Tag: drunk &drive

  • ಚಾಲಕ ಮದ್ಯಪಾನ ಮಾಡಿದ್ರೆ ಕಾರು ಚಲಿಸಲ್ಲ-ಅಮೆರಿಕಾ ಹೊಸ ವ್ಯವಸ್ಥೆ

    ಚಾಲಕ ಮದ್ಯಪಾನ ಮಾಡಿದ್ರೆ ಕಾರು ಚಲಿಸಲ್ಲ-ಅಮೆರಿಕಾ ಹೊಸ ವ್ಯವಸ್ಥೆ

    – ಕುಡಿದು ಚಾಲನೆಯಿಂದ ವರ್ಷಕ್ಕೆ 10 ಸಾವಿರ ಮಂದಿ ಸಾವು

    ವಾಷಿಂಗ್ಟನ್: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಪ್ರತಿ ವರ್ಷ 10 ಸಾವಿರ ಮಂದಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಹುಡುಕಲು ಅಮೆರಿಕಾ ಮುಂದಾಗಿದೆ.

    ಮದ್ಯಪಾನ ಮಾಡಿ ಕಾರು ಚಾಲನೆಯನ್ನೆ ಮಾಡದಂತೆ ತಡೆಯುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹುಡುಕುವಂತೆ ಆಟೋಮೊಬೈಲ್ ಕಂಪನಿಗಳಿಗೆ ತಾಕೀತು ಮಾಡಿದೆ. ಅಮೆರಿಕದ ಸಾರಿಗೆ ಇಲಾಖೆ ಅತ್ಯುತ್ತಮ ತಂತ್ರಜ್ಞಾನಗಳನ್ನು ಅವಲೋಕಿಸಿದ ಬಳಿಕ 2026ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಫಲವಾಗಿ ಲಕ್ಷಾಂತರ ವಾಹನಗಳಲ್ಲಿ ಹೊಸದಾಗಿ ಉಪಕರಣ ಅಳವಡಿಸಬೇಕಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನೆಯಾಗಬೇಕಾದ ವಾಹನಗಳಲ್ಲಿ ಈ ಉಪಕರಣ ಇರಬೇಕಾಗುತ್ತದೆ. ಇದನ್ನೂ ಓದಿ: ಚಳ್ಳಕೆರೆಮ್ಮ ದೇಗುಲಕ್ಕೆ ಕನ್ನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಸಂಚಾರ ಸುರಕ್ಷತೆ ಹಾಗೂ ರಸ್ತೆ ಅಪಘಾತ ತಡೆಯುವ ಉದ್ದೇಶದಿಂದ 74 ಲಕ್ಷ ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಪ್ಯಾಕೇಜ್ ಅನ್ನು ಅಮೆರಿಕಾ ಅಂತಿಮಗೊಳಿಸುತ್ತಿದೆ. ಅಧ್ಯಕ್ಷ ಜೋ ಬೈಡೆನ್ ಅವರು ಶೀಘ್ರದಲ್ಲೆ ಇದಕ್ಕೆ ಅಂಕಿತ ಹಾಕುವ ನಿರೀಕ್ಷೆ ಇದೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

    ವಿಶೇಷತೆ ಏನು?: ಮದ್ಯ ಪ್ರಿಯರು ಕಾರು ಚಾಲನೆ ಮಾಡದಂತೆ ತಡೆಯಲು ವ್ಯವಸ್ಥೆಯೊಂದನ್ನು ಬಳಸಲಾಗುತ್ತಿದೆ. ವಾಹನ ಚಾಲೂ ಮಾಡುವ ಲಾಕ್‍ಗೆ ಬ್ರೀತ್ ಅನಲೈಸರ್ ಉಪಕರಣವನ್ನು ಅಳವಡಿಸಲಾಗಿರುತ್ತದೆ. ಕರ್ನಾಟಕದ ಪೊಲೀಸರು ಮದ್ಯ ಸೇವಿಸಿದವರನ್ನು ಪತ್ತೆ ಹಚ್ಚಲು ಬಳಸುತ್ತಿರುವಂತಹದ್ದೆ ಉಪಕರಣ ಇದಾಗಿದೆ. ಯಾವುದೇ ಚಾಲಕ ವಾಹನ ಏರಿದ ಕೂಡಲೇ ಕೊಳಾಯಿಯನ್ನು ಊದಬೇಕು. ಆತನ ರಕ್ತದಲ್ಲಿ ಹೆಚ್ಚಿನ ಅಂಶದ ಮದ್ಯ ಪತ್ತೆಯಾದರೆ ವಾಹನ ಚಾಲೂ ಆಗುವುದೇ ಇಲ್ಲ.

  • ಡ್ರಂಕ್ ಆ್ಯಂಡ್ ಡ್ರೈವ್‍ನಲ್ಲಿ ಸಿಕ್ಕಿಬಿದ್ದ ಗೆಳೆಯನಿಗಾಗಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಶೆಯ ಮತ್ತಿನಲ್ಲಿದ್ದ ಮಹಿಳೆ

    ಡ್ರಂಕ್ ಆ್ಯಂಡ್ ಡ್ರೈವ್‍ನಲ್ಲಿ ಸಿಕ್ಕಿಬಿದ್ದ ಗೆಳೆಯನಿಗಾಗಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಶೆಯ ಮತ್ತಿನಲ್ಲಿದ್ದ ಮಹಿಳೆ

    ಹೈದರಾಬಾದ್: ಡ್ರಂಕ್ ಡ್ರೈವ್ ನಲ್ಲಿ ಸಿಕ್ಕಿಬಿದ್ದ ಗೆಳೆಯನನ್ನು ಕಾಪಾಡಲು ಮಹಿಳೆ ಪೊಲೀಸರೊಂದಿಗೆ ವಾಗ್ವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದ್ದು, ಭಾನುವಾರ ರಾತ್ರಿ 1 ಗಂಟೆಗೆ ಪೊಲೀಸರು ವಾಹನ ತಪಾಸಣೆಗಾಗಿ ಮಹಿಳೆಯ ಕಾರ್ ನಿಲ್ಲಿಸಿದ್ದಾರೆ. ಕಾರ್ ಚಲಾಯಿಸುತ್ತಿದ್ದ ಮಹಿಳೆಯ ಗೆಳೆಯ ಮದ್ಯಪಾನ ಸೇವಿಸಿದ್ದು, ಉಸಿರಾಟದ ಪರೀಕ್ಷೆ (Breathalyser Test)ಗೆ ನಿರಾಕರಿಸಿದ್ದಾನೆ. ಈ ವೇಳೆ ಗೆಳೆಯನ ಸಹಾಯಕ್ಕೆ ಮುಂದಾದ ಮಹಿಳೆ ಕೆಲಕಾಲ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

    ಸ್ಥಳೀಯ ಪತ್ರಕರ್ತರೊಬ್ಬರು ಈ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದನ್ನು ಗಮನಿಸಿದ ಮಹಿಳೆ ಕ್ಯಾಮೆರಾದತ್ತ ಕಲ್ಲು ಎಸೆದಿದ್ದಾರೆ. ಕೊನೆಗೆ ಪೊಲೀಸರು ಮಹಿಳೆಯ ಗೆಳೆಯನ ವಿರುದ್ಧ ಮಾತ್ರ ದೂರು ದಾಖಲಿಸಿಕೊಂಡಿದ್ದಾರೆ ಅಂತಾ ವರದಿಯಾಗಿದೆ.

    https://www.youtube.com/watch?v=UDSOmvKcyn0

  • ನನ್ನ ಹೆಸರು ಸಿದ್ದರಾಮಯ್ಯ, ಕೆಲಸ ಮಾಡೋದು ಭೂಮಿ ಮೇಲೆ- ಕುಡಿದ ಮತ್ತಲ್ಲಿ ಪೊಲೀಸರಿಗೆ ಅವಾಜ್

    ನನ್ನ ಹೆಸರು ಸಿದ್ದರಾಮಯ್ಯ, ಕೆಲಸ ಮಾಡೋದು ಭೂಮಿ ಮೇಲೆ- ಕುಡಿದ ಮತ್ತಲ್ಲಿ ಪೊಲೀಸರಿಗೆ ಅವಾಜ್

    ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡೋ ವೇಳೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಅವಾಜ್ ಹಾಕಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೆಲ ದಿನಗಳ ಹಿಂದೆ ಬೆಂಗಳೂರಿನ ಕಾರ್ಪೊರೇಷನ್ ಸಿಗ್ನಲ್ ಬಳಿ ಹಲಸೂರು ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಸಂಜಯ್ ಕಿರಣ್ ಎಂಬಾತ ಕುಡಿದಿರುವುದು ಪತ್ತೆಯಾಗಿತ್ತು.

    ಈ ವೇಳೆ ಪೊಲೀಸರು ನಿಮ್ಮ ಹೆಸರೇನು ಎಂದು ಕೇಳಿದ್ರೆ, ನನ್ನ ಹೆಸರು ಸಿದ್ದರಾಮಯ್ಯ ಎಂದು ಉತ್ತರ ನೀಡಿದ್ದಾನೆ. ಎಲ್ಲಿ ಕೆಲಸ ಮಾಡುತ್ತೀರಿ ಎಂದು ಕೇಳಿದಾಗ ಭೂಮಿ ಮೇಲೆ ಎಂದು ಉತ್ತರಿಸಿದ್ದಾನೆ.

    ಇಷ್ಟೇ ಅಲ್ಲದೇ ನಾಳೆಯಿಂದ ನಿಮಗೆಲ್ಲಾ ಏನ್ ಮಾಡುತ್ತೀನಿ ನೋಡುತ್ತಾ ಇರಿ ಎಂದು ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.

  • ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಬೆಂಗಳೂರು: ತಡ ರಾತ್ರಿ ಟ್ರಾಫಿಕ್ ಪೊಲೀಸರು ಡ್ರಂಕ್ & ಡ್ರೈವ್ ತಪಾಸಣೆ ಮಾಡುವ ವೇಳೆ ಇಬ್ಬರು ವಿದೇಶಿಯರು ಸೇರಿ ಏಳು ಜನರ ಗುಂಪು ಪಾನ ಮತ್ತರಾಗಿ 1 ಗಂಟೆಗೂ ಹೆಚ್ಚುಕಾಲ ಇನ್ನಿಲ್ಲದೆ ಸಂಚಾರಿ ಪೊಲೀಸರನ್ನ ಕಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಂ.ಜಿ ರಸ್ತೆಯಿಂದ ಪಾರ್ಟಿ ಮುಗಿಸಿ ಕುಡಿದು ತಮಿಳುನಾಡು ರಿಜಿಸ್ಟ್ರೇಷನ್ ನ ಟಾಟಾ ಸುಮೋದಲ್ಲಿ ಬಂದ ಏಳು ಜನರು ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಸಹಕರಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

    ಸತತ ಒಂದು ಗಂಟೆಗಳ ಕಾಲ ನಾಲ್ವರು ಟ್ರಾಫಿಕ್ ಸಿಬ್ಬಂದಿಗಳನ್ನು ಕಾಡಿದ ಅವರು ಅವಾಂತರ ಸೃಷ್ಟಿಸಿದ್ದಾರೆ. ತಪಾಸಣೆ ವೇಳೆ ಚಾಲಕ ಸುಂದರೇಶನ್(35) ಮದ್ಯ ಸೇವಿಸಿರುವುದು ಸಾಬೀತಾಗಿದೆ. ಇನ್ನುಳಿದಂತೆ ಆರು ಜನರು ಕುಡಿದು ರಸ್ತೆಯಲ್ಲೆಲ್ಲಾ ತೂರಾಟ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಲು ನಾನಾ ಕಸರತ್ತು ನಡೆಸಿದರು.

    ಎಂ.ಜಿ.ರಸ್ತೆಯಿಂದ ಪಾರ್ಟಿ ಮಾಡಿ ಬಂದ ಇಬ್ಬರು ಇಟಲಿ ಮಹಿಳೆಯರು, ಮೂವರು ಗಂಡಸರು, ಒಬ್ಬ ತಮಿಳು ಯುವತಿ, ಮತ್ತೊಬ್ಬ ಮಲೆಯಾಳಿ ಯುವತಿ ಸೇರಿ 7 ಜನರ ಗುಂಪು ಪುಂಡಾಟ ನಡೆಸಿದೆ. ಇವರ ತರಲೆ ನಿಲ್ಲಿಸಲಾಗದೇ ಪರದಾಡಿದ ಪೊಲೀಸರು ತಪಾಸಣೆ ನಡೆಸುವಷ್ಟರಲ್ಲಿ ಸುಸ್ತಾಗಿದ್ದರು. ಕೊನೆಗೂ ಚಾಲಕನನ್ನ ತಪಾಸಣೆ ನಡೆಸಿ ಟಾಟಾ ಸುಮೋ ಸೀಜ್ ಮಾಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.