Tag: Dry Skin

  • ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್‌

    ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್‌

    ಳಿಗಾಲ ಬಂತೆಂದರೆ ಸಾಕು ನಿಮ್ಮ ತ್ವಚೆಯ ಮೇಲೆ ಅನೇಕ ಹಾನಿ ಉಂಟಾಗಿ, ತ್ವಚೆ ಕೆಡುತ್ತದೆ. ಅಷ್ಟೇ ಅಲ್ಲದೇ ಚರ್ಮವೂ ಒಣ ಚರ್ಮವಾಗಿ ಬಿಡುತ್ತದೆ. ಇದನ್ನು ಹೋಗಲಾಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಅದರ ಬದಲು ಮನೆಯ ಅಡುಗೆ ಸಾಮನುಗಳನ್ನೇ ಬಳಸಿ ಸುಲಭವಾಗಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವ ಒಂದಿಷ್ಟು ಟಿಪ್ಸ್‌ಗಳು ಇಲ್ಲಿವೆ.

    ಕಾಫಿ ಪುಡಿ ಮಿಶ್ರಣ: ಒಂದು ಬೌಲ್‍ಗೆ ಸ್ವಲ್ಪ ಕಂದು ಸಕ್ಕರೆ ಮತ್ತು ಕಾಫಿ ಪೌಡರ್‍ನ್ನು ಹಾಕಿಕೊಳ್ಳಿ. ಅವೆರಡು ಸರಿ ಪ್ರಮಾಣದಲ್ಲಿ ಇರಲಿ. ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ನಿಮ್ಮ ತ್ವಚೆಗೆ ಕಾಫಿ ಪೌಡರ್ ಮಿಶ್ರಣವನ್ನು ಸ್ಕ್ರಬ್ ಮಾಡಿ. ಆಗ ನಿಮ್ಮ ಚರ್ಮದಲ್ಲಿ ಹೊಳಪನ್ನು ನೀವು ಗಮನಿಸಬಹುದು.

    ಸಕ್ಕರೆಯ ಮಿಶ್ರಣ: ಕಂದು ಸಕ್ಕರೆಯನ್ನು ಮಿಕ್ಸರ್‌ನಲ್ಲಿ ಚೆನ್ನಾಗಿ ರುಬ್ಬಿ, ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ, ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣ ನೀರಾಗುವಂತೆ ಮಾಡಬೇಡಿ, ಸ್ವಲ್ಪ ಗಟ್ಟಿ ಇರಲಿ. ನಂತರ ನಿಮ್ಮ ಮೊಣಕೈ, ತುಟಿ, ಒಡೆದ ಹಿಮ್ಮಡಿಗೆ ಹಚ್ಚಿ. ಇದರಿಂದ ಚಳಿಯ ವಾತಾವರಣವಿದ್ದರೂ ನಿಮ್ಮ ತ್ವಚೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ.

    ನಿಂಬೆ ಮಿಶ್ರಣ: ಒಂದು ಬಟ್ಟಲಿನಲ್ಲಿ ಸಕ್ಕರೆ, ಸ್ವಲ್ಪ ನಿಂಬೆ ರಸ, ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ರೋಸ್ ವಾಟರ್‍ನ್ನು ಸೇರಿಸಿ ಅದನ್ನು ಮಿಶ್ರಣ ಮಾಡಿ. ಅದನ್ನು ನಿಮ್ಮ ಒಣ ಚರ್ಮದ ಮೇಲೆ ಹಚ್ಚಿ. ಇದರಿಂದ ನಿಮ್ಮ ಒಣ ಚರ್ಮ ನಿವಾರಣೆಯಾಗುತ್ತದೆ.

    ಕಾಂತಿಯುತ ಚರ್ಮಕ್ಕೆ ಮೈದಾ: ನಿಮ್ಮ ತ್ವಚೆಯನ್ನು ಎಲ್ಲಾ ಕಾಲದಲ್ಲೂ ಕಾಂತಿಯುತವಾಗಿ ಇಟ್ಟುಕೊಳ್ಳಲು ಕಡಲೆ ಹಿಟ್ಟು ಅತ್ಯುತ್ತಮ ಮಾರ್ಗ. ಹಾಲಿನ ಕೆನೆ, ಅರಿಶಿನ ಹಾಗೂ ಜೇನುತುಪ್ಪಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿ ನಿಮ್ಮ ತ್ವಚೆಗೆ ಹಚ್ಚಿ. ಇದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ಗ್ರೀನ್ ಟೀ ಮತ್ತು ಲ್ಯಾವೆಂಡರ್: ಸಕ್ಕರೆ ಮಿಶ್ರಣದಲ್ಲಿ ಗ್ರೀನ್ ಟೀ ಮತ್ತು ಲ್ಯಾವೆಂಡರ್‌ನ್ನು ಸೇರಿಸಿ. ನಂತರ ಅದಕ್ಕೆ ಆಲಿವ್ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸುವ ಮೂಲಕ ಸ್ಕ್ರಬ್ ಮಾಡಿ. ಚರ್ಮದ ಒಡೆದ ಭಾಗಕ್ಕೆ ಹಚ್ಚಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

  • ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ.

    ಕೈ, ಕಾಲಿನ ತೇವಾಂಶ ಕಡಿಮೆಯಾಗಿ ಒರಟು ಒರಟಾಗಿ ಕಾಣೋದು. ಕೂದಲು ಒಣಗಿದಂತೆ ಅನ್ನಿಸುವುದು, ತುಟಿ ಒಡೆಯುವುದು ಸರ್ವೆ ಸಾಮಾನ್ಯ. ಇದಕ್ಕಾಗಿ ಚರ್ಮದ ಆರೈಕೆ ಮಾಡಲೇಬೇಕು. ಇನ್ನು ಬೆಳಗ್ಗೆ ಬೇಗನೇ ಎದ್ದು ಕೆಲಸಕ್ಕೆ ಹೋಗುವವರನ್ನು ಹೆಚ್ಚಾಗಿ ಈ ಡ್ರೈ ಸ್ಕಿನ್ ಸಮಸ್ಯೆ ಬಾಧಿಸುತ್ತದೆ. ಡ್ರೈ ಸ್ಕಿನ್ ಸಮಸ್ಯೆಯಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ಹಲವು ಕಾಸ್ಮೆಟಿಕ್ಸ್, ಕೋಲ್ಡ್ ಕ್ರೀಮ್, ಲೋಷನ್, ಸೋಪ್‍ಗಳು ಲಗ್ಗೆ ಇಟ್ಟಿವೆ. ಅವೆಲ್ಲಾವನ್ನು ಒಮ್ಮೆ ಟ್ರೈ ಮಾಡಿ ಎಫೆಕ್ಟ್ ಕಾಣದಾದರೆ ಅದಕ್ಕೂ ಬೇಸರ. ಈಗ ಆ ಬೇಸರ ಬೇಡ, ನಾವು ಕೊಡೋ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಈ ವಿಂಟರ್ ಅನ್ನು ಎಂಜಾಯ್ ಮಾಡಿ.

    ಸುಲಭ ವಿಧಾನಗಳು:
    * ಅರಿಶಿಣ ಪುಡಿ ಮತ್ತು ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ, ಕೈ-ಕಾಲಿಗೆ ಹಚ್ಚಿಕೊಂಡು ತಣ್ಣೀರಿನಲ್ಲಿ ತೊಳೆಯಿರಿ. ಇದು ನಿಮ್ಮ ಚರ್ಮ ಸೌಂದರ್ಯವನ್ನು ಮರಳಿಸುತ್ತದೆ.
    * ಎಣ್ಣೆ ಚರ್ಮದವರು ಕಡಲೆಹಿಟ್ಟು ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿ. ನಾಲ್ಕೈದು ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದರಿಂದ ಚರ್ಮ ಸಡಿಲಗೊಂಡು ಕಾಂತಿಯುಕ್ತವಾಗುತ್ತದೆ.
    * ಹಾಲಿನ ಕೆನೆಗೆ ಸ್ವಲ್ಪ ಅರಿಶಿಣವನ್ನು ಮಿಕ್ಸ್ ಮಾಡಿ ಮುಖ, ಕೈ ಕಾಲಿಗೆ ಹಚ್ಚಿಕೊಂಡು ಬಳಿಕ ಸ್ವಲ್ಪ ಹೊತ್ತಿನ ಬಳಿಕ ಮುಖ ತೊಳೆಯಿರಿ. ಹೀಗೆ ಮಾಡುವದರಿಂದ ಚರ್ಮ ಒಣಗಿದಂತೆ ಕಾಣಲ್ಲ.
    * ಚರ್ಮದ ಬಳಿಕ ತುಟಿಗಳು ಈ ಕಾಲದಲ್ಲಿ ಹೆಚ್ಚಾಗಿ ಒಡೆಯುವುದು ಒರಟಾಗುವುದು ಕಾಮನ್. ಅದಕ್ಕೆ ಯಾವಾಗಲೂ ಲಿಪ್ ಬಾಮ್ ಇಟ್ಟುಕೊಂಡಿರಿ. ರಾತ್ರಿ ವೇಳೆ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಇರಲ್ಲಿ ಯಾವುದು ನಿಮಗೆ ಉಪಯುಕ್ತವೂ ಅದನ್ನು ತುಟಿಗೆ ಹಚ್ಚಿ ಮಲಗಿ. ಇದು ಯಾವುದು ಬೇಡ ಅನ್ನುವರು ಹಾಲಿನ ಕೆನೆಯನ್ನು ಸಹ ಬಳಸಬಹುದು.

    * ಚಳಿಗಾಲದಲ್ಲಿ ಸ್ನಾನಕ್ಕೆ ಆದಷ್ಟು ಕಡಲೆಹಿಟ್ಟು ಬಳಸಿದರೆ ಉತ್ತಮ. ಸೋಪ್ ಬಳಕೆ ಕಡಿಮೆ ಮಾಡಿ.
    * ಚಳಿಗಾಲದಲ್ಲಿ ಪಾದದ ಬಿರುಕು ಸರ್ವೇ ಸಾಮಾನ್ಯ. ರಾತ್ರಿ ಮಲಗುವಾಗ, ಹೊರಗೆ ಹೋಗುವಾಗ ಕಾಲಿಗೆ ಸಾಕ್ಸ್ ಧರಿಸಿ ಹೆಚ್ಚಿನ ಬಿರುಕು ಇದ್ದರೆ ಕ್ರ್ಯಾಕ್ ಹೀಲ್ ಹಚ್ಚಿಕೊಂಡು ಮಲಗಿ.
    * ಹೆಚ್ಚು ಚಳಿ ಕೂದಲ ಸಮಸ್ಯೆ ಫಿಕ್ಸ್. ಇದಕ್ಕಾಗಿ ಅಟ್ ಲೀಸ್ಟ್ ವಾರಕ್ಕೊಮ್ಮೆಯಾದರೂ ತಲೆಗೆ ತುಸು ಬಿಸಿ ಇರುವ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಮಸಾಜ್ ಮಾಡಿ ಸ್ನಾನ ಮಾಡಿದ್ರೆ ಗುಡ್. ಹೀಗೆ ಮಾಡುವದರಿಂದ ಸ್ಟ್ರೆಸ್ (ಮಾನಸಿಕ ಅಥವಾ ಕೆಲಸದ ಒತ್ತಡ) ಕಡಿಮೆ ಆಗುತ್ತದೆ.

    * ಬೆಳಗಿನ ಜಾವ ಅಥವಾ ಸಂಜೆ ಚಳಿಗಾಲದಲ್ಲಿ ಹೊರಗೆ ಹೋಗಲು ಅಬ್ಬಾ ಚಳಿ ಅಂತ ಮನೆಯಲ್ಲಿರುವ ಕೆಲವರು ಇಷ್ಟಪಡುತ್ತಾರೆ. ಹೊರಗೆ ಹೋಗುವಂತಿದ್ದರೆ ತುಂಬು (ಉದ್ದ) ತೋಳಿನ ಬಟ್ಟೆ ಧರಿಸಿ. ನಿಮ್ಮ ಪರಿಸರದಲ್ಲಿ ತಣ್ಣನೆಯ ಗಾಳಿಯಿದ್ದರೆ ಕಿವಿಗೆ ಹತ್ತಿ ಇಟ್ಟುಕೊಳ್ಳಿ. ಕೆಲಸದ ನಿಮಿತ್ತ ಹೊರ ಹೋದಾಗ ಹಿಂದಿರುಗುವ ಸಮಯ ಬದಲಾಗಬಹುದು. ಹಾಗಾಗಿ ಮುಂಜಾಗ್ರತೆಗಾಗಿ ಅಥವಾ ಪ್ರಯಾಣ ಮಾಡುವಾಗ ಸ್ವೆಟರ್, ಸಾಕ್ಸ್, ಸ್ಕಾರ್ಫ್ ಜೊತೆ ಇಟ್ಟುಕೊಳ್ಳುವುದು ಉತ್ತಮ.

    ಈ ಮನೆಮದ್ದುಗಳನ್ನೆಲ್ಲಾ ಯಾರು ಟ್ರೈ ಮಾಡೋರು. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಕಾಸ್ಮೆಟಿಕ್, ಕೋಲ್ಡ್ ಕ್ರೀಮ್, ಲೋಷನ್ ಬಂದಿದೆ ಎಂದು ಅಂಗಡಿಗಳಿಗೆ ಲಗ್ಗೆ ಇಡುವ ಮುನ್ನ ಎಚ್ಚರ. ನಿಮ್ಮ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಹೆಚ್ಚಾಗಿ ಇರುತ್ತಾರೆ. ಹಾಗಾಗಿ ಬ್ರ್ಯಾಂಡೆಡ್, ಹೆಸರುವಾಸಿ ಆಗಿರುವ ಉತ್ಪನ್ನ(ಪ್ರಾಡಕ್ಟ್)ಗಳನ್ನೇ ಖರೀದಿಸಿ. ಕಡಿಮೆ ಬೆಲೆಗೆ ಸಿಕ್ತು ಎಂದು ಯಾವುದೋ ಪ್ರಾಡಕ್ಟ್ ಖರೀದಿಸಿ ಬಳಸಿದರೆ ಮುಂದೆ ಹೆಚ್ಚಿನ ದಂಡ ತೆರಬೇಕಾದಿತು ಎಚ್ಚರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv