ಶಿವಮೊಗ್ಗ: ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ ಚಾಲಕನಿಗೆ ಶಿವಮೊಗ್ಗ (Shivamogga) ಟ್ರಾಫಿಕ್ ಪೊಲೀಸರು 13,000 ರೂ. ದಂಡ ವಿಧಿಸಿದ್ದಾರೆ.
ಶಿವಮೊಗ್ಗದ ಐಬಿ ಸರ್ಕಲ್‍ನಲ್ಲಿ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಅಜಾಗರೂಕತೆಯಿಂದ ಚಾಲಕ ಅಂಬ್ಯುಲೆನ್ಸ್ (Ambulance) ಚಾಲನೆ ಮಾಡಿಕೊಂಡು ಬಂದಿದ್ದ. ತಪಾಸಣೆ ಸಮಯದಲ್ಲಿ ಚಾಲಕ ಮದ್ಯಪಾನ ಮಾಡಿ ಚಾಲನೆ (Drunk And Drive) ಮಾಡಿರುವುದು ಸಾಬೀತಾಗಿತ್ತು. ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?
ಬೆಂಗಳೂರು: ನಗರದ (Bengaluru) ಮೈಸೂರು ರಸ್ತೆಯಲ್ಲಿ ಕ್ಯಾಂಟರ್ ಒಂದು ನಿಯಂತ್ರಣ ತಪ್ಪಿ ಐರಾವತ ಬಸ್, ಕಾರು, ಆಟೋ ಲಾರಿ ಹಾಗೂ ಬೈಕ್‍ಗೆ (Accident) ಡಿಕ್ಕಿಯಾಗಿದೆ.
ಸ್ಯಾಟಲೈಟ್ ಬಸ್ ನಿಲ್ದಾಣ ಮುಂಭಾಗ ಬೆಳಗ್ಗೆ 5:00 ಗಂಟೆಗೆ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್ ಮೈಸೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಂತಿದ್ದ ಕಾರು, ಆಟೋ, ಬೈಕ್‍ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ಅಪ್ಪಚ್ಚಿಯಾಗಿದೆ ಅಷ್ಟೇ ಅಲ್ಲದೇ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದ ಐರಾವತ ಬಸ್‍ಗೂ ಸಹ ಕ್ಯಾಂಟರ್ ಡಿಕ್ಕಿಹೊಡೆದಿದೆ. ಬಳಿಕ ಲಾರಿಯೊಂದಕ್ಕೆ ಡಿಕ್ಕಿಯಾಗಿ ಕ್ಯಾಂಟರ್ ನಿಂತಿದೆ.
ಅಪಘಾತದಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್‍ನ ಮುಂಭಾಗ ಅಪ್ಪಚ್ಚಿಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಕ್ಯಾಂಟರ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್ ಚಾಲಕ ಕುಡಿದು ವಾಹನ ಚಲಾಯಿಸಿರುವ (Drunk And Drive) ಶಂಕೆ ವ್ಯಕ್ತವಾಗಿದೆ.
ಗಾಂಧಿನಗರ : ಇಲ್ಲಿನ ವಡೋದರಾದಲ್ಲಿ (Vadodara) ಯುವಕನೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ 2 ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಕ್ಷಿತ್ ಚೌರಾಸಿಯಾ (20) ವಡೋದರಾದ ವಿಶ್ವ ವಿದ್ಯಾಲಯವೊಂದರ ವಿದ್ಯಾರ್ಥಿ ಬಂಧಿತ ಆರೋಪಿ.
ಯುವಕ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ 2 ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ಹೇಮಾನಿ ಪಾಟೀಲ್ ಎಂದು ಗುರುತಿಸಲಾಗಿದೆ. ಹೇಮಾನಿ ಪಾಟೀಲ್ ಮಗಳೊಂದಿಗೆ ಹೋಳಿ ಹಬ್ಬದ ಹಿನ್ನೆಲೆ ಬಣ್ಣ ತರಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಬಳಿಕ ಯುವಕ ಕಾರಿನಿಂದ ಇಳಿದು ದರ್ಪದಿಂದಲೇ ನಡೆದುಕೊಂಡು ಹೋಗಿದ್ದ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದರು. ಇದನ್ನೂ ಓದಿ: 178 ಜನರನ್ನು ಹೊತ್ತು ಹಾರುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ – 12 ಜನಕ್ಕೆ ಗಾಯ
ಯುವಕನ ಜೊತೆ ಆತನ ಸ್ನೇಹಿತ ಮಿತ್ ಚೌಹಾಣ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಅಪಘಾತದ ಬಳಿಕ ಆತ ಕಾರಿನಿಂದ ಇಳಿದು ನಾನು ಏನು ಮಾಡಿಲ್ಲ. ಆತನೇ ಕಾರು ಚಲಾಯಿಸುತ್ತಿದ್ದ ಎಂದು ಸ್ಥಳೀಯರ ಬಳಿ ಹೇಳಿದ್ದಾನೆ. ಮಿತ್ ಚೌಹಾಣ್ ವಡೋದರಾದಲ್ಲಿ ವಾಸಿಸುವ ಮತ್ತು ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿರುವ ಮಿತ್ ಚೌಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ: ಪುನೀತ್ ರೀ-ರಿಲೀಸ್ ಸಿನಿಮಾ ಬಗ್ಗೆ ಅನುಶ್ರೀ ಮಾತು
ಅಪಘಾತದ ರಭಸಕ್ಕೆ ಕಾರಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಆರೋಪಿ ರಕ್ಷಿತ್ ರಸ್ತೆಯ ಉದ್ದಕ್ಕೂ ನಡೆಯುತ್ತಾ `ಓಂ ನಮಃ ಶಿವಾಯ’ ಎಂದು ಜಪಿಸಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸಂಭ್ರಮ ಮನೆ ಮಾಡಿತ್ತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ವೈಟ್‌ಫೀಲ್ಡ್ ಮೊದಲಾದ ಕಡೆ ಯುವಜನತೆ ನ್ಯೂ ಇಯರ್ ಸಂಭ್ರಮದಲ್ಲಿ ತೇಲಿದರು.
ಚೆನ್ನೈ: ರಾಜ್ಯಸಭಾ ಸಂಸದರ ಮಗಳು ಪಾದಚಾರಿ ರಸ್ತೆಯಲ್ಲಿ (Pavement) ಮಲಗಿದ್ದ ವ್ಯಕ್ತಿಯ ಮೇಲೆ ತನ್ನ ಬಿಎಂಡಬ್ಲ್ಯೂ ಕಾರು ಹರಿಸಿ, ಆತ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ರಾಜ್ಯಸಭಾ ಸಂಸದರ (Rajya Sabha MP) ಪುತ್ರಿಗೆ ಜಾಮೀನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪುಣೆಯ ಪೋಶೆ ಕಾರು ಅಪಘಾತದ ಒಂದು ತಿಂಗಳ ನಂತರ ನಡೆದ ಹೈಪ್ರೊಫೈಲ್ ಕೇಸ್ ಇದಾಗಿದೆ. ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸಂಸದ (YSRCP MP) ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ತಮ್ಮ ಸ್ನೇಹಿತರೊಟ್ಟಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿದ್ದಾರೆ, ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಕುಡಿದ ಮತ್ತಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಎಂಬಾತನ ಮೇಲೆ ಕಾರು ಹರಿಸಿದ್ದಾರೆ. ಘಟನೆ ನಂತ್ರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸೂರ್ಯ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಘಟನೆ ನಂತರ ಸ್ಥಳೀಯರು ಜೆ-5 ಶಾಸ್ತ್ರಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಶರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅಪಘಾತ ಮಾಡಿದ ಬಿಎಂಡಬ್ಲ್ಯೂ ಕಾರು ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರಿಗೆ ಸೇರಿದ್ದು, ಈ ಕಾರು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂಬುದು ಗೊತ್ತಾಗಿದೆ. ನಂತರ ಅಪಘಾತ ಎಸಗಿದ ಮಹಿಳೆ ಮಾಧುರಿಯನ್ನು ಪೊಲೀಸರು ಬಂಧಿಸಿದ್ದರು, ಆದರೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು.
ಈ ಪ್ರಕರಣ ಏನು?
ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಫುಟ್ ಪಾತ್ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿದಿತ್ತು. ಇದರಿಂದಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಮಾಧುರಿ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಅವರ ಸ್ನೇಹಿತರೊಬ್ಬರು ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಶಿ ನೀಡಲು ಮುಂದಾಗಿದ್ದರು. ಬಳಿಕ ಆತನೂ ಅಲ್ಲಿಂದ ಹೊರಟು ಹೋದ. ಗುಂಪಿನಲ್ಲಿದ್ದ ಕೆಲವರು ಸೂರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಕ್ರಿಸ್ಮಸ್ (Christmas), ಹೊಸ ವರ್ಷ (New Year) ಎಂದು ಹೇಳಿ ಮದ್ಯ ಪಾರ್ಟಿ ಮಾಡಿ ವಾಹನ ಚಾಲನೆ ಮಾಡಿದ್ರೆ ನಿಮ್ಮ ಗಾಡಿ ಜಪ್ತಿಯಾಗಲಿದೆ.
ಬೆಂಗಳೂರು ಪೊಲೀಸರು (Bengaluru Police) ಅಲರ್ಟ್ ಆಗಿದ್ದು ನಗರದಾದ್ಯಂತ ಟ್ರಾಫಿಕ್ ಪೊಲೀಸರಿಂದ (Traffic Police) ಡ್ರಂಕ್ ಆಂಡ್ ಡ್ರೈವ್ ಟೆಸ್ಟ್ ಆರಂಭವಾಗಿದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಸೂಚನೆ ಮೇರೆಗೆ ಈಗಿನಿಂದಲೇ ಕುಡಿದು ವಾಹನ ಚಲಾಯಿಸದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಕುಡಿದು ವಾಹನ ಚಲಾಯಿಸಿದರೆ ದಂಡದ ಜೊತೆ ವಾಹನವನ್ನು ಸೀಜ್ ಮಾಡಲಾಗುತ್ತದೆ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್ ಸ್ಲಿಪ್ ಮತದಾರರ ಕೈಗೆ ನೀಡಬೇಕು
ಮಲ್ಲೇಶ್ವರದಲ್ಲಿ ಕಳೆದ ರಾತ್ರಿ ಹೈಡ್ರಾಮಾ ನಡೆದಿದೆ. ಮಲ್ಲೇಶ್ವರಂ ಸಂಚಾರ ಪೊಲೀಸರು ದೇವಯ್ಯ ಪಾರ್ಕ್ ಬಳಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಾವು ಕುಡಿದೇ ಇಲ್ಲ ಎಂದು ಕೆಲವರು ನಾಟಕ ಮಾಡಿದ್ದಾರೆ. ಆದರೆ ಆಲ್ಕೋ ಮೀಟರ್ ತಪಾಸಣೆ ಬಳಿಕ ಮೌನಕ್ಕೆ ಶರಣಾಗಿದ್ದಾರೆ.
ಕುಡಿದು ಚಾಲನೆ ಮಾಡಿದರೆ ರಶೀದಿಯನ್ನು ಚಾಲಕನ ಕೈಗೆ ನೀಡಿ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ನಂತರ ಕೋರ್ಟ್ ನಲ್ಲಿ ದಂಡ ಪಾವತಿಸಿ ಬಂದರೆ ಮಾತ್ರ ವಾಹನ ರಿಲೀಸ್ ಮಾಡಲಾಗುತ್ತದೆ.
ಮುಂಬೈ: ಮದ್ಯಪಾನ ಮಾಡಿ ಕಾರು ಚಲಾಯಿಸಿ (Drunk and Drive) ಬೈಕ್ ಹಾಗೂ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ಥಾಣೆಯ ಉಲ್ಲಾಸ್‍ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಸುಬುದ್ದೀನ್ ಜಾನಾ, ಅಂಜಲಿ ಜಾನಾ ಮತ್ತು ಶಂಭುರಾಜ್ ಚವ್ಹಾಣ್ ಎಂದು ಗುರುತಿಸಲಾಗಿದೆ. ಮೃತರು ಆಟೋ ಹಾಗೂ ಬೈಕ್‌ನಲ್ಲಿದ್ದರು. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ಯಪಾನ ಮಾಡಿ ಕಾರನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಈ ಅಪಘಾತ (Car Accident) ಸಂಭವಿಸಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆಗೆ ಓರ್ವ ಬಲಿ – ರೈಲ್ವೇ ನಿಲ್ದಾಣದಲ್ಲಿ ಸಿಲುಕಿದ 500ಕ್ಕೂ ಹೆಚ್ಚು ಪ್ರಯಾಣಿಕರು
ಅಪಘಾತದ ಬಳಿಕ ಕಾರಿನ ಚಾಲಕ ನಾಗೇಶ್ ರಮಣಿ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕುಡುಕನೋರ್ವ ಟ್ರಾಫಿಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾನೆ.
ಹೌದು, ಮದ್ಯ ಪ್ರಿಯರಿಗೆ ಮದ್ಯ ಒಂದಿದ್ದರೆ ಸಾಕು ಲೋಕವನ್ನೇ ಮರೆತು ಬಿಡುತ್ತಾರೆ. ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಪರಿಜ್ಞಾನ ಸಹ ಎಲ್ಲದೇ ಎಣ್ಣೆ ಏಟಲ್ಲಿ ಎಷ್ಟೋ ಮಂದಿ ಮುಳುಗಿ ಬಿಟ್ಟಿರುತ್ತಾರೆ. ಎಷ್ಟೋ ಮಂದಿ ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿರುವುದನ್ನು ನೋಡಿರುತ್ತೇವೆ. ಇನ್ನೂ ಎಷ್ಟೋ ಮಂದಿ ಕುಡಿದ ನಂತರ ತಮ್ಮ ಪೌರುಷ ತೋರ್ಪಡಿಸಲು ಪ್ರಯತ್ನಿಸುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಕುಡುಕನೊಬ್ಬ ಪೊಲೀಸರಿಗೆ ಕಿರಿಕಿರಿಯನ್ನುಂಟು ಮಾಡಿದ್ದಾನೆ. ಇದನ್ನೂ ಓದಿ: ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್
ರಾತ್ರಿ 12 ಗಂಟೆ ಸುಮಾರಿಗೆ ಹಲಸೂರ್ ಪೊಲೀಸ್ ಠಾಣೆ ಮುಂದೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಟ್ರಾಫಿಕ್ ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಕುಡಿದು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಗೆ ಟ್ರಾಫಿಕ್ ಸಿಬ್ಬಂದಿ ಗಾಡಿ ಸೈಡಿಗೆ ಹಾಕುವಂತೆ ಹೇಳಿದ್ದಾರೆ. ಅಷ್ಟಕ್ಕೇ ಆತ ಟ್ರಾಫಿಕ್ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ಬಳಿಕ ಆತನಿಂದ ದಂಡ ಕಟ್ಟಿಸಿಕೊಂಡು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್ – ಮಕ್ಕಳ ಆಯೋಗದಿಂದ ಮಾಹಿತಿ
Live Tv
[brid partner=56869869 player=32851 video=960834 autoplay=true]
ಛತ್ತೀಸಗಢ: ಸರ್ಕಾರಗಳು ಹಾಗೂ ಪೊಲೀಸ್ ಇಲಾಖೆ ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಇದ್ದೇ ಇರುತ್ತಾರೆ. ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುವವರೇ ಹೆಚ್ಚು. ಇದಕ್ಕೆ ಬ್ರೇಕ್ ಹಾಕಲು ಪಂಜಾಬ್ ಪೊಲೀಸ್ ಇಲಾಖೆ ಮುಂದಾಗಿದೆ.
ಅತಿ ವೇಗವಾಗಿ ವಾಹನ ಚಲಾಯಿಸುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಕಡ್ಡಾಯ ರಕ್ತದಾನ ಮಾಡುವ ಶಿಕ್ಷೆಯನ್ನು ವಿಧಿಸುವ ನಿಯಮ ರೂಪಿಸಲು ಮುಂದಾಗಿದೆ. ದಂಡ ಹಾಕುವುದು, ತಾತ್ಕಾಲಿಕವಾಗಿ ಲೈಸೆನ್ಸ್ ರದ್ದು ಮಾಡುವ ಶಿಕ್ಷೆಯ ಜೊತೆಗೆ ರಕ್ತದಾನ ಮಾಡುವ ಶಿಕ್ಷೆ ವಿಧಿಸುವ ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ
ಅತಿ ವೇಗವಾಗಿ ವಾಹನ ಚಲಾಯಿಸಿದರೆ 1,000 ರೂ. ದಂಡ ಮತ್ತು ಮೂರು ತಿಂಗಳವರೆಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು. ಕುಡಿದು ವಾಹನ ಚಲಾಯಿಸಿದರೆ ಅದೇ ಅವಧಿಗೆ ಪರವಾನಗಿ ಅಮಾನತುಗೊಳಿಸುವುದರ ಜೊತೆಗೆ 5,000 ರೂ. ದಂಡ ವಿಧಿಸಲಾಗುತ್ತದೆ.
ಮತ್ತೆ ಅದೇ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೆ ಅತಿ ವೇಗದ ಚಾಲನೆಗೆ 2,000 ರೂ. ಮತ್ತು ಮೂರು ತಿಂಗಳ ಅವಧಿಗೆ ಪರವಾನಗಿ ಅಮಾನತು. ಕುಡಿದು ವಾಹನ ಚಲಾಯಿಸಿದರೆ 10,000 ರೂ. ದಂಡ ಹಾಗೂ 3 ತಿಂಗಳ ಅವಧಿಗೆ ಲೈಸೆನ್ಸ್ ರದ್ದು ಮಾಡಲಾಗುವುದು.
ನಿಯಮ ಉಲ್ಲಂಘಿಸುವವರು ಸಾರಿಗೆ ಪ್ರಾಧಿಕಾರದಿಂದ ಸಂಚಾರಿ ನಿಯಮ ಕುರಿತು ತಿಳಿದುಕೊಳ್ಳಬೇಕು. ನಂತರ ಹತ್ತಿರದ ಶಾಲೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ 9 ರಿಂದ 12 ನೇ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳಿಗೆ ಅದನ್ನು ಕಲಿಸಬೇಕು. ನಂತರ ಅವರಿಗೆ ನೋಡಲ್ ಅಧಿಕಾರಿಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವಾ ಆಯ್ಕೆ
ಇದರ ಜೊತೆಗೆ ತಪ್ಪಿತಸ್ಥರು ಹತ್ತಿರದ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಸಮಾಜ ಸೇವೆ ಮಾಡಬೇಕು ಅಥವಾ ಹತ್ತಿರದ ರಕ್ತನಿಧಿಯಲ್ಲಿ ಕನಿಷ್ಠ ಒಂದು ಯೂನಿಟ್ ರಕ್ತವನ್ನು ದಾನ ಮಾಡಬೇಕು.
ರೆಡ್ ಸಿಗ್ನಲ್ ಜಂಪ್ ಮಾಡಿದರೆ ಮೊದಲ ಅಪರಾಧಕ್ಕೆ 1,000 ರೂ. ಮತ್ತು ನಂತರದ ಅಪರಾಧಗಳಿಗೆ 2,000 ರೂ., ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸಿದರೆ 5,000 ರೂ. ನಂತರ 10,000 ರೂ., ಓವರ್‌ಲೋಡ್ ಅಥವಾ ಗೂಡ್ಸ್ ಕ್ಯಾರೇಜ್‌ನಲ್ಲಿರುವ ವ್ಯಕ್ತಿಗಳಿಗೆ 20,000 ರೂ. ನಂತರ 2,000 ಹೆಚ್ಚುವರಿ ದಂಡ, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಇದ್ದರೆ 1,000 ರೂ. ನಂತರ 2,000 ರೂ. ದಂಡ ವಿಧಿಸಲಾಗುವುದು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಡೆಡ್ಲಿ ಕೊರೊನಾ ಭೀತಿಯ ಎಫೆಕ್ಟ್ ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಡ್ರಂಕ್ & ಡ್ರೈವ್ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ.
ಕೊರೊನಾ ಎಫೆಕ್ಟ್ ಹಂತ ಹಂತವಾಗಿ ಎಲ್ಲಾ ವಲಯಗಳಿಗೂ ತಟ್ಟುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಡಿಡಿ ಕೇಸ್‍ಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿವೆ. ವಾಹನ ಸವಾರರಿಂದ ಎಲ್ಲಿ ನಮಗೆ ಕೊರೊನಾ ಬರುತ್ತೋ ಎನ್ನುವ ಭೀತಿಯಲ್ಲಿ ಟ್ರಾಫಿಕ್ ಪೊಲೀಸರು ಡಿಡಿ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕಿದರು.
ಅಲ್ಲದೆ ವಾಹನ ಸವಾರರು ಕೂಡ ಒಂದೇ ಅಲ್ಕೋಮೀಟರಿನಲ್ಲಿ ಎಲ್ಲರಿಗೂ ಚೆಕ್ ಮಾಡುತ್ತಾರೆ. ಹೀಗಾಗಿ ಬೇರೆ ವಾಹನ ಸವಾರರಿಂದ ನಮಗೂ ವೈರಸ್ ಬರುವ ಭೀತಿ ಇದೆ ಎಂದು ಡಿಡಿ ಚೆಕ್ ಮಾಡಿಸಿಕೊಳ್ಳುವುದಕ್ಕೆ ವಾಹನ ಸವಾರರು ಕೂಡ ಹಿಂದೇಟು ಹಾಕಿದರು. ಪ್ರಮುಖವಾಗಿ ಪೊಲೀಸರು ಮಾಸ್ಕ್ ಇಲ್ಲದೇ ಕೆಲಸ ಮಾಡುವುದಕ್ಕೆ ಬೇಸರ ವ್ಯಕ್ತಪಡಿಸಿ, ಮಾಸ್ಕ್ ಕೊಡಿಸುವಂತೆ ಮೇಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು.
ಇದನ್ನು ಅರಿತ ಪೊಲೀಸ್ ಇಲಾಖೆಯೇ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಧರಿಸಿ ಡಿಡಿ ಚೆಕ್ ಮಾಡುವಂತೆ ಆದೇಶ ಹೊರಡಿಸಿ ಇಲಾಖೆ ಕಡೆಯಿಂದ ಮಾಸ್ಕ್‍ಗಳನ್ನು ನೀಡಿತ್ತು. ಇಷ್ಟದ್ರು ಕಳೆದ ಒಂದು ವಾರದಿಂದೀಚೆಗೆ ಡಿಡಿ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಿನಕ್ಕೆ 400-500 ಕೇಸ್‍ಗಳು ಬುಕ್ ಆಗುತ್ತಿದ್ದ ಜಾಗದಲ್ಲಿ ದಿನಕ್ಕೆ ಕೇವಲ 30-40 ಕೇಸ್‍ಗಳು ಮಾತ್ರ ಪತ್ತೆಯಾಗುತ್ತಿವೆ. ಕಳೆದ ಶನಿವಾರ 494 ಡ್ರಂಕ್ & ಡ್ರೈವ್ ಕೇಸ್‍ಗಳು ಬುಕ್ ಆಗಿದ್ರೆ, ಈ ವಾರ ಕೇವಲ 28 ಕೇಸ್‍ಗಳು ಮಾತ್ರ ಬುಕ್ ಆಗಿವೆ.