Tag: Drunk man

  • ಕುಡಿದ ಅಮಲಿನಲ್ಲಿ ಜಗಳ- ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ

    ಕುಡಿದ ಅಮಲಿನಲ್ಲಿ ಜಗಳ- ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ

    ಬಾಗಲಕೋಟೆ: ಕುಡಿದ ನಶೆಯಲ್ಲಿ ಜಗಳವಾಡಿ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ ಮಾಡಿರುವ ಭೀಕರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಕಟ್ಟಿಗೆ ಅಡ್ಡೆಯಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ನಾಗಪ್ಪ ಅಂಬಿಗೇರ(60) ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಶಂಕರ್ ಎಂದು ಗುರುತಿಸಲಾಗಿದೆ. ನಗರದ ಹಳೆ ಬಸ್ ನಿಲ್ದಾಣದ ಹಿಂಬದಿಯ ಬುರ್ಲಿ ಕಾಂಪ್ಲೆಕ್ಸ್ ಆವರಣದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಕುಡಿದ ಅಮಲಿನಲ್ಲಿ ಶಂಕರ್ ಹಾಗೂ ನಾಗಪ್ಪ ಮಧ್ಯೆ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿ ಇಬ್ಬರು ಕೈ, ಕೈ ಮಿಲಾಯಿಸಿದ್ದರು. ಕೊನೆಗೆ ಕ್ಷುಲ್ಲಕ ಕಾರಣಕ್ಕೆ ವಾದ ವಿವಾದ ನಡೆದು, ಶಂಕರ್ ನಾಗಪ್ಪನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಘಟನೆ ನಡೆದ ಸ್ಥಳದಿಂದ ನಾಗಪ್ಪ ಶವವನ್ನ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ ಬಳಿಕ ಶವವನ್ನು ಆರೋಪಿ ಎಳೆದು ತಂದು ದೂರ ಬಿಸಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್‍ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಾಗಲಕೊಟೆ ಶಹರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಶಂಕರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಾಗಪ್ಪನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

  • ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಬೆಂಗಳೂರು: ಗಾಂಜಾ, ಮದ್ಯ ಹೀಗೆ ದುಷ್ಚಟಗಳಿಗೆ ದಾಸನಾಗಿರುವ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಮಲಗಿ, ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ನೀಡುವಂತೆ ಕಾಟ ಕೊಟ್ಟ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.

    ನೆಲಮಂಗಲ ಪಟ್ಟಣದ ಕೆಇಬಿ ಆಂಜನೇಯ ದೇವಾಲಯದ ರಸ್ತೆಯಲ್ಲಿ ಕುಡುಕ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾನೆ. ರಸ್ತೆಯಲ್ಲಿ ಬರುವ ಕಾರು, ಬೈಕ್‍ಗಳಿಗೆ ಅಡ್ಡ ಮಲಗಿ ಹಣಕ್ಕೆ ಬೇಡಿಕೆ ಇಟ್ಟು ತೊಂದರೆ ಕೊಡುತ್ತಾ, 100 ರೂ. ಕೊಡುವವರೆಗೂ ಬಿಡದೇ ರಂಪಾಟ ಮಾಡಿ ಹಣ ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಆತ ಕೇಳಿದಾಗ ಹಣ ನೀಡದಿದ್ದರೆ ಬೀದಿ ರಂಪಾಟ ಮಾಡಿ ಗಲಾಟೆ ಮಾಡುತ್ತಾನೆ. ಹೀಗಾಗಿ ಈತನ ಕಾಟ ತಾಳಲಾರದೆ ಜನರು ಹಣ ಕೊಟ್ಟು ದಯವಿಟ್ಟು ಕಾಟ ಕೊಡಬೇಡಪ್ಪ ಎಂದು ಜಾಗ ಖಾಲಿ ಮಾಡುತ್ತಾರೆ.

    ಪ್ರತಿನಿತ್ಯ ಈ ವ್ಯಕ್ತಿಯದ್ದು ಇದೇ ಗೋಳಾಗಿ ಬಿಟ್ಟಿದೆ. ಈತನ ಪುಂಡಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಗಾಂಜಾ ಇನ್ನಿತರ ಮಾದಕವಸ್ತುಗೆ ಯುವಕರು ಮಾರು ಹೋಗಿದ್ದು, ನಶೆಯಲ್ಲಿ ಈ ರೀತಿ ಬೀದಿ ರಂಪಾಟ ಮಾಡಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾರೆ.

  • ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ!

    ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ನಶೆಯಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರದಲ್ಲಿ ನಡೆದಿದೆ.

    ವಿಶ್ವೇಶ್ವರಪುರದ ನಿವಾಸಿ ಗೋವಿಂದರಾಜು(35) ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಪೇಂಟರ್ ಕೆಲಸ ಮಾಡುತ್ತಿದ್ದ ಗೋವಿಂದರಾಜು ಸೋಮವಾರ ರಾತ್ರಿ ಕುಡಿದು ಮನೆಗೆ ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ನಾಗರ ಹಾವನ್ನು ಹಿಡಿಯಲು ಮುಂದಾಗಿದ್ದಾನೆ. ಮೊದಲೇ ಕುಡಿದ ನಶೆಯಲ್ಲಿದ್ದ ಗೋವಿಂದರಾಜು ಹಾವನ್ನು ಹಿಡಿಯಲು ಹೋಗಿ ಅದರಿಂದ ಕಚ್ಚಿಸಿಕೊಂಡಿದ್ದಾನೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗೋವಿಂದರಾಜು ಮನೆಯ ಬೀರಿನ ಹಿಂದೆ ನಾಗರ ಹಾವೊಂದು ಅವಿತುಕೊಂಡಿತ್ತು. ಕುಡಿದು ಮನೆಗೆ ಬಂದಾಗ ಅವಿತಿದ್ದ ಹಾವನ್ನು ಹಿಡಿಯವ ಸಾಹಸಕ್ಕೆ ಗೋವಿಂದರಾಜು ಕೈಹಾಕಿ, ಕೈಬೆರಳಿಗೆ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

    ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

    ಕೋಲಾರ: ಕುಡಿದ ನಶೆಯಲ್ಲಿ ಕುಡುಕನೊಬ್ಬ ಮನೆಗಳ ಮೇಲ್ಛಾವಣಿ ಹಾಗೂ ಗೃಹಪಯೋಗಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ಇರುದಯಂ ಕಾಲೋನಿಯಲ್ಲಿ ಸೋಮವಾರ ನಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಅದೇ ಕಾಲೋನಿಯ ನಿವಾಸಿ ಮಂಜುನಾಥ್ ಎಂಬಾತ 5 ಮನೆಗಳಲ್ಲಿ ಪಿಠೋಪಕರಣ, ಮೇಲ್ಛಾವಣಿಯನ್ನು ಕುಡುಕ ಧ್ವಂಸ ಮಾಡಿದ್ದಾನೆ. ಮಂಜುನಾಥ್ ಅಂದರೆ ಕಾಲೋನಿಯ ಜನರಿಗೆ ಒಂಥರಾ ಭಯ. ಕುಡಿದ ಮತ್ತಿನಲ್ಲಿ ಏನೇನು ಮಾಡ್ತಾನೋ ಎನ್ನುವ ಹೆದರಿಕೆ ಸ್ಥಳೀಯರಲ್ಲಿದೆ. ಹೀಗೆ ಕುಡಿದು ಕಾಲೋನಿ ತುಂಬಾ ಓಡಾಡೋ ಮಂಜುನಾಥ್ ಇಂದು ಸ್ಥಳೀಯರಿಗೆ ವಿಪರೀತ ತಲೆನೋವು ಕೊಟ್ಟಿದ್ದಾನೆ.

    ಕುಡಿದ ನಶೆಯಲ್ಲಿ ಕಾಲೋನಿಯಲ್ಲಿದ್ದ ಸುಮಾರು 5 ಮನೆಗಳ ಮೇಲೆ ಹತ್ತಿ ಮೇಲ್ಛಾವಣಿಗೆ ಕಲ್ಲು ಹಾಗೂ ಹಂಚು ಎಸೆದು ಪುಡಿ ಪುಡಿ ಮಾಡಿದ್ದಾನೆ. ಅಲ್ಲದೆ ಮನೆಗಳಲ್ಲಿದ್ದ ಪೀಠೋಪಕರಣವನ್ನು ಕೂಡ ಹಾಳು ಮಾಡಿದ್ದಾನೆ. ಈ ಕುಡುಕನ ಅವತಾರಕ್ಕೆ ಕಾಲೋನಿಯ ಮಹಿಳೆಯರು ಹಾಗೂ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಕೆಲವರು ಈತನ ಅವಾಂತರವನ್ನು ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.

    ಈ ಘಟನೆ ಕುರಿತು ಅಂಡರ್ ಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಡುಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    https://youtu.be/VpJxEcj9F_w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯದ ಮತ್ತಿನಲ್ಲಿ ಪಾತ್ರೆ ಹಿಡಿದು ಮನಬಂದಂತೆ ತಾಯಿಯನ್ನ ಹೊಡೆದ ಕ್ರೂರಿ ಮಗ

    ಮದ್ಯದ ಮತ್ತಿನಲ್ಲಿ ಪಾತ್ರೆ ಹಿಡಿದು ಮನಬಂದಂತೆ ತಾಯಿಯನ್ನ ಹೊಡೆದ ಕ್ರೂರಿ ಮಗ

    – ತಾಯಿಯನ್ನೇ ಕೊಲೆಗೈಲು ಯತ್ನಿಸಿದ ನಿರುದ್ಯೋಗಿ ಮಗ ಅರೆಸ್ಟ್

    ಮುಂಬೈ: ಮದ್ಯದ ಮತ್ತಿನಲ್ಲಿ ತಾಯಿ ಹಾಗೂ ಪತ್ನಿಯನ್ನು ಕೊಲೆಗೈಲು ಯತ್ನಿಸಿದ್ದ ನಿರುದ್ಯೋಗಿ ಯುವಕನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ದಿಂಡೋಶಿ ನಿವಾಸಿ ಆನಂದ್ ಲಾಲ್‍ಜಿ ವಿಶ್ವಕರ್ಮ ಹಲ್ಲೆ ಮಾಡಿದ ಆರೋಪಿ. ಘಟನೆಯ ಕುರಿತು ಆನಂದ್ ಸಹೋದರಿ ಅರ್ಚನಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಬಂದ ದಿಂಡೋಶಿ ಠಾಣಾ ಪೊಲೀಸರು ಆನಂದ್‍ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಆನಂದ್ ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದ. ಈ ನಡುವೆ ಮದ್ಯ ಸೇವನೆಯನ್ನು ಬೆಳೆಸಿಕೊಂಡಿದ್ದ. ಮದ್ಯದ ಮತ್ತಿನಲ್ಲಿ ತಾಯಿ ಸರಸ್ವತಿ ಹಾಗೂ ಪತ್ನಿ ಪ್ರಿಯಾಂಕಾ ಜೊತೆಗೆ ಜಗಳವಾಡುತ್ತಿದ್ದ. ಎಂದಿನಂತೆ ಮದ್ಯ ಸೇವನೆ ಮಾಡಿದ್ದ ಆನಂದ್ ಮಂಗಳವಾರ ಮನೆಗೆ ಬಂದಿದ್ದ. ಇದನ್ನು ವಿರೋಧಿಸಿದ ಪತ್ನಿ ಪ್ರಿಯಾಂಕ ನೀನು ಮದ್ಯಪಾನ ಮುಂದುವರಿಸಿದರೆ ನಾನು ಕೂಡ ಕುಡಿಯಲು ಆರಂಭಿಸುತ್ತೇನೆ ಎಂದಿದ್ದಾಳೆ. ಇದರಿಂದ ಕೋಪಗೊಂಡ ಆನಂದ್ ಪತ್ನಿಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ.

    ಸೊಸೆಯನ್ನು ಬೆಂಬಲಿಸಿ ಸರಸ್ವತಿ ಮಗನಿಗೆ ಬುದ್ಧಿ ಹೇಳಲು ಮುಂದಾಗಿದ್ದಾಳೆ. ಈ ವೇಳೆ ಕೋಪಗೊಂಡ ಆನಂದ್ ಮದ್ಯದ ಮತ್ತಿನಲ್ಲಿ ಕೈಗೆ ಸಿಕ್ಕ ಪಾತ್ರೆಗಳನ್ನು ಎತ್ತಿಕೊಂಡು ಇಬ್ಬರ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಆತನಿಂದ ತಪ್ಪಿಸಿಕೊಂಡ ಪ್ರಿಯಾಂಕಾ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ತಪ್ಪಿಸಿಕೊಂಡಿದ್ದಾಳೆ.

    ಏಕಾಂಗಿಯಾಗಿ ಕೈಗೆ ಸಿಕ್ಕ ವೃದ್ಧ ತಾಯಿಯನ್ನು ಆನಂದ್ ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಸರಸ್ವತಿ ಅಸ್ವಸ್ಥಗೊಂಡು ಬಿದ್ದಿದ್ದಾಳೆ. ಈ ಘಟನೆಯಿಂದ ಗಾಬರಿಗೊಂಡ ಅರ್ಚನಾ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆನಂದ್‍ನನ್ನು ಬಂಧಿಸಿದ್ದಾರೆ.

    ವೃದ್ಧೆ ಸರಸ್ವತಿ ಪರಿಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯ ವೇಳೆ ಪ್ರಿಯಾಂಕಾಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿ ಆನಂದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 18 ವಾಹನಗಳಿಗೆ ಬೆಂಕಿ ಹಚ್ಚಿದ ಕುಡುಕ- ವಿಡಿಯೋ ವೈರಲ್

    18 ವಾಹನಗಳಿಗೆ ಬೆಂಕಿ ಹಚ್ಚಿದ ಕುಡುಕ- ವಿಡಿಯೋ ವೈರಲ್

    ನವದೆಹಲಿ: ದಕ್ಷಿಣ ದೆಹಲಿಯ ಮಧನ್‍ಗಿರಿ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ 4 ಕಾರುಗಳು ಸೇರಿ ಒಟ್ಟು 18 ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ.

    ಆರೋಪಿಯು 25 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಧನ್‍ಗಿರಿಯ ವಸತಿ ಕಟ್ಟಡಗಳ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ, 14 ದ್ವಿಚಕ್ರ ವಾಹನಗಳು ಹಾಗೂ 4 ಕಾರುಗಳನ್ನು ಕುಡಿದ ನಶೆಯಲ್ಲಿ ಆರೋಪಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತರಾದ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋದಲ್ಲಿ ಆರೋಪಿ ಪಾರ್ಕಿಂಗ್‍ನಲ್ಲಿ ನಿಂತಿದ್ದ ವಾಹನಗಳ ಪೆಟ್ರೋಲ್ ಪೈಪ್‍ಗಳನ್ನು ಕತ್ತರಿಸಿ, ಸೋರುವಂತೆ ಮಾಡಿ, ನಂತರ ಬೆಂಕಿ ಹಚ್ಚಿ ಸುಟ್ಟಿದ್ದಾನೆ.

    ವಾಹನಗಳಿಂದ ಪೆಟ್ರೋಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ಹತ್ತಿರದಲ್ಲಿದ್ದ 6 ಮೋಟರ್ ಬೈಕ್‍ಗಳಿಗೂ ಬೆಂಕಿ ಹತ್ತಿಕೊಂಡಿದೆ. 8 ದ್ವಿಚಕ್ರ ವಾಹನಗಳು ಹಾಗೂ 2 ಕಾರುಗಳು ಬೆಂಕಿಯಿಂದ ಸಂಪೂರ್ಣ ಸುಟ್ಟುಹೊಗಿದ್ದು, 6 ಬೈಕ್ ಮತ್ತು 2 ಕಾರುಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಬೆಳಗಿನ ಜಾವ 3:05 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಘಟನೆ ನಡೆದ ಕೂಡಲೇ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿ, ಹೆಚ್ಚಿನ ದುರಂತ ಆಗುವುದನ್ನು ತಡೆದಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿ ಪೊಲೀಸರು ಆರೋಪಿಯನ್ನು ಹಿಡಿಯುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ.

    ಸದ್ಯ ಈ ಘಟನೆಯ ದೃಶ್ಯ ಸ್ಥಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ವಿರುದ್ಧ ಐಪಿಸಿ 435 ಮತ್ತು 427 ಕಾಯ್ದೆಯ ಅಡಿಯಲ್ಲಿ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv