Tag: dubai

  • ಕುಲ್ದೀಪ್‌ ಸ್ಪಿನ್ ಮೋಡಿ; ಪಾಕಿಸ್ತಾನ ಆಲೌಟ್‌ – ಭಾರತ ಗೆಲುವಿಗೆ 147 ರನ್‌ಗಳ ಗುರಿ

    ಕುಲ್ದೀಪ್‌ ಸ್ಪಿನ್ ಮೋಡಿ; ಪಾಕಿಸ್ತಾನ ಆಲೌಟ್‌ – ಭಾರತ ಗೆಲುವಿಗೆ 147 ರನ್‌ಗಳ ಗುರಿ

    ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ 2025 ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅಬ್ಬರಿಸಿದ್ದಾರೆ. ಪಾಕ್‌ ಆಲೌಟ್‌ ಆಗಿದ್ದು, ಟೀಂ ಇಂಡಿಯಾ ಗೆಲುವಿಗೆ 147 ರನ್‌ಗಳ ಗುರಿ ನೀಡಿದೆ.

    ಭಾನುವಾರದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಭಾರತ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಿಂದ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅಂತಿಮವಾಗಿ 19.1 ಓವರ್‌ಗೆ ಪಾಕ್‌ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿದೆ.

    ಆರಂಭಿಕರಾಗಿ ಕಣಕ್ಕಿಳಿದ ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್ ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಫರ್ಹಾನ್‌ 38 ಬಾಲ್‌ಗೆ ಅರ್ಧಶತಕ (57 ರನ್) ಗಳಿಸಿದರು. ವರುಣ್‌ ಚಕ್ರವರ್ತಿ 9ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಪಡೆಯುವ ಮೂಲಕ ಜೊತೆಯಾಟಕ್ಕೆ ಬ್ರೇಕ್‌ ಹಾಕಿದರು.

    ತಂಡದ ಮೊತ್ತ 113 ಇದ್ದಾಗ ಸೈಮ್ ಅಯೂಬ್ ಔಟಾದರು. ಈ ಮಧ್ಯೆ ಜಮಾನ್‌ಗೆ ಯಾವೊಬ್ಬ ಬ್ಯಾಟರ್‌ ಕೂಡ ಸಾಥ್‌ ನೀಡಲಿಲ್ಲ. ನಂತರ ಬಂದ ಮೊಹಮ್ಮದ್ ಹ್ಯಾರಿಸ್ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದರು. 46 ರನ್‌ ಗಳಿಸಿದ್ದ ಜಮಾನ್‌ ಕ್ಯಾಚ್‌ ನೀಡಿ ಔಟಾದರು.

    ಆರಂಭದಲ್ಲಿ ರನ್‌ ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಬೌಲರ್‌ಗಳು ನಂತರ ಪಾಕ್‌ ವಿರುದ್ಧ ಆರ್ಭಟಿಸಿದರು. ಬ್ಯಾಟರ್‌ಗಳ ಬೆವರಿಳಿಸಿದರು. ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಯಾರೊಬ್ಬರು ಕೂಡ ಒಂದಂಕಿ ರನ್‌ ದಾಟಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ 19.1 ಓವರ್‌ಗೆ ಆಲೌಟ್‌ ಆಗಿ 146 ರನ್‌ ಗಳಿಸಿತು.

    ಟೀಂ ಇಂಡಿಯಾ ಪರ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಜಾದು ಮಾಡಿದರು. ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತು ಮಿಂಚಿದರು. ಜಸ್ಪ್ರಿತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರು.

  • ಇಂದು ಭಾರತ- ಪಾಕ್ ಮತ್ತೆ ಮುಖಾಮುಖಿ; ಸೂಪರ್ 4 ಪಂದ್ಯಕ್ಕೂ ಪೈಕ್ರಾಫ್ಟ್ ಮ್ಯಾಚ್ ರೆಫರಿ

    ಇಂದು ಭಾರತ- ಪಾಕ್ ಮತ್ತೆ ಮುಖಾಮುಖಿ; ಸೂಪರ್ 4 ಪಂದ್ಯಕ್ಕೂ ಪೈಕ್ರಾಫ್ಟ್ ಮ್ಯಾಚ್ ರೆಫರಿ

    – ಶೇಕ್ ಹ್ಯಾಂಡ್ ಕಾಂಟ್ರವರ್ಸಿಗೆ ಇಂದು ಮತ್ತಷ್ಟು ಕಿಚ್ಚು

    ಬೆಂಗಳೂರು/ದುಬೈ: ಏಷ್ಯಾಕಪ್‌ನಲ್ಲಿ (Asia Cup 2025) ಭಾರತ- ಪಾಕ್ (Ind VS Pak) ಇಂದು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಇಂದು ಭಾರತ ಪಾಕ್ ನಡುವೆ ಹೈವೋಲ್ಟೇಜ್ ಸೂಪರ್ 4 ಮ್ಯಾಚ್ ನಡೆಯಲಿದೆ. ಕಳೆದ ಬಾರಿ ಭಾರೀ ಹೈಡ್ರಾಮಕ್ಕೆ ಕಾರಣವಾಗಿದ್ದ ದುಬೈ ಕ್ರೀಡಾಂಗಣದಲ್ಲೇ (Dubai Stadium) ಮತ್ತೆ ಭಾರತ-ಪಾಕ್ ಸೆಣಸಾಡಲಿದೆ. ಈ ಪಂದ್ಯಕ್ಕೂ ಮ್ಯಾಚ್ ರೆಫರಿಯಾಗಿ ಆ್ಯಂಡಿ ಪೈಕ್ರಾಫ್ಟ್ (Andy Pycroft) ಮುಂದುವರೆಯಲಿದ್ದಾರೆ ಎನ್ನಲಾಗಿದೆ.

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕ್ರಿಕೆಟ್ ಮೂಲಕವೂ ಪ್ರತಿಕಾರ ತೀರಿಸಿಕೊಂಡ ಭಾರತ, ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದೇ ಜಗತ್ತಿನ ಮುಂದೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿತ್ತು. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗಿ ಅವಮಾನಕ್ಕೀಡಾಗಿತ್ತು. ಐಸಿಸಿ ನಿಯಮಗಳನ್ನ ಮ್ಯಾಚ್ ರೆಫರಿ ಉಲ್ಲಂಘಿಸಿದ್ದಾರೆ. ಭಾರತದ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆಯಲಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಐಸಿಸಿಗೆ ದೂರು ನೀಡಿತ್ತು. ಎಲ್ಲಾ ಕಡೆಯಿಂದಲೂ ಪಾಕ್‌ಗೆ ಅವಮಾನವಾಗಿತ್ತು. ಇದೀಗ ಭಾರತದ ವಿರುದ್ಧ ಗೆದ್ದು ಬೀಗಲು ಸರ್ವಪ್ರಯತ್ನ ಮಾಡುತ್ತಿದೆ. ಆದರೆ ಭಾರತ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ತಯಾರಿ ನಡೆಸಿಕೊಂಡಿದೆ.

    ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕ. ಭಾರತ ಟಾಸ್ ಗೆದ್ದು ಪಾಕ್ ಬೌಲರ್‌ಗಳಿಗೆ ಬೆವರಿಳಿಸಲು ಸಜ್ಜಾಗಿದೆ. ಯಾವ್ಯಾವ ಬ್ಯಾಟರ್‌ಗಳ ಪಾತ್ರ ಏನು ಎಂಬುದನ್ನ ಲೆಕ್ಕಚಾರ ಮಾಡಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಲು ತಂಡದ ಆಟಗಾರರು ಉತ್ಸುಕರಾಗಿದ್ದಾರೆ. ಭಾರತದ ಈ ಸ್ಟ್ರಾಟಜಿಗೆ ಪಾಕ್‌ನ ಆಟಗಾರರು ಕೂಡ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ.

  • ಮೈದಾನದಲ್ಲೇ ಪಾಕ್‌ನ ಮಾನ ಕಳೆದ ಟೀಮ್‌ ಇಂಡಿಯಾ

    ಮೈದಾನದಲ್ಲೇ ಪಾಕ್‌ನ ಮಾನ ಕಳೆದ ಟೀಮ್‌ ಇಂಡಿಯಾ

    ದುಬೈ: ಪಹಲ್ಗಾಮ್ ಟೆರರ್ ಅಟ್ಯಾಕ್‌ನಲ್ಲಿ (Pahalgam Terror Attack) ಮಡಿದ ಕುಟುಂಬಗಳ ಜೊತೆ ನಾವಿದ್ದೀವಿ. ಅಪರಿಮಿತ ಶೌರ್ಯ ಪ್ರದರ್ಶಿಸಿದ ಸೇನೆಗೆ ಈ ಗೆಲುವು ಅರ್ಪಣೆ ಅಂತಾ ಭಾರತ ಕ್ಯಾಪ್ಟನ್‌ ಸೂರ್ಯಕುಮಾರ್ ಯಾದವ್ (Suryakumar Yadav)  ಪಾಕ್‌ನ ಮಾನ ಕಳೆದಿದ್ದಾರೆ. ಇಡೀ ಪಂದ್ಯದುದ್ದಕ್ಕೂ ಪಾಕ್ ಆಟಗಾರರ ಕೈ ಕುಲುಕದೆ ಪಹಲ್ಗಾಮ್ ಕೃತ್ಯಕ್ಕೆ ಆಟಗಾರರು ಸೇಡು ತೀರಿಸಿಕೊಂಡಿದ್ದಾರೆ.

    ಭಾನುವಾರ ದುಬೈನಲ್ಲಿ (Dubai) ನಡೆದ ಏಷ್ಯಾ ಕಪ್ (Asia Cup) ಕ್ರಿಕೆಟ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸುಲಭ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಪಾಕ್, ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಕೈ ಚಳಕದ ಮುಂದೆ 20 ಓವರ್‌ಗಳಲ್ಲಿ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 15.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಸುಲಭ ಜಯಗಳಿಸಿತು. ಆದರೆ ಇಡೀ ಪಂದ್ಯದುದ್ದಕ್ಕೂ ದುಬೈ ಅಂಗಳದಲ್ಲಿ ಭಾರತ ಪಾಕ್‌ನ ಮಾನ ಕಳೆಯುವ ಕೆಲಸವನ್ನೂ ಮಾಡ್ತಾನೇ ಬಂತು. ಇದನ್ನೂ ಓದಿ: ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

    ಪಂದ್ಯ ನಡೀವಾಗ್ಲೂ ಪರಸ್ಪರ ಮಾತಿಲ್ಲ

    ಎಷ್ಟೇ ವೈರತ್ವವಿದ್ದರೂ ಪಂದ್ಯದ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಒಂದೆರಡು ಬಾರಿಯಾದರೂ ಮಾತುಕತೆ ನಡೆಯುತ್ತದೆ. ಒಬ್ಬರನ್ನೊಬ್ಬರು ಕಿಚಾಯಿಸುವುದು, ಕಾಲೆಳೆಯುವುದು, ಬೈದುಕೊಳ್ಳುವುದು, ಗುರಾಯಿಸುವುದು ಇದ್ದಿದ್ದೇ. ಆದರೆ ಭಾನುವಾರದ ಪಂದ್ಯದಲ್ಲಿ ಇದಾವುದು ಕಾಣಿಸಿಲ್ಲ. ಪಂದ್ಯದ ವೇಳೆ ಭಾರತ ತಂಡದ ಆಟಗಾರರು ಪಾಕಿಸ್ತಾನ ಆಟಗಾರರ ಜೊತೆ ಮಾತಾಡುವುದಿರಲಿ, ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ.

    ಪಾಕ್‌ನ ಅಭಿನಂದನೆ ಸ್ವೀಕರಿಸದ ಭಾರತ

    ಸಿಕ್ಸ‌ರ್ ಸಿಡಿಸುವ ಗೆಲುವು ದಾಖಲಿಸಿದ ಬಳಿಕ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌, ಪಾಕಿಗಳಿಗೆ ಹ್ಯಾಂಡ್‌ ಶೇಕ್ ಮಾಡದೆ ತಮ್ಮ ಜೊತೆಗಾರ ದುಬೆ ಜೊತೆ ಪೆವಿಲಿಯನ್‌ಗೆ ತೆರಳಿದರು. ಟೀಮ್‌ ಇಂಡಿಯಾದ ಯಾವುದೇ ಆಟಗಾರರು ಡ್ರೆಸ್ಸಿಂಗ್ ರೂಂನಿಂದ ಇಳಿದು ಕೆಳಕ್ಕೇ ಬರಲಿಲ್ಲ. ಭಾರತೀಯರನ್ನು ಅಭಿನಂದಿಸಲು ಪಾಕ್ ಆಟಗಾರರು ಮೈದಾನದಲ್ಲೇ ಕಾಯುತ್ತಾ ನಿಂತಿದ್ದರು. ಆದರೆ ಭಾರತೀಯರೆಲ್ಲರೂ ಡ್ರೆಸ್ಸಿಂಗ್ ರೂಂ ಒಳಕ್ಕೆ ಹೋಗಿ, ಬಾಗಿಲು ಬಂದ್ ಮಾಡಿಕೊಂಡರು.

    ಸ್ಟೇಡಿಯಂನಲ್ಲಿ ಪಾಕ್ ರಾಷ್ಟ್ರಗೀತೆ ಬದಲು ʻಜಿಲೇಬಿ ಬೇಬಿʼ ಪ್ರಸಾರ

    ಪಂದ್ಯಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಪ್ರತಿ ಪಂದ್ಯದಲ್ಲೂ ನಾವು ನೋಡಿದ್ದೇವೆ. ಆದರೆ ನಿನ್ನೆ ನಡೆದ ಪಂದ್ಯದ ವೇಳೆ ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಪ್ರಸಾರವಾಗಿದ್ದು, ಇದರಿಂದ ಪಾಕ್ ಆಟಗಾರರು ಮುಜುಗರಕ್ಕೀಡಾದರು. ಪಾಕಿಸ್ತಾನದ ರಾಷ್ಟ್ರಗೀತೆ ಪ್ರಸಾರಕ್ಕೂ ಮುನ್ನ ಮೈದಾನದಲ್ಲಿ ‘ಜಿಲೇಬಿ ಬೇಬಿ’ ಹಾಡು 6 ಸೆಕೆಂಡ್ ಪ್ರಸಾರವಾಗಿದೆ. ಬಳಿಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಆಯೋಜಕರು, ಪಾಕ್ ರಾಷ್ಟ್ರ ಗೀತೆಯನ್ನು ಪ್ರಸಾರ ಮಾಡಿದ್ದಾರೆ. ಆದರೆ ಈ ಯಡವಟ್ಟಿನ ವೀಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬರ್ತ್‌ಡೇ ದಿನವೇ ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ ಸಿಹಿ ಕೊಟ್ಟ ನಾಯಕ ಸೂರ್ಯ

    ಇದಲ್ಲದೇ ಟಾಸ್ ವೇಳೆ ಸೂರ್ಯಕುಮಾರ್‌ ಯಾದವ್‌, ಪಾಕ್ ನಾಯಕನಿಗೆ ಹ್ಯಾಂಡ್‌ ಶೇಕ್‌ ಮಾಡದೇ ತೆರಳಿದ್ದರು. ಪಂದ್ಯದ ಗೆಲುವಿನ ಬಳಿಕವೂ ಪಾಕ್ ಆಟಗಾರರ ಕೈ ಕುಲುಕದೆ ಸೂರ್ಯಕುಮಾರ್ ಯಾದವ್ ಹಾಗು ಶಿವಂ ದುಬೆ ಸೀನ್ ಡ್ರೆಸ್ಸಿಂಗ್ ರೂಂ ಕಡೆ ಮುಖ ಮಾಡಿದ್ದರು. ಪಾಕ್ ಆಟಗಾರರನ್ನ ಗ್ರೌಂಡ್‌ನಲ್ಲೇ ಕಾಯುವಂತೆ ಮಾಡಿ ಪ್ರತೀಕಾರ ಟೀಮ್‌ ಇಂಡಿಯಾ ಆಟಗಾರರು. ಬಹುಮಾನ ವಿತರಣೆ ವೇಳೆ ಪಾಕ್ ಜೆರ್ಸಿ ತೊಟ್ಟಿದ್ದ ಮಹಿಳೆಗೂ ಟೀಮ್‌ ಇಂಡಿಯಾ ಆಟಗಾರರು ಶೇಕ್‌ ಮಾಡಿರಲಿಲ್ಲ. ಸಂದರ್ಶನದ ಬಳಿಕ ಪಹಲ್ಗಾಮ್ ದಾಳಿಯಲ್ಲಿ ಮಡಿದವರ ಸಂತ್ರಸ್ತ ಕುಟುಂಬಗಳ ಜೊತೆ ನಾವಿದ್ದೀವಿ. ಈ ಗೆಲುವು ಶೌರ್ಯ ಪ್ರದರ್ಶಿಸಿದ ಸೇನೆಗೆ ಅರ್ಪಿಸ್ತೇನೆ ಅಂತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಹರ್ಷೋಧ್ಘಾರ ವ್ಯಕ್ತಪಡಿಸಲಾಯ್ತು.

    ಪಾಪಿ ಪಾಕ್ ವಿರುದ್ಧ ಮ್ಯಾಚ್ ಆಡಬಾರದು ಅನ್ನೊ ವಿರೋಧಗಳ ನಡುವೆ ಟೀಂ ಇಂಡಿಯಾ ಆಟಗಾರರು ಹಾಗೂ ಕ್ಯಾಪ್ಟನ್ ಸೂರ್ಯ, ಕ್ರಿಕೆಟ್ ಜಗತ್ತಿನ ಮುಂದೆ ಪಾಕ್‌ನ ಮಾನ ಕಳೆದಿದ್ದಾರೆ. ಪಹಲ್ಗಾಮ್ ಟೆರರ್ ಅಟ್ಯಾಕ್‌ನ ಸೂತ್ರಧಾರರು ಪಾಕಿಗಳು ಅಂತ ಬೆತ್ತಲು ಮಾಡಿದ್ದಾರೆ. ಟೀಂ ಇಂಡಿಯಾ ಪ್ಲೇಯರ್ಸ್‌ಗಳ ಈ ನಡೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

  • ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

    ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

    ದುಬೈ: ಇಲ್ಲಿನ ನಡೆದ ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಅರ್ಪಿಸಿದ್ದಾರೆ.

    ಪಂದ್ಯ ಗೆದ್ದ ಬಳಿಕ ಮಾತನಾಡಿದ ಸೂರ್ಯಕುಮಾರ್, ಇದೊಂದು ಪರಿಪೂರ್ಣ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.

    ಟಾಸ್‌ ಸಮಯದಲ್ಲಿ ಪಾಕ್‌ ನಾಯಕನಿಗೆ ಹಸ್ತಾಲಾಘವ ಮಾಡಲು ಭಾರತ ತಂಡದ ನಾಯಕ ಸೂರ್ಯಕುಮಾರ್‌ ನಿರಾಕರಿಸಿದರು. ಕೊನೆಗೆ ವಿನ್ನಿಂಗ್ ಶಾಟ್ ಬಾರಿಸಿ ಸಹಪಾಠಿ ಶಿವಂ ದುಬೆಗೆ ಮಾತ್ರ ಹ್ಯಾಂಡ್‌ಶೇಕ್ ಮಾಡಿದ ಸೂರ್ಯ, ಪಾಕ್‌ ಆಟಗಾರರಿಗೆ ಹಸ್ತಾಲಾಘವ ಮಾಡದೇ ಹೊರಟರು.

    ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಮಾರಕ ಮತ್ತು ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಜೀವಗಳು ಬಲಿಯಾದವು. ಇದರ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ಘಟನೆಗಳಾದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾಗಿವೆ.

  • India vs Pakistan: ಟಾಸ್‌ ಬಳಿಕ ಪಾಕ್‌ ನಾಯಕನಿಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌

    India vs Pakistan: ಟಾಸ್‌ ಬಳಿಕ ಪಾಕ್‌ ನಾಯಕನಿಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌

    – ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನ

    ದುಬೈ: ಪಹಲ್ಗಾಮ್‌ ಭಯೋತ್ಪಾದಕ ದಾಳಿ, ಭಾರತದ ಆಪರೇಷನ್‌ ಸಿಂಧೂರ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಎಷ್ಯಾ ಕಪ್‌ 2025ರ ಗ್ರೂಪ್‌ ಎ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ದುಕೊಂಡಿದೆ.

    ಟಾಸ್‌ ಸಮಯದಲ್ಲಿ ಮೈದಾನದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಟಾಸ್‌ ಬಳಿಕ ಭಾರತದ ನಾಯಕ ಸೂರ್ಯಕುಮಾರ್‌ ಯಾದವ್‌, ಪಾಕ್‌ ಕ್ಯಾಪ್ಟನ್‌ ಸಲ್ಮಾನ್‌ ಅಲಿ ಅಘಾ ಕೈ ಕುಲುಕಲಿಲ್ಲ. ಪಾಕ್‌ ಕ್ಯಾಪ್ಟನ್‌ ಕಡೆ ನೋಡದೇ ಸೂರ್ಯಕುಮಾರ್‌ ಮುಂದೆ ಸಾಗಿದ ಪ್ರಸಂಗ ನಡೆಯಿತು. ಸಾಮಾನ್ಯವಾಗಿ ಕ್ರಿಕೆಟ್‌ ಪಂದ್ಯಗಳಲ್ಲಿ ನಾಯಕರು ಟಾಸ್ ಸಮಯದಲ್ಲಿ ಕೈಕುಲುಕುವುದು ವಾಡಿಕೆ.

    ಭಾರತ ಆಟಗಾರರು: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ಸಿ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ಪ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

    ಪಾಕಿಸ್ತಾನ ಆಟಗಾರರು: ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್(ಡಬ್ಲ್ಯೂ), ಫಖರ್ ಜಮಾನ್, ಸಲ್ಮಾನ್ ಅಘಾ(ಸಿ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಖೀಮ್, ಅಬ್ರಾರ್ ಅಹ್ಮದ್.

  • ದುಬೈನಲ್ಲಿ ಇಂಡಿಯಾ-ಪಾಕ್ ಮ್ಯಾಚ್‌ನ ಟಿಕೆಟ್ ಅನ್ ಸೋಲ್ಡ್!

    ದುಬೈನಲ್ಲಿ ಇಂಡಿಯಾ-ಪಾಕ್ ಮ್ಯಾಚ್‌ನ ಟಿಕೆಟ್ ಅನ್ ಸೋಲ್ಡ್!

    ಬೆಂಗಳೂರು: ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ (India Pakistan Match) ಅಂದ್ರೆ ಜನ್ರಿಗೆ ಹಬ್ಬದ ವಾತಾವರಣ. ಬದ್ದ ವೈರಿಗಳ ಕಾದಾಟಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಓಪನ್ ಆದ ಕೆಲವೇ ಗಂಟೆಯಲ್ಲಿ ಸೋಲ್ಡ್‌ಔಟ್‌ ಆಗ್ತಿತ್ತು. ಆದ್ರೆ ಈ ಬಾರಿ ಇಂಡಿಯಾ-ಪಾಕ್ ಮ್ಯಾಚ್ ಟಿಕೆಟ್ ಅನ್ ಸೋಲ್ಡ್ ಆಗಿದೆ ಎನ್ನಲಾಗುತ್ತಿದೆ.

    ಕ್ರಿಕೆಟ್ ಅಭಿಮಾನಿಗಳಂತೂ ಇಂಡೋ-ಪಾಕ್ ಮ್ಯಾಚ್‌ನ ಟಿಕೆಟ್ ಅನ್ನು ಬ್ಲಾಕ್‌ನಲ್ಲಿ 100 ಪಟ್ಟು ಹೆಚ್ಚುವರಿ ಹಣ ಕೊಟ್ಟ ಸಹ ಖರೀದಿ ಮಾಡ್ತಿದ್ರು. ಆದ್ರೆ ಪಹಲ್ಗಾಮ್ ದಾಳಿ ಬಳಿಕ ಇಂಡೋ-ಪಾಕ್ ಮ್ಯಾಚ್ ನೋಡದಿರಲು ಕೆಲ ಸಂಘಟನೆಗಳು ಕರೆ ನೀಡಿವೆ. ದೇಶದ ಜನ ಕೂಡ ಪಾಕ್ ವಿರುದ್ಧ ಮ್ಯಾಚ್ ಆಡಬಾರದಿತ್ತು ಅನ್ನೋ ಅಭಿಪ್ರಾಯವನ್ನೂ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಕದನಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ – ಗಿಲ್‌ಗೆ ಗಾಯ

    ಇನ್ನೂ ಆನ್‌ಲೈನ್‌ನಲ್ಲಿ ಈ ಮ್ಯಾಚ್‌ನ ಟಿಕೆಟ್ ಸಿಕ್ತಿದ್ದು, ಖರೀದಿಗೆ ಭಾರತೀಯರು ನಿರಾಸಕ್ತಿ ತೋರಿದ್ದಾರೆ. ದುಬೈನ ಸ್ಟೇಡಿಯಂನಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿಲ್ಲ. ಇದಕ್ಕೆ ಒಂದು ಮ್ಯಾಚ್ ನೋಡಬಾರದು ಅನ್ನೋ ನಿರ್ಧಾರ ಒಂದು ಕಾರಣ ಆದ್ರೆ, ಇನ್ನೂ ದುಬೈನಲ್ಲಿ ಟಿಕೆಟ್ ದರವನ್ನ ದುಬಾರಿ ಮಾಡಿರೋದು ಕೂಡ ಒಂದು ಕಾರಣ ಅಂತ ಹೇಳಲಾಗ್ತಿದೆ. ಅಲ್ಲದೆ ಪೆಹಲ್ಗಾಮ್ ದಾಳಿಯ ಸಂತ್ರಸ್ಥೆಯೊಬ್ಬರು ಟಿವಿಯಲ್ಲೂ ಈ ಮ್ಯಾಚ್ ನೋಡದಿರುವಂತೆ ಸಹ ಕರೆ ನೀಡಿದ್ದಾರೆ.

  • SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ

    SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ

    ಗೌರಿ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ, ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಸಮರ್ಜಿತ್ ಲಂಕೇಶ್ (Samarjit Lankesh) ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. `ಗೌರಿ’ ಚಿತ್ರಕ್ಕಾಗಿ (Gowri Cinema) ಸೈಮಾ (SIIMA Award) ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಹಾಗೂ ಅತ್ಯುತ್ತಮ ಉದಯೋನ್ಮುಖ ನಟನಿಗಾಗಿ ಲುಮಿಯರ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ ಸಮರ್ಜಿತ್.

    ಉದಯೋನ್ಮುಖ ನಟ ಸಮರ್ಜಿತ್ ಲಂಕೇಶ್ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ. ಸತತವಾಗಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಭರವಸೆಯ ಹೊಸ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ. ಇದೀಗ ಸಮರ್ಜಿತ್ ಬಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ದುಬೈನಲ್ಲಿ ನಡೆದ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025ರ ಸಮಾರಂಭದಲ್ಲಿ ಸಮರ್ಜಿತ್ ತಮ್ಮ ಪ್ರಥಮ ಚಿತ್ರ `ಗೌರಿ’ಯಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ (ಕನ್ನಡ) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ಈ ಭರವಸೆಯ ಹೆಜ್ಜೆ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: `ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?

     ದುಬೈನಲ್ಲಿ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಸಮರ್ಜಿತ್ ಅವರು ಅವಾರ್ಡ್ ಹಿಡಿದು ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ.

  • ಬೆಂಗಳೂರು | ಪ್ಯಾಸೆಂಜರ್ ಬ್ಯಾಗ್‌ಗೆ ಗೋಲ್ಡ್ ಬಿಸ್ಕೆಟ್ ಅಂಟಿಸಿ ಸ್ಮಗ್ಲರ್ ಎಸ್ಕೇಪ್ – 3.5 ಕೆಜಿ ಚಿನ್ನ ಪತ್ತೆ

    ಬೆಂಗಳೂರು | ಪ್ಯಾಸೆಂಜರ್ ಬ್ಯಾಗ್‌ಗೆ ಗೋಲ್ಡ್ ಬಿಸ್ಕೆಟ್ ಅಂಟಿಸಿ ಸ್ಮಗ್ಲರ್ ಎಸ್ಕೇಪ್ – 3.5 ಕೆಜಿ ಚಿನ್ನ ಪತ್ತೆ

    ಬೆಂಗಳೂರು: ದುಬೈ (Dubai) ಪ್ಯಾಸೆಂಜರ್ ಬ್ಯಾಗ್‌ಗೆ 3.5 ಕೆಜಿ ಚಿನ್ನದ ಬಿಸ್ಕೆಟ್ ಅಂಟಿಸಿ, ಗೋಲ್ಡ್ ಸ್ಮಗ್ಲರ್ ಪರಾರಿಯಾಗಿರುವ ಘಟನೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಡೆದಿದೆ.

    ಬ್ಯಾಗ್ ಮಾಲೀಕ ತನ್ನ ಟ್ರ್ಯಾಲಿಯನ್ನು ಎಳೆದುಕೊಂಡು ಹೋಗುವಾಗ ಚಿನ್ನ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಮಾಲೀಕ ಚಿನ್ನದ ಬ್ಯಾಗ್‌ನ್ನು ಡಿಆರ್‌ಐ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿದ್ದಾನೆ. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ 3.5 ಕೆಜಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ.ಇದನ್ನೂ ಓದಿ: ಬಿಹಾರ ಮಾತ್ರವಲ್ಲ ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗ

    ಅಧಿಕಾರಿಗಳು ಮಾಲೀಕನ ವಿಚಾರಣೆ ನಡೆಸಿದಾಗ ಚಿನ್ನಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗ ಆಗಿದೆ. ಬಳಿಕ ಸ್ಮಗ್ಲರ್, ಪ್ರಯಾಣಿಕನ ಬ್ಯಾಗ್‌ಗೆ ಚಿನ್ನ ಅಂಟಿಸಿ ಪರಾರಿಯಾಗಿರುವುದು ತಿಳಿದುಬಂದಿದೆ.

    ಸದ್ಯ ಡಿಆರ್‌ಐ ಅಧಿಕಾರಿಗಳು (DRI Officers) ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸ್ಮಗ್ಲರ್‌ಗಾಗಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ:ಸದ್ಯಕ್ಕೆ ಮುಡಾ ಸೈಟ್ ವಾಪಸ್ ಕೇಳಲ್ಲ: ಸಿಎಂ ಪುತ್ರ ಯತೀಂದ್ರ ಸ್ಪಷ್ಟನೆ

  • ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ – ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?

    ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ – ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?

    ಢಾಕಾ: ಏಷ್ಯಾ ಕಪ್ (Asia Cup) ಆಯೋಜಿಸಲು ಬಿಸಿಸಿಐ (BCCI) ಒಪ್ಪಿಗೆ ನೀಡಿದ್ದು ಸೆಪ್ಟೆಂಬರ್‌ನಲ್ಲಿ ದುಬೈ ಮತ್ತು ಅಬುಧಾಬಿಯಲ್ಲಿ ಪಂದ್ಯ ನಡೆಸುವ ಪ್ರಸ್ತಾಪ ಇರಿಸಿದೆ ಎಂದು ವರದಿಯಾಗಿದೆ.

    ಗುರುವಾರ ಢಾಕಾದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಾರ್ಷಿಕ ಸಭೆಯಲ್ಲಿ (ಎಜಿಎಂ) ಏಷ್ಯಾ ಕಪ್ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ವರ್ಚುವಲ್ ಆಗಿ ಭಾಗವಹಿಸಿದ್ದರು. ಸದ್ಯಕ್ಕೆ ಪಂದ್ಯಕ್ಕಾಗಿ ದುಬೈ ಮತ್ತು ಅಬುಧಾಬಿಯನ್ನು ಆಯ್ಕೆ ಮಾಡಿದ್ದು, ಒಂದೇ ಸ್ಥಳದಲ್ಲಿ ಪಂದ್ಯ ಆಯೋಜಿಸುವಂತೆ ಇಚ್ಛೆ ವ್ಯಕ್ತಪಡಿಸಿದೆ.ಇದನ್ನೂ ಓದಿ: 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

    ಮೂಲಗಳ ಪ್ರಕರ ಒಂದೇ ವಿಭಾಗದಲ್ಲಿ ಭಾರತ ಮತ್ತು ಪಾಕ್ ಬರುವ ಸಾಧ್ಯತೆಯಿದೆ. ಬಿಸಿಸಿಐ ಮೂರು ಸ್ಥಳಗಳಲ್ಲಿ ಪಂದ್ಯ ನಡೆಸುವ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಏಷ್ಯಾ ಕಪ್‌ಗಾಗಿ ಕೇವಲ ಎರಡು ಸ್ಥಳಗಳನ್ನು ಮಾತ್ರ ಬಳಸಿಕೊಳ್ಳುವ ನಿರೀಕ್ಷೆಯಿದೆ. ಸದ್ಯದಲ್ಲೇ ಕ್ರಿಕೆಟ್ ವೇಳಾಪಟ್ಟಿ ಫೈನಲ್ ಆಗುವ ಸಾಧ್ಯತೆಗಳಿದ್ದು, ಬಿಸಿಸಿಐ ಧನದಾಹಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ದೇಶಕ್ಕಿಂತ ಹಣವೇ ಮುಖ್ಯವಾಯ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಪಹಲ್ಗಾಮ್ ದಾಳಿಯ ಬಳಿಕ ಭಾರತ ಏಷ್ಯಾ ಕಪ್‌ನಲ್ಲಿ ಭಾಗವಹಿಸುವುದಿಲ್ಲ ಹಾಗೂ ಆತಿಥ್ಯ ವಹಿಸುವುದಿಲ್ಲ ಎಂದು ಮೇ ತಿಂಗಳಲ್ಲಿ ಮೂಲಗಳು ತಿಳಿಸಿದ್ದವು.ಇದನ್ನೂ ಓದಿ: DCC Bank Election| ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

  • ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ – ಆರೋಪಿ ಜಗ್ಗ ದುಬೈಗೆ ಎಸ್ಕೇಪ್

    ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ – ಆರೋಪಿ ಜಗ್ಗ ದುಬೈಗೆ ಎಸ್ಕೇಪ್

    ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣದ (Biklu Shiva Murder Case) ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಹತ್ಯೆ ಬಳಿಕ ದುಬೈಗೆ ಎಸ್ಕೇಪ್ ಆಗಿದ್ದಾನೆ.

    ಶಿವಪ್ರಕಾಶ್ ಕೊಲೆಯಾದ ಎರಡೇ ದಿನದಲ್ಲಿ ಜಗದೀಶ್ ಬೆಂಗಳೂರಿನಿಂದ ಚೆನ್ನೈಗೆ ಹೋಗಿ ಅಲ್ಲಿಂದ ದುಬೈಗೆ ಎಸ್ಕೇಪ್ ಆಗಿರುವ ಬಗ್ಗೆ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿವೆ. ಜಗದೀಶ್ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ತೀವ್ರ ಹುಡುಕಾಟ ನಡೆಸಿದೆ. ಇದನ್ನೂ ಓದಿ: ಮನೆಯಲ್ಲಿನ ಫ್ರಿಡ್ಜ್‌ ಸ್ಫೋಟ -ತಪ್ಪಿತು ಭಾರೀ ಅನಾಹುತ

    ಕೊಲೆ ಪ್ರಕರಣದಲ್ಲಿ ಜಗದೀಶ್ ಬಂಧನವೇ ಅತಿಮುಖ್ಯವಾಗಿತ್ತು. ಈ ನಡುವೆ ಜಗದೀಶ್ ವಿದೇಶಕ್ಕೆ ಎಸ್ಕೇಪ್ ಆಗಿರೋದು ಪೊಲೀಸರ ತನಿಖೆಗೆ ಹಿನ್ನಡೆಯಾಗಿದೆ. ಜಗದೀಶ್ ಪತ್ತೆಗಾಗಿ ಪೊಲೀಸರು ಈಗಾಗಲೇ ಲುಕೌಟ್ ನೋಟಿಸ್ ಜಾರಿ ಮಾಡಿದ್ದು, ವಿದೇಶದಿಂದ ಕರೆಸಿಕೊಳ್ಳಲು ಕೇಂದ್ರ ಗೃಹ ಇಲಾಖೆಯಿಂದ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಜಗದೀಪ್ ಧನಕರ್ ಆರೋಗ್ಯ ಚೆನ್ನಾಗಿದೆ, ಬಿಜೆಪಿ ಆರೋಗ್ಯವೇ ಚೆನ್ನಾಗಿಲ್ಲ: ಡಾ. ಶರಣಪ್ರಕಾಶ್ ಪಾಟೀಲ್