ನಾಥ್‌ ಬರೆದು ನಿರ್ದೇಶಿಸುತ್ತಿರುವ ಈ ಪ್ರಾಜೆಕ್ಟ್‌ ಪುರಿ ಕನೆಕ್ಟ್‌ ಬ್ಯಾನರ್‌ ನಡಿ ಮೂಡಿ ಬರಲಿದೆ. ಪುರಿ ಜಗನ್ನಾಥ್‌ ಹಾಗೂ ಚಾರ್ಮಿ ಕೌರ್‌ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಜೂನ್‌ನಿಂದ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ.

  • ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

    ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

    ದುನಿಯಾ ವಿಜಯ್ (Duniya Vijay) ಅವರು ಸದ್ಯ ನಟನೆ ಮತ್ತು ನಿರ್ದೇಶನ ಎರಡರಲ್ಲೂ ತೊಡಗಿಸಿಕೊಂಡಿದ್ದಾರೆ. ಮಗಳು ಮೋನಿಷಾ ನಟನೆಯ ‘ಸಿಟಿ ಲೈಟ್ಸ್’ (City Lights) ಸಿನಿಮಾಗೆ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಹೀಗಿರುವಾಗ ಈ ಚಿತ್ರತಂಡಕ್ಕೆ ಹಿರಿಯ ನಟಿ ಉಮಾಶ್ರೀ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

    ನಟಿ ಉಮಾಶ್ರೀಗೆ ವಿಜಯ್‌ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ವಿಭಿನ್ನ ಕಥೆ ಹೇಳಲು ಹೊರಟಿರುವ ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರಕ್ಕೆ ಉಮಾಶ್ರೀ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ, ನೀವು ಕೈಜೋಡಿಸಿ- ಅಭಿಮಾನಿಗಳಿಗೆ ಕಿಚ್ಚ ಮನವಿ

    ಚಿತ್ರದ ನಾಯಕನಾಗಿ ವಿನಯ್ ರಾಜ್‌ಕುಮಾರ್ ಕಾಣಿಸಿಕೊಳ್ತಿದ್ರೆ, ನಾಯಕಿಯಾಗಿ ಮೋನಿಷಾ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ವಿಜಯ್ ಅವರು ವಿಶೇಷ ಸಮುದಾಯದ ಕಥೆಯೊಂದನ್ನು ಹೇಳಲು ಹೊರಟಿದ್ದಾರೆ.

    ಲ್ಯಾಂಡ್‌ಲಾರ್ಡ್, ತಮಿಳಿನ ನಟಿ ನಯನತಾರಾ (Nayanthara) ಜೊತೆಗಿನ ಸಿನಿಮಾ, ‘ಸಿಟಿ ಲೈಟ್ಸ್’ ಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಹಲವು ಚಿತ್ರಗಳು ವಿಜಯ್ ಕೈಯಲ್ಲಿದೆ.

  • ಕಾಲಿವುಡ್‌ನತ್ತ ನಟ ದುನಿಯಾ ವಿಜಯ್ – ನಯನತಾರಾಗೆ ವಿಲನ್!

    ಕಾಲಿವುಡ್‌ನತ್ತ ನಟ ದುನಿಯಾ ವಿಜಯ್ – ನಯನತಾರಾಗೆ ವಿಲನ್!

    ಟ, ನಿರ್ದೇಶಕ ದುನಿಯಾ ವಿಜಯ್ (Duniya Vijay) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ತೆಲುಗಿನಲ್ಲಿ ಘರ್ಜಿಸಿದ್ದಾಯ್ತು, ಈಗ ತಮಿಳಿನತ್ತ ಮುಖ ಮಾಡಿದ್ದಾರೆ. ನಯನತಾರಾಗೆ (Nayanthara) ವಿಲನ್ ಆಗಿ ವಿಜಯ್ ಅಬ್ಬರಿಸಲಿದ್ದಾರೆ. ಸ್ಟಾರ್ ನಟಿಯ ಸಿನಿಮಾದಲ್ಲಿ ಭಾಗವಾಗ್ತಿರುವ ಬಗ್ಗೆ ಸ್ವತಃ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಮ್ಯಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಕಮ್‌ ಬ್ಯಾಕ್‌ ಬಗ್ಗೆ ಸುಳಿವು ಕೊಟ್ರು ನಟಿ

    ನಂದಮೂರಿ ಬಾಲಕೃಷ್ಣಗೆ ವಿಲನ್ ಆಗಿ ದುನಿಯಾ ವಿಜಯ್ ನಟಿಸಿದ ಬಳಿಕ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಸುಂದರ್ ಸಿ. ನಿರ್ದೇಶನದ ಹಾಗೂ ನಯನತಾರಾ ನಟನೆಯ ‘ಮೂಕುತ್ತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದನ್ನು ವಿಜಯ್ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ. ತಮಿಳು ಪ್ರೇಕ್ಷಕರಿಗೆ ಪರಿಚಯಿಸುತ್ತಿರೋದಕ್ಕೆ ನಿರ್ದೇಶಕ ಸುಂದರ್ ಸಿ.ಗೆ ಥ್ಯಾಂಕ್ಯೂ ಎಂದಿದ್ದಾರೆ.

     

    View this post on Instagram

     

    A post shared by Duniya Vijay (@duniyavijayofficial)

    ಅಂದಹಾಗೆ, ವಿಜಯ್ ಅವರು ಸಲಗ, ಭೀಮ ಸಕ್ಸಸ್ ನಂತರ ಕನ್ನಡದ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಮೋನಿಷಾ ಮತ್ತು ವಿನಯ್ ರಾಜ್‌ಕುಮಾರ್ ನಟನೆಯ ‘ಸಿಟಿಲೈಟ್ಸ್’ ಚಿತ್ರಕ್ಕೆ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

  • ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಪೋಸ್ಟರ್ ಔಟ್

    ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಪೋಸ್ಟರ್ ಔಟ್

    ಟ, ನಿರ್ದೇಶಕನಾಗಿ ಗೆದ್ದಿರುವ ದುನಿಯಾ ವಿಜಯ್ (Duniya Vijay) ನಿರ್ದೇಶನದ ಹೊಸ ಸಿನಿಮಾ ‘ಸಿಟಿ ಲೈಟ್ಸ್’ (City Lights) ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ಪುತ್ರಿ ಮೋನಿಷಾ (Monisha) ಹಾಗೂ ವಿನಯ್ ರಾಜ್‌ಕುಮಾರ್ (Vinay Rajkumar) ಲುಕ್ ಅನಾವರಣ ಆಗಿದೆ. ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ವಿಜಯ್‌ ಮಾಹಿತಿ ಹಂಚಿಕೊಂಡಿದ್ದಾರೆ.

    ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ವಿನಯ್ ಮತ್ತು ಮೋನಿಷಾ ತಲೆಯ ಮೇಲೆ ದೇವಿಯನ್ನು ಇಟ್ಟುಕೊಂಡು ಚಾಟಿ ಏಟು ಹೊಡೆದುಕೊಂಡು ಓಡಾಡುತ್ತಿರುವ ಲುಕ್ ಅನಾವರಣ ಆಗಿದೆ. ಇದರ ಸುತ್ತ ಹೆಣೆಯಲಾದ ಕಥೆ ಇದಾಗಿದೆ. ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಚಿತ್ರೀಕರಣ – ಕಲ್ಟ್ ಚಿತ್ರದ ವಿರುದ್ಧ ಕೇಸ್

     

    View this post on Instagram

     

    A post shared by Duniya Vijay (@duniyavijayofficial)

    ಚಿತ್ರದ ಅಫಿಷಯಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ, ‘ಚಡಿ ಏಟಿನಷ್ಟೇ ಚುರುಕಾದ ಸಿಟಿ ಲೈಟ್ಸ್ ಫಸ್ಟ್ ಲುಕ್’ ಎಂದು ಬರೆಯಲಾಗಿದೆ. ಸದ್ಯ ದುನಿಯಾ ವಿಜಯ್ ಅವರು ಮಗಳು ಮೋನಿಷಾ ಮತ್ತು ವಿನಯ್ ಮೂಲಕ ಹೇಳಲು ಹೊರಟಿರುವ ಕಥೆ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ. ಚಿತ್ರದ ಪೋಸ್ಟರ್ ಲುಕ್‌ನಿಂದ ನಿರೀಕ್ಷೆ ದುಪ್ಪಟ್ಟಾಗಿದೆ.

    ಅಂದಹಾಗೆ, ‘ಸಿಟಿ ಲೈಟ್ಸ್‌’ ಸಿನಿಮಾದ ಜೊತೆಗೆ ದೊಡ್ಡ ಮಗಳು ರಿತನ್ಯಾ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಜಡೇಶ್‌ ಕುಮಾರ್‌ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

  • ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್‌ (Duniya Vijay) ಹಾಗೂ ಲೂಸ್‌ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್‌ ಮಾದ ಯೋಗೇಶ್‌ ಸ್ಪಷ್ಟನೆ ಕೊಟ್ಟಿದ್ದರು. ಇದಕ್ಕೆ ನಟ ದುನಿಯಾ ವಿಜಯ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ದುನಿಯಾ ವಿಜಯ್‌, ಯೋಗಿ ನನ್ನ ಸ್ವಂತ ಅಕ್ಕನ ಮಗ. ಚಿಕ್ಕ ವಯಸ್ಸಿನಿಂದಲೂ ಅವನನ್ನ ಎತ್ತಿ ಆಡಿಸಿ ಬೆಳೆಸಿದ್ದೇನೆ. ಆ ಪ್ರೀತಿ ಯಾವಾಗಲೂ ಇರುತ್ತೆ. ಎಷ್ಟೇ ದೂರ ಇದ್ದರೂ ಯೋಗಿ ಚೆನ್ನಾಗಿರಲಿ ಅಂತ ಆಶಿಸ್ತೀನಿ ಅಂತ ಹೇಳಿದ್ದಾರೆ.

    ಭೀಮಾ ಸಿನಿಮಾದಲ್ಲಿ ನಟನೆ ಮಾಡಬೇಕಿತ್ತು. ಆದ್ರೆ ಆಗಲ್ಲ. ಮುಂದೆ ನನ್ನ ನಿರ್ದೇಶನದಲ್ಲಿ ಯೋಗಿಗೆ ಸಿನಿಮಾ ಮಾಡ್ತೀನಿ. ಒಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ಏಕೆಂದರೆ ನಾನು ಕಷ್ಟಪಟ್ಟು ಬಂದಿದ್ದೇನೆ, ಯೋಗಿನೂ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಆದ್ರೆ ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ, ಬೇರೆನಿಲ್ಲ. ಒಂದು ಸ್ಕ್ರಿಪ್ಟ್‌ ಬಂದಿತ್ತು. ಯೋಗಿ ಸಿನಿಮಾ ಮಾಡಿಸೋಣ ಅಂತ ಹೇಳಿದ್ದೇನೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

    ನಟ ಯೋಗಿ ಹೇಳಿದ್ದೇನು?
    ದುನಿಯಾ ವಿಜಯ್‌ ಹಾಗೂ ನನಗೆ ಕಿರಿಕ್‌ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ. ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್‌ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್‌ ಹಾಗೂ ನನ್ನ ಫ್ರೆಂಡ್‌ಶಿಪ್‌ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
    ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು.

    ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
    ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್‌ ಸಿನಿಮಾಗಳನ್ನೂ ಕೊಟ್ಟರು.

  • ದುನಿಯಾ ವಿಜಯ್ ಜೊತೆ ಕಿರಿಕ್ ಆಗಿದ್ದು ನಿಜ – ಲೂಸ್‌ಮಾದ ಯೋಗೇಶ್‌

    ದುನಿಯಾ ವಿಜಯ್ ಜೊತೆ ಕಿರಿಕ್ ಆಗಿದ್ದು ನಿಜ – ಲೂಸ್‌ಮಾದ ಯೋಗೇಶ್‌

    – ʻಭೀಮಾʼ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು, ಕೂಡಿ ಬರಲಿಲ್ಲ ಎಂದ ನಟ

    ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್‌ (Duniya Vijay) ಹಾಗೂ ಲೂಸ್‌ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್‌ ಮಾದ ಯೋಗೇಶ್‌ ಸ್ಪಷ್ಟನೆ ನೀಡಿದ್ದಾರೆ.

    ಸಿದ್ಲಿಂಗು-2 ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇಬ್ಬರ ವೈಮನಸ್ಸಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ದುನಿಯಾ ವಿಜಯ್‌ ಹಾಗೂ ನನಗೆ ಕಿರಿಕ್‌ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್‌ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್‌ ಹಾಗೂ ನನ್ನ ಫ್ರೆಂಡ್‌ಶಿಪ್‌ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
    ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

    ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
    ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್‌ ಸಿನಿಮಾಗಳನ್ನೂ ಕೊಟ್ಟರು.

  • ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ: ಫ್ಯಾನ್ಸ್‌ಗೆ ದುನಿಯಾ ವಿಜಯ್ ಮನವಿ

    ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ: ಫ್ಯಾನ್ಸ್‌ಗೆ ದುನಿಯಾ ವಿಜಯ್ ಮನವಿ

    ದುನಿಯಾ ವಿಜಯ್ (Duniya Vijay) ನಟ ಕಮ್ ನಿರ್ದೇಶಕನಾಗಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಫ್ಯಾನ್ಸ್‌ಗೆ ನಟ ಕಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಜ.20ರಂದು ವಿಜಯ್‌ ಹುಟ್ಟುಹಬ್ಬವಾಗಿದ್ದು, ಅಂದು ಬರ್ತ್‌ಡೇ ಆಚರಣೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

    ನನ್ನ ಪ್ರೀತಿಯ ಅಭಿಮಾನಿಗಳೇ, ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬವನ್ನು ನಿಮ್ಮ ಮನೆಯ ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡುತ್ತಾ ಇದ್ರಿ. ಈ ಬಾರಿಯೂ ನಿಮ್ಮ ಜೊತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು. ಆದರೆ ಕೆಲಸ ಎಂಬ ಹೊಣೆ ನನ್ನ ಮೇಲಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜೊತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ. ಅಂದು ಜಡೇಶ್ ಕೆ. ಹಂಪಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಚಿತ್ರೀಕರಣದಲ್ಲಿರುತ್ತೇನೆ. ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ ‘VK 29’ ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Duniya Vijay (@duniyavijayofficial)

    ಬಳಿಕ ಶನಿವಾರ ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ. ಧನ್ಯವಾದಗಳು ಎಂದು ನಟ ವಿಶೇಷ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಕೇಸ್‌ಗೆ ಬಿಗ್ ಟ್ವಿಸ್ಟ್: ಘಟನೆಯ ಇಂಚಿಂಚೂ ವಿವರ ಇಲ್ಲಿದೆ

    ಇನ್ನೂ ಮಗಳು ಮೋನಿಷಾ ಚೊಚ್ಚಲ ಸಿನಿಮಾ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ಡೈರೆಕ್ಷನ್ ಸಿನಿಮಾದಲ್ಲಿ ನಟ ಬ್ಯುಸಿಯಾಗಿದ್ದಾರೆ.