Tag: Drumstick soup

  • ರೋಗನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ – ಮಾಡೋದು ಹೇಗೆ ಗೊತ್ತಾ?

    ರೋಗನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ – ಮಾಡೋದು ಹೇಗೆ ಗೊತ್ತಾ?

    ಳೆಗಾಲ ಆರಂಭ ಆದ್ರೆ ಸಾಕು ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ಆರಂಭ ಆಗ್ತಾವೆ.. ಇದರ ವಿರುದ್ಧ ಹೋರಾಡೋಕೆ ನಾವು ತಯಾರಾಗಬೇಕು. ಅದಕ್ಕಾಗಿ ಆರೋಗ್ಯ (Health) ವೃದ್ಧಿಸುವ ಆಹಾರ ಸೇವಿಸಬೇಕು. ಇವತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ (Drumstick Soup) ಮಾಡೋದು ಹೇಗೆ ಅಂತ ಹೇಳ್ಕೊಡ್ತಿನಿ. ನೀವು ಮಾಡ್ನೋಡಿ..

    ಬೇಕಾಗುವ ವಸ್ತುಗಳು 

    • ನುಗ್ಗೆಕಾಯಿ 4-5
    • ಈರುಳ್ಳಿ,
    • ಟೊಮ್ಯಾಟೊ
    • ಕೋಸುಗಡ್ಡೆ (ಅರ್ಧ)
    • ಬೆಳ್ಳುಳ್ಳಿ
    • ಶುಂಠಿ
    • ಉಪ್ಪು
    • ಅರಿಶಿನಪುಡಿ
    • ಜೀರಿಗೆ
    • ತುಪ್ಪ

    ನುಗ್ಗೆಕಾಯಿ ಸೂಪ್‌ ತಯಾರಿಸುವುದು ಹೇಗೆ ?
    ಮೊದಲು ನುಗ್ಗೆಕಾಯಿಯನ್ನು ಸ್ವಚ್ಛವಾಗಿ ತೊಳೆದು ಕತ್ತರಿಸಿಟ್ಟುಕೊಳ್ಳಬೇಕು. ಬಳಿಕ ಈರುಳ್ಳಿ, ಟೊಮ್ಯಾಟೊ, ಕೋಸುಗಡ್ಡೆ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕತ್ತರಿಸಿ ಸೇರಿಸಿ, ಬೇಕಾದಷ್ಟು ನೀರು ಹಾಕಿ ಪ್ರೆಶರ್‌ ಕುಕ್ಕರ್‌ನಲ್ಲಿ ಇಡಬೇಕು.

    ನಂತರ ಉಪ್ಪು, ಅರಿಶಿನ ಪುಡಿ ಮತ್ತು ಜೀರಿಗೆ ಸೇರಿಸಿ. ಪ್ರಶರ್‌ ಕುಕ್ಕರ್‌ ಸುಮಾರು 5 ವಿಷಲ್ ಹಾಕಿದ ನಂತರ ಅದನ್ನು ತಣ್ಣಗಾಗಲು ಬಿಡಬೇಕು. ನಂತರ ಕುಕ್ಕರ್‌ನಿಂದ ನುಗ್ಗೆಕಾಯಿ ಪೀಸ್‌ಗಳನ್ನು ತೆಗೆದು, ಅದನ್ನು ಚಮಚದಿಂದ ಕಲಿಸಬೇಕು. ನಂತರ ನುಗ್ಗೆಕಾಯಿಗಳನ್ನು ಮತ್ತೆ ಆ ಮಿಶ್ರಣಕ್ಕೆ ಸೇರಿಸಿ ಕುದಿಸಬೇಕು.

    ನಂತರ, ತುಪ್ಪ, ಜೀರಿಗೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಹಾಕಬೇಕು. ಈಗ ನುಗ್ಗೆ ಕಾಯಿ ಸೂಪ್‌ ಸವಿಯಲು ಸಿದ್ಧ! ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಸೂಪ್‌ ತುಂಬಾ ಸಹಕಾರಿಯಾಗಿದೆ.

  • ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಳಿಗಾಲ ಬಂತೆಂದರೆ ಸಾಕು  ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ನುಗ್ಗೆಕಾಯಿ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ನುಗ್ಗೆಕಾಯಿ -3
    * ಈರುಳ್ಳಿ -1
    * ಟೊಮೆಟೋ -1
    * ಶುಂಠಿ -ಸ್ವಲ್ಪ
    * ಬೆಳ್ಳುಳ್ಳಿ – 2
    * ರುಚಿಗೆ ತಕ್ಕಷ್ಟು ಉಪ್ಪು
    * ಅರಿಶಿನ ಪುಡಿ-1 ಚಮಚ
    * ಜೀರಿಗೆ ಪುಡಿ -1 ಚಮಚ
    * ಕಾಳುಮೆಣಸು -1 ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ


    ಮಾಡುವ ವಿಧಾನ:
    * ಮೊದಲು ಕುಕ್ಕರ್‌ಗೆ ಹೆಚ್ಚಿದ ನುಗ್ಗೆಕಾಯಿ, ಈರುಳ್ಳಿ ಟೊಮೆಟೋ, ಶುಂಠಿ, ಬೆಳ್ಳುಳ್ಳಿ , ಉಪ್ಪು, ಅರಿಶಿನ ಪುಡಿ ಜೀರಿಗೆ ಪುಡಿ ಮತ್ತು 2 ಕಪ್ ನೀರನ್ನು ಹಾಕಿ 3 ಸೀಟಿ ಕೂಗಿಸಿಕೊಳ್ಳಬೇಕು.


    * ನಂತರ ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾ ಯಿ ತಿರುಳನ್ನು ಸಿಪ್ಪೆಯಿಂದ ಬೇರೆ ಪಡಿಸಿ ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 

    * ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೂಪ್ ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ