Tag: Drunkard

  • ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ

    ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ

    ಮಂಗಳೂರು: ನಗರದಲ್ಲಿ ಕುಡುಕನೊಬ್ಬನಿಗೆ (Drunkar) ಕಂತೆ ಕಂತೆ ನೋಟು (Money) ಒಲಿದು ಬಂದಿದ್ದರೂ, ಅರ್ಧಗಂಟೆಯಲ್ಲಿ ಆ ಹಣದೊಂದಿಗೆ ಕುಡುಕ ಪೊಲೀಸ್ ಠಾಣೆ ಸೇರುವಂತಾಗಿದೆ. ಕುಡಿತದ ಚಟವೇ ಆತನನ್ನು ಮೂರು ದಿನಗಳ ಕಾಲ ಠಾಣೆಯಲ್ಲೇ ಕೊಳೆಯುವಂತೆ ಮಾಡಿದೆ. ಹತ್ತು ಲಕ್ಷ ರೂಪಾಯಿಯ (10 Lakh) ಕಂತೆ ಕಂತೆ ನೋಟುಗಳ ಬಂಡಲ್‍ನ್ನು ಕುಡುಕ ಇದೀಗ ಕಳೆದುಕೊಂಡಿದ್ದಾನೆ.

    ಮಂಗಳೂರಿನ (Mangaluru) ರಸ್ತೆ ಬದಿಯಲ್ಲಿ ಕುಡುಕನಿಗೆ ಸಿಕ್ಕಿದ 10 ಲಕ್ಷ ರೂಪಾಯಿ ಹತ್ತೇ ನಿಮಿಷದಲ್ಲಿ ಪೊಲೀಸರ ಪಾಲಾದ ಕಥೆ ಇದು. ಕಳೆದ ನ.27 ರಂದು ಮಂಗಳೂರಿನ ಪಂಪ್‍ವೆಲ್ (Pumpwell) ಬಳಿ ಶಿವರಾಜ್ ಎಂಬಾತ ಅಲ್ಲಿಯೇ ಸಮೀಪದ ವೈನ್‍ಶಾಪ್‍ನಲ್ಲಿ ಮದ್ಯ ಸೇವಿಸಿ ಹೊರಗಡೆ ನಿಂತಿದ್ದ. ಆಗ ಹೊರಗಡೆ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಇದನ್ನು ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕ ನೋಡಿದ್ದರು. ತಕ್ಷಣ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500 ಹಾಗೂ 2,000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡು ಬಂದಿದೆ. ಇಬ್ಬರೂ ಒಂದು ಕ್ಷಣಕ್ಕೆ ನೋಟುಗಳ ಬಂಡಲ್ ನೋಡಿ ದಂಗಾಗಿದ್ದರು. ನೋಟುಗಳ ಕಂತೆ ಕಂಡಿದ್ದೇ ಮತ್ತೆ ಮದ್ಯ ಕುಡಿಯುವ ಸೆಳೆತಕ್ಕೊಳಗಾಗಿ, ಬಂಡಲ್‍ನಿಂದ ಎರಡು ನೋಟು ಎಳೆದು ಮತ್ತೆ ವೈನ್‍ಶಾಪ್‍ಗೆ ಕಾಲಿಟ್ಟಿದ್ದಾರೆ. ಬಳಿಕ ಹೊರ ಬಂದ ಇಬ್ಬರೂ ಅನತಿ ದೂರ ಸಾಗಿದ್ದು ಆಗ ಕೂಲಿ ಕಾರ್ಮಿಕ ತನಗೇನು ಇಲ್ಲವೇ ಎಂದಾಗ 2,000 ಮತ್ತು 500 ರೂ. ಮುಖಬೆಲೆಯ ಬಂಡಲ್‍ನ್ನು ಶಿವರಾಜ್ ಆತನ ಕೈಗೆ ನೀಡಿದ್ದಾನೆ. ಉಳಿದ ನೋಟುಗಳ ಕಂತೆಯನ್ನು ಹಿಡಿದು ಮುಂದಕ್ಕೆ ಹೋದ ಶಿವರಾಜ್ ಮತ್ತೆ ವೈನ್‍ಶಾಪ್‍ಗೆ ನುಗ್ಗಿ ಕಂಠಪೂರ್ತಿ ಮದ್ಯ ಇಳಿಸಿದ್ದಾನೆ. ಇದನ್ನೂ ಓದಿ: ಮಗನ ಹತ್ಯೆಗೆ ತಂದೆಯಿಂದ್ಲೇ 10 ಲಕ್ಷ ಸುಪಾರಿ- ವಾಟ್ಸಪ್ ಫೋಟೋದಿಂದ ತಗ್ಲಾಕ್ಕೊಂಡ ಅಪ್ಪ

    MONEY

     

    ಇಷ್ಟಕ್ಕೇ ಕಥೆ ಮುಗಿದಿಲ್ಲ, ಅಲ್ಲಿಂದ ಹೊರ ಬರುವಾಗ ಕಂಕನಾಡಿ ಠಾಣಾ ಪೊಲೀಸರು (Police) ತಯಾರಾಗಿ ನಿಂತಿದ್ದು, ಈತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದನ್ನು ಆತ ತಿಳಿಸಿದ್ದಾನೆ. ಆದರೆ ಆತನನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ. ಇದೀಗ ಹಣ ಕಂಕನಾಡಿ ಠಾಣೆಯಲ್ಲಿದೆ. ಆದರೆ ಪೊಲೀಸರು ಯಾವುದೇ ದೂರು ದಾಖಲಿಸದೆ ಶಿವರಾಜ್‍ನನ್ನು ಮೂರು ದಿನಗಳ ಕಾಲ ಠಾಣೆಯಲ್ಲಿರಿಸಿ ಇದೀಗ ಬಿಟ್ಟು ಕಳುಹಿಸಿದ್ದಾರೆ. ವಾರಿಸುದಾರರಿಲ್ಲದ ಹತ್ತು ಲಕ್ಷ ರೂಪಾಯಿ ಏನಾಗಿದೆ ಅನ್ನೋದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಇದನ್ನೂ ಓದಿ: ರಾಹುಲ್ ಟೀಂ ಚುನಾವಣಾ ಸಮೀಕ್ಷೆಗೆ ಸಿದ್ದು ಸಿಡಿಮಿಡಿ

    ಮೂಲಗಳ ಮಾಹಿತಿಯ ಪ್ರಕಾರ ಈ ಹಣ ಅಡಿಕೆ ವ್ಯಾಪರಸ್ಥರಿಗೆ ಸೇರಿದ್ದಾಗಿದ್ದು, ಹಣ ಕಳೆದು ಹೋದ ದಿನದಂದೇ ಕಂಕನಾಡಿ ಪೊಲೀಸ್ ಠಾಣೆಗೆ ತೆರಳಿ ಹಣ ನಾಪತ್ತೆಯಾದ ಬಗ್ಗೆ ಪೊಲೀಸರ ಬಳಿ ಹೇಳಿದ್ದರು. ಆದರೆ ಪೊಲೀಸರು ಇದು ನಿಮ್ಮ ಹಣ ಅಲ್ಲ ಅಂತಾ ಹಿಂದೆ ಕಳುಹಿಸಿದ್ದರು. ಹತ್ತು ಲಕ್ಷ ರೂಪಾಯಿ ಇರಲಿಲ್ಲ. ಇದ್ದದ್ದು 49 ಸಾವಿರ ರೂಪಾಯಿ ಮಾತ್ರ ಅನ್ನೋದು ಪೊಲೀಸರ ವಾದವಾಗಿದೆ. ಆದರೂ ದೂರು ದಾಖಲಾಗಿಲ್ಲ. ಈವರೆಗೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಲ್ಲ ಅನ್ನೋದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಲ್ಲಿ ಪೊಲೀಸರ ಮೇಲೆ ಕಲ್ಲು ಎಸೆಯಲು ಹೋದ ಕುಡುಕ

    ಕುಡಿದ ಮತ್ತಲ್ಲಿ ಪೊಲೀಸರ ಮೇಲೆ ಕಲ್ಲು ಎಸೆಯಲು ಹೋದ ಕುಡುಕ

    – ಲಾಟಿ ರುಚಿ ತೋರಿಸಿದ ಪೊಲೀಸರೇ ತಬ್ಬಿಬ್ಬು

    ಕಾರವಾರ: ಕುಡಿದ ಮತ್ತಿನಲ್ಲಿ ಅಧಿಕಾರಿಗಳ ಮೇಲೆ ಕಲ್ಲು, ಸಿಮೆಂಟ್‍ಶೀಟ್ ತುಂಡು ಬಿಸಾಕಲು ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

    ಮನೆಯ ಹೊರಗೆ ಬಂದು ಕುಡಿದು ಬರಿ ಮೈಯಲ್ಲಿ ಓಡಾಡುತ್ತಾ ಕೆಟ್ಟ ವರ್ತನೆ ತೋರುತ್ತಿದ್ದ ವ್ಯಕ್ತಿಗೆ ಅಧಿಕಾರಿಗಳು ಮನೆಯೊಳಗೆ ತೆರಳಲು ಸೂಚನೆ ನೀಡಿದ್ದಾರೆ. ಇದಕ್ಕೆ ಕುಪಿತಗೊಂಡ ವ್ಯಕ್ತಿ ಮನೆಯ ಗೇಟ್ ಮುಂದೆ ನಿಂತು ಅಧಿಕಾರಿಗಳ ಜೊತೆ ಜಗಳಕ್ಕೆ ನಿಂತು ಕಲ್ಲು ಹಾಗೂ ಸಿಮೆಂಟ್‍ಶೀಟ್ ತುಂಡು ಅಧಿಕಾರಿಗಳ ಮೇಲೆ ಎಸೆಯಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಪೇದೆ ಎರಡೇಟು ಬಿಟ್ಟರು ಮತ್ತೆ ಮತ್ತೆ ಎದೆ ಕೊಟ್ಟು ಮುಂದೆ ಬಂದ ಕುಡುಕ ಅಸಭ್ಯ ವರ್ತನೆ ತೋರಿದ್ದಾನೆ.

    ಇಡೀ ಭಾರತವೇ ಬಂದ್ ಇದೆ. ಹೀಗಾಗಿ ಜನರಿಗೆ ಆಹಾರ ಪದಾರ್ಥ ಸಿಗುವುದೇ ಕಷ್ಟಕರವಾಗಿದ್ದು, ಅಂತಹದರಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ರು ಮದ್ಯ ಸೇವಿಸಿಸ ಕುಡುಕ ಅನುಚಿತ ವರ್ತನೆ ತೋರಿದ್ದಾನೆ. ಈತನನ್ನು ನಂತರ ಸಮಾಧಾನಪಡಿಸಿ ಮನೆಯವರೇ ಕರೆದುಕೊಂಡು ಹೋಗಿದ್ದಾರೆ.

  • ರಾತ್ರಿ ಕುಡಿದು ರಸ್ತೆಯಲ್ಲಿ ಬರುವವರ ಕುತ್ತಿಗೆ ಮೇಲೆ ಮಚ್ಚಿಟ್ಟ ಕುಡುಕ

    ರಾತ್ರಿ ಕುಡಿದು ರಸ್ತೆಯಲ್ಲಿ ಬರುವವರ ಕುತ್ತಿಗೆ ಮೇಲೆ ಮಚ್ಚಿಟ್ಟ ಕುಡುಕ

    ಕೋಲಾರ: ರಾತ್ರಿ ವೇಳೆ ಕುಡಿದು ರಸ್ತೆಯಲ್ಲಿ ಮಚ್ಚು ಹಿಡಿದುಕೊಂಡು ಕುಡುಕನೊಬ್ಬ ಚೆಲ್ಲಾಟ ನಡೆಸಿರುವ ಘಟನೆ ಕೋಲಾರ ನಗರದ ಗೌರೀಪೇಟೆಯಲ್ಲಿ ನಡೆದಿದೆ.

    ಈ ರೀತಿ ಕುಡಿದು ಮಚ್ಚಿಹಿಡಿದುಕೊಂಡು ಅವಾತರ ಸೃಷ್ಟಿಸಿದ ವ್ಯಕ್ತಿಯನ್ನು ಹಮೀದ್ ಎಂದು ಗುರುತಿಸಲಾಗಿದೆ. ಕುಡುಕನ ಚೆಲ್ಲಾಟವನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

    ಹಮೀದ್ ತಡರಾತ್ರಿ ಕುಡಿದು ದಾರಿಯಲ್ಲಿ ಓಡಾಡುವ ವ್ಯಕ್ತಿಯನ್ನು ಹಿಡಿದು ಎಳೆದಾಡಿಕೊಂಡು ಕುತ್ತಿಗೆ ಮೇಲೆ ಮಚ್ಚಿಟ್ಟು, ಮುತ್ತಿಟ್ಟು ಅವಾತರ ಸೃಷ್ಟಿ ಮಾಡಿದ್ದಾನೆ. ಈ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಭಾರತ್ ಬಂದ್- ಊಟ ಸಿಗದೆ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನೆದು ಕುಡುಕರ ರಂಪಾಟ

    ಭಾರತ್ ಬಂದ್- ಊಟ ಸಿಗದೆ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನೆದು ಕುಡುಕರ ರಂಪಾಟ

    ಉಡುಪಿ: ಭಾರತ್ ಬಂದ್ ಆಗಿರುವುದರಿಂದ ಊಟ ಸಿಗದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕುಡುಕರು ರಂಪಾಟ ಮಾಡಿದ್ದಾರೆ. ಊಟ ಇಲ್ಲ ಅಂತ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಕಿ ಹೋಟೆಲ್ ಎಲ್ಲಾ ಬಂದ್ ಆಗಿದೆ. ಸಿಟಿ ಬಸ್ ನಿಲ್ದಾಣ ಸಮೀಪ ಐದಾರು ಕುಡುಕರು ಹೊಟ್ಟೆ ಹಸಿವಿನಿಂದ ಗೋಳಾಡಿದ್ದಾರೆ. ಕುಡುಕರಿಗೆ ಬಂದ್ ಎಫೆಕ್ಟ್ ನೇರವಾಗಿ ತಟ್ಟಿದೆ. ಹಸಿವು, ಹಸಿವು ಅಂತ ಗೋಳಾಟ ಮಾಡಿದ ಜನ, ಹೊಟೇಲ್ ಓಪನ್ ಮಾಡಿ ಅಂತ ರಂಪಾಟ ಮಾಡಿದರು.

    ಹೊಟೇಲ್, ಅಂಗಡಿ ಓಪನ್ ಮಾಡಿ. ಊಟ ಕೊಡಿ ಅಂತ ಅಂಗಲಾಚಿದರು. ಉಡುಪಿ ಬಸ್ ಸಮೀಪ ಹೈಡ್ರಾಮಾ ನಡೆಸಿದರು. ರಸ್ತೆ ಮಧ್ಯದಲ್ಲಿ ಮಾಧ್ಯಮಗಳ ಕಾಲಿಗೆ ಬಿದ್ದು ಊಟ ಬೇಕು ಅಂತ ಕೇಳಿಕೊಂಡರು. ನಮ್ಮ ಬಂಗಾರಪ್ಪನವರ ಕಾಲದಲ್ಲಿ ಹೀಗೆ ಇರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರನ್ನು ನೆನಪಿಸಿಕೊಂಡರು.

    ನಮ್ಮ ಬಂಗಾರಪ್ಪನವರು ಅಧಿಕಾರದಲ್ಲಿದ್ದಾಗ ಹೀಗೆಲ್ಲ ಇರಲಿಲ್ಲ. ರಾಜ್ಯ ಸುಗಮವಾಗಿ ಸಾಗುತ್ತಿತ್ತು ಅಂತ ಬೇಸರ ವ್ಯಕ್ತಪಡಿಸಿದರು. ನಿನ್ನೆಯಿಂದ ಊಟವೇ ಮಾಡಿಲ್ಲ ಅಂತ ಗುರುವಪ್ಪ ಕುಡಿದ ಮತ್ತಿನಲ್ಲಿತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಡುಕನಿಗೆ ಆಟೋ ಡಿಕ್ಕಿ- ಚಾಲಕ, ಅಪಘಾತಗೊಂಡ ವ್ಯಕ್ತಿನೂ ಪರಾರಿ!

    ಕುಡುಕನಿಗೆ ಆಟೋ ಡಿಕ್ಕಿ- ಚಾಲಕ, ಅಪಘಾತಗೊಂಡ ವ್ಯಕ್ತಿನೂ ಪರಾರಿ!

    ಕಾರವಾರ: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅತೀ ವೇಗದಲ್ಲಿ ಬಂದ ಆಟೋ ಡಿಕ್ಕಿ ಹೊಡೆದು ಪರಾರಿಯಾದ್ರೆ, ದೂರು ಕೊಡಬೇಕಿದ್ದ ಅಪಘಾತಗೊಂಡ ವ್ಯಕ್ತಿಯೇ ಪ್ರಕರಣ ದಾಖಲಿಸಿಕೊಳ್ಳಲು ಬಂದ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ನಗರದ ಮಾರಿಕಾಂಬ ರಸ್ತೆಯ ಹೆಚ್.ಕೆ.ಹೆಚ್ ಮಂಡಿ ಬಳಿ ರಾಮನಬೈಲು ನಿವಾಸಿ ನಝೀರ್ ಅಹ್ಮದ್ ರಾತ್ರಿ ವೇಳೆ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮಾರಿಕಾಂಬ ರಸ್ತೆಯ ಕಡೆಯಿಂದ ಅತೀ ವೇಗದಲ್ಲಿ ಬಂದ ಆಟೋ ಈತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

    ಅಪಘಾತದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಈತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣದಲ್ಲಿ ಆಗಮಿಸಿದ ಪೊಲೀಸರು ಪ್ರಾಥಮಿಕ ಮಾಹಿತಿ ಪಡೆದು ಪ್ರಕರಣ ದಾಖಲಿಸುವ ವೇಳೆ ಅಪಘಾತಗೊಂಡ ನಜೀರ್ ಅಹ್ಮದ್ ಪರಾರಿಯಾಗಿದ್ದಾನೆ.

    ಅಪಘಾತವಾದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಖತ್ ವೈರಲ್ ಆಗಿದೆ. ಪೊಲೀಸರು ಕೂಡ ಕೇಸು ದಾಖಲಿಸಿಕೊಳ್ಳಲು ಅಪಘಾತಗೊಂಡ ನಝೀರ್ ಹಾಗೂ ಅಪಘಾತ ಮಾಡಿದ ಆಟೋಗಾಗಿ ಹುಡುಕಾಟ ನೆಡೆಸುತಿದ್ದಾರೆ.

  • ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲೇ ಅರೆ ನಗ್ನ- ಪೊಲೀಸರಿಂದ ವ್ಯಕ್ತಿಗೆ ಲಾಠಿಯೇಟು!

    ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲೇ ಅರೆ ನಗ್ನ- ಪೊಲೀಸರಿಂದ ವ್ಯಕ್ತಿಗೆ ಲಾಠಿಯೇಟು!

    ಬೀದರ್: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನನಾಗಿ ಪೊಲೀಸರ ಮುಂದೆ ಹೈಡ್ರಾಮ ಮಾಡಿ ಬಿಸಿ ಬಿಸಿ ಲಾಠಿ ಏಟು ತಿಂದ ಘಟನೆ ಬೀದರ್ ನಲ್ಲಿ ನಡೆದಿದೆ.

    ನಗರದ ಅಂಬೇಡ್ಕರ್ ವೃತ್ತದಲ್ಲಿ ವ್ಯಕ್ತಿ ಸಾರ್ವಜನಿಕವಾಗಿ ನಿಂದನೆ ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಮದ್ಯಪಾನ ಸೇವಿಸಿ ಫುಲ್ ನಶೆಯಲ್ಲಿದ್ದ ಅಪರಿಚಿತ ವ್ಯಕ್ತಿ ಅರೆ ನಗ್ನವಾಗಿ, ಅಸಭ್ಯ ವರ್ತನೆಗೆ ಸಾರ್ವಜನಿಕರು ಪುಲ್ ಗರಂ ಆಗಿದ್ರು.

    ಪೊಲೀಸರು ವ್ಯಕ್ತಿಯನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟು ವಿಫಲರಾದಾಗ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಗೆ ಲಾಠಿಯೇಟು ಕೊಟ್ಟು, ಠಾಣೆಗೆ ಕರೆದೊಯ್ದಿದ್ದಾರೆ.

  • ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನನ್ನು ಕರಿ ಇರುವೆಗಳು ಕಚ್ಚಿ-ಕಚ್ಚಿ ತಿಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಂತರಹಳ್ಳಿ ಗ್ರಾಮದ ತಿಮ್ಮರಾಜು ಇರುವೆಗಳ ದಾಳಿಗೆ ಒಳಗಾದ ವ್ಯಕ್ತಿ. ಅದೃಷ್ಟವಶಾತ್ ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಬದುಕುಳಿದಿದ್ದಾನೆ.

    ತಿಮ್ಮರಾಜು ಕುಡಿದ ಅಮಲಿನಲ್ಲಿ ಅಂತರಹಳ್ಳಿ ಗ್ರಾಮದ ದೇವಾಲಯವೊಂದರ ಮುಂದೆ ನಿದ್ದೆಗೆ ಜಾರಿದ್ದನು. ಈ ವೇಳೆ ತಿಮ್ಮರಾಜು ಮೈ ಮೇಲೆ ಮುತ್ತಿಕೊಂಡು ಕರಿ ಇರುವೆಗಳು, ಕಾಲು, ಕೈ, ಹೊಟ್ಟೆ, ಮೂಗು ಬಾಯಿ, ತಲೆ ಇಡೀ ದೇಹದ ಮೇಲೆ ದಾಳಿ ನಡೆಸಿದ್ದರಿಂದ ಅನೇಕ ಕಡೆ ಗಾಯಗಳಾಗಿವೆ. ಇರುವೆಗಳು ಕಚ್ಚುತ್ತಿವೆ ಎನ್ನುವ ಅರಿವು ಇಲ್ಲದೇ ತಿಮ್ಮರಾಜು ಬಿದ್ದಿದ್ದನು.

     

    ಇರುವೆ ಕಚ್ಚುತ್ತಿದ್ದರೂ ಹಾಗೇ ಮಲಗಿದ್ದನ್ನು ನೋಡಿದ ಗ್ರಾಮಸ್ಥರೊಬ್ಬರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ವಿಷಯ ತಿಳಿದು ಗುಂಪುಗೂಡಿದ ಗ್ರಾಮಸ್ಥರು, ತಿಮ್ಮರಾಜುನನ್ನು ಎಚ್ಚರಿಸಿದ್ದಾರೆ. ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಭಾರೀ ಅನಾಹುತದಿಂದ ಪಾರಾಗಿದ್ದಾನೆ. ರಾತ್ರಿ ವೇಳೆ ಜನ ಮಲಗಿರುವಾಗ ಘಟನೆ ನಡೆದಿದ್ದರೇ ತಿಮ್ಮರಾಜು ಬದುಕುಳಿಯುವುದು ಕಷ್ಟವಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಗಾಯಾಳು ತಿಮ್ಮರಾಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದ ರೇಷನ್ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಅನಾಹುತ ಸಂಭವಿಸಿದೆ. ಅಕ್ರಮ ಮದ್ಯ ಮಾರುವ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಗದ್ದೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ನೋಡಲು ಹೋದ ಪೊಲೀಸರಿಗೆ ಕಾದಿತ್ತು ಅಚ್ಚರಿ

    ಗದ್ದೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ನೋಡಲು ಹೋದ ಪೊಲೀಸರಿಗೆ ಕಾದಿತ್ತು ಅಚ್ಚರಿ

    ಯಾದಗಿರಿ: ಭತ್ತದ ಗದ್ದೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ ಎಂದು ನೋಡಲು ಹೋದ ಪೊಲೀಸರಿಗೆ ಆಶ್ಚರ್ಯದ ಸಂಗತಿಯೊಂದು ಎದುರಾದ ಘಟನೆ ಯಾದಗಿರಿ ನಗರದ ಹೊರ ಭಾಗದಲ್ಲಿ ನಡೆದಿದೆ.

    ಎಂದಿನಂತೆ ಭತ್ತದ ಗದ್ದೆಯ ಮಾಲೀಕರು ಗದ್ದೆಗೆ ತೆರಳಿದಾಗ ಗದ್ದೆಯಲ್ಲಿ ಯಾರೋ ಕೊಲೆ ಮಾಡಿ ಶವವನ್ನು ಬಿಸಾಕಿದ್ದಾರೆ ಎಂಬ ಅನುಮಾನದಿಂದ ಯಾದಗಿರಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವ್ಯಕ್ತಿಯ ದೇಹವು ಸಂಪೂರ್ಣವಾಗಿ ಕೆಸರಿನಲ್ಲಿ ಸಿಲಕಿದೆ ಎಂದು ನೋಡಲು ಹೋದಾಗ ಆ ವ್ಯಕ್ತಿ ಎದ್ದು ಕುಳಿತಿದ್ದನ್ನು ನೋಡಿ ಅಲ್ಲಿದ್ದ ಪೊಲೀಸರು ದಂಗಾಗಿ ಹೋಗಿದ್ದಾರೆ.

    ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ನಿವಾಸಿ ವೀರಭದ್ರಯ್ಯ ಶನಿವಾರ ಕಂಠಪೂರ್ತಿ ಕುಡಿದು ನಗರದ ಹೊರ ಭಾಗದಲ್ಲಿ ಭತ್ತದ ಗದ್ದೆಯ ಕೆಸರಿನಲ್ಲಿ ಸಿಲಕಿದ್ದಾರೆ. ಇಂದು ಮಧ್ಯಾಹ್ನ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಎದ್ದು ಕುಳಿತ ವೀರಭದ್ರಯ್ಯನಿಗೆ ನಗರ ಠಾಣೆ ಪಿಎಸೈ ಮಾಹಂತೇಶ ಸಜ್ಜನ್ ವಿಚಾರಿಸಿದಾಗ ಕುಡಿದ ಅಮಲಿನಲ್ಲಿ ಈ ಘಟನೆ ನಡೆದಿದೆ ಅಂತ ವೀರಭದ್ರಯ್ಯ ಹೇಳಿದ್ದಾರೆ.

    ಸದ್ಯ ಅಸ್ವಸ್ಥವಾಗಿರುವ ವೀರಭದ್ರಯ್ಯನಿಗೆ ಚಿಕಿತ್ಸೆ ಕೊಡಿಸಿ ನಂತರ ಊರಿಗೆ ಕಳಿಸುವ ಕೆಲಸವನ್ನು ಪಿಎಸ್ ಮಾಹಂತೇಶ ಸಜ್ಜನ ಮಾಡಿದ್ದಾರೆ.

  • ದಾವಣಗೆರೆಯಲ್ಲಿ ಕುಡುಕನ ಅವಾಂತರ- ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಸಾರ್ವಜನಿಕರಿಗೆ ಕಿರಿಕ್

    ದಾವಣಗೆರೆಯಲ್ಲಿ ಕುಡುಕನ ಅವಾಂತರ- ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಸಾರ್ವಜನಿಕರಿಗೆ ಕಿರಿಕ್

    ದಾವಣಗೆರೆ: ರಾಜ್ಯಾದ್ಯಂತ ಬಂದ್ ಬಿಸಿ ಇದ್ದರೆ, ಇದರ ನಡುವೆ ದಾವಣಗೆರೆಯಲ್ಲಿ ಕುಡುಕನ ಅವಾಂತರ ಅಲ್ಲಿ ನೆರೆದ ಸಾರ್ವಜನಿಕರಿಗೆ ಮನೋರಂಜನೆ ನೀಡಿತ್ತು.

    ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಎದುರು ಕುಡುಕ ಮಹಾಶಯನೊಬ್ಬ, ಬಸ್‍ಗಾಗಿ ಕಾಯುತ್ತಿದ್ದ ಪ್ರಯಣಿಕರಿಗೆ ಕಿರಿಕ್ ಮಾಡಿ ಅವಾಂತರ ಸೃಷ್ಟಿಸಿದ್ದಾನೆ. ಬಂದ್ ಇರೋದ್ರಿಂದ ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಪ್ರಯಾಣಿಕರ ಬಳಿ ಹೋಗಿ ಅವರನ್ನು ಎಳೆದಾಡಿ ಟವಲ್ ಕಿತ್ತುಕೊಳ್ಳುವುದು, ಅಪ್ಪಿಕೊಳ್ಳುವುದನ್ನು ಮಾಡಿದ್ದಾನೆ.

    ದಾವಣಗೆರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಅವಾಂತರ ನಡೆದಿದ್ದು, ಮದ್ಯವ್ಯಸನಿ ಬುಧವಾರ ರಾತ್ರಿ ಕಂಠಪೂರ್ತಿ ಕುಡಿದು ಮಲಗಿದ್ದನು. ಪ್ರತಿಭಟನಾಕಾರರು ಎಬ್ಬಿಸಿದ ಬಳಿಕ ವ್ಯಕ್ತಿ ಕಣ್ತೆರೆದಿದ್ದಾನೆ. ಒಂದು ಕಡೆ ಮನೋರಂಜನೆಯಾದರೆ, ಮತ್ತೊಂದು ಕಡೆ ಈತನ ವರ್ತನೆಯಿಂದ ಕೆಲವರಿಗೆ ಕಿರಿಕಿರಿ ಉಂಟಾಗಿದೆ.

    ನಂತರ ಪೊಲೀಸರು ಬಂದು ಕುಡುಕನನ್ನು ದಬಾಯಿಸಿ ಆಟೋ ಹತ್ತಿಸಿ ಕಳುಹಿಸಿದ್ದಾರೆ.

  • ಕೃಷ್ಣಾ ನದಿಗೆ ಜಿಗಿದು ಕುಡುಕ ವ್ಯಕ್ತಿಯ ಹೈಡ್ರಾಮಾ

    ಕೃಷ್ಣಾ ನದಿಗೆ ಜಿಗಿದು ಕುಡುಕ ವ್ಯಕ್ತಿಯ ಹೈಡ್ರಾಮಾ

    ವಿಜಯವಾಡ: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಕೃಷ್ಣಾ ನದಿಗೆ ಜಿಗಿದು ಹೈಡ್ರಾಮಾ ಮಾಡಿದ ಘಟನೆ ಮಂಗಳವಾರದಂದು ಆಂಧ್ರಪ್ರದೇಶದ ಪ್ರಕಾಶಂ ಬ್ಯಾರೇಜ್ ಬಳಿ ನಡೆದಿದೆ.

    ಕುಡಿದ ಮತ್ತಿನಲ್ಲಿ ವ್ಯಕ್ತಿ ನದಿಗೆ ಜಿಗಿದಾಗ ಅಲ್ಲೇ ಇದ್ದ ಪೊಲೀಸರು ಅದನ್ನು ಗಮನಿಸಿ ಅವನನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದರು. ಪೊಲೀಸರು ಆತನನ್ನು ಹಗ್ಗದಿಂದ ಮೇಲೆಳೆಯೋ ವೇಳೆ ವ್ಯಕ್ತಿ ಮತ್ತೆ ನದಿಯಲ್ಲಿ ಜಿಗಿದಿದ್ದಾನೆ. ಸತತ ಮಳೆಯ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಆತ ನದಿಯಲ್ಲಿ ಮುಳುಗಿಬಿಡುತ್ತಾನೆ ಎಂದು ಪೊಲೀಸರು ಹೆದರಿದ್ದರು. ಆದ್ರೆ ಆತ ಬ್ಯಾರೇಜ್‍ನ ಕಂಬವೊಂದನ್ನ ಸಪೋರ್ಟ್‍ಗಾಗಿ ಹಿಡಿದುಕೊಂಡಿದ್ದ.

    ಈ ವೇಳೆ ಅಲ್ಲಿದ ಜನರು ನದಿಯಲ್ಲಿ ಜಿಗಿದ ವ್ಯಕ್ತಿಯ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದರು. ಈ ಘಟನೆಯಿಂದ ಬ್ಯಾರೇಜ್ ರಸ್ತೆಯಲ್ಲಿ ಕಿಲೋಮಿಟರ್ ಗಟ್ಟಲ್ಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರ್ಧ ಗಂಟೆಯ ನಂತರ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ನೀರಿನಲ್ಲಿ ಜಿಗಿದಿದ್ದು ಯಾಕೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ .