Tag: drunk

  • ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

    ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

    ರಾಯಚೂರು: ಫುಲ್ ಟೈಟಾಗಿ ಶಾಲೆಗೆ ಬರುತ್ತಿದ್ದ ರಾಯಚೂರಿನ ಮಸ್ಕಿ ತಾಲೂಕಿನ ಗೋನಾಳ ಶಾಲಾ ಮುಖ್ಯೋಪಾಧ್ಯಾಯ ನಿಂಗಪ್ಪ ಕೊನೆಗೂ ಅಮಾನತಾಗಿದ್ದಾರೆ.

    ಈ ಹೆಡ್ ಮಾಸ್ಟರ್ ಕಂಠಪೂರ್ತಿ ಕುಡಿದು ಶಾಲಾ ಅಡುಗೆ ಕೋಣೆ ಬಾಗಿಲಲ್ಲೇ ಮಲಗಿದ್ದ. ಸುದ್ದಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿ‌ ಕ್ರಮ ಕೈಗೊಂಡಿದೆ. ಮದ್ಯಪಾನ ಮಾಡಿ ಶಾಲಾ ಆವರಣದಲ್ಲಿ ಮಲಗಿದ್ದ ಹೆಡ್‌ಮಾಸ್ಟರ್ ನಿಂಗಪ್ಪನನ್ನ ಅಮಾನತು ಮಾಡಲಾಗಿದೆ.

    ‌ಕರ್ತವ್ಯ ಲೋಪ, ದುರ್ನಡತೆ ಹಾಗೂ ಬೇಜವಾಬ್ದಾರಿತನ ಹಿನ್ನೆಲೆ ಅಮಾನತುಗೊಳಿಸಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಆದೇಶ ಹೊರಡಿಸಿದ್ದಾರೆ.

    ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಡ್‌ಮಾಸ್ಟರ್ ಬಿಸಿಯೂಟ ಅಡುಗೆ ಮಾಡುವ ಮಹಿಳೆಯರೊಂದಿಗೂ ಅಸಭ್ಯ ವರ್ತನೆ ತೋರಿದ್ದ. ಈ ಹಿಂದೆ ಗ್ರಾಮಸ್ಥರು, ಪೋಷಕರು ಎಷ್ಟೇ ಬಾರಿ ಛೀಮಾರಿ ಹಾಕಿದ್ರು ಬದಲಾಗಿರಲಿಲ್ಲ. ನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಹೆಡ್‌ಮಾಸ್ಟರ್ ಈಗ ಅಮಾನತಾಗಿದ್ದಾನೆ.

  • ಪತ್ನಿಯ ಕಣ್ಣು, ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದ ಕಟುಕ ಪತಿ!

    ಪತ್ನಿಯ ಕಣ್ಣು, ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದ ಕಟುಕ ಪತಿ!

    – ಮಗಳ ತಲೆ ಭಾಗ, ಕಣ್ಣಿಗೆ ಹೊಡೆದ ಆರೋಪಿ

    ಮಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಆರೋಪಿಯನ್ನು ಶಿಶಿಲ ಕೋಟೆಬಾಗಿಲು ನಿವಾಸಿ ಸುರೇಶ್ ಗೌಡ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್- ಗೋವಾದಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆ

    ಕಂಠಪೂರ್ತಿ ಕುಡಿದು ಬಂದಿರುವ ಸುರೇಶ್ ಗೌಡ, ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರಿ ಸುರೇಶ್ ಗೌಡನು ತನ್ನ ಪತ್ನಿಯ ಕಣ್ಣು ಹಾಗೂ ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದಿದ್ದಾನೆ. ಬಳಿಕ ಕೋಲಿನಿಂದ ಹೊಡೆದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾನೆ. ಪತಿಯ ಹಲ್ಲೆಯಿಂದಾಗಿ ಪತ್ನಿಯ ಎಡ ಕಣ್ಣಿಗೆ ಸಂಪೂರ್ಣ ಹಾನಿಯಾಗಿದೆ.

    ಇತ್ತ ತಾಯಿಯ ಮೇಲಿನ ಹಲ್ಲೆ ಬಿಡಿಸಲು ಬಂದ ಮಗಳ ತಲೆ ಭಾಗ ಹಾಗೂ ಕಣ್ಣಿಗೂ ಆರೋಪಿ ಹೊಡೆದಿದ್ದಾನೆ. ಈ ವೇಳೆ ಆಕೆ ಪ್ರಾಣ ಉಳಿಸಿಕೊಳ್ಳಲು ತಂದೆಯಿಂದ ತಪ್ಪಿಸಿ ನೆರೆ ಹೊರೆಯವರಿಗೆ ವಿಚಾರ ತಿಳಿಸಿದಳು. ಈ ಹೊತ್ತಲ್ಲೇ ಜೀವ ಉಳಿಸಿಕೊಳ್ಳಲು ಓಡಿ ಹೋಗಿ ಇಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ.

    ನೆರೆ ಹೊರೆಯವರು ಧಾಮಿಸುತ್ತಿದಂತೆ ಆರೋಪಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ. ವಿಪರೀತ ಗಾಯಗೊಂಡ ತಾಯಿ-ಮಗಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmasthala Police Station) ಪ್ರಕರಣ ದಾಖಲಾಗಿದೆ.

  • ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ದಿಸ್ಪುರ್: ವಧು-ವರರು ಕೊನೇ ಕ್ಷಣದಲ್ಲಿ ಮದುವೆಯನ್ನು (Marriage) ರದ್ದು ಮಾಡುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಸಂಬಂಧಗಳು ಮುರಿದೂ ಬೀಳುತ್ತವೆ. ಇಲ್ಲೊಬ್ಬ ವರ (Groom) ಕಂಠಪೂರ್ತಿ ಕುಡಿದು (Drunk) ಬಂದು ಮಂಟಪದಲ್ಲೇ ಮಲಗಿಬಿಟ್ಟ ಅಂತ ವಧು (Bride) ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ನಡೆದಿದೆ.

    ಅಸ್ಸಾಂನ (Assam) ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ಮದ್ಯ ಸೇವಿಸಿ, ತನ್ನ ಮದುವೆಯ ವೇಳೆಯೇ ಮಂಟಪದಲ್ಲಿ ಮಲಗಿಬಿಟ್ಟಿದ್ದಾನೆ. ಪಂಡಿತರು ಹೇಳಿಕೊಡುತ್ತಿರುವ ಮಂತ್ರವನ್ನು ತನ್ನ ಬಾಯಿಂದ ಹೇಳಲೂ ಸಾಧ್ಯವಾಗದೇ ಆತ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದರಿಂದ ವಧು ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.

     

    ವರನನ್ನು ನಲ್ಬರಿ ನಗರದ ನಿವಾಸಿ ಪ್ರಸೇನಜಿತ್ ಹಲೋಯ್ ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಗಳು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ನಮ್ಮ ಕಡೆಯಿಂದ ಎಲ್ಲಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ನಾವು ಮದುವೆ ಕಾರ್ಯಕ್ರಮಗಳನ್ನು ಚೆನ್ನಾಗಿಯೇ ನೆರವೇರಿಸಲು ಪ್ರಯತ್ನಿಸಿದ್ದೇವೆ. ಆದರೆ ವರ ಕಂಠಪೂರ್ತಿ ಕುಡಿದು ಮಂಟಪದಲ್ಲಿಯೇ ಮಲಗಿಬಿಟ್ಟಿದ್ದರಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಬೇಕಾಯಿತು ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾದ ಮಹಿಳೆ – 24 ಗಂಟೆಯಲ್ಲಿ ವಿಚ್ಛೇದನ ಘೋಷಣೆ

     

    ವರ ಕುಡಿದ ನಶೆಯಲ್ಲಿ ತೂರಾಡುವುದನ್ನು ಕಂಡು ವಧು ಮಂಟಪದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಾಳೆ. ಬಳಿಕ ವರ ಮಂತ್ರಗಳನ್ನು ಉಚ್ಛರಿಸಲಾಗದೇ ಮಲಗಿದ್ದಾನೆ. ವರನ ಕಡೆಯವರು ಹೆಚ್ಚಿನ ಮಂದಿ ಕುಡಿದುಕೊಂಡೇ ಮದುವೆಗೆ ಬಂದಿದ್ದರು. ಬಳಿಕ ಮದುವೆಯನ್ನು ಕ್ಯಾನ್ಸಲ್ ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ.

     

    ಲಕ್ಷಾಂತರ ರೂ. ಖರ್ಚು ಮಾಡಿ ವಧುವಿನ ಕಡೆಯವರು ಮದುವೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದರೆ, ವರನ ಕಡೆಯವರು ಈ ರೀತಿ ಮದ್ಯ ಸೇವಿಸಿ ಅವಮಾನ ಮಾಡಿದ್ದಾರೆ. ನಲ್ಬರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮದುವೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

  • ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಲಕ್ನೋ: ಕುಡಿದ ಮತ್ತಿನಲ್ಲಿದ್ದ ವೈದ್ಯ ನೀಡಿದ ಚಿಕಿತ್ಸೆಯಿಂದಾಗಿ ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಬಾರಾಬಂಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಗಂಟಲಿನಲ್ಲಿ ಜೋಳ ಸಿಲುಕಿದೆ ಎಂದು ಬಾಲಕಿಯನ್ನು ಸಿರೌಲಿ ಗೌಸ್‌ಪುರ ಪ್ರದೇಶದ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ರಾತ್ರಿ ಕರ್ತವ್ಯದ ವೇಳೆ ಡಾ.ಧರ್ಮೇಂದ್ರ ಗುಪ್ತಾ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ವೈದ್ಯ ಒಂದು ಗಂಟೆಯ ನಂತರ ಅಮಲೇರಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದು, ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಪರಿಣಾಮವಾಗಿ ಮಗು ಸಾವಿಗೀಡಾಗಿದೆ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!

    ಸಿರೌಲಿ ಗೌಸ್‌ಪುರ್‌ನ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ. ನೀಲಂ ಗುಪ್ತಾ ಅವರು ಧರ್ಮೇಂದ್ರ ಗುಪ್ತಾ ಅವರನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರ ತಂಡವು ತನಿಖೆ ನಡೆಸುತ್ತಿದೆ.

    ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಕ್ಕೆ, ಮೃತ ಬಾಲಕಿ ತಾಯಿಗೆ ಇನ್ನೊಂದು ಮಗುವಿಗೆ ಜನ್ಮ ನೀಡುವಂತೆ ಡಾ.ಧರ್ಮೇಂದ್ರ ಗುಪ್ತಾ ಅವರು ಅವಮಾನಿಸಿರುವ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತಹಸಿಲ್ ಸಿರೌಲಿ ಗೌಸ್ಪುರದಲ್ಲಿ ಪೋಸ್ಟ್ ಮಾಡಲಾದ ವೀಡಿಯೋ ಡಾ.ಗುಪ್ತಾ ಅವರದ್ದು ಎಂದು ಮುಖ್ಯ ವೈದ್ಯಾಧಿಕಾರಿ ಅವಧೇಶ್ ಕುಮಾರ್ ಯಾದವ್ ಮಂಗಳವಾರ ಹೇಳಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸದಿದ್ದಕ್ಕಾಗಿ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ

    ಘಟನೆ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ದೂರು ಬಂದಿಲ್ಲ ಎಂದು ಬಡೋಸರೈ ಪೊಲೀಸ್ ಠಾಣೆ ಪ್ರಭಾರಿ ಅಮಿತ್ ಮಿಶ್ರಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಪಂಜಾಬ್ ಸಿಎಂ ತೂರಾಟ – ವಿಮಾನದಿಂದ ಕೆಳಗಿಳಿಸಿದ Lufthansa?

    ಕುಡಿದ ಮತ್ತಿನಲ್ಲಿ ಪಂಜಾಬ್ ಸಿಎಂ ತೂರಾಟ – ವಿಮಾನದಿಂದ ಕೆಳಗಿಳಿಸಿದ Lufthansa?

    ಚಂಡೀಗಢ: ಕುಡಿದ (Drunk) ಮತ್ತಿನಲ್ಲಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಅವರನ್ನ ಜರ್ಮನಿಯ ಲುಫ್ಥಾನ್ಸಾ ವಿಮಾನದಿಂದ (Lufthansa Flight) ಕೆಳಗಿಳಿಸಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಫ್ರಾಂಕ್‌ಫರ್ಟ್‌ನಿಂದ (Frankfurt) ದೆಹಲಿಗೆ (New Delhi) ಬರುತ್ತಿದ್ದ ವಿಮಾನ 4 ಗಂಟೆ 40 ನಿಮಿಷ ತಡವಾಗಲು ಭಗವಂತ್ ಮಾನ್ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ನಡೆದಿದ್ದು ಏನು?
    ಪಂಜಾಬ್‌ಗೆ (Panjab) ಹಲವು ಹೂಡಿಕೆ ಆಕರ್ಷಿಸಲು ಮಾನ್ ಸೆಪ್ಟೆಂಬರ್ 11 ರಿಂದ 18ರ ವರೆಗೆ ಜರ್ಮನಿ ಪ್ರವಾಸ ಕೈಗೊಂಡಿದ್ದರು. ಅವರಿಂದು ಹಿಂದಿರುಗುವಾಗ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದರು. ಈ ಕಾರಣ ಅವರನ್ನು ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಬರುತ್ತಿದ್ದ ಲುಫ್ಥಾನ್ಸ 760 ವಿಮಾನದಿಂದ ಕೆಳಗಿಳಿಸಲಾಯಿತು. ಜರ್ಮನಿಯಿಂದ (Germany) ಮಧ್ಯಾಹ್ನ 1.40ಕ್ಕೆ ಟೇಕ್ ಆಫ್ ಆದ ವಿಮಾನವು (Flight) ಸಂಜೆ 5.30ಕ್ಕೆ ದೆಹಲಿಗೆ ಬಂದಿಳಿಯಿತು. ಮಾನ್ ಅವರ ವರ್ತನೆಯಿಂದಾಗಿ 4 ಗಂಟೆಗಳ ಕಾಲ ವಿಮಾನ ತಡವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ ಕಚೇರಿಯು (Panjab CM Office), ಮಾನ್ ಅವರು ಪಾನಮತ್ತರಾಗಿರಲಿಲ್ಲ, ಅವರಿಗೆ ಆರೋಗ್ಯ ಸಮಸ್ಯೆಯಿದ್ದ ಕಾರಣ ವಿಮಾನ ಹತ್ತಲು ಸಾಧ್ಯವಾಗಲಿಲ್ಲವೇ ಹೊರತು ಲುಪ್ಥಾನ್ಸ ಅವರನ್ನು ಹೊರಹಾಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ವಿರೋಧ ಪಕ್ಷಗಳು, ಭಗವಂತ್ ಮಾನ್ ಪಂಜಾಬಿಗಳು ನಾಚಿಕೆಪಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿವೆ.

    ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತುಂಬಾ ಕುಡಿದಿದ್ದರಿಂದ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಅವರ ಸಹ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.’

    ಇದರಿಂದ ವಿಮಾನ ನಾಲ್ಕು ಗಂಟೆ ವಿಳಂಬವಾಗಿದೆ. ಅಲ್ಲದೇ ಅವರು ಎಎಪಿಯ (AAP) ರಾಷ್ಟ್ರೀಯ ಸಮಾವೇಶಕ್ಕೂ ಗೈರಾಗಿದ್ದಾರೆ. ಈ ಬೆಳವಣಿಗೆಗಳು ಪಂಜಾಬ್ ಸರ್ಕಾರವನ್ನು ತೀವ್ರ ಮುಖಭಂಗಕ್ಕೀಡಾಗುವಂತೆ ಮಾಡಿವೆ. ಜೊತೆಗೆ ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡುವಂತಾಗಿದೆ. ಘಟನೆ ಬಗ್ಗೆ ಪಂಜಾಬ್ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ. ಒತ್ತಾಯಿಸಿದ್ದಾರೆ.

    ಮಾನ್ ಅವರು ಅತಿಯಾಗಿ ಕುಡಿದಿದ್ದರು. ಅವರಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಪತ್ನಿ ಮತ್ತು ಭದ್ರತಾ ಸಿಬ್ಬಂದಿ ಅವರಿಗೆ ನೆರವಾಗುತ್ತಿದ್ದರು ಎಂಬ ಪ್ರಯಾಣಿಕರೊಬ್ಬರ ಹೇಳಿಕೆಯ ವರದಿಯನ್ನು ಕಾಂಗ್ರೆಸ್ ಟ್ವೀಟ್‌ನಲ್ಲಿ ಹಂಚಿಕೊಂಡಿದೆ.

    ಈ ಕುರಿತು ಮಾತನಾಡಿರುವ ಎಎಪಿ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, ಮುಖ್ಯಮಂತ್ರಿ ಅವರು ನಿಗದಿಯಂತೇ ಸೆಪ್ಟೆಂಬರ್ 19ರಂದು ಹಿಂತಿರುಗಿದ್ದಾರೆ. ಈ ಎಲ್ಲಾ ಸಾಮಾಜಿಕ ಮಾಧ್ಯಮ (Social Media) ವರದಿಗಳು ಕೇವಲ ಅಪಪ್ರಚಾರವಷ್ಟೇ. ಮಾನ್ ಅವರು ತಮ್ಮ ವಿದೇಶ ಪ್ರವಾಸದ ಮೂಲಕ ಒಂದಷ್ಟು ಹೂಡಿಕೆ ತರುತ್ತಿರುವುದನ್ನು ಕಂಡು ವಿರೋಧ ಪಕ್ಷಗಳು ಕಂಗಾಲಾಗಿವೆ. ಅಗತ್ಯವಿದ್ದವರು ಲುಪ್ಥಾನ್ಸ ಏರ್‌ಲೈನ್ಸ್‌  ಬಳಿ ಪರಿಶೀಲಿಸಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಾಹನ ತಪಾಸಣೆ ವೇಳೆ ಪೊಲೀಸರಿಗೆ ಕುಡುಕನ ಅವಾಜ್

    ವಾಹನ ತಪಾಸಣೆ ವೇಳೆ ಪೊಲೀಸರಿಗೆ ಕುಡುಕನ ಅವಾಜ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕುಡುಕನೋರ್ವ ಟ್ರಾಫಿಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾನೆ.

    ಹೌದು, ಮದ್ಯ ಪ್ರಿಯರಿಗೆ ಮದ್ಯ ಒಂದಿದ್ದರೆ ಸಾಕು ಲೋಕವನ್ನೇ ಮರೆತು ಬಿಡುತ್ತಾರೆ. ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಪರಿಜ್ಞಾನ ಸಹ ಎಲ್ಲದೇ ಎಣ್ಣೆ ಏಟಲ್ಲಿ ಎಷ್ಟೋ ಮಂದಿ ಮುಳುಗಿ ಬಿಟ್ಟಿರುತ್ತಾರೆ. ಎಷ್ಟೋ ಮಂದಿ ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿರುವುದನ್ನು ನೋಡಿರುತ್ತೇವೆ. ಇನ್ನೂ ಎಷ್ಟೋ ಮಂದಿ ಕುಡಿದ ನಂತರ ತಮ್ಮ ಪೌರುಷ ತೋರ್ಪಡಿಸಲು ಪ್ರಯತ್ನಿಸುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಕುಡುಕನೊಬ್ಬ ಪೊಲೀಸರಿಗೆ ಕಿರಿಕಿರಿಯನ್ನುಂಟು ಮಾಡಿದ್ದಾನೆ. ಇದನ್ನೂ ಓದಿ: ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

    ರಾತ್ರಿ 12 ಗಂಟೆ ಸುಮಾರಿಗೆ ಹಲಸೂರ್ ಪೊಲೀಸ್ ಠಾಣೆ ಮುಂದೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಟ್ರಾಫಿಕ್ ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಕುಡಿದು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಗೆ ಟ್ರಾಫಿಕ್ ಸಿಬ್ಬಂದಿ ಗಾಡಿ ಸೈಡಿಗೆ ಹಾಕುವಂತೆ ಹೇಳಿದ್ದಾರೆ. ಅಷ್ಟಕ್ಕೇ ಆತ ಟ್ರಾಫಿಕ್ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ಬಳಿಕ ಆತನಿಂದ ದಂಡ ಕಟ್ಟಿಸಿಕೊಂಡು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

    Live Tv
    [brid partner=56869869 player=32851 video=960834 autoplay=true]

  • ಕುಡಿದು ಬಂದು ತಾಯಿಯನ್ನೇ ಕೊಂದ ಮಗ

    ಕುಡಿದು ಬಂದು ತಾಯಿಯನ್ನೇ ಕೊಂದ ಮಗ

    ಹಾಸನ: ಕುಡಿದು ಬಂದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ತಾಯಿಯನ್ನೇ ಮಗ ಕೊಂದಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಸಣ್ಣಮ್ಮ ಮೃತಳಾಗಿದ್ದಾಳೆ. ನಂಜೇಶ್ ಗೌಡ ತಾಯಿ ಕೊಂದ ಆರೋಪಿಯಾಗಿದ್ದಾನೆ. ಕುಡಿದು ಬಂದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡು ತಾಯಿಯನ್ನೇ ಕೊಲೆ ಮಾಡಿದ್ದು, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ  ಘಟನೆ ಹಾಸನ ಜಿಲ್ಲೆಯ ಸಂಕಲಾಪುರ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ

    ಕಂಠಪೂರ್ತಿ ಕುಡಿದು ಬಂದು ತಾಯಿ ಜೊತೆ ಜಗಳ ಮಾಡಿದ ಮಗ ನಂಜೇಶ್‍ಗೌಡನ ದುರ್ನಡತೆ ಬಗ್ಗೆ ತಾಯಿ ಸಣ್ಣಮ್ಮ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಗ ತಾಯಿಗೆ ದೊಣ್ಣೆಯಿಂದ ಹಲ್ಲೆಮಾಡಿ ಹತ್ಯೆ ಮಾಡಿದ್ದಾನೆ.

    ತಾಯಿಯನ್ನು ಕೊಂದು ಬಳಿಕ ಪತ್ನಿಯ ಕ್ಯಾಂಟೀನ್ ಬಳಿ ಬಂದು ಆಕೆಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿರೊ ಪತ್ನಿಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

  • ಮದ್ಯಪಾನದ ದೃಶ್ಯ ತೋರಿಸಿದ್ದಕ್ಕೆ ಕಪಿಲ್ ಶರ್ಮಾ ಶೋ ವಿರುದ್ಧ FIR

    ಮದ್ಯಪಾನದ ದೃಶ್ಯ ತೋರಿಸಿದ್ದಕ್ಕೆ ಕಪಿಲ್ ಶರ್ಮಾ ಶೋ ವಿರುದ್ಧ FIR

    ಮುಂಬೈ: ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋ ತಯಾರಕ ವಿರುದ್ಧ ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ನ್ಯಾಯಾಲಯದ ದೃಶ್ಯವನ್ನು ಪ್ರದರ್ಶಿಸುವ ವೇಳೆ ನಟರು ವೇದಿಕೆ ಮೇಲೆ ಮದ್ಯಪಾನ ಮಾಡುತ್ತಿರುವ ದೃಶ್ಯವನ್ನು ತೋರಿಸಿದ್ದರಿಂದ ದೂರು ದಾಖಲಿಸಲಾಗಿದೆ. ಅಲ್ಲದೇ ನಟರು ನ್ಯಾಯಾಲಯಕ್ಕೆ ಅಗೌರವವನ್ನು ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: LOVE YOU MY SON: ನಿಖಿಲ್ ಕುಮಾರಸ್ವಾಮಿ

    ಶಿವಪುರಿಯ ವಕೀಲ ಸಿಜೆಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಿದ್ದು, ಅಕ್ಟೋಬರ್ 1ರಂದು ಪ್ರಕರಣ ಕುರಿತಂತೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಖಾಸಗಿ ವಾಹಿನಿಯಲ್ಲಿ ಬರುವ ಕಪಿಲ್ ಶರ್ಮಾ ಶೋ ಬಹಳ ಕಳಪೆಯಾಗಿದ್ದು, ಮಹಿಳೆಯರ ಕುರಿತಂತೆ ಅಸಭ್ಯವಾಗಿ ಟೀಕೆಗಳನ್ನು ಮಾಡುತ್ತಾರೆ. ಸಂಚಿಕೆಯೊಂದರಲ್ಲಿ ನ್ಯಾಯಾಲಯದ ಸೆಟ್ ಸ್ಥಾಪಿಸಲಾಗಿತ್ತು. ಈ ವೇಳೆ ನಟರು ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಹೀಗಾಗಿ ನಾನು ನ್ಯಾಯಾಲಯದಲ್ಲಿ ಸೆಕ್ಷನ್ 356/3ರ ಅಡಿ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ನೋಂದಣಿಗೆ ಬೇಡಿಕೆ ಇಟ್ಟಿದ್ದೇನೆ. ಅಸ್ಪಷ್ಟತೆ ಇಂತಹ ಪ್ರದರ್ಶನವನ್ನು ನಿಲ್ಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಬಾಲಿವುಡ್‍ಗೆ ಎಂಟ್ರಿ ಕೊಡ್ತಿದ್ದಾರಾ ನಟ ಗೋವಿಂದ ಪುತ್ರ?

    2021 ಜನವರಿ 19ರಂದು ಈ ಸಂಚಿಕೆ ಪ್ರಸಾರವಾಗಿದೆ ಮತ್ತು ಏಪ್ರಿಲ್ 24ರಂದು ಮರುಪ್ರಸಾರ ಮಾಡಲಾಗಿದೆ. ನ್ಯಾಯಾಲಯದ ಸೆಟ್ ನಿರ್ಮಿಸಿ ಮದ್ಯಪಾನ ಮಾಡುತ್ತಿರುವ ಈ ದೃಶ್ಯ ನ್ಯಾಯಾಲಯಕ್ಕೆ ಅವಮಾನವ ತರಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ: ಎಚ್‍ಡಿಕೆ

    https://www.youtube.com/watch?v=X2rKRtM4kmQ

  • ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ

    ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ

    ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಾ ಆಸ್ಪತ್ರೆಯಲ್ಲಿ ಕುಡುಕನೋರ್ವ ಶರ್ಟ್ ಬಿಚ್ಚಿ ಬ್ಯಾರಿಕೆಡ್ ತಳ್ಳಿ ರಂಪಾಟ ಮಾಡಿದ್ದಾನೆ. ಇದನ್ನೂ ಓದಿ: ಮಾಸ್ಕ್ ವಿಚಾರಕ್ಕೆ ಕಿರಿಕ್ – ದೊಣ್ಣೆಯಿಂದ ಮಹಿಳೆಗೆ ಬಡಿದ ಯುವತಿ

    ತುರುವೇಕೆರೆ ಪಟ್ಟಣದ ನಿವಾಸಿ ಯು.ಬಿ.ಸುರೇಶ್ ಕುಡಿದು ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ವ್ಯವಸ್ಥೆ ಸರಿ ಇಲ್ಲ ಎಂದು ಕ್ಯಾತೆ ತೆಗೆದ ಈತ ಕಂಡಕಂಡವರನ್ನು ಮನಬಂದಂತೆ ಅವಾಚ್ಯವಾಗಿ ಬೈದಿದ್ದಾನೆ. ಮಾಸ್ಕ್ , ಸ್ಯಾನಿಟೈಸರ್ ಏನೂ ಹಾಕೊಳ್ಳೋಬೇಡಿ ಎಂದು ಕುಡಿದ ಅಮಲಿನಲ್ಲಿ ಅಪಪ್ರಚಾರ ಮಾಡುತ್ತಿದ್ದ ಈತ ಕುಮಾರಸ್ವಾಮಿ ಸಿದ್ದರಾಮಯ್ಯ ಯಡಿಯೂರಪ್ಪ ಎಲ್ಲರೂ ಸುಳ್ಳರೇ ಇವರಿಂದ ಜನರಿಗೆ ಏನೂ ಉಪಯೋಗ ಆಗಿಲ್ಲ ಎಂದು ಕುಡಿದ ಅಮಲಿನಲ್ಲಿ ಮನಬಂದಂತೆ ಮಾತನಾಡುತ್ತಿದ್ದನು. ಇದನ್ನೂ ಓದಿ:  ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

    ಬ್ಲೀಚಿಂಗ್ ಪೌಡರ್ ತಂದು ತಾನೇ ಆಸ್ಪತ್ರೆಯ ಟಾಯ್ಲೆಟ್ ಕ್ಲೀನ್ ಮಾಡುತ್ತೇನೆ ಎಂದು ಹೇಳುತ್ತಾ ಶರ್ಟ್ ಬಿಚ್ಚಿ ಹುಚ್ಚಾಟ ಮೆರೆದಿದ್ದಾನೆ. ಈತನ ರಂಪಾಟ ಕಂಡ ಆತನ ಸ್ನೇಹಿತರು ಸುರೇಶ್‍ನನ್ನು ಸಮಾಧಾನಪಡಿಸಿ ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ. ಯುಬಿ ಸುರೇಶ್ ಅಕ್ಷರಸ್ಥ(ಸುಶಿಕ್ಷಿತ)ನಾಗಿದ್ದು ಈ ರೀತಿ ರಂಪಾಟ ಮಾಡಿದಕ್ಕೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಕುಡಿದು ಸತ್ತರೆ ಇನ್ಶೂರೆನ್ಸ್ ಹಣ ಸಿಗಲ್ಲ: ಸುಪ್ರೀಂಕೋರ್ಟ್

    ಕುಡಿದು ಸತ್ತರೆ ಇನ್ಶೂರೆನ್ಸ್ ಹಣ ಸಿಗಲ್ಲ: ಸುಪ್ರೀಂಕೋರ್ಟ್

    ನವದೆಹಲಿ: ವ್ಯಕ್ತಿ ಕುಡಿದು ಮೃತಪಟ್ಟರೆ ಆತನ ಕುಟುಂಬಸ್ಥರಿಗೆ ವಿಮೆ(ಇನ್ಶೂರೆನ್ಸ್) ಹಣ ಸಿಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಅಪಘಾತದಿಂದ ಮೃತಪಟ್ಟರೆ ಅಥವಾ ಅಪಘಾತದಿಂದ ಗಂಭೀರ ಗಾಯಗೊಂಡಿದ್ದರೆ ಮಾತ್ರ ವ್ಯಕ್ತಿಯ ಕುಟುಂಬದವರು ವಿಮೆ ಹಣ ಪಡೆಯಬಹುದು. ಆದರೆ ವಿಪರೀತ ಕುಡಿದು ಬಿದ್ದು ಸಾವನ್ನಪ್ಪಿದರೆ ಆ ವ್ಯಕ್ತಿಗಳು ವಿಮೆ ಹಣಕ್ಕೆ ಅರ್ಹರಲ್ಲ ಎಂದು ಕೋರ್ಟ್ ತಿಳಿಸಿದೆ.

    ಈ ತೀರ್ಪು ನೀಡಲು ಕಾರಣವೇನು..?
    ವ್ಯಕ್ತಿಯೊಬ್ಬ ಅತಿಯಾಗಿ ಮದ್ಯಪಾನ ಮಾಡಿ ಉಸಿರುಗಟ್ಟಿ ಮೃತಪಟ್ಟಿದ್ದನು. ಹೀಗಾಗಿ ಆತನ ಕುಟುಂಬದವರು ವಿಮೆ ಹಣ ನೀಡುವಂತೆ ಸಂಸ್ಥೆಗೆ ಆದೇಶ ನೀಡುವಂತೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್‌  ತೀರ್ಪು ಪ್ರಕಟಿಸಿದೆ.

    ಆಗಿದ್ದೇನು..?
    ಶಿಮ್ಲಾ ಜಿಲ್ಲೆಯ ಚೌಪಾಲ್ ರಾಜ್ಯ ಅರಣ್ಯ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 1997ರ ಏಪ್ರಿಲ್ ತಿಂಗಳಿನಲ್ಲಿ ಮೃತಪಟ್ಟಿದ್ದನು. ಈ ವೇಳೆ ನಡೆಸಿದ್ದ ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬಂದಿತ್ತು. ಅಲ್ಲದೆ ವಿಪರೀತವಾಗಿ ಮದ್ಯ ಸೇವನೆ ಮಾಡಿರುವುದೇ ಸಾವಿಗೆ ಕಾರಣ ಎಂಬುದು ವರದಿಯಲ್ಲಿ ಬಯಲಾಗಿತ್ತು.

    ಇತ್ತ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ಕುಟುಂಬಸ್ಥರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(ಎನ್‍ಸಿಡಿಆರ್ ಸಿ) ಮೊರೆ ಹೋಗಿದ್ದರು. ಅಲ್ಲಿ ಕುಟುಂಬಕ್ಕೆ ವಿಮೆ ನೀಡಲಾಗದು ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ ಶಾಂತನಗೌಡರ್ ಹಾಗೂ ವಿನೀತ್ ಸರಣ್ ಅವರಿದ್ದ ಪೀಠ  ಎತ್ತಿ ಹಿಡಿದಿದೆ.

    ವಿಮಾ ಪಾಲಿಸಿಯ ನಿಯಮಗಳ ಪ್ರಕಾರ ಇಂತಹ ಪ್ರಕರಣದಲ್ಲಿ ವಿಮೆ ಹಣ ಸಿಗಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.