Tag: Dugs

  • ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟಿ ಸೊನಾಲಿ ಪೋಗಟ್ ಕುರಿತಾಗಿ ದಿನಕ್ಕೊಂದು ಮಾಹಿತಿ ಹೊರ ಬರುತ್ತಿವೆ. ನೂರಾರು ಕೋಟಿ ಆಸ್ತಿಗಾಗಿ ಸ್ವತಃ ಸೊನಾಲಿ ಅವರ ಪಿಎ ಸುಧೀರ್ ಅನ್ನುವವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸೊನಾಲಿ ಅವರದ್ದು ನೂರು ಕೋಟಿಗೂ ಅಧಿಕ ಆಸ್ತಿಯಿದ್ದು, ಅದನ್ನು ತನ್ನ ಹೆಸರಿಗೆ ನೋಂದಾಯಿಸಲು ಸುಧೀರ್ ಪ್ಲ್ಯಾನ್ ಮಾಡಿದ್ದ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ದಾಖಲೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರಂತೆ.

    ಸುಧೀರ್, ಸೊನಾಲಿ ಸೇರಿದಂತೆ ಹಲವರು ಗೋವಾಗೆ ಶೂಟಿಂಗ್ ನೆಪದಲ್ಲಿ ಬಂದಿದ್ದರು. ಆದರೆ, ರಾತ್ರಿ ಸೊನಾಲಿ ಅವರಿಗೆ ಕುಡಿಸಿ, ಅದರಲ್ಲಿ ಡ್ರಗ್ಸ್ ಕೂಡ ಬೆರೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸೊನಾಲಿ ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಸೊನಾಲಿ ಉಳಿಯಲಿಲ್ಲ ಎಂದು ಹೇಳಲಾಗುತ್ತಿದೆ. ಸೊನಾಲಿಯನ್ನು ಕೊಲೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಆಕೆಯ ಕುಟುಂಬದ್ದು. ಇದನ್ನೂ ಓದಿ:200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

    ಗೋವಾ ಪೊಲೀಸರು ಈಗಾಗಲೇ ಸೊನಾಲಿ ಅವರ ಗುರುಗಾಂವ್‌ಗೆ ಬಂದಿದ್ದು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರಂತೆ. ಅಲ್ಲದೇ, ಸೊನಾಲಿ ಅವರಿಗೆ ಸೇರಿದ್ದು ಎನ್ನಲಾದ ಮೂರು ಡೈರಿಗಳು ಕೂಡ ಪತ್ತೆ ಆಗಿವೆಯಂತೆ. ಅವುಗಳು ಕೊಲೆಯ ರಹಸ್ಯ ಬೇಧಿಸಲು ಸಹಾಯಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಸ್ತಿ ಕಬಳಿಸಲು ತನ್ನ ಸಿಬ್ಬಂದಿಯಿಂದಲೇ ಸೊನಾಲಿ ಕೊಲೆಯಾಗಿದ್ದಾರೆ ಎನ್ನುವುದು ಆಘಾತಕಾರಿ ವಿಷಯ.

    Live Tv
    [brid partner=56869869 player=32851 video=960834 autoplay=true]

  • ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

    ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಡೀಲ್‌ನಲ್ಲಿ ನಟಿ ರಾಗಿಣಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರ ಮೇಲೆ ಪ್ರಭಾವಿ ರಾಜಕಾರಣಿಯೊಬ್ಬರು ಒತ್ತಡ ಹಾಕುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಡ್ರಗ್ಸ್‌ ದಂಧೆಯಲ್ಲಿ ಕೇವಲ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಮಾತ್ರವಲ್ಲ ರಾಜಕೀಯ ನಾಯಕರ ಪುತ್ರರು ಭಾಗಿಯಾಗಿದ್ದಾರೆ ಎನ್ನುವುದು ಡ್ರಗ್‌ ಪೆಡ್ಲರ್‌ಗಳ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿ ಗೊತ್ತಾಗಿದೆ.  ಇದನ್ನೂ ಓದಿ: ಡ್ರಗ್‍ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್‍ವರ್ಡ್ ರೀವಿಲ್

    ಈಗ ರಾಗಿಣಿಯನ್ನು ವಿಚಾರಣೆಗೆ ಒಳಪಡಿಸುತ್ತಿರುವಾಗಲೇ ಪ್ರಭಾವಿ ರಾಜಕಾರಣಿಯೊಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಎಷ್ಟು ವಿಚಾರಣೆ ಮಾಡುತ್ತಿದ್ದೀರಿ? ಬೇಗ ಕಳುಹಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಈಗ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿದ ಬಳಿಕ ಗೃಹ ಸಚಿವರಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಅಧಿಕಾರಿ ತಿಳಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.