Tag: drugs

  • 200 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ ಪಾಕಿಸ್ತಾನಿ ಹಡಗು ಗುಜರಾತ್‌ನಲ್ಲಿ ವಶ

    200 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ ಪಾಕಿಸ್ತಾನಿ ಹಡಗು ಗುಜರಾತ್‌ನಲ್ಲಿ ವಶ

    ಗಾಂಧೀನಗರ: ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ 200 ಕೋಟಿ ಮೌಲ್ಯದ ಡ್ರಗ್ಸ್‌ (Drugs) ಸಾಗಿಸುತ್ತಿದ್ದ ಪಾಕಿಸ್ತಾನದ ಹಡಗನ್ನು (Pakistani boat) ಗುಜರಾತ್‌ನಲ್ಲಿ (Gujarat) ವಶಪಡಿಸಿಕೊಳ್ಳಲಾಗಿದೆ.

    ಹಡಗು ಅಕ್ರಮವಾಗಿ ಭಾರತದ ಜಲ ಗಡಿ ಪ್ರವೇಶಿಸಿತ್ತು. ಹಡಗಿನಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಮಾದಕ ವಸ್ತುಗಳು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಡಗು 6 ಮೈಲುಗಳಷ್ಟು ಭಾರತೀಯ ಸಮುದ್ರ ಗಡಿಯೊಳಗೆ ಬಂದಿತ್ತು. ಈ ವೇಳೆ ಪಾಕಿಸ್ತಾನದ ಕೆಲವು ಪ್ರಜೆಗಳ ಬಂಧಿಸಲಾಗಿದೆ. ಇದನ್ನೂ ಓದಿ: ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

    ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಎಟಿಎಸ್ ಈ ಹಿಂದೆ ಗುಜರಾತ್ ಕರಾವಳಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಅಕ್ಟೋಬರ್ 2021 ರಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಿಂದ 2,988 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಯಿತು. ಇದು 21,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು.

    ಕಳೆದ ತಿಂಗಳು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಜರಾತ್‌ನ ಕಚ್ ಜಿಲ್ಲೆಯ ಭಾರತ-ಪಾಕ್ ಗಡಿಯ ಸಮೀಪವಿರುವ ತೊರೆಯಿಂದ ಎರಡು ಪಾಕಿಸ್ತಾನಿ ಮೀನುಗಾರಿಕೆ ಬೋಟ್‌ಗಳನ್ನು ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ – ಇಂದು 8 ʼಕೈʼ ಶಾಸಕರು ಬಿಜೆಪಿ ಸೇರ್ಪಡೆ

    Live Tv
    [brid partner=56869869 player=32851 video=960834 autoplay=true]

  • ನಟಿ ಸೊನಾಲಿ ಪೋಗಟ್ ನಿಗೂಢ ಸಾವು : ದೇಹದ ಮೇಲೆ 46 ಗಾಯದ ಗುರುತು?

    ನಟಿ ಸೊನಾಲಿ ಪೋಗಟ್ ನಿಗೂಢ ಸಾವು : ದೇಹದ ಮೇಲೆ 46 ಗಾಯದ ಗುರುತು?

    ಬಿಜೆಪಿ ನಾಯಕಿ, ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸೊನಾಲಿ ಪೋಗಟ್ ಅವರ ಸಾವಿನ ಕುರಿತಂತೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿವೆ. ಮೊದಲು ಈ ಸಾವನ್ನು ಹೃದಯಾಘಾತ ಎಂದು ಹೇಳಲಾಗಿತ್ತು. ಆನಂತರ ಆಲ್ಕೋಹಾಲ್ ನಲ್ಲಿ ಡ್ರಗ್ಸ್ ಹಾಕಿ ಕೊಲ್ಲಲಾಗಿದೆ ಎಂಬ ಸುದ್ದಿ ಆಯಿತು. ಇದೀಗ ಸೊನಾಲಿ ಅವರ ಮರಣೋತ್ತ ಪರೀಕ್ಷಾ ವರದಿ ಬಂದಿದ್ದು, ನಟಿಯ ದೇಹದ ಮೇಲೆ ಬರೋಬ್ಬರಿ 46 ಗಾಯದ ಗುರುತುಗಳನ್ನು ಪತ್ತೆ ಮಾಡಲಾಗಿದೆ.

    ಸೊನಾಲಿಗೆ ಹೃದಯಾಘಾತವಾಗಿದೆ ಎಂದು ಹೇಳುತ್ತಿದ್ದಂತೆಯೇ, ಈ ಸುದ್ದಿಯನ್ನು ಸೊನಾಲಿ ಕುಟುಂಬ ಒಪ್ಪಲಿಲ್ಲ. ಇದೊಂದು ವ್ಯವಸ್ಥಿತವಾಗಿ ನಡೆದ ಕೊಲೆ ಎಂದೇ ಕುಟುಂಬ ಹೇಳುತ್ತಾ ಬಂದಿತು. ಹಾಗಾಗಿಯೇ ತನಿಖೆಗೆ ಒಪ್ಪಿಸುವಂತೆ ಕೇಳಿಕೊಳ್ಳಲಾಯಿತು. ಸೊನಾಲಿ ಕುಟುಂಬದ ದೂರಿನಂತೆ ಗೋವಾ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಸಿಗುತ್ತಿದೆ. ಸೊನಾಲಿ ದೇಹದ ಮೇಲಿರುವ 46 ಗಾಯದ ಗುರುತುಗಳು ಸಹಜ ಗಾಯದ ಗುರುತುಗಳಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಕೊಲೆಗೆ ಸಂಬಂಧ ಪಟ್ಟಂತೆ ಈಗಾಗಲೇ ಕೆಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಸೊನಾಲಿಗೆ ಸಂಬಂಧಿಸಿದಂತೆ ಕೆಲವು ವಸ್ತುಗಳು ನಾಪತ್ತೆ ಆಗಿರುವ ಕುರಿತು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸಾಕ್ಷ್ಯವಾಗುತ್ತಿದ್ದ ಸಿಸಿಟಿವಿ ಫೂಟೇಸ್ ಕೂಡ ಕಾಣುತ್ತಿಲ್ಲ ಎನ್ನುವುದು ಕಳವಳಕಾರಿ ಸಂಗತಿ ಎಂದು ಕುಟುಂಬಸ್ಥರು. ಸೂಕ್ತ ತನಿಖೆ ನೆಡಸಿ ಕ್ರಮ ತಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸಿದ ವೀಡಿಯೋ ವೈರಲ್

    ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸಿದ ವೀಡಿಯೋ ವೈರಲ್

    ಮುಂಬೈ: ಆಗಸ್ಟ್ 23ರಂದು ನಿಧನರಾದ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಅವರಿಗೆ ಪಬ್‌ನಲ್ಲಿ ಬಲವಂತವಾಗಿ ಮದ್ಯ ಕುಡಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸುತ್ತಿರುವ ವ್ಯಕ್ತಿ ಸುಧೀರ್ ಸಾಂಗ್ವಾನ್ ಎಂಬುದು ತಿಳಿದುಬಂದಿದೆ.

    ಈ ನಡುವೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ, ಸೋನಾಲಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ(ಸಿಬಿಐ) ತನಿಖೆ ನಡೆಸುವಂತೆ ಗೋವಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಭೇಟಿಯ ಬಳಿಕ ಮಾತನಾಡಿದ ಸೋನಾಲಿ ಸಹೋದರಿ ರೂಪೇಶ್, ಘಟನೆ ಬಗ್ಗೆ ಸಿಬಿಐ ತನಿಖೆ ನಡೆಯಲಿದೆ ಮತ್ತು ನಮಗೆ ನ್ಯಾಯ ಸಿಗಲಿದೆ ಎಂದು ಸಿಎಂ ಖಟ್ಟರ್ ನಮಗೆ ಭರವಸೆ ನೀಡಿದ್ದಾರೆ. ಇನ್ನು ಎಲ್ಲವೂ ಮುನ್ನೆಲೆಗೆ ಬರಲಿದೆ. ಬಲವಂತವಾಗಿ ಮಾಡಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ಅವಳ ಫೋನ್ ಆಫ್ ಆದ ಬಳಿಕ ಏನೋ ತಪ್ಪಾಗಿದೆ ಎಂದು ಆಕೆ ನನಗೆ ಹೇಳಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಗೋವಾದ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ಸುಧೀರ್ ಸಾಂಗ್ವಾನ್(ಸೋನಾಲಿ ಆಪ್ತ ಸಹಾಯಕ) ಮತ್ತು ಸುಖ್ವಿಂದರ್ ಸಿಂಗ್(ಸುಧೀರ್ ಸಾಂಗ್ವಾನ್ ಸ್ನೇಹಿತ)ನನ್ನು ಅಂಜುನಾ ಪೊಲೀಸರು ಶನಿವಾರ ಮಪುಸಾ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    ಆರೋಪಿಗಳು ಸೋನಾಲಿಗೆ ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಬಲವಂತವಾಗಿ ಮಾದಕ ದ್ರವ್ಯ ನೀಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ರ್ಯಾಣ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲು ಇದು ಹೃದಯಾಘಾತದಿಂದ ನಡೆದ ಸಾವು ಎಂದು ಹೇಳಲಾಗಿತ್ತು. ಆದರೆ, ಇದನ್ನು ಸೊನಾಲಿ ಕುಟುಂಬ ಒಪ್ಪಿಕೊಳ್ಳಲಿಲ್ಲ. ಇದೊಂದು ಕೊಲೆ ಎಂದು ಆರೋಪಿಸಿ, ತನಿಖೆಗೆ ಒತ್ತಾಯಿಸಲಾಯಿತು. ತನಿಖೆಗೆ ಇಳಿದ ಪೊಲೀಸರು ಸೊನಾಲಿ ಜೊತೆಯೇ ಗೋವಾಗೆ ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆನಂತರ ಇದೊಂದು ಕೊಲೆ ಎನ್ನುವ ತೀರ್ಮಾನಕ್ಕೆ ಬರಲಾಯಿತು.

    ಸೊನಾಲಿ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಗಾಯಗಳ ಗುರುತು ಇರುವ ವರದಿ ಬಂದಿದ್ದೇ ತಡ, ಪೊಲೀಸರು ಅಲರ್ಟ್ ಆದರು. ಸೊನಾಲಿ ಜೊತೆಗೆ ಬಂದಿದ್ದ, ಅವರ ಸಹಾಯಕರೂ ಆಗಿರುವ ಸುಧೀರ್ ಸಾಂಗ್ವಾನ್ ಮತ್ತು ಸಖ್ವೀಂದರ್ ಎನ್ನುವವರನ್ನು ಅರೆಸ್ಟ್ ಮಾಡಿದಾಗ, ತಾವು ಸೊನಾಲಿಗೆ ಡ್ರಗ್ಸ್ ಕೊಟ್ಟಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಯಿತು. ಪ್ರತಿಷ್ಠಿತ ಪಬ್ ಗೆ ಹೋಗಿ ಚೆನ್ನಾಗಿ ಕುಡಿದೆವು. ಅದೇ ಪಬ್ ನಲ್ಲಿಯೇ ಡ್ರಗ್ಸ್ ತಗೆದುಕೊಂಡು ನೀರಿನಲ್ಲಿ ಹಾಕಿ ಕುಡಿಸಿದೆವು. ನಂತರ ಹೋಟೆಲ್ ಗೆ ಬಂದೆವು. ಮರು ದಿನ ಸೊನಾಲಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ಸೋನಾಲಿ ಪಬ್ ನಲ್ಲಿ ಡಾನ್ಸ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ವಿಡಿಯೋ ಗೋವಾದಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ. ಇದು ಗುರುಗ್ರಾಮದ್ದು. ಸೊನಾಲಿ ಹೆಸರು ಹಾಳು ಮಾಡುವುದಕ್ಕೆ ಈ ವಿಡಿಯೋ ಗೋವಾದ್ದು ಎಂದು ನಂಬಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಸೊನಾಲಿ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ಪಣಜಿ: ಬಿಜೆಪಿ ನಾಯಕಿ ಸೋನಾಲಿ ಪೋಗಟ್‌ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾರ್ಟಿ ವೇಳೆ ಪೋಗಟ್‌ಗೆ ಬಲವಂತವಾಗಿ ಮಾದಕ ದ್ರವ್ಯ (ಡ್ರಗ್ಸ್‌) ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋನಾಲಿ ಫೋಗಟ್ ಅವರು ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಹಚರರು ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದಾರೆ. ರೆಸ್ಟೋರೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಇದು ತಿಳಿದುಬಂದಿದ್ದು, ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

    ಬಿಜೆಪಿ ನಾಯಕಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಅವರು ನಿರಂತರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸೋನಾಲಿ ಪೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಸೊನಾಲಿ ಫೋಗಟ್ ಆತ್ಮಹತ್ಯೆ ಪ್ರಕರಣ- ಇಬ್ಬರು ಸಹಚರರ ವಿರುದ್ಧ ಕೇಸ್

    ಟಿಕ್‌ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೋನಾಲಿ ಪೋಗಟ್‌, 14ನೇ ಆವೃತ್ತಿಯ ʼಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು

    ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು

    ವಾಷಿಂಗ್ಟನ್: ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ಘಟನೆ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಆದರೆ ಇವುಗಳ ಹಿಂದಿನ ಪಿತೂರಿ ಬಹಿರಂಗಗೊಂಡಾಗ ಆಶ್ಚರ್ಯವನ್ನುಂಟು ಮಾಡುತ್ತವೆ. ಇಂತಹದ್ದೇ ಘಟನೆ ಈಗ ಅಮೆರಿಕದಲ್ಲಿ ನಡೆದಿದೆ. ಜೈಲಿನಲ್ಲಿದ್ದ ಪ್ರಿಯಕರನ ಮೇಲೆ ಪ್ರೀತಿ ತೋರಿಸಲು ಹೋದ ಮಹಿಳೆ ತಾನೇ ಜೈಲು ಪಾಲಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹೌದು ಜೈಲಿನಲ್ಲಿದ್ದ ಪ್ರಿಯಕರನನ್ನು ನೋಡಲು ಹೋದ ಮಹಿಳೆ, ಅವನಿಗೆ ಕೊಟ್ಟ ಒಂದೇ ಒಂದು ಮುತ್ತಿನಿಂದಾಗಿ ಪ್ರಿಯಕರ ಜೈಲಿನಲ್ಲೇ ಸಾವನ್ನಪ್ಪಿದ್ದಾನೆ. ಇದು ಸಂಭವಿಸಿರುವುದು ಅಮೆರಿಕದ ಟೆನ್ನೆಸ್ಸಿಯಲ್ಲಿ. ಈ ಪ್ರಕರಣದಲ್ಲಿ ಮೃತಪಟ್ಟಿರುವವನು ಜಾಷುಯಾ ಬ್ರೌನ್ ಹಾಗೂ ಸಾವಿಗೆ ಕಾರಣವಾಗಿ ಈಗ ಜೈಲು ಪಾಲಾಗಿರುವ ಮಹಿಳೆ ರಾಷೆಲ್ ಡೊಲ್ಲಾರ್ಡ್. ಇದನ್ನೂ ಓದಿ: ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ: ವಿವಾದ ಸೃಷ್ಟಿಸಿದ ದಿಲೀಪ್ ಘೋಷ್ ಹೇಳಿಕೆ

    ಅಷ್ಟಕ್ಕೂ ಪ್ರಿಯಕರನನ್ನು ಕೊಲ್ಲಲು ಪ್ರೇಯಸಿ ಜೈಲಿಗೆ ಹೋಗಿರಲಿಲ್ಲ ಅಥವಾ ಚುಂಬಿಸಿದ್ದು ಆತನನ್ನು ಸಾಯಿಸಲು ಅಲ್ಲ, ಅವಳ ಉದ್ದೇಶ ಒಳ್ಳೆಯದ್ದೇ ಇತ್ತು. ಅಪರೂಪಕ್ಕೆ ಕಾಣಸಿಕ್ಕ ಪ್ರಿಯತಮನ ಮೇಲೆ ಪ್ರೀತಿ ಉಕ್ಕಿ ಮುತ್ತು ಕೊಟ್ಟಿದ್ದಳಷ್ಟೇ. ಆದರೆ ಅಲ್ಲಿ ಆಗಿದ್ದೇ ಬೇರೆ.

    ಏನಿದು ಘಟನೆ?
    ತನ್ನ ಪ್ರಿಯಕರ ಡ್ರಗ್ಸ್ ಪ್ರಿಯ. ಇದೇ ಕೇಸ್‌ನಲ್ಲಿ ಆತ ಜೈಲು ಸೇರಿದ್ದ. 11 ವರ್ಷಗಳ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸುತ್ತಿದ್ದ. 2029ರ ವರೆಗೆ ಅವನಿಗೆ ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿ ಡ್ರಗ್ಸ್ ಸಿಗದೇ ಒದ್ದಾಡುತ್ತಿದ್ದ. ಇದನ್ನು ನೋಡಲಾಗದ ಪ್ರಿಯತಮೆ ಬಾಯಲ್ಲಿ ಡ್ರಗ್ಸ್ ಇಟ್ಟುಕೊಂಡು ಹೋಗಿದ್ದಳು. ಪ್ರಿಯತಮನಿಗೆ ಇಷ್ಟವಾದ ಹಲವಾರು ಬಗೆಯ ಡ್ರಗ್ಸ್ ಆಕೆಯ ಬಾಯಲ್ಲಿ ಇತ್ತು. ಕಿಸ್ ಕೊಡುವ ನೆಪದಲ್ಲಿ ತನ್ನ ಬಾಯಿಯಿಂದ ಆತನ ಬಾಯಿಗೆ ಡ್ರಗ್ಸ್ ಹಾಕುವ ಪ್ಲ್ಯಾನ್ ಈಕೆ ಮಾಡಿದ್ದಳು.

    ಆದರೆ ಅಪರೂಪಕ್ಕೆ ತನಗೆ ಡ್ರಗ್ಸ್ ಸಿಕ್ಕಿದ ಖುಷಿಗೆ ಈ ಪ್ರಿಯಕರ 14 ಗ್ರಾಂ ಗಳಷ್ಟು ಡ್ರಗ್ಸ್ ಅನ್ನೂ ಒಟ್ಟಿಗೇ ನುಂಗಿಬಿಟ್ಟಿದ್ದಾನೆ. ಅದೇ ವಿಷವಾಗಿ ಪರಿಣಮಿಸಿದೆ. ಒಟ್ಟಿಗೇ ಅಷ್ಟೊಂದು ಮಾದಕದ್ರವ್ಯ ಸೇವನೆ ಮಾಡಿದ್ದರಿಂದ ಅದು ಆತನ ಹೊಟ್ಟೆ ಸೇರುತ್ತಲೇ ವಿಷವಾಗಿ ಕೂಡಲೇ ಪ್ರಾಣ ಬಿಟ್ಟಿದ್ದಾನೆ. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ಆತ ಹೇಗೆ ಪ್ರಾಣ ಬಿಟ್ಟ ಎಂಬ ಬಗ್ಗೆ ತನಿಖೆ ಮಾಡಿದಾಗ ವಿಷಯ ಬಹಿರಂಗಗೊಂಡಿದೆ. ಅವನ ಹೊಟ್ಟೆಯಲ್ಲಿ ಡ್ರಗ್ಸ್ ಪತ್ತೆಯಾಗಿದ್ದು, ಪ್ರೇಯಸಿ ಸಿಕ್ಕಿಬಿದ್ದಿದ್ದಾಳೆ. ಈ ಹಿಂದೆ ಕೂಡ ಇದೇ ರೀತಿ ಕಿಸ್ ಮಾಡುವ ಮೂಲಕ ಡ್ರಗ್ಸ್ ನೀಡಿದ್ದಳು ಎನ್ನುವ ವಿಷಯ ಕೂಡ ಇದೀಗ ಬಹಿರಂಗಗೊಂಡಿದೆ. ಈ ಕೇಸ್ ನಲ್ಲಿ ಪ್ರಿಯತಮೆಗೆ ಶಿಕ್ಷೆ ವಿಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಪರಾಧಗಳನ್ನು ತಡೆಯಲು ಮದ್ಯಪಾನದ ಬದಲು ಗಾಂಜಾ, ಭಾಂಗ್ ಸೇವಿಸಿ: ಶಾಸಕನಿಂದ ವಿವಾದಾತ್ಮಕ ಹೇಳಿಕೆ

    ಅಪರಾಧಗಳನ್ನು ತಡೆಯಲು ಮದ್ಯಪಾನದ ಬದಲು ಗಾಂಜಾ, ಭಾಂಗ್ ಸೇವಿಸಿ: ಶಾಸಕನಿಂದ ವಿವಾದಾತ್ಮಕ ಹೇಳಿಕೆ

    ರಾಯಪುರ: ಅಪರಾಧಗಳನ್ನು ತಪ್ಪಿಸಲು ಮದ್ಯಪಾನವನ್ನು ಮಾಡಬೇಡಿ. ಬದಲಿಗೆ ಗಾಂಜಾ ಅಥವಾ ಭಾಂಗ್ ಸೇವಿಸಿ ಎಂದು ಛತ್ತೀಸ್‌ಗಢದ ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮದ್ಯಪಾನದಿಂದ ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಅಪರಾಧಗಳು ಹೆಚ್ಚಾಗುತ್ತಿವೆ. ಆದರೆ ಭಾಂಗ್ ಅಥವಾ ಗಾಂಜಾ ಸೇವನೆ ಇಂತಹ ಅಪರಾಧಗಳನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕನ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಒಬ್ಬ ಸಾರ್ವಜನಿಕ ಪ್ರತಿನಿಧಿ ಮಾದಕ ದ್ರವ್ಯ ಸೇವಿಸಲು ಜನರಿಗೆ ಉತ್ತೇಜನ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವರ ಸಾವು

    ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಹಿಂದೆಯೂ ಈ ಬಗ್ಗೆ ವಿಧಾನಸಭೆಯಲ್ಲಿ ಒಮ್ಮೆ ಚರ್ಚೆ ನಡೆಸಿದ್ದೆ. ಅತ್ಯಾಚಾರ, ಕೊಲೆ, ಅಪರಾಧಗಳಿಗೆ ಎಲ್ಲೋ ಒಂದೆಡೆ ಮದ್ಯಪಾನವೇ ಕಾರಣವಾಗಿರುತ್ತದೆ ಎಂದು ಹೇಳಿದ್ದೆ. ಇಲ್ಲಿಯವರೆಗೆ ಭಾಂಗ್ ಸೇವಿಸಿದವರು ಅತ್ಯಾಚಾರ, ಕೊಲೆಯಂತಹ ಕೃತ್ಯಗಳನ್ನು ಮಾಡಿದ್ದಾರಾ? ವ್ಯಸನದ ಅಗತ್ಯಗಳನ್ನು ಪೂರೈಸಲು ಇದು ಅತ್ಯುತ್ತಮ ಮಾರ್ಗ. ಮದ್ಯಪಾನವನ್ನು ನಿಷೇಧಿಸಲು ಇದು ಸಹಕಾರಿಯೂ ಆಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ

    ಜನರು ವ್ಯಸನವನ್ನು ಬಯಸಿದರೆ, ಅವರಿಗೆ ಕೊಲೆ, ಅತ್ಯಾಚಾರಗಳಂತಹ ಅಪರಾಧಗಳಿಗೆ ಉತ್ತೇಜನ ನೀಡದ ವಸ್ತುಗಳನ್ನು ನೀಡಬೇಕು. ನಾವು ಇದಕ್ಕಾಗಿ ಭಾಂಗ್ ಮತ್ತು ಗಾಂಜಾದ ಕಡೆಗೆ ಮುನ್ನಡೆಯಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಅಂದ ಸಹೋದರಿ

    ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಅಂದ ಸಹೋದರಿ

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಎನ್.ಸಿ.ಬಿ ಅವರು ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ಈ ಕೇಸ್ ಗೆ ಮತ್ತೊಂದು ತಿರುವು ಸಿಕ್ಕಿದೆ. ಎನ್.ಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆ ರಿಯಾ ಚಕ್ರವರ್ತಿ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಪೂರೈಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆಯೇ ಈ ಕೇಸ್ ಕುರಿತು ಮಾತನಾಡಿರುವ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್, ಅದೊಂದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಮತ್ತೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಇವರು ಅದನ್ನು ಕೊಲೆ ಎಂದೇ ಹೇಳಿಕೊಂಡು ಬಂದಿದ್ದಾರೆ. ತಾವು ಕ್ರಿಮಿನಲ್ ಲಾಯರ್ ಕೂಡ ಆಗಿರುವುದರಿಂದ ಅನೇಕ ಆತ್ಮಹತ್ಯೆ ಕೇಸುಗಳನ್ನು ತಾವು ನೋಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಆತ್ಮಹತ್ಯೆ ಕೇಸ್ ಗೂ ಮತ್ತು ಕೊಲೆ ಕೇಸ್ ನಡುವಿನ ವ್ಯತ್ಯಾಸದ ಕುರಿತೂ ಅವರು ಮಾತನಾಡಿದ್ದಾರೆ.ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

    ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಆ ಅಪಾರ್ಟ್ ಮೆಂಟ್ ಗೆ ಹೋಗಿದ್ದ ಸಹೋದರಿ ಅನುಮಾನಾಸ್ಪದ ರೀತಿಯಲ್ಲಿದ್ದ ಮೃತದೇಹದ ಕುರಿತೂ ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ನಾಲಿಗೆ ಹೊರಚಾಚಿರುತ್ತದೆ. ಕಣ್ಣುಗಳು ಹೊರಗೆ ಬಂದಿರುತ್ತವೆ. ಆದರೆ, ನನ್ನ ಸಹೋದರನಲ್ಲಿ ಅದ್ಯಾವುದೂ ಕಾಣಲಿಲ್ಲ. ಅವನು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ ಎಂದು ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇನ್ನೂ ತಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಪ್ತಾಂಗದಲ್ಲಿ ಡ್ರಗ್ಸ್ ಪೂರೈಸ್ತಿದ್ದ ಗರ್ಲ್‍ಫ್ರೆಂಡ್ಸ್ ಅರೆಸ್ಟ್

    ಗುಪ್ತಾಂಗದಲ್ಲಿ ಡ್ರಗ್ಸ್ ಪೂರೈಸ್ತಿದ್ದ ಗರ್ಲ್‍ಫ್ರೆಂಡ್ಸ್ ಅರೆಸ್ಟ್

    ಬೆಂಗಳೂರು: ವಾಲಿಬಾಲ್, ಟೆನ್ನಿಸ್ ಬಾಲ್ ಅಲ್ಲಿ ಡ್ರಗ್ಸ್ ಸಾಗಾಟ ಮಾಡಿರೋದು ನೋಡಿದ್ದೀವಿ. ಆದರೆ ಇಲ್ಲೊಂದು ಅತಿ ವಿಚಿತ್ರ ಘಟನೆ ನಡೆದಿದೆ. ತನ್ನ ಬಾಯ್ ಫ್ರೆಂಡ್ಸ್ ಗಾಗಿ, ಗರ್ಲ್ ಫ್ರೆಂಡ್ಸ್ ಡ್ರಗ್ಸ್ ಸಾಗಾಟ ಮಾಡಿದ್ದಾರೆ. ಅದು ಕೂಡ ವಿಚಿತ್ರವಾಗಿ ಡ್ರಗ್ಸ್ ಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.

    ಬಂಧಿತರನ್ನು ಚಾಮರಾಜಪೇಟೆ ಮೂಲದ ಸಂಗೀತಾ ಮತ್ತು ಛಾಯಾ ಎಂದು ಗುರುತಿಸಲಾಗಿದೆ. ತನ್ನ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಸಾಗಾಟ ಮಾಡಲು ಹೋಗಿ ಇವರಿಬ್ಬರು ಸಿಕ್ಕಿಬಿದ್ದಿದ್ದಾರೆ. ಕೊಬ್ಬರಿ ಎಣ್ಣೆ ಡಬ್ಬದಲ್ಲಿ ಆಶಿಸ್ ಆಯಿಲ್ ಡ್ರಗ್ಸ್ ತುಂಬಿ ಗುಪ್ತಾಂಗದಲ್ಲಿ ಇರಿಸಿಕೊಂಡಿದ್ದಾರೆ.

    ಚಾಮರಾಜಪೇಟೆ ಮೂಲದ ಸಂಗೀತಾ ಎಂಬಾಕೆ ತನ್ನ ಸ್ನೇಹಿತ ಲೋಹಿತ್‍ಗಾಗಿ 220 ಗ್ರಾಂ ಆಯಿಸ್ ಆಯಿಲ್ ಡ್ರಗ್ಸ್ ಅನ್ನು ಕೊಬ್ಬರಿ ಎಣ್ಣೆ ಡಬ್ಬಾದಲ್ಲಿ ತುಂಬಿಸಿ ತಂದಿದ್ದಳು. ಛಾಯ ಎಂಬ ಮತ್ತೊಬ್ಬ ಮಹಿಳೆ ಕಾಳಪ್ಪ ಎಂಬ ಕೈದಿಗಾಗಿ 50 ಗ್ರಾಂ ಆಶಿಸ್ ಆಯಿಲ್ ಡ್ರಗ್ಸ್ ತಂದಿದ್ದಳು. ಜೈಲಲ್ಲಿ ಆರೋಪಿ ನೋಡಲು ಬಂದವರೇ ಈಗ ಜೈಲು ಸೇರಿದ್ದಾರೆ.

    ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಸ್ ಪೋರ್ಟ್ ಗಾಗಿ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ ಶಾರುಖ್ ಪುತ್ರ

    ಪಾಸ್ ಪೋರ್ಟ್ ಗಾಗಿ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ ಶಾರುಖ್ ಪುತ್ರ

    ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಹಿಂದೆ ಅವರ ಮೇಲೆ ಡ್ರಗ್ಸ್ ಕೇಸ್ ಆರೋಪ ಹೊರಿಸಲಾಗಿತ್ತು. ಅಲ್ಲದೇ, ಜೈಲಿಗೂ ಕಳುಹಿಸಲಾಗಿತ್ತು. ಈ ಸಮಯದಲ್ಲಿ ದೇಶ ಬಿಡದಿರುವಂತೆ ಸೇರಿದಂತೆ ಹಲವು ನಿಬಂಧನೆಗಳನ್ನು ಹಾಕಿ ಜಾಮೀನಿನ ಮೇಲೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಅವರ ಪಾಸ್ ಪೋರ್ಟ್ ಅನ್ನು ಎನ್.ಸಿ.ಬಿ ವಶಪಡಿಸಿಕೊಂಡಿತ್ತು.

    ಇದೀಗ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ. ಡ್ರಗ್ಸ್ ಕೇಸ್ ನಲ್ಲಿ ಅವರು ಡ್ರಗ್ಸ್ ಸೇವಿಸಿರಲಿಲ್ಲ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕೇಸ್ ಕೈ ಬಿಡಲಾಗಿದೆ. ಹಾಗಾಗಿ ವಶಪಡಿಸಿಕೊಂಡಿರುವ ತಮ್ಮ ಪಾಸ್ ಪೋರ್ಟ್ ಅನ್ನು ಮರಳಿ ಕೊಡಿಸುವಂತೆ ಅವರು ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಅವರು ವಿದೇಶಕ್ಕೆ ತೆರಳಬೇಕಾಗಿದ್ದರಿಂದ ಆದಷ್ಟು ಬೇಗ ಪಾಸ್ ಪೋರ್ಟ್ ಕೊಡಿಸುವಂತೆ ಆರ್ಯನ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯನ್ ಭಾಗಿಯಾಗಿದ್ದರು ಮತ್ತು ಡ್ರಗ್ಸ್ ಸೇವಿಸಿದ್ದರು ಎನ್ನುವ ಕಾರಣಕ್ಕಾಗಿ 2021 ಅಕ್ಟೋಬರ್ 2 ರಂದು ಬಂಧನವಾಗಿತ್ತು. 25 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಕಳುಹಿಸಲಾಗಿತ್ತು. 25 ದಿನಗಳ ಬಳಿಕೆ ಅವರಿಗೆ ಜಾಮೀನು ಸಿಕ್ಕಿತ್ತು. ನಂತರ ಯಾವುದೇ ಸಾಕ್ಷಿಗಳು ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಕೇಸ್ ಖುಲಾಸೆ ಆಗಿತ್ತು.

    Live Tv