Tag: Dudhsagar

  • ದೂದ್ ಸಾಗರ್ ಬಳಿ ಹಳಿ ತಪ್ಪಿದ ರೈಲು – ಮಾರ್ಗ ಬದಲು

    ದೂದ್ ಸಾಗರ್ ಬಳಿ ಹಳಿ ತಪ್ಪಿದ ರೈಲು – ಮಾರ್ಗ ಬದಲು

    ಬೆಳಗಾವಿ: ವಾಸ್ಕೋದಿಂದ ಬಳ್ಳಾರಿಗೆ (Ballary) ಕಲ್ಲಿದ್ದಲು ತುಂಬಿಕೊಂಡು ತೆರಳುತ್ತಿದ್ದ ಗೂಡ್ಸ್ ರೈಲಿನ (Goods Train) ವ್ಯಾಗನ್ ಗುರುವಾರ ಮಧ್ಯಾಹ್ನ ದೂದ್ ಸಾಗರ್ (Dudhsagar) ಬಳಿ ಹಳಿತಪ್ಪಿದ್ದು, ಕೆಲವು ರೈಲುಗಳು ಮಾರ್ಗ ಬದಲಾವಣೆ ಮಾಡಲಾಗಿದೆ. ಇನ್ನು ಕೆಲವೊಂದನ್ನು ಸ್ಥಗಿತಗೊಳಿಸಲಾಗಿದೆ.

    ಹುಬ್ಬಳ್ಳಿ ವಿಭಾಗದ ಸೋನಾಲಿಯಂ ಮತ್ತು ದೂದ್ ಸಾಗರ ನಿಲ್ದಾಣಗಳ ನಡುವೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೂಡ್ಸ್ ರೈಲಿನ ವ್ಯಾಗನ್ ಹಳಿತಪ್ಪಿದೆ.ಇದನ್ನೂ ಓದಿ: ಪತಿಯಿಂದಲೇ ಮಿಸ್ ಸ್ವಿಜರ್ಲೆಂಡ್ ಹತ್ಯೆ: ಕೊಲೆ ಬಳಿಕ ಬ್ಲೆಂಡರ್ ಬಳಸಿ ಮೃತದೇಹ ಪೀಸ್ ಪೀಸ್

    ಈ ಘಟನೆಯಿಂದಾಗಿ ಮಧ್ಯಾಹ್ನ ಗೋವಾಗೆ ತೆರಳುತ್ತಿದ್ದ ಅಮರಾವತಿ ಎಕ್ಸ್ಪ್ರೆಸ್ (Amaravati Express) ರೈಲು ಕರಂಜೋಳ್‌ವರೆಗೆ ತೆರಳಿ ಪುನಃ ಲೋಂಡಾವರೆಗೆ ವಾಪಸ್ ತಂದು ಪ್ರಯಾಣಿಕರನ್ನು ಅಲ್ಲಿಯೇ ಬಿಟ್ಟು ಬಸ್ ಮೂಲಕ ತೆರಳಲು ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.

    ಇನ್ನು ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ಪ್ರಯಾಣವನ್ನು ಮಡಗಾಂವ್, ರೋಹಾ, ಪನ್ವೆಲ್, ಪುಣೆ, ದೌಂಡ್ ಕಾರ್ಡ್ ಲೈನ್ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ತಿರುಗಿಸಲಾಗಿದೆ.

    18048 ವಾಸ್ಕೋ ಡ ಗಾಮಾ (Vasco da Gama)- ಶಾಲಿಮಾರ್ ಎಕ್ಸ್ಪ್ರೆಸ್ ಪ್ರಯಾಣವು ವಾಸ್ಕೋ ಡ ಗಾಮಾ ಬದಲಿಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ – ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.ಇದನ್ನೂ ಓದಿ: Nagamangala Violence | 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಪ್ರಯಾಣಿಕರ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು, ಲೋಂಡಾ ನಿಲ್ದಾಣದಲ್ಲಿ ರೈಲು ಸಂಖ್ಯೆ 18047ರ ಅಂದಾಜು 1,100 ಪ್ರಯಾಣಿಕರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಲೋಂಡಾದಲ್ಲಿಯೇ ಸಿಲುಕಿರುವ ಪ್ರಯಾಣಿಕರನ್ನು ಕರೆದೊಯ್ಯಲು 25 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣ ಪುನಃಸ್ಥಾಪನೆ ತ್ವರಿತಗೊಳಿಸಲು ಅಪಘಾತ ಪರಿಹಾರ ರೈಲನ್ನು ವಾಸ್ಕೋ ಡ ಗಾಮಾದಿಂದ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ರೈಲ್ವೇ ಹಳಿ ಮೇಲೆ ಕುಸಿದ ಮಣ್ಣು – ಗೋವಾ, ಕರ್ನಾಟಕ ರೈಲು ಸಂಚಾರದಲ್ಲಿ ಇನ್ನೆರಡು ದಿನ ವ್ಯತ್ಯಯ

    ರೈಲ್ವೇ ಹಳಿ ಮೇಲೆ ಕುಸಿದ ಮಣ್ಣು – ಗೋವಾ, ಕರ್ನಾಟಕ ರೈಲು ಸಂಚಾರದಲ್ಲಿ ಇನ್ನೆರಡು ದಿನ ವ್ಯತ್ಯಯ

    – 150 ಕ್ಕೂ ಹೆಚ್ಚು ಸಿಬ್ಬಂದಿಯಿಂದ 10 ಜೆಸಿಬಿ ಬಳಸಿ ತೆರವು ಕಾರ್ಯ

    ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ದೂಧ್ ಸಾಗರ್ ಫಾಲ್ಸ್  (Dudhsagar) ಬಳಿ ಬೃಹತ್ ಪ್ರಮಾಣದ ಭೂಕುಸಿತವಾಗಿದೆ. ಇದರಿಂದಾಗಿ ಗೋವಾ ಹಾಗೂ ಕರ್ನಾಟಕ ನಡುವಿನ ರೈಲು ಸಂಚಾರದಲ್ಲಿ ಎರಡು ದಿನಗಳ ಕಾಲ ವ್ಯತ್ಯಯ ಆಗಲಿದೆ. ನೈರುತ್ಯ ರೈಲ್ವೆ (Railway) ವಲಯದ 150 ಕ್ಕೂ ಅಧಿಕ ಸಿಬ್ಬಂದಿಯಿಂದ 10ಕ್ಕೂ ಹೆಚ್ಚು ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.

    ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ನಿರಂತರ ಭೂಕುಸಿತವಾಗುತ್ತಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಗೋವಾ-ಕರ್ನಾಟಕ ಮಾರ್ಗ ಮಧ್ಯೆ ರೈಲ್ವೆ ಸಂಚಾರ ಸ್ಥಗಿತವಾಗಿತ್ತು. ಕಳೆದ 36 ಗಂಟೆಗಳಿಂದ ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿ ಮೇಲೆ ಬಿದ್ದಿರುವ ಕಲ್ಲು ಹಾಗೂ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೆ ಕೇಸ್‌ – ಅಲಹಾಬಾದ್ ಹೈಕೋಟ್‌ನಲ್ಲಿ ಇಂದು ವಿಚಾರಣೆ

    ಕಾರ್ಯಾಚರಣೆ ನಡೆಯುತ್ತಿರುವುದರಿಂದ ದೂಧ್ ಸಾಗರ್ ಬಳಿ ರೈಲ್ವೆ ಸಿಬ್ಬಂದಿ ಹೊರತುಪಡಿಸಿ ಅನ್ಯ ವ್ಯಕ್ತಿಗಳಿಗೆ ಪ್ರವೇಶಕ್ಕೆ ನಿಷೇಧಿಸಲಾಗಿದೆ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಆದರೆ ಈ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ತೆರವು ಕಾರ್ಯಾಚರಣೆಗೆ ತೊಡಕಾಗಿದೆ. ಇದು ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

    ಕಾರ್ಯಾಚರಣೆ ಇನ್ನೂ ಒಂದು ದಿನ ನಡೆಯಲಿದ್ದು, ಎರಡು ದಿನಗಳು ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಇದನ್ನೂ ಓದಿ: ನನ್ನ 3ನೇ ಅವಧಿಯಲ್ಲಿ ಭಾರತ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಭರವಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೂದ್ ಸಾಗರ್ ಬಳಿ ಗುಡ್ಡ ಕುಸಿತ – ರೈಲು ಸಂಚಾರದಲ್ಲಿ ವ್ಯತ್ಯಯ

    ದೂದ್ ಸಾಗರ್ ಬಳಿ ಗುಡ್ಡ ಕುಸಿತ – ರೈಲು ಸಂಚಾರದಲ್ಲಿ ವ್ಯತ್ಯಯ

    ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಗೆ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ್ (Dudhsagar) ಬಳಿ ಗುಡ್ಡ ಕುಸಿದಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿಲ್ಲ.

    ಭಾನುವಾರ ಸಂಜೆ 6 ಗಂಟೆಗೆ ಗುಡ್ಡ ಕುಸಿದು ರೈಲ್ವೆ ಟ್ರಾಕ್ (Railway Track) ಮೇಲೆ ಮಣ್ಣು, ಬಂಡೆಗಳು ಬಿದ್ದಿವೆ. ಘಟನೆಯ ಪರಿಣಾಮ ನಾಲ್ಕು ಗಂಟೆಗಳ ಕಾಲ ಬೆಳಗಾವಿ- ಗೋವಾ ಮಧ್ಯೆ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಣ್ಣು-ಬಂಡೆಗಳ ತೆರವಿಗೆ ಗೋವಾದ ಅಗ್ನಿಶಾಮಕ ದಳದ ಠಾಣೆ ಸಿಬ್ಬಂದಿಗಳು, ರೈಲ್ವೆ ಪೊಲೀಸರ ಹರಸಾಹಸಪಟ್ಟರು. ಇದನ್ನೂ ಓದಿ: ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಭಾನುವಾರ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ತೆರಳಿದ್ದರು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ರಾತ್ರಿ 10 ಗಂಟೆಯ ಬಳಿಕ ರೈಲುಗಳ ಕಾರ್ಯಾಚರಣೆ ಪುನರಾರಂಭವಾಗಿದೆ. ಇದನ್ನೂ ಓದಿ: ಪರಿಷತ್‍ನಲ್ಲಿ ಕೆ.ಟಿ ಶ್ರೀಕಂಠೇಗೌಡ ಅತ್ಯುತ್ತಮ ಶಾಸಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೂಧ್ ಸಾಗರ್ ಬಳಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್‌ ರೈಲು

    ದೂಧ್ ಸಾಗರ್ ಬಳಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್‌ ರೈಲು

    ಪಣಜಿ: ದೂಧ್ ಸಾಗರ್ ಬಳಿ ವಾಸ್ಕೊ- ಹೌರಾ ಅಮರಾವತಿ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

    ದೂಧ್ ಸಾಗರ್ ಮತ್ತು ಕಾರಂಜೋಲ್ ನಡುವೆ ಈ ರೈಲಿನ ಎಂಜಿನಿನ ಮುಂಭಾಗದ ಎರಡು ಜೋಡಿ ಚಕ್ರಗಳು ಹಳಿ ತಪ್ಪಿವೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಮಾಹಿತಿ ನೀಡಿದರು. ಬೆಳಗ್ಗೆ 6:30ಕ್ಕೆ ವಾಸ್ಕೋ-ಡ-ಗಾಮಾದಿಂದ ಹೊರಟಿದ್ದ ಈ ರೈಲು, ಬೆಳಿಗ್ಗೆ 8:56ಕ್ಕೆ ದೂಧ್ ಸಾಗರ್ ಬಳಿ ಬಂದಾಗ ಹಳಿ ತಪ್ಪಿದೆ ಎಂದು ತಿಳಿಸಿದರು.

    ವಿಷಯ ತಿಳಿದ ತಕ್ಷಣ ತ್ವರಿತ ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ಸಲಕರಣೆ ವ್ಯಾನ್ ಸ್ಥಳಕ್ಕೆ ಭೇಟಿ ನೀಡಿ, ಸುರಕ್ಷತಾ ಪರಿಹಾರ ಕಾರ್ಯಾಚರಣೆ ನಡೆಸಿ ಮತ್ತೆ ಎಂಜಿನ್ ಹಳಿಗೆ ತರಲಾಗಿದೆ. ಹಳಿ ತಪ್ಪಿದ್ದರಿಂದ ರೈಲಿನ ಯಾವುದೇ ಬೋಗಿಯ ಮೇಲೆ ಪರಿಣಾಮ ಬೀರಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವಿಳಂಬ ಕೂಡಾ ಆಗಿದೆ.

  • ದೂಧ್‍ಸಾಗರ್ ಬಳಿ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ- ರೈಲು ನಿಲುಗಡೆ, ಪ್ರಯಾಣಿಕರಲ್ಲಿ ಆತಂಕ

    ದೂಧ್‍ಸಾಗರ್ ಬಳಿ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ- ರೈಲು ನಿಲುಗಡೆ, ಪ್ರಯಾಣಿಕರಲ್ಲಿ ಆತಂಕ

    ಬೆಳಗಾವಿ: ಬೆಳಗಾವಿ-ಗೋವಾ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ದೂಧ್‍ಸಾಗರ್ ಬಳಿ ಮಾರ್ಗಮಧ್ಯೆ ರೈಲು ನಿಂತಿದೆ. ಇದರಿಂದಾಗಿ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.

    ಬೆಳಗಾವಿ ಗೋವಾ ಮಾರ್ಗದ ರೈಲ್ವೆ ಮಾರ್ಗದಲ್ಲಿ ಭೂ ಕುಸಿತದಿಂದ ರೈಲ್ವೆ ಸಂಚಾರ ಬಂದ್ ಆಗಿದೆ. ಗೋವಾಕ್ಕೆ ಹೊರಟಿದ್ದ ರೈಲು ದೂಧ್‍ಸಾಗರ್ ಬಳಿ ಬೆಳಗಾವಿಯಿಂದ ಸುಮಾರು 34 ಕಿ.ಮೀ. ದೂರದಲ್ಲಿ ನಿಲುಗಡೆಯಾಗಿದ್ದು, ನೂರಾರು ಪ್ರಯಾಣಿಕರು ರೈಲಿನಲ್ಲಿದ್ದಾರೆ. ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.

    ಭಾರೀ ಮಳೆಯಿಂದ ಬೆಳಗಾವಿ-ಗೋವಾ ಮಾರ್ಗದ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ಗೋವಾಕ್ಕೆ ತೆರಳುತ್ತಿದ್ದ ರೈಲು ಅರ್ಧ ದಾರಿಯಲ್ಲೇ ನಿಲುಗಡೆಯಾಗಿದೆ. ರೈಲಿನಲ್ಲಿ ಸಿಲುಕಿರುವ ನೂರಾರು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಆಹಾರ, ನೀರು ವ್ಯವಸ್ಥೆ ಮಾಡಿದೆ.