Tag: Dubare Forests

  • ದುಬಾರೆ ಮೀಸಲು ಅರಣ್ಯಕ್ಕೆ ಬೆಂಕಿ – 12 ಎಕ್ರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

    ದುಬಾರೆ ಮೀಸಲು ಅರಣ್ಯಕ್ಕೆ ಬೆಂಕಿ – 12 ಎಕ್ರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

    ಮಡಿಕೇರಿ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಗೇಟ್ ಹಾಡಿ ದೊಡ್ಡ ಹಡ್ಲು ಭಾಗದ ದುಬಾರೆ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇಂದು ಸಂಜೆ ಬೆಂಕಿ ಕಾಣಿಸಿಕೊಂಡಿದೆ.

    ಗಿಡ, ಮರಗಳು ಸೇರಿ ಸುಮಾರು ಹನ್ನೆರಡು ಎಕ್ರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಸಣ್ಣಪುಟ್ಟ ಕಾಡು ಪ್ರಾಣಿಗಳು, ಹಾವುಗಳು ಬೆಂಕಿಗಾಹುತಿಯಾಗಿದೆ.

    ಐವತ್ತಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಹಾಡಿಯ ನಿವಾಸಿಗಳ ಸಹಕಾರದಿಂದ ಬೆಂಕಿಯನ್ನು ನಂದಿಸಲಾಗಿದೆ. ವ್ಯಾಪಕವಾಗಿ ಬೆಂಕಿ ಹರಡುವ ಸಾಧ್ಯತೆ ಇತ್ತು. ಆದರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.