Tag: Dry Weather

  • ರಾಜ್ಯದ ಹವಾಮಾನ ವರದಿ 20-03-2025

    ರಾಜ್ಯದ ಹವಾಮಾನ ವರದಿ 20-03-2025

    ಬೆಂಗಳೂರು, ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿಂದು ಬಿಸಿಲಿನ ಒಣಹವೆಯ ವಾತಾವರಣ ಮುಂದುವರಿಯಲಿದೆ. ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇಂದು ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಭಾರೀ ಏರಿಕೆಯಾಗುವ ಮುನ್ಸೂಚನೆ ಇದ್ದು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 35-23
    ಬೆಳಗಾವಿ: 35-22
    ಮೈಸೂರು: 36-23

    ಮಂಡ್ಯ: 36-22
    ಮಡಿಕೇರಿ: 32-21
    ರಾಮನಗರ: 34-22
    ಹಾಸನ: 33-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 33-19

    ಕೋಲಾರ: 32-19
    ತುಮಕೂರು: 34-21
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-19
    ದಾವಣಗೆರೆ: 36-24

    ಹುಬ್ಬಳ್ಳಿ: 36-22
    ಚಿತ್ರದುರ್ಗ: 35-23
    ಹಾವೇರಿ: 37-22
    ಬಳ್ಳಾರಿ: 37-24
    ಗದಗ: 35-23
    ಕೊಪ್ಪಳ: 36-24

    ರಾಯಚೂರು: 38-26
    ಯಾದಗಿರಿ: 38-26
    ವಿಜಯಪುರ: 37-25
    ಬೀದರ್: 37-24
    ಕಲಬುರಗಿ: 38-26
    ಬಾಗಲಕೋಟೆ: 37-25

  • ಕರ್ನಾಟಕದಲ್ಲಿ ಮುಂದಿನ 3 ದಿನ ಒಣಹವೆ – ಏ.18 ರಿಂದ ವಿವಿಧೆಡೆ ಮಳೆ

    ಕರ್ನಾಟಕದಲ್ಲಿ ಮುಂದಿನ 3 ದಿನ ಒಣಹವೆ – ಏ.18 ರಿಂದ ವಿವಿಧೆಡೆ ಮಳೆ

    ಬೆಂಗಳೂರು: ಕರ್ನಾಟಕದಲ್ಲಿ (Karnataka) ಮುಂದಿನ ಮೂರು ದಿನಗಳ ಕಾಲ ಒಣಹವೆ (Dry Weather) ಇರಲಿದ್ದು, ಏ.18 ರಿಂದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    ಮುಂದಿನ ಮೂರು ದಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಏ.18ರ ಬಳಿಕ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ರಾಮನಗರ, ತುಮಕೂರು, ವಿಜಯಪುರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ರಾಗಾ ಹೆಲಿಕಾಪ್ಟರ್‌ ತಪಾಸಣೆ ನಡೆಸಿದ ಫ್ಲೈಯಿಂಗ್‌ ಸ್ಕ್ವಾಡ್‌ – ಮುಂದೇನಾಯ್ತು?

    ಆಗುಂಬೆ, ಧರ್ಮಸ್ಥಳ, ಎನ್‌ಆರ್‌ಪುರ, ಧಾರವಾಡ, ಬೇವೂರು, ಮುದಗಲ್, ಇಂಡಿ, ಶಿವಮೊಗ್ಗ, ಲಿಂಗನಮಕ್ಕಿ, ಆನವಟ್ಟಿ, ಔರಾದ್, ದೇವರಹಿಪ್ಪರಗಿ, ಯಡ್ರಾಮಿ, ಕಲಘಟಗಿ, ತ್ಯಾಗರ್ತಿ, ಕಳಸ, ಹರಪನಹಳ್ಳಿ, ಕುಡತಿನಿ, ಕೊಪ್ಪ, ತರೀಕೆರೆ, ಶೃಂಗೇರಿ, ಸಿದ್ದಾಪುರ, ಸಿಂಧನೂರು, ಹಿರೆಕೆರೂರು, ಲಕ್ಷ್ಮೇಶ್ವರ, ಅಣ್ಣಿಗೆರೆ, ಕಮ್ಮರಡಿ, ಸವಣೂರು, ತಾಳಗುಪ್ಪ, ಹುಂಚದಕಟ್ಟೆಯಲ್ಲಿ ಮಳೆಯಾಗಿದೆ. ಇದನ್ನೂ ಓದಿ: ಭಾರತದಲ್ಲಿ ದಾಖಲೆ – ಚುನಾವಣೆ ನಡೆಯುವ ಮೊದಲೇ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶ