Tag: dunai

  • ಮಲಯಾಳಿ ಯೂಟ್ಯೂಬರ್ ರಿಫಾ ಮೆಹ್ನು ದುಬೈನಲ್ಲಿ ಅನುಮಾನಾಸ್ಪದ ಸಾವು

    ಮಲಯಾಳಿ ಯೂಟ್ಯೂಬರ್ ರಿಫಾ ಮೆಹ್ನು ದುಬೈನಲ್ಲಿ ಅನುಮಾನಾಸ್ಪದ ಸಾವು

    ತಿರುವನಂತಪುರಂ: ದುಬೈನ ಫ್ಲ್ಯಾಟ್ ಒಂದರಲ್ಲಿ ಮಲಯಾಳಿ ಯೂಟ್ಯೂಬರ್ ರಿಫಾ ಮೆಹ್ನು (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

    ಈ ಘಟನೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆ ಈಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳ ಪ್ರಕಾರ, ಆಕೆಯ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಒಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ.

    ಕೋಯಿಕ್ಕೋಡ್ ಮಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ವೇಳೆ ರಿಫಾ ಕುತ್ತಿಗೆಯಲ್ಲಿ ಗಾಯದ ಗುರುತುಗಳಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಮರಣೋತ್ತರ ಪರೀಕ್ಷೆಯ ವಿವರಗಳನ್ನು ಪಡೆದ ನಂತರ ತನಿಖೆಯನ್ನು ದುಬೈಗೆ ವಿಸ್ತರಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

    ಶನಿವಾರ ಬೆಳಗ್ಗೆ ಸಬ್ ಕಲೆಕ್ಟರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ರಿಫಾ ಅವರ ಅಸ್ಥಿಯನ್ನು ಹೊರತೆಗೆಯಲಾಯಿತು. ಬಳಿಕ ಕೋಯಿಕ್ಕೋಡ್ ತಹಶೀಲ್ದಾರ್ ಸಮ್ಮುಖದಲ್ಲಿ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿತು. ನಂತರ ಮೃತದೇಹವನ್ನು ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಪಾವಂದೂರು ಜುಮಾ ಮಸೀದಿಯ ಸಮಾಧಿಯಲ್ಲಿ ಮರು ದಫನ ಮಾಡಲಾಯಿತು.

    ಈ ಹಿಂದೆ ಸ್ಮಶಾನದ ಆವರಣದಲ್ಲಿಯೇ ಶವ ಪರೀಕ್ಷೆ ನಡೆಸಲು ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದರು. ಆದರೆ ಮೃತದೇಹ ಸರಿಯಾದ ರೂಪದಲ್ಲಿ ಪತ್ತೆಯಾಗಿದ್ದರಿಂದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮಗಳ ಲಿವಿಂಗ್ ಟುಗೆದರ್ ಸಂಬಂಧಕ್ಕೆ ತಾಯಿ ವಿರೋಧ – ಪ್ರಿಯಕರನಿಂದ ತಾಯಿ ಹತ್ಯೆ

    21 ವರ್ಷದ ರಿಫಾ ಮೆಹ್ನು ಮಾರ್ಚ್ 1 ರಂದು ದುಬೈನಲ್ಲಿರುವ ಅವರ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿತ್ತು. ದುಬೈನ ತನಿಖಾಧಿಕಾರಿಗಳಿಂದ ರಿಫಾ ಆತ್ಮಹತ್ಯೆಯ ಹಿಂದಿನ ಕಾರಣ ತಿಳಿಯಲು ಸಾಧ್ಯವಾಗಲಿಲ್ಲ. ದುಬೈನಿಂದ ಶವವನ್ನು ತಾಯ್ನಾಡಿಗೆ ತಂದು ಸಮಾಧಿ ಮಾಡಲಾಗಿಯಿತು. ಪತಿ ಮತ್ತು ಅವರ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆಯನ್ನು ದುಬೈನಲ್ಲಿ ಮಾಡಿದ್ದಾರೆ ಎಂದು ರಿಫಾ ಕುಟುಂಬ ಆರೋಪಿಸಿದೆ. ಅಲ್ಲದೆ ಕೇರಳ ಪೊಲೀಸರ ಬಳಿಯೂ ಇದೇ ರೀತಿ ದೂರಿದ್ದಾರೆ.