Tag: Duet

  • ನೀರೊಳಗೆ ಡ್ಯುಯೇಟ್ ಹಾಡಿದ ಪೃಥ್ವಿ ಹಾಗೂ ಮಿಲನಾ

    ನೀರೊಳಗೆ ಡ್ಯುಯೇಟ್ ಹಾಡಿದ ಪೃಥ್ವಿ ಹಾಗೂ ಮಿಲನಾ

    ಫಾರ್​ ರಿಜಿಸ್ಟ್ರೇಷನ್​ ಸ್ಯಾಂಡಲ್​ವುಡ್​ನಲ್ಲಿ ನಾನಾ ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ನಟಿಸಿರುವ ಈ ಚಿತ್ರದ ಕದ್ದ ಕದ್ದ ಹಾಡನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಕಂ ನಟರಾಗಿರುವ ಡಾರ್ಲಿಂಗ್ ಕೃಷ್ಣ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹಾಡು ಬಿಡುಗಡೆ ಬಳಿಕ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬ್ಯೂಟಿಫುಲ್ ಸಾಂಗ್. ನನಗೆ ತುಂಬಾ ಇಷ್ಟವಾಯಿತು. ಮೇಕಿಂಗ್ ವಿಚಾರ ಇರಬಹುದು. ಪೃಥ್ವಿ ಹಾಗೂ ಮಿಲನಾ ಇಬ್ಬರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಸಾಂಗ್ ಔಟ್ ಫುಟ್ ಚೆನ್ನಾಗಿ ಬಂದಿದೆ. ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಮಿಲನಾ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ವಂಡರ್ ಫುಲ್ ಆಕ್ಟರ್. ಇವರಿಬ್ಬರ ಕಾಂಬಿನೇಷನ್ ಕ್ಲಿಕ್ ಆಗುತ್ತದೆ ಎಂದರು.

    ನಿರ್ಮಾಪಕರಾದ ನವೀನ್ ರಾವ್  ಮಾತನಾಡಿ, ಈ ಹಾಡು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿ ಇತ್ತು. ಇರ್ಮಾನ್ ಸರ್ ಅವರನ್ನು ಕನ್ವೆನ್ಸ್ ಮಾಡಿ ಎಲ್ಲೆಲ್ಲೋ ಹೋಗಿ ಬಂದ್ವಿ. ಆ ನಂತರ ಇಲ್ಲೇ ಶೂಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇದನ್ನು ಡಿಫರೆಂಟಾಗಿ ಮಾಡಬೇಕು ಎಂದು ಕೇಳಿಕೊಂಡಾಗ ಪ್ಲಾನ್ ಮಾಡಿ ಮಾಡಲಾಯಿತು. ಇಡೀ ಹಾಡಲ್ಲಿ ಪೃಥ್ವಿ ಹಾಗೂ ಮಿಲನಾ ಅಷ್ಟೇ ಕಾಣಬಹುದು. ಆದರೆ ತೆರೆ ಹಿಂದೆ 160 ಜನರ ಪರಿಶ್ರಮವಿದೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ಕಾಲೇಜ್ ಸಮಯದಲ್ಲಿ ಹಾಡು ಬರೆಯಲು ಯೋಚನೆ ಮಾಡುತ್ತಿದ್ದೇವು. ಆಗ ಸಮಯದಲ್ಲಿ ಬರೆದ ಹಾಡು ಇದು. ಈಗ ಅದನ್ನು ಬಳಸಿಕೊಂಡಿದ್ದೇವೆ. ನಕುಲ್ ಹಾಡಿಗೆ ಬೇರೆ ಆಯಾಮ ಕೊಟ್ಟಿದ್ದಾರೆ. ಪರ್ಫಾಮೆನ್ಸ್ ವಿಚಾರಕ್ಕೆ ಬಂದರೆ. ಯಾವ ರೀತಿ ಮಾಡುವುದು ಆದಾಗ ಸುಮಾರು ಐಡಿಯಾ ಬಂತು. ಅಂಡರ್ ವಾಟರ್ ಪ್ಲಾನ್ ಮಾಡಿದ್ದು ಇರ್ಮಾನ್ ಸರ್. ಅವರಿಗೆ ಕ್ರೆಡಿಟ್ ಸಲ್ಲಬೇಕು. ಇದೊಂದು ಒಳ್ಳೆ ಅನುಭವ. ಹಾಗೂ ಸಾಹಸ. ಮಿಲನಾ ಮತ್ತು ಪೃಥ್ವಿ ಬೆಂಬಲದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

    ನಟಿ ಮಿಲನಾ ನಾಗರಾಜ್ ಮಾತನಾಡಿ, ನೆಲ ಹಾಗೂ ಸ್ನೊ ಮೇಲೆ ಸಾಂಗ್ ಮಾಡಿದ್ದೇವೆ. ಫೂಲ್ ಒಳಗಡೆ ಸಾಂಗ್ ಎಂದಾಗ ಡಿಫರೆಂಟ್ ಇರುತ್ತದೆ ಅನ್ನೋ ಎಕ್ಸೈಟ್ ಆಯ್ತು. ಆದರೆ ಸಿಕ್ಕ ಪಟ್ಟೆ ಕಷ್ಟವಾಯಿತು. ಕಾಸ್ಟ್ಯೂಮ್ ಹೇವಿ ಅನಿಸುತಿತ್ತು. ನನ್ನ ಇಷ್ಟು ವರ್ಷದ ಕರಿಯರ್ ನಲ್ಲಿ ಶೂಟಿಂಗ್ ಅಂತಾ ಕಷ್ಟಪಟ್ಟ ದಿನ ಅದು. ಅವತ್ತು ಔಟ್ ಫುಟ್ ಬಗ್ಗೆ ಚಿಂತೆ ಹೋಗಿತ್ತು. ಇವತ್ತು ಔಟ್ ಫುಟ್ ನೋಡ್ತಿದ್ದ ವರ್ತ್ ಅನಿಸುತ್ತದೆ. ಆರ್ಟಿಸ್ಟ್ ಎಲ್ಲಾ ಸಾಂಗ್ ಮಾಡುತ್ತಿದ್ದೇವು. ಎಲ್ಲಾ ಸೇಮ್ ಸಾಂಗ್ಸ್ ಮಾಡುತ್ತಿದ್ದೇವು. ಆದರೆ ಇದು ವಿಭಿನ್ನ ಎಂದರು.

    ನಟ ಪೃಥ್ವಿ ಅಂಬಾರ್ ಮಾತನಾಡಿ, ಸಾಂಗ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕರು ಫ್ಯಾಷನೇಟೆಡ್ ಪ್ರೊಡ್ಯೂಸರ್. ಸದಾ ಅಭಿರುಚಿ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ. ನವೀನ್ ಸರ್ ಐಟಿ ಬ್ಯಾಕ್ ಡ್ರಾಪ್ ನಿಂದ ಬಂದಿರೋದ್ರಿಂದ ಅವರ ಜೊತೆ ಕೆಲಸ ಮಾಡುವ ಟೈಫ್ ಬೇರೆ ಇದೆ. ಪೂರ್ತಿ ಸಿನಿಮಾ ಎಂಜಾಯ್ ಮಾಡಿಕೊಂಡು ಶೂಟ್ ಮಾಡಿದ್ದೇವೆ. ಕದ್ದು ಕದ್ದು ಹಾಡು ಎಲ್ಲರಿಗೂ ಹಾಡು ಇಷ್ಟವಾಗುತ್ತದೆ ಎಂದರು. ಕದ್ದು ಕದ್ದು ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ, ಆರ್ ಕೆ ಹರೀಶ್ ಸಂಗೀತ, ನಕುಲ್ ಅಭಯಂಕರ್ ಕಂಠ ಕುಣಿಸಿದ್ದಾರೆ. ಅಂಡರ್ ವಾಟರ್ ನಲ್ಲಿ ಹಾಡು ಮೂಡಿಬಂದಿದ್ದು, ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ಪೃಥ್ವಿ ಹಾಗೂ‌ ಮಿಲನಾ ಹೆಜ್ಜೆ ಹಾಕಿದ್ದಾರೆ.

     

    ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್‌, ಸಂಗೀತ ಸಂಯೋಜನೆ ಆರ್‌.ಕೆ ಹರೀಶ್‌, ಅಭಿಲಾಷ್‌ ಕಲಾತಿ, ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್‌ ಸಂಕಲನ ಚಿತ್ರಕ್ಕಿದೆ. ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್‌ ದ್ವಾರಕನಾಥ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿಶ್ಚಲ್‌ ಫಿಲಂಸ್‌ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಬಂಡವಾಳ ಹೂಡಿದ್ದಾರೆ.

  • ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ ರಿಷಿ

    ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ ರಿಷಿ

    ನ್ನಡ ಚಿತ್ರರಂಗ ಪ್ರತಿಭಾನ್ವಿತ ನಟ ರಿಷಿ (Rishi) ವಿಭಿನ್ನ ಪಾತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸಿಕೊಂಡು ಬರ್ತಿದ್ದಾರೆ. ಇದೀಗ ಅವರು ರಾಮನ ಅವತಾರ ಎಂಬ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ. ಶುಭ್ರ ಅಯ್ಯಪ್ಪ (Shubhra Ayyappa) ಹಾಗೂ ಪ್ರಣಿತಾ ಸುಭಾಷ್ (Pranitha Subhash) ಈ ಚಿತ್ರದ ನಾಯಕಿಯರು. ಅಲ್ಲದೇ ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ನಿರ್ದೇಶಕ ಸಿಂಪಲ್ ಸುನಿ ಕ್ಯಾಂಪಸ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ ಅನುಭವವಿರುವ, ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಗ್ರಾಫಿಕ್ಸ್ ಹಾಗೂ ಮ್ಯೂಸಿಕ್ ಕೆಲಸಗಳು ಭರದಿಂದ ಸಾಗ್ತಿವೆ. ಜೂನ್ ಮೊದಲನೇ ವಾರದಲ್ಲಿ ರಾಮನ ಅವತಾರ ಸಿನಿಮಾವನ್ನು ತೆರೆಗೆ ತರೋದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ಕೊಹ್ಲಿಯನ್ನು ಟಿಕ್‍ಟಾಕ್‍ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ ವಾರ್ನರ್

    ಕೊಹ್ಲಿಯನ್ನು ಟಿಕ್‍ಟಾಕ್‍ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ ವಾರ್ನರ್

    ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಟಿಕ್‍ಟಾಕ್‍ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ್ದಾರೆ.

    ಡೇವಿಡ್ ವಾರ್ನರ್ ಅವರು ಲಾಕ್‍ಡೌನ್ ವೇಳೆ ತಮ್ಮ ಕುಟುಂಬದ ಜೊತೆ ಉತ್ತಮ ಕಾಲವನ್ನು ಕಳೆಯುತ್ತಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುವ ವಾರ್ನರ್ ಟಿಕ್‍ಟಾಕ್ ವಿಡಿಯೋಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಡದಿ ಮಕ್ಕಳ ಜೊತೆ ಫನ್ನಿ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ.

    https://www.instagram.com/p/CAfNQG9Jgbp/

    ಇತ್ತೀಚೆಗೆ ವಾರ್ನರ್ ಅವರು ಅಕ್ಷಯ್ ಕುಮಾರ್ ಅವರ ಬಹು ಜನಪ್ರಿಯ ಗೀತೆ ಬಾಲ ಹಾಡಿಗೆ ಟಿಕ್‍ಟಾಕ್‍ನಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಟಿಕ್‍ಟಾಕ್ ವಿಡಿಯೋವನ್ನು ವಾರ್ನರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲೂ ಹಂಚಿಕೊಂಡಿದ್ದರು. ಇದನ್ನು ನೋಡಿ ಫಿದಾ ಆದ ಕೊಹ್ಲಿ ಈ ವಿಡಿಯೋಗೆ ವ್ಯಂಗ್ಯವಾಗಿ ನಗುತ್ತಿರುವ ಇಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.

    https://www.instagram.com/p/CAZmL8HJ4xR/

    ಇದಾದ ನಂತರ ಕೊಹ್ಲಿಯ ಕಮೆಂಟ್‍ಗೆ ಉತ್ತರ ನೀಡಿರುವ ವಾರ್ನರ್ ಅವರು, ನೀನು ಡ್ಯುಯೆಟ್ ಮಾಡು ಬಾ ಮ್ಯಾನ್. ನಿನ್ನ ಪತ್ನಿ ನಿನಗೆ ಹೇಳಿಕೊಡುತ್ತಾರೆ ಎಂದು ರಿಪ್ಲೈ ಮಾಡಿದ್ದಾರೆ. ವಾರ್ನರ್ ಅವರ ರಿಪ್ಲೈ ಕಂಡು ಬೆರಗಾದ ಅಭಿಮಾನಿಗಳು ಇಂದು ಭಾರತದಲ್ಲಿ ಟಿಕ್‍ಟಾಕ್ ಇನ್ನೂ ಜೀವಂತವಾಗಿದೆ ಎಂದರೆ ಅದು ವಾರ್ನರ್ ಅವರಗಾಗಿಯೇ ಎಂದು ಕಮೆಂಟ್ ಮಾಡಿದ್ದಾರೆ.

    https://www.instagram.com/p/B_mINrppW7d/

    ಸದ್ಯ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡುವುದರಲ್ಲಿ ಬ್ಯುಸಿ ಇರುವ ಡೇವಿಡ್ ವಾರ್ನರ್ ಇತ್ತೀಚೆಗೆ ಬ್ಯಾಟ್ ಹಿಡಿದು ಬಾಹುಬಲಿ ಡೈಲಾಗ್ ಹೇಳಿ ಮಿಂಚಿದ್ದರು. ಜೊತೆಗೆ ಮಡದಿ ಮಕ್ಕಳ ಜೊತೆಗೆ ಅಲ್ಲು ಅರ್ಜುನ್ ಅವರ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದರು. ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿರುವ ವಾರ್ನರ್ ತೆಲುಗು ಹಾಡುಗಳಿಗೆ ಟಿಕ್‍ಟಾಕ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

    ಟಿಕ್‍ಟಾಕ್ ಬ್ಯಾನ್ ಮಾಡಿ
    ಟಿಕ್‍ಟಾಕ್ ಅನ್ನು ಭಾರತದಲ್ಲಿ ಅತೀ ಹೆಚ್ಚು ಜನ ಬಳಸುತ್ತಿದ್ದಾರೆ. ಆದರೆ ಭಾರತದಲ್ಲಿ ಬ್ಯಾನ್ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ. ಇದರಲ್ಲಿ ಜನಪ್ರಿಯತೆ ಪಡೆಯಬೇಕು ಎಂದು ಜನರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಟಿಕ್‍ಟಾಕ್‍ನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಕೆಲವರ ಆಗ್ರಹಿಸುತ್ತಿದ್ದಾರೆ. ಶರ್ಮಾ ಅವರು ಹೇಳಿದ್ದಾರೆ. ಜೊತೆಗೆ ಟಿಕ್‍ಟಾಕ್ ಚೀನಾ ಆ್ಯಪ್ ಆಗಿದ್ದು, ಇದನ್ನು ನಿಷೇಧ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.