Tag: Dulquer Salmaan

  • ಐಷಾರಾಮಿ ವಾಹನ ಕಳ್ಳಸಾಗಣೆ ಕೇಸ್; ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ

    ಐಷಾರಾಮಿ ವಾಹನ ಕಳ್ಳಸಾಗಣೆ ಕೇಸ್; ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ

    ತಿರುವನಂತಪುರಂ: ಭೂತಾನ್ ವಾಹನಗಳ ಅಕ್ರಮ ಕಳ್ಳಸಾಗಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ (Mammootty), ದುಲ್ಕರ್ ಸಲ್ಮಾನ್ (Dulquer Salmaan), ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಚೆನ್ನೈನಲ್ಲಿರುವ (Chennai) ಮಮ್ಮುಟ್ಟಿ ಅವರ ಚಲನಚಿತ್ರ ನಿರ್ಮಾಣ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬೀಗ| 2 ಸಾವಿರ ಉದ್ಯೋಗಿಗಳಿಗೆ ಸಮಸ್ಯೆ – ಇಂದು ಮಧ್ಯಾಹ್ನ ತುರ್ತು ಅರ್ಜಿ ವಿಚಾರಣೆ

    ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿರುವ ತಮಿಳು, ಮಲಯಾಳಂ ನಟರು ಹಾಗೂ ವಾಹನ ಮಾಲೀಕರು ಸೇರಿ 17 ಸ್ಥಳಗಳಲ್ಲಿ ದಾಳಿ ನಡೆಸಿದೆ.

    ಫೆಮಾ, 1999ರ ಅಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಇಂಡೋ-ಭೂತಾನ್/ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್ ಮತ್ತು ಮಸೆರಾಟಿಯಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಸಿಂಡಿಕೇಟ್ ಅನ್ನು ಬಹಿರಂಗಪಡಿಸುವ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಕಲಿ ದಾಖಲೆಗಳನ್ನು ಬಳಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳ ವಾಹನ ನೋಂದಣಿ ಪಡೆದುಕೊಂಡು ಅಕ್ರಮವಾಗಿ ಸಿನಿಮಾ ನಟರಿಗೆ, ಉದ್ಯಮಿಗಳಿಗೆ ಕಾರು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.

  • ಐಷಾರಾಮಿ ಕಾರುಗಳ ತೆರಿಗೆ ವಂಚನೆ ಆರೋಪ; ನಟ ದುಲ್ಕರ್ ಸಲ್ಮಾನ್‌ಗೆ ಸಮನ್ಸ್ ಜಾರಿ

    ಐಷಾರಾಮಿ ಕಾರುಗಳ ತೆರಿಗೆ ವಂಚನೆ ಆರೋಪ; ನಟ ದುಲ್ಕರ್ ಸಲ್ಮಾನ್‌ಗೆ ಸಮನ್ಸ್ ಜಾರಿ

    ಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ (Dulquer Salmaan) ನಿವಾಸದ ಮೇಲೆ ಕಸ್ಟಮ್ ಅಧಿಕಾರಿಗಳು ದಾಳಿ ಮಾಡಿ 2 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ದಾಖಲೆಗಳನ್ನು ಹಾಜರುಪಡಿಸುವಂತೆ ಸಮನ್ಸ್ ನೀಡಿದ್ದಾರೆ.

    ದುಲ್ಕರ್ ಸಲ್ಮಾನ್ ಅವರು ಕಾರ್‌ಗಳ ಕ್ರೇಜ್ ಹೊಂದಿದ್ದ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಹಲವಾರು ವಿದೇಶಿ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ವಿದೇಶಗಳಿಂದ ಲಿಮಿಟೆಡ್ ಎಡಿಷನ್‌ನ ಕಾರುಗಳನ್ನು ಖರೀದಿಸಿದ್ದಾರೆ.

    ಮಂಗಳವಾರ ಡಿಕ್ಯೂ ಮನೆಗೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಎರಡು ಕಾರುಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

    ಕೇರಳದ ಕೊಚ್ಚಿಯ ತೇವರದಲ್ಲಿರುವ ನಟ ಪೃಥ್ವಿರಾಜ್ ಸುಕುಮಾರನ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲ ಎನ್ನಲಾಗಿದೆ. ನಟರು ಮಾತ್ರವಲ್ಲದೆ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಗೆ `ನುಮ್ಖೂರ್’ ಎಂದು ಹೆಸರಿಡಲಾಗಿದೆ. ವಾಹನಗಳನ್ನು ಮಲಯಾಳಂನಲ್ಲಿ ನುಮ್ಖೂರ್ ಎನ್ನಲಾಗುತ್ತದೆ.

  • ದುಲ್ಕರ್ ಸಲ್ಮಾನ್ ಹೊಸ ಚಿತ್ರಕ್ಕೆ ಚಾಲನೆ : ನಟ ನಾನಿ ಸಾಥ್

    ದುಲ್ಕರ್ ಸಲ್ಮಾನ್ ಹೊಸ ಚಿತ್ರಕ್ಕೆ ಚಾಲನೆ : ನಟ ನಾನಿ ಸಾಥ್

    ಲಯಾಳಂನ ಖ್ಯಾತ ನಟ, ಸ್ಟಾರ್ ಇಂಡಿಯಾ ಸ್ಟಾರ್, ಯೂತ್ ಐಕಾನ್ ದುಲ್ಕರ್ ಸಲ್ಮಾನ್ (Dulquer Salmaan) ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ದುಲ್ಕರ್ ಸಲ್ಮಾನ್ ಸಿನಿಮಾಗಳೆಂದರೆ ಕುತೂಹಲ ಜಾಸ್ತಿನೆ ಇರತ್ತೆ. ಯಾಕೆಂದರೆ ದುಲ್ಕರ್ ಸಿನಿಮಾ ಆಯ್ಕೆಗಳೇ ವಿಭಿನ್ನವಾಗಿರುತ್ತೆ. ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ. ಹಾಗಾಗಿ ದುಲ್ಕರ್ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುತ್ತೆ. ಇದೀಗ ಮತ್ತೊಂದು ಹೃದಯಸ್ಪರ್ಶಿ ಲವ್ ಸ್ಟೋರಿ ಮೂಲಕ ಸಿನಿ ರಸಿಕರ ಮುಂದೆ ಬರಲು ರೆಡಿಯಾಗಿದ್ದಾರೆ.

    ದುಲ್ಕರ್ ನಟನೆಯ 41ನೇ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. DQ41 ಚಿತ್ರಕ್ಕೆ ತೆಲುಗಿನ ಖ್ಯಾತ ನಟ ನ್ಯಾಚುರಲ್ ಸ್ಟಾರ್ ನಾನಿ ದುಲ್ಕರ್ ಹೊಸ ಸಿನಿಮಾಗೆ ಕ್ಲಾಪ್ ಮಾಡುವ ಮೂಲಕ ಸಿನಿಮಾತಂಡಕ್ಕೆ ಶುಭಹಾರೈಸಿದರು. ಮುಹೂರ್ತ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಅಂದಹಾಗೆ ದುಲ್ಕರ್ ಹೊಸ ಸಿನಿಮಾಗೆ ರವಿ ನೆಲಕುಡಿತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ರವಿ ಅವರಿಗೆ ಇದು ಮೊದಲ ಸಿನಿಮಾ. ಯುವ ನಿರ್ದೇಶಕ ಜೊತೆ ದುಲ್ಕರ್ 41ನೇ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಹೃದಯಸ್ಪರ್ಶಿ ಪ್ರೇಮಕಥೆಯಾಗಿದೆ. ಸೀತಾ ರಾಮಂ ಸಿನಿಮಾ ಬಳಿಕ ದುಲ್ಕರ್ ಮತ್ತೊಂದು ಲವ್ ಸ್ಟೋರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

    ದುಲ್ಕರ್ 41ನೇ ಸಿನಿಮಾ ಎಸ್ಎಲ್ವಿ ಬ್ಯಾನರ್ ನಲ್ಲಿ ಮೂಡಿಬರುತ್ತಿದೆ. ನಟ ದುಲ್ಕರ್ ಸಲ್ಮಾನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗು ಸಿನಿಮಾರಂಗದಲ್ಲಿ ದುಲ್ಕರ್ ಮಿಂಚುತ್ತಿದ್ದಾರೆ. ದುಲ್ಕರ್ ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ. ಹೀಗುರುವಾಗಿ ಚೊಚ್ಚಲ ನಿರ್ದೇಶಕರಿಗೆ ತನ್ನ ಕಾಲ್ ಶೀಟ್ ನೀಡಿದ್ದಾರೆ ಎಂದರೆ ಕಥೆ ಅದ್ಭುತವಾಗಿರಲಿದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

    ಸ್ಟಾರ್ ಕಾಸ್ಟ್ ವಿಚಾರದಲ್ಲಿ ಮಾತ್ರದಲ್ಲದೆ ತಂತ್ರಜ್ಞರ ವಿಚಾರದಲ್ಲೂ ದುಲ್ಕರ್ ಸಿನಿಮಾ ಭಾರಿ ನಿರೀಕ್ಷೆಮೂಡಿಸಿದೆ. ಚಿತ್ರಕ್ಕೆ 2 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ತೆಲುಗು, ಮಲಯಾಳಂ ಸೇರಿದಂತೆ ಕನ್ನಡ ತಮಿಳು ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ದುಲ್ಕರ್ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ಸದ್ಯದಲ್ಲೇ ಚಿತ್ರದಿಂದ ಮತ್ತಷ್ಟು ಅಪ್ ಡೇಟ್ ಹೊರಬೀಳಲಿದೆ.

  • ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಮಾಲಿವುಡ್‌ ಚಿತ್ರದ ಬಗ್ಗೆ ಅಪ್‌ಡೇಟ್‌ ಕೊಟ್ಟ ದುಲ್ಕರ್‌ ಸಲ್ಮಾನ್

    ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಮಾಲಿವುಡ್‌ ಚಿತ್ರದ ಬಗ್ಗೆ ಅಪ್‌ಡೇಟ್‌ ಕೊಟ್ಟ ದುಲ್ಕರ್‌ ಸಲ್ಮಾನ್

    ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರು ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ‘ಕಿಂಗ್ ಆಫ್ ಕೋಥಾ’ ಚಿತ್ರದ ಮೂಲಕ ಮಾಲಿವುಡ್ ಚಿತ್ರಕ್ಕೆ ನಟ ಮರಳಿದ್ದಾರೆ. ಇದನ್ನೂ ಓದಿ:ಮಾಸ್‌ ಅವತಾರ ತಾಳಿದ ಸಲ್ಮಾನ್‌ ಖಾನ್‌- ‌’ಸಿಕಂದರ್‌’ ಟೀಸರ್‌ ಮೆಚ್ಚಿದ ಫ್ಯಾನ್ಸ್

    ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸೋ ಅದ್ಭುತ ಕಲಾವಿದ. ಹಾಗಾಗಿ ಬಹುಭಾಷೆಗಳಲ್ಲಿ ದುಲ್ಕರ್‌ಗೆ ಬೇಡಿಕೆಯಿದೆ. ನಹಾಸ್ ಹಿದಾಯತ್ ಜೊತೆ ಹೊಸ ಮಲಯಾಳಂ ಸಿನಿಮಾಗಾಗಿ ದುಲ್ಕರ್ ಕೈಜೋಡಿಸಿದ್ದಾರೆ. ನಟನ 40ನೇ ಚಿತ್ರ ಇದಾಗಿದೆ. ಮಾರ್ಚ್ 1ರ ಸಂಜೆ 5 ಗಂಟೆಗೆ ಸಿನಿಮಾದ ಟೈಟಲ್ ಅನಾವರಣ ಆಗಲಿದೆ.

     

    View this post on Instagram

     

    A post shared by Nahas Hidhayath (@nahas_hidhayath)


    ಇನ್ನೂ ‘ಕಿಂಗ್ ಆಫ್ ಕೋಥಾ’ ಚಿತ್ರವು 2023ರಲ್ಲಿ ತೆರೆಕಂಡಿತ್ತು. ಆ ನಂತರ ತೆಲುಗು, ತಮಿಳಿನಲ್ಲಿ ನಟ ಬ್ಯುಸಿಯಾದರು. ಮಲಯಾಳಂ ನಟನಾಗಿರೋ ದುಲ್ಕರ್ ಇದೀಗ ಮತ್ತೆ ಮಾಲಿವುಡ್ ಚಿತ್ರ ಒಪ್ಪಿಕೊಂಡಿದ್ದಾರೆ.

    ಕಳೆದ ವರ್ಷ ಅಂತ್ಯದಲ್ಲಿ ತೆರೆಕಂಡ ‘ಲಕ್ಕಿ ಭಾಸ್ಕರ್’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ ತೆಲುಗು, ತಮಿಳಿನಲ್ಲಿ ನಟನಿಗೆ ಕೈತುಂಬಾ ಸಿನಿಮಾಗಳಿವೆ.

  • ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

    ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

    ‘ಸೀತಾರಾಮಂ’ (Seetha Ramam) ಸಿನಿಮಾ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಜೋಡಿ ದುಲ್ಕರ್ ಸಲ್ಮಾನ್ (Dulquer Salmaan) ಮತ್ತು ಮೃಣಾಲ್ ಠಾಕೂರ್ ಈಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2 ವರ್ಷಗಳ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಸೀತಾ ಮತ್ತು ರಾಮ್ ಕಾಣಿಸಿಕೊಳ್ಳಲಿದ್ದಾರೆ.

    2022ರಲ್ಲಿ ಸೀತಾರಾಮಂ ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಸೀತಾ ಮತ್ತು ರಾಮ್ ಲವ್ ಸ್ಟೋರಿ ನೋಡಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬಂದಿತ್ತು. ಈ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಎಂದು ಅನೇಕರು ಆಸೆಪಟ್ಟಿದ್ದರು. ಇದೀಗ ಅದೇ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಮೃಣಾಲ್ (Mrunal Thakur) ನಟಿಸುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು. ಆದರೆ ಈಗ ದುಲ್ಕರ್ ಸಲ್ಮಾನ್ ಕೂಡ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಅತಿಥಿ ಪಾತ್ರವಾಗಿದ್ರೂ ಚಿತ್ರದಲ್ಲಿ ತಿರುವು ಕೊಡಲಿರುವ ಪಾತ್ರಕ್ಕೆ ಜೀವತುಂಬಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

    ಪ್ರಭಾಸ್ (Prabhas) ಸಿನಿಮಾದಲ್ಲಿ ಜೊತೆಯಾಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಯಾವದಕ್ಕೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಎದುರು ನೋಡ್ತಿದ್ದಾರೆ.

    ಅಂದಹಾಗೆ, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಇದೇ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.

  • ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಚಿತ್ರದಿಂದ ದುಲ್ಕರ್ ಸಲ್ಮಾನ್ ಔಟ್

    ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಚಿತ್ರದಿಂದ ದುಲ್ಕರ್ ಸಲ್ಮಾನ್ ಔಟ್

    ಸ್ಟಾರ್ ಡೈರೆಕ್ಟರ್ ಮಣಿರತ್ನಂ, ಕಮಲ್ ಹಾಸನ್ (Kamal Haasan) ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಆ ಚಿತ್ರಕ್ಕೆ ‘ಥಗ್ ಲೈಫ್’ (Thug Life) ಎಂದು ಟೈಟಲ್ ಇಡಲಾಗಿದೆ. 100 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿರುವ ಚಿತ್ರದಿಂದ ‘ಸೀತಾರಾಮಂ’ (Seetha Ramam) ಹೀರೋ ದುಲ್ಕರ್ ಸಲ್ಮಾನ್ ಹೊರನಡೆದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದು ನಟನ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

    ಕೆಲ ವರ್ಷಗಳ ಹಿಂದೆ ‘ನಾಯಕನ್’ ಎಂಬ ಸಿನಿಮಾದಲ್ಲಿ ಮಣಿರತ್ನಂ, ಕಮಲ್ ಹಾಸನ್ ಜೊತೆಯಾಗಿ ಕೆಲಸ ಮಾಡಿದ್ದರು. ಆ ನಂತರ ಈ ಕಾಂಬಿನೇಷನ್ ಒಟ್ಟಾಗಿ ಕೆಲಸ ಮಾಡಿರಲಿಲ್ಲ. ಈಗ ‘ಥಗ್ ಲೈಫ್’ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಇದನ್ನೂ ಓದಿ:ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌

    ಕಮಲ್ ಹಾಸನ್, ತ್ರಿಷಾ ಕೃಷ್ಣನ್, ಜಯಂ ರವಿ, ಅಭಿರಾಮಿ ಸೇರಿದಂತೆ ಅನೇಕರು ಚಿತ್ರತಂಡದಲ್ಲಿದ್ದಾರೆ. ಈಗ ಕಮಲ್ ಚಿತ್ರವನ್ನು ದುಲ್ಕರ್ ಸಲ್ಮಾನ್ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ‘ಕಿಂಗ್ ಆಫ್ ಕೋಥಾ’ ಚಿತ್ರದಿಂದ ನಂತರ ದುಲ್ಕರ್ (Dulquer Salman) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಡೇಟ್ಸ್ ಹೊಂದಾಣಿಕೆಯಾಗದೇ ‘ಥಗ್ ಲೈಫ್’ ಚಿತ್ರ ಕೈ ಬಿಟ್ರಾ? ತಂಡದ ಜೊತೆ ಕಿರಿಕ್ ಆಗಿದ್ಯಾ? ಅಸಲಿತ್ತು ಎನು ಎಂಬುದು ತಿಳಿದು ಬಂದಿಲ್ಲ. ಚಿತ್ರತಂಡ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

    ಅಂದಹಾಗೆ, ಸೂರ್ಯ ನಟನೆಯ ಹೊಸ ಸಿನಿಮಾ, ವಿಜಯ್ ವರ್ಮಾ- ನಜ್ರಿಯಾ ಜೊತೆಗಿನ ಚಿತ್ರ, ಟಾಲಿವುಡ್ ಸ್ಟಾರ್ ಬಾಲಯ್ಯ (Balayya) ಜೊತೆ ಹೊಸ ಪ್ರಾಜೆಕ್ಟ್ ಸೇರಿದಂತೆ ಹಲವು ಚಿತ್ರಗಳು ದುಲ್ಕರ್ ಕೈಯಲ್ಲಿದೆ.

  • ‘ಟೋಬಿ’ ಚಿತ್ರಕ್ಕೆ ಸಾಥ್ ನೀಡಿದ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್

    ‘ಟೋಬಿ’ ಚಿತ್ರಕ್ಕೆ ಸಾಥ್ ನೀಡಿದ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್

    ನ್ನಡದ ಹೆಸರಾಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಅವರ ಟೋಬಿ (Toby) ಸಿನಿಮಾ ನಾಳೆಯಿಂದ ಕೇರಳದಾದ್ಯಂತ ಮಲಯಾಳಂನಲ್ಲಿ (Malayalam) ಬಿಡುಗಡೆ ಆಗುತ್ತಿದೆ. ಈ ಚಿತ್ರದ ವಿತರಣೆಯನ್ನು ಮಲಯಾಳಂನ ಖ್ಯಾತ ಸ್ಟಾರ್ ನಟ ದುಲ್ಕರ್ ಸಲ್ಮಾನ್ (Dulquer Salmaan) ಮಾಡುತ್ತಿದ್ದಾರೆ. ಮಾಲಿವುಡ್ ನಲ್ಲಿ ಬಿಡುಗಡೆ ಆಗುತ್ತಿರುವ ಈ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ದುಲ್ಕರ್ ಅವರ ಪ್ರೊಡಕ್ಷನ್ ಹೌಸ್ ನಿರ್ವಹಿಸುತ್ತಿದೆ.

    ಕನ್ನಡದಲ್ಲಿ ಟೋಬಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ ಬಿ ಶೆಟ್ಟಿ ನಟನೆಯ ಬಗ್ಗೆ ಪ್ರೇಕ್ಷಕರು ಒಪ್ಪಿಕೊಂಡಿದ್ದರೂ, ಒಟ್ಟಾರೆಯಾಗಿ ಸಿನಿಮಾವನ್ನು ನಿರೀಕ್ಷೆಯ ಮಟ್ಟಕ್ಕೆ ಒಪ್ಪಿಕೊಂಡಿರಲಿಲ್ಲ. ಮಲಯಾಳಂ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಇದನ್ನೂ ಓದಿ:ವೈಟ್‌ ಡ್ರೆಸ್‌ನಲ್ಲಿ ಅಪ್ಸರೆಯಂತೆ ಮಿಂಚಿದ ‘ಕಾಂತಾರ’ ಬ್ಯೂಟಿ

    ರಾಜ್ ಬಿ ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮಲಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ, ರಾಜ್ ಬಿ ಶೆಟ್ಟಿ ಅವರು ಮಲಯಾಳಂ ಚಿತ್ರೋದ್ಯಮದಲ್ಲೂ ಹಲವಾರು ಚಿತ್ರಗಳನ್ನು ಮಾಡುತ್ತಿದ್ದಾರೆ. ಅವರದ್ದೇ ಆದ ಅಭಿಮಾನಿ ವರ್ಗ ಕೂಡ ಅಲ್ಲಿದೆ. ಹೀಗಾಗಿ ಟೋಬಿ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

    ಕನ್ನಡದಲ್ಲಿ ಆಗಸ್ಟ್ 25ರಂದು ನೈಜ ಕಥೆಯನ್ನ ಆಧರಿಸಿದ ‘ಟೋಬಿ’ ಸಿನಿಮಾ ತೆರೆ ಕಂಡಿತ್ತು. ರಾಜ್ ಬಿ ಶೆಟ್ಟಿ (Raj B Shetty) ನಟನೆಗೆ ಕರ್ನಾಟಕ ಜನತೆ ಮಾರು ಹೋಗಿತ್ತು. ರಾಜ್- ಚೈತ್ರಾ ಆಚಾರ್ ಕಾಂಬೋ ಮೋಡಿ ಮಾಡಿತ್ತು. ಈಗ ಮಲಯಾಳಂ ಭಾಷೆಯಲ್ಲೂ ಕೂಡ ಟೋಬಿ ಸಿನಿಮಾ ರಿಲೀಸ್ ಆಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿರತ್ನಂ-ಕಮಲ್ ಹಾಸನ್ ಸಿನಿಮಾ: ಬಿಗ್ ಅಪ್ ಡೇಟ್

    ಮಣಿರತ್ನಂ-ಕಮಲ್ ಹಾಸನ್ ಸಿನಿಮಾ: ಬಿಗ್ ಅಪ್ ಡೇಟ್

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

    ಈ ಕುರಿತಂತೆ ಮೇಕಪ್ ಆರ್ಟಿಸ್ಟ್ ರಂಜಿತ್ ಅಂಬಾಡಿ ಎನ್ನುವವರು ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಇವರೆಲ್ಲ ಕೆಲಸ ಮಾಡಲಿದ್ದಾರೆ ಎಂದು ಸಣ್ಣ ಸುಳಿವು ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಅಚ್ಚರಿಯ ಸಂಗತಿಗಳು ಈ ಸಿನಿಮಾದಲ್ಲಿ ಇರಲಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಲ್ಕರ್ ಸಲ್ಮಾನ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈರೆಕ್ಟರ್

    ದುಲ್ಕರ್ ಸಲ್ಮಾನ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈರೆಕ್ಟರ್

    ನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ (Malayalam) ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಇದೀಗ ಮತ್ತೊಂದು ಅಚ್ಚರಿ ಸುದ್ದಿಯೊಂದು ಮಲಯಾಳಂ ಚಿತ್ರೋದ್ಯಮದಿಂದ ಬಂದಿದ್ದು, ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ.

    ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.  ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ- ಪ್ರವಾಸಿಗರಿಗೆ ನಿರಾಸೆ

    ರಾಜ್ ಬಿ ಶೆಟ್ಟಿ (Raj B Shetty)ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.

     

    ಸದ್ಯ ಶೆಟ್ಟರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಟೋಬಿ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಅದರ ನಡುವೆ ರಮ್ಯಾಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ ಮಾಡಬೇಕಿದೆ. ಈ ಮಧ್ಯ ಯಾವಾಗ ನಿರ್ದೇಶನ ಮಾಡುತ್ತಾರೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’  ಟೈಟಲ್ ಫಿಕ್ಸ್

    ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ಲಯಾಳಂ, ಹಿಂದಿ ಸಿನಿಮಾಗಳ ನಂತರ ದುಲ್ಕರ್ ಸಲ್ಮಾನ್ (Dulquer Salmaan) ತೆಲುಗಿನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಅವರು ಎರಡು ಚಿತ್ರಗಳು ರಿಲೀಸ್ ಆಗಿದ್ದು, ಮೂರನೇ ಸಿನಿಮಾ ರೆಡಿ ಆಗುತ್ತಿದೆ. ಈ ಚಿತ್ರಕ್ಕೆ ಕ್ಯಾಚಿ ಟೈಟಲ್ ಹುಡುಕಿದೆ ಚಿತ್ರತಂಡ. ವೆಂಕಿ ಅಟ್ಲೂರಿ (Venky Atluri)ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ (Lucky Baskar) ಎಂದು ಹೆಸರಿಡಲಾಗಿದೆ.

    ತೆಲುಗು ಚಿತ್ರೋದ್ಯಮದಲ್ಲಿ ದುಲ್ಕರ್ ಸಲ್ಮಾನ್ ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ‘ಮಹಾನಟಿ’ ಮತ್ತು ಸೀತಾ ರಾಮಂ ಸಿನಿಮಾದ ನಂತರ ತೆಲುಗಿನಲ್ಲೂ ಸಾಕಷ್ಟು ಬೇಡಿಕೆಯ ನಟರಾಗಿ ತಮ್ಮ ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ ದುಲ್ಕರ್. ಹಾಗಾಗಿ ಹೊಸ ಸಿನಿಮಾದ ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

     

    ಟೈಟಲ್ ಅನಾವರಣದ ಜೊತೆಗೆ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದ್ದು, ನೂರು ರೂಪಾಯಿ ನೋಟಿನ ಹಿಂದೆ ಅರೆಬರೆಯಾಗಿ ಕಾಣುವ ದುಲ್ಕರ್ ಎಲ್ಲರಿಗೂ ಇಷ್ಟವಾಗುತ್ತಾರೆ. ಸಿನಿಮಾ ಕಥೆ ಹಾಗೂ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ಇದ್ದರೂ, ದುಲ್ಕರ್ ಬಗ್ಗೆ ಆಗಾಗ್ಗೆ ಅಪ್ ಡೇಟ್ ನೀಡುತ್ತಲೇ ಇರುತ್ತದೆ ಚಿತ್ರತಂಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]