ಬೀದರ್: ಮಹರಾಷ್ಟ್ರದ (Maharashtra) ಸಾರಿಗೆ ಬಸ್‌ನಲ್ಲಿ ಅಕ್ರಮವಾಗಿ ಗಾಂಜಾ (Drugs) ಸಾಗಿಸುತ್ತಿದ್ದ ಇಬ್ಬರು ಗಾಂಜಾಕೋರರನ್ನು ಬಂಧಿಸಿ ಸುಮಾರು 10 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಮಧುಕರ್ ಹಾಗೂ ಅಮರ್ ಬಂಧಿತ ಆರೋಪಿಗಳು. ಆರೋಪಿಗಳು ತೆಲಂಗಾಣದಿಂದ ಬೀದರ್ ಮೂಲಕ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಬೀದರ್ – ತೆಲಂಗಾಣ ಗಡಿಯಲ್ಲಿ ಬಸ್ ತಪಾಸಣೆ ಮಾಡಿದ್ದಾರೆ. ಈ ವೇಳೆ ತಲಾ 2 ಕೆಜಿಯ 5 ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಇದನ್ನೂ ಓದಿ: ಗಡ್ಕರಿಗೆ ಕೊಲೆ ಬೆದರಿಕೆ ಕೇಸ್- ಎನ್‌ಐಎಯಿಂದ ಎಫ್‌ಐಆರ್ ದಾಖಲು
ಅಕ್ರಮ ಸಾಗಾಟ ಮಾಡುತ್ತಿದ್ದ ಗಾಂಜಾಕೋರರನ್ನು ಬಂಧಿಸಿದ ಬೀದರ್ ಅಬಕಾರಿ ಪೊಲೀಸರು 10 ಲಕ್ಷ ರೂ. ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು
ಚಂಡೀಗಢ: ಡ್ರೋನ್ ಮೂಲಕ ಕಳ್ಳಸಾಗಾಣಿಕೆ (Smuggling) ಮಾಡುತ್ತಿದ್ದ ಪಾಕಿಸ್ತಾನದ (Pakistan) ಎರಡು ಡ್ರೋನ್‌ಗಳನ್ನು (Drone) ಪಂಜಾಬ್‌ನ (Punjab) ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆಯು ಹೊಡೆದುರುಳಿಸಿದೆ.
ಮೇ 19ರಂದು ರಾತ್ರಿ 8:55ರ ಸುಮಾರಿಗೆ ಜಿಲ್ಲೆಯ ಅಮೃತಸರದ ಉದಾರ್ ಧರಿವಾಲ್ ಗ್ರಾಮದ ಬಳಿಯಿರುವ ಪ್ರದೇಶವೊಂದರಲ್ಲಿ ಡ್ರೋನ್ ಶಬ್ದ ಕೇಳಿಬರುತ್ತಿತ್ತು. ಅಲ್ಲಿದ್ದ ಗಡಿ ಭದ್ರತಾ ಪಡೆ (BSF) ತಕ್ಷಣವೇ ಗುಂಡುಗಳನ್ನು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದರು. ಬಳಿಕ ಶೋಧ ನಡೆಸಿದ ಅವರು, ಮುರಿದ ಸ್ಥಿತಿಯಲ್ಲಿ ಪತ್ತೆಯಾದ ಕಪ್ಪು ಬಣ್ಣದ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿವಿ ಕ್ಯಾಂಪಸ್‌ನಲ್ಲೇ ಸ್ನೇಹಿತೆಯನ್ನು ಶೂಟ್ ಮಾಡಿ ಕೊಂದ ವಿದ್ಯಾರ್ಥಿ – ಬಳಿಕ ತಾನೂ ಆತ್ಮಹತ್ಯೆ
ವಶಪಡಿಸಿಕೊಂಡ ಡ್ರೋನ್‌ನಲ್ಲಿ ಕಬ್ಬಿಣದ ಉಂಗುರದ ಜೊತೆಗೆ ಎರಡು ಪ್ಯಾಕೆಟ್ ಮಾದಕವಸ್ತುಗಳು (Drugs) ಪತ್ತೆಯಾಗಿವೆ. ಪತ್ತೆಯಾದ ಮಾದಕವಸ್ತುಗಳು ಸುಮಾರು 2.6 ಕೆಜಿ ತೂಕವನ್ನು ಹೊಂದಿತ್ತು. ವಶಪಡಿಸಿಕೊಂಡ ಮತ್ತೊಂದು ಡ್ರೋನ್‌ನಲ್ಲಿಯೂ ಸಹ ಮಾದಕ ವಸ್ತುಗಳಿರುವ ಬ್ಯಾಗ್ ಪತ್ತೆಯಾಗಿದ್ದು, ಭದ್ರತಾ ಪಡೆ ಜಪ್ತಿ ಮಾಡಿಕೊಂಡಿದೆ. ಇದನ್ನೂ ಓದಿ: ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್
ಮಲಯಾಳಂ ಚಿತ್ರೋದ್ಯಮದಲ್ಲಿ (Film Industry) ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವತಃ ಕೇರಳ (Kerala) ಪೊಲೀಸ್ ಕಮಿಷನರ್ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರೋದ್ಯಮದ ಹಲವು ಗಣ್ಯರು ಡ್ರಗ್ಸ್ ಹಾವಳಿ ಕುರಿತಾಗಿ ಬಹಿರಂಗವಾಗಿಯೇ ಮಾತನಾಡಿದ್ದರು. ಅಲ್ಲದೇ, ಕೆಲ ಚಿತ್ರನಟರು ಡ್ರಗ್ಸ್ ಸೇವಿಸಿ ಸಿನಿಮಾಗಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಪೊಲೀಸ್ ಕಮಿಷನರ್ (Commissioner) ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸ್ (Police) ಕಮಿಷನರ್ ಕೆ.ಸೇತುರಾಮನ್, ‘ಡ್ರಗ್ಸ್ (Drugs) ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ಈಗಾಗಲೇ ಪೊಲೀಸರು ತಮ್ಮ ಕೆಲಸವನ್ನು ಶುರು ಮಾಡಿದ್ದಾರೆ. ಸಣ್ಣದೊಂದು ಸುಳಿವು ಸಿಕ್ಕರೆ, ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳುತ್ತೇವೆ’ ಎಂದಿದ್ದಾರೆ. ಇದನ್ನೂ ಓದಿ:ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್
ಡ್ರಗ್ಸ್ ಹಾವಳಿ ಕುರಿತು ಚಿತ್ರೋದ್ಯಮದ ಮಲಯಾಳಂ ಚಿತ್ರರಂಗ ಒಕ್ಕೂಟ ( ಅಮ್ಮಾ-Amma) ಸರಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೇ, ಅನೇಕ ನಿರ್ಮಾಪಕರು ಒಕ್ಕೂಟಕ್ಕೆ ದೂರು ಕೂಡ ನೀಡಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ಒಕ್ಕೂಟ ಕದತಟ್ಟಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೆ ಮಫ್ತಿಯಲ್ಲಿ ಪೊಲೀಸರು ಬಂದು ಪತ್ತೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಿರುವನಂತಪುರಂ: ಮಾದಕವಸ್ತು ನಿಗ್ರಹ ದಳ (NCB) ಹಾಗೂ ಭಾರತೀಯ ನೌಕಾಪಡೆ (Indian Navy) ಶನಿವಾರ ಕೇರಳದ (Kerala) ಕೊಚ್ಚಿಯಲ್ಲಿ (Kochi) ವಿಶೇಷ ಕಾರ್ಯಾಚರಣೆ ನಡೆಸಿ ಬಂದರಿಗೆ ಆಗಮಿಸಿದ ನೌಕೆಯಿಂದ 134 ಚೀಲಗಳಲ್ಲಿ ತುಂಬಿದ್ದ ಮಾದಕ ವಸ್ತು (Drugs) ಪತ್ತೆ ಮಾಡಿತ್ತು. ಈ ಮಾದಕ ವಸ್ತುವಿನ ಮೌಲ್ಯ ಬರೋಬ್ಬರಿ 25,000 ಕೋಟಿ ರೂ. ಎಂದು ಎನ್‌ಸಿಬಿ ತಿಳಿಸಿದೆ.
ಎನ್‌ಸಿಬಿ ಹಾಗೂ ನೌಕಾಪಡೆ ವಶಪಡಿಸಿಕೊಂಡ ಹೈ ಪ್ಯೂರಿಟಿ ಮೆಥಾಂಪೆಟಮೈನ್‌ನ ಎಣಿಕೆ ಪೂರ್ಣಗೊಂಡಿದೆ. ಒಟ್ಟು 2,525 ಕೆಜಿ ತೂಕದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಇದರ ಬೆಲೆಯನ್ನು ಆರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಡ್ರಗ್ಸ್ನ ಗುಣಮಟ್ಟ ಪರಿಶೀಲನೆ ಬಳಿಕ ಇದರ ಬೆಲೆ 25,000 ಕೋಟಿ ರೂ. ನಷ್ಟಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೇ ಇದು ದೇಶದಲ್ಲಿಯೇ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಮಾದಕ ವಸ್ತು ಪ್ರಕರಣವಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ
ಮೂಲಗಳ ಪ್ರಕಾರ ಉತ್ಕೃಷ್ಟ ಗುಣಮಟ್ಟದ ಡ್ರಗ್ಸ್ ಅನ್ನು ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲೆಂದು ಹಡಗಿನಲ್ಲಿ ತರಲಾಗಿತ್ತು. ತನಿಖೆ ವೇಳೆ ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಲಾಗಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ಮದರ್ ಶಿಪ್ ಎಂಬ ಹಡಗಿನಲ್ಲಿ ತರಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಸಿದ್ದು ಪಟ್ಟು – ದೆಹಲಿಯಲ್ಲಿ ಬೆಂಬಲಿಗರ ಜೊತೆ ಬಲ ಪ್ರದರ್ಶನ
ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಸೇವನೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಪೊಲೀಸರು (Police) ಮಫ್ತಿಯಲ್ಲಿ ಬರಲಿದ್ದಾರೆ ಎಂದು ಕೇರಳದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಚಿತ್ರೀಕರಣ ಸ್ಥಳದಲ್ಲಿ ನಟರೂ ಸೇರಿದಂತೆ ಅನೇಕರು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದರು.
ಮೊನ್ನೆಯಷ್ಟೇ ಕೇರಳದ ಫಿಲ್ಮ್ ಚೇಂಬರ್ ಇಬ್ಬರು ನಟರ ಮೇಲೆ ಗುರುತರ ಆರೋಪ ಮಾಡಿತ್ತು. ಅವರಿಂದಾಗಿ ಚಿತ್ರೀಕರಣಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿತ್ತು. ಅದಕ್ಕೆ ಕಾರಣ ಸದಾ ಅವರು ಅಮಲಿನ ಸ್ಥಿತಿಯಲ್ಲಿ ಇರುತ್ತಾರೆ ಎನ್ನುವುದು ನಿರ್ಮಾಪಕರ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇಂಥದ್ದೊಂದು ಕ್ರಮ ತಗೆದುಕೊಂಡಿದ್ದಾರೆ. ಶೂಟಿಂಗ್ ಸ್ಪಾಟ್ ಗೆ ಮಫ್ತಿಯಲ್ಲಿ ಪೊಲೀಸರು ಕಾವಲು ಕಾಯಲಿದ್ದಾರಂತೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
ಕೇರಳ ಸಿನಿಮೋದ್ಯಮದಲ್ಲಿ ಡ್ರಗ್ಸ್ ಸೇವನೆ ವಿಪರೀತವಾಗಿದೆಯಂತೆ. ಹೀಗಾಗಿ ಸಿನಿಮಾ ರಂಗಕ್ಕೆ ಮಕ್ಕಳನ್ನು ಕಳುಹಿಸಲು ಭಯ ಆಗುತ್ತಿದೆ ಎಂದು ಮೊನ್ನೆಯಷ್ಟೇ ರಾಜಕಾರಣಿಯೊಬ್ಬರು ಮಾತನಾಡಿದ್ದರು. ಈ ಮಾತು ಕೂಡ ವೈರಲ್ ಆಗಿತ್ತು. ಈ ಮಾತಿನ ಬೆನ್ನಲ್ಲೇ ಸರಕಾರ ಕೂಡ ಎಚ್ಚೆತ್ತುಕೊಂಡಿತ್ತು. ಪೊಲೀಸರಿಗೆ ಬಿಸಿ ಮುಟ್ಟಿಸಿತ್ತು. ಹಾಗಾಗಿ ಡ್ರಗ್ಸ್ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ.
ಸಿಂಗಾಪುರ: ಸುಮಾರು 1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ (Cannabis Smuggling) ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯನ್ನು (Indian) ಸಿಂಗಾಪುರ (Singapore) ಗಲ್ಲಿಗೇರಿಸಿದೆ.
ಅಂತಾರಾಷ್ಟ್ರೀಯ ಮಟ್ಟದ ವಿರೋಧದ ನಡುವೆಯೂ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು (46) ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ (Hanging) ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ. ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ಆತನ ಬಳಿ ಸಿಕ್ಕಿತ್ತು. 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜುವಿನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಗಲ್ಲಿಗೇರಿಸಿದೆ. ಇದನ್ನೂ ಓದಿ: 40 ಮಹಿಳೆಯರಿಗೆ ಒಬ್ನೇ ಪತಿ
ತಂಗರಾಜುನನ್ನು ಬಂಧಿಸಲಾದ ಸಂದರ್ಭ ಆತನ ಬಳಿ ಎಲ್ಲಿಯೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಕೊಲ್ಲಲಾಗುತ್ತಿದೆ ಎಂದು ಜಿನೀವಾ ಮೂಲದ ಮಾದಕ ವಸ್ತು ನೀತಿಗಳ ಜಾಗತಿಕ ಆಯೋಗದ ಸದಸ್ಯ ರಿಚರ್ಡ್ ಬ್ರಾನ್ಸರ್ ಅವರು ತಮ್ಮ ಬ್ಲಾಗ್‌ನಲ್ಲಿ ಸೋಮವಾರ ಬರೆದಿದ್ದರು. ಆದರೆ ತಂಗರಾಜುವಿನ ತಪ್ಪನ್ನು ಸಮಂಜಸವಾದ ಅನುಮಾನದಾಚೆಗೂ ಸಾಬೀತುಪಡಿಸಲಾಗಿದೆ ಎಂದು ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಜಗತ್ತಿನ ಅತ್ಯಂತ ಕಠಿಣ ಮಾದಕವಸ್ತು ವಿರೋಧಿ ಕಾನೂನುಗಳಿರುವ ದೇಶಗಳಲ್ಲಿ ಸಿಂಗಾಪುರ ಒಂದಾಗಿದೆ. ಅಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಮರಣ ದಂಡನೆ ಶಿಕ್ಷೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ ಸಿಂಗಾಪುರದ ವಾದವನ್ನು ವಿಶ್ವಸಂಸ್ಥೆಗಳ ಮಾನವ ಹಕ್ಕುಗಳ ಹೈ ಕಮಿಷನ್ ಖಂಡಿಸಿದೆ.
ಕಳೆದ 6 ತಿಂಗಳಲ್ಲಿ ಸಿಂಗಾಪುರದಲ್ಲಿ ಜಾರಿಗೊಳಿಸಲಾದ ಮೊದಲ ಮರಣದಂಡನೆ ತಂಗರಾಜುವಿನದ್ದಾಗಿದೆ. 2 ವರ್ಷಗಳ ಅಂತರದ ಬಳಿಕ 2022ರ ಮಾರ್ಚ್‌ನಲ್ಲಿ ಸಿಂಗಾಪುರ ಮರಣದಂಡನೆ ಶಿಕ್ಷೆಯನ್ನು ಮತ್ತೆ ಆರಂಭಿಸಿತು. ಅದರಲ್ಲಿ ಇದು 12ನೇ ಶಿಕ್ಷೆಯಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ
ಬೀದರ್: ಅಕ್ರಮವಾಗಿ ಗಾಂಜಾ (Drugs) ಸಾಗಾಟ ಮಾಡುತ್ತಿದ್ದ ನಾಲ್ವರು ಗಾಂಜಾ ಖದೀಮರನ್ನು ಬಂಧಿಸಿ ಬೀದರ್ (Bidar) ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.
ತೆಲಂಗಾಣದಿಂದ (Telangana) ಮಹಾರಾಷ್ಟ್ರಕ್ಕೆ (Maharashtra) ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೇ 2 ಕೆಜಿ ತೂಕದ 50 ಗಾಂಜಾ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 100 ಕೆಜಿ ಗಾಂಜಾವನ್ನು ಜಪ್ತಿ (Confiscation) ಮಾಡಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ
ಅಕ್ರಮ ಗಾಂಜಾ ಸಾಗಾಟಕ್ಕೆ ಬಳಸಿದ ಒಂದು ಕಾರು ಹಾಗೂ ನಾಲ್ಕು ಮೊಬೈಲ್‌ಗಳನ್ನು ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad) ಬಳಿ ಜಪ್ತಿಪಡಿಸಲಾಗಿದೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 8 ಕ್ವಿಂಟಾಲ್ ಗೋಮಾಂಸವಿದ್ದ ಮೀನಿನ ವಾಹನ ಪಲ್ಟಿ
ಈ ಕುರಿತು ಮನ್ನಏಖೇಳ್ಳಿ (Mannaekhelli) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಪ್ರೋತ್ಸಾಹಧನ ನೀಡಿ ಗೌರವಿಸಿದರು. ಇದನ್ನೂ ಓದಿ: ಸಹೋದರನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದ್ಳು!
ಮಡಿಕೇರಿ: ಅಕ್ರಮವಾಗಿ ಗಾಂಜಾ (Drugs) ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಮೂವರು ಅರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಕೊಡಗು (Kodagu) ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ನಾಪೋಕ್ಲು ವ್ಯಾಪ್ತಿಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ನಡೆದಿದ್ದು, ಅಸ್ಸಾಂ (Assam) ಮೂಲದ ಸೈಫುಲ್ ಇಸ್ಲಾಂ, ಅನಾರ್ ಹುಸೇನ್, ಜಹೀರ್ ಅಲಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು ಜ್ಯುವೆಲರಿ ಅಂಗಡಿಗೆ ಕನ್ನ
ನಾಪೋಕ್ಲು ಠಾಣಾ ಸರಹದ್ದಿನ ಕೈಕಾಡು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ನಾಪೋಕ್ಲು ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಅಲ್ಲದೇ ಅರೋಪಿಗಳನ್ನು ಬಂಧಿಸಿ 2.150 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಕೊಡಗು ಎಸ್.ಪಿ ರಾಜರಾಜನ್ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ- ತನಿಖೆಯಲ್ಲಿ ಸತ್ಯ ಬಯಲು
– ದೇಶದಲ್ಲಿ ಡ್ರಗ್ಸ್ ವಿರುದ್ಧ ಮೋದಿ ಸರ್ಕಾರ ಸಮರ ಸಾರಿದೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲಾ – ಕಾಲೇಜುಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಇದರ ವಿರುದ್ಧ ರಾಜ್ಯಗಳು ಸಮರ ಸಾರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ಪಾಕಿಸ್ತಾನ, ಇರಾನ್ ಭಾಗಗಳಿಂದ ಸಮುದ್ರ ಮಾರ್ಗಗಳ ಮೂಲಕ ಡ್ರಗ್ಸ್ ಭಾರತಕ್ಕೆ ರವಾನೆಯಾಗುತ್ತಿದೆ. ಆದ್ದರಿಂದ ದಕ್ಷಿಣ ಭಾಗದ ಕೋಸ್ಟ್ ಗಾರ್ಡ್ ನಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕು. 30%, 40%, 50% ಜನತೆ ಡ್ರಗ್ಸ್‌ಗೆ ಅಡಿಕ್ಟ್ ಆದ್ರೆ ಹೇಗೆ? ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಸಮಿತಿಗಳು ರಚನೆಯಾಗಿದ್ದು, ನಿರಂತರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಲಂಡನ್‌ನ ಭಾರತೀಯ ಹೈಕಮಿಷನ್ ಮೇಲೆ ದಾಳಿ – ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು
ದೇಶದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಮೋದಿ ನೇತೃತ್ವದ ಸರ್ಕಾರ ಸಮರ ಸಾರಿದೆ. ಜನರಿಗೆ ಡ್ರಗ್ಸ್ ಮುಕ್ತ ರಾಜ್ಯ, ದೇಶ ಮಾಡೋದು ಈ ಅಭಿಯಾನದ ಉದ್ದೇಶ ಸಹ ಆಗಿದೆ. ಡ್ರಗ್ಸ್ ಮುಕ್ತ ದೇಶ ಹಾಗೂ 5 ಟ್ರೆಲಿಯನ್ ಆರ್ಥಿಕ ವ್ಯವಸ್ಥೆ ನಿರ್ಮಾಣ ಮಾಡುವ ಗುರಿಯನ್ನಿಟ್ಟುಕೊಂಡು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಪ್ರತಿ ಮನೆ ಮನೆಯಲ್ಲೂ ಡ್ರಗ್ಸ್ ವಿರುದ್ಧ ಅಭಿಯಾನ ಶುರುವಾಗಬೇಕು ಎಂದು ಕರೆ ನೀಡಿದರು.
ಡ್ರಗ್ಸ್ ಮುಕ್ತ ಮಾಡೋದು ಎಲ್ಲ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಬೇಕು. ಎಲ್ಲ ಇಲಾಖೆಗಳೂ ಇದಕ್ಕೆ ಕೈ ಜೋಡಿಸಬೇಕು. ಮಾದಕ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸೋದು, ಡ್ರಗ್ಸ್ ನಾಶ ಮಾಡೋದು, ಡ್ರಗ್ಸ್ ಮಾರಾಟದ ವಿರುದ್ಧ ಸಮರ ಸಾರೋದು ನಮ್ಮೆಲ್ಲರ ಗುರಿಯಾಗಬೇಕು. ಸಣ್ಣ-ಸಣ್ಣ ವ್ಯಕ್ತಿಗಳಿಗೆ ಡ್ರಗ್ಸ್ ಸಾಗಣೆ ಆಗ್ತಿದೆ. ಇದು ಹೇಗೆ ಆಗ್ತಿದೆ ಅನ್ನೋದನ್ನ ಪತ್ತೆ ಹಚ್ಚಿ ಕ್ರಮ ಆಗಬೇಕು ಎಂದು ತಾಕೀತು ಮಾಡಿದರು.
ನಮ್ಮಲ್ಲಿ ಪ್ರಬಲ ಕಾನೂನುಗಳಿವೆ. ಅವುಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕು. ಕಾನೂನು ಸಮರ್ಥವಾಗಿ ಬಳಕೆ ಮಾಡಿಕೊಂಡರೆ ಡ್ರಗ್ಸ್ ಮುಕ್ತ ದೇಶಕ್ಕೆ ಸಹಾಯವಾಗುತ್ತದೆ. ಡ್ರಗ್ಸ್, ಡ್ರಗ್ಸ್ ನೆಟ್‌ವರ್ಕ್, ಡ್ರಗ್ಸ್ ಅಪರಾಧಿಗಳು ಮತ್ತು ಡ್ರಗ್ಸ್ ವ್ಯಸನಿಗಳು ಈ ನಾಲ್ಕರ ವಿರುದ್ಧ ನಾವು ಕೆಲಸ ಮಾಡಬೇಕು. ಈಗಾಗಲೇ ದೇಶದಲ್ಲಿ 8 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಎನ್‌ಸಿಬಿ ಇಂತಹ ಮಹತ್ವದ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಡಿಜೆ ಹಳ್ಳಿ ಪೊಲೀಸರು ಬೃಹತ್ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಇದು ಸುಮಾರು 2.4 ಕೋಟಿ ರೂ. ಮೌಲ್ಯದ್ದು ಎಂದು ತಿಳಿಸಿದ್ದಾರೆ.
ಸದ್ಯ ಇನ್ನಿಬ್ಬರು ಪೆಡ್ಲರ್‌ಗಳನ್ನು ಪತ್ತೆ ಮಾಡಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಡಿಜೆ ಹಳ್ಳಿ ಪೊಲೀಸರು ಕಿಂಗ್ ಪಿನ್‌ಗಳಿಗಾಗಿ ತೀವ್ರ ಹುಡುಕಾಟವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ಆಲಿಯಾ ಭಟ್