Tag: DS Hoolageri

  • ಫಲಿತಾಂಶಕ್ಕೂ ಮುನ್ನ ಆಪರೇಷನ್ ಕಮಲ?- ಕುತೂಹಲ ಮೂಡಿಸಿದ ಕೈ ಶಾಸಕ, ಡಿಸಿಎಂ ಭೇಟಿ

    ಫಲಿತಾಂಶಕ್ಕೂ ಮುನ್ನ ಆಪರೇಷನ್ ಕಮಲ?- ಕುತೂಹಲ ಮೂಡಿಸಿದ ಕೈ ಶಾಸಕ, ಡಿಸಿಎಂ ಭೇಟಿ

    ರಾಯಚೂರು: ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮತ್ತೊಮ್ಮೆ ಆಪರೇಶನ್ ಕಮಲದ ಯೋಚನೆಯಲ್ಲಿದೆಯಾ ಅನ್ನೋ ಅನುಮಾನಗಳು ಮೂಡುತ್ತಿದೆ.

    ಇದಕ್ಕೆ ಪುಷ್ಠಿ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಯಚೂರಿನ ಲಿಂಗಸುಗೂರು ಕಾಂಗ್ರೆಸ್ ಶಾಸಕ ಡಿ.ಎಸ್.ಹುಲಿಗೇರಿಯನ್ನ ಭೇಟಿಯಾಗಿ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಡಿಸಿಎಂ ಪುತ್ರ ಉಮೇಶ್ ಕಾರಜೋಳ ಡಿ.ಎಸ್.ಹುಲಿಗೇರಿ ಜೊತೆ ಸಮಾಲೋಚನೆ ನಡೆಸಿರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಗೋವಿಂದ ಕಾರಜೋಳ, ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ, ನೆರೆ ಪರಿಹಾರ ಕಾರ್ಯದ ಬಗ್ಗೆ ವಿವರಿಸುತ್ತ ಡಿ.ಎಸ್.ಹುಲಿಗೇರಿಯವರನ್ನ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಮೊದಲಿಗೆ ಡಿ.ಎಸ್.ಹುಲಿಗೇರಿ ಅವರ ಲಿಂಗಸುಗೂರಿನ ಮುದಗಲ್ ನಿವಾಸದಲ್ಲಿ ಗೋವಿಂದ ಕಾರಜೋಳ ಭೇಟಿಯಾಗಿದ್ದರು. ಬಳಿಕ ಉಮೇಶ್ ಕಾರಜೋಳ ಎರಡು ದಿನಗಳ ಹಿಂದೆ ಡಿ.ಎಸ್.ಹುಲಿಗೇರಿಯನ್ನ ಭೇಟಿಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಈ ಹಿಂದೆಯೂ ಡಿ.ಎಸ್.ಹುಲಿಗೇರಿ ಬಿಜೆಪಿ ಹೋಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಶಾಸಕ ಡಿ.ಎಸ್.ಹುಲಿಗೇರಿ ಪಕ್ಷಬಿಡುವುದಿಲ್ಲ ಎಂದು ಆಪರೇಷನ್ ಕಮಲವನ್ನ ತಳ್ಳಿಹಾಕುತ್ತಾ ಬಂದಿದ್ದಾರೆ.

  • ಆಸ್ಪತ್ರೆಗೆ ಶಾಸಕ ದಿಢೀರ್ ಭೇಟಿ – ಅವ್ಯವಸ್ಥೆ ಕಂಡು ವೈದ್ಯರಿಗೆ ಕ್ಲಾಸ್

    ಆಸ್ಪತ್ರೆಗೆ ಶಾಸಕ ದಿಢೀರ್ ಭೇಟಿ – ಅವ್ಯವಸ್ಥೆ ಕಂಡು ವೈದ್ಯರಿಗೆ ಕ್ಲಾಸ್

    ರಾಯಚೂರು: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಿಇಒ ಹಾಗೂ ಶಾಸಕ ದಿಢೀರ್ ಭೇಟಿ ನೀಡಿ ವೈದ್ಯರಿಗೆ ತರಾಟೆ ತೆಗೆದುಕೊಂಡರು.

    ಜಿಲ್ಲಾ ಪಂಚಾಯ್ತಿ ಸಿಇಒ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಶಾಸಕ ಡಿ.ಎಸ್ ಹೂಲಗೇರಿ ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆ ಅವ್ಯವಸ್ಥೆ ಕಂಡು ಶಾಸಕ ಹೂಲಗೇರಿ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡರು.

    ಆಸ್ಪತ್ರೆಯ ಅಶುಚಿತ್ವದ ಬಗ್ಗೆ ಡಿ.ಎಸ್ ಹೂಲಗೇರಿ ಅವರು ಸಿಡಿಮಿಡಿಗೊಂಡರು. ಕೆಲ ದಿನಗಳ ಹಿಂದಷ್ಟೇ ಡಿಎಚ್‍ಓ ಭೇಟಿ ನೀಡಿ ಸ್ವಚ್ಚತೆಯ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಮೇಲಾಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ.

    100 ಹಾಸಿಗೆಗಳನ್ನು ಹೊಂದಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಟ ಸೌಲಭ್ಯಗಳಿಲ್ಲ. ಈ ಆಸ್ಪತ್ರೆಯಲ್ಲಿ ಇರುವ 6 ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುತ್ತಾರೆ. ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಲ್ಲದೇ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಬೇಕು. ಹೀಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಡಿ.ಎಸ್ ಹೂಲಗೇರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.