Tag: Duleep Trophy

  • ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

    ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

    ಮುಂಬೈ: 2025ರ ಟಿ20 ಏಷ್ಯಾಕಪ್‌ ಟೂರ್ನಿಗೆ ಇನ್ನೂ ಕೆಲ ದಿನಗಳು ಬಾಕಿಯಿರುವಾಗಲೇ ಟೀಂ ಇಂಡಿಯಾ (Team India) ಬಿಗ್‌ ಶಾಕ್‌ ಎದುರಾಗಿದೆ. ಈಗಾಗಲೇ ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಉಪನಾಯಕ ಶುಭಮನ್‌ ಗಿಲ್‌ (Shubman Gill) ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

    ಮುಂದಿನ ಸೆ.9 ರಿಂದ ಸೆ.28ರ ವರೆಗೆ ಯುಎಇನಲ್ಲಿ ಟಿ20 ಏಷ್ಯಾಕಪ್‌ (Asia Cup 2025) ಟೂರ್ನಿ ನಡೆಯಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಗಿಲ್‌, ಪ್ರಸ್ತುತ ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಫಿಸಿಕಲ್‌ ಫಿಟ್ನೆಸ್‌ ತಜ್ಞರು ಹೇಳುವಂತೆ ಗಿಲ್‌ ಅವರು ಏಷ್ಯಾಕಪ್‌ ಟೂರ್ನಿಗೆ ಫಿಟ್‌ ಆಗುವ ನಿರೀಕ್ಷೆಯಿದೆ. ಆದ್ರೆ ಇದೇ ಆಗಸ್ಟ್‌ 28ರಿಂದ ಸೆ.15ರ ವರೆಗೆ ನಡೆಯಲಿರುವ ಪ್ರತಿಷ್ಠಿತ ದುಲೀಪ್‌ ಟ್ರೋಫಿಯಿಂದ (Duleep Trophy 2025) ಹೊರಗುಳಿಯುವ ಸಾಧ್ಯತೆಗಳಿಗೆ ಎಂದು ವರದಿಯಾಗಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

    ಏಷ್ಯಾಕಪ್‌ಗೆ ಭಾರತ ತಂಡ ಹೀಗಿದೆ?
    ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್‌ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಹರ್ಷಿತ್‌ ರಾಣಾ, ರಿಂಕು ಸಿಂಗ್. ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

    ಶ್ರೇಯಸ್‌ಗೆ ಸಿಗುತ್ತಾ ಚಾನ್ಸ್‌?
    ಶುಭಮನ್‌ ಗಿಲ್‌ ಏಷ್ಯಾಕಪ್‌ ಟೂರ್ನಿ ಹೊತ್ತಿಗೆ ಸುಧಾರಣೆ ಆಗದಿದ್ದರೇ ಶ್ರೇಯಸ್‌ ಅಯ್ಯರ್‌ ಅವರಿಗೆ ಚಾನ್ಸ್‌ ಸಿಗಬಹುದಾ ಎನ್ನುವ ಪ್ರಶ್ನೆಯೂ ಎದ್ದಿದೆ. ಏಕೆಂದ್ರೆ ಸೂರ್ಯಕುಮಾರ್‌ ಯಾದವ್‌ ಕೂಡ ಶ್ರೇಯಸ್‌ ಅಯ್ಯರ್‌ ಆಯ್ಕೆ ಬಗ್ಗೆ ಆಸಕ್ತಿ ಹೊಂದಿದ್ದರು. ಆದ್ರೆ ಉತ್ತರ ವಲಯದ ಕ್ರಿಕೆಟ್‌ ಕಮಿಟಿ ಗಿಲ್‌ ಸ್ಥಾನಕ್ಕೆ ಸಂಭಾವ್ಯ ಆಟಗಾರರನ್ನಾಗಿ ಶುಭಮನ್‌ ರೊಹಿಲ್ಲಾ ಅಥವಾ ಅಂಕಿತ್‌ ಕುಮಾರ್‌ ರಣಜಿ ಆಟಗಾರರನ್ನ ಸೂಚಿಸಿದೆ ಎಂದು ತಿಳಿದುಬಂದಿದೆ.

    ಶ್ರೇಯಸ್‌ ಕ್ಯಾಪ್ಟನ್‌ ಎಂಬ ವದಂತಿ
    ಎರಡು ದಿನಗಳ ಹಿಂದಷ್ಟೇ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಒನ್‌ಡೇ ಕ್ಯಾಪ್ಟನ್ ಆಗಿ ಮಾಡಲಾಗುತ್ತದೆ ಅನ್ನೋ ವದಂತಿಗೆ ಬಿಸಿಸಿಐ ತೆರೆ ಎಳೆದಿತ್ತು. ಇದನ್ನೂ ಓದಿ: Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

    ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ನಾಯಕನ ಆಯ್ಕೆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಇದರಲ್ಲಿ ಶ್ರೇಯಸ್ ತಪ್ಪು ಏನೂ ಇಲ್ಲ, ನಮ್ಮದೂ ತಪ್ಪಿಲ್ಲ. ಟೂರ್ನಿಗೆ 15 ಜನರನ್ನಷ್ಟೇ ಆಯ್ಕೆ ಮಾಡಲು ಅವಕಾಶವಿದೆ. ಅವಕಾಶ ಬರುವವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದರು. ಇದೀಗ ಗಿಲ್‌ ಅನಾರೋಗ್ಯದ ಬೆನ್ನಲ್ಲೇ ಅಯ್ಯರ್‌ ಅವರತ್ತ ಅಭಿಮಾನಿಗಳ ಚಿತ್ತ ಹರಿದಿದೆ.

  • Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

    Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

    – ಶುಭಮನ್‌ ಗಿಲ್‌ ಪಡೆಗೆ ಹೀನಾಯ ಸೋಲು

    ಬೆಂಗಳೂರು: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಭಾರತ-ಬಿ ತಂಡವು (India B), ಭಾರತ-ಎ ತಂಡದ ವಿರುದ್ಧ 76 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ದುಲೀಪ್‌ ಟ್ರೋಫಿಯಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

    ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್‌ ಟ್ರೋಫಿ (Duleep Trophy) ಮೊದಲ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ನಾಯಕತ್ವದ ʻಬಿʼ ತಂಡ ಅಮೋಘ ಜಯ ಸಾಧಿಸಿದೆ. ಆದ್ರೆ ಎರಡೂ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಶುಭಮನ್‌ ಗಿಲ್‌ ಪಡೆ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿಲ್‌ ಅಲಿ ಗುಡ್‌ಬೈ

    90 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಬಿ ತಂಡ, ರಿಷಭ್‌ ಪಂತ್‌ ಅವರ ಅಮೋಘ ಅರ್ಧಶತಕ ಹಾಗೂ ಸರ್ಫರಾಜ್‌ ಖಾನ್‌ ಬ್ಯಾಟಿಂಗ್‌ ನೆರವಿನೊಂದಿಗೆ 42 ಓವರ್‌ಗಳಲ್ಲಿ 184 ರನ್‌ ಗಳಿಸಿತ್ತು. ಈ ಮೂಲಕ ಒಟ್ಟು 274 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 275 ರನ್‌ ಗುರಿ ನೀಡಿತ್ತು. ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನಟ್ಟಿದ ಎ ತಂಡ 2ನೇ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲು ಕಂಡಿತು.

    ಸ್ಪರ್ಧಾತ್ಮಕ ಗುರಿ ಪಡೆದಿದ್ದ ಎ ತಂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಶುರು ಮಾಡಿತು. ಆರಂಭಿಕ ಮಯಾಂಕ್‌ ಅಗರ್ವಾಲ್‌ 3 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಬಳಿಕ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದ ಶುಭಮನ್‌ ಗಿಲ್‌ ಕೇವಲ 21 ರನ್‌ಗಳಿಗೆ ಔಟಾದರು. ಈ ಬೆನ್ನಲೇ ಟಿ20 ಕ್ರಿಕೆಟ್‌ನಂತೆ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ರಿಯಾನ್‌ ಪರಾಗ್‌ 18 ಎಸೆತಗಳಲ್ಲಿ 31 ರನ್‌ ಬಾರಿಸಿ ಔಟಾದರು. ನಂತರದಲ್ಲಿ ಕೆ.ಎಲ್‌ ರಾಹುಲ್‌, ಆಕಾಶ್‌ ದೀಪ್‌ ಹೊರತುಪಡಿಸಿದ್ರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನಿರ್ಗಮಿಸಿದ ಕಾರಣ ಭಾರತ ಎ ತಂಡ ಸೋಲಬೇಕಾಯಿತು.

    ಭಾರತ-ಎ ತಂಡದ ಪರ ಕೆ.ಎಲ್‌ ರಾಹುಲ್‌ 57 ರನ್‌ (121 ಎಸೆತ, 7 ಬೌಂಡರಿ), ಆಕಾಶ್‌ ದೀಪ್‌ 43 ರಮ್‌, ಶಿವಂ ದುಬೆ, ಕುಲ್ದೀಪ್‌ ಯಾದವ್‌ ತಲಾ 14 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: U-20 World Wrestling Championships – ಭಾರತಕ್ಕೆ 2 ಪದಕ; ನಿಕಿತಾಗೆ ಬೆಳ್ಳಿ, ನೇಹಾಗೆ ಕಂಚು!

    ಇದಕ್ಕೂ ಮುನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ – ಬಿ ತಂಡದ ಪರ ರಿಷಭ್‌ ಪಂತ್‌ ಹಾಗೂ ಸರ್ಫರಾಜ್‌ ಖಾನ್‌ ಅವರ ಅಮೋಘ ಪ್ರದರ್ಶನ ತಂಡಕ್ಕೆ ನೆರವಾಯಿತು. ಪಂತ್‌ 47 ಎಸೆತಗಳಲ್ಲಿ 61 ರನ್‌ (9 ಬೌಂಡರಿ, 2 ಸಿಕ್ಸರ್)‌, ಸರ್ಫರಾಜ್‌ 46 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ರೆ, ನಿತಿಶ್‌ ಕುಮಾರ್‌ ರೆಡ್ಡಿ 19 ರನ್‌, ನವದೀಪ್‌ ಸೈನಿ 13 ರನ್‌, ಯಶ್‌ ದಯಾಳ್‌ 16 ರನ್‌ಗಳ ಕೊಡುಗೆ ನೀಡಿದರು.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌
    ಭಾರತ ಬಿ ತಂಡ – 321/10
    ಭಾರತ ಎ ತಂಡ – 231/10

    ದ್ವಿತೀಯ ಇನ್ನಿಂಗ್ಸ್‌
    ಭಾರತ ಬಿ ತಂಡ – 184/10
    ಭಾರತ ಎ ತಂಡ – 198/10

    ಇನ್ನೂ ಭಾರತ ಸಿ ಮತ್ತು ಭಾರತ ಡಿ ತಂಡಗಳ ನಡುವಿನ ಹಣಾಹಣಿಯಲ್ಲಿ ರುತುರಾಜ್‌ ಗಾಯಕ್ವಾಡ್‌ ನಾಯಕತ್ವದ ʻಸಿʼ ತಂಡ ಶ್ರೇಯಸ್‌ ಅಯ್ಯರ್‌ ನಾಯಕತ್ವದ ʻಡಿʼ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

  • ಬ್ಯಾಟ್ಸ್‌ಮ್ಯಾನ್‌ ಜೊತೆ ಕಿರಿಕ್ – ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್‍ರನ್ನು ಹೊರನಡಿ ಎಂದ ರಹಾನೆ

    ಬ್ಯಾಟ್ಸ್‌ಮ್ಯಾನ್‌ ಜೊತೆ ಕಿರಿಕ್ – ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್‍ರನ್ನು ಹೊರನಡಿ ಎಂದ ರಹಾನೆ

    ಚೆನ್ನೈ: ದುಲೀಪ್ ಟ್ರೋಫಿ (Duleep Trophy) ಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಶ್ಚಿಮ ವಲಯ (West Zone) ತಂಡದ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಬ್ಯಾಟ್ಸ್‌ಮ್ಯಾನ್‌ ಜೊತೆ ಕಿರಿಕ್ ಮಾಡಿದ ಪರಿಣಾಮ ನಾಯಕ ಅಜಿಂಕ್ಯಾ ರಹಾನೆ  (Ajinkya Rahane) ಫೀಲ್ಡಿಂಗ್ ಬಿಟ್ಟು ಹೊರಗೆ ಕಳುಹಿಸಿದ ಘಟನೆ ನಡೆಯಿತು.

    ಫೈನಲ್ ಪಂದ್ಯದ ರೋಚಕತೆಯ ನಡುವೆ ದಕ್ಷಿಣ ವಲಯ ಬ್ಯಾಟ್ಸ್‌ಮ್ಯಾನ್‌ ರವಿತೇಜಾ  (Ravi Teja)  ಬ್ಯಾಟಿಂಗ್ ಮಾಡುತ್ತಿದ್ದಾಗ ಜೈಸ್ವಾಲ್ ಕಿರಿಕ್ ಆರಂಭಿಸಿದ್ದಾರೆ. 50ನೇ ಓವರ್ ವೇಳೆ ಜೈಸ್ವಾಲ್ ಮತ್ತು ರವಿತೇಜಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ‘ಚಕ್ಡಾ ಎಕ್ಸ್ ಪ್ರೆಸ್’ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ

    ಬಳಿಕ ಅಂಪೈರ್ ಮಧ್ಯಪ್ರವೇಶಿಸಿ ಮಾತಿನ ಸಮರವನ್ನು ನಿಲ್ಲಿಸಿ ಪಶ್ಚಿಮ ವಲಯ ನಾಯಕ ರಹಾನೆ ಜೊತೆ ಈ ಬಗ್ಗೆ ತಿಳಿಸಿದರು. ರಹಾನೆ ಜೈಸ್ವಾಲ್ ಬಳಿ ತೆರಳಿ ಸುಮ್ಮನಿರುವಂತೆ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಜೈಸ್ವಾಲ್ ಮತ್ತೆ ಖ್ಯಾತೆ ತೆಗೆದಿದ್ದಾರೆ. ಈ ವೇಳೆ ರಹಾನೆ ಸುಮ್ಮನಿರದೆ. ನೀನು ಫೀಲ್ಡಿಂಗ್ ಮುಂದುವರಿಸಬೇಡ ಡಗೌಟ್‍ಗೆ ತೆರಳು ಎಂದಿದ್ದಾರೆ. ಬಳಿಕ ಜೈಸ್ವಾಲ್ ಫೀಲ್ಡಿಂಗ್ ಬಿಟ್ಟು ಹೊರನಡೆದರು. ಇದನ್ನೂ ಓದಿ: ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್

    ಈ ಘಟನೆಯ ನಡುವೆಯೇ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ, ಸರ್ಫರಾಜ್ ಖಾನ್ ಸಮಯೋಚಿತ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ವಿರುದ್ಧ ಪಶ್ಚಿಮ ವಲಯ 294 ರನ್‍ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ದುಲೀಪ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    Live Tv
    [brid partner=56869869 player=32851 video=960834 autoplay=true]