Tag: drum

  • ಡ್ರಮ್‌ನಲ್ಲಿ ಕೂಡಿ ಹಾಕಿ 4 ಮಕ್ಕಳ ಕೊಂದ ತಾಯಿ – ಬಳಿಕ ತಾನೂ ನೇಣಿಗೆ ಶರಣು

    ಡ್ರಮ್‌ನಲ್ಲಿ ಕೂಡಿ ಹಾಕಿ 4 ಮಕ್ಕಳ ಕೊಂದ ತಾಯಿ – ಬಳಿಕ ತಾನೂ ನೇಣಿಗೆ ಶರಣು

    ಜೈಪುರ: ಮಹಿಳೆಯೊಬ್ಬಳು (Women) ತನ್ನ 4 ಮಕ್ಕಳನ್ನು (Children) ಧಾನ್ಯ ಸಂಗ್ರಹಿಸುವ ಡ್ರಮ್‌ನಲ್ಲಿ (Drum) ಕೂಡಿ ಹಾಕಿ ಕೊಂದ ಬಳಿಕ ತಾನೂ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.

    ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಮಂಡ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜೇಥರಾಮ್ ಅವರ ಪತ್ನಿ ಊರ್ಮಿಳಾ ಶನಿವಾರ ತನ್ನ 4 ಮಕ್ಕಳೊಂದಿಗೆ ಮನೆಯಲ್ಲಿದ್ದಳು. ಆಕೆಯ ಪತಿ ಜೇಥರಾಮ್ ಕೂಲಿಗಾಗಿ ಜೋಧಪುರಕ್ಕೆ ಹೋಗಿದ್ದ ಸಂದರ್ಭ ಮಧ್ಯಾಹ್ನ ಊರ್ಮಿಳಾ ತನ್ನ ಮಕ್ಕಳಾದ ಭಾವನಾ (8), ವಿಕ್ರಮ್ (5), ವಿಮಲಾ (3), ಮತ್ತು ಮನಿಶಾ (2) ರನ್ನು ಧಾನ್ಯದ ಡ್ರಮ್‌ನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾಳೆ. ಬಳಿಕ ಮನೆಯೊಳಗೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

    ಸಂಜೆಯವರೆಗೂ ಮಕ್ಕಳು ಮತ್ತು ಮಹಿಳೆ ಕಾಣದಿದ್ದಾಗ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಅವರ ಸಂಬಂಧಿಕರು ಊರ್ಮಿಳಾ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಉರ್ಮಿಳಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಕ್ಕಳನ್ನು ಧಾನ್ಯದ ಡ್ರಮ್‌ನಲ್ಲಿ ಕೂಡಿಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ತಕ್ಷಣ ಗ್ರಾಮಸ್ಥರು ಹಾಗೂ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ 5 ಮೃತದೇಹಗಳನ್ನು ಕಲ್ಯಾಣಪುರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಉರ್ಮಿಳಾ ಚಿಕ್ಕಪ್ಪ ದುರ್ಗಾರಾಮ್ ಕಳೆದ 5 ವರ್ಷಗಳಿಂದ ಆಕೆಯ ಪತಿ ಹಾಗೂ ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಧರ್ಮ ದಂಗಲ್?- ಸಚಿವರ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಕಿಡಿ

  • ಡ್ರಮ್‍ನಲ್ಲಿ ಮಹಿಳಾ ಶವ ಪತ್ತೆ ಪ್ರಕರಣ- ಮೂವರ ಬಂಧನ

    ಡ್ರಮ್‍ನಲ್ಲಿ ಮಹಿಳಾ ಶವ ಪತ್ತೆ ಪ್ರಕರಣ- ಮೂವರ ಬಂಧನ

    ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣ (Baiyappanahalli Railway Station) ದ ಡ್ರಮ್‍ನಲ್ಲಿ ಮಹಿಳಾ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಕಮಾಲ್, ತನ್ವೀರ್ ಹಾಗೂ ಶಾಕೀಬ್ ಬಂಧಿತರು. ಬಿಹಾರ ಮೂಲದ ಈ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತಮ್ಮನ್ನಾ 27 ವರ್ಷ ಕೊಲೆಯಾಗಿರೋ ಮಹಿಳೆ. ಇದನ್ನೂ ಓದಿ: ಬೆತ್ತಲೆಯಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ ಪೊಲೀಸರ ವಶಕ್ಕೆ

    ಇಂತಿಕಾಮ್ ಮತ್ತು ತಮ್ಮನ್ನಾ ಮದುವೆ ಆಗಿದ್ರು. ತಮ್ಮನ್ನಾಳಿಗೆ ಇದು ಎರಡನೇ ಮದುವೆ. ಇದೇ ವಿಚಾರಕ್ಕೆ ಇಂತಿಕಾಮ್ ಮತ್ತು ಸಹೋದರರ ನಡುವೆ ವೈಮನಸ್ಸು ಮೂಡಿತ್ತು. ಈ ಹಿನ್ನೆಲೆಯಲ್ಲಿ ಮಾ.12ರಂದು ಆರೋಪಿಗಳು ಕಲಾಸಿಪಾಳ್ಯ (Kalasipalya) ದ ಮನೆಗೆ ಊಟಕ್ಕೆ ಕರೆದಿದ್ದರು. ಊಟವಾದ ನಂತರ ಜಗಳ ಶುರುವಾಗಿತ್ತು.

    ಈ ಜಗಳದಲ್ಲಿ ತಮ್ಮನ್ನಾಳನ್ನು ವೇಲ್‍ನಿಂದ ಬಿಗಿದು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಡ್ರಮ್ ನಲ್ಲಿಟ್ಟು ಬಿಹಾರಕ್ಕೆ ಸಾಗಿಸಲು ಯತ್ನಿಸಿದ್ದರು. ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಶವ ಬಿಟ್ಟು ಪರಾಗಿಯಾಗಿದ್ದರು. ಘಟನೆಯಲ್ಲಿ ಇನ್ನೂ ಐವರು ನಾಪತ್ತೆಯಾಗಿದ್ದಾರೆ.

  • ಚೆಂಡೆ ಬಾರಿಸಿದ ಮಮತಾ ಬ್ಯಾನರ್ಜಿ

    ಚೆಂಡೆ ಬಾರಿಸಿದ ಮಮತಾ ಬ್ಯಾನರ್ಜಿ

    ಚೆನ್ನೈ: ಕೋಲ್ಕತ್ತಾ ರಾಜ್ಯಪಾಲ ಲಾ ಗಣೇಶನ್ ಅವರ ಮನೆಯಲ್ಲಿ ನಡೆದಿದ್ದ ಸಮಾರಂಭಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಚೆಂಡೆ ಬಾರಿಸಿದರು.

    ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ನಡೆದ ಈ ಕಾರ್ಯಕ್ರಮದಲ್ಲಿ ಚೆಂಡೆ ಬಾರಿಸುವ ಮೂಲಕ ಮಮತಾ ಬ್ಯಾನರ್ಜಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ವೇಳೆ ಮಮತಾ ಬ್ಯಾನರ್ಜಿಯವರು ಚಂಡೆಯನ್ನು ಬಾರಿಸಿದರು.

    ಮಮತಾ ಬ್ಯಾನರ್ಜಿ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಕೋಲ್ಕತ್ತಾದಲ್ಲಿ ದುರ್ಗಾಪೂಜೆಯ ಆಚರಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು 95 ದುರ್ಗಾ ಪೂಜೆಗಳನ್ನು ಒಳಗೊಂಡಿರುವ ಭವ್ಯ ಕಾರ್ನೀವಲ್‍ನಲ್ಲಿ ಬುಡಕಟ್ಟು ನೃತ್ಯಗಾರರ ಗುಂಪಿನೊಂದಿಗೆ ಹೆಜ್ಜೆ ಹಾಕಿದ್ದರು. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್‌ ಉಗ್ರ ಅಶ್ಫಾಕ್ ಆರಿಫ್‌ ಗಲ್ಲು ಖಾಯಂ

    ಅದಾದ ಬಳಿಕ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಜಾನಪದ ಕಲಾವಿದರೊಂದಿಗೆ ಕೈ ಕೈ ಹಿಡಿದು ನೃತ್ಯ ಮಾಡಿದ್ದರು. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನ ಕೊಂದು ಸ್ನೇಹಿತನ ಸಹಾಯದಿಂದ ಡ್ರಮ್‍ನಲ್ಲಿ ತುಂಬಿ ಪೊದೆಗೆ ಎಸೆದ

    ಪತ್ನಿಯನ್ನ ಕೊಂದು ಸ್ನೇಹಿತನ ಸಹಾಯದಿಂದ ಡ್ರಮ್‍ನಲ್ಲಿ ತುಂಬಿ ಪೊದೆಗೆ ಎಸೆದ

    – ಮಗ, ಸೊಸೆ ನಾಪತ್ತೆಯಾಗಿರೋ ದೂರು ದಾಖಲಿಸಿದ ತಂದೆ

    ಮುಂಬೈ: ಕೌಟುಂಬಿಕ ಕಲಹದಿಂದ ಸ್ನೇಹಿತನ ಸಹಾಯದಿಂದ ಪತ್ನಿಯನ್ನೇ ಕೊಂದು ಡ್ರಮ್‍ನಲ್ಲಿ ತುಂಬಿ ಮೃತದೇಹವನ್ನು ಎಸೆದಿರುವ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಅಂಬುಜ್ ತಿವಾರಿ ಎಂದು ಗುರುತಿಸಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ನೀಲಂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಜುಲೈ 23 ರಂದು ಆರೋಪಿ ತಿವಾರಿಯ ತಂದೆ ಮಹೇಂದ್ರ ಪೊಲೀಸ್ ಠಾಣೆಗೆ ಬಂದು ತಮ್ಮ ಮಗ ಮತ್ತು ಸೊಸೆ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ನನ್ನ ಮಗ ಸಿಮೆಂಟ್ ಕಾರ್ಖಾನೆಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಸೊಸೆ ಗೃಹಿಣಿಯಾಗಿದ್ದು, ಜುಲೈ 22 ರಂದು ಇಬ್ಬರೂ ನಾಪತ್ತೆಯಾಗಿದ್ದರು ಎಂದು ಮಹೇಂದ್ರ ಪೊಲೀಸರಿಗೆ ತಿಳಿಸಿದ್ದರು.

    ದೂರು ದಾಖಲಿಸಿಕೊಂಡ ನಂತರ ಪೊಲೀಸರು ದಂಪತಿಗಾಗಿ ಹುಡುಕಲು ಪ್ರಾರಂಭಿಸಿದ್ದರು. ಮಂಗಳವಾರ ಘನ್ಸೋಲಿಯಲ್ಲಿ ತಿವಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಪೊಲೀಸರು ಪತ್ನಿಯ ಬಗ್ಗೆ ಪ್ರಶ್ನಿ ಮಾಡಿದ್ದಾರೆ. ಆಗ ಆರೋಪಿ ಪೊಲೀಸರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿ ಅಂಬುಜ್‍ನನ್ನ ತೀವ್ರವಾಗಿ ವಿಚಾರಣೆ ಮಾಡಿದ್ದಾರೆ.

    ಆಗ ಆರೋಪಿ ಪತ್ನಿಯನ್ನು ತಾನೇ ಕೊಲೆ ಮಾಡಿ ಶವವನ್ನು ಲೋನವಾಲಾದಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಅಂಬುಜ್‍ನನ್ನು ಮೃತದೇಹವನ್ನು ಎಸೆದಿರುವ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಡ್ರಮ್‍ನಲ್ಲಿ ಪತ್ನಿಯ ಮೃತದೇಹ ಪತ್ತೆಯಾಗಿದೆ.

    ಆರೋಪಿ ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಪಟ್ಟಿದ್ದನು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಜುಲೈ 23 ರಂದು ಅಂಬುಜ್ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪತ್ನಿ ನೀಲಂಗೆ ತನ್ನ ಸ್ನೇಹಿತ ಶ್ರೀಕಾಂತ್ ಚೌಬೆ ಮನೆಗೆ ಹೋಗಬೇಕೆಂದು ಹೇಳಿದ್ದನು. ಆದರೆ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ತಿವಾರಿ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ನೇಹಿತ ಚೌಬೆ ಮನೆಗೆ ಕರೆದು ಪತ್ನಿಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿದ್ದಾನೆ. ನಂತರ ನೀಲಂ ಮೃತದೇಹವನ್ನು ಎಸೆಯಲು ಆರೋಪಿ ತಿವಾರಿಗೆ ಸ್ನೇಹಿತ ಸಹಾಯ ಮಾಡಿದ್ದಾನೆ. ನಂತರ ಇಬ್ಬರು ಸೇರಿಕೊಂಡು ಮೃತದೇಹವನ್ನು ಡ್ರಮ್‍ನಲ್ಲಿ ತುಂಬಿ ಇಟ್ಟು ಲೋನಾವಾಲಾ ಬಳಿಯ ಪೊದೆಗಳಲ್ಲಿ ಎಸೆದಿದ್ದರು.

  • ಸಪ್ತ ನದಿಗಳ ನಾಡಲ್ಲೇ ನೀರಿಗಾಗಿ ಪರದಾಟ

    ಸಪ್ತ ನದಿಗಳ ನಾಡಲ್ಲೇ ನೀರಿಗಾಗಿ ಪರದಾಟ

    -ಡ್ರಮ್ ಇರದಿದ್ರೆ ಬದುಕೇ ಇಲ್ಲ

    ಚಿಕ್ಕಮಗಳೂರು: ಸಪ್ತ ನದಿಗಳ ನಾಡು ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನರು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

    ಹಿರೇಗೌಜ ಗ್ರಾಮದ ನಲ್ಲಿಗಳಲ್ಲಿ ನೀರು ಬಂದು ವರ್ಷಗಳೆ ಕಳೆದಿವೆ. ಈಗ 10-15 ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಜನ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮನೆಯೊಂದಕ್ಕೆ 8-10 ದಿನಗಳಿಗೆ 3-4 ಡ್ರಮ್ ನೀರು. ಅದರಲ್ಲೇ ದನ-ಕರು, ಅಡುಗೆ, ಸ್ನಾನ ಎಲ್ಲ ಮಾಡಬೇಕು. ಇಲ್ಲಿ ಡ್ರಮ್ ಇರದಿದ್ದರೇ ಬದುಕೇ ಇಲ್ಲದಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಹೇಳುತ್ತಿದ್ದಾರೆ.

    ವಾರಕ್ಕೊಮ್ಮೆ ಪಂಚಾಯಿತಿ ಬಿಡುತ್ತಿರುವ ಟ್ಯಾಂಕರ್ ನೀರು ಶುದ್ಧವೋ-ಫ್ಲೋರೈಡ್ ನೀರೋ ಗೊತ್ತಿಲ್ಲ. ನೀರನ್ನ ಡ್ರಮ್‍ಗೆ ತುಂಬಿದ್ದಂತೆ ಬಿಳಿಯ ಪಾಚಿ ಹರಡುತ್ತೆ. ಅದನ್ನೆ ಕುಡೀಬೇಕು. ಟ್ಯಾಂಕರ್ ಬರದಿದ್ದರೆ 2-3 ಕಿಲೋ ಮೀಟರ್ ನಷ್ಟು ದೂರ ನೀರನ್ನ ಹೊರಬೇಕು. ನೀರನ್ನ ಹೊತ್ತು-ಹೊತ್ತು ಗ್ರಾಮದ ಗಂಡಸರ ತೋಳಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಹಣ ಕೊಟ್ಟು ನೀರು ತಗೆದುಕೊಳ್ಳೋದಾದರೆ ಒಂದು ಡ್ರಮ್ ನೀರಿಗೆ 50 ರೂಪಾಯಿ. ಆದರೆ ಈಗ ಹಣ ಕೊಡುತ್ತೀವಿ ಅಂದರು ಖಾಸಗಿಯವರು ನೀರು ತರಲ್ಲ. ಯಾಕಂದರೆ ಟ್ಯಾಂಕರ್‍ಗೆ ನೀರು ತುಂಬಲು ಕರೆಂಟ್ ಇರಲ್ಲ. ಹಾಗಾಗಿ ಸ್ಥಳೀಯರು ಶಾಸಕರು ಹಾಗೂ ಸಂಸದರು ಕೆಂಡಕಾರುತ್ತಿದ್ದಾರೆ ಎಂದು ಸ್ಥಳೀಯ ದೇವೇಂದ್ರ ತಿಳಿಸಿದ್ದಾರೆ.

    ಚುನಾವಣೆಗು ಮುನ್ನ ನೀರು ಕೊಡುತ್ತೀವಿ, ರೋಡ್ ಮಾಡುತ್ತೀವಿ ನಿಮ್ಮ ಹಳ್ಳಿನ ಮಾದರಿ ಮಾಡುತ್ತೀವಿ ಅನ್ನೋ ಜನಪ್ರತಿನಿಧಿಗಳು ಗೆದ್ದ ಮೇಲೆ ಆ ಕಡೆ ತಲೆ ಹಾಕಿ ಮಲಗಲ್ಲ. ಅಧಿಕಾರಿಗಳಾದರೂ ನೀರು ಕೊಡುತ್ತಾರೆಂದರೆ ಅವರು ಬ್ಯುಸಿ. ಕಾಫಿನಾಡ ಜನ ಒಂದೆಡೆ ನೀರಿಗಾಗಿ ಗುಳೆ ಹೋಗುತ್ತಿದ್ದಾರೆ.

  • ಶಿರಚ್ಛೇದವಾಗಿದ್ದ ಮಹಿಳೆ, ಮಕ್ಕಳಿಬ್ಬರ ಮೃತದೇಹ ಡ್ರಮ್‌ನಲ್ಲಿ ಪತ್ತೆ..!

    ಶಿರಚ್ಛೇದವಾಗಿದ್ದ ಮಹಿಳೆ, ಮಕ್ಕಳಿಬ್ಬರ ಮೃತದೇಹ ಡ್ರಮ್‌ನಲ್ಲಿ ಪತ್ತೆ..!

    ಚಂಡೀಗಡ: ಹರಿಯಾಣದ ಭಿವಾನಿ ಜಿಲ್ಲೆಯ ರಸ್ತೆಯಲ್ಲಿ ಬಿದ್ದಿದ್ದ ಡ್ರಮ್‍ನೊಳಗೆ ತಲೆ ಇಲ್ಲದ ಮೂರು ಮೃತ ದೇಹಗಳು ಕಂಡುಬಂದಿವೆ.

    ಖಾರಕ್ ಗ್ರಾಮದ ರೋಹ್ಟಕ್-ಭಿವಾನಿ ರಸ್ತೆಯಲ್ಲಿ ಶುಕ್ರವಾರ ಒಂದು ಡ್ರಮ್ ಪತ್ತೆಯಾಗಿದೆ. ಆದರೆ ಅದರೊಳಗೆ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಕಂಡು ಬಂದಿದ್ದು, ಮೃತಪಟ್ಟಿದ್ದ ಮೂವರ ತಲೆಯೂ ಕಟ್ ಆಗಿತ್ತು.

    32 ವರ್ಷ ವಯಸ್ಸಿನ ಮಹಿಳೆ, 12 ವರ್ಷ ವಯಸ್ಸಿನ ಬಾಲಕಿ ಮತ್ತು ಎರಡು ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಮೃತರಿಗೆ ತಲೆ ಇಲ್ಲದ ಕಾರಣ ಅವರ ಗುರುತುಗಳನ್ನು ಪತ್ತೆ ಮಾಡಲು ತುಂಬಾ ಕಷ್ಟಕರವಾಗಿದೆ ಎಂದು ಎಸ್‍ಪಿ ಗಂಗಾ ರಾಮ್ ಪುನಿಯಾ ಹೇಳಿದ್ದಾರೆ.

    ದೆಹಲಿ, ರಾಜಸ್ಥಾನ್ ಮತ್ತು ಪಂಜಾಬ್ ಪೊಲೀಸರು ಕಾಣೆಯಾದ ವ್ಯಕ್ತಿಗಳ ಬಗ್ಗೆ ಯಾರಾದರೂ ದೂರು ಸಲ್ಲಿಸಿದ್ದಾರೆಯೇ ಎಂದು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಯೇ ನಾಪತ್ತೆಯಾದವರು ಹಾಗೂ ನಮಗೆ ಸಿಕ್ಕಿರುವ ಮೃತ ದೇಹಗಳು ಮ್ಯಾಚ್ ಆಗುತ್ತವೆಯಾ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಎಸ್‍ಪಿ ತಿಳಿಸಿದ್ದಾರೆ.

    ಸದ್ಯಕ್ಕೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಯಾರೋ ಮೂವರ ಶಿರಚ್ಛೇದನ ಮಾಡಿ, ಬಳಿಕ ಮೃತ ದೇಹಗಳನ್ನು ಡ್ರಮ್ ನಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv