Tag: Dulquer Salman

  • ‘ಕಾಂತ’ ಚಿತ್ರಕ್ಕಾಗಿ ಕೈಜೋಡಿಸಿದ ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್

    ‘ಕಾಂತ’ ಚಿತ್ರಕ್ಕಾಗಿ ಕೈಜೋಡಿಸಿದ ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್

    ಟಾಲಿವುಡ್ ಹ್ಯಾಂಡ್ಸಮ್ ಹಂಕ್ ರಾಣಾ ದಗ್ಗುಬಾಟಿ (Rana Daggubati) ಹಾಗೂ ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ (Dulquer Salmaan) ‘ಕಾಂತ’ (Kaantha) ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹೈದರಾಬಾದ್‌ನ ರಾಮ ನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ನಟ ಕಂ ನಿರ್ಮಾಪಕ ವೆಂಕಟೇಶ್ ದಗ್ಗುಬಾಟಿ ‘ಕಾಂತ’ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.

    ‘ಕಾಂತ’ ಸಿನಿಮಾವನ್ನು ರಾಣಾ ಒಡೆತನ ರಾಣಾಸ್ ಸ್ಪಿರಿಟ್ ಮೀಡಿಯಾ ಹಾಗೂ ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮಂ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ದುಲ್ಕರ್ ಚಿತ್ರ ನಿರ್ಮಾಣದ ಜೊತೆ ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 1950ರ ಮದ್ರಾಸ್ ಬ್ಯಾಕ್ ಡ್ರಾಪ್ ನಲ್ಲಿ ಕಾಂತ ಚಿತ್ರ ತಯಾರಾಗಲಿದೆ. ದುಲ್ಕರ್ ಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸೆ (Bhagyashri Borse) ಸಾಥ್ ಕೊಟ್ಟಿದ್ದು, ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ನಿರ್ಮಾಪಕ ರಾಣಾ ದಗ್ಗುಬಾಟಿ ಮಾತನಾಡಿ, ರಾಣಾಸ್ ಸ್ಪಿರಿಟ್ ಮೀಡಿಯಾ ವೇಫೇರರ್ ಫಿಲ್ಮಂ ಜೊತೆಯಾಗಿರುವುದು ಕಾಂತ ಚಿತ್ರಕ್ಕೆ ಹೊಸ ಆಯಾಮಾ ಸಿಕ್ಕಂತಾಗಿದೆ. ಪ್ರೇಕ್ಷಕರಿಗೆ ಸ್ಪಿರಿಟ್ ಮೀಡಿಯಾ ಕ್ವಾಲಿಟಿ ಸಿನಿಮಾ ನೀಡಲಿದೆ. ಸುರೇಶ್ ಪ್ರೊಡಕ್ಷನ್ 60ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸ್ಪಿರಿಟ್ ಮೀಡಿಯಾದೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಲು ಕಾಂತ ಅತ್ಯುತ್ತಮ ಚಿತ್ರವಾಗಿದೆ ಎಂದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ

    ಪ್ರಶಾಂತ್ ಪೊಟ್ಲೂರಿ, ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್ ಮತ್ತು ಜೋಮ್ ವರ್ಗೀಸ್ ಕಾಂತ ಚಿತ್ರ ನಿರ್ಮಾಣ ಮಾಡುತ್ತಿದ್ದು, ದಾನಿ ಸ್ಯಾಂಚೆಜ್ ಲೋಪೆಜ್ ಛಾಯಾಗ್ರಹ, ಜಾನು ಸಂಗೀತ, ರಾಮಲಿಂಗಂ ಕಲಾ ನಿರ್ದೇಶನ, ಲೆವೆಲ್ಲಿನ್ ಆಂಥೋನಿ ಗೊನ್ಸಾಲ್ವಿಸ್ ಸಂಕಲನ ಚಿತ್ರಕ್ಕಿದೆ. ‘ಕಾಂತ’ ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

  • ದುಲ್ಕರ್ ಸಲ್ಮಾನ್ ನಟನೆಯ ತೆಲುಗಿನ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ದುಲ್ಕರ್ ಸಲ್ಮಾನ್ ನಟನೆಯ ತೆಲುಗಿನ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salman) ನಟನೆಯ ತೆಲುಗಿನ ಚಿತ್ರಕ್ಕೆ ಕ್ಯಾಚಿ ಆಗಿರುವ ಟೈಟಲ್‌ವೊಂದು ಫಿಕ್ಸ್ ಆಗಿದೆ. ಮಹಾನದಿ, ಸೀತಾರಾಮಂ (Seetharamam Film) ಸಿನಿಮಾ ನಂತರ ಮತ್ತೆ ನಟನೆಗೆ ಮರಳಿದ್ದಾರೆ.

    ಟಾಲಿವುಡ್‌ನಲ್ಲಿ (Tollywood) ಇದೀಗ ಮತ್ತೆ ಹೊಸ ಚಿತ್ರವೊಂದನ್ನು ದುಲ್ಕರ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ. ಅದಕ್ಕೆ ‘ಆಕಾಶಂ ಲೋ ಒಕ ತಾರಾ’ (Aakasam Lo Oka Tara) ಎಂಬ ಟೈಟಲ್ ಇಡಲಾಗಿದೆ. ಪೋಸ್ಟರ್‌ನಲ್ಲಿ ಸಿಂಪಲ್ ಆಗಿ ಕಂಡರೂ ನೋಡುಗರಿಗೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Lightbox Media (@lightboxoffl)

    ದುಲ್ಕರ್ ಈ ಚಿತ್ರಕ್ಕೆ ಪವನ್ ಸಾದಿನೇನಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.

    ಅಂದಹಾಗೆ, ಮೃಣಾಲ್ ಠಾಕೂರ್ ಜೊತೆಗಿನ ‘ಸೀತಾರಾಮಂ’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಆ ನಂತರ ಕಲ್ಕಿ ಸಿನಿಮಾದಲ್ಲಿ ದುಲ್ಕರ್ ಗೆಸ್ಟ್ ರೋಲ್ ಮಾಡಿದ್ರೂ ನಟನ ಅಭಿನಯಕ್ಕೆ ಫ್ಯಾನ್ಸ್ ಜೈ ಎಂದಿದ್ದರು. ಈಗ ತೆಲುಗಿನ ‘ಆಕಾಶಂ ಲೋ ಒಕ ತಾರಾ’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ.

  • ಮಾನಸಿಕ ಹಿಂಸೆಯಿಂದ ನರಳುತ್ತಿದ್ದಾರಾ ‘ಸೀತಾ ರಾಮಂ’ ನಟ- ಕಣ್ಣೀರಿಟ್ಟ ದುಲ್ಕರ್ ಸಲ್ಮಾನ್

    ಮಾನಸಿಕ ಹಿಂಸೆಯಿಂದ ನರಳುತ್ತಿದ್ದಾರಾ ‘ಸೀತಾ ರಾಮಂ’ ನಟ- ಕಣ್ಣೀರಿಟ್ಟ ದುಲ್ಕರ್ ಸಲ್ಮಾನ್

    ‘ಸೀತಾ ರಾಮಂ’ (Seetha Ramam) ಸಿನಿಮಾದ ಸಕ್ಸಸ್ ನಂತರ ದುಲ್ಕರ್ ಸಲ್ಮಾನ್ ಸಿನಿಮಾ ಆಯ್ಕೆಯಲ್ಲಿ ಚ್ಯುಸಿಯಾಗಿದ್ದಾರೆ. ತಂದೆ ಮುಮ್ಮಟ್ಟಿ ಮಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ರು ಕೂಡ ದುಲ್ಕರ್ (Dulquer Salman) ಅವರು ತಮ್ಮ ನಟನೆ, ನಡೆ- ನುಡಿಯಿಂದ ಗೆದ್ದಿದ್ದಾರೆ. ಅಪಾರ ಅಭಿಮಾನಿಗಳನ್ನ ಹೊಂದಿರುವ ದುಲ್ಕರ್ ಸಲ್ಮಾನ್ ಅವರ ಈಗೀನ ನಡೆಯಿಂದ ಫ್ಯಾನ್ಸ್‌ಗೆ ಶಾಕ್ ಆಗಿದ್ದಾರೆ. ದುಲ್ಕರ್ ಸಲ್ಮಾನ್ ಅವರು ಅನಾರೋಗ್ಯ (Health Issue) ಸಮಸ್ಯೆಯಿಂದ ಬಳಲುತ್ತಿದ್ದಾರಾ.? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

    ದುಲ್ಕರ್, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಜೊತೆಗಿನ ‘ಸೀತಾ ರಾಮಂ’ ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಅದೇ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ದುಲ್ಕರ್ ಸಲ್ಮಾನ್ ಗಮನ ಸೆಳೆದರು. ಈಗ ಅವರು ಅನಾರೋಗ್ಯದ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸುಳಿವು ಕೊಟ್ಟ ‘ಬಿಗ್ ಬಾಸ್’ ಅನುಪಮಾ ಗೌಡ

    https://twitter.com/preethamtweets_/status/1675572060259749889?ref_src=twsrc%5Etfw%7Ctwcamp%5Etweetembed%7Ctwterm%5E1675572060259749889%7Ctwgr%5Ebefad362e52c85239c440f3cd25eadd7bbc425e0%7Ctwcon%5Es1_c10&ref_url=https%3A%2F%2Fwww.udayavani.com%2Fcinema%2Fbollywood-news%2Fi-havent-slept-in-a-while-dulquer-salmaans-now-deleted-post-leaves-fans-worried

    ಅಭಿಲಾಷ್ ಜೋಶಿ ನಿರ್ದೇಶನದ ‘ಕಿಂಗ್ ಆಫ್ ಕೋಥಾ’ ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ಇದರ ಮಧ್ಯೆಯೇ ನಟ ದುಲ್ಕರ್ ಅವರು, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿ, ಕಣ್ಣೀರಿಟ್ಟಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ವೀಡಿಯೋಗೆ ಪ್ರಶ್ನೆಗಳ ಸುರಿಮಳೆ ಬರುತ್ತಿದ್ದಂತೆ ನಟ ಈ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ನಟ ದುಲ್ಕರ್ ಅವರಿಗೆ ಆಗಿದ್ದೇನು ಎನ್ನುವ ಚಿಂತೆಯಲ್ಲಿ ಅಭಿಮಾನಿಗಳು ಇದ್ದಾರೆ.

    ಅವರಿಗೆ ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲವಂತೆ. ಇದಕ್ಕೆ ತಾವು ಅನುಭವಿಸುತ್ತಿರುವ ಮಾನಸಿಕ ಹಿಂಸೆಯೇ ಕಾರಣ ಎಂದು ನಟ ಹೇಳಿದ್ದಾರೆ. ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲ. ಸಂದರ್ಭಗಳು ಎಂದಿಗೂ ಒಂದೇ ರೀತಿ ಇರುವುದಿಲ್ಲ. ನಾನು ಮೊದಲ ಬಾರಿಗೆ ಈ ರೀತಿಯ ಅನುಭವವನ್ನು ಅನುಭವಿಸುತ್ತಿದ್ದೇನೆ. ಸಿಕ್ಕಾಪಟ್ಟೆ ಗೊಂದಲದಲ್ಲಿ ಇದ್ದೇನೆ.ಇದರಿಂದ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲಎಂದು ಮನದಾಳದ ನೋವು ತೆರೆದಿಟ್ಟಿದ್ದಾರೆ. ನಾನು ಇನ್ನೂ ಏನನ್ನೋ ಹೇಳಲು ಬಯಸುತ್ತೇನೆ. ಆದರೆ ಅದನ್ನು ಹೇಳಲು ಆಗುತ್ತಿಲ್ಲ. ನನ್ನ ಮನಸ್ಸಿನಲ್ಲಿ ಇರುವ ಈ ನೋವನ್ನು ಹೇಳುವುದೋ, ಬೇಡವೋ ತಿಳಿಯುತ್ತಿಲ್ಲ. ಆದರೆ ಈ ನೋವಿನಿಂದ ಹೊರಕ್ಕೆ ಬರಲಾರದ ಹಂತವನ್ನು ನಾನು ತಲುಪಿದ್ದೇನೆ ಎನ್ನಿಸುತ್ತಿದೆ. ನಾನು ಅದನ್ನು ಹೇಳಲಾರದೇ ತೊಳಲಾಡುತ್ತಿದ್ದೇನೆ ಎಂದು ನಟ ಕಣ್ಣೀರಾಗಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ನಟ ದುಲ್ಕರ್ ವೀಡಿಯೋ ಡಿಲೀಟ್ ಮಾಡಿರೋದು ಫ್ಯಾನ್ಸ್‌ಗೆ ಆತಂಕ ಮೂಡಿಸಿದೆ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರಾ ನಟ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

    ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

    ಹುಡುಗರ ಪಾಲಿನ ಇಷ್ಟದೇವತೆ ಸೀತೆ ಮೃಣಾಲ್ ಠಾಕೂರ್ (Mrunal Thakur) ಇದೀಗ ಕಡಲ ಕಿನಾರೆಯಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಮತ್ತೆ ಹಾಟ್ ಅವತಾರದಲ್ಲಿ ‘ಸೀತಾರಾಮಂ’ (Seetharamam) ಸುಂದರಿ ಕಾಣಿಸಿಕೊಂಡಿದ್ದಾರೆ.

    ‘ಸೀತಾರಾಮಂ’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್‌ಗೆ ಜೋಡಿಯಾಗಿ ನಟಿಸಿದ್ದ ಮೃಣಾಲ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರದ ಕಥೆ ಸೀತೆಯ ನಟನೆ ಎಲ್ಲವೂ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈ ಸಿನಿಮಾದ ಬಳಿಕ ಮೃಣಾಲ್ ಬಂಪರ್ ಆಫರ್ ಸಿಕ್ತು. ಇದೀಗ ಸಾಲು ಸಾಲು ಸಿನಿಮಾಗಳಿಗೆ ಮೃಣಾಲ್ ನಾಯಕಿಯಾಗಿದ್ದಾರೆ.

    ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಕಡಲ ಕಿನಾರೆಯಲ್ಲಿ ನಟಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಲೈಟ್ ಬಣ್ಣದ ಡ್ರೆಸ್ ಧರಿಸಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಕಳೆದ ಬಾರಿ ಮೃಣಾಲ್ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಇದೀಗ ಮತ್ತೆ ಬೋಲ್ಡ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್

     

    View this post on Instagram

     

    A post shared by Mrunal Thakur (@mrunalthakur)

    ಮೃಣಾಲ್ ವೆಕೇಷನ್ ಫೋಟೋ ವೈರಲ್ ಆಗ್ತಿದ್ದಂತೆ ದಯವಿಟ್ಟು ಈ ರೀತಿ ಡ್ರೆಸ್‌ನ ಧರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಸೀತೆಯಾಗಿ ನೋಡಿರೋ ನೆಟ್ಟಿಗರು ನಟಿಯ ಹಾಟ್ ಅವತಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  • ಮುಂಬೈನಲ್ಲಿ ಜಾಕ್ವಲಿನ್ ಜೊತೆ ಕುಣಿದ ಸುದೀಪ್ : ಕಿಚ್ಚನ ಆರ್ಭಟಕ್ಕೆ ಬಿಟೌನ್ ಫಿದಾ

    ಮುಂಬೈನಲ್ಲಿ ಜಾಕ್ವಲಿನ್ ಜೊತೆ ಕುಣಿದ ಸುದೀಪ್ : ಕಿಚ್ಚನ ಆರ್ಭಟಕ್ಕೆ ಬಿಟೌನ್ ಫಿದಾ

    ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕಾಗಿ ಕಿಚ್ಚ ಸುದೀಪ್ ಮತ್ತು ಜಾಕ್ವಲಿನ್ ಫರ್ನಾಂಡಿಸ್ ಮುಂಬೈಗೆ ತೆರೆಳಿದ್ದಾರೆ. ಮುಂಬೈನಲ್ಲಿ ವಿಶೇಷ ರೀತಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ರಾ ರಾ ರಕ್ಕಮ್ಮ ಹಾಡಿಗೆ ಸಹ ನೃತ್ಯ ಕಲಾವಿದರ ಜೊತೆ ಸುದೀಪ್ ಮತ್ತು ಜಾಕ್ವಲಿನ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಜೋಡಿ ವಿಶೇಷ ಕಾಸ್ಟ್ಯೂಮ್ ನಲ್ಲೂ ಮಿರ ಮಿರ ಮಿಂಚುತ್ತಿದ್ದರು. ಬಾಲಿವುಡ್ ನ ತಾರೆಯರು ಕೂಡ ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಕಿಚ್ಚನಿಗೆ ಸಾಥ್ ನೀಡಿದರು.

    ಸಿನಿಮಾ ರಿಲೀಸ್ ಗೂ ಮುನ್ನ ವಿಕ್ರಾಂತ್ ರೋಣ ಸಿನಿಮಾದ 3 ಡಿ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕೇವಲ ಮಾಧ್ಯಮದವರಿಗೆ ಮತ್ತು ಸಿಲಿಬ್ರಿಟಿಗಳಿಗೆ ಮಾತ್ರ ಟ್ರೈಲರ್ ತೋರಿಸಲಾಗಿದೆ. ಪ್ರತಿಯೊಬ್ಬರು ಟ್ರೈಲರ್ ಬಗ್ಗೆ ಹಾಡಿಹೊಗಳುತ್ತಿರುವ ಕಾರಣದಿಂದಾಗಿ ಅಭಿಮಾನಿಗಳಿಗೆ ಆ ಟ್ರೈಲರ್ ನೋಡುವ ಕಾತರ ಹೆಚ್ಚಾಗಿದೆ. ಅಲ್ಲದೇ, ಇಂದು ವಿಶೇಷವಾಗಿ ನಾಲ್ಕು ಸ್ಟಾರ್ ನಟರು ಆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

    ಇಂದು ಸಂಜೆ 5.02 ನಿಮಿಷಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಟ್ರೈಲರ್ ರಿಲೀಸ್ ಆಗುತ್ತಿದ್ದು, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡುತ್ತಿದ್ದಾರೆ. ನಿನ್ನೆ ಕನ್ನಡದಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಮಾಡಿದ್ದರಿಂದ, ಬಹುಶಃ ಅದನ್ನು ಅಷ್ಟಕ್ಕೆ ಸೀಮಿತಗೊಳಿಸುತ್ತಾರಾ? ಅಥವಾ ಸಂಜೆಯೊಳಗೆ ಸ್ಟಾರ್ ನಟರೊಬ್ಬರ ಹೆಸರನ್ನು ಘೋಷಿಸುತ್ತಾರೆ ಎನ್ನುವುದು ಸಸ್ಪನ್ಸ್.

    ಅಭಿಮಾನಿಗಳ ಉಡಿಗೆ ಟ್ರೈಲರ್ ಹಾಕಿ ಇತ್ತ ಸಿನಿಮಾದ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸಕ್ಕೆ ಹೊರಟಿದ್ದಾರೆ ಸುದೀಪ್ ಮತ್ತು ಟೀಮ್. ಕನ್ನಡದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದರಿಂದ, ಬೇರೆ ನಾಲ್ಕು ಭಾಷೆಯ ಸಿನಿಮಾಗಾಗಿ ಅವರು ಕೊಚ್ಚಿ, ಹೈದರಾಬಾದ್, ಮುಂಬೈ, ಚೆನ್ನೈ ಸುತ್ತಲಿದ್ದಾರೆ. ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಜೂ.24 ರಂದು ಚೆನ್ನೈ ಮತ್ತು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಜೂ.25 ರಂದು ಹೈದಾರಾಬಾದ್ ನಲ್ಲಿ ಇರಲಿದೆ ಕಿಚ್ಚ ಅಂಡ್ ಟೀಮ್.

    Live Tv

  • ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ 3 ಡಿ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕೇವಲ ಮಾಧ್ಯಮದವರಿಗೆ ಮತ್ತು ಸಿಲಿಬ್ರಿಟಿಗಳಿಗೆ ಮಾತ್ರ ಟ್ರೈಲರ್ ತೋರಿಸಲಾಗಿದೆ. ಪ್ರತಿಯೊಬ್ಬರು ಟ್ರೈಲರ್ ಬಗ್ಗೆ ಹಾಡಿಹೊಗಳುತ್ತಿರುವ ಕಾರಣದಿಂದಾಗಿ ಅಭಿಮಾನಿಗಳಿಗೆ ಆ ಟ್ರೈಲರ್ ನೋಡುವ ಕಾತರ ಹೆಚ್ಚಾಗಿದೆ. ಅಲ್ಲದೇ, ಇಂದು ವಿಶೇಷವಾಗಿ ನಾಲ್ಕು ಸ್ಟಾರ್ ನಟರು ಆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

    ಇಂದು ಸಂಜೆ 5.02 ನಿಮಿಷಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಟ್ರೈಲರ್ ರಿಲೀಸ್ ಆಗುತ್ತಿದ್ದು, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡುತ್ತಿದ್ದಾರೆ. ನಿನ್ನೆ ಕನ್ನಡದಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಮಾಡಿದ್ದರಿಂದ, ಬಹುಶಃ ಅದನ್ನು ಅಷ್ಟಕ್ಕೆ ಸೀಮಿತಗೊಳಿಸುತ್ತಾರಾ? ಅಥವಾ ಸಂಜೆಯೊಳಗೆ ಸ್ಟಾರ್ ನಟರೊಬ್ಬರ ಹೆಸರನ್ನು ಘೋಷಿಸುತ್ತಾರೆ ಎನ್ನುವುದು ಸಸ್ಪನ್ಸ್. ಇದನ್ನೂ ಓದಿ:ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

    ಅಭಿಮಾನಿಗಳ ಉಡಿಗೆ ಟ್ರೈಲರ್ ಹಾಕಿ ಇತ್ತ ಸಿನಿಮಾದ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸಕ್ಕೆ ಹೊರಟಿದ್ದಾರೆ ಸುದೀಪ್ ಮತ್ತು ಟೀಮ್. ಕನ್ನಡದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದರಿಂದ, ಬೇರೆ ನಾಲ್ಕು ಭಾಷೆಯ ಸಿನಿಮಾಗಾಗಿ ಅವರು ಕೊಚ್ಚಿ, ಹೈದರಾಬಾದ್, ಮುಂಬೈ, ಚೆನ್ನೈ ಸುತ್ತಲಿದ್ದಾರೆ. ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಜೂ.24 ರಂದು ಚೆನ್ನೈ ಮತ್ತು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಜೂ.25 ರಂದು ಹೈದಾರಾಬಾದ್ ನಲ್ಲಿ ಇರಲಿದೆ ಕಿಚ್ಚ ಅಂಡ್ ಟೀಮ್.

    Live Tv

  • ಮಲಯಾಳಂ ಸ್ಟಾರ್ ನಟ ದುಲ್ಕರ್ ಗೆ ನಿಷೇಧದ ಬೆದರಿಕೆ

    ಮಲಯಾಳಂ ಸ್ಟಾರ್ ನಟ ದುಲ್ಕರ್ ಗೆ ನಿಷೇಧದ ಬೆದರಿಕೆ

    ಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಚಿತ್ರಕ್ಕೆ ನಿಷೇಧದ ಆತಂಕ ಎದುರಾಗಿದೆ. ಅವರ ಅತೀ ನಿರೀಕ್ಷಿತ ಸಿನಿಮಾ ‘ಸೆಲ್ಯೂಟ್’ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಈ ಸಿನಿಮಾವನ್ನು ಥಿಯೇಟರ್ ಗೆ ತರದೇ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಥಿಯೇಟರ್ ಬಾರದಂತೆ ನಿಷೇಧ ಹೇರುವುದಾಗಿ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ ಹೇಳಿದೆ.

    ಈ ಹಿಂದೆ ‘ಸೆಲ್ಯೂಟ್’ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದೀಗ ನೇರವಾಗಿಯೇ ಓಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಕೇರಳ ಚಿತ್ರ ಪ್ರದರ್ಶಕರ ಒಕ್ಕೂಟ ಚಿತ್ರತಂಡದ ವಿರುದ್ಧ ಗರಂ ಆಗಿದೆ. ಇದನ್ನೂ ಓದಿ : ಕೋವಿಡ್ ನಂತರ ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಖ್ಯಾತ ನಟಿ ಶ್ರುತಿ ಹಾಸನ್

    “ಸೆಲ್ಯೂಟ್ ಸಿನಿಮಾ ನಮ್ಮ ಜತೆಗಿನ ಒಪ್ಪಂದಂತೆಯೇ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಬೇಕು. ದುಲ್ಕರ್ ಸಲ್ಮಾನ್ ಮತ್ತು ನಿರ್ಮಾಣ ಸಂಸ್ಥೆಯು ನಿಯಮ ಪಾಲಿಸದೇ ಇದ್ದರೆ, ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ” ಎಂದು ನೇರವಾಗಿಯೇ ನಿಷೇಧದ ಮಾತು ಹೇಳಿದೆ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ. ಇದನ್ನೂ ಓದಿ : ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಮಾಧ್ಯಮಗಳೊಂದಿಗೆ ಮಾತನಾಡಿರುವ ಒಕ್ಕೂಟದ ಪ್ರತಿನಿಧಿ ಕೆ.ವಿಜಯ ಕುಮಾರ್, “ಥಿಯೇಟರ್ ನಲ್ಲಿ ರಿಲೀಸ್ ಮಾಡುವುದಾಗಿ ಅವರೇ ಸಹಿ ಮಾಡಿಕೊಟ್ಟ ಒಪ್ಪಂದದ ಪತ್ರವಿದೆ. ಈಗ ಅದಕ್ಕೆ ಅವರು ಗೌರವ ಕೊಡುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ನಿಷೇಧದ ಮಾರ್ಗವನ್ನೇ ಹಿಡಿಯಬೇಕಾಗಿದೆ’ ಎಂದಿದ್ದಾರೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಈ ಕುರಿತು ಚಿತ್ರತಂಡವು ಕೂಡ ಪ್ರತಿಕ್ರಿಯಿಸಿದ್ದು, ‘ಅದ್ಧೂರಿಯಾಗಿ ಮೂಡಿ ಬಂದಿರುವ ಭಾರೀ ಬಜೆಟ್ ಸಿನಿಮಾವಿದು. ಕೋವಿಡ್ ಕಾರಣದಿಂದಾಗಿ ಅಂದುಕೊಂಡ ದಿನಾಂಕಗಳಂದು ಬಿಡುಗಡೆ ಮಾಡಲಿಲ್ಲ. ಇಂದಿಗೂ ಪರಿಸ್ಥಿತಿ ಚೆನ್ನಾಗಿಲ್ಲ. ಓಟಿಟಿಯಲ್ಲಿ ಬಿಡುಗಡೆ ಮಾಡುವುದು ಅನಿವಾರ್ಯವಾಗಿದೆ” ಎಂದಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದ್ದು, ರೋಶನ್ ಆಂಡ್ರ್ಯೂಸ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಸಿನಿಮಾ ಎಲ್ಲಿ ಬಿಡುಗಡೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

  • ರಾಕಿ ಭಾಯ್ ಭೇಟಿಯಾದ ಮಲಯಾಳಂ ಸ್ಟಾರ್ ನಟ

    ರಾಕಿ ಭಾಯ್ ಭೇಟಿಯಾದ ಮಲಯಾಳಂ ಸ್ಟಾರ್ ನಟ

    ಮೈಸೂರು: ರಾಕಿಂಗ್ ಸ್ಟಾರ್ ಯಶ್ ಈಗ ಬರೀ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ನ್ಯಾಷನಲ್ ಲೆವೆಲ್ ಮಾಸ್ಟರ್ ಪೀಸ್ ಆಗಿ ಹೊರಹೊಮ್ಮಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ವಿವಿಧ ಭಾಷೆಗಳಿಂದ ಹೆಚ್ಚು ಹೆಚ್ಚು ಆಫರ್ ಗಳು ಬರುತ್ತಿವೆ. ಅದರಂತೆ ಇದೀಗ ವಿಶೇಷ ಅತಿಥಿಯೊಬ್ಬರು ರಾಕಿಂಗ್ ಸ್ಟಾರ್ ಯಶ್‍ರನ್ನು ಭೇಟಿ ಮಾಡಿದ್ದಾರೆ.

    ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರನ್ನು ಯಶ್ ಭೇಟಿ ಮಾಡಿದ್ದಾರೆ. ಈ ಇಬ್ಬರು ನಟರ ಭೇಟಿ ಸ್ಯಾಂಡಲ್‍ವುಡ್‍ನಲ್ಲಿ ಅಚ್ಚರಿ ಮೂಡಿಸಿದ್ದು, ಯಾಕೆ ಭೇಟಿ ಮಾಡಿದರು? ಏನಿದರ ಉದ್ದೇಶ? ಈ ಇಬ್ಬರು ನಟರ ಭೇಟಿಯ ಮರ್ಮವೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    ಮೈಸೂರಿನಲ್ಲೇ ಯಶ್ ಮತ್ತು ಮಾಲಿವುಡ್ ಯೂತ್ ಐಕಾನ್ ದುಲ್ಕರ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇಬ್ಬರೂ ಮೈಸೂರಿನ ರಾಡಿಸನ್ ಬ್ಲೂ ಹೊಟೇಲ್‍ನಲ್ಲಿ ತಂಗಿದ್ದಾರೆ. ಇಂದು ಬೆಳಗ್ಗೆ ಜಿಮ್ ಮಾಡುವ ವೇಳೆ ಇಬ್ಬರೂ ಮುಖಾಮುಖಿಯಾಗಿದ್ದು, ಇದೇ ಸಂದರ್ಭದಲ್ಲಿ ಸಿನಿಮಾಗಳ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ. ಈ ವೇಳೆ ಪಾನಿಪೂರಿ ಕಿಟ್ಟಿ ಸಹ ನಟರಿಗೆ ಸಾಥ್ ನೀಡಿದ್ದಾರೆ. ಈ ಫೋಟೋಗಳನ್ನು ದುಲ್ಕರ್ ಹಾಗೂ ಯಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    https://www.instagram.com/p/B8LG2rXJmXj/

    ಪೋಸ್ಟ್‌ನಲ್ಲಿ ಏನಿದೆ?
    ಇಂದು ನಾನು ನನ್ನ ಊರಿನಲ್ಲಿ ದುಲ್ಕರ್ ಅವರನ್ನು ಭೇಟಿ ಮಾಡಿದೆ. ಬುದ್ಧಿವಂತ ನಟ+ಮಾನವೀಯತೆ ಸೇರಿದರೆ ದುಲ್ಕರ್! ಅವರ ಚಲನಚಿತ್ರಗಳ ಆಯ್ಕೆಯನ್ನು ನಾನು ಮೆಚ್ಚುತ್ತೇನೆ. ನಮ್ಮ ಪೀಳಿಗೆ ಕಂಡ ಅತ್ಯುತ್ತಮ ನಟರಲ್ಲಿ ದುಲ್ಕರ್ ಕೂಡ ಒಬ್ಬರು. ನೀವು ಕುರುಪ್ ಪಾತ್ರವನ್ನು ಉತ್ತಮವಾಗಿ ನಿಭಾಯಿಸುತ್ತೀರ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಮುಂದಿನ ಸಲ ನೀವು ನನ್ನ ಊರಿಗೆ ಬಂದಾಗ ಸ್ಥಳೀಯ ಔತಣ ನಿಮಗಾಗಿ ಕಾಯುತ್ತಿರುತ್ತೆ. ಅದು ಹಬ್ಬದ ರೀತಿ ಇರುತ್ತೆ ಎಂದು ಬರೆದು, ತಾವು ಹಾಗೂ ದುಲ್ಕರ್ ಇರುವ ಫೋಟೋವನ್ನು ಯಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    https://www.instagram.com/p/B8LXqKtn5Zk/

    ಇತ್ತ ದುಲ್ಕರ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಾಕಿ ಭಾಯ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ, ಯಶ್ ಅವರನ್ನು ಭೇಟಿ ಮಾಡಿದ್ದು ಖುಷಿಯಾಯ್ತು. ನಿಮ್ಮ ವ್ಯಕ್ತಿತ್ವ ಮತ್ತು ಆತಿಥ್ಯ ನನ್ನ ಮನ ಮುಟ್ಟಿದೆ. ನಮ್ಮ ಮುಂದಿನ ಶೆಡ್ಯೂಲ್‍ನಲ್ಲಿ ಮತ್ತೆ ಭೇಟಿ ಆಗೋಣ. ರಾಕಿ ಭಾಯ್ ಅವರ ಕೆಜಿಎಫ್-2 ಸಿನಿಮಾಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಯಶ್ ಕೆಜಿಎಫ್-2 ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್ ಫೈನಲ್ ಹಂತ ತಲುಪಿದೆ ಎನ್ನಲಾಗಿದೆ. ಇತ್ತ ದುಲ್ಕರ್ ಸಲ್ಮಾನ್ ನಾಲ್ಕು ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆಯೇ ಇಬ್ಬರು ಸ್ಟಾರ್ ನಟರು ಭೇಟಿ ಮಾಡಿ ಸಿನಿಮಾಗಳ ಕುರಿತು ಪರಸ್ಪರ ಮಾತನಾಡಿಕೊಂಡಿದ್ದಾರೆ. ಯಶ್ ಅವರಿಗೆ ಮಾಲಿವುಡ್‍ನಲ್ಲಿಯೂ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದು, ದುಲ್ಕರ್, ರಾಕಿ ಭಾಯ್ ಭೇಟಿ ಮಾಡಿರುವುದು ಮಲಯಾಳಂ ಅಭಿಮಾನಿಗಳಲ್ಲಿಯೂ ಸಂತಸವನ್ನುಂಟು ಮಾಡಿದೆ.