Tag: drugs

  • ಮ್ಯಾಚ್ ಬಾಕ್ಸ್‌ನಲ್ಲಿ ಡ್ರಗ್ಸ್ ಇಟ್ಟು ಮಾರಾಟ – ಆರೋಪಿಗಳು ಅರೆಸ್ಟ್

    ಮ್ಯಾಚ್ ಬಾಕ್ಸ್‌ನಲ್ಲಿ ಡ್ರಗ್ಸ್ ಇಟ್ಟು ಮಾರಾಟ – ಆರೋಪಿಗಳು ಅರೆಸ್ಟ್

    ಬೆಂಗಳೂರು: ಡ್ರಗ್ಸ್ (Drugs) ಮಾರಾಟ ಮತ್ತು ಸಾಗಾಣಿಕೆ ಮಾಡಲು ದಂಧೆಕೋರರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಪ್ಲಾನ್ ಮಾಡುವ ಆರೋಪಿಗಳು, ಬೇರೆ ಬೇರೆ ಮಾರ್ಗಗಳಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ನಗರದಲ್ಲಿ ಬೆಂಕಿ ಪೊಟ್ಟಣಗಳಲ್ಲಿ (Match Box) ಡ್ರಗ್ಸ್ ಇಟ್ಟು ಅವುಗಳ ಮೂಲಕ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದಾರೆ.

    ಮೊದಲಿಗೆ ನಿರ್ಜನ ಪ್ರದೇಶಗಳು, ಖಾಲಿ ಸೈಟ್‌ಗಳು, ಬಸ್‌ಸ್ಟ್ಯಾಂಡ್‌ಗಳನ್ನು ಗುರುತು ಮಾಡಿಕೊಳ್ಳುವ ಆರೋಪಿಗಳು, ಅಲ್ಲಿ ಡ್ರಗ್ಸ್ ತುಂಬಿರುವ ಮ್ಯಾಚ್ ಬಾಕ್ಸ್‌ಗಳನ್ನು ಎಸೆದು ಹೋಗುತ್ತಿದ್ದರು. ಜೊತೆಗೆ ಆ ಮ್ಯಾಚ್ ಬಾಕ್ಸ್‌ನ ಫೋಟೋ ಮತ್ತು ಲೋಕೇಷನ್ ಶೇರ್ ಮಾಡುತ್ತಿದ್ದರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮತ್ತೆ ಭೂಕುಸಿತದ ಆತಂಕ

    ಡ್ರಗ್ಸ್ ಮಾರಾಟ ಮಾಡುವ ವೇಳೆ ಮೊದಲಿಗೆ ಫೋನ್‌ನಲ್ಲೇ ಫೋಟೋಗಳು, ಲೋಕೇಷನ್ ಶೇರ್ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದರು. ಹಣ ಕೊಟ್ಟ ಗ್ರಾಹಕರು, ಆ ಲೋಕೇಷನ್‌ಗೆ ಹೋಗಿ ಯಾರಿಗೂ ಅನುಮಾನ ಬಾರದಂತೆ ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಇಂತಹ ಪ್ರಕರಣಗಳು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಕೊತ್ತನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್‌ ಸೇವನೆ ಆರೋಪ – 300 ಮಂದಿ ಪೊಲೀಸರ ವಶಕ್ಕೆ

    ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್‌ ಸೇವನೆ ಆರೋಪ – 300 ಮಂದಿ ಪೊಲೀಸರ ವಶಕ್ಕೆ

    ನವದೆಹಲಿ: ಇಲ್ಲಿನ ಉದ್ಯೋಗ್ ವಿಹಾರ್ ಹಂತ 3 ಪ್ರದೇಶದಲ್ಲಿನ ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್ (Drugs) ಸೇವಿಸಿದ ಆರೋಪದ ಮೇಲೆ ಒಟ್ಟು 288 ಜನರನ್ನು ವಶಕ್ಕೆ ಪಡೆಯಲಾಗಿದೆ.

    ಮೂವರು ಕ್ಲಬ್ ಮಾಲೀಕರು, ಮೂವರು ಮ್ಯಾನೇಜರ್‌ಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಂಟಿ ಪೊಲೀಸ್ ತಂಡವು ಉದ್ಯೋಗ್ ವಿಹಾರ್ ಹಂತ -3 ನಲ್ಲಿರುವ ಕಾಸಾ ಡಾಂಜಾ ಕ್ಲಬ್‌ನಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ದಾಳಿ ನಡೆಸಿತು ಎಂದು ದೆಹಲಿ (New Delhi) ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ 16ರ ವಿದ್ಯಾರ್ಥಿನಿ ಸಾವು

    drug

    ಡ್ರಗ್ಸ್‌ ಪ್ರಕರಣದಲ್ಲಿ ಯಾವುದೇ ಕಳ್ಳಸಾಗಣೆ ಪತ್ತೆಯಾಗಿಲ್ಲ. ಕ್ಲಬ್ ಅನ್ನು ಖಾಲಿ ಮಾಡಿಸಿದ ನಂತರ ಅಪರಾಧ ದೃಶ್ಯ ತಂಡವು ತೀವ್ರ ಶೋಧವನ್ನು ನಡೆಸಿತು ಎಂದು ಉದ್ಯೋಗ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಮನೋಜ್ ಕುಮಾರ್ ಹೇಳಿದ್ದಾರೆ.

    14 ಡ್ರಗ್ಸ್ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ರಕ್ತದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹುಡ್ಗೀರಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ 17ರ ಹುಡುಗ – ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ

    ರಕ್ತದ ಮಾದರಿ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ತಿಳಿಸಿದ್ದಾರೆ. ನೈಟ್‌ ಕ್ಲಬ್ ಮಾಲೀಕರು, ವ್ಯವಸ್ಥಾಪಕರು, ಸಿಬ್ಬಂದಿ ವಿರುದ್ಧ ಸೆಕ್ಷನ್ 21, 22, 25, 27ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಲಾ ಮಕ್ಕಳಿಗೆ ಎನ್‌ಇಪಿ ತರುವ ಬದಲು ಡ್ರಗ್ಸ್ ದಂಧೆ ತಡೆಯಲಿ: ಕುಮಾರಸ್ವಾಮಿ

    ಶಾಲಾ ಮಕ್ಕಳಿಗೆ ಎನ್‌ಇಪಿ ತರುವ ಬದಲು ಡ್ರಗ್ಸ್ ದಂಧೆ ತಡೆಯಲಿ: ಕುಮಾರಸ್ವಾಮಿ

    ಕಲಬುರಗಿ: ಶಾಲಾ-ಕಾಲೇಜುಗಳ ಮುಂದೆ ಡ್ರಗ್ಸ್ (Drugs) ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಸಣ್ಣ ಸಣ್ಣ ಮಕ್ಕಳು ಡ್ರಗ್ಸ್ ದಂಧೆಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಶಾಲಾ ಮಕ್ಕಳಿಗೆ ಹೊಸ ಶಿಕ್ಷಣ ನೀತಿ (NEP) ತರುವ ಬದಲು ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ಕೆಲಸ ಸರ್ಕಾರದಿಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದರು.

    ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಗ್ಗಿಲ್ಲದೆ ನಡೆದಿರುವ ಡ್ರಗ್ಸ್ ದಂಧೆಯ ಕುರಿತು ಮಾತನಾಡಿದರು. ಒಂದೂವರೆ ವರ್ಷದ ಹಿಂದೆ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಸುದ್ದಿಯಾಗಿತ್ತು. ಚಿತ್ರ ರಂಗದ ಇಬ್ಬರು ನಟಿಯರು ಕೂಡಾ ಬಂಧನವಾಗಿ ಜೈಲಿಗೆ ಹೋಗಿದ್ದ ಪ್ರಸಂಗ ನಡೆದಿದೆ. ಡ್ರಗ್ಸ್ ದಂಧೆ ಮಾಡುವ ಬೇರೆ ಬೇರೆಯವರು ಬಂಧನವಾಗಿದ್ದಾರೆ. ಆದರೆ ಬಳಿಕ ಅವರೆಲ್ಲ ಏನಾದರು ಎಂಬುದೇ ಗೊತ್ತಿಲ್ಲ. ಅವರ ಬಗ್ಗೆ ಬಿ-ರಿಪೋರ್ಟ್ ಹಾಕಿದ್ದಾರೋ, ಅಥವಾ ಸಿ-ರಿಪೋರ್ಟ್ ಹಾಕಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

    ನಾನು ಅಂದೇ ಡ್ರಗ್ಸ್ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದೆ, ಈ ಪ್ರಕರಣವನ್ನು ಹಳ್ಳ ಹಿಡಿಸುತ್ತಾರೆಂದು. ಇವತ್ತು ಮತ್ತೆ ಸ್ವೇಚ್ಛಾಚಾರವಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಕುಮಾರಕೃಪಾ ಹೊಸದಲ್ಲ – ಬಿ.ಸಿ ನಾಗೇಶ್

    ಎನ್‌ಇಪಿ ವಿಚಾರವಾಗಿ ಮಾತನಾಡಿದ ಅವರು, ಇತ್ತೀಚೆಗೆ ಪರಮ ಪೂಜ್ಯರ ಜೊತೆಗೆ ಪಠ್ಯ ಪುಸ್ತಕಗಳಲ್ಲಿ ಏನೆಲ್ಲಾ ಇರಬೇಕು ಏನೆಲ್ಲಾ ಇರಬಾರದು ಎಂಬುದರ ಬಗ್ಗೆ ಸರ್ಕಾರ ಸಭೆ ನಡೆಸಿದೆ. ನಮ್ಮ ಸಂಸ್ಕೃತಿ ಉಳಿಯುವುದಕ್ಕೆ ಯಾವ ವಿಷಯಗಳು ಇಡಬೇಕು ಎನ್ನುವುದರ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಆದರೆ ಇದನ್ನೆಲ್ಲಾ ಆಮೇಲೆ ಮಾಡಲಿ. ಮೊದಲು ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು ಎಂದರು.

    ಡ್ರಗ್ಸ್ ದಂಧೆ ನಡೆಸುವವರು ಪೋಲಿಸ್ ಇಲಾಖೆಯ ಜೊತೆಗೆ ಇರುತ್ತಾರೆ. ಪೋಲಿಸರಿಗೆ ಎಲ್ಲವೂ ಮಾಹಿತಿ ಇದೆ. ಪೋಲಿಸರು ದುಡ್ಡು ಕೊಟ್ಟು ಬಂದವರನ್ನು ಏನು ಮಾಡುತ್ತಾರೆ? ಮುಂಬರುವ ದಿನಗಳಲ್ಲಿ ಚುನಾವಣೆ ಇಟ್ಟುಕೊಂಡು ಈಗ ಏನೇನೋ ಮಾಡಲು ಹೊರಟಿದ್ದಾರೆ. ಎಲ್ಲದಕ್ಕೂ ಮೊದಲು ಶಾಲಾ ಮಕ್ಕಳು ಹಾಳಾಗುವುದನ್ನು ನಿಲ್ಲಿಸಲಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದರು. ಇದನ್ನೂ ಓದಿ: ಒತ್ತುವರಿ ತೆರವಿಗೆ ಆಗ್ರಹಿಸಿ 36 ಕಿಮೀ ಪಾದಯಾತ್ರೆ ಮಾಡಿದ ಗ್ರಾಪಂ ಸದಸ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತುನಿಷಾ ಆತ್ಮಹತ್ಯೆ : ಬಾಯ್ ಫ್ರೆಂಡ್ ಶಿಜಾನ್ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ಆರೋಪ

    ತುನಿಷಾ ಆತ್ಮಹತ್ಯೆ : ಬಾಯ್ ಫ್ರೆಂಡ್ ಶಿಜಾನ್ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ಆರೋಪ

    ನ್ನ ಮಗಳು ತುನಿಷಾ ಸಾವಿಗೆ ನೇರವಾಗಿ ಅವಳ ಬಾಯ್ ಫ್ರೆಂಡ್ ಶಿಜಾನ್ ಕಾರಣವೆಂದು ಮತ್ತೊಮ್ಮೆ ತುನಿಷಾ ತಾಯಿ ಆರೋಪ ಮಾಡಿದ್ದಾರೆ. ಶಿಜಾನ್ ಕಿರುಕುಳದ ಬಗ್ಗೆ ಮತ್ತೊಂದು ಬಾಂಬ್ ಹಾಕಿರುವ ಅವರು, ಅವನೊಬ್ಬ ಡ್ರಗ್ಸ್ ವ್ಯಸನಿ ಆಗಿದ್ದ. ಅದನ್ನು ಸಂಭಾಳಿಸಲೆಂದೇ ನನ್ನ ಮಗಳು ನಮ್ಮಿಂದ ಮೂರು ತಿಂಗಳಲ್ಲಿ ಮೂರು ಲಕ್ಷ ರೂಪಾಯಿ ಪಡೆದಿದ್ದಳು. ಅವನ ಆ ಚಟಕ್ಕೆ ನನ್ನ ಮಗಳು ದುಡ್ಡಿನ ಭಾರ ಹೊರಬೇಕಿತ್ತು ಎಂದಿದ್ದಾರೆ.

    ತುನಿಷಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಸ್ವತಃ ತುನಿಷಾ ತಾಯಿಯೇ ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಮ್ಮ ಕುಟುಂಬದ ಜೊತೆ ತುನಿಷಾ ಚೆನ್ನಾಗಿಯೇ ಇದ್ದಳು ಎಂದು ಮೊನ್ನೆಯಷ್ಟೇ ಶಿಜಾನ್ ಕುಟುಂಬ ಮಾಧ್ಯಮಗಳ ಜೊತೆ ಮಾತನಾಡುತ್ತಾ ತಿಳಿಸಿತ್ತು. ಈ ಮಾತಿಗೆ ತುನಿಷಾ ತಾಯಿ ಪ್ರತಿಕ್ರಿಯೆ ಕೊಟ್ಟು. ನನ್ನ ಮಗಳು ಚೆನ್ನಾಗಿಯೇ ಇದ್ದಳು. ಅವರ ಮಗ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ

    ತನ್ನ ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಿಜಾನ್ ಕುಟುಂಬ ಉತ್ತರ ನೀಡಿದ್ದು, ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡ್ರಗ್ಸ್ ಪ್ರಕರಣ ತೆಲುಗಿನ ಖ್ಯಾತ ನಟಿಯ ಗಂಡನ ಬಂಧನ

    ಡ್ರಗ್ಸ್ ಪ್ರಕರಣ ತೆಲುಗಿನ ಖ್ಯಾತ ನಟಿಯ ಗಂಡನ ಬಂಧನ

    ಟಾಲಿವುಡ್ ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ಆತಂಕ ಮೂಡಿಸಿದೆ. ಈಗಾಗಲೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚಾರ್ಮಿ, ಪುರಿ ಜಗನ್ನಾಥ್, ಮುಮೈಥ್ ಖಾನ್ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿಸಿದೆ. ಹಲವಾರು ಬಾರಿ ಇವರು ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಟಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಖ್ಯಾತ ನಟಿಯ ಪತಿಯನ್ನು ನಿನ್ನೆಯಷ್ಟೇ ಹೈದರಾಬಾದ್ ಮಾದಕ ವಸ್ತು ವಿರೋಧಿ ಪಡೆ ಬಂಧಿಸಿದೆ.

    ಬಾಲಿವುಡ್ ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ, ಖ್ಯಾತ ನಟಿ ನೇಹಾ ದೇಶಪಾಂಡೆ ಅವರ ಪತಿ ಮಿರೋನ್ ಮೋಹಿತ್ ಎನ್ನುವವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ನೇಹಾ ಪತಿಯನ್ನು ಮಾತ್ರವಲ್ಲ, ಖ್ಯಾತ ಉದ್ಯಮಿ ಕಿಶೋರ್ ರೆಡ್ಡಿ ಅನ್ನುವವರನ್ನು ಕೂಡ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕರಣ ಮೂರು ಗ್ರಾಮ್ ನಷ್ಟು ಕೊಕೇನ್ ಅವರ ಬಳಿ ದೊರೆತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನೇಹಾ ದೇಶಪಾಂಡೆ ಪತಿ ಮಿರೋನ್ ಹಲವಾರು ಡ್ರಗ್ಸ್ ದೊರೆಗಳ ಜೊತೆ ನಂಟು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜಗತ್ತಿನ ಹೆಸರಾಂತ ಡ್ರಗ್ಸ್ ದೊರೆ ಪಾಬ್ಲೊ ಎಸ್ಕೋಬಾರ್ ನ ಅತೀ ಹೆಚ್ಚು ಪ್ರೀತಿಸುವ ವ್ಯಕ್ತಿಗಳಲ್ಲಿ ಮಿರೋನ್ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಈ ಅಭಿಮಾನಕ್ಕಾಗಿಯೇ ಅವರು ತಮ್ಮ ನಾಯಿಗೆ ಪಾಬ್ಲೊ ಎಂದು ಹೆಸರಿಟ್ಟಿದ್ದಾರಂತೆ. ಅಲ್ಲದೇ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಡಿಜೆ ನೈಟ್ ಪಾರ್ಟಿಗಳನ್ನೂ ಇವರು ಆಯೋಜನೆ ಮಾಡಿದ್ದಾರಂತೆ.

    ಮಿರೋನ್ ಬಂಧನವಾಗುತ್ತಿದ್ದಂತೆಯೇ ಮತ್ತೆ ತೆಲುಗು ಸಿನಿಮಾ ರಂಗದಲ್ಲಿ ನಡುಕ ಶುರುವಾಗಿದೆ. ಮಿರೋನ್ ಯಾರೆಲ್ಲ ಹೆಸರು ಹೇಳುತ್ತಾನೆ ಎನ್ನುವ ಕುತೂಹಲವೂ ಮೂಡಿದೆ. ಈಗಾಗಲೇ ಸಿನಿಮಾ ರಂಗದ ಹಲವು ಸಿಲೆಬ್ರಿಟಿಗಳು ಡ್ರಗ್ಸ್ ಕೇಸಿನಲ್ಲಿ ಬಂಧನವಾಗಿದ್ದಾರೆ. ಅನೇಕರು ಆರೋಪಿ ಸ್ಥಾನದಲ್ಲೂ ಇದ್ದಾರೆ. ಇನ್ನೂ ಕೆಲವರು ವಿಚಾರಣೆಗೆ ಒಳಗಾಗಿದ್ದಾರೆ. ಈ ಹೊತ್ತಿನಲ್ಲಿ ಮಿರೋನ್ ಬಂಧನ, ಭಾರೀ ಆತಂಕವನ್ನಂತೂ ತಂದಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

    ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

    ಬೆಂಗಳೂರು: ಯುವತಿಯರು ಡ್ರಗ್ಸ್‌ (Drugs) ಸೇವನೆ ಸಂಬಂಧ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಎನ್‌ಸಿಬಿ (NCB) ಅಧಿಕಾರಿಗಳು ತಡರಾತ್ರಿ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ದಾಳಿ ನಡೆಸಿದ್ದಾರೆ.

    ಖಚಿತ ಮಾಹಿತಿ‌ ಆಧರಿಸಿ ದಾಳಿ ನಡೆಸಿರುವ NCB ಅಧಿಕಾರಿಗಳು ಮಡಿವಾಳ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್‌ನ ಫ್ಲಾಟ್ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದರು. ಈ ವೇಳೆ ಉತ್ತರ ಭಾರತ ಮೂಲದ ಮೂವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ವಶಕ್ಕೆ ಪಡೆದ ಮೂವರಲ್ಲಿ, ಓರ್ವ ಯುವತಿಗೆ ಡಾರ್ಕ್ ವೆಬ್‌ಗೂ ಲಿಂಕ್ ಇರುವ ಮಾಹಿತಿ ಸಿಕ್ಕಿದೆ. ಡಾರ್ಕ್ ವೆಬ್ ಮೂಲಕ ಯುವತಿಯರು ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

    MBA ಪದವೀಧರೆಯಾದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿಯಿಂದ ಡ್ರಗ್ಸ್‌ ಡೀಲ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ವಶಕ್ಕೆ ಪಡೆಯಲಾಗಿದೆ. ಸದ್ಯ ಎನ್‌ಸಿಬಿ ಅಧಿಕಾರಿಗಳು ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ – ಸೂಸೈಡ್ ಅಂತ ಬಿಂಬಿಸಲು ಹೋಗಿ ಸಿಕ್ಕಿಬಿದ್ದ

    ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ – ಸೂಸೈಡ್ ಅಂತ ಬಿಂಬಿಸಲು ಹೋಗಿ ಸಿಕ್ಕಿಬಿದ್ದ

    ಮುಂಬೈ: ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ವ್ಯಕ್ತಿಯೋರ್ವ, ತನ್ನ ಪತ್ನಿಗೆ ಚುಚ್ಚುಮದ್ದಿನ ಮೂಲಕ ಡೆಡ್ಲಿ ಡ್ರಗ್ಸ್ ನೀಡಿ ಕೊದು ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ನವೆಂಬರ್ 14 ರಂದು ಈ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಪ್ರಿಯಾಂಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಆರೋಪಿ ಸ್ವಪ್ನಿಲ್ ಸಾವಂತ್ ಐದು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಅವರನ್ನು ಮದುವೆಯಾಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್ ಸಾವಂತ್ ತನ್ನ ಸಹೋದ್ಯೋಗಿ ನರ್ಸ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದ ಹೀಗಾಗಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೌಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆ ಮಾಡಿದ ತಾಯಿ

    ಘಟನೆ ನಂತರ ಪ್ರಿಯಾಂಕಾ ಸಹಿ ಹಾಕಿರುವ ಸೂಸೈಡ್ ನೋಟ್ ಪತ್ತೆಯಾಗಿತ್ತು. ಆದರೆ ತನಿಖೆಯ ವೇಳೆ ಸಾವಂತ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ವೆಕುರೋನಿಯಂ ಬ್ರೋಮೈಡ್, ನೈಟ್ರೊಗ್ಲಿಸರಿನ್ ಮತ್ತು ಲಾಕ್ಸ್ 2% ಸೇರಿದಂತೆ ಕೆಲವು ಡ್ರಗ್ಸ್‌ಗಳಿರುವ ಚುಚ್ಚುಮದ್ದುಗಳನ್ನು ಕದ್ದು ಪತ್ನಿಯನ್ನು ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಸಾವಂತ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ವಿವಿಧ ಸೆಕ್ಷನ್‍ಗಳ ಅಡಿಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮನೋಜ್ ಯಾದವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತುಪ್ಪದ ಹುಡುಗಿ ರಾಗಿಣಿ ಮತ್ತೆ ಹಾಟ್ ಹಾಟ್: ಕೈ ತುಂಬಾ ಕೆಲಸ

    ತುಪ್ಪದ ಹುಡುಗಿ ರಾಗಿಣಿ ಮತ್ತೆ ಹಾಟ್ ಹಾಟ್: ಕೈ ತುಂಬಾ ಕೆಲಸ

    ಡ್ರಗ್ಸ್ ಕೇಸ್ ನಂತರ ರಾಗಿಣಿ (Ragini Dwivedi) ಸ್ವಲ್ಪ ಮಂಕಾದಂತೆ ಕಂಡಿದ್ದರು. ಸಿನಿಮಾಗಳು ಕೂಡ ಅಷ್ಟಕಷ್ಟೇ ಎನ್ನುವಂತಿದ್ದವು. ಆದರೆ, ಇದೀಗ ತುಪ್ಪದ ಹುಡುಗಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವೆಲ್ಲವೂ ವಿಭಿನ್ನವಾದ ಪಾತ್ರಗಳಾಗಿವೆ. ಹಾಗಾಗಿಯೇ ರಾಗಿಣಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾಳೆ. ಅದಕ್ಕಾಗಿ ಹೊಸ ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿದ್ದಾರೆ.

    ಕೆಂಪೇಗೌಡ, ವೀರಮದಕರಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿ, ಮಹಿಳಾ ಪ್ರಧಾನ ಸಿನಿಮಾಗಳನ್ನೂ ಮಾಡಿದರು. ಅದರಲ್ಲಿ ಯಶಸ್ಸೂ ಕಂಡರು. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಹಾಗಾಗಿ ರಾಗಿಣಿ ಕೂಡ ಸ್ಟಾರ್ ನಟಿಯಾಗಿಯೇ ಮಿಂಚಿದವರು.

    ಗಾಂಧಿಗಿರಿ, ಒನ್ ಟು ಒನ್, ಕರ್ವ 3, ಜಾನಿವಾಕರ್ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಇವರು, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಸಂತಾನಂ ಈ ಸಿನಿಮಾದ ಹೀರೋ. ನಾಯಕಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಹಿಂದಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗುತ್ತಿರುವ ಸಾರಿ ಕರ್ಮ ರಿಟನರ್ಸ್ ಸಿನಿಮಾದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಸಸ್ಪನ್ಸ್ ಮತ್ತು ಥ್ರಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಅವರು ವಿಶೇಷ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರಂತೆ.

    ಕೋವಿಡ್ ವೇಳೆಯಲ್ಲಿ ಸಮಾಜಮುಖಿ ಕೆಲಸಗಳನ್ನೂ ಮಾಡಿದ್ದ ರಾಗಿಣಿ, ಡ್ರಗ್ಸ್ (Drugs) ಕೇಸಿನಲ್ಲಿ ಪಡಬಾರದ ಕಷ್ಟ ಪಟ್ಟರು. ಜೈಲಿಗೂ ಹೋಗಿ ಬಂದರು. ಜೈಲಿನಿಂದ ವಾಪಸ್ಸಾದ ನಂತರ ಮತ್ತೆ ಅವರು ಸಿನಿಮಾ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಲ್ಮಾನ್ ಖಾನ್‍ನೂ ಡ್ರಗ್ಸ್ ಸೇವಿಸ್ತಾರೆ, ಶಾರೂಖ್ ಪುತ್ರ ಜೈಲಿಗೂ ಹೋಗಿದ್ರು: ಬಾಬಾ ರಾಮ್‍ದೇವ್ ಹೇಳಿಕೆ ವೈರಲ್

    ಸಲ್ಮಾನ್ ಖಾನ್‍ನೂ ಡ್ರಗ್ಸ್ ಸೇವಿಸ್ತಾರೆ, ಶಾರೂಖ್ ಪುತ್ರ ಜೈಲಿಗೂ ಹೋಗಿದ್ರು: ಬಾಬಾ ರಾಮ್‍ದೇವ್ ಹೇಳಿಕೆ ವೈರಲ್

    ಲಕ್ನೋ: ಬಾಲಿವುಡ್ (Bollywood) ನಟರು ಮತ್ತು ಡ್ರಗ್ಸ್ (Drugs) ಬಗ್ಗೆ ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಧ್ವನಿ ಎತ್ತಿದ್ದು, ನಟ ಸಲ್ಮಾನ್ ಖಾನ್ (Salman Khan) ಡ್ರಗ್ಸ್ ಸೇವಿಸುತ್ತಾರೆ. ನಟ ಶಾರೂಖ್ ಖಾನ್ (Shah Rukh Khan) ಪುತ್ರ ಕೂಡ ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು ಎಂದು ಹೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‍ನಲ್ಲಿ ನಡೆದ ಡ್ರಗ್ಸ್ ವಿರೋಧಿ ಚಳುವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‍ದೇವ್ ಅವರು, ಡ್ರಗ್ಸ್ ವಿಚಾರಕ್ಕೆ ಚಿತ್ರರಂಗ ಮತ್ತು ತಾರೆಯರನ್ನು ದೂಷಿಸಿದ್ದಾರೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ

    ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ (Aryan Khan) ಡ್ರಗ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದು, ಜೈಲಿಗೆ ಹೋಗಿದ್ದರು. ಸಲ್ಮಾನ್ ಖಾನ್ ಕೂಡ ಡ್ರಗ್ಸ್ ಸೇವಿಸುತ್ತಾರೆ. ಅಮೀರ್ ಖಾನ್ (Aamir Khan) ಡ್ರಗ್ಸ್ ಸೇವಿಸುತ್ತಾರೋ ಇಲ್ಲವೋ ಎಂಬುವುದರ ಬಗ್ಗೆ ನನಗೆ ಗೊತ್ತಿಲ್ಲ. ಈ ನಟರ ಬಗ್ಗೆ ಆ ದೇವರಿಗೆ ಗೊತ್ತು. ಎಷ್ಟು ಸಿನಿಮಾ ಸ್ಟಾರ್ಸ್‍ಗಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬುವುದು ಯಾರಿಗೆ ಗೊತ್ತು? ನಟಿಯರ ಬಗ್ಗೆ ಕೇಳಬೇಕಾಗಿಲ್ಲ. ಚಿತ್ರರಂಗದಲ್ಲೂ ಡ್ರಗ್ಸ್ ಇದೆ, ರಾಜಕೀಯದಲ್ಲೂ ಡ್ರಗ್ಸ್ ಇದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚಲಾಗುತ್ತದೆ. ಭಾರತವು ಪ್ರತಿಯೊಂದು ಮಾದಕ ವ್ಯಸನದಿಂದ ಮುಕ್ತವಾಗಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು. ಇದಕ್ಕಾಗಿ ಚಳುವಳಿ ನಡೆಸುತ್ತೇವೆ ಎಂದಿದ್ದಾರೆ.

    ಸದ್ಯ ರಾಮ್‍ದೇವ್ ಅವರ ಈ ಹೇಳಿಕೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದಾರೆ ಎಂದು ಅವರು ನೀಡಿದ ಹೇಳಿಕೆಗೆ ಯಾವುದೇ ಸೆಲೆಬ್ರಿಟಿಗಳು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮಳೆಯಿಂದ ಅವಾಂತರ – ಡಿಸಿ ಕಚೇರಿ ಗೇಟ್ ಮುರಿದು ಒಳನುಗ್ಗಿದ ಬೀಡಿ ಕಾಲೋನಿ ನಿವಾಸಿಗಳು

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಸಿಗ್ತಿತ್ತು: ಕಟೀಲ್

    ಸಿದ್ದರಾಮಯ್ಯ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಸಿಗ್ತಿತ್ತು: ಕಟೀಲ್

    ಗದಗ: ಸಿದ್ದರಾಮಯ್ಯ (Siddaramaiah) ಅವಧಿಯಲ್ಲಿ ಮರಳಿನ ಮಾಫಿಯಾ (Sand Mafia) ಹಾಗೂ ಡ್ರಗ್ಸ್ ಮಾಫಿಯಾ (Drugs Mafia) ಬಲವಾಗಿತ್ತು. ಶಾಲಾ ಕಾಲೇಜುಗಳಲ್ಲಿ ಕೂಡಾ ಡ್ರಗ್ಸ್ ಸಿಗುತ್ತಿತ್ತು. ಅದಕ್ಕೆ ಪುಷ್ಠಿ ನೀಡಿದ್ದು ಸಿದ್ದರಾಮಯ್ಯ. ಅದೇ ಹಣದಲ್ಲಿ ರಾಜಕಾರಣ ಮಾಡುತ್ತಿದ್ದರು. ಬಿಜೆಪಿ (BJP) ಅಧಿಕಾರಕ್ಕೆ ಬಂದ ಮೇಲೆ ಇವೆಲ್ಲವನ್ನೂ ಮಟ್ಟಹಾಕಲಾಗಿದೆ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದರು.

    ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕಟೀಲ್, ಆಗ ಶಾಲಾ ಕಾಲೇಜುಗಳಲ್ಲಿ ಕೂಡಾ ಡ್ರಗ್ಸ್ ಸಿಗುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಮಟ್ಟಹಾಕಲಾಗಿದೆ. ಈ ವಿಷಯದಲ್ಲಿ ಚಲನಚಿತ್ರ ನಟ-ನಟಿಯರು, ರಾಜಕಾರಣಿಗಳನ್ನು ಕೂಡಾ ನಾವು ಬಿಟ್ಟಿಲ್ಲ ಎಂದರು.

    ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರವಾದ ಕಾಂಗ್ರೆಸ್‌ನ ಮುಖವಾಡ. ಅರ್ಕಾವತಿ ಡಿ- ನೋಟಿಫಿಕೆಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ. ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಹೋಗಿದೆ. ಅವರು ಜೈಲಿಗೆ ಹೋಗಲೇ ಬೇಕು ಎಂದು ಕಿಡಿಕಾರಿದರು.

    ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ ನಂತರ ಈಗ ಮಲ್ಲಿಕಾರ್ಜುನ ಖರ್ಗೆಯವರ 3ನೇ ಶಕ್ತಿ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷರ ನಂತರ ಅವರದೊಂದು ಬಣ ಹುಟ್ಟಿಕೊಳ್ಳುತ್ತದೆ. ಈ ಮೂಲಕ 3ನೇ ಟೀಮ್ ಶುರುವಾಗಲಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದ ಬಗ್ಗೆ ತಿರುಕನ ಕನಸು ಕಾಣುತ್ತಿದ್ದಾರೆ. ಖರ್ಗೆ ಸಿಎಂ ಆಗುವುದನ್ನು ತಪ್ಪಿಸಿದವರು ಸಿದ್ದರಾಮಯ್ಯ. ಈಗ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಆಗುತ್ತಿರುವುದಕ್ಕೆ ಸಿದ್ದರಾಮಯ್ಯನವರಿಗೆ ಭಯ ಶುರುವಾಗಿದೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು ದಾಖಲು

    ಸಿದ್ದರಾಮಯ್ಯ ಖರ್ಗೆಯವರಿಗೆ ದೋಖಾ ಹೊಡೆದವರು. ಸಿಎಂ ಸ್ಥಾನಕ್ಕೆ ಏರಲಿಕ್ಕೆ ಬಿಡದವರು. ದಲಿತ ಮುಖ್ಯಮಂತ್ರಿ ಆಗಲು ಅಡ್ಡ ಹಾಕಿದವರು. ಖರ್ಗೆಯನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡಿದವರು. ಖರ್ಗೆ ಅಧ್ಯಕ್ಷ ಆದಮೇಲೆ ಸಿದ್ದರಾಮಯ್ಯ ಅವರಿಗೆ ಸೀಟ್ ಸಿಗುವುದಿಲ್ಲ ನೋಡುತ್ತಿರಿ ಎಂದರು. ಇದನ್ನೂ ಓದಿ: ಯಡಿಯೂರಪ್ಪನವ್ರ ಬಚ್ಚಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

    ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವುದು ಇದು ಕಾಂಗ್ರೆಸ್ ಜೋಡೋ ಯಾತ್ರೆ ಅಲ್ಲ. ಸಿದ್ದರಾಮಯ್ಯ, ಡಿಕೆಶಿ ಕ್ಷೇತ್ರ ಹುಡುಕುವ ಯಾತ್ರೆ. ಡಿಕೆ ಉಲ್ಟಾ ಓದಿದ್ರೆ ಕೆಡಿ ಆಗುತ್ತೆ. ಓರ್ವ ಕೆಡಿ ಮತ್ತೋರ್ವ ಹೇಡಿ ಅಂತ ಸಂಬೋಧಿಸಿದರು.

    Live Tv
    [brid partner=56869869 player=32851 video=960834 autoplay=true]