Tag: DRY FRUITS BARFI

  • ಹಬ್ಬಕ್ಕೆ ಮಾಡಿ ಡ್ರೈ ಫ್ರೂಟ್ಸ್ ಬರ್ಫಿ!

    ಹಬ್ಬಕ್ಕೆ ಮಾಡಿ ಡ್ರೈ ಫ್ರೂಟ್ಸ್ ಬರ್ಫಿ!

    ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಡ್ರೈ ಫ್ರೂಟ್ಸ್ ಬಳಸಿ ಬರ್ಫಿ ಮಾಡೋದನ್ನ ಇವತ್ತು ನಾನಿಲ್ಲಿ ತಿಳಿಸಿಕೊಡ್ತೀನಿ.

    ಬೇಕಾಗುವ ವಸ್ತುಗಳು
    ಬಾದಾಮಿ – ಅರ್ಧ ಕಪ್
    ಗೋಡಂಬಿ – ಅರ್ಧ ಕಪ್
    ಮಖಾನಾ – ಅರ್ಧ ಕಪ್
    ಕೊಬ್ಬರಿ ತುರಿ – ಅರ್ಧ ಕಪ್
    ಪುಟಾಣಿ, ಹುರಿಗಡಲೆ – 1 ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಜಾಯಿಕಾಯಿ ಪುಡಿ – ಒಂದು ಚಿಟಿಕೆ
    ಕೇಸರಿ – ಒಂದು ಚಿಟಿಕೆ
    ಬೆಲ್ಲ – 300 ಗ್ರಾಂ
    ತುಪ್ಪ – ಅಗತ್ಯಕ್ಕೆ ತಕ್ಕಂತೆ

    ಮಾಡುವ ವಿಧಾನ
    ಮೊದಲಿಗೆ, ಒಲೆ ಆನ್ ಮಾಡಿ ಪಾತ್ರೆ ಇಟ್ಟು ಮಖಾನಗಳನ್ನು ಗರಿಗರಿಯಾಗಿ ಹುರಿಯಬೇಕು. ಹುರಿದ ಬಳಿಕ ಒಲೆ ಆಫ್ ಮಾಡಿ, ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ಹುರಿದ ಮಖಾನವನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು. ಅದೇ ಮಿಕ್ಸರ್ ಜಾರ್‌ನಲ್ಲಿ ಬಾದಾಮಿ ಮತ್ತು ಗೋಡಂಬಿ ಸೇರಿಸಿ ನುಣ್ಣಗೆ ಪುಡಿ ಮಾಡಿ ಮಖಾನ ಮಿಶ್ರಣಕ್ಕೆ ಸೇರಿಸಬೇಕು.

    ಮಖಾನ ಹಾಗೂ ಬಾದಾಮಿ ಮಿಶ್ರಣಕ್ಕೆ ತುರಿದ ಕೊಬ್ಬರಿ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಕೇಸರಿ ಸೇರಿಸಿ, ಒಲೆ ಆನ್ ಮಾಡಿ ಅದರಲ್ಲಿ ಒಂದು ಪಾತ್ರೆ ಇಟ್ಟು ತುರಿದ ಬೆಲ್ಲ, ಸ್ವಲ್ಪ ತುಪ್ಪ ಮತ್ತು ಕಾಲು ಕಪ್ ನೀರು ಸೇರಿಸಿ ಸ್ವಲ್ವ ಪಾಕ ಆಗುವವರೆಗೆ ಬೇಯಿಸಬೇಕು. ಇನ್ನೊಂದು ಪಾತ್ರೆ ಇಟ್ಟು ಒಂದು ಟೀಸ್ಪೂನ್ ತುಪ್ಪ ಸೇರಿಸಿ ಬಿಸಿ ಮಾಡಿ ಕಡಲೆಕಾಯಿ, ಬಾದಾಮಿ ಪುಡಿಗಳನ್ನು ಕಡಿಮೆ ಉರಿಯಲ್ಲಿ ಹುರಿದು, ಪರಿಮಳ ಬಂದ ಬಳಿಕ ಬೆಲ್ಲದ ಪಾಕ ಸೇರಿಸಿ ಮಿಶ್ರಣ ಮಾಡಿ ಬೇಯಿಸಬೇಕು.

    ಇದಕ್ಕೆ ಹಿಟ್ಟಿನ ಪೇಸ್ಟ್‌ನಲ್ಲಿ ಸೇರಿಕೊಂಡು ದಪ್ಪವಾಗಿ ಹದವಾಗಿ ಬೆಂದ ಬಳಿಕ ಒಲೆ ಆಫ್ ಮಾಡಿ, ಒಂದು ತಟ್ಟೆಗೆ ತುಪ್ಪ ಹಚ್ಚಿ ಈ ಮಿಶ್ರಣವನ್ನು ಸೇರಿಸಿ ಸಮವಾಗಿ ಹರಡಬೇಕು. ಬಳಿಕ ಡ್ರೈ ಫ್ರೂಟ್ಸ್ ಸೇರಿಸಿ, ಚಿಕ್ಕ ಪೀಸ್​ಗಳಾಗಿ ಕತ್ತರಿಸಬೇಕು. ತಣ್ಣಗಾದ ಬಳಿಕ ಬರ್ಫಿ ಸೇವಿಸಲು ಸಿದ್ಧ.

  • ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಡ್ರೈಫ್ರೂಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಡ್ರೈಫ್ರೂಟ್ಸ್ ಸೇವಿಸುತ್ತಾರೆ. ಡಯೆಟ್ ಮಾಡುವವರು, ಯೋಗ ಮಾಡುವವರು, ಜಿಮ್ ಮಾಡುವ ಪ್ರತಿಯೊಬ್ಬರು ಇದನ್ನು ತಿಂದೇ ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಡ್ರೈಫ್ರೂಟ್ಸ್ ಬರ್ಫಿ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

    ಬೇಕಾಗುವ ಸಾಮಗ್ರಿಗಳು:
    ಖರ್ಜೂರ – 20
    ಮಿಕ್ಸ್ ನಟ್ಸ್ – ಅರ್ಧ ಕಪ್
    ತುಪ್ಪ – 1 ಚಮಚ
    ಕೊಕೊವಾ ಪೌಡರ್ – 1 ಚಮಚ
    ವೆನಿಲ್ಲಾ ಎಸೆನ್ಸ್ – ಕಾಲು ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಖರ್ಜೂರ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್‌ಗೆ ನಟ್ಸ್‌ಗಳನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದನ್ನು ಮಿಕ್ಸಿಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಿ. ಇದನ್ನು ಪೌಡರ್ ಮಾಡಿಕೊಳ್ಳುವ ಬದಲು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಬಹುದು.
    * ಬಳಿಕ ಅದೇ ಪ್ಯಾನ್‌ಗೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ನಟ್ಸ್ ಅಥವಾ ಪೌಡರ್ ಅನ್ನು ಹಾಕಿಕೊಳ್ಳಿ.
    * ಈಗ ಇದಕ್ಕೆ ಕೊಕೊ ಪೌಡರ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಬಳಿಕ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಇದನ್ನು ಒಂದು ಟ್ರೇಗೆ ಹಾಕಿಕೊಂಡು ಸಮತಟ್ಟಾಗಿ ಸವರಿಕೊಳ್ಳಿ.
    * ಬಳಿಕ ಇದನ್ನು ಒಂದು ಅಲ್ಯುಮೀನಿಯಂ ಫಾಯಿಲ್ ಅಲ್ಲಿ ಹಾಕಿಕೊಂಡು ರೋಲ್ ಮಾಡಿ ಫ್ರೀಜರ್‌ನಲ್ಲಿ 2 ಗಂಟೆಗಳ ಕಾಲ ಇರಿಸಿ.
    * ಈಗ ಇದನ್ನು ಫ್ರೀಜರ್‌ನಿಂದ ಹೊರತೆಗೆದು ರೌಂಡ್ ಶೇಪ್‌ನಲ್ಲಿ ಕತ್ತರಿಸಿಕೊಂಡು ಸವಿಯಲು ಕೊಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]