Tag: Dunith Wellalage

  • ಏಷ್ಯಾ ಕಪ್‌ | ಪಂದ್ಯ ನಡೆಯುತ್ತಿದ್ದಾಗ ಲಂಕಾ ಆಟಗಾರನ ತಂದೆ ನಿಧನ

    ಏಷ್ಯಾ ಕಪ್‌ | ಪಂದ್ಯ ನಡೆಯುತ್ತಿದ್ದಾಗ ಲಂಕಾ ಆಟಗಾರನ ತಂದೆ ನಿಧನ

    ದುಬೈ: ಏಷ್ಯಾ ಕಪ್ ಟಿ-20 ಕ್ರಿಕೆಟ್‌ (Asia Cup) ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವ ವೇಳೆ ಶ್ರೀಲಂಕಾ ಆಟಗಾರ (Sri Lanka cricketer )ದುನಿತ್ ವೆಲ್ಲಾಳಗೆ (Dunith Wellalage) ಅವರ ತಂದೆ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಬಂದಿದೆ.

    ಬಿ ಗುಂಪಿನ ಅಂತಿಮ ಲೀಗ್‌ನಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ದುನಿತ್ ಅವರ ತಂದೆ ಸುರಂಗಾ ವೆಲ್ಲಾಳಗೆ ನಿಧನರಾಗಿರುವ ಸುದ್ದಿ ಬಂದಿತ್ತು. ಪಂದ್ಯ ಮುಗಿದ ಬಳಿಕ ಲಂಕಾ ಕೋಚ್ ಜಯಸೂರ್ಯ, ದುನಿತ್‌ ಅವರಿಗೆ ಮೈದಾನದಲ್ಲಿ ವಿಷಯ ತಿಳಿಸಿದರು. ಇದನ್ನೂ ಓದಿ: Asia Cup 2025 | ಮತ್ತೊಮ್ಮೆ ರೋಚಕ ಹಣಾಹಣಿ – ಸೂಪರ್‌ ಸಂಡೇ ಭಾರತ-ಪಾಕ್‌ ಮುಖಾಮುಖಿ

    ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಜಯಸೂರ್ಯ ಹಾಗೂ ಮ್ಯಾನೇಜರ್ ದುನಿತ್‌ರನ್ನು ಸಮಾಧಾನ ಮಾಡಿದ್ದಾರೆ. ದುನಿತ್ ಅವರ ತಂದೆ ಸುರಂಗಾ ಕೂಡ ಕ್ರಿಕೆಟ್ ಆಡುತ್ತಿದ್ದರು. ಆದರೆ ಅವರು ರಾಷ್ಟ್ರೀಯ ಟೂರ್ನಿಗಳಿಗೆ ಆಯ್ಕೆಯಾಗಿರಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

  • 138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    ಕೊಲಂಬೊ: ಅವಿಷ್ಕಾ ಫರ್ನಾಂಡೋ, ಕುಸಲ್‌ ಮೆಂಡಿಸ್‌ ಅಮೋಘ ಬ್ಯಾಟಿಂಗ್‌ ಹಾಗೂ ದುನಿತ್ ವೆಲ್ಲಲಾಗೆ ಮ್ಯಾಜಿಕ್‌ ಬೌಲಿಂಗ್‌ ನೆರವಿನೊಂದಿಗೆ ಶ್ರೀಲಂಕಾ ತಂಡವು ಭಾರತದ ವಿರುದ್ಧ 110 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲೇ ಭಾರತದ ವಿರುದ್ಧ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಲ್ಲದೇ ಕಳೆದ 27 ವರ್ಷಗಳಲ್ಲಿ ಲಂಕಾ ವಿರುದ್ಧ ಭಾರತಕ್ಕೆ ಮೊದಲ ಸರಣಿ ಸೋಲು ಇದಾಗಿದೆ.

    2023ರ ವರ್ಷಾರಂಭದಲ್ಲೇ ಭಾರತ, ಶ್ರೀಲಂಕಾ ವಿರುದ್ಧ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಹಾಗೂ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ತವರಿನಲ್ಲೇ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ತನ್ನ ತವರಿನಲ್ಲಿ ಬಲಿಷ್ಠ ಭಾರತದ ವಿರುದ್ಧ ಸರಣಿ ಗೆದ್ದು ಸೇಡು ಲಂಕಾ ತೀರಿಸಿಕೊಂಡಿತು. ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.

    ಶ್ರೀಲಂಕಾ ನೀಡಿದ 249 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲು ಕಂಡಿತು. ಚೇಸಿಂಗ್‌ ಆರಂಭಿಸಿದ ಭಾರತ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳಲು ಆರಂಭಿಸಿತು. ಭಾರತದ ಪರ ರೋಹಿತ್‌ ಶರ್ಮಾ 35 ರನ್‌ (20 ಎಸೆತ, 6 ಬೌಂಡರಿ, 1 ಸಿಕ್ಸರ್)‌, ವಾಷಿಂಗ್ಟನ್‌ ಸುಂದರ್‌ ಕೊನೆಯಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ ಭಾರತ ತಂಡ ಹೀನಾಯ ಸೋಲಿಗೆ ತುತ್ತಾಯಿತು. ಇದನ್ನೂ ಓದಿ: ತಲೆಗೂದಲು ಕಟ್‌, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್‌?

    ವಿರಾಟ್‌ ಕೊಹ್ಲಿ ಸಹ ಕೇವಲ 20 ರನ್‌ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರಿಯಾನ್‌ ಪರಾಗ್‌ ಸಹ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ಇದರಿಂದಾಗಿ ಭಾರತ 3ನೇ ಪಂದ್ಯವನ್ನು ಸೋತು, ಸರಣಿ ಬಿಟ್ಟುಕೊಡಬೇಕಾಯಿತು. ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಹೂಮಳೆಯ ಸ್ವಾಗತ

    ಫರ್ನಾಂಡೋ ಭರ್ಜರಿ ಬ್ಯಾಟಿಂಗ್:
    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ, ಉತ್ತಮ ಆರಂಭ ಪಡೆಯಿತು. ಪಥುಮ್‌ ನಿಸ್ಸಾಂಕ, ಆವಿಷ್ಕ ಫರ್ನಾಂಡೋ ಹಾಗೂ ಕುಶಾಲ್‌ ಮೆಂಡಿಸ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಂಕಾ 3 ವಿಕೆಟ್‌ಗೆ 183 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ಆದರೆ, ನಂತರ ಬಂದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ವಿಕೆಟ್‌ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

    ಲಂಕಾ ಪರ ಪಾತುಂ ನಿಸ್ಸಾಂಕ 45 ರನ್‌, ಅವಿಷ್ಕಾ ಫರ್ನಾಂಡೋ 96 ರನ್‌ (102, 9 ಬೌಂಡರಿ, 2 ಸಿಕ್ಸರ್), ಕುಸಲ್ ಮೆಂಡಿಸ್ 59 ರನ್‌, ಚರಿತ್ ಅಸಲಂಕಾ 10 ರನ್‌, ಜನಿತ್ ಲಿಯಾನಗೆ 8 ರನ್‌, ದುನಿತ್ ವೆಲ್ಲಲಾಗೆ 2 ರನ್‌, ಕಮಿಂಡು ಮೆಂಡಿಸ್ 23 ರನ್‌, ಮಹೀಶ್‌ ತೀಕ್ಷಣ 3 ರನ್‌ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್‌ ಆಸ್ಪತ್ರೆಗೆ ದಾಖಲು

    ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರೆ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲ್ದೀಪ್‌ ಯಾದವ್‌ ಅವರು ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯ ರೋಚಕ ಟೈ ಆದರೆ, 2ನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು.  ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ

  • Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    ಕೊಲಂಬೊ: ಇಲ್ಲಿನ ಆರ್‌ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯವು ಬೌಲರ್‌ಗಳ ಆಟಕ್ಕೆ ಸೀಮಿತವಾಗಿತ್ತು. ಇತ್ತಂಡಗಳಿಂದಲೂ ಸ್ಪಿನ್‌ ಬೌಲರ್‌ಗಳ ಕೈಚಳಕ ಜೋರಾಗಿತ್ತು. ಆದ್ರೆ ಚೇಸಿಂಗ್‌ನಲ್ಲಿ ಲಂಕಾ ವಿರುದ್ಧ ಬಿಗಿ ಹಿಡಿತ ಸಾಧಿಸಿದ ರೋಹಿತ್‌ ಪಡೆ 41 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ರೋಹಿತ್‌ ಶರ್ಮಾ ಅರ್ಧಶತಕ ಬ್ಯಾಟಿಂಗ್‌ ನೆರವು ಹಾಗೂ ಕುಲ್ದೀಪ್‌ ಯಾದವ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ಭಾರತ, ಶ್ರೀಲಂಕಾ ವಿರುದ್ಧ 41 ರನ್‌ಗಳ ಜಯ ಸಾಧಿಸಿದ್ದು, ಫೈನಲ್‌ ಕನಸು ಜೀವಂತವಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್‌ ಆಯಿತು. 214 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಟೀಂ ಇಂಡಿಯಾ ಸ್ಪಿನರ್‌ಗಳ ದಾಳಿಗೆ ನಲುಗಿತು. 41.3 ಓವರ್‌ಗಳಲ್ಲಿ 172 ರನ್‌ಗಳಗೆ ಸರ್ವಪತನ ಕಂಡಿತು.

    ಚೇಸಿಂಗ್‌ ಆರಂಭಿಸಿದ ಲಂಕಾ ತಂಡ ಟೀಂ ಇಂಡಿಯಾ ಸ್ಪಿನ್‌ ಬೌಲಿಂಗ್‌ ದಾಳಿಗೆ ನಲುಗಿಹೋಗಿತ್ತು. 7 ಓವರ್‌ಗಳಲ್ಲಿ 26 ರನ್‌ಗಳಿಸಿ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 26 ಓವರ್‌ಗಳಲ್ಲಿ 104 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಪಾತುಮ್ ನಿಸ್ಸಾಂಕ 6 ರನ್‌, ದಿಮುತ್ ಕರುಣಾರತ್ನೆ 2 ರನ್‌, ಕುಸಲ್ ಮೆಂಡಿಸ್ 15 ರನ್‌, ಸದೀರ ಸಮರವಿಕ್ರಮ 17 ರನ್‌, ಚರಿತ್ ಅಸಲಂಕಾ 22 ರನ್‌ ಹಾಗೂ ದಸುನ್‌ ಶನಾಕ 9 ರನ್‌ಗಳಿಸಿ ವಿಕೆಟ್‌ ಕೈಚೆಲ್ಲಿದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಧನಂಜಯ ಡಿ ಸಿಲ್ವಾ ಹಾಗೂ ದುನಿತ್ ವೆಲ್ಲಲಾಗೆ ತಂಡಕ್ಕೆ ನೆರವಾದರು.

    ಧನಂಜಯ ಹಾಗೂ ದುನಿತ್‌ ಜೋಡಿ 7ನೇ ವಿಕೆಟ್‌ಗೆ 75 ಎಸೆತಗಳಲ್ಲಿ 63 ರನ್‌ಗಳ ಜೊತೆಯಾಟ ನೀಡಿತ್ತು. ಕೊನೆಯ ಹಂತ ತಲುಪುತ್ತಿದ್ದಂತೆ ಸ್ಪೋಟಕ ಆಟಕ್ಕೆ ಪ್ರಯತ್ನಿಸಿತ್ತು. ಅಷ್ಟರಲ್ಲೇ ಜಡೇಜಾ ಧನಂಜಯ್‌ ಸೆಲ್ವಾ ಆಟಕ್ಕೆ ಬ್ರೇಕ್‌ ಹಾಕಿದರು. ಸಿಲ್ವಾ 66 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 41 ರನ್‌ ಗಳಿಸಿ ಔಟಾಗುತ್ತಿದ್ದಂತೆ ಮಹೀಶ್‌ ತೀಕ್ಷಣ, ಕಸುನ್‌ ರಜಿತ ಹಾಗೂ ಮಹೇಶ್‌ ಪಥಿರಣ ವಿಕೆಟ್‌ ಒಪ್ಪಿಸಿದ್ರು. ಕೊನೆಯವರೆಗೂ ಹೋರಾಟ ನಡೆಸಿದ ದುನಿತ್‌ 46 ಎಸೆತಗಳಲ್ಲಿ 42 ರನ್‌ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಶ್ರೀಲಂಕಾ 41.3 ಓವರ್‌ಗಳಲ್ಲಿ 172 ರನ್‌ಗಳಿಗೆ ಸರ್ವಪತನ ಕಂಡಿತು.

    ಟೀಂ ಇಂಡಿಯಾ ವಿರುದ್ಧ ಕುಲ್ದೀಪ್‌ ನಾಲ್ಕು ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ಹಾರ್ದಿಕ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ 15.1 ಓವರ್‌ಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿತು. ಶುಭಮನ್‌ ಗಿಲ್‌ 19‌ ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಪಾಕ್‌ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ್ದ ಕೊಹ್ಲಿ ಕೇವಲ 3 ರನ್‌ಗಳಿಗೆ ಔಟಾದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್‌ ಕಿಶನ್‌ 61 ಎಸೆತಗಳಲ್ಲಿ 33 ರನ್ ಹಾಗೂ ಕೆ.ಎಲ್‌ ರಾಹುಲ್‌ 44 ಎಸೆತಗಳಲ್ಲಿ 39 ರನ್‌ ಬಾರಿಸುವ ಮೂಲಕ ಛೇರಿಕೆ ನೀಡಿದ್ದರು. ಇವರಿಬ್ಬರ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 26 ರನ್‌ಗಳ ನೆರವಿನಿಂದ ಟೀಂ ಇಂಡಿಯಾ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಮೊದಲ 15 ಓವರ್‌ಗಳಲ್ಲಿ 91 ರನ್‌ ಗಳಿಸಿದ್ದ ಭಾರತ 25 ಓವರ್‌ಗಳಲ್ಲಿ 128 ರನ್‌ ಗಳಿಸಿತ್ತು. ಬಳಿಕ ನಿಧಾನ ಗತಿ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ 43 ಓವರ್‌ಗಳಲ್ಲಿ 186 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿತ್ತು. ಇದರಿಂದ 200 ರನ್‌ ಗಳಿಸುವುದೂ ಕಷ್ಟವಾಗಿತ್ತು. ಈ ವೇಳೆ ಅಕ್ಷರ್‌ ಪಟೇಲ್‌ ಜವಾಬ್ದಾರಿಯುತ ಆಟದಿಂದ 200ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ 10 ಓವರ್‌ಗಳಲ್ಲಿ 40 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಚರಿತ್‌ ಹಸಲಂಕಾ 9 ಓವರ್‌ಗಳಲ್ಲಿ ಕೇವಲ 18 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಉರುಳಿಸಿದರು. ಮಹೀಶ್‌ ತೀಕ್ಷಣ ಒಂದು ವಿಕೆಟ್‌ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]